Tag: Nitish Kumar Reddy

  • ಮೊಣಕಾಲಿನಲ್ಲೇ ತಿರುಪತಿ ದೇವಾಲಯದ ಮೆಟ್ಟಿಲು ಹತ್ತಿ ಹರಕೆ ತೀರಿಸಿದ ನಿತೀಶ್ ಕುಮಾರ್ ರೆಡ್ಡಿ

    ಮೊಣಕಾಲಿನಲ್ಲೇ ತಿರುಪತಿ ದೇವಾಲಯದ ಮೆಟ್ಟಿಲು ಹತ್ತಿ ಹರಕೆ ತೀರಿಸಿದ ನಿತೀಶ್ ಕುಮಾರ್ ರೆಡ್ಡಿ

    ಅಮರಾವತಿ: ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಪರ ಸಾಧನೆ ಮಾಡಿದ ನಿತೀಶ್ ಕುಮಾರ್ ರೆಡ್ಡಿ (Nitish Kumar Reddy), ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪ ದೇವಸ್ಥಾನದ ಮೆಟ್ಟಿಲುಗಳನ್ನು ಮೊಣಕಾಲಿನಿಂದ ಹತ್ತಿ ಹರಕೆ ತೀರಿಸಿದ್ದಾರೆ.

    ಆಲ್‌ರೌಂಡರ್ ಸೋಮವಾರ ರಾತ್ರಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಆಧ್ಯಾತ್ಮಿಕ ಪ್ರಯಾಣದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಭಾರತದ ಮೇಲಿನ ಪರಮಾಣು ನಿರ್ಬಂಧ ತೆಗೆದ ಅಮೆರಿಕ – ಏನಿದರ ಮಹತ್ವ?

     

     

    ಭಕ್ತರು ತಮ್ಮ ಹರಕೆಗಳನ್ನು ಪೂರೈಸಲು ತಿರುಪತಿಯಿಂದ ಕಾಲ್ನಡಿಗೆಯಲ್ಲಿ ತಿರುಮಲ ತಲುಪಲು ಈ ಮಾರ್ಗವನ್ನು ಬಳಸುತ್ತಾರೆ. ಇದು 3550 ಮೆಟ್ಟಿಲುಗಳನ್ನು ಹೊಂದಿದ್ದು, 12 ಕಿ.ಮೀ ದೂರವನ್ನು ಕ್ರಮಿಸುತ್ತದೆ.

    ಆಸ್ಟ್ರೇಲಿಯಾದಲ್ಲಿ ಭಾರತ ತಂಡವು 1-3 ಅಂತರದಲ್ಲಿ ಸೋತಿದ್ದ ನಿರಾಶಾದಾಯಕ ಪಂದ್ಯದಲ್ಲಿ ನಿತೀಶ್ ಉತ್ತಮ ಪ್ರದರ್ಶನ ನೀಡಿದ್ದರು. ಈ ಹಿಂದೆ ಯಾವುದೇ ರೆಡ್ ಬಾಲ್ ಅನುಭವವಿಲ್ಲದ 21 ವರ್ಷದ ಆಟಗಾರ ಆಸ್ಟ್ರೇಲಿಯಾದಲ್ಲಿ ಎಲ್ಲಾ ಐದು ಟೆಸ್ಟ್ ಪಂದ್ಯಗಳನ್ನು ಆಡಿದರು. ಹೆಚ್ಚಿನ ಸಮಯ 8 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೂ ಭಾರತದ ಪರ ಅತಿ ಹೆಚ್ಚು ಸ್ಕೋರರ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಇದನ್ನೂ ಓದಿ: ಸ್ಟೀವ್‌ ಜಾಬ್ಸ್‌ ಪತ್ನಿ ಅಸ್ವಸ್ಥ – ಸನಾತನದ ಬಗ್ಗೆ ಸಾಕಷ್ಟು ಪ್ರಶ್ನೆ ಕೇಳುತ್ತಿದ್ದಾರೆ ಕಮಲಾ

    ಸರಣಿಯಲ್ಲಿ ನಿತೀಶ್ 298 ರನ್ ಗಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದರು. ಇದು ಅವರನ್ನು ಭಾರತದ ಎರಡನೇ ಅತಿ ಹೆಚ್ಚು ಸ್ಕೋರರ್ ಎಂಬ ಸ್ಥಾನಕ್ಕೇರಿಸಿತು.

  • ದಿನದ ಕೊನೇ ಓವರ್‌ನಲ್ಲಿ ನೋಬಾಲ್‌ ಎಡವಟ್ಟು – ರೋಚಕ ಘಟಕ್ಕೆ ಬಾಕ್ಸಿಂಗ್‌ ಡೇ ಟೆಸ್ಟ್‌; ಆಸೀಸ್‌ಗೆ 333 ರನ್‌ ಮುನ್ನಡೆ

    ದಿನದ ಕೊನೇ ಓವರ್‌ನಲ್ಲಿ ನೋಬಾಲ್‌ ಎಡವಟ್ಟು – ರೋಚಕ ಘಟಕ್ಕೆ ಬಾಕ್ಸಿಂಗ್‌ ಡೇ ಟೆಸ್ಟ್‌; ಆಸೀಸ್‌ಗೆ 333 ರನ್‌ ಮುನ್ನಡೆ

    ಮೆಲ್ಬೋರ್ನ್‌: ಇಲ್ಲಿ ನಡೆಯುತ್ತಿರುವ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯವು ರಣರೋಚಕ ಹಂತಕ್ಕೆ ತಲುಪಿದೆ. 4ನೇ ದಿನದ ಕೊನೇ ಓವರ್‌ನಲ್ಲಿ ವೇಗಿ ಜಸ್ಪ್ರೀತ್‌ ಬುಮ್ರಾ (Jasprit Bumrah) ಅವರ ನೋಬಾಲ್‌ ಎಡವಟ್ಟಿನಿಂದ 1 ವಿಕೆಟ್‌ ಬಾಕಿ ಉಳಿಸಿಕೊಂಡಿರುವ ಆಸ್ಟ್ರೇಲಿಯಾ (Australia) ತಂಡ 82 ಓವರ್‌ಗಳಲ್ಲಿ 228 ರನ್‌ ಗಳಿಸಿ, 333 ರನ್‌ಗಳ ಬೃಹತ್‌ ಮುನ್ನಡೆ ಕಾಯ್ದುಕೊಂಡಿದೆ.

    ದ್ವಿತೀಯ ಇನ್ನಿಂಗ್ಸ್‌ ಆರಂಭದಲ್ಲೇ ಉರಿ ಚೆಂಡಿನ ದಾಳಿ ನಡೆಸಿ ಅಗ್ರ ಬ್ಯಾಟರ್‌ಗಳನ್ನ ಪೆವಿಲಿಯನ್‌ಗಟ್ಟಿದ ಬುಮ್ರಾ ದಿನದ ಕೊನೆಯ ಓವರ್‌ನ 4ನೇ ಎಸೆತದಲ್ಲಿ ವಿಕೆಟ್‌ ಕಿತ್ತು ಆಲೌಟ್‌ ಮಾಡಿದ್ದರು. ಆದ್ರೆ ಅದು ನೋಬಾಲ್‌ ಆದ ಪರಿಣಾಮ ಆಲೌಟ್‌ನಿಂದ ಆಸೀಸ್‌ ಪಾರಾಯಿತು. ಹೀಗಾಗಿ ಕೊನೆಯ ದಿನ ಆಸೀಸ್‌ ವಿರುದ್ಧ ಗೆಲ್ಲುವುದು ಕಠಿಣ ಸವಾಲಿನ ಕೆಲಸವಾಗಿದೆ. ಈ ಪಂದ್ಯದ ಗೆಲುವಿನ ಮೇಲೆ ಭಾರತ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ (WTC Final) ಅರ್ಹತೆ ಪಡೆಯಲಿದೆಯೇ ಇಲ್ಲವೇ ಎಂಬುದು ನಿರ್ಧಾರವಾಗಲಿದೆ.

    ಹೌದು. ಮೆಲ್ಬೋರ್ನ್‌ (Melbourne) ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಆಸೀಸ್‌ ನಡುವೆ ಹಣಾ-ಹಣಿ ನಡೆಯುತ್ತಿದೆ. ನಾಲ್ಕನೇ ದಿನದ ಅಂತ್ಯಕ್ಕೆ 9 ವಿಕೆಟ್‌ನಷ್ಟಕ್ಕೆ 228 ರನ್‌ ಗಳಿಸಿರುವ ಆಸ್ಟ್ರೇಲಿಯಾ 333 ರನ್‌ಗಳ ಬೃಹತ್‌ ಮುನ್ನಡೆ ಸಾಧಿಸಿದೆ. ಆಸೀಸ್‌ ಬ್ಯಾಟರ್‌ಗಳಾದ ನಥಾನ್‌ ಲಿಯಾನ್‌ (Nathan Lyon), ಸ್ಕಾಟ್‌ ಬೊಲ್ಯಾಂಡ್‌ 5ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

    3ನೇ ದಿನದ ಅಂತ್ಯಕ್ಕೆ 9 ನಷ್ಟಕ್ಕೆ 358 ರನ್‌ ಗಳಿಸಿದ್ದ ಭಾರತ (Team India) 4ನೇ ದಿನದ ಆರಂಭದಲ್ಲಿ 11 ರನ್‌ ಗಳಿಸುವಷ್ಟರಲ್ಲಿ ಕೊನೆಯ ವಿಕೆಟ್‌ ಕಳೆದುಕೊಂಡು, 369 ರನ್‌ಗಳಿಗೆ ಆಲೌಟ್‌ ಆಯಿತು. ಬಳಿಕ ಕ್ರೀಸ್‌ ಆರಂಭಿಸಿದ ಆಸೀಸ್‌ 91 ರನ್‌ಗಳಿಗೆ ಪ್ರಮುಖ 6 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ನಡುವೆ ನಾಯಕ ಪ್ಯಾಟ್‌ ಕಮ್ಮಿನ್ಸ್‌ – ಮಾರ್ನಸ್‌ ಲಾಬುಶೇನ್‌ ಹಾಗೂ ಮುರಿಯದ ಕೊನೆಯ ವಿಕೆಟಿಗೆ ನಥಾನ್‌ ಲಿಯಾನ್‌ – ಸ್ಕಾಟ್‌ ಬೊಲ್ಯಾಂಡ್‌ ಅವರ ಅರ್ಧಶತಕಗಳ ಜೊತೆಯಾಟ ತಂಡಕ್ಕೆ ಶಕ್ತಿ ತುಂಬಿತು. ಪರಿಣಾಮ ಆಸೀಸ್‌ 82 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 229 ರನ್‌ಗಳಿಸಿದ ಆಸ್ಟ್ರೇಲಿಯಾ 333 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.

    ಬುಮ್ರಾ ಬೆಂಕಿ ಚೆಂಡು:
    4ನೇ ದಿನದಾಟದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಮರ ಸಾರಿದ ಜಸ್ಪ್ರೀತ್‌ ಬುಮ್ರಾ ಟಾಪ್‌-ಬ್ಯಾಟರ್‌ಗಳಿಗೆ ಪೆವಲಿಯನ್‌ ಹಾದಿ ತೋರುವಲ್ಲಿ ಯಶಸ್ವಿಯಾದರು. ಬುನ್ರಾ ಬೆಂಕಿ ಚೆಂಡಿನ ದಾಳಿಗೆ ಅಸೀಸ್‌ ಬ್ಯಾಟರ್‌ಗಳು ಪೆವಿಲಿಯನ್‌ ಪರೇಡ್‌ ನಡೆಸಿದರು. ಇನ್ನು ಆಸೀಸ್‌ ವಿರುದ್ಧ ಬುಮ್ರಾ 4 ವಿಕೆಟ್‌ ಕಿತ್ತರೆ, ಮೊಹಮ್ಮದ್‌ ಸಿರಾಜ್‌ 3 ವಿಕೆಟ್‌ ಹಾಗೂ ರವೀಂದ್ರ ಜಡೇಜಾ 1 ವಿಕೆಟ್‌ ಪಡೆದು ಮಿಂಚಿದರು.

    2ನೇ ಇನ್ನಿಂಗ್ಸ್‌ನಲ್ಲಿ ಆಸೀಸ್‌ ಪರ ಮಾರ್ನಸ್‌ ಲಾಬುಶೇನ್‌ 70 ರನ್‌ (139 ಎಸೆತ, 3 ಬೌಂಡರಿ) ಗಳಿಸಿದ್ರೆ, ಪ್ಯಾಟ್‌ ಕಮ್ಮಿನ್ಸ್‌ 41 ರನ್‌, ಉಸ್ಮಾಣ ಖವಾಜ 21 ರನ್‌, ಸ್ಯಾಮ್‌ ಕಾನ್ಸ್‌ಸ್ಟಾಸ್‌ 8 ರನ್‌, ಟ್ರಾವಿಸ್‌ ಹೆಡ್‌ 1 ರನ್‌, ಅಲೆಕ್ಸ್‌ ಕ್ಯಾರಿ 2 ರನ್‌ ಗಳಿಸಿದ್ರೆ ಮಿಚೆಲ್‌ ಮಾರ್ಷ್‌ ಶೂನ್ಯ ಸುತ್ತಿದರು. ದಿನದ ಅಂತ್ಯದ ವರೆಗೂ ವಿಕೆಟ್‌ ಬಿಟ್ಟುಕೊಡದ ನಥಾನ್‌ ಲಿಯಾನ್‌ 41 ರನ್‌, ಸ್ಕಾಟ್‌ ಬೊಲ್ಯಾಂಡ್‌ 10 ರನ್‌ ಗಳಿಸಿದ್ದು, 5ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

    ಬುಮ್ರಾ ಬೆಂಕಿ ಚೆಂಡಿಗೆ ದಾಖಲೆಗಳು ಉಡೀಸ್‌:
    ಭಾರತದ ಪರ 200 ವಿಕೆಟ್‌ಗಳನ್ನು ವೇಗವಾಗಿ ಪಡೆದ ಬೌಲರ್ಸ್‌
    37 ಪಂದ್ಯ, ರವಿಚಂದ್ರನ್‌ ಅಶ್ವಿನ್‌
    44 ಪಂದ್ಯ, ಜಸ್ಪ್ರಿತ್ ಬುಮ್ರಾ
    44 ಪಂದ್ಯ, ರವೀಂದ್ರ ಜಡೇಜಾ
    46 ಪಂದ್ಯ, ಹರ್ಭಜನ್ ಸಿಂಗ್
    47 ಪಂದ್ಯ, ಅನಿಲ್ ಕುಂಬ್ಳೆ

    ಅತಿ ಕಡಿಮೆ ಸರಾಸರಿ ಹೊಂದಿರುವ ಬೌಲರ್ಸ್‌
    ಜಸ್ಪ್ರೀತ್ ಬುಮ್ರಾ, 19.56 ಸರಾಸರಿ
    ಜಯೋಲ್ ಗಾರ್ನರ್, 20.34 ಸರಾಸರಿ
    ಶಾನ್ ಪೊಲಾಕ್, 20.39 ಸರಾಸರಿ
    ವಕಾರ್ ಯೂನಿಸ್, 20.61 ಸರಾಸರಿ

    ಕಡಿಮೆ ಎಸೆತಗಳಲ್ಲಿ 200 ವಿಕೆಟ್ ಪಡೆದ ಬೌಲರ್‌ಗಳು
    ವಕಾರ್ ಯೂನಿಸ್, 7725 ಎಸೆತಗಳು
    ಡೇಲ್ ಸ್ಟೇಯ್ನ್, 7848 ಎಸೆತಗಳು
    ಕಗಿಸೊ ರಬಾಡ, 8153 ಎಸೆತಗಳು
    ಜಸ್ಪ್ರೀತ್ ಬುಮ್ರಾ, 8484 ಎಸೆತಗಳು

  • ಫಲಿಸಿತು ಅಪ್ಪನ ತ್ಯಾಗ – ಮಗನಿಗಾಗಿ ಸರ್ಕಾರಿ ಉದ್ಯೋಗ ತೊರೆದಿದ್ದ ನಿತೀಶ್‌ ರೆಡ್ಡಿ ತಂದೆ!

    ಫಲಿಸಿತು ಅಪ್ಪನ ತ್ಯಾಗ – ಮಗನಿಗಾಗಿ ಸರ್ಕಾರಿ ಉದ್ಯೋಗ ತೊರೆದಿದ್ದ ನಿತೀಶ್‌ ರೆಡ್ಡಿ ತಂದೆ!

    – ಅಂದು ಹಾಸ್ಯ ಮಾಡಿದವರು ಇಂದು ಹೊಗಳುತ್ತಿದ್ದಾರೆ; ನಿತೀಶ್‌

    ಮೆಲ್ಬೋರ್ನ್: ಬಲಿಷ್ಠ ಆಸೀಸ್‌ ವಿರುದ್ಧ ಚೊಚ್ಚಲ ಟೆಸ್ಟ್‌ ಶತಕ ಸಿಡಿಸಿರುವ ನಿತೀಶ್‌ ಕುಮಾರ್‌ ರೆಡ್ಡಿ (Nitish Kumar Reddy) ಸದ್ಯ ಟ್ರೆಂಡಿಂಗ್‌ನಲ್ಲಿದ್ದಾರೆ. ಆಸೀಸ್ ವೇಗದ ಮತ್ತು ಸ್ಪಿನ್ ಎಸೆತಗಳನ್ನು ಸಮರ್ಥವಾಗಿ ನಿಭಾಯಿಸಿದ 21ರ ಹರೆಯದ ರೆಡ್ಡಿ 3ನೇ ದಿನದ ಅಂತ್ಯಕ್ಕೆ 105 ರನ್‌ ಸಿಡಿಸಿ ಟೀಂ ಇಂಡಿಯಾವನ್ನು (Team India) ಫಾಲೋ ಆನ್‌ನಿಂದ ಕಾಪಾಡಿದ್ದಾರೆ. ನಿತೀಶ್‌ ಆಟಕ್ಕೆ ಭಾರೀ ಪ್ರಶಂಸೆಗೆ ವ್ಯಕ್ತವಾಗುತ್ತಿದೆ. ಆದ್ರೆ ನಿತೀಶ್‌ ರೆಡ್ಡಿಯ ಈ ಸಾಧನೆಯ ಹಿಂದೆ ಅವರ ತಂದೆಯ ಕಣ್ಣೀರಿನ ಕಥೆಯೊಂದನ್ನ ಮರೆಯುವಂತಿಲ್ಲ.

    ಹೌದು. ಇನ್ನೂ 25 ವರ್ಷ ಅವಧಿಯಿದ್ದರೂ ಮಗನ ಕ್ರಿಕೆಟ್‌ ವೃತ್ತಿ ಜೀವನಕ್ಕಾಗಿ ನಿತೀಶ್‌ ರೆಡ್ಡಿ ತಂದೆ ಮುತಾಲ್ಯ ರೆಡ್ಡಿ (Mutalya Reddy) ಸರ್ಕಾರಿ ಉದ್ಯೋಗ ತೊರೆದರು. ಇಂದು ಮಗನ ಚೊಚ್ಚಲ ಶತಕ ಕಂಡು ಪೆವಲಿಯನ್‌ನಲ್ಲಿದ್ದ ನಿತೀಶ್ ಕುಮಾರ್ ತಂದೆ ಖುಷಿಯಿಂದ ಕಣ್ಣೀರಿಟ್ಟರು. ದೇವರಿಗೆ ಅಲ್ಲಿಂದಲೇ ಕೈಮುಗಿದರು, ಕುಟುಂಬದ ಇತರ ಸದಸ್ಯರನ್ನು ತಬ್ಬಿಕೊಂಡರು. ಈ ಕುರಿತ ವೀಡಿಯೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ: ಭಾರತಕ್ಕೆ ನಿತೀಶ್‌-ಸುಂದರ್‌ ಶತಕದ ಜೊತೆಯಾಟ ಆಸರೆ – ಫಾಲೋ ಆನ್‌ನಿಂದ ಪಾರು

    ಸನ್‌ ರೈಸರ್ಸ್‌ ಹೈದರಾಬಾದ್‌ನಲ್ಲಿ ನೀಡಿದ ಪ್ರದರ್ಶನಕ್ಕಾಗಿ ನಿತೀಶ್‌ ರೆಡ್ಡಿ ಅವರನ್ನು ಟೀಂ ಇಂಡಿಯಾಗೆ ಆಯ್ಕೆ ಮಾಡಿದ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ತಮ್ಮ ತಂದೆಯ ಕೊಡುಗೆ ಬಗ್ಗೆ ಹೇಳಿದ್ದರು. ನಾನು ಇನ್ನೂ ಕೆಲವೇ ದಿನಗಳಲ್ಲಿ ಕ್ರಿಕೆಟ್‌ ಅಕಾಡೆಮಿಗೆ ಹೋಗಬೇಕಿತ್ತು. ಅದೇ ದಿನ ನನ್ನ ತಂದೆಗೆ ರಾಜಸ್ಥಾನಕ್ಕೆ ವರ್ಗಾವಣೆ ಆಗಿರುವುದಾಗಿ ಕರೆ ಬಂತು. ಆಗ ನನಗೆ 8 ವರ್ಷ ವಯಸ್ಸಾಗಿತ್ತು. ಅವರು ರಾಜಸ್ಥಾನಕ್ಕೆ ಹೋದರೆ, ಇಲ್ಲಿ ಎಲ್ಲವನ್ನು ಹೇಗೆ ನಿಭಾಯಿಸುತ್ತಾರೆ ಎಂದು ಆಪ್ತರು ಕೇಳಿದರು. ಇದರಿಂದ ಸರ್ಕಾರಿ ಉದ್ಯೋಗ ತೊರೆದ ನನ್ನ ತಂದೆ ನನ್ನೊಂದಿಗೆ ಉಳಿಯಲು ನಿರ್ಧರಿಸಿದರು.

    ನನ್ನ ತಂದೆ ಸರ್ಕಾರಿ ಉದ್ಯೋಗ ತೊರೆದು ಆಂಧ್ರಕ್ಕೆ ಮರಳಿ ಬಂದಾಗ, ಅನೇಕರು ಟೀಕೆ ಮಾಡಿದ್ರು. ಆದ್ರೆ ನನ್ನ ತಂದೆ ಇದೆಲ್ಲವನ್ನೂ ಮೆಟ್ಟಿನಿಂತರು. ನನ್ನ ಮಗನ ದೊಡ್ಡ ಸಾಧನೆ ಮಾಡುತ್ತಾನೆ ಅಂತ ನಂಬಿದ್ದರು. ಆರ್ಥಿಕ ಸಂಕಷ್ಟದ ಸಮಯದಲ್ಲೂ ನನಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಟ್ಟರು. ಅಂದು ಅಪಹಾಸ್ಯ ಮಾಡಿದ್ದ ಜನ, ಈಗ ನನ್ನನ್ನು ಹೊಗಳಲು ನನ್ನ ತಂದೆಗೆ ಕರೆ ಮಾಡುತ್ತಾರೆ, ಊಟಕ್ಕೆ ಕರೆಯುತ್ತಾರೆ. ಕಳೆದು ಹೋದ ಗೌರವ ಮರಳಿ ಪಡೆಯುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದು ನಿತೀಶ್‌ ಭಾವುಕರಾದರು. ಇದನ್ನೂ ಓದಿ: ಬೂಮ್ರಾಗೆ ಒಂದೇ ಓವರ್‌ನಲ್ಲಿ 18 ರನ್‌ ಚಚ್ಚಿದ 19ರ ಯುವಕ – ರೋಹಿತ್‌ ಪಡೆ ತಬ್ಬಿಬ್ಬು

    ನಿತೀಶ್ ಕುಮಾರ್ ರೆಡ್ಡಿ ಚೊಚ್ಚಲ ಶತಕವನ್ನು ಸಿಡಿಸಿ ದಾಖಲೆ ನಿರ್ಮಿಸಿದ್ದು ಒಂದು ಕಡೆ. ಇನ್ನೊಂದು ಕಡೆ, ಒಂದೇ ಸರಣಿಯಲ್ಲಿ ಆಸ್ಟ್ರೇಲಿಯಾದ ವಿರುದ್ದ ಅತಿಹೆಚ್ಚು ಸಿಕ್ಸರ್ (8) ಸಿಡಿಸಿದ ದಾಖಲೆಯನ್ನೂ ಬರೆದ್ದಾರೆ. ಅಲ್ಲದೇ ಎಂಸಿಜಿಯಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಶತಕ ಬಾರಿಸಿದ 5ನೇ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನೂ ತಮ್ಮ ಹೆಗಲಿಗೇರಿಸಿಕೊಂಡರು. ಇದನ್ನೂ ಓದಿ: ಪಾಕ್‌ ಪ್ರಧಾನಿ ಜೊತೆ ವಿಶ್ವಕಪ್‌ ವೀಕ್ಷಣೆ – ಇಂಡೋ -ಪಾಕ್‌ ಕ್ರಿಕೆಟ್‌ಗೆ ಮತ್ತೆ ಚಾಲನೆ ನೀಡಿದ್ದ ಸಿಂಗ್‌!

  • ಭಾರತಕ್ಕೆ ನಿತೀಶ್‌-ಸುಂದರ್‌ ಶತಕದ ಜೊತೆಯಾಟ ಆಸರೆ – ಫಾಲೋ ಆನ್‌ನಿಂದ ಪಾರು

    ಭಾರತಕ್ಕೆ ನಿತೀಶ್‌-ಸುಂದರ್‌ ಶತಕದ ಜೊತೆಯಾಟ ಆಸರೆ – ಫಾಲೋ ಆನ್‌ನಿಂದ ಪಾರು

    – ನಿತೀಶ್‌ ಕುಮಾರ್‌ ರೆಡ್ಡಿ ಚೊಚ್ಚಲ ಟೆಸ್ಟ್‌ ಶತಕ
    – ಆಸೀಸ್‌ ವಿರುದ್ಧ ಅತಿಹೆಚ್ಚು ಸಿಕ್ಸರ್‌ ದಾಖಲೆ

    ಮೆಲ್ಬೋರ್ನ್: ಬಾರ್ಡರ್ – ಗವಾಸ್ಕರ್ ಟ್ರೋಫಿ ಸರಣಿಯ 4ನೇ ಟೆಸ್ಟ್‌ನ 3ನೇ ದಿನದ ಅಂತ್ಯಕ್ಕೆ ಭಾರತ (Team India), 9 ವಿಕೆಟ್ ನಷ್ಟಕ್ಕೆ 358 ರನ್ ಗಳಿಸಿದೆ. ಇದರಿಂದ ಬಾಕ್ಸಿಂಗ್‌ ಡೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಇನ್ನೂ 116 ರನ್‌ ಗಳಿಸಬೇಕಿದೆ. 8ನೇ ವಿಕೆಟ್‌ಗೆ ನಿತೀಶ್‌ ಕುಮಾರ್‌ ರೆಡ್ಡಿ (Nitish Kumar Reddy), ವಾಷಿಂಗ್ಟನ್‌ ಸುಂದರ್‌ ಅವರ ಶತಕದ ಜೊತೆಯಾಟದಿಂದ ಭಾರತ, ಫಾಲೋ ಆನ್‌ನಿಂದ ಬಚಾವ್ ಆಗಿದೆ.

    2ನೇ ದಿನ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಮತ್ತು ವಿರಾಟ್ ಕೊಹ್ಲಿ (Virat Kohli) ನಡುವೆ 3ನೇ ವಿಕೆಟಿಗೆ 102 ರನ್ನುಗಳ ಉತ್ತಮ ಜೊತೆಯಾಟ ಬಂದಿತ್ತು. ಆದರೆ, ಜೈಸ್ವಾಲ್ ರನೌಟ್ ಆದ ಬೆನ್ನಲ್ಲೇ, ವಿರಾಟ್ ಕೊಹ್ಲಿ ಮತ್ತು ಆಕಾಶ್ ದೀಪ್ ಔಟ್ ಆಗುವ ಮೂಲಕ, ಭಾರತ ಹಿನ್ನಡೆ ಅನುಭವಿಸಿತ್ತು. ಎರಡನೇ ದಿನದ ಆಟದ ಅಂತದ ವೇಳೆ ಕೊನೇ 11 ರನ್‌ಗಳಿಗೆ 3 ವಿಕೆಟ್‌ ಪತನಗೊಂಡ ಪರಿಣಾಮ 164 ರನ್‌ಗಳಿಗೆ 5 ವಿಕೆಟ್ ಅನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ಇದನ್ನೂ ಓದಿ: ಬೂಮ್ರಾಗೆ ಒಂದೇ ಓವರ್‌ನಲ್ಲಿ 18 ರನ್‌ ಚಚ್ಚಿದ 19ರ ಯುವಕ – ರೋಹಿತ್‌ ಪಡೆ ತಬ್ಬಿಬ್ಬು

    3ನೇ ದಿನದ ಆಟ ಆರಂಭಿಸಿದ ಭಾರತ 30 ರನ್‌ ಗಳಿಸುವಷ್ಟರಲ್ಲೇ ರಿಷಬ್‌ ಪಂತ್ ಹಾಗೂ ರವೀಂದ್ರ ಜಡೇಜಾ ಅವರ ವಿಕೆಟ್‌ ಕಳೆದುಕೊಂಡಿತು. ನಂತರ ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ (Washington Sundar) ಜೊತೆಯಾಟ ಆರಂಭವಾಯಿತು. ಆಸೀಸ್ ವೇಗ ಮತ್ತು ಸ್ಪಿನ್ ಎಸೆತಗಳನ್ನು ಸಮರ್ಥವಾಗಿ ನಿಭಾಯಿಸಿದ ರೆಡ್ಡಿ ಮತ್ತು ಸುಂದರ್, 8ನೇ ವಿಕೆಟಿಗೆ 127 ರನ್ (285 ಎಸೆತ) ಸೇರಿಸುವ ಮೂಲಕ, ಟೀಂ ಇಂಡಿಯಾವನ್ನು ಫಾಲೋ ಆನ್ ನಿಂದ ತಪ್ಪಿಸಿದರು. ಇವರಿಬ್ಬರ ತಾಳ್ಮೆಯ ಮತ್ತು ಹೊಂದಾಣಿಕೆಯ ಆಟ ಭಾರೀ ಪ್ರಶಂಸೆ ವ್ಯಕ್ತವಾಯಿತು. ಇದನ್ನೂ ಓದಿ: ಪಾಕ್‌ ಪ್ರಧಾನಿ ಜೊತೆ ವಿಶ್ವಕಪ್‌ ವೀಕ್ಷಣೆ – ಇಂಡೋ -ಪಾಕ್‌ ಕ್ರಿಕೆಟ್‌ಗೆ ಮತ್ತೆ ಚಾಲನೆ ನೀಡಿದ್ದ ಸಿಂಗ್‌!

    ನಿತೀಶ್‌ ಚೊಚ್ಚಲ ಶತಕ:
    ನಿತೀಶ್ ಕುಮಾರ್ ರೆಡ್ಡಿ ಚೊಚ್ಚಲ ಶತಕವನ್ನು ಸಿಡಿಸಿ ದಾಖಲೆ ನಿರ್ಮಿಸಿದ್ದು ಒಂದು ಕಡೆ. ಇನ್ನೊಂದು ಕಡೆ, ಒಂದೇ ಸರಣಿಯಲ್ಲಿ ಆಸ್ಟ್ರೇಲಿಯಾದ ವಿರುದ್ದ ಅತಿಹೆಚ್ಚು ಸಿಕ್ಸರ್ (8) ಸಿಡಿಸಿದ ದಾಖಲೆಯನ್ನೂ ಬರೆದರು. ಮಗನ ಚೊಚ್ಚಲ ಶತಕಕ್ಕೆ ಪೆವಲಿಯನ್ ನಲ್ಲಿದ್ದ ನಿತೀಶ್ ಕುಮಾರ್ ತಂದೆ ಖುಷಿಯಿಂದ ಕಣ್ಣೀರಿಟ್ಟರು. ದೇವರಿಗೆ ಅಲ್ಲಿಂದಲೇ ಕೈಮುಗಿದರು, ಕುಟುಂಬದ ಇತರ ಸದಸ್ಯರನ್ನು ತಬ್ಬಿಕೊಂಡರು.

    ಇನ್ನೊಂದು ಕಡೆ, ವಾಷಿಂಗ್ಟನ್ ಸುಂದರ್ ಅರ್ಧ ಶತಕ ಬಾರಿಸಿ ತಂಡಕ್ಕೆ ಆಸರೆಯಾದರು. ತಾಳ್ಮೆಯಿಂದ 162 ಎಸೆತವನ್ನು ಎದುರಿಸಿ ಸುಂದರ್ 50 ರನ್ ಗಳಿಸಿ ನಾಥನ್ ಲಿಯಾನ್ ಗೆ ವಿಕೆಟ್ ಒಪ್ಪಿಸಿದರು. 3ನೇ ದಿನದ ಅಂತಕ್ಕೆ 105 ರನ್ ಗಳಿಸಿರುವ ನಿತೀಶ್ ರೆಡ್ಡಿ ಮತ್ತು 2 ರನ್ ಗಳಿಸಿರುವ ಮೊಹಮ್ಮದ್ ಸಿರಾಜ್ ಕ್ರೀಸ್‌ನಲ್ಲಿದ್ದಾರೆ. ಇದನ್ನೂ ಓದಿ: ಕೊನೆಯ 30 ನಿಮಿಷ ಆಟ| 11 ರನ್‌ ಅಂತರದಲ್ಲಿ 3 ವಿಕೆಟ್‌ ಪತನ – ಸಂಕಷ್ಟದಲ್ಲಿ ಭಾರತ

    2ನೇ ದಿನದ ಆಟದ ವೇಳೆ, ಆಸೀಸ್ ಬೃಹತ್ ರನ್ ಪೇರಿಸಿದಾಗ, ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಮಾಜಿ ನಾಯಕ ಸುನೀಲ್ ಗವಾಸ್ಕರ್ ಮತ್ತು ಮಾಜಿ ಹೆಡ್ ಕೋಚ್ ರವಿಶಾಸ್ತ್ರಿ ಕಟುವಾದ ಪದದಿಂದ ಟೀಕಿಸಿದ್ದರು. ಅದಕ್ಕೆ ಕಾರಣ, ಶುಭಮನ್‌ ಗಿಲ್ ಅವರ ಜಾಗಕ್ಕೆ ವಾಷಿಂಗ್ಟನ್ ಸುಂದರ್ ಆಯ್ಕೆ ಮಾಡಿದ್ದು. ಆದ್ರೆ ಬೌಲಿಂಗ್‌ ಬ್ಯಾಟಿಂಗ್‌ನಲ್ಲಿ ಸುಧಾರಿತ ಪ್ರದರ್ಶನ ನೀಡಿದ ವಾಷಿಂಗ್ಟನ್‌ ಸುಂದರ್‌ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.

  • ಪಿಂಕ್‌ಬಾಲ್‌ ಟೆಸ್ಟ್‌ – ಸ್ಟಾರ್ಕ್‌ ವೇಗಕ್ಕೆ ನೆಲ ಕಚ್ಚಿದ ಬ್ಯಾಟರ್ಸ್‌, ಭಾರತ 180ಕ್ಕೆ ಆಲೌಟ್‌

    ಪಿಂಕ್‌ಬಾಲ್‌ ಟೆಸ್ಟ್‌ – ಸ್ಟಾರ್ಕ್‌ ವೇಗಕ್ಕೆ ನೆಲ ಕಚ್ಚಿದ ಬ್ಯಾಟರ್ಸ್‌, ಭಾರತ 180ಕ್ಕೆ ಆಲೌಟ್‌

    ಅಡಿಲೇಡ್‌: ಇಲ್ಲಿ ನಡೆಯುತ್ತಿರುವ ಬಾರ್ಡರ್‌ ಗವಾಸ್ಕರ್‌ ಟೆಸ್ಟ್‌ ಸರಣಿಯ ಪಿಂಕ್ ಬಾಲ್ ಟೆಸ್ಟ್‌ ಪಂದ್ಯದ ಮೊದಲ ದಿನ ಪರ್ತ್ ಪಂದ್ಯದ ಫಲಿತಾಂಶವೇ ಮರುಕಳಿಸಿದಂತೆ ಕಂಡುಬಂದಿದೆ. ಮೊದಲ ದಿನದಾಟದಲ್ಲಿ ಭಾರತ 180 ರನ್‌ಗಳಿಗೆ ಆಲೌಟ್‌ ಆಗಿದೆ. ಬಳಿಕ ತನ್ನ ಸರದಿಯ ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ಆಸ್ಟ್ರೇಲಿಯಾ (Australia) ತಂಡ 33 ಓವರ್‌ಗಳಲ್ಲಿ 86 ರನ್‌ಗಳಿಗೆ ಒಂದು ವಿಕೆಟ್‌ ಕಳೆದುಕೊಂಡಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಭಾರತ ಆರಂಭದಲ್ಲೇ ಆಗ್ರ ಕ್ರಮಾಂಕದ ಬ್ಯಾಟರ್‌ಗಳನ್ನ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಆಸೀಸ್‌ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ (Mitchell Starc) ಭಾರತ ತಂಡಕ್ಕೆ ಮೊದಲ ಎಸೆತದಲ್ಲಿ ಆಘಾತ ನೀಡಿದರು. ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ 161 ರನ್‌ ಸಿಡಿಸಿ ಅಬ್ಬರಿಸಿದ್ದ ಯಶಸ್ವಿ ಜೈಸ್ವಾಲ್ (Yashasvi Jaiswal) ಅವರನ್ನು ಪಂದ್ಯದ ಮೊದಲನೇ ಎಸೆತದಲ್ಲೇ ಎಲ್‌ಬಿಡಬ್ಲ್ಯೂ ಬಲೆಗೆ ಕೆಡವಿದರು. ಜೈಸ್ವಾಲ್ ಅವರು ಸತತವಾಗಿ 2ನೇ ಪಂದ್ಯದಲ್ಲೂ ಪ್ರಥಮ ಇನ್ನಿಂಗ್ಸ್ ನಲ್ಲೇ ಶೂನ್ಯ ಸುತ್ತಿದ ಕುಖ್ಯಾತಿಗೆ ಒಳಗಾದರು. ಎರಡೂ ಪಂದ್ಯಗಳಲ್ಲೂ ಅವರನ್ನು ಶೂನ್ಯಕ್ಕೆ ಸ್ಟಾರ್ಕ್ ಅವರೇ ಔಟ್‌ ಮಾಡಿದ್ದು ಎಂಬುದು ಗಮನಾರ್ಹ.

    ಅಲ್ಲಿಂದ ಬಳಿಕ ಶುಭಮನ್ ಗಿಲ್ ಮತ್ತು ಕೆಎಲ್ ರಾಹುಲ್ ಅವರು ಭಾರತ ಇನ್ನಿಂಗ್ಸ್‌ಗೆ ಜೀವಕಳೆ ತಂದರು. 2ನೇ ವಿಕೆಟ್‌ಗೆ ಅವರಿಂದ 69 ರನ್ ಗಳ ಜೊತೆಯಾಟ ಬಂದಾಗ ಭಾರತ ಮತ್ತೆ ದೊಡ್ಡ ಮೊತ್ತ ಪೇರಿಸುವ ಸೂಚನೆ ನೀಡಿತ್ತು. ಆದ್ರೆ ಕೆ.ಎಲ್ ರಾಹುಲ್ 37 ರನ್‌ಗಳಿಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಈ ಬೆನ್ನಲ್ಲೇ ಬೋಲೆಂಡ್ ವೇಗದ ದಾಳಿಗೆ ಶುಭಮನ್ ಗಿಲ್ (31 ರನ್‌) ಸಹ ಔಟಾದರು.

    ಈ ನಡುವೆ ನಿತೀಶ್ ಕುಮಾರ್ ರೆಡ್ಡಿ (Nitish Kumar Reddy) ಅವರ ದಿಟ್ಟ ಬ್ಯಾಟಿಂಗ್ ಪ್ರದರ್ಶನ ಭಾರತ ತಂಡವನ್ನು 180ರ ಗಡಿ ವರೆಗೆ ಕೊಂಡೊಯ್ದಿತು. ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರೆ ಮತ್ತೊಂದೆಡೆ ನಿತೀಶ್‌ ಆಸೀಸ್ ವೇಗಿಗಳ ಬೌಲಿಂಗ್ ಲೆಕ್ಕಕ್ಕಿಲ್ಲದಂತೆ ಸಿಕ್ಸರ್‌, ಬೌಂಡರಿ ಚಚ್ಚುತ್ತಿದ್ದರು. ಈ ನಡುವೆ 54 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್‌ ನೊಂದಿಗೆ 42 ರನ್‌ ಬಾರಿಸಿ, ಉತ್ತಮ ಪ್ರದರ್ಶನ ನೀಡುತ್ತಿದ್ದ ನಿತೀಶ್‌ ರೆಡ್ಡಿ ಮತ್ತೆ ಸಿಕ್ಸರ್‌ ಸಿಡಿಸುವ ಬರದಲ್ಲಿ ಕ್ಯಾಚ್‌ ನೀಡಿ ಔಟಾದರು.

    ಕೈಕೊಟ್ಟ ಕೊಹ್ಲಿ, ರೋಹಿತ್‌:
    ಭಾರಿ ನೀರಿಕ್ಷೆ ಹುಟ್ಟಿಸಿದ್ದ ವಿರಾಟ್ ಕೊಹ್ಲಿ (Virat Kohli) 7 ರನ್‌ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. ಅಲ್ಲದೇ ಕೆ.ಎಲ್‌ ರಾಹುಲ್‌ ಅವರಿಗೆ ಒಮ್ಮೆ ಜೀವದಾನ ಸಿಕ್ಕರೂ ಅದನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲರಾದರು. ಇನ್ನೂ 6ನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ನಾಯಕ ರೋಹಿತ್‌ ಶರ್ಮಾ 23 ಎಸೆತಗಳಲ್ಲಿ 3 ರನ್‌ ಗಳಿಸಿ ಔಟಾದರು. ಇದರೊಂದಿಗೆ ರಿಷಬ್‌ ಪಂತ್‌ 21 ರನ್‌, ರವಿಚಂದ್ರನ್‌ ಅಶ್ವಿನ್‌ 22 ರನ್‌ಗಳ ಕೊಡುಗೆ ನೀಡಿದರು.

    ಮಿಂಚಿದ ಮಿಚೆಲ್‌ ಸ್ಟಾರ್ಕ್‌:
    ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದ ಮೊದಲ ದಿನವೇ ಭಾರತೀಯ ಬ್ಯಾಟರ್‌ಗಳ ಎದುರು ಬಿಗಿ ಹಿಡಿತ ಸಾಧಿಸಿದ ಮಿಚೆಲ್‌ ಸ್ಟಾರ್ಕ್‌ 14.1 ಓವರ್‌ಗಳಲ್ಲಿ 6 ವಿಕೆಟ್‌ ಕಿತ್ತರೆ, ಸ್ಕಾಟ್‌ ಬೋಲೆಂಡ್‌ ಹಾಗೂ ಪ್ಯಾಟ್‌ ಕಮ್ಮಿನ್ಸ್‌ ತಲಾ 2 ವಿಕೆಟ್‌ ಕಿತ್ತರು.

    ಬಳಿಕ ತನ್ನ ಸರದಿಯ 2ನೇ ಇನ್ನಿಂಗ್ಸ್‌ ಆರಂಭಿಸಿದ ಆಸೀಸ್‌ 33 ಓವರ್‌ಗಳಲ್ಲಿ 86 ರನ್‌ಗಳಿಗೆ ಒಂದು ವಿಕೆಟ್‌ ಕಳೆದುಕೊಂಡಿತು. ಆರಂಭಿಕ ಆಟಗಾರ ಉಸ್ಮಾನ್‌ ಖವಾಜ 13 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆ ಬಳಿಕ ಜೊತೆಗೂಡಿದ ನಾಥನ್ ಮೆಕ್‌ಸ್ವೀನಿ 97 ಎಸೆತಗಳಲ್ಲಿ 38 ರನ್‌, ಮಾರ್ನಸ್‌ ಲಾಬುಶೇನ್‌ 20 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.