ಬೆಂಗಳೂರು: ನಾನು ಹಿಂದೂ ಧರ್ಮದ ಹರಿಕಾರ, ಪ್ರಪಂಚದ ಯಾವುದೇ ಮೂಲೆ ಸಿಕ್ಕಿದ್ರೂ ಕೂಡ ನಾನು ಹಿಂದೂ ಧರ್ಮದ ಪ್ರಚಾರಕ್ಕೆ ಶ್ರಮಿಸುತ್ತೇನೆ. ನಾನು ಯಾರಿಗೂ ಮೋಸ ಮಾಡುವ ವ್ಯಕ್ತಿಯಲ್ಲ ಎಂದು ಬೊಬ್ಬೆ ಹೊಡೆಯುತ್ತಾ ಇದ್ದ ನಿತ್ಯಾನಂದನ ಮೇಲೆ ವಂಚನೆ ಮತ್ತು ಮನಿಲ್ಯಾಂಡ್ರಿಂಗ್ ಪ್ರಕರಣ ದಾಖಲಾಗಿದೆ. ಅದು ಭಾರತ ದೇಶದಲ್ಲಿ ಅಲ್ಲ ಅಮೆರಿಕಾದ ಕ್ಯಾಲಿಫೊರ್ನಿಯಾದಲ್ಲಿ.
ನಿತ್ಯಾನಂದ ಈಗ ಮಾತ್ರ ಅಲ್ಲ 2013ರಲ್ಲಿಯೇ ಈ ರೀತಿಯ ಮೋಸ ಮಾಡಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಭಾರತ ಮೂಲದ ಮನೋಹರ್ ಶಿಂಧೆ ಎಂಬುವವರಿಗೂ ಇದೇ ರೀತಿ ಮೋಸ ಮಾಡಿದ್ದಾನೆ. ಅಮೆರಿಕಾದ ಕ್ಯಾಲಿಫೊರ್ನಿಯಾದಲ್ಲಿ ಭಾರತದ ಸಂಸ್ಕೃತಿ ಸಾರುವ ವಿಶ್ವವಿದ್ಯಾನಿಲಯವನ್ನು ತೆರೆಯುತ್ತೇನೆ ಎಂದು ಮೋಸ ಮಾಡಿದ್ದಾನೆ. ಈ ಬಗ್ಗೆ ಅಲ್ಲಿನ ನ್ಯಾಯಾಲಯಕ್ಕೆ ದೂರು ನೀಡಿದಾಗ ನಿತ್ಯಾನಂದನ ಮತ್ತೊಂದು ದೋಖಾ ಕೂಡ ಬೆಳಕಿಗೆ ಬಂದಿದೆ.
ಕ್ಯಾಲಿಫೋರ್ನಿಯಾ ಒಂದರಲ್ಲೇ 20 ಸಂಸ್ಥೆಗಳನ್ನು ನಡೆಸುತ್ತಾ ಇದ್ದ ನಿತ್ಯಾನಂದ ಈ ಸಂಸ್ಥೆಗಳನ್ನೆಲ್ಲಾ ಮನಿಲ್ಯಾಂಡ್ರಿಂಗ್ ಮಾಡೋದಕ್ಕೆ ಬಳಸಿಕೊಳ್ಳುತ್ತಾ ಇದ್ದ ಅನ್ನೋದು ಗೊತ್ತಾಗಿದೆ. ಬಳಿಕ ನ್ಯಾಯಾಲಯ ಕೂಡ ನಿತ್ಯಾನಂದನಿಗೆ ಮೂರು ಮೂರು ಬಾರಿ ದಂಡವನ್ನು ಕಟ್ಟುವಂತೆ ಆದೇಶ ನೀಡಿತ್ತು. ನ್ಯಾಯಾಲಯದ ಆದೇಶದ ಪ್ರಕಾರ 2.4 ಮಿಲಿಯನ್ ಡಾಲರ್(ಅಂದಾಜು 17.02 ಕೋಟಿ ರೂ.) ಹಣವನ್ನು ದಂಡವಾಗಿ ಕಟ್ಟಿದ್ದಾನೆ. ಮುಂದಿನ ವಿಚಾರಣೆ ವೇಳೆ ದಂಡ ಮತ್ತಷ್ಟು ಹೆಚ್ಚಾಗಬಹುದು ಎಂದು ಶಿಂಧೆಯ ಬಳಿ ರಾಜಿ ಪಂಚಾಯ್ತಿಯನ್ನು ನಿತ್ಯಾನಂದ ಮಾಡಿಕೊಂಡಿದ್ದ.
ಬೆಂಗಳೂರು: ವಿವಾದಿತ ಸ್ವಾಮೀಜಿ ನಿತ್ಯಾನಂದನ ಲೀಲೆಗಳು ದಿನ ಕಳೆದಂತೆ ಹೊರಗೆ ಬರುತ್ತಿವೆ. ಗುಜರಾತ್‍ನ ಆಶ್ರಮದಲ್ಲಿ ಹಾಗೇ ಆಗ್ತಿತ್ತು, ಹೀಗೆ ಆಗ್ತಿತ್ತು ಎನ್ನಲಾಗಿತ್ತು. ಆದರೆ ಅದನ್ನ ಯಾರು ನೇರವಾಗಿ ಹೇಳಿಕೊಂಡಿರಲಿಲ್ಲ. ಈಗ ಆಶ್ರಮದಿಂದ ಹೊರಗೆ ಬಂದಿರೋ ಬಾಲಕಿಯೊಬ್ಬಳು ನಿತ್ಯಾನಂದನ ಆಶ್ರಮದಲ್ಲಿ ಯಾವ ರೀತಿ ನರಕ ದರ್ಶನವಾಗಿತ್ತು ಅನ್ನೋದನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ.
ನಿತ್ಯಾನಂದನ ಆಶ್ರಮದಲ್ಲಿ ಬಾಲಕಿ ಅನುಭವಿಸಿದ್ದ ಕಷ್ಟಗಳೇನು?: ನಾನು ಕೂಡ 2013ರಿಂದ ಈ ಆಶ್ರಮದಲ್ಲಿ ಇದ್ದೀನಿ. 7 ವರ್ಷ ಆಶ್ರಮದಲ್ಲಿ ವಾಸ ಮಾಡುತ್ತಾ ಇದ್ದೆ. ನಾನು ಸಹ ಅನೇಕರಿಗೆ ಗುರುಕುಲ ಸೇರುವಂತೆ ಸಲಹೆ ನೀಡಿದ್ದೀನಿ. ಆಶ್ರಮವನ್ನು ಸ್ವರ್ಗ ಅಂತಲೇ ಭಾವಿಸಿದ್ದೆ. ನನಗೂ 7 ವರ್ಷಗಳ ಕಾಲ ಏನೂ ಗೊತ್ತಾಗಲೇ ಇಲ್ಲ. 2019ರಲ್ಲಿ ಸಡನ್ ಆಗಿ ಎಲ್ಲವೂ ಬದಲಾಗುತ್ತಾ ಬಂದಿತ್ತು. ನಾನು ಒಮ್ಮೆ ಇವರ ಮಾತನ್ನು ಕೇಳದೇ ಇದ್ದಾಗ 2 ತಿಂಗಳುಗಳ ಕಾಲ ಕತ್ತಲ ಕೋಣೆಯಲ್ಲಿ ಬಂಧಿಸಿ ಇಟ್ಟಿದ್ದರು. ಸ್ವಾಮೀಜಿಗೆ ಬೇಕಾಗಿದ್ದು ಕೇವಲ ಹಣ ಮಾತ್ರ. ಹಣವನ್ನು ಸಂಪಾದನೆ ಮಾಡಲು ಪೋೀಸ್ಟರ್‍ಗಳನ್ನು ನೀಡುತ್ತಾ ಇದ್ದರು. ಹಿಂದೂಯಿಸಂ ಹೆಸರಿನಲ್ಲಿ ಮಧ್ಯರಾತ್ರಿಯೂ ಹೋಗಿ ಹಣ ವಸೂಲಿ ಮಾಡುತ್ತಾ ಇದ್ದೆವು. ಲಕ್ಷ ಲಕ್ಷ ಹಣವನ್ನು ನಾವು ಪಡೆದುಕೊಂಡಿದ್ದೀವಿ. ಇಷ್ಟೆಲ್ಲ ಆದರೂ ನಮಗೆ ಊಟವನ್ನು ಸರಿಯಾಗಿ ಕೊಡುತ್ತಾ ಇರಲಿಲ್ಲ. ಊಟದಲ್ಲಿ ಉಪ್ಪು ಖಾರ ಅನ್ನೋದು ಇರಲಿ, ತರಕಾರಿ ಕೂಡ ಇರುತ್ತಿರಲಿಲ್ಲ. ತರಕಾರಿಯೇ ಇಲ್ಲದ ಊಟವನ್ನು ನಾವು ಮಾಡಿದ್ದೀವಿ. ನಿತ್ಯಾನಂದನಿಗೆ ಬೇಕಾಗಿದ್ದು ಗೋಲ್ಡನ್ ಟೆಂಪಲ್ ಅನ್ನು ನಿರ್ಮಾಣ ಮಾಡೋದು ಅಷ್ಟೇ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸ್ವ ಇಚ್ಛೆಯಿಂದ ಸನ್ಯಾಸತ್ವ ಸ್ವೀಕರಿಸಿದ್ದೇನೆ, ಇದು ನನ್ನ ಬದುಕು – ತಂದೆಗೆ ಮಗಳ ಖಡಕ್ ಉತ್ತರ
ನಿತ್ಯಾನಂದ ಆಶ್ರಮದಲ್ಲಿ ಸನ್ಯಾಸಿನಿಯರ ಮೇಲೆ ಅತ್ಯಾಚಾರ ಆಗಿದೆ. ಎಲ್ಲಾ ಸನ್ಯಾಸಿನಿಯರ ಮೇಲೆ ಆಗಿದೆ ಅಂತ ಹೇಳೋದಿಲ್ಲ. ಆದರೆ ಬಹುತೇಕರ ಮೇಲೆ ಆಗಿದೆ. ಕೆಲವೊಂದು ಪ್ರಕರಣದಲ್ಲಿ ನಾವು ಸಾಕ್ಷ್ಯ ಆಗಿದ್ದೀವಿ. ವಿದೇಶದಿಂದ ಕೆಲವು ಮಂದಿ ಬರುತ್ತಾ ಇದ್ದರು. ಅವರಿಗೆ ಕೆಲವೊಂದು ಸ್ಕ್ರಿಪ್ಟ್‍ಗಳನ್ನು ನೀಡಿ ಆಕ್ಟ್ ಮಾಡುವಂತೆ ಹೇಳುತ್ತಾ ಇದ್ದರು. ಅದು ಲೈಂಗಿಕ ದೌರ್ಜನ್ಯವಾಗಿದೆ ಎಂದು ನಟಿಸುವ ನಾಟಕವಾಗಿತ್ತು. ಪೊಲೀಸ್ ಸ್ಟೇಷನ್‍ಗೆ ಹೋಗ್ತೀವಿ ಅಂತೆಲ್ಲಾ ಹೇಳಬೇಕಿತ್ತು. ಇದನ್ನು ರಹಸ್ಯವಾಗಿ ಚಿತ್ರಿಸಿಕೊಳ್ತಾ ಇದ್ರು ಅಂತ ಅನಿಸುತ್ತೆ. ನಾನು ಒಮ್ಮೆ ಲೈಂಗಿಕ ದೌರ್ಜನ್ಯವಾಗಿದೆ ಅಂತ ಹೇಳಿದ್ದೀನಿ. ಇದು ನಿತ್ಯನ ಆಶ್ರಮದಲ್ಲಿ ನಡೆಯುತ್ತಾ ಇದ್ದ ಘಟನೆಯಾಗಿದೆ ಎಂದು ಬಾಲಕಿ ವಿಡಿಯೋ ಮೂಲಕ ಹೇಳಿಕೊಂಡಿದ್ದಾಳೆ. ಇದನ್ನೂ ಓದಿ:ಹೊಸ ದೇಶವನ್ನೇ ಕಟ್ಟಿದ ನಿತ್ಯಾನಂದ – ಕ್ಯಾಬಿನೆಟ್ ರಚನೆ, ಪ್ರಧಾನಿ ಆಯ್ಕೆ
ರಾಮನಗರ: ದೇಶ ಬಿಟ್ಟು ಪರಾರಿಯಾಗಿರುವ ಅತ್ಯಾಚಾರ ಪ್ರಕರಣದ ಆರೋಪಿ, ಸ್ವಯಂ ಘೋಷಿತ ದೇವ ಮಾನವ ಬಿಡದಿಯ ನಿತ್ಯಾನಂದ ಧ್ಯಾನಪೀಠದ ನಿತ್ಯಾನಂದನಿಗೆ ರಾಮನಗರ ನ್ಯಾಯಾಲಯ ಬಿಗ್ ರಿಲೀಫ್ ನೀಡಿದೆ. ಈ ಮೂಲಕ ನಿತ್ಯಾನಂದ ವಿಚಾರಣೆಗೆ ಹಾಜರಾಗುವ ಅವಶ್ಯಕತೆಯಿಲ್ಲ, ಗೈರಿನಲ್ಲೇ ವಿಚಾರಣೆ ನಡೆಸುವಂತೆ ಆದೇಶಿಸಿದೆ.
ನಿತ್ಯಾನಂದನ ವಿರುದ್ಧದ ಅತ್ಯಾಚಾರ ಹಾಗೂ ರಾಸಲೀಲೆ ಪ್ರಕರಣದ ಹಿನ್ನೆಲೆಯಲ್ಲಿ ಸೋಮವಾರ ರಾಮನಗರದ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆಯಿತು. ಈ ವೇಳೆ ನಿತ್ಯಾನಂದನ ಪರ ವಕೀಲರಾದ ಸಿ.ವಿ ನಾಗೇಶ್ ಹಾಗೂ ಪ್ರಮೀಳಾ ನೇಸರ್ಗಿ ವಾದ ಮಂಡಿಸಿದ್ದಲ್ಲದೇ ಹೈಕೋರ್ಟಿನಿಂದ ತಂದಿರುವ ಆದೇಶದ ಲಕೋಟೆಯನ್ನು ನ್ಯಾಯಾಧೀಶರಿಗೆ ನೀಡಿದರು.
ನ್ಯಾಯಾಲಯದ ವಿಚಾರಣೆಗೆ ನಿತ್ಯಾನಂದ ಖುದ್ದು ಹಾಜರಾಗುವ ಅವಶ್ಯಕತೆ ಇಲ್ಲ. ನಿತ್ಯಾನಂದನ ಗೈರು ಹಾಜರಿಯಲ್ಲಿಯೇ ವಿಚಾರಣೆ ನಡೆಸಬಹುದು ಎಂದು ಹೈಕೋರ್ಟಿನ ಆದೇಶದಲ್ಲಿ ತಿಳಿಸಲಾಗಿದೆ.
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ವಿಚಾರಣೆಗೆ ವಿನಾಯಿತಿ ನೀಡಿದ ರಾಮನಗರದ ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಿದ್ಧಲಿಂಗಪ್ರಭು ಆದೇಶ ನೀಡಿದರು. ಈ ಮೂಲಕ ಸದ್ಯಕ್ಕೆ ನಿತ್ಯಾನಂದನಿಗೆ ಕೋರ್ಟ್ ಗೆ ಹಾಜರಾಗುವ ವಿನಾಯಿತಿ ಸಿಕ್ಕಿದೆ.
ಇನ್ನೂ ವಿಚಾರಣೆಗೆ ಗೈರಾದರೂ ವಿಚಾರಣೆ ಮುಂದುವರಿಸುವಂತೆ ಆದೇಶ ನೀಡುವುದರ ಜೊತೆಗೆ ನಾಳೆಗೆ (ಡಿಸೆಂಬರ್ 10ಕ್ಕೆ) ವಿಚಾರಣೆಯನ್ನು ನ್ಯಾಯಾಧೀಶರು ಮುಂದೂಡಿದ್ದಾರೆ.
ನವದೆಹಲಿ: ಸ್ವಯಂ ಘೋಷಿತ ದೇವ ಮಾನವ, ಅತ್ಯಾಚಾರ ಆರೋಪಿ ನಿತ್ಯಾನಂದನ ಕುರಿತು ವಿದೇಶಗಳಲ್ಲೂ ಅಪಸ್ವರ ಎದ್ದಿದ್ದು, ಇದರ ಬೆನ್ನಲ್ಲೇ ಇದೀಗ ವಿಡಿಯೋವೊಂದನ್ನು ಹರಿಬಿಟ್ಟಿದ್ದಾನೆ.
ಅಜ್ಞಾತ ಸ್ಥಳದಿಂದ ನಿತ್ಯಾನಂದ ಈ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ನಾನು ಪರಮಶಿವ ಯಾರಿಂದಲೂ ನನ್ನನ್ನು ಮುಟ್ಟಲು ಸಾಧ್ಯವಿಲ್ಲ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ನಿತ್ಯಾನಂದನ ವಿಡಿಯೋದಲ್ಲಿ ದಿನಾಂಕ ಸ್ಪಷ್ಟವಾಗಿಲ್ಲ, ನವೆಂಬರ್ 22ರಂದು ಟ್ವಿಟ್ಟರಿನಲ್ಲಿ ಈ ವಿಡಿಯೋ ಹಾಕಲಾಗಿದೆ.
ಯಾವ ನ್ಯಾಯಾಲಯವೂ ನನ್ನನ್ನು ವಿಚಾರಣೆಗೊಳಪಡಿಸಲು ಸಾಧ್ಯವಿಲ್ಲ. ಅಲ್ಲದೆ ಸತ್ಯವೇನೆಂಬುದನ್ನು ನಾನು ಜಗತ್ತಿಗೆ ತೋರಿಸುತ್ತೇನೆ. ಈ ಮೂಲಕ ನನ್ನ ಅಂತರತ್ವವನ್ನು ತೋರಿಸುತ್ತೇನೆ. ಈಗ ಯಾರೂ ನನ್ನನ್ನು ಮುಟ್ಟಲು ಸಾಧ್ಯವಿಲ್ಲ. ನಾನು ನಿಮಗೆ ನಿಜವನ್ನು ಹೇಳುತ್ತೇನೆ. ನಾನು ಪರಮಶಿವ- ಅರ್ಥವಾಯಿತೇ? ನಿಜವನ್ನು ಬಾಯ್ಬಿಡಿಸಲು ಯಾವುದೇ ಮೂರ್ಖ ನ್ಯಾಯಾಲಯ ನನ್ನನ್ನು ವಿಚಾರಣೆಗೊಳಪಡಿಸಬೇಕಿಲ್ಲ ಎಂದು ವಿಡಿಯೋದಲ್ಲಿ ನಿತ್ಯಾನಂದ ಹೇಳಿಕೊಂಡಿದ್ದಾನೆ.
ಇಲ್ಲಿರುವ ಮೂಲಕ ನೀವು ನಿಮ್ಮ ಸಮಗ್ರತೆ ಹಾಗೂ ನಿಷ್ಠೆಯನ್ನು ಪ್ರದರ್ಶಿಸಿದ್ದೀರಿ. ನಿಮ್ಮೆಲ್ಲರಿಗೂ ಇನ್ನು ಸಾವು ಸಂಭವಿಸುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ತನ್ನ ಅನುಯಾಯಿಗಳಿಗೆ ಸಂದೇಶ ತಿಳಿಸಿದ್ದಾನೆ.
ನಿತ್ಯಾನಂದನ ವೀಸಾ ಅವಧಿ ಮುಕ್ತಾಯವಾಗಿದ್ದು, ನವೀಕರಿಸುವ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಇದರ ನಡುವೆಯೂ ನಿತ್ಯಾನಂದ ಈಕ್ವೇಡಾರ್ ನಲ್ಲಿ ಅವಿತುಕೊಂಡಿದ್ದಾನೆ ಎಂದು ಹೇಳಲಾಗಿದೆ. ಅಲ್ಲದೆ ಅಲ್ಲಿಯೇ ದೇಶವನ್ನೂ ನಿರ್ಮಿಸಲು ಸಿದ್ಧತೆ ನಡೆಸಿದ್ದಾನೆ ಎಂದು ವರದಿಯಾಗಿದೆ. ಈ ಕುರಿತು ಈಕ್ವೇಡಾರ್ ಸರ್ಕಾರ ಸ್ಪಷ್ಟಪಡಿಸಿದ್ದು, ನಿತ್ಯಾನಂದ ಹಾಗೂ ನಮ್ಮ ದೇಶಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.
ಈಕ್ವೇಡಾರ್ ನಲ್ಲಿ ಖಾಸಗಿ ಹಿಮಪ್ರದೇಶವನ್ನು ಖರೀದಿಸಿ, ಇದು ತನ್ನ ದೇಶ ಎಂಬಂತೆ ನಿತ್ಯಾನಂದ ಬಿಂಬಿಸುತ್ತಿದ್ದಾನೆ. ಅಲ್ಲದೆ ಇದಕ್ಕಾಗಿ ಈಗಾಗಲೇ ಧ್ವಜ, ಲಾಂಛನ, ಪಾಸ್ಪೋರ್ಟ್ಗಳನ್ನು ಸಹ ಸಿದ್ಧಪಡಿಸಿದ್ದು, ಈ ದೇಶಕ್ಕೆ ಕೈಲಾಸ ಎಂದು ಹೆಸರಿಟ್ಟಿದ್ದಾನೆ ಎಂದು ಆಂಗ್ಲ ಮಾಧ್ಯಮ ವರದಿ ಮಾಡಿತ್ತು.
ಚಿತ್ರ ಕೃಪೆ: ರಿಪಬ್ಲಿಕ್ ಟಿವಿ
ಈ ಹಿಮಪ್ರದೇಶವು ಟ್ರಿನಿಡಾಡ್ ಹಾಗೂ ಟೊಬಾಗೊ ಪ್ರದೇಶಕ್ಕೆ ಹತ್ತಿರವಾಗಿದೆ. ಆ ಪ್ರದೇಶವನ್ನು ಹಿಂದೂ ರಾಷ್ಟ್ರ ಎಂದು ಸ್ವಯಂ ಘೋಷಿತ ದೇವ ಮಾನವ ಕರೆದುಕೊಂಡಿದ್ದಾನೆ. ಪ್ರಧಾನಿ ಸೇರಿದಂತೆ ಸಚಿವ ಸಂಪುಟವನ್ನು ಸಹ ರಚಿಸಿದ್ದಾನೆ. ಅಲ್ಲದೆ ದೇಶಕ್ಕೆ ದೇಣಿಗೆ ನೀಡುವಂತೆ ಸಾರ್ವಜನಿಕ ಪ್ರಕಟಣೆಯನ್ನು ಸಹ ಹೊರಡಿಸಿದ್ದು, ಶ್ರೇಷ್ಠ ಹಿಂದೂ ರಾಷ್ಟ್ರ ಕೈಲಾಸದ ಪೌರತ್ವ ಪಡೆಯುವುದು ಒಂದು ಸದವಕಾಶ ಎಂದು ಹೇಳಿಕೊಂಡಿದ್ದ.
ಇದಕ್ಕಾಗಿ www.kailaasa.org ಹೆಸರಿನಲ್ಲಿ ಪ್ರತ್ಯೇಕ ವೆಬ್ ಸೈಟನ್ನು ಸಹ ತೆರೆಯಲಾಗಿದ್ದು, ಅದರಲ್ಲಿ ಕೈಲಾಸದ ಕುರಿತು ವಿವರಿಸಿದ್ದಾನೆ. ಕೈಲಾಸ ಒಂದು ರಾಜಕೀಯೇತರ ದೇಶವಾಗಿದ್ದು, ಎಲ್ಲ ಮಾನವರು ಪ್ರಬುದ್ಧರಾಗಿ ಬದುಕುವುದು ಇದರ ಗುರಿಯಾಗಿದೆ. ಅಧಿಕೃತ ಹಿಂದೂ ಧರ್ಮದ ಆಧಾರದ ಮೇಲೆ ಪ್ರಭುದ್ಧ ನಾಗರೀಕತೆ ಸಂರಕ್ಷಣೆ, ಪುನರುಜ್ಜೀವನ ನಡೆಸುವುದು ಕೈಲಾಸದ ಉದ್ದೇಶವಾಗಿದೆ ಎಂದು ವೆಬ್‍ಸೈಟ್‍ನಲ್ಲಿ ಬರೆದುಕೊಂಡಿದ್ದಾನೆ.
ಚಿತ್ರ ಕೃಪೆ: ರಿಪಬ್ಲಿಕ್ ಟಿವಿ
ಯುವತಿಯರಿಗೆ ಚಿತ್ರ ಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದನಿಗಾಗಿ ಗುಜರಾತ್ ಪೊಲೀಸರು ಶೋಧ ಕಾರ್ಯ ಪ್ರಾರಂಭಿಸಿದ್ದಾರೆ. ಬೆಂಗಳೂರಿನ ದಂಪತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ನಿತ್ಯಾನಂದನಿಗಾಗಿ ಶೋಧ ಕಾರ್ಯ ಪ್ರಾರಂಭಿಸಿದ್ದು, ನಿತ್ಯಾನಂದನ ಆಶ್ರಮದ ಅಹಮದಾಬಾದ್ ಶಾಖೆಯಲ್ಲಿದ್ದ ಹೆಣ್ಣುಮಕ್ಕಳನ್ನು ಹಿಂಸಿಸುತ್ತಿದ್ದ ಎಂದು ದಂಪತಿ ದೂರು ನೀಡಿದ್ದಾರೆ.
ಅಹ್ಮದಾಬಾದ್ ಜಿಲ್ಲೆಯ ಹಿರಾಪುರ ಗ್ರಾಮದಲ್ಲಿರುವ ಶಾಲೆಯೊಂದರ ಆವರಣದಲ್ಲಿ ನಿತ್ಯಾನಂದನ ಆಶ್ರಮವಿದೆ. ಅಲ್ಲದೆ ಬೆಂಗಳೂರಿನ ಬಿಡದಿಯಲ್ಲಿ ಧ್ಯಾನಪೀಠಂ ಎಂಬ ಹೆಸರಿನ ವಿಶಾಲವಾದ ಆಶ್ರಮವನ್ನು ಸಹ ನಡೆಸುತ್ತಿದ್ದಾರೆ. 5 ವರ್ಷಗಳ ಅವಧಿಯಲ್ಲಿ ಶಿಷ್ಯೆ ಮೇಲೆಯೇ ಅತ್ಯಾಚಾರ ಎಸಗಿರುವ ಎಂಬ ಪ್ರಕರಣದಲ್ಲಿ ಆರೋಪಿಯಾಗಿರುವ ನಿತ್ಯಾನಂದ ಒಂದು ವರ್ಷದಿಂದಲೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿಲ್ಲ.
ಸೆಪ್ಟೆಂಬರ್ 2018ರಲ್ಲಿ ನಿತ್ಯಾನಂದನ ಪಾಸ್‍ಪೋರ್ಟ್ ಅವಧಿ ಮುಗಿದ ಕಾರಣ ಅವರು ಅಕ್ರಮವಾಗಿ ದೇಶವನ್ನು ತೊರೆದಿರಬಹುದು ಎಂದು ಗುಜರಾತ್ ಪೊಲೀಸರು ಶಂಕಿಸಿದ್ದಾರೆ. ಸ್ವಯಂ ಘೋಷಿತ ದೇವ ಮಾನವನ ವಿರುದ್ಧ ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ಪಾಸ್‍ಪೋರ್ಟ್ ನವೀಕರಿಸುವ ಕುರಿತ ಅರ್ಜಿಯನ್ನು ತಿರಸ್ಕರಿಸಲಾಗಿದೆ.
ಫ್ರಾನ್ಸ್: ಎಮ್ಯಾನುಯೆಲ್ ಮ್ಯಾಕ್ರನ್ ನೇತೃತ್ವದ ಫ್ರೆಂಚ್ ಸರ್ಕಾರವು ಸ್ವಯಂ ಘೋಷಿತ ದೇವಮಾನವ, ಅತ್ಯಾಚಾರ ಆರೋಪಿ ನಿತ್ಯಾನಂದ ವಿರುದ್ಧ ತನಿಖೆ ಆರಂಭಿಸಿದೆ.
ಫ್ರೆಂಚ್ ಪ್ರಜೆ, ನಿತ್ಯಾನಂದನ ಮಾಜಿ ಭಕ್ತೆ ನೀಡಿದ ದೂರಿನ ಆಧಾರದ ಮೇಲೆ ತನಿಖೆಯನ್ನು ಪ್ರಾರಂಭಿಸಲಾಗಿದೆ. ನಿತ್ಯಾನಂದನ ತನಗೆ 285 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ಮಾಜಿ ಭಕ್ತೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಹೀಗಾಗಿ ಫ್ರಾನ್ಸ್‍ನ ಆಂತರಿಕ ಸಚಿವಾಲಯವು ನಿತ್ಯಾನಂದನ ವಿರುದ್ಧ ವಂಚನೆಯ ವಿವರಗಳನ್ನು ಸಂಗ್ರಹಿಸುತ್ತಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಹೊಸ ದೇಶವನ್ನೇ ಕಟ್ಟಿದ ನಿತ್ಯಾನಂದ – ಕ್ಯಾಬಿನೆಟ್ ರಚನೆ, ಪ್ರಧಾನಿ ಆಯ್ಕೆ
ತನಿಖೆಯ ಭಾಗವಾಗಿ, ಫ್ರೆಂಚ್ ಸರ್ಕಾರವು ನಿತ್ಯಾನಂದನ ಬ್ಯಾಂಕ್ ಖಾತೆಯ ವಿವರಗಳನ್ನು ಸಹ ಕೋರಿದೆ ಎಂದು ವರದಿಯಾಗಿದೆ. ಫ್ರಾನ್ಸ್ ಮೂಲದ ಅನೇಕ ಭಕ್ತರು ದೂರು ನೀಡಿದ ನಂತರ, ಎಮ್ಯಾನುಯೆಲ್ ಮ್ಯಾಕ್ರೋನ್ ಸರ್ಕಾರವು ಇಂಟರ್-ಪೋಲ್ ಅನ್ನು ತನಿಖೆ ಆರಂಭಿಸಿದೆ. ಹೊತೆಗೆ ನವದೆಹಲಿಯಲ್ಲಿರುವ ಫ್ರೆಂಚ್ ರಾಯಭಾರಿ ಕಚೇರಿಗೆ ದೂರಿನ ವಿವರಣೆ ನೀಡಲಾಗಿದೆ. ಈ ಮೂಲಕ ಮಾಹಿತಿ ಸಂಗ್ರಹಿಸಲು ಫ್ರಾನ್ಸ್ ಸರ್ಕಾರದೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ನಿತ್ಯಾನಂದನ ಜೊತೆಗಿರುವ ಫೋಟೋ ನಕಲಿ – ಚಿನ್ಮಯಿ ಶ್ರೀಪಾದ ಸ್ಪಷ್ಟನೆ
ಸ್ವಯಂ ಘೋಷಿತ ದೇವ ಮಾನವ, ಅತ್ಯಾಚಾರ ಆರೋಪಿ ನಿತ್ಯಾನಂದ ಹಲವು ಆಶ್ರಮಗಳ ನಂತರ ಇದೀಗ ತನ್ನದೇ ದೇಶವನ್ನು ಕಟ್ಟಲು ಹೊರಟಿದ್ದಾನೆ. ಈಕ್ವೆಡಾರ್ ನಲ್ಲಿ ಖಾಸಗಿ ಹಿಮಪ್ರದೇಶವನ್ನು ಖರೀದಿಸಿದ್ದು, ಇದು ತನ್ನ ದೇಶ ಎಂಬಂತೆ ಬಿಂಬಿಸುತ್ತಿದ್ದಾನೆ. ಅಲ್ಲದೆ ಇದಕ್ಕಾಗಿ ಈಗಾಗಲೇ ಧ್ವಜ, ಲಾಂಛನ, ಪಾಸ್ಪೋರ್ಟ್ಗಳನ್ನು ಸಹ ಸಿದ್ಧಪಡಿಸಿದ್ದು, ಈ ದೇಶಕ್ಕೆ ಕೈಲಾಸ ಎಂದು ಹೆಸರಿಟ್ಟಿದ್ದಾನೆ.
ಈ ಹಿಮಪ್ರದೇಶವು ಟ್ರಿನಿಡಾಡ್ ಹಾಗೂ ಟೊಬಾಗೊ ಪ್ರದೇಶಕ್ಕೆ ಹತ್ತಿರವಾಗಿದೆ. ಆ ಪ್ರದೇಶವನ್ನು ಹಿಂದೂ ರಾಷ್ಟ್ರ ಎಂದು ಸ್ವಯಂ ಘೋಷಿತ ದೇವ ಮಾನವ ಕರೆದುಕೊಂಡಿದ್ದಾನೆ. ಪ್ರಧಾನಿ ಸೇರಿದಂತೆ ಸಚಿವ ಸಂಪುಟವನ್ನು ಸಹ ರಚಿಸಿದ್ದಾನೆ. ಅಲ್ಲದೆ ದೇಶಕ್ಕೆ ದೇಣಿಗೆ ನೀಡುವಂತೆ ಸಾರ್ವಜನಿಕ ಪ್ರಕಟಣೆಯನ್ನು ಸಹ ಹೊರಡಿಸಿದ್ದು, ಶ್ರೇಷ್ಠ ಹಿಂದೂ ರಾಷ್ಟ್ರ ಕೈಲಾಸದ ಪೌರತ್ವ ಪಡೆಯುವುದು ಒಂದು ಸದವಕಾಶ ಎಂದು ಹೇಳಿದ್ದ.
ಬೆಂಗಳೂರು: ಸ್ವಯಂಘೋಷಿತ ದೇವ ಮಾನವ, ಅತ್ಯಾಚಾರ ಆರೋಪಿ ನಿತ್ಯಾನಂದ ಈಕ್ವೆಡಾರ್ ನಲ್ಲಿ ತನ್ನದೇ ಆದ ದೇಶವನ್ನು ಕಟ್ಟಿದ್ದಾನೆ ಎಂಬ ಸುದ್ದಿ ಸಾಕಷ್ಟು ಟ್ರೋಲ್ ಆಗುತ್ತಿದ್ದು, ಇದೀಗ ಭಾರತ ತಂಡದ ಬೌಲರ್ ರವಿಚಂದ್ರನ್ ಅಶ್ವಿನ್ ಸಹ ಈ ಕುರಿತು ಟ್ವಿಟ್ಟರ್ ನಲ್ಲಿ ಟ್ರೋಲ್ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಆರ್.ಅಶ್ವಿನ್, ಆ ಸ್ಥಳದ ವೀಸಾ ಪಡೆಯಲು ಯಾವ ರೀತಿಯ ವಿಧಾನವಿದೆ? ಅಥವಾ ಇನ್ನೂ ಬರುವುದರಲ್ಲಿದೆಯೇ ಎಂದು ಪ್ರಶ್ನಿಸಿದ್ದಾರೆ.
What is the procedure to get visa?? Or is it on arrival? 🤷🏼♂️ #Kailaasa
ಅತ್ಯಾಚಾರ ಹಾಗೂ ಮಕ್ಕಳನ್ನು ಅಪಹರಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ನಿತ್ಯಾನಂದನನ್ನು ಗುಜರಾತ್ ಪೊಲೀಸರು ಹುಡುಕುತ್ತಿದ್ದಾರೆ. ಮಕ್ಕಳನ್ನು ದೇಣಿಗೆ ಸಂಗ್ರಹಿಸಲು ಬಳಸಿಕೊಳ್ಳುತ್ತಿದ್ದಾನೆ ಎಂಬ ಆರೋಪ ಸಹ ನಿತ್ಯಾನಂದನ ವಿರುದ್ಧ ಕೇಳಿಬರುತ್ತಿದೆ. ಇದೆಲ್ಲದರ ಮಧ್ಯೆ ನಿತ್ಯಾನಂದ ಭಾರತದಿಂದ ಪರಾರಿಯಾಗಿ ಈಕ್ವೇಡಾರ್‍ನಲ್ಲಿ ಹೊಸದೊಂದು ದೇಶವನ್ನೇ ಕಟ್ಟಿದ್ದಾನೆ ಎಂಬ ಮಾಹಿತಿ ಬಹಿರಂಗವಾಗಿದೆ.
ನಿತ್ಯಾನಂದ ಹಲವು ಆಶ್ರಮಗಳ ನಂತರ ಇದೀಗ ತನ್ನದೇ ದೇಶವನ್ನು ಕಟ್ಟಲು ಹೊರಟಿದ್ದಾನೆ. ಈಕ್ವೆಡಾರ್ ನಲ್ಲಿ ಖಾಸಗಿ ಹಿಮಪ್ರದೇಶವನ್ನು ಖರೀದಿಸಿದ್ದು, ಇದು ತನ್ನ ದೇಶ ಎಂಬಂತೆ ಬಿಂಬಿಸುತ್ತಿದ್ದಾನೆ. ಅಲ್ಲದೆ ಇದಕ್ಕಾಗಿ ಈಗಾಗಲೇ ಧ್ವಜ, ಲಾಂಛನ, ಪಾಸ್ಪೋರ್ಟ್ಗಳನ್ನು ಸಹ ಸಿದ್ಧಪಡಿಸಿದ್ದು, ಈ ದೇಶಕ್ಕೆ ಕೈಲಾಸ ಎಂದು ಹೆಸರಿಟ್ಟಿದ್ದಾನೆ ಎಂದು ಆಂಗ್ಲ ಮಾಧ್ಯಮ ವರದಿ ಮಾಡಿದೆ. ಇದನ್ನೂ ಓದಿ: ಹೊಸ ದೇಶವನ್ನೇ ಕಟ್ಟಿದ ನಿತ್ಯಾನಂದ – ಕ್ಯಾಬಿನೆಟ್ ರಚನೆ, ಪ್ರಧಾನಿ ಆಯ್ಕೆ
ಈ ಹಿಮಪ್ರದೇಶವು ಟ್ರಿನಿಡಾಡ್ ಹಾಗೂ ಟೊಬಾಗೊ ಪ್ರದೇಶಕ್ಕೆ ಹತ್ತಿರವಾಗಿದೆ. ಆ ಪ್ರದೇಶವನ್ನು ಹಿಂದೂ ರಾಷ್ಟ್ರ ಎಂದು ಸ್ವಯಂ ಘೋಷಿತ ದೇವ ಮಾನವ ಕರೆದುಕೊಂಡಿದ್ದಾನೆ. ಪ್ರಧಾನಿ ಸೇರಿದಂತೆ ಸಚಿವ ಸಂಪುಟವನ್ನು ಸಹ ರಚಿಸಿದ್ದಾನೆ. ಅಲ್ಲದೆ ದೇಶಕ್ಕೆ ದೇಣಿಗೆ ನೀಡುವಂತೆ ಸಾರ್ವಜನಿಕ ಪ್ರಕಟಣೆಯನ್ನು ಸಹ ಹೊರಡಿಸಿದ್ದು, ಶ್ರೇಷ್ಠ ಹಿಂದೂ ರಾಷ್ಟ್ರ ಕೈಲಾಸದ ಪೌರತ್ವ ಪಡೆಯುವುದು ಒಂದು ಸದವಕಾಶ ಎಂದು ಹೇಳಿದ್ದಾನೆ. ಇದನ್ನೂ ಓದಿ: ಪಾಸ್‍ಪೋರ್ಟ್ ನವೀಕರಿಸದಿದ್ದರೂ ನಿತ್ಯಾನಂದ ಈಕ್ವೇಡಾರ್‌ಗೆ ಪರಾರಿ?
ಚಿತ್ರ ಕೃಪೆ: ರಿಪಬ್ಲಿಕ್ ಟಿವಿ
ಇದಕ್ಕಾಗಿ www.kailaasa.org ಹೆಸರಿನಲ್ಲಿ ಪ್ರತ್ಯೇಕ ವೆಬ್ ಸೈಟನ್ನು ಸಹ ತೆರೆಯಲಾಗಿದ್ದು, ಅದರಲ್ಲಿ ಕೈಲಾಸದ ಕುರಿತು ವಿವರಿಸಿದ್ದಾನೆ. ಕೈಲಾಸ ಒಂದು ರಾಜಕೀಯೇತರ ದೇಶವಾಗಿದ್ದು, ಎಲ್ಲ ಮಾನವರು ಪ್ರಬುದ್ಧರಾಗಿ ಬದುಕುವುದು ಇದರ ಗುರಿಯಾಗಿದೆ. ಅಧಿಕೃತ ಹಿಂದೂ ಧರ್ಮದ ಆಧಾರದ ಮೇಲೆ ಪ್ರಭುದ್ಧ ನಾಗರೀಕತೆ ಸಂರಕ್ಷಣೆ, ಪುನರುಜ್ಜೀವನ ನಡೆಸುವುದು ಕೈಲಾಸದ ಉದ್ದೇಶವಾಗಿದೆ ಎಂದು ವೆಬ್‍ಸೈಟ್‍ನಲ್ಲಿ ಬರೆದುಕೊಂಡಿದ್ದಾನೆ.
ರಾಮನಗರ: ಬಿಡದಿ ಧ್ಯಾನಪೀಠದ ವಿವಾದಿತ ನಿತ್ಯಾನಂದ ಈಗಾಗಲೇ ದೇಶ ಬಿಟ್ಟು ಪರಾರಿಯಾಗಿದ್ರೆ, ಇತ್ತ ಬಿಡದಿ ಆಶ್ರಮದಲ್ಲಿ ಎಲ್ಲವೂ ಖಾಲಿ ಖಾಲಿಯಾಗಿದೆ. ಕೆಲವೇ ಕೆಲವು ಮಂದಿ ಶಿಷ್ಯರು ಮಾತ್ರ ಆಶ್ರಮದಲ್ಲಿದ್ದಾರೆ. ಆದರೆ ಬಿಡದಿಯ ಆಶ್ರಮಕ್ಕೆ ಇದೀಗ ತನ್ನ ಶಿಷ್ಯರಿಂದಲೇ ಫುಲ್ ಟೈಟ್ ಸೆಕ್ಯೂರಿಟಿಯನ್ನ ನಿತ್ಯಾನಂದ ಮಾಡಿಕೊಂಡಿದ್ದಾನೆ.
ಆಶ್ರಮದ ಸುತ್ತಲೂ ಇದ್ದ 5 ಅಡಿಯ ಕಾಂಪೌಂಡ್ ಗೋಡೆಯನ್ನ ಇದೀಗ 12 ಅಡಿ ಎತ್ತರಕ್ಕೆ ಏರಿಸಿದ್ದಾನೆ. ನಿತ್ಯಾನಂದನ ಅಶ್ರಮದ ಒಳಭಾಗದಲ್ಲಿ ನಡೆಯುವ ಯಾವುದೇ ಚಟುವಟಿಕೆಗಳೂ ಹೊರ ಜಗತ್ತಿಗೆ ಕಾಣದಂತೆ ಮಾಡಲು ಇದೀಗ ಕಾಂಪೌಂಡ್ ಎತ್ತರಿಸಲಾಗಿದೆ. ಇದನ್ನೂ ಓದಿ: ಹೊಸ ದೇಶವನ್ನೇ ಕಟ್ಟಿದ ನಿತ್ಯಾನಂದ – ಕ್ಯಾಬಿನೆಟ್ ರಚನೆ, ಪ್ರಧಾನಿ ಆಯ್ಕೆ
ಆಶ್ರಮದ ಒಳಗೆ ಹೊಸ ಹೊಸ ಕಟ್ಟಡಗಳ ಕಾಮಗಾರಿ ನಡೆಯುವುದರ ಜೊತೆಗೆ ನಿತ್ಯಾನಂದನ ಪ್ರತಿಮೆಗಳನ್ನು ಸಹ ಮಾಡಲಾಗುತ್ತಿದೆ. ಅಲ್ಲದೆ ಆಶ್ರಮದ ಸುತ್ತಲೂ ಇರುವ ನಾಲ್ಕು ಗೇಟ್‍ಗಳಿಗೂ ಸಹ ತನ್ನ ಶಿಷ್ಯರನ್ನೇ ಸೆಕ್ಯೂರಿಟಿಗಳಾಗಿ ಮಾಡಿಕೊಳ್ಳಲಾಗಿದೆ. ಹೀಗಾಗಿ ಯಾರೇ ಬಂದರೂ ಸಹ ಆಶ್ರಮದ ಒಳಗೆ ಪ್ರವೇಶಿಸದಂತೆ ಈ ರೀತಿ ಮಾಡಿದ್ದಾನೆ.
ಈಗಾಗಲೇ ಗುಜರಾತ್ ಆಶ್ರಮದಿಂದ ಹೊರಬಿದ್ದಿರುವ ನಿತ್ಯಾನಂದನ ಶಿಷ್ಯರು ಹಾಗೂ ಗುರುಕುಲದಲ್ಲಿದ್ದ ಮಕ್ಕಳು ಗುರುವಾರ ಬೆಳಗ್ಗೆ ಇಲ್ಲವೇ ಸಂಜೆಯ ವೇಳೆಗೆ ಬಿಡದಿ ಆಶ್ರಮಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪಾಸ್‍ಪೋರ್ಟ್ ನವೀಕರಿಸದಿದ್ದರೂ ನಿತ್ಯಾನಂದ ಈಕ್ವೇಡಾರ್‌ಗೆ ಪರಾರಿ?
ಬೆಂಗಳೂರು: ಸ್ವಯಂ ಘೋಷಿತ ದೇವ ಮಾನವ, ಅತ್ಯಾಚಾರ ಆರೋಪಿ ನಿತ್ಯಾನಂದ ಹಲವು ಆಶ್ರಮಗಳ ನಂತರ ಇದೀಗ ತನ್ನದೇ ದೇಶವನ್ನು ಕಟ್ಟಲು ಹೊರಟಿದ್ದಾನೆ.
ಈಕ್ವೆಡಾರ್ ನಲ್ಲಿ ಖಾಸಗಿ ಹಿಮಪ್ರದೇಶವನ್ನು ಖರೀದಿಸಿದ್ದು, ಇದು ತನ್ನ ದೇಶ ಎಂಬಂತೆ ಬಿಂಬಿಸುತ್ತಿದ್ದಾನೆ. ಅಲ್ಲದೆ ಇದಕ್ಕಾಗಿ ಈಗಾಗಲೇ ಧ್ವಜ, ಲಾಂಛನ, ಪಾಸ್ಪೋರ್ಟ್ಗಳನ್ನು ಸಹ ಸಿದ್ಧಪಡಿಸಿದ್ದು, ಈ ದೇಶಕ್ಕೆ ಕೈಲಾಸ ಎಂದು ಹೆಸರಿಟ್ಟಿದ್ದಾನೆ ಎಂದು ಆಂಗ್ಲ ಮಾಧ್ಯಮ ವರದಿ ಮಾಡಿದೆ.
ಈ ಹಿಮಪ್ರದೇಶವು ಟ್ರಿನಿಡಾಡ್ ಹಾಗೂ ಟೊಬಾಗೊ ಪ್ರದೇಶಕ್ಕೆ ಹತ್ತಿರವಾಗಿದೆ. ಆ ಪ್ರದೇಶವನ್ನು ಹಿಂದೂ ರಾಷ್ಟ್ರ ಎಂದು ಸ್ವಯಂ ಘೋಷಿತ ದೇವ ಮಾನವ ಕರೆದುಕೊಂಡಿದ್ದಾನೆ. ಪ್ರಧಾನಿ ಸೇರಿದಂತೆ ಸಚಿವ ಸಂಪುಟವನ್ನು ಸಹ ರಚಿಸಿದ್ದಾನೆ. ಅಲ್ಲದೆ ದೇಶಕ್ಕೆ ದೇಣಿಗೆ ನೀಡುವಂತೆ ಸಾರ್ವಜನಿಕ ಪ್ರಕಟಣೆಯನ್ನು ಸಹ ಹೊರಡಿಸಿದ್ದು, ಶ್ರೇಷ್ಠ ಹಿಂದೂ ರಾಷ್ಟ್ರ ಕೈಲಾಸದ ಪೌರತ್ವ ಪಡೆಯುವುದು ಒಂದು ಸದವಕಾಶ ಎಂದು ಹೇಳಿದ್ದಾನೆ.
ಚಿತ್ರ ಕೃಪೆ: ರಿಪಬ್ಲಿಕ್ ಟಿವಿ
ಇದಕ್ಕಾಗಿ www.kailaasa.org ಹೆಸರಿನಲ್ಲಿ ಪ್ರತ್ಯೇಕ ವೆಬ್ ಸೈಟನ್ನು ಸಹ ತೆರೆಯಲಾಗಿದ್ದು, ಅದರಲ್ಲಿ ಕೈಲಾಸದ ಕುರಿತು ವಿವರಿಸಿದ್ದಾನೆ. ಕೈಲಾಸ ಒಂದು ರಾಜಕೀಯೇತರ ದೇಶವಾಗಿದ್ದು, ಎಲ್ಲ ಮಾನವರು ಪ್ರಬುದ್ಧರಾಗಿ ಬದುಕುವುದು ಇದರ ಗುರಿಯಾಗಿದೆ. ಅಧಿಕೃತ ಹಿಂದೂ ಧರ್ಮದ ಆಧಾರದ ಮೇಲೆ ಪ್ರಭುದ್ಧ ನಾಗರೀಕತೆ ಸಂರಕ್ಷಣೆ, ಪುನರುಜ್ಜೀವನ ನಡೆಸುವುದು ಕೈಲಾಸದ ಉದ್ದೇಶವಾಗಿದೆ ಎಂದು ವೆಬ್‍ಸೈಟ್‍ನಲ್ಲಿ ಬರೆದುಕೊಂಡಿದ್ದಾನೆ.
ಹಿಂದೆ ಅಫ್ಘಾನಿಸ್ಥಾನ, ಭಾರತ, ನೇಪಾಳ, ಬರ್ಮಾ, ಶ್ರೀಲಂಕಾ, ಸಿಂಗಪೂರ್, ಮಲೇಶಿಯಾ, ಕಾಂಬೋಡಿಯಾ ಹಾಗೂ ಇಂಡೋನೇಷಿಯಾ ಸೇರಿದಂತೆ 56 ದೇಶಗಳು ಮುಕ್ತವಾಗಿದ್ದವು. ಆದರೆ ಇದೀಗ ಸಹಸ್ರಮಾನದಿಂದಾಗಿ ಅಳಿವಿನಂಚಿನಲ್ಲಿವೆ ಎಂದು ಹೇಳಿದ್ದಾನೆ.
ಕೈಲಾಸದ ಪಾಸ್‍ಪೋರ್ಟಿನ ಎರಡು ಮಾದರಿಗಳು ಅಂತಿಮವಾಗಿದ್ದು, ಒಂದು ಬಂಗಾರದ ಬಣ್ಣದ್ದಾಗಿದ್ದರೆ, ಇನ್ನೊಂದು ಕೆಂಪು ಬಣ್ಣದ್ದಾಗಿದೆ. ದೇಶದ ಧ್ವಜವು ಮೆರೂನ್ ಬಣ್ಣದ್ದಾಗಿದೆ. ಇದರಲ್ಲಿ ಎರಡು ಲಾಂಚನಗಳಿದ್ದು, ಒಂದು ನಿತ್ಯಾನಂದ ಹಾಗೂ ಇನ್ನೊಂದು ನಂದಿಯ ಚಿತ್ರವಾಗಿದೆ. ನಿತ್ಯಾನಂದ ಸಚಿವ ಸಂಪುಟವನ್ನು ಸಹ ರಚಿಸಿದ್ದು, ಮಾ ಎಂಬ ಹೆಸರಿನವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದಾನೆ. ಅಲ್ಲದೆ ಈ ದೇಶದಲ್ಲಿ ನಿತ್ಯಾನಂದ ಪ್ರತಿ ದಿನ ಸಚಿವ ಸಂಪುಟ ಸಭೆ ನಡೆಸುತ್ತಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಚಿತ್ರ ಕೃಪೆ: ರಿಪಬ್ಲಿಕ್ ಟಿವಿ
ಕೈಲಾಸ ದೇಶದಲ್ಲಿ ಯಾವುದೇ ನಿರ್ಬಂಧಗಳಿಲ್ಲ. ವಿಶ್ವದ ಯಾವುದೇ ಮೂಲೆಗಳಿಂದ ಹಿಂದೂಗಳು ಈ ದೇಶಕ್ಕೆ ಬರಬಹುದಾಗಿದೆ. ಕೈಲಾಸದ ಸರ್ಕಾರದಲ್ಲಿ 10 ಇಲಾಖೆಗಳಿದ್ದು, ಒಂದು ಈತನ ಕಚೇರಿ ಭಗವಾನ್ ಶ್ರೀ ನಿತ್ಯಾನಂದ ಪರಮಶಿವಂ, ಸರ್ಕಾರದ ಅಂತರಾಷ್ಟ್ರೀಯ ಸಂಬಂಧ, ಡಿಜಿಟಲ್ ಕಾರ್ಯಕ್ರಮಗಳು ಹಾಗೂ ಸಾಮಾಜಿಕ ಜಾಲತಾಣ ಪ್ರಮುಖವಾದವುಗಳು. ಉಳಿದಂತೆ ಗೃಹ, ರಕ್ಷಣೆ, ವಾಣಿಜ್ಯ ಹಾಗೂ ಶಿಕ್ಷಣ ಸೇರಿದಂತೆ ವಿವಿಧ ಬಗೆಯ ಇಲಾಖೆಗಳನ್ನು ರಚಿಸಿಕೊಂಡಿದ್ದಾನೆ.
ಕೈಲಾಸದ ಕಾನೂನು ತಂಡ ಈ ಜಾಗವನ್ನು ಪ್ರತ್ಯೇಕ ರಾಷ್ಟ್ರವನ್ನಾಗಿ ಘೋಷಣೆ ಮಾಡಲು ವಿಶ್ವಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಲಿದೆ. ಈ ಅರ್ಜಿಯಲ್ಲಿ ಭಾರತದಲ್ಲಿ ನನಗೆ ಬೆದರಿಕೆ ಇದೆ. ಹೀಗಾಗಿ ಇಲ್ಲಿ ನೆಲೆಸಲು ಅವಕಾಶ ನೀಡುವಂತೆ ಕೇಳಿಕೊಳ್ಳಲಾಗಿದೆ. ಇದನ್ನೂ ಓದಿ: ಪಾಸ್‍ಪೋರ್ಟ್ ನವೀಕರಿಸದಿದ್ದರೂ ನಿತ್ಯಾನಂದ ಈಕ್ವೇಡಾರ್‌ಗೆ ಪರಾರಿ?
ಚಿತ್ರ ಕೃಪೆ: ರಿಪಬ್ಲಿಕ್ ಟಿವಿ
ಭಾರತ ತೊರೆದಿದ್ದು ಹೇಗೆ?
ಪಾಸ್‍ಪೋರ್ಟ್ ಅವಧಿ ಮುಕ್ತಾಯಗೊಂಡಿದ್ದರೂ ಭಾರತ ತೊರೆದಿದ್ದಿ ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ನೇಪಾಳ ಮೂಲಕ ನಕಲಿ ವೆನೆಜುವೆಲಾ ಪಾಸ್‍ಪೋರ್ಟ್ ಪಡೆದು ಭಾರತವನ್ನು ತೊರೆದಿದ್ದಾನೆ ಎಂದು ವರದಿ ಮಾಡಿದೆ.
ರಾಮನಗರ: ಗುಜರಾತಿನ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬಿಡದಿಯ ವಿವಾದಿತ ದೇವಮಾನವ ನಿತ್ಯಾನಂದನ ಶಿಷ್ಯರು ಇದೀಗ ಗಂಟು ಮೂಟೆ ಸಮೇತ ಅಹಮದಾಬಾದ್ ಆಶ್ರಮದಿಂದ ಜಾಗ ಖಾಲಿ ಮಾಡಿದ್ದಾರೆ.
ಗುಜರಾತ್ ಆಶ್ರಮದಲ್ಲಿದ್ದ ಎಲ್ಲಾ ಭಕ್ತರು, ಮಕ್ಕಳು ಇಂದು ಬೆಳಗ್ಗೆ ಆಶ್ರಮ ತೊರೆದಿದ್ದಾರೆ. ತಮ್ಮ ಸಾಮಾಗ್ರಿಗಳ ಸಮೇತ ಬಸ್ ಹತ್ತಿದ್ದು ರಾಮನಗರ ಜಿಲ್ಲೆಯ ಬಿಡದಿಯಲ್ಲಿನ ನಿತ್ಯಾನಂದ ಧ್ಯಾನಪೀಠದತ್ತ ಮುಖ ಮಾಡಿದ್ದಾರೆ.
ಎರಡು ತಿಂಗಳ ಹಿಂದೆಯೇ ಬಿಡದಿ ಆಶ್ರಮದಲ್ಲಿದ್ದ ನಿತ್ಯಾನಂದನ ಶಿಷ್ಯರು ಹಾಗೂ ಮಕ್ಕಳನ್ನು ಬಿಡದಿಯಿಂದ ಆಂಧ್ರ, ತಮಿಳುನಾಡು, ಗುಜರಾತಿಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲದೇ ನಿತ್ಯಾನಂದ ತನ್ನ ಬಿಡದಿ ಆಶ್ರಮವನ್ನ ಖಾಲಿ ಮಾಡುತ್ತಾನೆ ಎನ್ನಲಾಗಿತ್ತು. ಆದರೆ ಇದೀಗ ಮತ್ತೆ ಬಿಡದಿ ಆಶ್ರಮಕ್ಕೆ ನಿತ್ಯಾನಂದನ ಶಿಷ್ಯರು ಹಾಗೂ ಮಕ್ಕಳು ಕಾಲಿಡುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪಾಸ್‍ಪೋರ್ಟ್ ನವೀಕರಿಸದಿದ್ದರೂ ನಿತ್ಯಾನಂದ ಈಕ್ವೇಡಾರ್‌ಗೆ ಪರಾರಿ?
ಬಿಡದಿಯ ನಿತ್ಯಾನಂದ ಧ್ಯಾನಪೀಠ ಶಿಷ್ಯರಿಗೆ ಹಲವಾರು ವರ್ಷಗಳಿಂದ ಸೇಫ್ ಪ್ಲೇಸ್ ಆಗಿದೆ. ಯಾವುದೇ ಅಧಿಕಾರಿಗಳು ಬಂದರು ಸಹ ಸರ್ಚ್ ವಾರೆಂಟ್ ಇಲ್ಲದೇ ಒಳಗೆ ಬಿಟ್ಟುಕೊಳ್ಳುವುದಿಲ್ಲ. ಹೀಗಾಗಿ ಬಿಡದಿಯತ್ತ ನಿತ್ಯಾನಂದನ ಶಿಷ್ಯರು ಮುಖ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಅಹಮದಾಬಾದ್‍ನ ಆಶ್ರಮದ ಜಾಗವನ್ನ ಶಾಲೆ ನಡೆಸುವುದಾಗಿ ಪಡೆದು ಆ ಸ್ಥಳದಲ್ಲಿ ಆಶ್ರಮ ನಡೆಸಲಾಗುತ್ತಿತ್ತು. ಇದರ ಜೊತೆಗೆ ಇತ್ತೀಚೆಗೆ ನಿತ್ಯಾನಂದನ ಮಾಜಿ ಶಿಷ್ಯ ಚೆನ್ನೈ ಮೂಲದ ಜನಾರ್ದನ ಶರ್ಮ ತನ್ನ ನಾಲ್ವರು ಮಕ್ಕಳ ವಿಚಾರವಾಗಿ ಅಹಮದಾಬಾದ್ ಪೊಲೀಸರಿಗೆ ದೂರು ನೀಡಿದ್ದರು. ಮಕ್ಕಳನ್ನ ಆಶ್ರಮದಲ್ಲಿ ಬಂಧಿಸಿಟ್ಟುಕೊಂಡು ಹಿಂಸೆ ನೀಡುತ್ತಿದ್ದಾರೆ. ತನ್ನ ಮಕ್ಕಳನ್ನು ನೋಡಲು ಕೂಡ ಬಿಡುತ್ತಿಲ್ಲ ಎಂದು ದೂರು ನೀಡಿದ್ದರು. ಈ ವಿಚಾರವಾಗಿ ಗುಜರಾತ್ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಆಶ್ರಮದ ಮೇಲೆ ದಾಳಿ ಮಾಡಿದ್ದರು. ಅಲ್ಲದೇ ನಿತ್ಯಾನಂದನ ನಾಲ್ವರು ಶಿಷ್ಯರನ್ನು ಕೂಡ ಬಂಧಿಸಿದ್ದಾರೆ.
ಜನಾರ್ದನ ಶರ್ಮ ಅಲ್ಲದೇ ನಾಲ್ವರು ಗುಜರಾತ್ ಹೈಕೋರ್ಟಿನಲ್ಲಿ ಹೇಬಿಯಸ್ ಕಾರ್ಪಸ್ ಕೂಡಾ ಸಲ್ಲಿಸಿದ್ದಾರೆ. ಈ ಎಲ್ಲ ಕಾರಣಗಳಿಂದ ಗುಜರಾತ್ ಹೈಕೋರ್ಟ್ ಆಶ್ರಮ ಜಾಗವನ್ನು ಖಾಲಿ ಮಾಡುವಂತೆ ಸೂಚಿಸಿತ್ತು. ಹಾಗಾಗಿ ಇಂದು ಬೆಳಿಗ್ಗೆ ಆಶ್ರಮದಲ್ಲಿದ್ದ ನಿತ್ಯಾನಂದನ ಶಿಷ್ಯರು ಗುರುಕುಲದಲ್ಲಿದ್ದ ಮಕ್ಕಳು ಎಲ್ಲರೂ ಬ್ಯಾಗ್ ಮತ್ತು ಸಾಮಾನು ಸರಂಜಾಮುಗಳೊಂದಿಗೆ ಆಶ್ರಮವನ್ನ ತೊರೆದು ಹೊರಟಿದ್ದಾರೆ.
ಚೆನ್ನೈ: ತಮಿಳು ಗಾಯಕಿ ಚಿನ್ಮಯಿ ಶ್ರೀಪಾದ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಇದೀಗ ನಿತ್ಯಾನಂದನ ಜೊತೆಗಿರುವ ಫೋಟೋ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಚಿನ್ಮಯಿ ಹಾಗೂ ಅವರ ತಾಯಿ ನಿತ್ಯಾನಂದನಿಂದ ಹೂ ಪಡೆಯುತ್ತಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ನೋಡಿ ಅಭಿಮಾನಿ ಚಿನ್ಮಯಿ ಅವರಲ್ಲಿ ನೀವು ನಿತ್ಯಾನಂದನ ಭಕ್ತರೇ ಎಂದು ಕೇಳಿದ್ದಾರೆ.
I dont why these fans are doing this all over again after I have established that this photo is fake.
ಅಭಿಮಾನಿಗಳ ಪ್ರಶ್ನೆಗೆ ಚಿನ್ಮಯಿ ಅವರು ನೈಜ ಹಾಗೂ ನಕಲಿ ಚಿತ್ರ ಎರಡೂ ಫೋಟೋಗಳನ್ನು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ನೈಜ ಚಿತ್ರದಲ್ಲಿ ಚಿನ್ಮಯಿ ಮತ್ತು ತಾಯಿ ದೇವಾಲಯ ಅರ್ಚಕರಿಂದ ಪ್ರಸಾದ ಪಡೆಯುತ್ತಿದ್ದರೆ, ಕಿಡಿಗೇಡಿಗಳು ಈ ಚಿತ್ರವನ್ನು ಎಡಿಟ್ ಮಾಡಿ ನಿತ್ಯಾನಂದನನ್ನು ಸೇರಿಸಿದ್ದಾರೆ. ಇದರಲ್ಲಿ ಹೂವು ನೀಡುತ್ತಿರುವ ಅರ್ಚಕರ ಜಾಗಕ್ಕೆ ನಿತ್ಯಾನಂದನ ಫೋಟೋ ಹಾಕಲಾಗಿದೆ.
ಇದು ನಕಲಿ ಫೋಟೋ ಎಂದು ಹಲವು ಬಾರಿ ಹೇಳಿದರೂ ಅಭಿಮಾನಿಗಳು ಯಾಕೆ ಪದೇ ಪದೆ ಈ ಫೋಟೋವನ್ನು ಹರಿಬಿಡುತ್ತಿದ್ದಾರೆ ತಿಳಿಯುತ್ತಿಲ್ಲ. ಇದನ್ನು ಸುಮ್ಮನೆ ಮಾಡುತ್ತಿದ್ದಿರೋ ಅಥವಾ ಯಾರಾದರೂ ಹಣ ಕೊಟ್ಟು ಮಾಡಿಸುತ್ತಿದ್ದಾರೋ ಎಂದು ಪ್ರಶ್ನಿಸಿದ್ದಾರೆ.
ಈ ಫೋಟೋ ಟ್ವೀಟ್ ಮಾಡಿದ ವ್ಯಕ್ತಿಯ ಟ್ವಿಟ್ಟರ್ ಖಾತೆಯ ಲಿಂಕನ್ನು ಚಿನ್ಮಯಿ ತಮ್ಮ ಟ್ವೀಟಿನಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಆ ಖಾತೆಯಿಂದ ಇದೀಗ ಪೋಸ್ಟ್ ಡಿಲೀಟ್ ಆಗಿದ್ದು ಈ ಕುರಿತು ಹಲವರು ಕಮೆಂಟ್ ಮಾಡುತ್ತಿದ್ದಾರೆ. ಇದಕ್ಕೆ ಉತ್ತರಿಸಿರುವ ಚಿನ್ಮಯಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿ ಎಂದು ಸಲಹೆ ನೀಡಿದ್ದಾರೆ.
ತಮಿಳಿನ ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ ಅವರು ಕನ್ನಡದಲ್ಲಿಯೂ ಹಲವು ಹಾಡುಗಳನ್ನು ಹಾಡಿದ್ದಾರೆ. ಇತ್ತೀಚೆಗೆ ಗಾಯಕ ರಘು ದೀಕ್ಷಿತ್ ಹಾಗೂ ತಮಿಳು ಸಾಹಿತಿ ವೈರಮುತ್ತು ವಿರುದ್ಧ ಮೀಟೂ ಆರೋಪ ಮಾಡಿ ಸುದ್ದಿಯಾಗಿದ್ದರು.