Tag: Nitrogen Gas

  • Suicide Pod; ಒಂದು ಬಟನ್‌ ಒತ್ತಿದರೆ ಸಾಕು ನಿಮಿಷದಲ್ಲಿ ನೋವಿಲ್ಲದೇ ಸಾಯಬಹುದು!

    Suicide Pod; ಒಂದು ಬಟನ್‌ ಒತ್ತಿದರೆ ಸಾಕು ನಿಮಿಷದಲ್ಲಿ ನೋವಿಲ್ಲದೇ ಸಾಯಬಹುದು!

    ಜೀವನದಲ್ಲಿ ಸಾಕಷ್ಟು ನೊಂದು, ಬೆಂದು ಬಹಳಷ್ಟು ಕಷ್ಟಗಳನ್ನು ಎದುರಿಸಿ ಜೀವನವೇ ಸಾಕಪ್ಪ ಎಂದು ಆತ್ಮಹತ್ಯೆ ಮಾಡಿಕೊಂಡು ಸಾಯುವವರ ಸುದ್ದಿಗಳನ್ನು ಪ್ರತಿನಿತ್ಯ ಟಿವಿ, ನ್ಯೂಸ್‌ಪೇಪರ್‌ಗಳಲ್ಲಿ ನೋಡುತ್ತಿರುತ್ತೇವೆ. ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದೇ ಮಹಾ ಅಪರಾಧ. ಈ ಮಧ್ಯೆ ಸ್ವಿಟ್ಜರ್ಲೆಂಡ್ (Switzerland) ‘ಒಂದೇ ನಿಮಿಷದಲ್ಲಿ ನೋವಿಲ್ಲದೆ ಸಾಯಬಹುದಾದ ಯಂತ್ರ’ವನ್ನು ಕಂಡುಹಿಡಿದಿದೆ. ಅದುವೇ ʼಸೂಸೈಡ್‌ ಪಾಡ್‌ʼ (ಆತ್ಮಹತ್ಯಾ ಪಾಡ್).‌ ಹಾಗಿದ್ರೆ ಏನಿದು ಯಂತ್ರ? ಇದರ ಕೆಲಸ ಹೇಗೆ? ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

    46 ವರ್ಷಗಳ ಕಾಲ ಬಾಳಿ ಬದುಕಿದ ಬ್ರಿಟಿಷ್‌ ದಂಪತಿ ಇದೀಗ ತಮ್ಮ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ. ಪೀಟರ್ ಸ್ಕಾಟ್ (86) ಮತ್ತು ಕ್ರಿಸ್ಟಿನ್ ಸ್ಕಾಟ್ (80) ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿರುವ ದಂಪತಿ. ಕ್ರಿಸ್ಟಿನ್ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದು, ಪತ್ನಿ ಇಲ್ಲದೇ ತನ್ನ ಬದುಕನ್ನು ಊಹಿಸಲು ಸಾಧ್ಯವಿಲ್ಲ ಎಂದು ಇಬ್ಬರೂ ಸ್ವಿಟ್ಜರ್ಲೆಂಡ್‌ನ ಸಾರ್ಕೊ ಸೂಸೈಡ್ ಪಾಡ್‌ನಲ್ಲಿ (Sarco Suicide Pod) ತಮ್ಮ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ. ಈಗಾಗಲೇ ಈ ದಂಪತಿ ಸಾರ್ಕೋ ಸಂಸ್ಥೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಸ್ವಿಟ್ಜರ್ಲೆಂಡ್ ಸರ್ಕಾರ ‘ಆತ್ಮಹತ್ಯೆ ಯಂತ್ರ’ ಬಳಕೆಗೆ ಕಾನೂನು ಅನುಮೋದನೆ ನೀಡಿದ್ದು, ಒಬ್ಬ ವ್ಯಕ್ತಿಯು ಕೇವಲ ಒಂದು ನಿಮಿಷದಲ್ಲಿ ಈ ಯಂತ್ರವನ್ನು ಬಳಸಿ ತನ್ನ ಪ್ರಾಣವನ್ನು ತ್ಯಾಗ ಮಾಡಬಹುದು. ಶೀಘ್ರದಲ್ಲೇ ಇದು ಬಳಕೆಗೆ ಬರುವ ಸಾಧ್ಯತೆ ಇದೆ.

    ಏನಿದು ಸೂಸೈಡ್‌ ಪಾಡ್?
    ಸಾರ್ಕೋ ಎಂಬ ಸಂಸ್ಥೆ ಈ ವಿನೂತನ ಯಂತ್ರವನ್ನು ಆವಿಷ್ಕರಿಸಿದ್ದು, 2019ರಲ್ಲೇ ಈ ಆತ್ಮಹತ್ಯಾ ಸಾಧನವನ್ನು ಸಂಸ್ಥೆ ರಿವೀಲ್ ಮಾಡಿತ್ತು. ಆದರೆ ಇದೀಗ ಅತ್ಯಾಧುನಿಕ ಅಪ್ಡೇಟ್ ನೊಂದಿಗೆ ಈ ಯಂತ್ರ ಬಳಕೆಗೆ ಸಿದ್ಧವಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಈ ಪಾಡ್ ಅನ್ನು ಆಸ್ಟ್ರೇಲಿಯನ್ ಮೂಲದ ವೈದ್ಯ ಫಿಲಿಪ್ ನಿಟ್ಷ್ಕೆ ಕಂಡುಹಿಡಿದಿದ್ದಾರೆ. ಮೊದಲಿಗೆ ಈ ಆತ್ಮಹತ್ಯೆ ಪಾಡ್ ಅನ್ನು 2019ರಲ್ಲಿ ವೆನಿಸ್ ಡಿಸೈನ್ ಫೆಸ್ಟಿವಲ್‌ನಲ್ಲಿ ಪ್ರದರ್ಶಿಸಲಾಯಿತು.

    ಈ ಯಂತ್ರದ ಪ್ರಮುಖ ವಿಷಯವೆಂದರೆ, ಈ ಯಂತ್ರವನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡವರು ಯಾವುದೇ ನೋವು ಅನುಭವಿಸದೇ ಸಾಯುತ್ತಾರೆ. ಈ ಯಂತ್ರವು ಆತ್ಮಹತ್ಯೆಗಾಗಿ ಬರುವ ವ್ಯಕ್ತಿ ಬಟನ್ ಒತ್ತಿದ ಕೂಡಲೇ ಆತನಿಗೆ ಆಕ್ಸಿಜನ್ ಬದಲಿಗೆ ನೈಟ್ರೋಜನ್ ಬಿಡುಗಡೆ ಮಾಡುತ್ತದೆ. ಇದರಿಂದ ವ್ಯಕ್ತಿ ಆಕ್ಸಿಜನ್ ಸಿಗದೇ ಹೈಪೋಕ್ಸಿಯಾದಿಂದ ಕೇವಲ ಒಂದೇ ನಿಮಿಷದಲ್ಲಿ ಪ್ರಾಣಬಿಡುತ್ತಾನೆ ಎಂದು ಹೇಳಲಾಗಿದೆ.

    ಈ ಆತ್ಮಹತ್ಯಾ ಪಾಡ್ ಅನ್ನು ಸ್ವಿಟ್ಜರ್ಲೆಂಡ್ ನ ‘ದಿ ಲಾಸ್ಟ್ ರೆಸಾರ್ಟ್’ ಸಂಸ್ಥೆ ಆವಿಷ್ಕರಿಸಿದೆ. ಸ್ವಿಟ್ಜರ್ಲೆಂಡ್ ನಲ್ಲಿ ಆತ್ಮಹತ್ಯೆಗೆ ಕಾನೂನು ಬದ್ಧ ಮಾನ್ಯತೆ ನೀಡಿರುವುದರಿಂದ ಈ ವರೆಗೂ ಈ ಸಂಸ್ಥೆ ಸೇವೆಗೆ ಯಾವುದೇ ರೀತಿಯ ಕಾನೂನು ತೊಡಕು ಉಂಟಾಗಿಲ್ಲ.

    ಸ್ವಿಟ್ಜರ್ಲೆಂಡ್ ನಲ್ಲಿ ವ್ಯಕ್ತಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಸೂಕ್ತ ಕಾರಣ ನೀಡಿದರೆ ಅಥವಾ ಆತನ ಸಾವಿಗೆ ಪೂರಕವಾದ ಅಂಶವನ್ನು ಸಾಬೀತುಪಡಿಸಿದರೆ ಆತನ ಆತ್ಮಹತ್ಯೆಗೆ ಕಾನೂನಿನಲ್ಲಿ ಅವಕಾಶವಿದೆ. ಕಾನೂನು ಆತನ ಆತ್ಮಹತ್ಯೆಗೆ ಅನುಮತಿಸುತ್ತದೆ ಎಂದು ಹೇಳಲಾಗಿದೆ.

    ಈ ಬಗ್ಗೆ ಮಾತನಾಡಿರುವ ಆತ್ಮಹತ್ಯಾ ಪಾಡ್ ಯಂತ್ರದ ತಯಾರಕಾ ಸಂಸ್ಥೆ ‘ದಿ ಲಾಸ್ಟ್ ರೆಸಾರ್ಟ್’ ಮುಖ್ಯ ಕಾರ್ಯನಿರ್ವಾಹಕ ಫ್ಲೋರಿಯನ್ ವಿಲೆಟ್, ‘ನಮ್ಮಲ್ಲಿ ಜನರು ಆತ್ಮಹತ್ಯೆ ಮಾಡಿಕೊಳ್ಳಲು ಸರತಿ ಸಾಲಲ್ಲಿ ನಿಂತಿದ್ದಾರೆ. ನಮ್ಮ ಸಾರ್ಕೋ ಯಂತ್ರದ ಬಳಕೆಗಾಗಿ ಕಾಯುತ್ತಿದ್ದಾರೆ. ಇಲ್ಲಿ ಸಾವು ಬಹಳ ಬೇಗ ನಡೆದುಹೋಗುತ್ತದೆ. ನಿಮ್ಮ ಸಾವು ನೋವು ರಹಿತವಾಗಿರುತ್ತದೆ ಎಂದು ನಾನು ಹೇಳಬಲ್ಲೆ. ಶಾಶ್ವತ ನಿದ್ರೆಗೆ ಜಾರುವವರಿಗೆ ಸಾಯಲು ಹೆಚ್ಚು ಸುಂದರವಾದ ಮಾರ್ಗ ಇದಾಗಿದೆ ಎಂದು ಹೇಳಿದ್ದಾರೆ.

    ಆದಷ್ಟು ಬೇಗ ಈ ಯಂತ್ರ ಬಳಕೆಗೆ ಸಿದ್ಧವಾಗಲಿದೆ. ಮೊದಲ ಸಾವು ಮತ್ತು ಅದರ ದಿನ, ತಿಂಗಳು ಮತ್ತು ವರ್ಷವನ್ನು ಬಹಿರಂಗಪಡಿಸಲಾಗಿಲ್ಲ. ಇದು ಖಾಸಗಿ ಮಾಹಿತಿಯಾಗಿದ್ದು ಅದನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗುವುದಿಲ್ಲ.

    ಯುಕೆ ಯಾವುದೇ ರೂಪದಲ್ಲಿ ದಯಾಮರಣವನ್ನು ಅನುಮತಿಸುವುದಿಲ್ಲ ಮತ್ತು ಆತ್ಮಹತ್ಯೆಗೆ ಸಹಾಯ ಮಾಡುವವರಿಗೆ ಗರಿಷ್ಠ 14 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸುತ್ತದೆ.

    ಕೆಲಸ ಹೇಗೆ?
    3D-ಮುದ್ರಿತ ಶವಪೆಟ್ಟಿಗೆಯಂತಹ ಕ್ಯಾಪ್ಸುಲ್ ಅದರ ಕೋಣೆಯನ್ನು ಸಾರಜನಕದಿಂದ ತುಂಬುವ ಮೂಲಕ ಕಾರ್ಯನಿರ್ವಹಿಸುತ್ತದೆ ಮತ್ತು ಒಳಗಿನಿಂದ ಬಟನ್ ಅನ್ನು ಸಕ್ರಿಯಗೊಳಿಸಿದ ನಂತರ ಆಮ್ಲಜನಕದ ಮಟ್ಟವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯು ವ್ಯಕ್ತಿಯು ಪ್ರಜ್ಞೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಮತ್ತು 10 ನಿಮಿಷಗಳಲ್ಲಿ ಆ ವ್ಯಕ್ತಿ ಸಾಯುತ್ತಾನೆ.

    ಸನ್ನೆಗಳು, ಧ್ವನಿ ನಿಯಂತ್ರಣ, ಅಥವಾ ಅನಾರೋಗ್ಯದ ಕಾರಣದಿಂದಾಗಿ ಮಾತನಾಡಲು ಅಥವಾ ದೈಹಿಕವಾಗಿ ಚಲಿಸಲು ಸಾಧ್ಯವಾಗದವರಿಗೆ ಕಣ್ಣಿನ ಚಲನೆಯನ್ನು ಒಳಗೊಂಡಂತೆ ಪಾಡ್‌ಗಳನ್ನು ಅನೇಕ ರೀತಿಯಲ್ಲಿ ಸಕ್ರಿಯಗೊಳಿಸಬಹುದು. ಸಂಪೂರ್ಣ ಪ್ರಕ್ರಿಯೆಯನ್ನು ದಾಖಲಾತಿಗಾಗಿ ಚಿತ್ರೀಕರಿಸಲಾಗಿದೆ ಮತ್ತು ತನಿಖಾಧಿಕಾರಿಗೆ ನೀಡಲಾಗುವುದು. ಆದರೆ ಒಮ್ಮೆ ಸಕ್ರಿಯಗೊಳಿಸಿದ ನಂತರ ಪ್ರಕ್ರಿಯೆಯನ್ನು ಬದಲಾಯಿಸಲಾಗುವುದಿಲ್ಲ.

    ಈ ಸೂಸೈಡ್‌ ಪಾಡ್‌ ಅನ್ನು ಬಳಸಲು ಕೇವಲ 20 ಡಾಲರ್‌ ಸಾಕು ಎಂದು ವರದಿಗಳು ತಿಳಿಸಿವೆ. ಅಂದರೆ ಈ ಪಾಡ್‌ ಒಳಗಡೆ ಬಿಡುಗಡೆಗೊಳ್ಳುವ ನೈಟ್ರೋಜನ್‌ ಗ್ಯಾಸ್‌ಗೆ 20 ಡಾಲರ್‌ನಷ್ಟು (1,673 ರೂ.) ಖರ್ಚಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಬಟನ್‌ ಒತ್ತಿದ ಬಳಿಕ ಆಮ್ಲಜನಕವು 21 ಪ್ರತಿಶತದಿಂದ 0.05 ಪ್ರತಿಶತಕ್ಕೆ ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದ ವ್ಯಕ್ತಿ ಪ್ರಜ್ಞಾಹೀನನಾಗಿ ಕೊನೆಗೆ ಸಾಯುತ್ತಾನೆ. ಒಂದು ಬಾರಿ ಬಟನ್‌ ಒತ್ತಿದ ಬಳಿಕ ಯಾವುದೇ ಕಾರಣಕ್ಕೂ ಹಿಂದಕ್ಕೆ ಹೋಗಲಾಗುವುದಿಲ್ಲ ಎಂದು ಫಿಲಿಪ್ ನಿಟ್ಷ್ಕೆ ಹೇಳಿದ್ದಾರೆ.

    ಸ್ವಿಟ್ಜರ್ಲೆಂಡ್‌ ಹೊರತುಪಡಿಸಿ, ಕೆನಡಾ, ಬೆಲ್ಜಿಯಂ, ಲಕ್ಸೆಂಬರ್ಗ್, ನೆದರ್ಲ್ಯಾಂಡ್ಸ್ ಮತ್ತು ಕೊಲಂಬಿಯಾದಲ್ಲಿ ಆತ್ಮಹತ್ಯೆ ಅಥವಾ ಸ್ವಯಂಪ್ರೇರಿತ ದಯಾಮರಣವನ್ನು ಅನುಮತಿಸಲಾಗಿದೆ.

  • ಅಮೆರಿಕದಲ್ಲಿ 25 ವರ್ಷದ ಬಳಿಕ ಮೊದಲ ಬಾರಿಗೆ ನೈಟ್ರೋಜನ್ ಗ್ಯಾಸ್ ಬಳಸಿ ಮರಣದಂಡನೆ

    ಅಮೆರಿಕದಲ್ಲಿ 25 ವರ್ಷದ ಬಳಿಕ ಮೊದಲ ಬಾರಿಗೆ ನೈಟ್ರೋಜನ್ ಗ್ಯಾಸ್ ಬಳಸಿ ಮರಣದಂಡನೆ

    ವಾಷಿಂಗ್ಟನ್: ಅಮೆರಿಕದ (America) ಅಲಬಾಮಾ (Alabama) ರಾಜ್ಯವು ಗುರುವಾರ ನೈಟ್ರೋಜನ್ ಅನಿಲವನ್ನು (Nitrogen Gas) ಬಳಸಿ ಅಪರಾಧಿ ಕೊಲೆಗಾರನನ್ನು ಮರಣದಂಡನೆಗೆ (Execution) ಒಳಪಡಿಸಿದೆ. ಮಾರಣಾಂತಿಕ ಚುಚ್ಚುಮದ್ದಿನ ನಂತರ ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಹೊಸ ಮರಣದಂಡನೆ ವಿಧಾನವನ್ನು ಬಳಸಲಾಗಿದೆ.

    ಕೆನ್ನೆತ್ ಯುಜೀನ್ ಸ್ಮಿತ್‌ನನ್ನು (Kenneth Eugene Smith) ಅಲಬಾಮಾದ ಹಾಲ್ಮನ್ ಜೈಲಿನಲ್ಲಿ ನೈಟ್ರೋಜನ್ ಹೈಪೋಕ್ಸಿಯಾದಿಂದ ಗಲ್ಲಿಗೇರಿಸಲಾಯಿತು. ನೈಟ್ರೋಜನ್ ಹೈಪೋಕ್ಸಿಯಾದಿಂದ ಕೆನ್ನೆತ್ ಯುಜೀನ್ ಸ್ಮಿತ್ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಒಕ್ಲಹೋಮ ಮತ್ತು ಮಿಸ್ಸಿಸ್ಸಿಪ್ಪಿ ಜೊತೆಗೆ ಸಾರಜನಕ ಹೈಪೋಕ್ಸಿಯಾವನ್ನು ಮರಣದಂಡನೆಯ ವಿಧಾನವಾಗಿ ಬಳಸಲು ಅನುಮೋದಿಸಿದ ಮೂರು ಯುಎಸ್ ರಾಜ್ಯಗಳಲ್ಲಿ ಅಲಬಾಮಾ ಒಂದಾಗಿದೆ. ಇದನ್ನೂ ಓದಿ: 19 ವರ್ಷದ ನಂತರ ಒಂದಾದ ಟ್ವಿನ್ಸ್- ಜಾರ್ಜಿಯಾದಲ್ಲಿ ಇಂದಿಗೂ ಬಗೆಹರಿಯದ ಕದ್ದು ಮಾರಾಟವಾದ ಮಕ್ಕಳ ಸಂಖ್ಯೆ

    1999ರಲ್ಲಿ ಕೊನೆಯದಾಗಿ ಹೈಡ್ರೋಜನ್ ಸೈನೈಡ್ ಅನಿಲವನ್ನು ಬಳಸಿಕೊಂಡು ಅಪರಾಧಿ ಕೊಲೆಗಾರನನ್ನು ಮರಣದಂಡನೆಗೆ ಒಳಪಡಿಸಲಾಗಿತ್ತು. ಇದನ್ನೂ ಓದಿ: ಶನಿವಾರ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ; ಲೋಕಸಭಾ ಚುನಾವಣೆ, ಕಾಂಗ್ರೆಸ್ ವಿರುದ್ಧ ಪ್ರಚಾರ ಕಾರ್ಯತಂತ್ರ: ವಿಜಯೇಂದ್ರ

    ಇದು ಹೇಗೆ ಕೆಲಸ ಮಾಡುತ್ತದೆ?
    ನೈಟ್ರೋಜನ್ ಹೈಪೋಕ್ಸಿಯಾವು ವ್ಯಕ್ತಿಯನ್ನು ಸಾರಜನಕವನ್ನು ಮಾತ್ರ ಉಸಿರಾಡುವಂತೆ ಮಾಡುತ್ತದೆ. ಮಾನವ ದೇಹಕ್ಕೆ ದೈಹಿಕ ಕಾರ್ಯಗಳನ್ನು ನಿರ್ವಹಿಸಲು ಅಗತ್ಯವಾದ ಆಮ್ಲಜನಕವನ್ನು ವ್ಯಕ್ತಿಯಿಂದ ಕಸಿದುಕೊಳ್ಳುತ್ತದೆ. ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ, ಯಾರೇ ಹೋದರೂ ಪಕ್ಷಕ್ಕೆ ನಷ್ಟವಾಗದು: ಡಿಕೆಶಿ

    ಮರಣದಂಡನೆಯ ಈ ವಿಧಾನದಲ್ಲಿ, ಕೈದಿಗಳ ಮುಖದ ಮೇಲೆ ಉಸಿರಾಟದ ಮುಖವಾಡವನ್ನು ಇರಿಸಲಾಗುತ್ತದೆ. ಆಮ್ಲಜನಕದ ಬದಲಿಗೆ ಶುದ್ಧ ಸಾರಜನಕವನ್ನು ವ್ಯಕ್ತಿಯ ಶ್ವಾಸಕೋಶಕ್ಕೆ ಪಂಪ್ ಮಾಡಲಾಗುತ್ತದೆ. ಸ್ಮಿತ್‌ನ ಮರಣಕ್ಕೆ ಸುಮಾರು 22 ನಿಮಿಷಗಳ ಕಾಲ ತೆಗೆದುಕೊಂಡಿತು. ಸಾರಜನಕವನ್ನು ಕೊಟ್ಟ ಬಳಿಕವೂ ಸ್ಮಿತ್ ಹಲವಾರು ನಿಮಿಷಗಳ ಕಾಲ ಜೀವಂತವಾಗಿದ್ದ. ಇದನ್ನೂ ಓದಿ: ಅಂಬೇಡ್ಕರ್ ಆಶಯದಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ: ಹರೀಶ್ ಪೂಂಜಾ

    ಸಾರಜನಕ ನೀಡಿದ ಬಳಿಕ ಸರಿಸುಮಾರು 5 ನಿಮಿಷಗಳ ಕಾಲ ಸ್ಮಿತ್ ತುಂಬಾ ಕಷ್ಟಪಟ್ಟು ಉಸಿರಾಟ ಮಾಡಿ ಕೈಕಾಲು ಬಡಿಯಲು ಪ್ರಾರಂಭಿಸಿದ. ಈ ವೇಳೆ ಆತನ ಹೆಂಡತಿ ಮತ್ತು ಇತರ ಸಂಬಂಧಿಕರು ಹಾಜರಾಗಿದ್ದರು. ಅಲ್ಲದೇ ಐದು ಪತ್ರಕರ್ತರಿಗೆ ಮಾಧ್ಯಮ ಸಾಕ್ಷಿಗಳಾಗಿ ಗಾಜಿನ ಮೂಲಕ ಮರಣದಂಡನೆಯನ್ನು ವೀಕ್ಷಿಸಲು ಅವಕಾಶ ನೀಡಲಾಯಿತು. ಇದನ್ನೂ ಓದಿ: ಬಿಹಾರದಲ್ಲಿ ಮತ್ತೆ ಸಿಎಂ ಆಗ್ತಾರಾ ನಿತೀಶ್?

    ಅಲಬಾಮಾ ರಾಜ್ಯವು ಮರಣದಂಡನೆಯ ವಿಧಾನವನ್ನು ಸಮರ್ಥಿಸಿಗೊಂಡಿದೆ. ಅಮೆರಿಕದಲ್ಲಿ ಮಾನವರನ್ನು ಮರಣದಂಡನೆಗೆ ಒಳಪಡಿಸಲು ನೈಟ್ರೋಜನ್ ಅನಿಲವನ್ನು ಹಿಂದೆಂದೂ ಬಳಸದಿದ್ದರೂ, ಇದನ್ನು ಕೆಲವೊಮ್ಮೆ ಪ್ರಾಣಿಗಳನ್ನು ಕೊಲ್ಲಲು ಬಳಸಲಾಗುತ್ತದೆ. ಆದರೆ ಅಮೆರಿಕನ್ ವೆಟರ್ನರಿ ಮೆಡಿಕಲ್ ಅಸೋಸಿಯೇಷನ್ ಕೂಡ ಈ ರೀತಿಯಲ್ಲಿ ದಯಾಮರಣ ಮಾಡುವಾಗ ದೊಡ್ಡ ಪ್ರಾಣಿಗಳಿಗೆ ನೈಟ್ರೋಜನ್ ನೀಡಲು ಶಿಫಾರಸು ಮಾಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಇದನ್ನೂ ಓದಿ: ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಮಲ ಪ್ರದರ್ಶಿಸಿದ ಮಕ್ಕಳು – ಶಾಸಕ ಶಿವಲಿಂಗೇಗೌಡ ಗರಂ

  • ಕಾರಿನಲ್ಲೇ ನೈಟ್ರೋಜನ್‌ ಸಿಲಿಂಡರ್‌ ಲೀಕ್‌ ಮಾಡ್ಕೊಂಡು ಸೀನಿಯರ್‌ ಟೆಕ್ಕಿ ಆತ್ಮಹತ್ಯೆ

    ಕಾರಿನಲ್ಲೇ ನೈಟ್ರೋಜನ್‌ ಸಿಲಿಂಡರ್‌ ಲೀಕ್‌ ಮಾಡ್ಕೊಂಡು ಸೀನಿಯರ್‌ ಟೆಕ್ಕಿ ಆತ್ಮಹತ್ಯೆ

    – ಯಾರು ಡೋರ್‌ ಓಪನ್‌ ಮಾಡಬೇಡಿ
    – ಕಾರಿನ ಗ್ಲಾಸ್‌ನಲ್ಲಿ ಡೆತ್‌ನೋಟ್‌

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲೊಂದು ವಿಚಿತ್ರ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಈ ಆತ್ಮಹತ್ಯೆ(Suicide) ನೋಡಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಕಾರಿನಲ್ಲಿ 3 ಕೆಜಿ ನೈಟ್ರೋಜನ್ ಸಿಲಿಂಡರ್(Nitrogen Cylinder) ಓಪನ್ ಮಾಡಿ ಹೊರಗಿನಿಂದ ಗಾಳಿ ಬರದಂತೆ ಕ್ಲೋಸ್ ಮಾಡಿಕೊಂಡು ವ್ಯಕ್ತಿಯೊಬ್ಬರು ಜೀವ ಬಿಟ್ಟಿದ್ದಾರೆ.

    ವಿಜಯ್ ಕುಮಾರ್ (51) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮೃತ ವಿಜಯ್ ಕುಮಾರ್ ಮಹಾಲಕ್ಷ್ಮಿ ಲೇಔಟ್ ನಿವಾಸಿಯಾಗಿದ್ದು ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಹಿರಿಯ ಸಾಫ್ಟ್‌ವೇರ್ ಎಂಜಿನಿಯರ್(Software Engineer) ಆಗಿದ್ದರು. ಕುರುಬರಹಳ್ಳಿ ಜಂಕ್ಷನ್ ಬಳಿ ಕಾರು ನಿಲ್ಲಿಸಿ ವಿಜಯ್ ಕುಮಾರ್ ತಮ್ಮ ಕಾರಿನ ಎಲ್ಲ ಗ್ಲಾಸ್‌ಗಳನ್ನೂ ಮುಚ್ಚಿ ನೈಟ್ರೋಜನ್ ಗ್ಯಾಸ್ ಸಿಲಿಂಡರ್ ಲೀಕ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ವಿಜಯ್ ಕುಮಾರ್ ಹೃದಯದ ಸಮಸ್ಯೆಗೆ ಆಪರೇಷನ್ ಮಾಡಿಸಿಕೊಂಡಿದ್ದರು. ಆಪರೇಷನ್ ಬಳಿಕವೂ ಉಸಿರಾಟದ ಸಮಸ್ಯೆ ಸೇರಿದಂತೆ ಬೇರೆ ಬೇರೆ ಸಮಸ್ಯೆ ಎದುರಾಗಿತ್ತು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವಿಜಯ್‌ ಕುಮಾರ್‌ ಆತ್ಮಹತ್ಯೆಗೂ ಮುನ್ನ ಯಾವ ರೀತಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಗೂಗಲ್‍ನಲ್ಲಿ ಸರ್ಚ್ ಮಾಡಿದ್ದಾರೆ.

    ನೈಟ್ರೋಜನ್ ಹೊಗೆ ದೇಹದ ಒಳಗೆ ಸೇರಿದರೆ ಪ್ರಜ್ಞೆ ತಪ್ಪಿ ಸುಲಭವಾಗಿ ಸಾಯಬಹುದು ಎಂದು ತಿಳಿದುಕೊಂಡಿದ್ದ ಇವರು ಸೋಮವಾರ ಮಹಾಲಕ್ಷ್ಮಿ ಲೇಔಟ್ ಪಾರ್ಕ್ ಬಳಿಗೆ ತನ್ನ ಕಾರು ತೆಗೆದುಕೊಂಡು ಬಂದಿದ್ದಾರೆ.

    ಪಾರ್ಕ್ ಬಳಿ ಕಾರು ನಿಲ್ಲಿಸಿ ಮೊದಲಿಗೆ ಕಾರಿಗೆ ಬಿಸಿಲು ಬೀಳದಂತೆ ಹೊದಿಸುವ ಕವರ್ ತೆಗೆದಿದ್ದರು. ಈ ವೇಳೆ ಅಲ್ಲೇ ಇದ್ದ ಒಬ್ಬರಲ್ಲಿ, ನನಗೆ ಸುಸ್ತಾಗಿದೆ. ಬಿಸಿಲು ಬೀಳದಂತೆ ಕವರ್ ಮುಚ್ಚುವಂತೆ ಹೇಳಿ ಕಾರಿನ ಒಳಗೆ ಕೂತಿದ್ದಾರೆ.

    ವಿಜಯ್‌ ಕುಮಾರ್‌ ಮಾತು ಕೇಳಿ ಆ ವ್ಯಕ್ತಿ ಕಾರಿಗೆ ಕವರ್ ಮುಚ್ಚಿ ಹೋಗಿದ್ದರು. ಈ ವೇಳೆ ಮುಖಕ್ಕೆ ಕವರ್ ಸುತ್ತಿಕೊಂಡು ಅದರೊಳಗೆ ಪೈಪ್‍ಮೂಲಕ ನೈಟ್ರೋಜನ್ ಬಿಟ್ಟುಕೊಂಡಿದ್ದಾರೆ. ಕೆಲ ಹೊತ್ತಿನಲ್ಲೇ ವಿಷ ಗಾಳಿಯಿಂದ ತೀವ್ರ ಆಸ್ಥಸ್ಥರಾಗಿ ಒದ್ದಾಡಿ, ಒದ್ದಾಡಿ ಸಾವನ್ನಪ್ಪಿದ್ದಾರೆ.

    ಸಾವಿಗೂ ಮುನ್ನ ಬರೆದಿದ್ದ ಡೆತ್ ನೋಟ್‌ ಬರೆದಿದ್ದು ಅದನ್ನು ಕಾರಿನ ಗ್ಲಾಸ್‌ಗೆ ಅಂಟಿಸಿದ್ದಾರೆ. “ಯಾರು ಕಾರಿನ ಬಾಗಿಲು ತೆರೆಯಬೇಡಿ. ಒಳಗಡೆ ವಿಷದ ಗಾಳಿ ಇದ್ದು ನಿಮಗೂ ಸಮಸ್ಯೆ ಆಗುತ್ತದೆ. ಇದನ್ನು ಪೊಲೀಸರು, ನುರಿತ ತಂಡದವರೇ ಓಪನ್ ಮಾಡಲಿ” ಎಂದು ಬರೆದಿದ್ದಾರೆ. ಘಟನೆ ಸಂಬಂಧ ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]