Tag: niti aayog

  • ಪ್ರತಿ ರಾಜ್ಯದಲ್ಲಿ ಒಂದು ವಿಶ್ವದರ್ಜೆಯ ಪ್ರವಾಸಿ ತಾಣ ಅಭಿವೃದ್ಧಿಪಡಿಸಿ: ಮೋದಿ ಕರೆ

    ಪ್ರತಿ ರಾಜ್ಯದಲ್ಲಿ ಒಂದು ವಿಶ್ವದರ್ಜೆಯ ಪ್ರವಾಸಿ ತಾಣ ಅಭಿವೃದ್ಧಿಪಡಿಸಿ: ಮೋದಿ ಕರೆ

    – ಟೀಂ ಇಂಡಿಯಾ ರೀತಿ ಕೇಂದ್ರ, ರಾಜ್ಯಗಳು ಒಟ್ಟಾಗಿ ಕೆಲಸ ಮಾಡಬೇಕು: ಪ್ರಧಾನಿ

    ನವದೆಹಲಿ: ವಿಕಸಿತ ಭಾರತ (Viksit Bharat) ಗುರಿಯನ್ನು ಸಾಧಿಸಲು ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ‘ಟೀಂ ಇಂಡಿಯಾ’ ರೀತಿ ಕೆಲಸ ಮಾಡಬೇಕೆಂದು ಪ್ರಧಾನಿ ಮೋದಿ (Narendra Modi) ಕರೆ ನೀಡಿದರು.

    ನೀತಿ ಆಯೋಗದ (Niti Aayog) ಹತ್ತನೇ ಸಭೆಯ ಅಧ್ಯಕ್ಷತೆ ವಹಿಸಿದ ಅವರು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾತನಾಡಿದರು. ನಾವು ಅಭಿವೃದ್ಧಿಯ ವೇಗವನ್ನು ಹೆಚ್ಚಿಸಬೇಕು. ಕೇಂದ್ರ ಮತ್ತು ಎಲ್ಲಾ ರಾಜ್ಯಗಳು ಒಟ್ಟಾಗಿ ಟೀಂ ಇಂಡಿಯಾದಂತೆ ಒಟ್ಟಾಗಿ ಕೆಲಸ ಮಾಡಿದರೆ, ಯಾವುದೇ ಗುರಿ ಅಸಾಧ್ಯವಲ್ಲ. ವಿಕಸಿತ ಭಾರತ ಭಾರತ ಪ್ರತಿಯೊಬ್ಬ ಭಾರತೀಯನ ಗುರಿ. ಪ್ರತಿಯೊಂದು ರಾಜ್ಯ ವಿಕಸಿತ ಆದಾಗ, ಭಾರತ ವಿಕಸಿತವಾಗುತ್ತದೆ. ಇದು 140 ಕೋಟಿ ನಾಗರಿಕರ ಆಕಾಂಕ್ಷೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಮೋದಿ ನೇತೃತ್ವದ ನೀತಿ ಆಯೋಗದ ಸಭೆಗೆ ಸಿದ್ದರಾಮಯ್ಯ ಗೈರು

    ರಾಜ್ಯಗಳು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಅಗತ್ಯ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಕನಿಷ್ಠ ಒಂದು ಪ್ರವಾಸಿ ತಾಣವನ್ನು ವಿಶ್ವದರ್ಜೆಯ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು. ಒಂದು ರಾಜ್ಯ, ಒಂದು ಜಾಗತಿಕ ತಾಣ. ಇದು ನೆರೆಯ ನಗರಗಳನ್ನು ಪ್ರವಾಸಿ ಸ್ಥಳಗಳಾಗಿ ಅಭಿವೃದ್ಧಿಪಡಿಸಲು ಸಹ ಕಾರಣವಾಗುತ್ತದೆ ಎಂದರು. ಇದನ್ನೂ ಓದಿ: ಪ್ರೀತಿಸಿದವನೊಂದಿಗೆ ಮನೆಬಿಟ್ಟು ಹೋದ ಮಗಳು – ಮನನೊಂದು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಶಂಕೆ

    ಭಾರತ ವೇಗವಾಗಿ ನಗರೀಕರಣಗೊಳ್ಳುತ್ತಿದೆ. ಭವಿಷ್ಯಕ್ಕೆ ಸಿದ್ಧವಾಗಿರುವ ನಗರಗಳತ್ತ ನಾವು ಕೆಲಸ ಮಾಡಬೇಕು. ಬೆಳವಣಿಗೆ, ನಾವೀನ್ಯತೆ ಮತ್ತು ಸುಸ್ಥಿರತೆಯು ನಮ್ಮ ನಗರಗಳ ಅಭಿವೃದ್ಧಿಗೆ ಎಂಜಿನ್ ಆಗಿರಬೇಕು. ನಮ್ಮ ಕಾರ್ಯಪಡೆಯಲ್ಲಿ ಮಹಿಳೆಯರನ್ನು ಸೇರಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು. ಅವರು ಕಾರ್ಯಪಡೆಯಲ್ಲಿ ಗೌರವಯುತವಾಗಿ ಸಂಯೋಜಿಸಲ್ಪಡುವಂತೆ ನಾವು ಕಾನೂನುಗಳು, ನೀತಿಗಳನ್ನು ರೂಪಿಸಬೇಕು ಎಂದು ತಿಳಿಸಿದರು. ಇದನ್ನೂ ಓದಿ: `ಯುವನಿಧಿ’ ಗ್ಯಾರಂಟಿ ಹಣದಿಂದ ಲ್ಯಾಪ್‌ಟಾಪ್‌ ಖರೀದಿಸಿದ ವಿದ್ಯಾರ್ಥಿನಿ ಇಶಾ ಆಸಿಫ್‌

    ಸರ್ಕಾರ ಜಾರಿಗೆ ತಂದ ನೀತಿಗಳು ಸಾಮಾನ್ಯ ನಾಗರಿಕರ ಜೀವನದಲ್ಲಿ ಬದಲಾವಣೆ ತರುವ ರೀತಿಯಲ್ಲಿ ನಾವು ಕೆಲಸ ಮಾಡಬೇಕು. ಜನರು ಬದಲಾವಣೆಯನ್ನು ಅನುಭವಿಸಿದಾಗ ಮಾತ್ರ, ಅದು ಬದಲಾವಣೆಯನ್ನು ಬಲಪಡಿಸುತ್ತದೆ. ಬದಲಾವಣೆಯನ್ನು ಒಂದು ಚಳುವಳಿಯಾಗಿ ಪರಿವರ್ತಿಸುತ್ತದೆ. 140 ಕೋಟಿ ಜನರ ಆಕಾಂಕ್ಷೆಗಳನ್ನು ಈಡೇರಿಸಲು ನಮಗೆ ಒಂದು ತಂಡವಾಗಲು ಉತ್ತಮ ಅವಕಾಶವಿದೆ. 2047ರ ವೇಳೆಗೆ ಭಾರತವನ್ನು ವಿಕಸಿತ ಮಾಡುವುದು ನಮ್ಮ ಗುರಿಯಾಗಿದೆ. ಪ್ರತಿಯೊಂದು ರಾಜ್ಯ, ಪ್ರತಿಯೊಂದು ನಗರ, ಪ್ರತಿಯೊಂದು ನಗರ ಪಾಲಿಕೆ ಮತ್ತು ಪ್ರತಿಯೊಂದು ಗ್ರಾಮವನ್ನು ವಿಕಸಿತ ಮಾಡುವ ಗುರಿ ನಮಗಿರಬೇಕು. ನಾವು ಈ ಮಾರ್ಗಗಳಲ್ಲಿ ಕೆಲಸ ಮಾಡಿದರೆ, ವಿಕಸಿತ ಭಾರತ ಆಗಲು 2047ರವರೆಗೆ ಕಾಯಬೇಕಾಗಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಡ್ರೆಸ್ ತಪ್ಪಾಗಿದ್ದಕ್ಕೆ ಗಲಾಟೆ – ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಡೆಲಿವರಿ ಬಾಯ್!

    ಪುದುಚೇರಿ ಸಿಎಂ ರಂಗಸ್ವಾಮಿ, ಕರ್ನಾಟಕ ಸಿಎಂ ಸಿದ್ಧರಾಮಯ್ಯ ಮತ್ತು ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಸಭೆಗೆ ಗೈರುಹಾಜರಾಗಿದ್ದರು. ಆಂಧ್ರಪ್ರದೇಶ, ತಮಿಳುನಾಡು ಮತ್ತು ತೆಲಂಗಾಣ ಮುಖ್ಯಮಂತ್ರಿಗಳಾದ ಎನ್ ಚಂದ್ರಬಾಬು ನಾಯ್ಡು, ಎಂಕೆ ಸ್ಟಾಲಿನ್ ಮತ್ತು ರೇವಂತ್ ರೆಡ್ಡಿ ಉಪಸ್ಥಿತರಿದ್ದರು. ಜಮ್ಮು ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ ಮತ್ತು ಹಿಮಾಚಲ ಪ್ರದೇಶದ ಸುಖವಿಂದರ್ ಸುಖು ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: Vijayapura | ಡ್ಯಾನ್ಸ್ ಮಾಡುತ್ತಿರುವಾಗಲೇ ಹೃದಯಾಘಾತ – ಯುವಕ ಸಾವು

  • ನೀತಿ ಆಯೋಗದ ಸಭೆಯಿಂದ ಮಧ್ಯದಲ್ಲೇ ಹೊರ ಬಂದ ಮಮತಾ ಬ್ಯಾನರ್ಜಿ

    ನೀತಿ ಆಯೋಗದ ಸಭೆಯಿಂದ ಮಧ್ಯದಲ್ಲೇ ಹೊರ ಬಂದ ಮಮತಾ ಬ್ಯಾನರ್ಜಿ

    ನವದೆಹಲಿ: ಪಶ್ಚಿಮ ಬಂಗಾಳಕ್ಕೆ (West Bengal) ಬರಬೇಕಿದ್ದ ಕೇಂದ್ರ ಸರ್ಕಾರದಿಂದ ಹಣಕಾಸು ನೆರವು ನಿರಾಕರಿಸಿದ ವಿಷಯವನ್ನು ಪ್ರಸ್ತಾಪಿಸಿದಾಗ ತಮ್ಮ ಮೈಕ್ ಅನ್ನು ಮ್ಯೂಟ್ ಮಾಡಲಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ನಡೆಯುತ್ತಿದ್ದ ನೀತಿ ಆಯೋಗದ ಸಭೆಯಿಂದ (NITI Aayog Meeting) ಹೊರ ನಡೆದಿದ್ದಾರೆ.

    ರಾಷ್ಟ್ರಪತಿ ಭವನದ ಸಾಂಸ್ಕೃತಿನ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ಸಭೆ ನಡೆಯುತ್ತಿದ್ದು ಸಭೆಯಲ್ಲಿ ಎಲ್ಲ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸಚಿವರು ಭಾಗಿಯಾಗಿದ್ದರು. ತಮಿಳುನಾಡು, ಕರ್ನಾಟಕ, ಕೇರಳ, ದೆಹಲಿ,‌ ತೆಲಂಗಾಣ, ಪಂಜಾಬ್ ಸಿಎಂಗಳು ಮೊದಲೇ ಸಭೆಯನ್ನು ಬಹಿಷ್ಕರಿಸಿದ್ದರು.

     

    ಇಂಡಿಯಾ (INDIA) ಒಕ್ಕೂಟ ಆಡಳಿತ ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತ್ರ ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಯಲ್ಲಿ ಮಾತನಾಡಲು ಸರಿಯಾದ ಸಮಯ ನೀಡಿಲ್ಲ. ನನಗೂ ಮೊದಲು ಮಾತನಾಡಿದ ಸಿಎಂಗಳಿಗೆ 20 ನಿಮಿಷಕ್ಕೆ ಸಮಯ ನೀಡಲಾಗಿತ್ತು. ನನ್ನ ಸರದಿಯಲ್ಲಿ ಕೇವಲ ಐದು ನಿಮಿಷ ನೀಡಲಾಯಿತು. ನೆರವು ನಿರಾಕರಿಸಿದ ವಿಷಯ ಪ್ರಸ್ತಾಪಿಸಿದ್ದಂತೆ ಮೈಕ್ ಮ್ಯೂಟ್ ಮಾಡಲಾಯಿತು ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಅತಿಹೆಚ್ಚು ಸ್ಟಾರ್ಟಪ್‌ಗಳು ನೋಂದಣಿಯಾಗಿರುವ ಎರಡನೇ ರಾಜ್ಯ ಕರ್ನಾಟಕ

    ಸರ್ಕಾರದ ಈ ಕ್ರಮವನ್ನು ಬಂಗಾಳ ಮತ್ತು ಎಲ್ಲಾ ಪ್ರಾದೇಶಿಕ ಪಕ್ಷಗಳಿಗೆ ಅವಮಾನ ಮಾಡಿದಂತೆ. ನನ್ನನ್ನು ಏಕೆ ತಡೆದಿದ್ದೀರಿ, ಏಕೆ ತಾರತಮ್ಯ ಮಾಡುತ್ತಿದ್ದೀರಿ? ವಿರೋಧ ಪಕ್ಷದಿಂದ ನಾನು ಮಾತ್ರ ಇಲ್ಲಿ ಪ್ರತಿನಿಧಿಸುತ್ತಿದ್ದೇನೆ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಬೇಕು ಎಂಬ ಹೆಚ್ಚಿನ ಆಸಕ್ತಿಯಿಂದ ಈ ಸಭೆಗೆ ಹಾಜರಾಗಿದ್ದೆ ಎಂದು ಅವರು ಗುಡುಗಿದರು.

    ಇದೇ ವೇಳೆ ನೀತಿ ಆಯೋಗವನ್ನು ರದ್ದುಪಡಿಸುವ ಮತ್ತು ಯೋಜನಾ ಆಯೋಗವನ್ನು ಮರುಸ್ಥಾಪಿಸುವ ತನ್ನ ಬೇಡಿಕೆಯನ್ನು ಅವರು ಪುನರುಚ್ಚರಿಸಿದರು. ನೀತಿ ಆಯೋಗಕ್ಕೆ ಯಾವುದೇ ಹಣಕಾಸಿನ ಅಧಿಕಾರವಿಲ್ಲ, ಅದು ಹೇಗೆ ಕೆಲಸ ಮಾಡುತ್ತದೆ? ಅದಕ್ಕೆ ಹಣಕಾಸಿನ ಅಧಿಕಾರ ನೀಡಿ ಅಥವಾ ಯೋಜನಾ ಆಯೋಗವನ್ನು ಮರಳಿ ತನ್ನಿ ಎಂದು ಅವರು ಆಗ್ರಹಿಸಿದರು. ಇದನ್ನೂ ಓದಿ: ಬೆಂಗಳೂರು ಪಿಜಿಯಲ್ಲಿ ಯುವತಿಯ ಹತ್ಯೆ – ತಲೆಮರೆಸಿಕೊಂಡಿದ್ದ ಆರೋಪಿ ಮಧ್ಯಪ್ರದೇಶದಲ್ಲಿ ಅರೆಸ್ಟ್

     

  • ಕೃಷಿ, ಜಲ ಸಂಪನ್ಮೂಲ ಅಭಿವೃದ್ಧಿಯಲ್ಲಿ ದೇಶದಲ್ಲೇ ರಾಯಚೂರಿಗೆ ಫಸ್ಟ್ ರ‍್ಯಾಂಕ್

    ಕೃಷಿ, ಜಲ ಸಂಪನ್ಮೂಲ ಅಭಿವೃದ್ಧಿಯಲ್ಲಿ ದೇಶದಲ್ಲೇ ರಾಯಚೂರಿಗೆ ಫಸ್ಟ್ ರ‍್ಯಾಂಕ್

    – ಕೇಂದ್ರದಿಂದ ವಿಶೇಷ ಅನುದಾನ ಘೋಷಣೆ

    ರಾಯಚೂರು: ಕೃಷಿ (Agricultural development) ಮತ್ತು ಜಲ ಸಂಪನ್ಮೂಲ ಅಭಿವೃದ್ಧಿಯಲ್ಲಿ (Water Resources Development) ರಾಯಚೂರು (Raichur) ಜಿಲ್ಲೆ ದೇಶದಲ್ಲೇ ಮೊದಲನೇ ರ‍್ಯಾಂಕ್ ಪಡೆದಿದೆ. ಮಹಾತ್ಮಾಕಾಂಕ್ಷೆ ಜಿಲ್ಲೆಗಳ ಕಾರ್ಯಕ್ರಮದಡಿ ಕೇಂದ್ರ ಸರ್ಕಾರದ ನೀತಿ ಆಯೋಗದಿಂದ (NITI Aayog) ಜಿಲ್ಲೆ ಫಸ್ಟ್ ರ‍್ಯಾಂಕ್ ಪಡೆದುಕೊಂಡಿದೆ.

    2023ರ ಮಾರ್ಚ್‍ನಲ್ಲಿ ಜಿಲ್ಲಾಡಳಿತದ ಕಾರ್ಯವೈಖರಿ ಆಧಾರದ ಮೇಲೆ ಜಿಲ್ಲೆಗೆ ಈ ರ‍್ಯಾಂಕ್ ನೀಡಲಾಗಿದೆ. ರಾಜ್ಯದಲ್ಲಿ ರಾಯಚೂರು ಹಾಗೂ ಯಾದಗಿರಿ ಮಹತ್ವಾಕಾಂಕ್ಷೆ ಜಿಲ್ಲೆಗಳಾಗಿದ್ದು, ದೇಶದ ಒಟ್ಟು 115 ಮಹತ್ವಾಕಾಂಕ್ಷೆ ಜಿಲ್ಲೆಗಳಲ್ಲಿ ರಾಯಚೂರಿಗೆ ಮೊದಲ ಸ್ಥಾನ ದೊರೆತಿದೆ. ಕಾರ್ಯಕ್ಷಮತೆ ಮೇರೆಗೆ, ಮೊದಲ ಸ್ಥಾನ ಪಡೆದ ಹಿನ್ನೆಲೆ ಹೆಚ್ಚುವರಿ 3 ಕೋಟಿ ರೂ. ಅನುದಾನ ಪಡೆಯಲು ಜಿಲ್ಲೆ ಅರ್ಹತೆ ಪಡೆದಿದೆ. ಇದನ್ನೂ ಓದಿ: ಹೊಸ ಸಂಸತ್ ಭವನ ಉದ್ಘಾಟನೆ ಸ್ಮರಣಾರ್ಥ 75 ರೂ. ವಿಶೇಷ ನಾಣ್ಯ ಬಿಡುಗಡೆ

    ಕೃಷಿ ಕ್ಷೇತ್ರ ವಿಸ್ತರಣೆ, ಜಲ ಸಂರಕ್ಷಣೆ ವಿಧಾನಗಳು ಹಾಗೂ ನೀತಿ ಆಯೋಗದ ಮಾನದಂಡಗಳ ಅಡಿ ಮಂಡಿಸಿರುವ ಜಿಲ್ಲೆಯ ಸ್ಥಿತಿಗತಿಗಳ ವರದಿ ಆಧಾರದ ಮೇಲೆ ಜಿಲ್ಲೆಗೆ ಈ ಸ್ಥಾನ ದೊರಕಿದೆ. ಈ ವಿಚಾರವಾಗಿ ಕೇಂದ್ರ ನೀತಿ ಆಯೋಗದ ಹೆಚ್ಚುವರಿ ಕಾರ್ಯದರ್ಶಿ ವಿ.ರಾಧಾ ಅವರು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ವಂದಿತಾ ಶರ್ಮಾರಿಗೆ ಪತ್ರ ಬರೆದು ಅಭಿನಂದಿಸಿದ್ದಾರೆ. ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ಹಾಗೂ ಕೇಂದ್ರ ಪ್ರಭಾರಿ ಅಧಿಕಾರಿಗಳನ್ನು ನೀತಿ ಆಯೋಗ ಶ್ಲಾಘಿಸಿದೆ. ಹಂಚಿಕೆಯಾದ ಹೆಚ್ಚುವರಿ ಅನುದಾನಕ್ಕೆ (Central Government Grant) ಕ್ರಿಯಾ ಯೋಜನಾ ವರದಿಯನ್ನ ನೀಡಲು ಆಯೋಗ ಸೂಚಿಸಿದೆ.

    ಕೃಷಿ, ಶಿಕ್ಷಣ, ಸಮಾಜ ಕಲ್ಯಾಣ ಮತ್ತು ಆರೋಗ್ಯ ಇಲಾಖೆ ಸೇರಿ ಜಿಲ್ಲೆಯ ಸ್ಥಿತಿಗತಿಗಳ ವಾಸ್ತವ ವರದಿಗಳ ಪರಿಶೀಲನೆ ನಡೆಸಿ ನೀತಿ ಆಯೋಗ ಮಹತ್ವಾಕಾಂಕ್ಷೆ ಜಿಲ್ಲೆಗಳ ಮೇಲೆ ನಿಗಾ ಇರಿಸುತ್ತದೆ. ಅದರ ಆಧಾರದ ಮೇಲೆ ಸ್ಥಾನಗಳನ್ನು ನಿರ್ಧರಿಸುತ್ತದೆ. ಇದನ್ನೂ ಓದಿ: ಜೂನ್ ಯಾಕೆ? ನಾಳೆಯೇ ನಮ್ಮ ಮನೆ ಹತ್ರ ಬಂದು ಮಲ್ಕೊಳ್ಳಲಿ: ಪ್ರತಾಪ್ ಆರೋಪಕ್ಕೆ ಡಿಕೆಶಿ ವ್ಯಂಗ್ಯ

  • ರಾಜ್ಯದಲ್ಲಿ ಯಾದಗಿರಿ ಅತಿ ಬಡ, ಬೆಂಗಳೂರು ಶ್ರೀಮಂತ ಜಿಲ್ಲೆ – ನಿಮ್ಮ ಜಿಲ್ಲೆಗೆ ಎಷ್ಟನೇ ಸ್ಥಾನ?

    ರಾಜ್ಯದಲ್ಲಿ ಯಾದಗಿರಿ ಅತಿ ಬಡ, ಬೆಂಗಳೂರು ಶ್ರೀಮಂತ ಜಿಲ್ಲೆ – ನಿಮ್ಮ ಜಿಲ್ಲೆಗೆ ಎಷ್ಟನೇ ಸ್ಥಾನ?

    – ರಾಜ್ಯಗಳ ಪೈಕಿ ಕರ್ನಾಟಕಕ್ಕೆ 19ನೇ ಸ್ಥಾನ
    – ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದಲ್ಲಿ ಹೆಚ್ಚು ಬಡವರು

    ನವದೆಹಲಿ: ನೀತಿ ಆಯೋಗ ಬಹು ಆಯಾಮದ ಬಡತನ ಸೂಚ್ಯಂಕ ವರದಿ ಪ್ರಕಟವಾಗಿದೆ. ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶಗಳು ಭಾರತದಲ್ಲೇ ಅತಿ ಬಡವರನ್ನು ಹೊಂದಿರುವ ರಾಜ್ಯ ಎಂಬ ಹಣೆಪಟ್ಟಿಗೆ ಭಾಜನವಾಗಿದ್ದರೆ ಪಟ್ಟಿಯಲ್ಲಿ ಕರ್ನಾಟಕ 19ನೇ ಸ್ಥಾನವನ್ನು ಪಡೆದಿದೆ.

    ಸೂಚ್ಯಂಕ ಪಟ್ಟಿಯಲ್ಲಿ ಬಿಹಾರ ಮೊದಲ ಸ್ಥಾನ ಪಡೆದಿದೆ. ಇಲ್ಲಿನ ಜನಸಂಖ್ಯೆಯಲ್ಲಿ 51.91% ಬಡವರಿದ್ದಾರೆ. ನಂತರದ ಸ್ಥಾನಗಳನ್ನು ಪಡೆದ ಜಾರ್ಖಂಡ್ 42.16%, ಉತ್ತರ ಪ್ರದೇಶ 37.79%, ಮಧ್ಯಪ್ರದೇಶ 36.65% ಹಾಗೂ ಮೇಘಾಲಯದಲ್ಲಿ 32.67% ಬಡವರನ್ನು ಹೊಂದಿದೆ.

    ಕೇರಳ ರಾಜ್ಯ ಅತಿ ಕಡಿಮೆ ಬಡವರನ್ನು ಹೊಂದಿರುವ ಪಟ್ಟಿಗೆ ಸೇರಿದೆ. ಕೇರಳದ ಒಟ್ಟು ಜನಸಂಖ್ಯೆಯಲ್ಲಿ 0.71ರಷ್ಟು ಮಾತ್ರ ಬಡವರಿದ್ದಾರೆ. ನಂತರದ ಸ್ಥಾನಗಳನ್ನು ಗೋವಾ (3.76%), ಸಿಕ್ಕಿಂ(3.82%), ತಮಿಳುನಾಡು(4.89%), ಹಾಗೂ ಪಂಜಾಬ್ (5.59%) ಪಡೆದುಕೊಂಡಿದೆ.

     

    ಬಡತನ ಸೂಚ್ಯಂಕ ಪಟ್ಟಿಯಲ್ಲಿ ಕರ್ನಾಟಕ 19ನೇ ಸ್ಥಾನವನ್ನು ಕರ್ನಾಟಕ ಪಡೆದುಕೊಂಡಿದೆ. ಕರ್ನಾಟಕದ ಜನಸಂಖ್ಯೆಯಲ್ಲಿ 13.16% ರಷ್ಟು ಬಡವರಿದ್ದಾರೆ. ಕರ್ನಾಟಕ ಜಿಲ್ಲೆಗಳಲ್ಲಿ ಯಾದಗಿರಿ ಅತಿ ಹೆಚ್ಚು ಬಡವರನ್ನು ಹೊಂದಿರುವ ಜಿಲ್ಲೆಯಾಗಿದೆ. ನಂತರದ ಸ್ಥಾನಗಳಲ್ಲಿ ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಿವೆ. ಹಾಗೆಯೇ ಶ್ರೀಮಂತ ಜಿಲ್ಲೆಗಳಲ್ಲಿ ಬೆಂಗಳೂರು ನಗರ ಮುಂಚೂಣಿಯಲ್ಲಿದ್ದರೇ, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಮೈಸೂರು ನಂತರದ ಸ್ಥಾನಗಳನ್ನು ಪಡೆದುಕೊಂಡಿದೆ.

     

    ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?
    ನಂ.1 ಸ್ಥಾನದಲ್ಲಿರುವ ಯಾದಗಿರಿ ಜಿಲ್ಲೆಯಲ್ಲಿ ಒಟ್ಟು ಜನಸಂಖ್ಯೆಯಲ್ಲಿ 41.67%ರಷ್ಟು ಜನರು ಬಡವರಾಗಿದ್ದಾರೆ. ನಂತರದ ಸ್ಥಾನಗಳಲ್ಲಿರುವ ರಾಯಚೂರು (32.19%), ಕೊಪ್ಪಳ (24.6%), ಹೊಸದಾಗಿ ಸ್ಥಾಪನೆಯಾದ ವಿಜಯನಗರ ಜಿಲ್ಲೆ ಸೇರಿದಂತೆ ಬಳ್ಳಾರಿ(23.4%), ಬಿಜಾಪುರ(22.4%) ಕಲಬುರಗಿ (21.8%), ಗದಗ (20.27%), ಬಾಗಲಕೋಟೆ (20.23%), ಬೀದರ್ (19.42%), ಚಾಮರಾಜನಗರ (18.91%), ಚಿತ್ರದುರ್ಗ (15.79%), ಹಾವೇರಿ (15.61%), ಚಿಕ್ಕಬಳ್ಳಾಪುರ (15.16%), ತುಮಕೂರು (14.00%), ಉತ್ತರಕನ್ನಡ(13.21%), ಶಿವಮೊಗ್ಗ (12.72%), ಬೆಳಗಾವಿ (12.26%), ದಾವಣಗೆರೆ (11.71%), ಚಿಕ್ಕಮಗಳೂರು(11.19%), ಉಡುಪಿ(10.32%), ಕೋಲಾರ (10.30%), ಧಾರವಾಡ (9.65%), ರಾಮನಗರ (8.77%), ಕೊಡಗು (8.74%), ಬೆಂಗಳೂರು ಗ್ರಾಮಾಂತರ(8.39%), ಮೈಸೂರು(7.79%), ದಕ್ಷಿಣಕನ್ನಡ (6.69%), ಹಾಸನ(6.64%), ಮಂಡ್ಯ(6.62%), ಬೆಂಗಳೂರು (2.31) ಬಡವರಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಮತ್ತೊಂದು ಕಾಲೇಜಿನಲ್ಲಿ ಕೊರೊನಾ ಬ್ಲಾಸ್ಟ್ – 12 ವಿದ್ಯಾರ್ಥಿಗಳಿಗೆ ಪಾಸಿಟಿವ್ 

     ಮಾನದಂಡ ಏನು?
    ಜಾಗತಿಕ ಮನ್ನಣೆ ಪಡೆದ ಆಕ್ಸ್‌ಫರ್ಡ್ ಬಡತನ ಮತ್ತು ಮಾನವ ಅಭಿವೃದ್ಧಿ ಉಪಕ್ರಮ ಹಾಗೂ ವಿಶ್ವ ಸಂಸ್ಥೆಯ ಅಭಿವೃದ್ಧಿ ಯೋಜನೆಯ ಸಮೀಕ್ಷಾ ಮಾನದಂಡವನ್ನು ಅನುಸರಿಸಿ ಈ ಸೂಚ್ಯಂಕವನ್ನು ಸಿದ್ಧಪಡಿಸಲಾಗುತ್ತದೆ ಎಂದು ನೀತಿ ಆಯೋಗ ತಿಳಿಸಿದೆ. ಇದನ್ನೂ ಓದಿ: ವಿಶ್ವಕ್ಕೆ ಆತಂಕ ತಂದಿಟ್ಟ ರೂಪಾಂತರಿ ತಳಿ – ಹೈ ಅಲರ್ಟ್‌ ಘೋಷಣೆ, 87 ಮಂದಿಗೆ ಸೋಂಕು

    ಆರೋಗ್ಯ, ಶಿಕ್ಷಣ ಹಾಗೂ ಜೀವನ ಮಟ್ಟವನ್ನು ಆಧರಿಸಿ ಬಡತನವನ್ನು ಅಳೆಯಲಾಗಿದೆ. ಇವುಗಳಲ್ಲಿ ಪೌಷ್ಟಿಕತೆ, ಶಿಶು ಮರಣ, ಕುಡಿಯುವ ನೀರು, ನೈರ್ಮಲ್ಯ, ವಿದ್ಯುತ್, ಬ್ಯಾಂಕ್ ಖಾತೆ ಇತ್ಯಾದಿಗಳನ್ನು ಒಳಗೊಂಡಿದೆ.

  • 2024ರ ವೇಳೆಗೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಒಟ್ಟಿಗೆ ನಡೆಸಿ: ನೀತಿ ಆಯೋಗ

    2024ರ ವೇಳೆಗೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಒಟ್ಟಿಗೆ ನಡೆಸಿ: ನೀತಿ ಆಯೋಗ

    ನವದೆಹಲಿ: 2024ರಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಒಟ್ಟಿಗೆ ನಡೆಸಿ ಎಂದು ನೀತಿ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ.

    ಚುನಾವಣೆಗಳು ಮುಕ್ತವಾಗಿ ನಡೆಯಬೇಕು. ಅಷ್ಟೇ ಅಲ್ಲದೇ ಕಡಿಮೆ ಅವಧಿಯಲ್ಲಿ ಪ್ರಚಾರ ನಡೆಸಬೇಕು. 2024ರ ವೇಳೆಗೆ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ನಡೆಸಬಹುದು ಎಂದು ತನ್ನ ಮೂರು ವರ್ಷದ ಕಾರ್ಯ ಯೋಜನೆಯಲ್ಲಿ ನೀತಿ ಆಯೋಗ ಹೇಳಿದೆ.

    ಈ ಸಲಹೆಯನ್ನು ಪರಿಗಣಿಸಿ ಕಾರ್ಯರೂಪಕ್ಕೆ ತರಲು ಸುಗಮ ದಾರಿಯ ವ್ಯವಸ್ಥೆ ಮಾಡಬೇಕೆಂದು ಚುನಾವಣಾ ಆಯೋಗಕ್ಕೆ ತಿಳಿಸಿದೆ.

    ಇದೆ ವೇಳೆ ಸರ್ಕಾರಿ ಕೆಲಸವನ್ನು ಹೊರಗುತ್ತಿಗೆ ನೀಡಿ ಖಾಸಗಿ ವಲಯದಲ್ಲಿರುವ ಪ್ರತಿಭೆಗಳನ್ನು ವ್ಯವಸ್ಥೆಗೆ ತನ್ನಿ ಎಂದು ಸರ್ಕಾರಕ್ಕೆ ಸಲಹೆ ನೀಡಿದೆ. ನೀತಿ ಆಯೋಗದ ಈ ಸಲಹೆಗೆ ಐಎಎಸ್ ಅಧಿಕಾರಿಗಳಿಂದ ವಿರೋಧ ವ್ಯಕ್ತವಾಗಿದೆ.

    ಗಣರಾಜ್ಯೋತ್ಸವ ದಿನದಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಭಾಷಣದಲ್ಲಿ ವಿಧಾನ ಸಭೆ ಮತ್ತು ಲೋಕಸಭಾ ಚುನಾವಣೆಗಳು ಒಂದೇ ಬಾರಿಗೆ ನಡೆದರೆ ಉತ್ತಮ ಎಂದು ಹೇಳಿದ್ದರು.

    ಪ್ರಧಾನಿ ನರೇಂದ್ರಮೋದಿ ಈ ಹಿಂದೆ ಈ ವಿಚಾರವನ್ನು ಪ್ರಸ್ತಾಪಿಸಿದ್ದು ಎಲ್ಲ ಪಕ್ಷಗಳು ಈ ವಿಚಾರದ ಬಗ್ಗೆ ಒಗ್ಗಟ್ಟಾಗಿ ಒಂದೇ ತೀರ್ಮಾನವನ್ನು ತೆಗೆದುಕೊಳ್ಳಬೇಕು ಎಂದು ಕೇಳಿಕೊಂಡಿದ್ದರು. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಚುನಾವಣೆ ಒಟ್ಟಿಗೆ ನಡೆದರೆ ಉತ್ತಮ ಎನ್ನುವ ಅಭಿಪ್ರಾಯವನ್ನು ಈ ಹಿಂದೆ ವ್ಯಕ್ತಪಡಿಸಿದ್ದರು.

    ಲಾಭ ಏನು?
    ಪ್ರಸ್ತುತ ದೇಶದಲ್ಲಿ ಲೋಕಸಭಾ ಮತ್ತು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಪ್ರತ್ಯೇಕವಾಗಿ ನಡೆಯುತ್ತಿದೆ. ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ಸರ್ಕಾರಗಳ ಮಂತ್ರಿಗಳು ಪ್ರಚಾರ ಕೈಗೊಳ್ಳುವುದರಿಂದ ಆಡಳಿತ ಕೆಲಸಗಳು ಬಾಕಿಯಾಗುತ್ತದೆ. ಅಷ್ಟೇ ಅಲ್ಲದೇ ಸರ್ಕಾರದ ಸಿಬ್ಬಂದಿ ಈ ಕಾರ್ಯದಲ್ಲಿ ತೊಡಗಬೇಕಾಗುತ್ತದೆ. ನೀತಿ ಸಂಹಿತೆ ಜಾರಿ ಸಂದರ್ಭದಲ್ಲಿ ಹೊಸದಾಗಿ ಯೋಜನೆಗಳನ್ನು ಪ್ರಕಟಿಸಲು ಆಗುವುದಿಲ್ಲ. ಈ ಎಲ್ಲ ಕಾರಣಗಳಿಂದ ಸರ್ಕಾರದ ವೆಚ್ಚ, ರಾಜಕೀಯ ಪಕ್ಷಗಳ ಖರ್ಚು ಮತ್ತು ಸಮಯವನ್ನು ಉಳಿಸಲು ಒಂದೇ ಬಾರಿಗೆ ಎರಡು ಚುನಾವಣೆಗಳನ್ನು ಒಟ್ಟಾಗಿ ನಡೆಸುವುದು ಉತ್ತಮ ಎನ್ನುವ ಅಭಿಪ್ರಾಯ ಕೇಳಿಬಂದಿದೆ.

    ಇದನ್ನೂ ಓದಿ: 2019ರಲ್ಲಿ ಬಿಜೆಪಿ ಸೋಲಿಸಲು ಲಾಲೂ ಪ್ರಸಾದ್ ಯಾದವ್ ಐಡಿಯಾ