Tag: NITK

  • ದೇಶದ ಟಾಪ್‌ ಕಾಲೇಜುಗಳ ಪಟ್ಟಿ ಔಟ್‌ – ಕರ್ನಾಟಕದ ಯಾವ ಕಾಲೇಜುಗಳಿಗೆ ಎಷ್ಟನೇ ಸ್ಥಾನ?

    ದೇಶದ ಟಾಪ್‌ ಕಾಲೇಜುಗಳ ಪಟ್ಟಿ ಔಟ್‌ – ಕರ್ನಾಟಕದ ಯಾವ ಕಾಲೇಜುಗಳಿಗೆ ಎಷ್ಟನೇ ಸ್ಥಾನ?

    ನವದೆಹಲಿ:  ಕೇಂದ್ರ ಸರ್ಕಾರ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (NIRF) ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿಶ್ವವಿದ್ಯಾಲಯ ವರ್ಗದಲ್ಲಿ ಬೆಂಗಳೂರಿನ ಐಐಎಸ್‌ಸಿ ಮೊದಲ ಸ್ಥಾನ ಪಡೆದರೆ, ಕಾನೂನು ಕಾಲೇಜುಗಳ ವಿಭಾಗದಲ್ಲಿ  ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಮೊದಲ ಸ್ಥಾನ ಪಡೆದಿದೆ.

    ಟಾಪ್‌ ಎಂಜಿನಿಯರಿಂಗ್‌ ಕಾಲೇಜುಗಳ ಪೈಕಿ ಸುರತ್ಕಲ್‌ನಲ್ಲಿರುವ ಎನ್‌ಐಟಿಕೆಗೆ 10ನೇ ಸ್ಥಾನ ಸಿಕ್ಕಿದೆ. ಫಾರ್ಮಸಿ ಕಾಲೇಜುಗಳ ಪೈಕಿ ಮೈಸೂರಿನ ಜೆಎಸ್‌ಎಸ್‌ ಕಾಲೇಜಿಗೆ 6ನೇ ಸ್ಥಾನ ಸಿಕ್ಕಿದೆ.

    ಸಂಶೋಧನೆ, ವಿಶ್ವವಿದ್ಯಾನಿಲಯ, ನಿರ್ವಹಣೆ, ಕಾಲೇಜು, ಫಾರ್ಮಸಿ, ವೈದ್ಯಕೀಯ, ಎಂಜಿನಿಯರಿಂಗ್, ಆರ್ಕಿಟೆಕ್ಚರ್ ಮತ್ತು ಒಟ್ಟಾರೆ ವಿಭಾಗಗಳಲ್ಲಿ ಯಾವ ಸಂಸ್ಥೆ ಉತ್ತಮವಾಗಿದೆ ಎಂಬುದನ್ನು ತಿಳಿಯಲು ಈ ಶ್ರೇಯಾಂಕವು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಹಾಯ ಮಾಡಲಿದೆ. 12 ನೇ ತರಗತಿಯಲ್ಲಿ ಉತ್ತೀರ್ಣರಾದ ಬಳಿಕ ವಿದ್ಯಾರ್ಥಿಗಳು ಸುಲಭವಾಗಿ ತಮ್ಮ ಮುಂದಿನ ಶಿಕ್ಷಣ ಸಂಸ್ಥೆಯನ್ನು ಆಯ್ಕೆ ಮಾಡಲು ಈ ಶ್ರೇಯಾಂಕ ಪಟ್ಟಿಯಿಂದ ಸಾಧ್ಯವಾಗಲಿದೆ.

    ಟಾಪ್ 10 ವಿಶ್ವವಿದ್ಯಾಲಯಗಳು
    1. ಐಐಎಸ್‌ಸಿ ಬೆಂಗಳೂರು
    2. ಜೆಎನ್‌ಯು, ದೆಹಲಿ
    3. ಜಾಮಿಯಾ ಮಿಲಿಯಾ ಇಸ್ಲಾಮಿಯಾ
    4. ಜಾದವ್‌ಪುರ ವಿಶ್ವವಿದ್ಯಾಲಯ
    5. ಅಮೃತ ವಿಶ್ವ ವಿದ್ಯಾಪೀಠಂ
    6. ಬನಾರಸ್ ಹಿಂದೂ ವಿಶ್ವವಿದ್ಯಾಲಯ
    7. ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್
    8. ಕಲ್ಕತ್ತಾ ವಿಶ್ವವಿದ್ಯಾಲಯ
    9. ವೆಲ್ಲೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
    10. ಹೈದರಾಬಾದ್ ವಿಶ್ವವಿದ್ಯಾಲಯ

    ಟಾಪ್‌ 10 ಫಾರ್ಮಸಿ ಕಾಲೇಜುಗಳು
    1. ಜಾಮಿಯಾ ಹಮ್ದರ್ದ್
    2. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್ ಹೈದರಾಬಾದ್
    3. ಪಂಜಾಬ್ ವಿಶ್ವವಿದ್ಯಾಲಯ
    4. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್, ಮೊಹಾಲಿ
    5. ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ – ಪಿಲಾನಿ
    6. ಜೆಎಸ್‌ಎಸ್‌ ಕಾಲೇಜ್ ಆಫ್ ಫಾರ್ಮಸಿ, ಮೈಸೂರು
    7. ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ
    8. ಜೆಎಸ್‌ಎಸ್‌ ಕಾಲೇಜ್ ಆಫ್ ಫಾರ್ಮಸಿ, ಮೈಸೂರು
    9. ಮಣಿಪಾಲ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸ್‌ , ಮಣಿಪಾಲ
    10 ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್ ಅಹಮದಾಬಾದ್

    ಟಾಪ್‌ 10 ಮೆಡಿಕಲ್‌ ಕಾಲೇಜುಗಳು
    1. ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌, ದೆಹಲಿ
    2. ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ಸ್ನಾತಕೋತ್ತರ ಸಂಸ್ಥೆ
    3. ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು
    4. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸ್‌ , ಬೆಂಗಳೂರು
    5. ಬನಾರಸ್ ಹಿಂದೂ ವಿಶ್ವವಿದ್ಯಾಲಯ
    6. ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ & ರಿಸರ್ಚ್
    7. ಸಂಜಯ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸ್ನಾತಕೋತ್ತರ ಸಂಸ್ಥೆ
    8. ಅಮೃತ ವಿಶ್ವ ವಿದ್ಯಾಪೀಠ
    9. ಶ್ರೀ ಚಿತ್ರ ತಿರುನಾಳ್ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ತಿರುವನಂತಪುರಂ
    10. ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಣಿಪಾಲ  ಇದನ್ನೂ ಓದಿ: ಬೆಳಿಗ್ಗೆ 7 ಗಂಟೆಗೆ ಮಕ್ಕಳು ಶಾಲೆಗೆ ಹೋಗ್ಬೋದಾದ್ರೆ, ನ್ಯಾಯಾಧೀಶರೇಕೆ 9 ಗಂಟೆಗೆ ಬರಬಾರದು – ಯು.ಯು.ಲಲಿತ್ ಪ್ರಶ್ನೆ

    ಟಾಪ್‌ 10 ಎಂಜಿನಿಯರಿಂಗ್‌ ಕಾಲೇಜುಗಳು
    1. ಐಐಟಿ ಮದ್ರಾಸ್
    2. ಐಐಟಿ ದೆಹಲಿ
    3.ಐಐಟಿ ಬಾಂಬೆ
    4. ಐಐಟಿ ಕಾನ್ಪುರ
    5. ಐಐಟಿ ಖರಗ್‌ಪುರ
    6. ಐಐಟಿ ರೂರ್ಕಿ
    7.ಐಐಟಿ ಗುವಾಹಟಿ
    8. ಎನ್‌ಐ ತಿರುಚಿರಾಪಳ್ಳಿ
    9. ಐಐಟಿ ಹೈದರಾಬಾದ್
    10. ಎನ್‌ಐಟಿಕೆ ಸುರತ್ಕಲ್, ಕರ್ನಾಟಕ

    ಟಾಪ್‌ 10 ಮ್ಯಾನೇಜ್‌ಮೆಂಟ್‌ ಕಾಲೇಜುಗಳು
    1. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಹಮದಾಬಾದ್, ಗುಜರಾತ್
    2. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು, ಕರ್ನಾಟಕ
    3. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕೋಲ್ಕತ್ತಾ, ಪಶ್ಚಿಮ ಬಂಗಾಳ
    4. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ದೆಹಲಿ
    5. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕೋಯಿಕ್ಕೋಡ್, ಕೇರಳ
    6 ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಲಕ್ನೋ, ಉತ್ತರ ಪ್ರದೇಶ
    7 ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಇಂದೋರ್, ಮಧ್ಯ ಪ್ರದೇಶ
    8 ಕ್ಸೇವಿಯರ್ ಲೇಬರ್ ರಿಲೇಶನ್ಸ್ ಇನ್ಸ್ಟಿಟ್ಯೂಟ್ (XLRI) ಜಾರ್ಖಂಡ್
    9 ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಇಂಜಿನಿಯರಿಂಗ್, ಮಹಾರಾಷ್ಟ್ರ
    10 ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್, ತಮಿಳುನಾಡು

    ಟಾಪ್ 10 ಡೆಂಟಲ್ ಕಾಲೇಜುಗಳು
    1. ಸವೀತಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಅಂಡ್ ಟೆಕ್ನಿಕಲ್ ಸೈನ್ಸ್‌
    2. ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸ್‌, ಮಣಿಪಾಲ
    3. ಡಾ.ಡಿ.ವೈ.ಪಾಟೀಲ ವಿದ್ಯಾಪೀಠ
    4. ಮೌಲಾನಾ ಆಜಾದ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್‌
    5. ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ
    6. ಎ.ಬಿ.ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಸಂಸ್ಥೆ, ಮಂಗಳೂರು,
    7. ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸ್‌, ಮಂಗಳೂರು
    8. ಎಸ್‌ಆರ್‌ಎಂ ಡೆಂಟಲ್ ಕಾಲೇಜು
    9. ಸರಕಾರ ದಂತ ಕಾಲೇಜು, ನಾಗ್ಪುರ
    10. ಶಿಕ್ಷಾ `ಓ` ಅನುಸಂಧಾನ

    ಟಾಪ್‌ 10 ಕಾನೂನು ಕಾಲೇಜುಗಳು
    1.ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಬೆಂಗಳೂರು, ಕರ್ನಾಟಕ
    2. ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ, ನವದೆಹಲಿ
    3. ಸಹಜೀವನ ಕಾನೂನು ಶಾಲೆ ಪುಣೆ, ಮಹಾರಾಷ್ಟ್ರ
    4. ನಲ್ಸಾರ್ ಕಾನೂನು ವಿಶ್ವವಿದ್ಯಾಲಯ ಹೈದರಾಬಾದ್, ತೆಲಂಗಾಣ
    5. ಪಶ್ಚಿಮ ಬಂಗಾಳ ರಾಷ್ಟ್ರೀಯ ನ್ಯಾಯಾಂಗ ವಿಜ್ಞಾನ ವಿಶ್ವವಿದ್ಯಾಲಯ ಕೋಲ್ಕತ್ತಾ, ಪಶ್ಚಿಮ ಬಂಗಾಳ
    6. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಖರಗ್ಪುರ, ಪಶ್ಚಿಮ ಬಂಗಾಳ
    7. ಜಾಮಿಯಾ ಮಿಲಿಯಾ ಇಸ್ಲಾಮಿಯಾ, ನವದೆಹಲಿ
    8. ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ, ಗಾಂಧಿನಗರ
    9. ಶಿಕ್ಷಾ `ಓ` ಅನುಸಂಧಾನ ಭುವನೇಶ್ವರ, ಒಡಿಶಾ
    10 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ, ಜೋಧಪುರ

     

    ಒಟ್ಟಾರೆ ವರ್ಗದಲ್ಲಿ ಟಾಪ್ 10 ಸಂಸ್ಥೆಗಳು
    1. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್, ತಮಿಳುನಾಡು
    2. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌, ಕರ್ನಾಟಕ
    3. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಾಂಬೆ ಮಹಾರಾಷ್ಟ್ರ
    4. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ದೆಹಲಿ
    5. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾನ್ಪುರ್, ಉತ್ತರ ಪ್ರದೇಶ
    6. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಖರಗ್‌ಪುರ, ಪಶ್ಚಿಮ ಬಂಗಾಳ
    7. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರೂರ್ಕಿ, ಉತ್ತರಾಖಂಡ
    8. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗುವಾಹಟಿ ,ಅಸ್ಸಾಂ
    9. ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ದೆಹಲಿ
    10. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ದೆಹಲಿ

    ಏನಿದು NIRF ಶ್ರೇಯಾಂಕ ಪಟ್ಟಿ?
    ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ಪ್ರತಿ ವರ್ಷ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (NIRF) ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ದೇಶದಲ್ಲಿರುವ ವಿಶ್ವವಿದ್ಯಾಲಯಗಳು, ಎಂಜಿನಿಯರಿಂಗ್, ಡೆಂಟಲ್‌, ಕಾನೂನು, ಮ್ಯಾನೇಜ್‌ಮೆಂಟ್ ಮತ್ತು ಫಾರ್ಮಸಿ ಸಂಸ್ಥೆಗಳ ಶ್ರೇಯಾಂಕವನ್ನು ನಿರ್ಧರಿಸಲು NIRF ಅನ್ನು ರಚಿಸಲಾಗಿದೆ.

    ಈ ಮೊದಲು ಶ್ರೇಯಾಂಕಕ್ಕಾಗಿ ಯಾವುದೇ ಸರ್ಕಾರಿ ಸಂಸ್ಥೆ ಇರಲಿಲ್ಲ. ಖಾಸಗಿ ಸಂಸ್ಥೆಗಳು ಕಾಲೇಜುಗಳಿಗೆ ರ್‍ಯಾಂಕಿಂಗ್‌ ಪಟ್ಟಿಯನ್ನು ನೀಡುತ್ತಿದ್ದವು. ಈ ರ್‍ಯಾಂಕಿಂಗ್‌ ಪಟ್ಟಿಗಳಿಗೆ ಆಕ್ಷೇಪ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವೇ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದೆ. ಬೋಧನಾ ಕಲಿಕೆ ಮತ್ತು ಸಂಪನ್ಮೂಲಗಳು, ಸಂಶೋಧನೆ ಮತ್ತು ವೃತ್ತಿಪರ ಅಭ್ಯಾಸ, ಪದವಿ ಫಲಿತಾಂಶ, ಔಟ್‌ರೀಚ್ ಮತ್ತು ಒಳಗೊಳ್ಳುವಿಕೆ, ಉದ್ಯೋಗ ಈ ಎಲ್ಲ ಮಾನದಂಡಗಳನ್ನು ಪರಿಗಣಿಸಿ NIRF ಶ್ರೇಯಾಂಕವನ್ನು ನೀಡಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]