Tag: Nithya ram

  • ನಾನು ಫುಲ್ ಥ್ರಿಲ್ ಆಗಿದ್ದೇನೆ ಅಂದ್ರು ಡಿಂಪಲ್ ಕ್ವೀನ್ ರಚಿತಾ

    ನಾನು ಫುಲ್ ಥ್ರಿಲ್ ಆಗಿದ್ದೇನೆ ಅಂದ್ರು ಡಿಂಪಲ್ ಕ್ವೀನ್ ರಚಿತಾ

    ಬೆಂಗಳೂರು: ನಾನು ಫುಲ್ ಥ್ರಿಲ್ ಆಗಿದ್ದೇನೆ ಎಂದು ಚಂದನವನದ ಡಿಂಪಲ್ ಕ್ವೀನ್ ರಚಿತಾ ರಾಮ್ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಆ ವೀಡಿಯೋ ನೋಡಿದ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

    ಆ ಪೋಸ್ಟ್‍ನಲ್ಲಿ ಏನಿದೆ?
    ರಚಿತಾ ರಾಮ್ ಅವರ ಸಹೋದರಿ ನಿತ್ಯ ರಾಮ್ ಮದುವೆಯಾಗಿ ವಿದೇಶಕ್ಕೆ ಹೋಗಿದ್ದರು. ಇದರಿಂದ ರಚಿತಾ ತನ್ನ ಸಹೋದರಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದರು. ಆದರೆ ಮತ್ತೆ ಇವರಿಬ್ಬರು ಒಂದಾಗಿದ್ದಾರೆ. ರಚಿತಾ ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ, ನಾನು ಎಷ್ಟು ಥ್ರಿಲ್ ಆಗಿದ್ದೇನೆ ಎಂದು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಮತ್ತೆ ನಾವಿಬ್ಬರು ಒಂದಾಗಿದ್ದೇವೆ. ಈ ಖುಷಿಯಿಂದ ನನ್ನ ಹೃದಯ ಕರಗಿದೆ ಎಂದು ಬರೆದು ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಮಾದಕ ನೋಟದಿಂದ ನಿದ್ದೆಗೆಡಿಸಿದ ನಟಿ ಶುಭ್ರ ಅಯ್ಯಪ್ಪ

     

    View this post on Instagram

     

    A post shared by Rachita Ram (@rachita_instaofficial)

    ಈ ವೀಡಿಯೋದಲ್ಲಿ ರಚಿತಾ ಮತ್ತು ನಿತ್ಯ ತುಂಬಾ ಕ್ಯೂಟ್ ಆಗಿ ಕಾಣುತ್ತಿದ್ದು, ವೈ ದಿಸ್ ಕೊಲವೆರಿ ಡಿ ಸಾಂಗ್ ಗೆ ಇಬ್ಬರು ಕ್ಯೂಟ್ ಆಗಿ ಎಕ್ಸ್ ಪ್ರೆಶನ್ ಕೊಟ್ಟಿದ್ದಾರೆ. ಇದನ್ನೂ ಓದಿ:   ಹಾಗಲಕಾಯಿಂದ ಮಾಡಿ ರುಚಿಯಾದ ಪಲ್ಯ

     

    View this post on Instagram

     

    A post shared by Rachita Ram (@rachita_instaofficial)

    ಇತ್ತೀಚೆಗೆ ರಚಿತಾ ನಟನೆಯ ‘ಲವ್ ಯೂ ರಚ್ಚು’ ಸಿನಿಮಾದ ಚಿತ್ರೀಕರಣದ ವೇಳೆ ಫೈಟರ್ ವಿವೇಕ್ ವಿದ್ಯುತ್ ಅವಘಡದಿಂದ ಸಾವನ್ನಪ್ಪಿದ್ದರು. ಈ ದುರಂತಕ್ಕೆ ಚಿತ್ರತಂಡದ ನಿರ್ಲಕ್ಷ್ಯವೇ ಕಾರಣ ಎಂದು ರಚಿತಾ ಮತ್ತು ಚಿತ್ರತಂಡವನ್ನು ಬಿಡದಿ ಪೊಲೀಸರು ವಿಚಾರಣೆಯನ್ನು ಸಹ ಮಾಡಿದ್ದರು. ಪ್ರಸ್ತುತ ಚಿತ್ರತಂಡಕ್ಕೆ ನ್ಯಾಯಾಲಯ ಜಾಮೀನು ನೀಡಿದೆ.

  • ಜವಾಬ್ದಾರಿಯುತವಾಗಿ ರೊಮ್ಯಾನ್ಸ್ ಮಾಡಿ ಎಂದ ರಚಿತಾ ಸೋದರಿ

    ಜವಾಬ್ದಾರಿಯುತವಾಗಿ ರೊಮ್ಯಾನ್ಸ್ ಮಾಡಿ ಎಂದ ರಚಿತಾ ಸೋದರಿ

    – ಮಾಸ್ಕ್ ಧರಿಸಿ ಲಿಪ್‍ಲಾಕ್

    ಬೆಂಗಳೂರು: ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಪ್ರಕರಣ ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ. ಈಗಾಗಲೇ ಸೀರಿಯಲ್, ಸಿನಿಮಾ ಶೂಟಿಂಗ್‍ಗಳನ್ನು ಕ್ಯಾನ್ಸಲ್ ಮಾಡಲಾಗಿದೆ. ಕೆಲವು ನಟ-ನಟಿಯರು ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಈ ಮಧ್ಯೆ ನಟಿ ನಿತ್ಯಾ ರಾಮ್ ಮಾಸ್ಕ್ ಧರಿಸಿ ಪತಿಯೊಂದಿಗೆ ಕಿಸ್ ಮಾಡಿದ್ದಾರೆ.

    ನಟಿ ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ಪತಿ ಗೌತಮ್ ಜೊತೆ ಮಾಸ್ಕ್ ಧರಿಸಿ ಕಿಸ್ ಮಾಡಿದ್ದಾರೆ. ಈ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇಬ್ಬರೂ ಪರಸ್ಪರ ಮಾಸ್ಕ್ ಧರಿಸಿ ಕಿಸ್ ಮಾಡಿದ್ದು, “ಜವಾಬ್ದಾರಿಯುತವಾಗಿ ರೊಮ್ಯಾನ್ಸ್ ಮಾಡಿ” ಎಂದು ಫೋಟೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.

    ಅಷ್ಟೇ ಅಲ್ಲದೇ ಆ ಫೋಟೋಗೆ #CoronaEffect #StaySafe #NeverStopRomance ಎಂಬ ಹ್ಯಾಶ್ ಟ್ಯಾಗ್‍ಗಳನ್ನು ಬಳಸಿದ್ದಾರೆ. ಈ ಫೋಟೋವನ್ನು ಅಪ್ಲೋಡ್ ಮಾಡಿದ ತಕ್ಷಣ ಕಮೆಂಟ್ ಮಾಡುವ ಮೂಲಕ ಟ್ರೋಲ್ ಮಾಡಿದ್ದಾರೆ. ‘ಮೊದಲು ಸುರಕ್ಷತೆ ಆಮೇಲೆ ಕಿಸ್’, ‘ಕೊರೊನಾ ಗಂಭೀರವಾದ ಸಮಸ್ಯೆ, ತಮಾಷೆಯಲ್ಲ’ ಅಲ್ಲಿ ಕೊರೊನಾ ಇದ್ರೂ ನೀವು ರೊಮ್ಯಾನ್ಸ್ ಮಾಡುವುದು ಬಿಡುತ್ತಿಲ್ಲ’ ಎಂದು ಅನೇಕ ರೀತಿ ಕಮೆಂಟ್ ಮಾಡಿದ್ದಾರೆ.

    https://www.instagram.com/p/B9-vhgoAFNB/

    2019 ಡಿಸೆಂಬರ್‌ನಲ್ಲಿ ನಿತ್ಯ ರಾಮ್ ಆಸ್ಟ್ರೇಲಿಯಾ ಉದ್ಯಮಿ ಗೌತಮ್ ಜೊತೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದಾರೆ.

    ನಿತ್ಯ ರಾಮ್ ಹಾಗೂ ಗೌತಮ್ ಅವರದ್ದು ಅರೇಂಜ್ಡ್ ಮ್ಯಾರೇಜ್ ಆಗಿದೆ. ನಿತ್ಯಾ ರಾಮ್ ತಾಯಿಯ ಸ್ನೇಹಿತರ ಮಗನೇ ಗೌತಮ್. ಹೀಗಾಗಿ ಕುಟುಂಬದವರ ಮೂಲಕ ಪರಿಚಯರಾದ ಗೌತಮ್ ಅವರನ್ನೇ ನಿತ್ಯಾ ವರಿಸಿದ್ದಾರೆ. ಗೌತಮ್ ಉದ್ಯಮಿಯಾಗಿದ್ದು, ಆಸ್ಟ್ರೇಲಿಯಾದಲ್ಲಿಯೇ ವಾಸಿಸುತ್ತಿದ್ದಾರೆ. ಹೀಗಾಗಿ ಮದುವೆ ನಂತರ ನಟಿ ನಿತ್ಯಾ ಕೂಡ ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಿದ್ದಾರೆ.

    ನಿತ್ಯಾ ರಾಮ್ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನಂದಿನಿ’ ಧಾರಾವಾಹಿ ಮೂಲಕ ಖ್ಯಾತಿ ಪಡೆದುಕೊಂಡಿದ್ದರು.

  • ಆಸ್ಟ್ರೇಲಿಯಾ ಉದ್ಯಮಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಚಿತಾ ಸಹೋದರಿ

    ಆಸ್ಟ್ರೇಲಿಯಾ ಉದ್ಯಮಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಚಿತಾ ಸಹೋದರಿ

    ಬೆಂಗಳೂರು: ಸ್ಯಾಂಡಲ್‍ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ನಿತ್ಯ ರಾಮ್ ಅವರು ಆಸ್ಟ್ರೇಲಿಯಾ ಉದ್ಯಮಿ ಗೌತಮ್ ಅವರ ಜೊತೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದಾರೆ. ವಿವಾಹ ಮುಹೂರ್ತಕ್ಕಾಗಿ ವಧು ನಿತ್ಯಾ ರಾಮ್ ಗೋಲ್ಡನ್ ಬಣ್ಣದ ರೇಷ್ಮೆ ಸೀರೆ ಧರಿಸಿ ಮಿಂಚುತ್ತಿದ್ದರು. ವರ ಗೌತಮ್ ಬಿಳಿ ಬಣ್ಣದ ರೇಷ್ಮೆ ಪಂಚೆ-ಶಲ್ಯ ಧರಿಸಿದ್ದರು.

    ಗೌತಮ್ ಹಾಗೂ ನಿತ್ಯಾ ಮದುವೆಗಾಗಿಯೇ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಸ್ಪೆಷಲ್ ಸೆಟ್ ಹಾಕಲಾಗಿತ್ತು. ಇಲ್ಲಿ ಈ ಜೋಡಿ ಗುರು-ಹಿರಿಯರು ನಿಶ್ಚಯಿಸಿದ್ದ ಶುಭ ಮುಹೂರ್ತದಲ್ಲಿ ಸಪ್ತಪದಿ ತುಳಿದಿದ್ದಾರೆ. ಮದುವೆಗೆ ಕುಟುಂಬದ ಸದಸ್ಯರು, ಆಪ್ತ ಸ್ನೇಹಿತರು ಮತ್ತು ಕಿರುತೆರೆ ಕಲಾವಿದರು ಬಂದು ನವಜೋಡಿಗೆ ಶುಭಾಶಯ ತಿಳಿಸಿದ್ದಾರೆ. ಸದ್ಯ ಇವರಿಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ನಿತ್ಯ ರಾಮ್ ಹಾಗೂ ಗೌತಮ್ ಅವರದ್ದು ಅರೇಂಜ್ಡ್ ಮ್ಯಾರೇಜ್ ಆಗಿದೆ. ನಿತ್ಯಾ ರಾಮ್ ತಾಯಿಯ ಸ್ನೇಹಿತರ ಮಗನೇ ಗೌತಮ್. ಹೀಗಾಗಿ ಕುಟುಂಬದವರ ಮೂಲಕ ಪರಿಚಯರಾದ ಗೌತಮ್ ಅವರನ್ನೇ ನಿತ್ಯಾ ವರಿಸಿದ್ದಾರೆ. ಗೌತಮ್ ಉದ್ಯಮಿಯಾಗಿದ್ದು, ಆಸ್ಟ್ರೇಲಿಯಾದಲ್ಲಿಯೇ ವಾಸಿಸುತ್ತಿದ್ದಾರೆ. ಹೀಗಾಗಿ ಮದುವೆ ನಂತರ ನಟಿ ನಿತ್ಯಾ ಕೂಡ ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಲಿದ್ದಾರೆ.

    ನಿತ್ಯಾ ರಾಮ್ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ `ನಂದಿನಿ’ ಧಾರಾವಾಹಿ ಮೂಲಕ ಖ್ಯಾತಿ ಪಡೆದುಕೊಂಡಿದ್ದರು. ಆದರೆ ಈಗ ಸೀರಿಯಲ್‍ನಿಂದ ನಿತ್ಯಾರಾಮ್ ಹೊರಬಂದಿದ್ದಾರೆ. ಪತಿಯ ಜೊತೆಗೆ ಸಮಯ ಕಳೆಯಲು ನಿರ್ಧರಿಸಿರುವ ನಿತ್ಯಾ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.