Tag: nithyananda olakadu

  • ಉಡುಪಿ ಪೇಟೆಯಲ್ಲಿ ಓಮಿಕ್ರಾನ್ ಓಡಾಟ – ಜನಜಾಗೃತಿ ಮೂಡಿಸಿದ ಪಬ್ಲಿಕ್ ಹೀರೋ

    ಉಡುಪಿ ಪೇಟೆಯಲ್ಲಿ ಓಮಿಕ್ರಾನ್ ಓಡಾಟ – ಜನಜಾಗೃತಿ ಮೂಡಿಸಿದ ಪಬ್ಲಿಕ್ ಹೀರೋ

    ಉಡುಪಿ: ಕೊರೊನಾ ಸಾಂಕ್ರಾಮಿಕ ತಡೆಗಟ್ಟಲು ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿಮಾಡಿದೆ. ಸಬೂಬುಗಳನ್ನು ಹೇಳಿ ಜನ ಓಡಾಡುವ ಸಂಖ್ಯೆ ಜಾಸ್ತಿ ಇದೆ. ಕೆಲವರು ಮಾಸ್ಕ್ ಧರಿಸದೆ ಓಡಾಡುತ್ತಿದ್ದಾರೆ. ಜನಜಾಗೃತಿ ಮೂಡಿಸುವ ಉದ್ದೇಶದಿಂದ ಉಡುಪಿ ಪಬ್ಲಿಕ್ ಹೀರೋ ನಿತ್ಯಾನಂದ ಒಳಕಾಡು ಓಮಿಕ್ರಾನ್ ವೇಷ ಧರಿಸಿದ್ದಾರೆ.

    ಉಡುಪಿ ಜಿಲ್ಲಾ ನಾಗರಿಕ ಸಮಿತಿ ಇವತ್ತು ವಿಶಿಷ್ಟ ರೀತಿಯ ಕೊರೊನಾ ಜನ ಜಾಗೃತಿ ಕಾರ್ಯ ಹಮ್ಮಿಕೊಂಡಿತ್ತು. ಕೊರೊನಾ ಮೂರನೇ ಅಲೆಯ ಭೀತಿ ಎದುರಾಗಿದ್ದು ಸೋಂಕು ಹರಡದಂತೆ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಜಾಗೃತಿ ಮೂಡಿಸಲು ಈ ಅಭಿಯಾನ ನಡೆಯಿತು. ಸಂಚಾಲಕ ನಿತ್ಯಾನಂದ ಒಳಕಾಡು ಖುದ್ದು ಕೊರೊನಾ ವೇಷ ಧರಿಸಿ, ಕೆಲಕಾಲ ನಗರದ ವಿವಿಧೆಡೆ ಸಂಚರಿಸಿ ಜಾಗೃತಿ ಮೂಡಿಸಿದರು. ಇದನ್ನೂ ಓದಿ: ತುರ್ತು ಚಿಕಿತ್ಸೆ ಹೊರತುಪಡಿಸಿ ಇತರೆ ರೋಗಿಗಳು ಆಸ್ಪತ್ರೆಗೆ ಬರುವಂತಿಲ್ಲ: ಸರ್ಕಾರ ಸೂಚನೆ

    ಜಾಗೃತಿ ಅಭಿಯಾನಕ್ಕೆ ನಗರ ಠಾಣೆ ಇನ್ಸ್‌ಪೆಕ್ಟರ್‌ ಹರೀಶ್ ಚಾಲನೆ ನೀಡಿದರು. ಕಲ್ಸಂಕ, ಸಿಟಿ ಬಸ್ ನಿಲ್ದಾಣ ಮತ್ತು ಸರ್ವಿಸ್ ಬಸ್ ನಿಲ್ದಾಣಗಳಲ್ಲಿ ಮಾಸ್ಕ್ ಬಗ್ಗೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಜನರಲ್ಲಿ ಮತ್ತು ವಾಹನ ಸವಾರರಲ್ಲಿ ಜಾಗೃತಿ ಮೂಡಿಸಲಾಯಿತು. ಕೊರೊನಾ ಹತೋಟಿಗೆ ಬರುವತನಕ ಅಭಿಯಾನ ಮುಂದುವರಿಸುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಇಂದು 32,793 ಕೇಸ್ – ಬೆಂಗಳೂರಿನಲ್ಲಿ 129 ಸಾವಿರ ಸಕ್ರಿಯ ಪ್ರಕರಣ

    ನಗರ ಠಾಣೆ ಎಎಸ್‍ಐ ಹರೀಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಕೊರೊನಾ ಬಗ್ಗೆ ಸರ್ಕಾರ, ಪೊಲೀಸರು, ಮಾಧ್ಯಮಗಳು ಜನ ಜಾಗೃತಿ ಮೂಡಿಸುತ್ತಿದ್ದರೂ ಜನಕ್ಕೆ ಸಾಂಕ್ರಾಮಿಕ ರೋಗದ ಭಯ ಹೋದಂತಿದೆ. ಈ ತರದ ವಿಭಿನ್ನ ಕಾರ್ಯಕ್ರಮಗಳನ್ನು ಮಾಡುವ ಮೂಲಕ ನಿತ್ಯಾನಂದ ಒಳಕಾಡು ಸಮಾಜ ಸೇವಾ ಚಟುವಟಿಕೆಯನ್ನು ಮುಂದುವರಿಸಿದ್ದಾರೆ ಎಂದರು. ಇದನ್ನೂ ಓದಿ: ಹಾರೆಯಿಂದ ಹೊಡೆದು ಪತ್ನಿಯ ಕೊಲೆ – ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

    ನಿತ್ಯಾನಂದ ಒಳಕಾಡು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮೂರು ವರ್ಷಗಳಿಂದ ಆಂಬುಲೆನ್ಸ್ ಮೂಲಕ ಉಚಿತ ಆರೋಗ್ಯ ಸೇವೆ ನೀಡುತ್ತಿದ್ದೇನೆ. ಸ್ವತಃ ನನಗೂ ಕೊರೊನಾ ಸಾಂಕ್ರಾಮಿಕ ಬಂದು ಬಹಳ ಕಷ್ಟಪಟ್ಟಿದ್ದೇನೆ. ಸ್ವಂತ ಅನುಭವದಿಂದ ಕಲಿತ ಪಾಠವನ್ನು ಜನಕ್ಕೆ ತಿಳಿಸಬೇಕು ಎಂಬ ಉದ್ದೇಶದಿಂದ ಈ ಅಭಿಯಾನ ಮಾಡಲಾಗುತ್ತಿದೆ. ಕೊರೊನಾ ಇಳಿಮುಖ ಆಗುವವರೆಗೂ ಜಿಲ್ಲೆಯ ಅಲ್ಲಲ್ಲಿ ಜನಜಾಗೃತಿ ಮಾಡಲಾಗುವುದು. ಈ ಕಾರ್ಯಕ್ಕೆ ಸಂಸ್ಥೆಗಳು, ನಾಗರಿಕ ಸಮಿತಿ ನನ್ನೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಸಾಲ ವಾಪಸ್ ಕೇಳಿದ್ದಕ್ಕೆ ಅನೈತಿಕ ಸಂಬಂಧದ ಅಪಪ್ರಚಾರ – ಮನನೊಂದು ಮಕ್ಕಳೊಂದಿಗೆ ನಾಲೆಗೆ ಹಾರಿದ ತಾಯಿ

  • ಬೃಹತ್ ಗಾತ್ರದ ಮಾಸ್ಕ್ ಮೂಲಕ ಜನಜಾಗೃತಿ ಮೂಡಿಸುತ್ತಿರೋ ಪಬ್ಲಿಕ್ ಹೀರೋ

    ಬೃಹತ್ ಗಾತ್ರದ ಮಾಸ್ಕ್ ಮೂಲಕ ಜನಜಾಗೃತಿ ಮೂಡಿಸುತ್ತಿರೋ ಪಬ್ಲಿಕ್ ಹೀರೋ

    ಉಡುಪಿ: ಪಬ್ಲಿಕ್ ಹೀರೋ, ಸಮಾಜ ಸೇವಕ ನಿತ್ಯಾನಂದ ಒಳಕಾಡು ಬೃಹತ್ ಮಾಸ್ಕ್ ತಯಾರು ಮಾಡಿ ಜನಜಾಗೃತಿ ಮೂಡಿಸಿದ್ದಾರೆ. ಈ ಮೂಲಕ ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ವಿಶಿಷ್ಟ ರೀತಿಯ ಮಾಸ್ಕ್ ಡೇ ಆಚರಿಸಲಾಯ್ತು.

    ಚಿತ್ತರಂಜನ್ ಸರ್ಕಲ್ ನಲ್ಲಿ 6 ಅಡಿ ಅಗಲ, 5 ಅಡಿ ಉದ್ದ ಮಾಸ್ಕ್ ಅನಾವರಣ ನಡೆಸಲಾಯ್ತು. ಉಡುಪಿ ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡ ದೊಡ್ಡ ಮಾಸ್ಕ್ ಅನಾವರಣ ಮಾಡಿದರು. ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಪ್ರದರ್ಶನ ನಡೆಸಲಿರುವ ನಿತ್ಯಾನಂದ ಒಳಕಾಡು, ಮಾಸ್ಕ್ ಧರಿಸುವ ಬಗ್ಗೆ ಸ್ಯಾನಿಟೈಸರ್ ಉಪಯೋಗದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.

    ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಿತ್ಯಾನಂದ ಒಳಕಾಡು, ಸಮಿತಿ ಕಡೆಯಿಂದ ಲಾಕ್ ಡೌನ್ ಸಂದರ್ಭದಲ್ಲಿ ನಿರಂತರ ಸೇವೆ ನಡೆದಿದೆ. ಆಹಾರ ಬಟ್ಟೆ, ಶೇವಿಂಗ್ ಕಿಟ್ ವಿತರಣೆ ಮಾಡಿದ್ದೇವೆ. ಇದೀಗ ಮಾಸ್ಕ್ ಸ್ಯಾನಿಟೈಸರ್ ಬಗ್ಗೆ ಜನಜಾಗೃತಿ ಮಾಡುತ್ತಿದ್ದೇವೆ. ಸರ್ಕಾರ, ಆರೋಗ್ಯ ಇಲಾಖೆ ನಿಯಮಗಳನ್ನು ಪಾಲಿಸಬೇಕು ಎಂದು ವಿನಂತಿ ಮಾಡಿದರು.

  • ನಿರಾಶ್ರಿತರು, ಕೂಲಿ ಕಾರ್ಮಿಕರಿಗೆ ಶೇವಿಂಗ್ ಕಿಟ್ ವಿತರಿಸಿದ ಪಬ್ಲಿಕ್ ಹೀರೋ

    ನಿರಾಶ್ರಿತರು, ಕೂಲಿ ಕಾರ್ಮಿಕರಿಗೆ ಶೇವಿಂಗ್ ಕಿಟ್ ವಿತರಿಸಿದ ಪಬ್ಲಿಕ್ ಹೀರೋ

    ಉಡುಪಿ: ಕಳೆದ ಒಂದು ತಿಂಗಳಿಂದ ಉಡುಪಿಯಲ್ಲಿ ಸೆಲೂನ್‍ಗಳು ಬಂದ್ ಆಗಿರುವುದರಿಂದ ಹೇರ್ ಕಟ್ಟಿಂಗ್, ಶೇವಿಂಗ್ ಮಾಡದೆ ಜನಕ್ಕೆ ಕಿರಿಕಿರಿಯಾಗುತ್ತಿದೆ. ಮನೆಯಲ್ಲಿ ಲಾಕ್ ಆಗಿರೋರು ತಮ್ಮ ಹೇರ್ ಕಟ್ಟಿಂಗ್ ತಾವೇ ಮಾಡಿಕೊಳ್ತಾ ಇದ್ದಾರೆ.

    ಹೊರ ಜಿಲ್ಲೆಯಿಂದ ಬಂದು ಉಡುಪಿಯ ನಿರಾಶ್ರಿತರ ಕೇಂದ್ರದಲ್ಲಿ ಇರುವವರು ಕಟ್ಟಿಂಗ್, ಶೇವಿಂಗ್ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಜನಸಾಮಾನ್ಯರ ಸಂಕಷ್ಟವನ್ನು ಅರಿತುಕೊಂಡ ಉಡುಪಿಯ ಸಮಾಜಸೇವಕ, ಪಬ್ಲಿಕ್ ಹೀರೋ ನಿತ್ಯಾನಂದ ಒಳಕಾಡು ಶೇವಿಂಗ್ ಕಿಟ್ ಗಳನ್ನು ಉಚಿತವಾಗಿ ವಿತರಿಸಿದ್ದಾರೆ.

    ಉಡುಪಿಯ ಇಂದಿರಾ ಕ್ಯಾಂಟೀನ್, ಬಸ್ ನಿಲ್ದಾಣ, ರಸ್ತೆ ಬಳಿ ಪ್ರತಿನಿತ್ಯ ನೂರಾರು ಮಂದಿ ನಿರ್ಗತಿಕರು ಹೊರ ಜಿಲ್ಲೆಯ ಹೊರ ರಾಜ್ಯದ ಕಾರ್ಮಿಕರು ಇದ್ದಾರೆ. ಅವರಿಗೆಲ್ಲಾ ಶೇವಿಂಗ್ ಕಿಟ್ ಕೊಟ್ಟಿದ್ದಾರೆ. ಊಟ, ತಿಂಡಿಗಂತ ಇಂದಿರಾ ಕ್ಯಾಂಟೀನ್ ಆವರಣಕ್ಕೆ ಬಂದವರಿಗೆ ನಿತ್ಯಾನಂದ ಒಳಕಾಡು ಸೋಪು ಬ್ಲೇಡು ಯೂಸ್ ಆಂಡ್ ಥ್ರೋ ಶೇವಿಂಗ್ ಕಿಟ್ ಮತ್ತು ಬ್ರೆಶ್ ಗಳನ್ನು ಕೊಟ್ಟರು. ಉದ್ದುದ್ದ ಗಡ್ಡ ಮತ್ತು ಕೂದಲು ಬಂದವರನ್ನು ಗುರುತಿಸಿ ಶೇವಿಂಗ್ ಕಿಟ್ಟನ್ನು ವಿತರಣೆ ಮಾಡಿದರು.

    ನಾನು ನಾಳೆ ಮತ್ತೆ ಬರುತ್ತೇನೆ ಎಲ್ಲರೂ ನೀಟ್ ಆ್ಯಂಡ್ ಕ್ಲೀನ್ ಆಗಿ ಶೇವ್ ಮಾಡ್ಕೊಂಡು ಬರ್ಬೇಕು ಅಂತ ವಿನಂತಿ ಮಾಡಿಕೊಂಡರು. ಉಡುಪಿ ಟೌನ್ ಟ್ರಾಫಿಕ್ ಎಸ್.ಐ ಅಬ್ದುಲ್ ಖಾದರ್ ಶೇವಿಂಗ್ ಕಿಟ್ ಗಳನ್ನು ವಿತರಣೆ ಮಾಡಿದರು. ಇದೇ ಸಂದರ್ಭದಲ್ಲಿ ಉದ್ಯಮಿ ರಂಜನ್ ಕಲ್ಕೂರ ನಿತ್ಯಾನಂದ ಒಳಕಾಡು ಅವರನ್ನು ಸನ್ಮಾನಿಸಿದರು. ಮಾತನಾಡಿದ ಎಸ್‍ಐ ಖಾದರ್, ಕಳೆದ ಒಂದು ತಿಂಗಳಿನಿಂದ ಉಡುಪಿ ಜಿಲ್ಲೆಯ ಮೂಲೆ ಮೂಲೆಯಲ್ಲಿ ನಿರ್ಗತಿಕರಿಗೆ ನಿರಾಶ್ರಿತರಿಗೆ ಕೂಲಿ ಕಾರ್ಮಿಕರಿಗೆ ಜನರು ಊಟೋಪಚಾರದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಅನ್ನದಾನಕ್ಕಿಂತ ದೊಡ್ಡದಾದ ದಾನ ಬೇರೆ ಇಲ್ಲ. ಹಸಿದವನಿಗೆ ಅನ್ನ ಹಾಕುವುದು ದೇವರು ಮೆಚ್ಚುವ ಕಾರ್ಯ ಎಂದು ಹೇಳಿದರು.

    ಸಮಾಜಸೇವಕ ನಿತ್ಯಾನಂದ ಒಳಕಾಡು ಮಾತನಾಡಿ ಕಷ್ಟದಲ್ಲಿರುವವರಿಗೆ ಆಹಾರ ಕೊಡುವುದು ಎಷ್ಟು ಮುಖ್ಯವೋ ಅವರ ಆರೋಗ್ಯವನ್ನು ಕಾಪಾಡುವ ಕೂಡ ಅಷ್ಟೇ ಮುಖ್ಯ. ಜಿಲ್ಲೆಯಲ್ಲಿ ಸೆಲೂನ್ ಬಂದ್ ಆಗಿ ಒಂದು ತಿಂಗಳಾಯ್ತು, ಅವರಾಗಿಯೇ ಶೇವಿಂಗ್ ಕಟ್ಟಿಂಗ್ ಮಾಡಿಕೊಳ್ಳೋಣ ಎಂದರೂ ಅವರಿಗೆ ಬೇಕಾದ ಶೇವಿಂಗ್ ಕಿಟ್ ಗಳ ಸಿಗುತ್ತಿಲ್ಲ. ಹಾಗಾಗಿ ಪಂಚರತ್ನ ಸೇವಾ ಟ್ರಸ್ಟ್ ವತಿಯಿಂದ ಈಗ ನೂರು ಜನರಿಗೆ ಕೆಟ್ ವಿತರಿಸಿದ್ದೇವೆ. ಒಟ್ಟು ಐನೂರು ಜನಕ್ಕೆ ಒಂದೆರಡು ದಿನದಲ್ಲಿ ವಿತರಿಸುತ್ತೇವೆ ಎಂದರು.

  • ಲಾಕ್‍ಡೌನ್‍ನಲ್ಲಿ ಸಿಕ್ಕಿಹಾಕಿಕೊಂಡಿದ್ದ 170 ಜನರಿಗೆ ಬಟ್ಟೆ ವಿತರಿಸಿದ ಪಬ್ಲಿಕ್ ಹೀರೋ

    ಲಾಕ್‍ಡೌನ್‍ನಲ್ಲಿ ಸಿಕ್ಕಿಹಾಕಿಕೊಂಡಿದ್ದ 170 ಜನರಿಗೆ ಬಟ್ಟೆ ವಿತರಿಸಿದ ಪಬ್ಲಿಕ್ ಹೀರೋ

    ಉಡುಪಿ: ಕೊರೊನಾ ಲಾಕ್‍ಡೌನ್‍ನಿಂದಾಗಿ ಕೂಲಿ ಕಾರ್ಮಿಕರು ಊರಿಗೆ ವಾಪಸ್ ಹೋಗಲು ಸಾಧ್ಯವಾಗದೆ ಉಡುಪಿಯಲ್ಲೇ ಲಾಕ್ ಆಗಿದ್ದಾರೆ. ಮೂರು ಹೊತ್ತು ಆಹಾರ ಸಿಕ್ಕರೂ ಉಡುವ ಬಟ್ಟೆಯಿಲ್ಲದೆ ಜನ ಪರದಾಡುತ್ತಿದ್ದರು. ಹೀಗಾಗಿ ಅವರಿಗೆ ಉಡುಪಿಯ ಪಬ್ಲಿಕ್ ಹೀರೋ ಅವರಿಗೆ ಸಹಾಯ ಮಾಡಿದ್ದಾರೆ.

    ಸಮಾಜಸೇವಕ ಉಡುಪಿಯ ಪಬ್ಲಿಕ್ ಹೀರೋ ನಿತ್ಯಾನಂದ ಒಳಕಾಡು 170 ಜನ ಕಾರ್ಮಿಕರಿಗೆ ಬಟ್ಟೆ ಹಂಚಿದ್ದಾರೆ. ಹೀಗಾಗಿ ಒಂದೆರಡು ಬಟ್ಟೆಯಲ್ಲಿ ಅರ್ಧ ತಿಂಗಳು ಕಳೆದ ಜೀವಗಳು ಈಗ ಖುಷಿಯಾಗಿವೆ. ಮೂರು ಹೊತ್ತು ಅನ್ನದ ಜೊತೆ ಬಟ್ಟೆ ಕೂಡ ಸಿಕ್ಕಿದ್ದರಿಂದ ಕಾರ್ಮಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

    ಭಾರತ ಲಾಕ್‍ಡೌನ್ ಆದಾಗ ಸುಮಾರು ಮೂರೂವರೆ ಸಾವಿರ ಕಾರ್ಮಿಕರು ತಮ್ಮ ಜಿಲ್ಲೆ, ರಾಜ್ಯಕ್ಕೆ ಹೊರಟು ನಿಂತಿದ್ದರು. ಜಿಲ್ಲೆಯ ನಾಲ್ಕು ಗಡಿಗಳಲ್ಲಿ ಕಾರ್ಮಿಕರನ್ನು ತಡೆಹಿಡಿದು ಮತ್ತೆ ಅವರನ್ನು ಬಿಡಾರಕ್ಕೆ ನಿರಾಶ್ರಿತರ ಕೇಂದ್ರಕ್ಕೆ ಬಿಡಲಾಗಿತ್ತು. ಕಳೆದ ಇಪ್ಪತ್ತೈದು ದಿನಗಳಿಂದಲೂ ಅವರಿಗೆ ಮೂರು ಹೊತ್ತು ಆಹಾರ ಕೊಡಲಾಗುತ್ತಿದೆ. ಆದರೆ ಅವರು ಹೆಚ್ಚುವರಿ ಬಟ್ಟೆ ಇಲ್ಲದೆ ಪರದಾಡುತ್ತಿದ್ದರು. ಒಂದೆರಡು ಜೊತೆ ಬಟ್ಟೆಯಲ್ಲಿ ಇಷ್ಟು ದಿನ ಕಳೆದಿದ್ದರೂ ಇದೀಗ ನಿತ್ಯಾನಂದ ಒಳಕಾಡು ಎಲ್ಲರಿಗೂ ಹೊಸ ಬಟ್ಟೆಯನ್ನು ವಿತರಣೆ ಮಾಡಿದ್ದಾರೆ.

    ಪರ್ಕಳದ ಪಾಟೀಲ್ ಕ್ಲಾತ್ ಸ್ಟೋರ್ ಮಾಲೀಕರು ಸಹಾಯ ಮಾಡಿದ್ದಾರೆ. ಉಡುಪಿ ನಗರಸಭೆಯ ಕಮಿಷನರ್ ಬಟ್ಟೆಗಳನ್ನು ವಿತರಣೆ ಮಾಡಿದರು. ಆನಂದ್ ಕಲ್ಲೋಳಿಕರ್ ಮಾತನಾಡಿ, ಎಲ್ಲರಿಗೂ ಎಲ್ಲ ಕಡೆಯಿಂದಲೂ ಆಹಾರ ಸಿಗುತ್ತಿದೆ. ಆದರೆ ಅವರಿಗೆ ಅಗತ್ಯವಾಗಿರುವುದು ಬಟ್ಟೆ. ಅದನ್ನು ಈಗ ವಿತರಿಸುತ್ತಿದ್ದೇವೆ ಎಂದು ಹೇಳಿದರು.

    ಸಮಾಜ ಸೇವಕ ನಿತ್ಯಾನಂದ ಒಳಕಾಡು ಮಾತನಾಡಿ, ಬೋರ್ಡ್ ಸ್ಕೂಲ್‍ನಲ್ಲಿ ಸುಮಾರು 170 ಜನ ವಲಸೆ ಕಾರ್ಮಿಕರಿದ್ದಾರೆ. ಭಾರತ್ ಬಂದ್ ಆದಾಗ ಅವರು ಉಟ್ಟ ಬಟ್ಟೆಯಲ್ಲಿ ತಮ್ಮ ಊರುಗಳಿಗೆ ಹೊರಟಿದ್ದರು. ಇವರೆಲ್ಲ ಆರ್ಥಿಕವಾಗಿ ಸದೃಢವಾಗಿದ್ದರೂ ಅಗತ್ಯ ವಸ್ತುಗಳನ್ನು ಖರೀದಿಸಲು ಕಷ್ಟ ಪಡುತ್ತಿದ್ದಾರೆ. ನಗರದಲ್ಲಿ ನೂರಾರು ಬಟ್ಟೆ ಅಂಗಡಿಗಳಿದ್ದು, ಜಿಲ್ಲೆಯ ಆಯಾಯ ಭಾಗದಲ್ಲಿ ಇರುವ ನಿರಾಶ್ರಿತರ ಕೇಂದ್ರಕ್ಕೆ ಬಟ್ಟೆ ದಾನ ಮಾಡಿ ಎಂದು ಅವರು ವಿನಂತಿ ಮಾಡಿಕೊಂಡರು.

  • ಕೊರಗ ಅರ್ಚಕರಿಂದ ಪೂಜೆ ಮಾಡ್ಸಿದ್ರು ನಿತ್ಯಾನಂದ ಒಳಕಾಡು- ಉಡುಪಿ ಪಬ್ಲಿಕ್ ಹೀರೋನ ಧಾರ್ಮಿಕ ಕ್ರಾಂತಿ

    ಕೊರಗ ಅರ್ಚಕರಿಂದ ಪೂಜೆ ಮಾಡ್ಸಿದ್ರು ನಿತ್ಯಾನಂದ ಒಳಕಾಡು- ಉಡುಪಿ ಪಬ್ಲಿಕ್ ಹೀರೋನ ಧಾರ್ಮಿಕ ಕ್ರಾಂತಿ

    ಉಡುಪಿ: ನಾಡಿನಾದ್ಯಂತ ದಸರಾ ಮಹೋತ್ಸವ ನಡೆಯುತ್ತಿದೆ. ಈ ನಡುವೆ ಉಡುಪಿಯಲ್ಲಿ ಧಾರ್ಮಿಕ ಆಚರಣೆಯಲ್ಲಿ ಕ್ರಾಂತಿಯಾಗಿದೆ. ಪಬ್ಲಿಕ್ ಹೀರೊ ನಿತ್ಯಾನಂದ ಒಳಕಾಡು ಅವರು ಧಾರ್ಮಿಕ ಆಚರಣೆಯಲ್ಲಿ ಒಂದು ದೊಡ್ಡ ಹೆಜ್ಜೆ ಇಟ್ಟಿದ್ದಾರೆ.

    ಉಡುಪಿ ಜಿಲ್ಲಾ ನಾಗರೀಕ ಸಮಿತಿ ಟ್ರಸ್ಟ್ ವತಿಯಿಂದ ಆಯುಧ ಪೂಜೆ ನಡೆಯಿತು. ಉಚಿತ ಸೇವೆ ಒದಗಿಸುವ ಎರಡು ಜೀವರಕ್ಷಕ ಅಂಬುಲೆನ್ಸ್, ಉಚಿತ ಸೇವೆಯ ವಿದ್ಯುತ್ ಚಾಲಿತ ಶೀತಲಿಕೃತ ಶವ ರಕ್ಷಣಾ ಯಂತ್ರ, ಹಸಿರು ಅಭಿಯಾನದ ಸೈಕಲ್ ರಿಕ್ಷಾ, ಬೈಕ್ ಗಳಿಗೆ ಪೂಜೆ ಮಾಡಲಾಯಿತು.

    ಪೂಜೆ ಮಾಡಿದ್ರೆ ಅದ್ರಲ್ಲೇನು ವಿಶೇಷ ಅಂತ ಕೇಳ್ಬೇಡಿ. ಪೂಜೆ ಮಾಡಿದ್ದು ಬ್ರಾಹ್ಮಣ ಮತ್ತಿತರ ಮೇಲ್ಜಾತಿಯ ಅರ್ಚಕರಲ್ಲ. ಕೊರಗ ಸಮುದಾಯದ ವ್ಯಕ್ತಿ ವಾಹನ ಪೂಜೆ ಮಾಡುವ ಮೂಲಕ ಕ್ರಾಂತಿ ಮಾಡಿದ್ದಾರೆ. ನಗರದ ಚಿತ್ತರಂಜನ್ ಸರ್ಕಲ್ ಬಳಿಯ ಮಾರುತಿ ವಿಥಿಕಾದಲ್ಲಿ ವಾಹನ ಪೂಜೆ ನಡೆಸಿದ್ದು ಸುಂದರ ಕೊರಗ. ಕೊರಗಜ್ಜ ದೈವದ ಚಾಕರಿ(ಸೇವೆ) ಮಾಡುವ ಸುಂದರ ಕೊರಗ ವಾಹನ ಪೂಜೆ ಮಾಡಿದ್ದಾರೆ.

    ಎಚ್. ಸುಂದರ ಕೊರಗ ಮಂಚಿ ಗ್ರಾಮದವರಾಗಿದ್ದು, ತಮ್ಮ ಬುಡಕಟ್ಟು ಕೊರಗ ಸಂಪ್ರದಾಯದಂತೆ ಶುದ್ಧ, ಕರ್ಪೂರಾರತಿ, ಆರತಿ ಸೇವೆ, ಈಡುಗಾಯಿ ಒಡೆದು ಪೂಜೆ ಸಲ್ಲಿಸಿದ್ದಾರೆ. ಇದೇ ಮೊದಲ ಬಾರಿಗೆ ನಾನು ದಸರಾ ಸಂದರ್ಭ ವಾಹನ ಪೂಜೆ ಮಾಡಿದ್ದೇನೆ. ಬಹಳ ಖುಷಿಯಾಗುತ್ತಿದೆ ಈ ಬೆಳವಣಿಗೆ ನನಗೆ, ನಮ್ಮ ಸಮಾಜಕ್ಕೆ ಸಿಕ್ಕ ದೊಡ್ಡ ಗೌರವ ಅಂತ ಸುಂದರ ಕೊರಗ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

    ಈ ಮೂಲಕ ಸಮಾಜದಲ್ಲಿ ಕೊರಗರಿಗೂ ಸ್ಥಾನಮಾನವಿದೆ. ಅವರೂ ಸಾರ್ವಜನಿಕವಾಗಿ ಮುಂದೆ ಬರಬೇಕು ಎಂಬ ಆಶಯವನ್ನು ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಸಮಾಜ ಸೇವಕ ನಿತ್ಯಾನಂದ ಒಳಕಾಡು ತೋರಿಸಿಕೊಟ್ಟಿದ್ದಾರೆ. ನಮ್ಮ ಸೇವೆ ಜಾತ್ಯಾತೀತ ಮತ್ತು ಧರ್ಮಾತೀತ. ಎಲ್ಲಾ ಜನರಿಗೂ ನಮ್ಮ ಸೇವೆ ಉಚಿತ. ಕೊರಗ ಸಮುದಾಯಕ್ಕೆ ಮೇಲ್ಪಂಕ್ತಿ ಹಾಕುವುದು ನಮ್ಮ ಉದ್ದೇಶ. ಅವರು ನಮ್ಮ ನೆಲದ ಮೂಲ ಜನಾಂಗ. ಅವರಿಗೆ ಮೊದಲ ಗೌರವ ಸಲ್ಲಿಸಬೇಕಾದದ್ದು ನಮ್ಮ ಕರ್ತವ್ಯ ಅಂತ ಹೇಳಿದರು.

    ಸಮಾಜ ಸೇವಕರಾದ ತಾರನಾಥ ಮೇಸ್ತ ವಿನಯಚಂದ್ರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನೂರಾರು ಸಾರ್ವಜನಿಕರಿಗೆ ತಿಂಡಿ ತಂಪು ಪಾನೀಯ ಸವಿದು ಕ್ರಾಂತಿಗೆ ಕಾರಣವಾದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=FUzwjukmN0U