Tag: Nithya Menon
-

ತಮಿಳಿನ ಆ ನಟ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ- ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಸತ್ಯ ಬಿಚ್ಚಿಟ್ಟ ನಿತ್ಯಾ
ಕಾಸ್ಟಿಂಗ್ ಕೌಚ್ (Casting Couch) ಎಂಬುದು ಚಿತ್ರರಂಗದಲ್ಲಿರುವ ಕೆಟ್ಟ ಪಿಡುಗು. ಅವಕಾಶಕ್ಕಾಗಿ ಪಲ್ಲಂಗ ಏರುವ ಬಗ್ಗೆ ಈಗಾಗಲೇ ಅನೇಕ ನಟ-ನಟಿಯರು ಸಿಡಿದೆದಿದ್ದಾರೆ. ಕಾಸ್ಟಿಂಗ್ ಕೌಚ್ ಬಗ್ಗೆ ಅನೇಕ ನಟಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ತಾವು ಎದುರಿಸಿದ ಕಾಸ್ಟಿಂಗ್ ಕೌಚ್ ಬಗ್ಗೆ ಮೈನಾ ನಟಿ ನಿತ್ಯಾ ಮೆನನ್ (Nithya Menon) ಮಾತನಾಡಿದ್ದಾರೆ. ಕರಾಳ ಅನುಭವದ ಬಗ್ಗೆ ಬಿಚ್ಚಿದ್ದಾರೆ.
ಕೋಟಿಗೊಬ್ಬ 2 (Kotigobba 2), ಮೈನಾ (Mynaa) ಕನ್ನಡದ ಹಲವು ಸಿನಿಮಾಗಳಲ್ಲಿ ನಿತ್ಯಾ ಮೆನನ್ ಗಮನ ಸೆಳೆದಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಇಂಗ್ಲಿಷ್ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಕಾಸ್ಟಿಂಗ್ ಕೌಚ್ ಬಗ್ಗೆ ಮೈನಾ ಬ್ಯೂಟಿ ನಿತ್ಯಾ ಮೆನನ್ ಬಾಯ್ಬಿಟ್ಟಿದ್ದಾರೆ. ಈ ಬಗ್ಗೆ ಮಾತನಾಡಿ, ಎಲ್ಲಾ ಭಾಷೆಯಲ್ಲಿ ನಟಿಸಿದ್ದೀನಿ, ಆದರೆ ಟಾಲಿವುಡ್‌ನಲ್ಲಿ ಯಾವುದೇ ಸಮಸ್ಯೆಯಾಗಿಲ್ಲ, ತೆಲುಗು ಚಿತ್ರರಂಗದಲ್ಲಿ ತನಗೆ ಯಾರೂ ತೊಂದರೆ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಆದರೆ ತಮಿಳು ಸಿನಿಮಾರಂಗದಲ್ಲಿ ಕೆಲವು ತೊಂದರೆಗಳನ್ನು ಎದುರಿಸಿದ್ದೇನೆ ಎಂದು ಹೇಳುವ ಮೂಲಕ ಶಾಕ್ ನೀಡಿದ್ದಾರೆ. ಇದನ್ನೂ ಓದಿ:ಅಪ್ಪಂದಿರ ದಿನಾಚರಣೆಗೆ ವಿಶೇಷ ಪೋಸ್ಟ್ ಹಂಚಿಕೊಂಡ ರಾಧಿಕಾ ಪಂಡಿತ್
ಕಾಲಿವುಡ್‌ನ (Kollywood) ನಾಯಕನೊಬ್ಬ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಶೂಟಿಂಗ್ ಸಮಯದಲ್ಲಿ ಅವರು ತನ್ನನ್ನು ಸ್ಪರ್ಶಿಸುವ ಮೂಲಕ ತುಂಬಾ ಹಿಂಸೆ ನೀಡಿದ್ದರು ಎಂದು ನಿತ್ಯಾ ಹೇಳಿದರು. ಆದರೆ ಆ ನಾಯಕ ಯಾರು ಎನ್ನುವ ಬಗ್ಗೆ ನಿತ್ಯಾ ಬಹಿರಂಗಪಡಿಸಿಲ್ಲ. ನಾಯಕನ ಹುಚ್ಚು ವರ್ತನೆಯಿಂದ ಸರಿಯಾಗಿ ಶೂಟಿಂಗ್‌ನಲ್ಲಿ ಭಾಗವಹಿಸಲು ಆಗುತ್ತಿರಲಿಲ್ಲ ಎಂದು ನಿತ್ಯಾ ಮೆನನ್ ಹೇಳಿದ್ದಾರೆ. ಮಹಿಳೆಯರಿಗೆ ಆ ರೀತಿ ತೊಂದರೆ ಕೊಟ್ಟರೆ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ. ಹಾಗಾಗಿಯೇ ಈಗ ಎಷ್ಟೋ ಮಹಿಳೆಯರು ಹೊರಗೆ ಹೋಗಿ ಕೆಲಸ ಮಾಡಲು ಹೆದರುತ್ತಿದ್ದಾರೆ ಎಂದು ನಿತ್ಯಾ ಹೇಳಿದ್ದಾರೆ.
ಇದೀಗ ನಿತ್ಯಾ ಮೆನನ್ ಹೋರಾಟಕ್ಕೆ ಬೆಂಬಲ ಸಿಕ್ಕಿದೆ. ಆದರೆ ನಿತ್ಯಾ ಮೆನನ್‌ಗೆ ಇಷ್ಟೊಂದು ಕಿರುಕುಳ ನೀಡಿದ ತಮಿಳಿನ ಹೀರೋ ಯಾರು ಎಂಬ ಬಗ್ಗೆ ಜನರಲ್ಲಿ ಭಾರೀ ಕುತೂಹಲ ಹೆಚ್ಚಾಗಿದೆ. ಯಾರೆಂದು ತಲೆಕೆಡಿಸಿಕೊಂಡಿದ್ದಾರೆ. ತಮಿಳಿನ ಅನೇಕ ಸಿನಿಮಾಗಳಲ್ಲಿ ನಿತ್ಯಾ ನಟಿಸಿದ್ದಾರೆ. ಹಾಗಾಗಿ ಯಾರೆಂದು ಗುರುತಿಸುವುದು ಕಷ್ಟವಾಗಿದೆ.
-

ಕೊನೆಗೂ ರಿವೀಲ್ ಆಯ್ತು ನಿತ್ಯಾ ಮೆನನ್- ಪಾರ್ವತಿ ಪ್ರೆಗ್ನೆನ್ಸಿ ಸೀಕ್ರೆಟ್
ಬಹುಭಾಷಾ ನಟಿ ಪಾರ್ವತಿ(Parvathy) ಇತ್ತೀಚೆಗಷ್ಟೇ ಪ್ರೆಗ್ನೆನ್ಸಿ(Pregancy) ಪೋಸ್ಟ್ ಹಾಕಿ ಎಲ್ಲರಿಗೂ ಶಾಕ್ ಕೊಟ್ಟಿದ್ದರು. ಈ ಬೆನ್ನಲ್ಲೇ ಇದೇ ರೀತಿ ನಿತ್ಯಾ ಮೆನನ್(Nithya Menon) ಕೂಡ ಪೋಸ್ಟ್ ಮಾಡಿದ್ದರು. ಇದೀಗ ಈ ಬಗ್ಗೆ ಇಬ್ಬರೂ ನಟಿಯರು ಗುಡ್ ನ್ಯೂಸ್ ಕೊಟ್ಟಿದ್ದಾರೆ.
View this post on Instagramಕನ್ನಡದ `ಮಿಲನ'(Milana) ಮತ್ತು `ಮೈನಾ’ (Myna) ಚಿತ್ರದ ನಾಯಕಿಯರಾದ ನಿತ್ಯಾ ಮೆನನ್(Nithya Menon) ಮತ್ತು ಪಾರ್ವತಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಇಬ್ಬರೂ ಪ್ರೆಗ್ನೆನ್ಸಿ ಪೋಸ್ಟ್ ಹಾಕಿದ ಮೇಲಂತೂ ಇವರದ್ದೇ ಸಮಾಚಾರ. ಮದುವೆಯಾಗದೇ ಗರ್ಭಿಣಿಯಾದ್ರಾ ಎಂಬ ಚರ್ಚೆ ಕೂಡ ನಡೆದಿತ್ತು. ಇದೀಗ ಈ ಗಾಸಿಪ್‌ಗೂ ತೆರೆ ಬಿದ್ದಿದೆ. ನಿತ್ಯಾ ಮತ್ತು ಪಾರ್ವತಿ `ವಂಡರ್ ವುಮೆನ್’ ಚಿತ್ರಕ್ಕಾಗಿ ಜೊತೆಯಾಗಿದ್ದಾರೆ. ಇದನ್ನೂ ಓದಿ:ಅಮಿತಾಭ್ ಮೊಮ್ಮಗಳ ಜೊತೆಗಿನ ಡೇಟಿಂಗ್ ಬಗ್ಗೆ ಬಾಯ್ಬಿಟ್ಟ ನಟ ಸಿದ್ಧಾಂತ್
View this post on Instagramಅಂಜಲಿ ಮೆನನ್ ನಿರ್ದೇಶನದ `ವಂಡರ್ ವುಮೆನ್’ನಲ್ಲಿ(Wonder Women) ನಿತ್ಯಾ, ಪಾರ್ವತಿ, ಪದ್ಮ ಪ್ರಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಈ ಚಿತ್ರದ ಟ್ರೈಲರ್ ಕೂಡ ರಿಲೀಸ್ ಆಗಿ ಹೈಪ್ ಕ್ರಿಯೇಟ್ ಮಾಡಿದೆ. ಇದೊಂದು ಪ್ರೆಗ್ನೆನ್ಸಿ ಕಥೆಯಾಗಿದ್ದು, ಜೀವನದಲ್ಲಿ ಮಹಿಳೆಯರು ಎದುರಿಸುವ ಸವಾಲಿನ ಬಗ್ಗೆ ತೆರೆಯ ಮೇಲೆ ತೋರಿಸಲು ಚಿತ್ರತಂಡ ರೆಡಿಯಾಗಿದ್ದಾರೆ.
View this post on Instagram`ವಂಡನ್ ವುಮೆನ್’ ಗರ್ಭಿಣಿಯರ ಕುರಿತ ಈ ಕಥೆ, ನವೆಂಬರ್ 18ರಂದು ತೆರೆಗೆ ಅಪ್ಪಳಿಸಲಿದೆ.
Live Tv
[brid partner=56869869 player=32851 video=960834 autoplay=true] -

ಸಿನಿಮಾ ವಿಮರ್ಶೆಕನಿಂದ ನಟಿ ನಿತ್ಯಾ ಮೆನನ್ ಗೆ ಕಿರುಕುಳ: ಸಿಡಿದೆದ್ದ ಕನ್ನಡದ ನಟಿ
ಕನ್ನಡ ಸಿನಿಮಾ ರಂಗದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ನಟಿ ನಿತ್ಯಾ ಮೆನನ್. ಜೋಶ್, ಮೈನಾ , ಕೋಟಿಗೊಬ್ಬ 2 ಸೇರಿದಂತೆ ಹಲವು ಕನ್ನಡದ ಸಿನಿಮಾಗಳಲ್ಲಿ ನಟಿಸಿರುವ ದಕ್ಷಿಣದ ಹೆಸರಾಂತ ತಾರೆ ನಿತ್ಯಾ ಮೆನನ್ ಅವರಿಗೆ ಸಿನಿಮಾ ವಿಮರ್ಶೆಕನಿಂದ ಸಾಕಷ್ಟು ಬಾರಿ ಮಾನಸಿಕ ಕಿರುಕುಳ ಆಗಿದೆಯಂತೆ. ಆ ಹುಡುಗನ ಭವಿಷ್ಯ ಹಾಳಾಗಬಾರದು ಎನ್ನುವ ಕಾರಣಕ್ಕಾಗಿ ದೂರನ್ನು ಕೊಡದೇ ಇರಲು ಅವರು ನಿರ್ಧರಿಸಿದ್ದಾರಂತೆ.

ಕೇರಳದ ಪ್ರಸಿದ್ಧ ಯೂಟ್ಯೂಬ್ ಚಾನೆಲ್ ವೊಂದರಲ್ಲಿ ವಿಮರ್ಶೆ ಮಾಡುವ ಯುವಕನೊಬ್ಬ, ತಮ್ಮನ್ನು ಮದುವೆಯಾಗುವಂತೆ ನಿತ್ಯವೂ ಕಿರುಕುಳ ನೀಡುತ್ತಿದ್ದಾನೆಂದು, ಅವನ 30ಕ್ಕೂ ಹೆಚ್ಚು ನಂಬರ್ ಗಳನ್ನು ಬ್ಲ್ಯಾಕ್ ಮಾಡಿರುವುದಾಗಿಯೂ ನಿತ್ಯಾ ಹೇಳಿದ್ದಾರೆ. ಹಲವರು ಆತನ ವಿರುದ್ಧ ದೂರು ದಾಖಲಿಸುವಂತೆ ಸಲಹೆ ನೀಡಿದರು. ಆದರೆ, ಆ ಹುಡುಗನ ಭವಿಷ್ಯದ ದೃಷ್ಟಿಯಿಂದ ನಾನು ಹಾಗೆ ಮಾಡಲಿಲ್ಲ ಎಂದಿದ್ದಾರೆ ನಟಿ. ಇದನ್ನೂ ಓದಿ:ಗಾಳಿಪಟ 2 ಸಿನಿಮಾದ ‘ಪ್ರಾಯಶಃ’ ಸಾಂಗ್ ರಿಲೀಸ್ ಮಾಡಿದ ಕಿಚ್ಚ ಸುದೀಪ್

ಈ ಹಿಂದೆ ಮದುವೆ ವಿಚಾರವಾಗಿ ಆ ಹುಡುಗ ಕೂಡ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದನಂತೆ. ಅಲ್ಲದೇ, ಅದನ್ನು ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದನಂತೆ. ನನಗೆ ಗೌರವ ಕೊಡದೇ ನಿತ್ಯಾ ಮೆನನ್ ಅನ್ನು ಇನ್ನೆಂದಿಗೂ ಮದುವೆ ಆಗಲಾರೆ. ಅವರೇ ಬಂದು ಕೇಳಿಕೊಂಡರೂ ಮದುವೆ ಆಗುವುದಿಲ್ಲ ಎಂದು ಹೇಳಿಕೆ ನೀಡಿದ್ದನಂತೆ. ಅದನ್ನೂ ಕೂಡ ನಿತ್ಯಾ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true] -

ನಟನೆಯಿಂದ ಬ್ರೇಕ್ ತೆಗೆದುಕೊಳ್ಳಲಿದ್ದಾರೆ `ಮೈನಾ’ ಬ್ಯೂಟಿ ನಿತ್ಯಾ ಮೆನನ್!
ಸ್ಯಾಂಡಲ್‌ವುಡ್‌ನ `ಮೈನಾ’ ಬ್ಯೂಟಿ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ನಿತ್ಯಾ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ವದಂತಿಗೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಜತೆಗೆ ನಟನೆಯಿಂದ ಬ್ರೇಕ್ ತೆಗೆದುಕೊಳ್ಳುವುದರ ಬಗ್ಗೆ ನಿತ್ಯಾ ಮಾತನಾಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಕನ್ನಡ ಸಿನಿಮಾದಿಂದ ಸಿನಿ ಪಯಣ ಶುರು ಮಾಡಿ, ಸದ್ಯ ಬಹುಭಾಷಾ ನಟಿಯಾಗಿ ಮಿಂಚ್ತಿರುವ ನಿತ್ಯಾ ಮೆನನ್ ಸದ್ಯ ಬಾರಿ ಸುದ್ದಿಯಲ್ಲಿದ್ದಾರೆ. ಸಾಲು ಸಾಲು ಸಿನಿಮಾಗಳ ಜತೆ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ, ಕಾಣಿಸಿಕೊಳ್ತಿದ್ದಾರೆ. ಇತ್ತೀಚೆಗೆ ನಿತ್ಯಾ ದಕ್ಷಿಣ ಸ್ಟಾರ್ ನಟನನ್ನ ಮದುವೆಯಾಗಲಿದ್ದಾರೆ ಎಂಬ ವದಂತಿಗೆ ವಿಡಿಯೋ ಮೂಲಕ ಎಲ್ಲಾ ಊಹಾಪೋಹಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.
ನಾನು ಮದುವೆಯಾಗುತ್ತಿಲ್ಲ, ಈ ವಿಚಾರ ಸತ್ಯಕ್ಕೆ ಹತ್ತಿರವಾಗಿಲ್ಲ. ಸದ್ಯ ನನಗೆ ಮದುವೆಯಾಗುವ ಯಾವುದೇ ಆಲೋಚನೆ ಇಲ್ಲ. ಯಾರೋ ಬೇಸರ ಬಂದಿರುವವರು ಆರ್ಟಿಕಲ್ ಬರೆದಿರಬೇಕು ಎಂದು ಹೇಳುವ ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ. ನಿತ್ಯಾ ನಟನೆಯಿಂದ ಬ್ರೇಕ್ ತೆಗೆದುಕೊಳ್ಳುತ್ತಾರೆ ಎಂಬ ವದಂತಿ ಇತ್ತು. ಈ ವಿಚಾರವಾಗಿಯೂ ಮಾತನಾಡಿದ್ದಾರೆ. ಇದನ್ನೂ ಓದಿ:10 ಪರ್ಸೆಂಟ್ ಕೂಡ ನೆಮ್ಮದಿ ಇಲ್ಲಾ ಎಂದ ತಲೈವಾ: ಮಗಳ ಡಿವೋರ್ಸ್ ವಿಚಾರದಲ್ಲಿ ಕುಗ್ಗಿದ್ರಾ ರಜನಿಕಾಂತ್View this post on Instagramನಾನು ನಟನೆಯಿಂದ ಬ್ರೇಕ್ ತೆಗೆದುಕೊಳ್ಳುತ್ತೇನೆ. ಪ್ರತಿ ಸಿನಿಮಾದ ನಂತರ ನಾನು ಬ್ರೇಕ್ ತೆಗೆದುಕೊಳ್ಳುತ್ತೇನೆ. ನನಗೆ ರೋಬೋಟ್ ರೀತಿ ನನಗೆ ಕೆಲಸ ಮಾಡಲು ಬರುವುದಿಲ್ಲ. ಒಂದು ವರ್ಷದಿಂದ ವಿರಾಮವಿಲ್ಲದೇ ಕೆಲಸ ಮಾಡಿದ್ದೇನೆ. ನನ್ನ ನಟನೆಯ ಐದಾರು ಸಿನಿಮಾಗಳು ತೆರೆಗೆ ಬರಲು ರೆಡಿಯಿದೆ. ಹಾಗಾಗಿ ನನಗೆ ವಿರಾಮ ಬೇಕಿದೆ ಎಂದು ಮಾತನಾಡಿದ್ದಾರೆ.
Live Tv
[brid partner=56869869 player=32851 video=960834 autoplay=true] -

ನಾನು ಮಲಯಾಳಂ ಸ್ಟಾರ್ ಜೊತೆ ಮದುವೆ ಆಗುತ್ತಿಲ್ಲ ಎಂದ ಕನ್ನಡದ ನಟಿ ನಿತ್ಯಾ ಮೆನನ್
ಕನ್ನಡ ಸಿನಿಮಾ ರಂಗದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಮತ್ತು ಕನ್ನಡಿಗರೇ ಆಗಿದ್ದ ನಿತ್ಯಾ ಮೆನನ್ ಮದುವೆ ವಿಚಾರ ಸ್ಯಾಂಡಲ್ ವುಡ್ ಮತ್ತು ಮಲಯಾಳಂ ಸಿನಿಮಾ ರಂಗದಲ್ಲಿ ಭಾರೀ ಸದ್ದು ಮಾಡಿತ್ತು. ಮಲಯಾಳಂ ಸ್ಟಾರ್ ನಟನ ಜೊತೆ ನಿತ್ಯಾ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಕೂಡ ಹರಡಿತ್ತು. ಆ ನಟ ಯಾರಿರಬಹುದು ಎನ್ನುವ ಲೆಕ್ಕಾಚಾರ ನಡೆದಿತ್ತು. ನಿತ್ಯಾ ಅವರ ಬಾಯ್ ಫ್ರೆಂಡ್ ಬಗ್ಗೆ ಹುಡುಕಾಟ ನಡೆಸಿದ ಬೆನ್ನಲ್ಲೇ ಈ ಸುದ್ದಿ ಠಸ್ ಪಟಾಕಿ ಆಗಿದೆ.

ಹೌದು, ನಿತ್ಯಾ ಮೆನನ್ ಮದುವೆ ಆಗಲಿರುವ ಸ್ಟಾರ್ ನಟ ಯಾರು ಎನ್ನುವ ಪ್ರಶ್ನೆ ಮೂಡಿತ್ತು. ನಿತ್ಯಾ ಜೊತೆ ಆತ್ಮೀಯರಾಗಿರುವ ಹಲವು ನಟರ ಹೆಸರುಗಳು ಕೂಡ ಜೋಡಣೆಯಾಗಿದ್ದವು. ಅದರಲ್ಲಿ ಸ್ಟಾರ್ ನಟರ ಮಕ್ಕಳ ಹೆಸರು ಇದ್ದವು. ಈ ತೀವ್ರತೆಯನ್ನು ಅರಿತ ನಿತ್ಯಾ ಮೆನನ್, ಈ ಎಲ್ಲ ಪ್ರಶ್ನೆಗಳಿಗೆ ಫುಲ್ ಸ್ಟಾಪ್ ಇಟ್ಟಂತೆ ಮಾತನಾಡಿದ್ದಾರೆ. ತಾವು ಯಾರೊಂದಿಗೂ ಡೇಟಿಂಗ್ ಮಾಡಿಲ್ಲ, ಯಾವ ಸ್ಟಾರ್ ನಟನನ್ನೂ ಮದುವೆ ಆಗುತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ:ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಆಸ್ಪತ್ರೆಗೆ ದಾಖಲು

ಸದ್ಯ ಮದುವೆ ಆಗುವ ಬಗ್ಗೆ ಯೋಚನೆ ಕೂಡ ಮಾಡಿಲ್ಲ. ಅಲ್ಲದೇ, ಮದುವೆಯಾಗುವಷ್ಟು ಸಲುಗೆಯನ್ನು ಯಾರೊಂದಿಗೂ ನಾನು ಇಟ್ಟುಕೊಂಡಿಲ್ಲ. ಅನೇಕ ಸ್ಟಾರ್ ನಟರು ಆತ್ಮೀಯರಾಗಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರನ್ನು ಮದುವೆ ಆಗುತ್ತಿದ್ದೇನೆ ಎನ್ನುವುದು ಸುಳ್ಳು. ನಾನು ನನ್ನ ಕೆಲಸದಲ್ಲಿ ಬ್ಯುಸಿ ಆಗಿರುವೆ. ಮದುವೆ ಮಾತು ದೂರ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true] -

ಸ್ಟಾರ್ ನಟನ ಜೊತೆ ಮದುವೆಯಾಗಲಿದ್ದಾರಾ ‘ಮೈನಾ’ ಹುಡುಗಿ ನಿತ್ಯಾ ಮೆನನ್?
ಕನ್ನಡದ ಜೋಶ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿರುವ ಮಲಯಾಳಂ ಖ್ಯಾತ ನಟಿ ನಿತ್ಯಾ ಮೆನನ್ ಮದುವೆ ವಿಚಾರ ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ. ಸಾಮಾನ್ಯವಾಗಿ ನೆಚ್ಚಿನ ನಟಿ ಮದುವೆ ಆಗುತ್ತಿದ್ದಾರೆ ಅಂದಾಗ ಅಭಿಮಾನಿಗಳು ಬೇಸರ ಪಟ್ಟುಕೊಳ್ಳುವುದು ವಾಡಿಕೆ. ಆದರೆ, ನಿತ್ಯಾ ಮದುವೆಗೆ ಸಂಭ್ರಮಿಸುತ್ತಿರುವುದಕ್ಕೆ ಕಾರಣ, ಈಗಲಾದರೂ ಅವರು ಮದುವೆಗೆ ಒಪ್ಪಿಕೊಂಡರಲ್ಲಾ ಅನ್ನುವುದು.

ನಿತ್ಯಾ ಮೆನನ್ ಜೊತೆ ಸಿನಿಮಾ ರಂಗಕ್ಕೆ ಬಂದ ಬಹುತೇಕರು ಮದುವೆ ಆಗಿದ್ದಾರೆ. ಅಲ್ಲದೇ, ಒಂದೆರಡು ಮಕ್ಕಳ ತಾಯಿ ಕೂಡ ಆಗಿದ್ದಾರೆ. ಹಾಗಾಗಿ ನಿತ್ಯ ಯಾವಾಗ ಮದುವೆ ಆಗುತ್ತಾರೆ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳಲ್ಲೇ ಮೂಡಿತ್ತು. ಅದಕ್ಕೀಗ ಕಾಲ ಕೂಡಿ ಬಂದಿದೆ ಎನ್ನಲಾಗುತ್ತಿದೆ. ಬಹುದಿನಗಳ ಗೆಳೆಯ ಮತ್ತು ಸ್ಟಾರ್ ನಟನೂ ಆಗಿರುವ ಮಲಯಾಳಂ ಕಲಾವಿದನ ಜೊತೆ ನಿತ್ಯಾ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:ಶಶಾಂಕ್ ನಿರ್ದೇಶನದ ‘ಲವ್ 360’ ಚಿತ್ರದ ಮತ್ತೊಂದು ಹಾಡು ರಿಲೀಸ್

ನಿತ್ಯಾ ಯಾರನ್ನು ಮದುವೆಯಾಗಲಿದ್ದಾರೆ, ಅವರೊಂದಿಗೆ ಇವರು ಕೆಲಸ ಮಾಡಿದ್ದಾರಾ? ಸ್ಟಾರ್ ನಟ ಅಂದರೆ ಯಾರು? ಯಾಕೆ ಈವರೆಗೂ ಇಬ್ಬರ ಮಧ್ಯೆ ಗಾಸಿಪ್ ಹುಟ್ಟುಕೊಂಡಿಲ್ಲ? ಎಷ್ಟು ವರ್ಷದಿಂದ ಇವರು ಡೇಟಿಂಗ್ ಮಾಡುತ್ತಿದ್ದಾರೆ ಹೀಗೆ ಅನೇಕ ಪ್ರಶ್ನೆಗಳು ಮಲಯಾಳಂ ಸಿನಿಮಾ ರಂಗದಲ್ಲಿ ಕೇಳಿ ಬರುತ್ತಿವೆ. ಆದರೂ, ನಿತ್ಯಾ ಈ ಕುರಿತು ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಮದುವೆ ಬಗ್ಗೆ ಪ್ರಸ್ತಾಪವನ್ನೂ ಮಾಡಿಲ್ಲ.
Live Tv
[brid partner=56869869 player=32851 video=960834 autoplay=true] -

ಧನುಷ್ ವಿರುದ್ಧ ಠಾಣೆ ಮೆಟ್ಟಿಲೇರಿದ ಸಾಮಾಜಿಕ ಕಾರ್ಯಕರ್ತೆ
ಕಾಲಿವುಡ್ ಸ್ಟಾರ್ ಧನುಷ್ ಮೇಲೆ ಅಭಿಮಾನಿಗಳು ಫುಲ್ ಆಗಿದ್ದಾರೆ. ಧನುಷ್ ನಟನೆಯ `ತಿರುಚಿತ್ರಂಬಲಂ’ ಚಿತ್ರದ `ಥಾಯ್ ಕೆಲ್ವೈ’ ಸಾಂಗ್ ರಿಲೀಸ್ ಆಗಿದ್ದು, ನಟ ಧನುಷ್ ಸಾಹಿತ್ಯ ಬರೆದು, ಹಾಡಿದ್ದಾರೆ. ಈಗ ಧನುಷ್ ಬರೆದಿರುವ ಸಾಹಿತ್ಯಕ್ಕೆ ಸಾಮಾಜಿಕ ಕಾರ್ಯಕರ್ತೆ ಫುಲ್ ಗರಂ ಆಗಿದ್ದಾರೆ.

ನಟ ಧನುಷ್ ಈಗ ಕಾಲಿವುಡ್ ಮತ್ತು ಹಾಲಿವುಡ್ ಚಿತ್ರರಂಗದಲ್ಲಿ ಬೇಡಿಕೆಯಿರುವ ನಟ. ಸದ್ಯ `ತಿರುಚಿತ್ರಂಬಲಂ’ ಸಿನಿಮಾದ ಮೂಲಕ ಸೌಂಡ್ ಮಾಡ್ತಿದ್ದಾರೆ. ಮಿತ್ರನ್ ಜವಾಹರ್ ನಿರ್ದೇಶನದ ಈ ಚಿತ್ರದಲ್ಲಿ ನಟನೆಯ ಜತೆ `ಥಾಯ್ ಕೆಲ್ವೈ’ ಹಾಡಿಗೆ ಸಾಹಿತ್ಯ ಕೂಡ ನಟ ಧನುಷ್ ಬರೆದಿದ್ದಾರೆ. ಅದೇ ಈಗ ಧನುಷ್‌ಗೆ ಮುಳುವಾಗಿದೆ.

`ತಿರುಚಿತ್ರಂಬಲಂ’ ಚಿತ್ರವು ಮ್ಯೂಸಿಕ್ ಲವ್‌ಸ್ಟೋರಿಯಾಗಿದೆ. ಚಿತ್ರದಲ್ಲಿ ಧನುಷ್, ನಿತ್ಯ ಮೆನನ್, ರಾಶಿ ಖನ್ನಾ ನಟಿಸಿದ್ದಾರೆ. ನಾಯಕನಾಗಿ ಕಾಣಿಸಿಕೊಳ್ಳುವುದರ ಜತೆಗೆ `ಥಾಯ್ ಕೆಲ್ವೈ’ ಸಾಹಿತ್ಯ ಬರೆದು ಹಾಡಿದ್ದಾರೆ. ಚಿತ್ರಕ್ಕೆ ಅನಿರುದ್ಧ ರವಿಚಂದರ್ ಸಂಗೀತ ಸಂಯೋಜನೆಯಿದೆ. ಈ ಹಾಡು ಕೂಡ ಸಿಕ್ಕಾಪಟ್ಟೆ ಹಿಟ್ ಆ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಹಾಡಿನ ಸಾಹಿತ್ಯವನ್ನು ಬದಲಿಸಿ ಎಂದು ಚಿತ್ರತಂಡದ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ:ತಮಿಳು ಸಿನಿಮಾ ಮಾಡ್ತಾರಾ ಅಥವಾ ಕನ್ನಡದ ನಿರ್ದೇಶಕನಿಗೆ ಮಣೆ ಹಾಕ್ತಾರಾ ಯಶ್?

ಹಾಡಿನ ಸಾಹಿತ್ಯವು ತಮಾಷೆಯಾಗಿ ಕಂಡು ಬಂದರೂ ಅದರ ಕೆಲವು ಪದಗಳು ಹಿರಿಯರಿಗೆ ಅಗೌರವ ತರುವಂತಹ ಪದವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಹಾಡಿನ ಸಾಹಿತ್ಯ ಬದಲಿಸುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಆಗಸ್ಟ್ 18ರಂದು ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ರಿಲೀಸ್‌ಗೂ ಮುಂಚೆನೇ ಈ ವಿವಾದವನ್ನ ಬಗೆಹರಿಸಿಕೊಳ್ಳತ್ತಾರಾ ಅಂತಾ ಕಾದುನೋಡಬೇಕಿದೆ.
Live Tv
-

ದಪ್ಪ ಆಗಿದ್ದೀರಾ ಎಂದವರಿಗೆ ನಿತ್ಯಾ ಮೆನನ್ ಖಡಕ್ ಪ್ರತಿಕ್ರಿಯೆ
ಮುಂಬೈ: ಕೋಟಿಗೊಬ್ಬ-2 ಬೆಡಗಿ ನಿತ್ಯಾ ಮೆನನ್ ಅವರನ್ನು ದಪ್ಪ ಆಗಿದ್ದೀರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದರು. ಈಗ ನಿತ್ಯಾ ಈ ಟ್ರೋಲ್‍ಗಳಿಗೆ ಖಡಕ್ ಉತ್ತರ ನೀಡಿದ್ದಾರೆ.
ಇತ್ತೀಚೆಗೆ ನಿತ್ಯಾ ಮೆನನ್ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಅವರನ್ನು ಟ್ರೋಲ್‍ಗಳ ಬಗ್ಗೆ ಪ್ರಶ್ನಿಸಲಾಯಿತು. ಆಗ ಅವರು, ಜನರು ಅಜ್ಞಾನಿಗಳು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನೀವು ತೂಕದ ಸಮಸ್ಯೆಗಳನ್ನು ಹೊಂದಿದ್ದರೆ, ನೀವು ಸೋಮಾರಿ ಆಗಿದ್ದೀರಿ ಮತ್ತು ತುಂಬಾ ತಿನ್ನುತ್ತೀರಿ ಎಂದುಕೊಳ್ಳುತ್ತಾರೆ. ಇದು ಅಜ್ಞಾನ. ಸೋಮಾರಿ ಆಗುವುದರಿಂದ ಅಥವಾ ತಿನ್ನುವುದರಿಂದ ಯಾರು ತೂಕ ಹೆಚ್ಚಿಸಿಕೊಳ್ಳುವುದಿಲ್ಲ. ಸಿನಿಮಾ ಕಲಾವಿದರು ಸೋಮಾರಿಗಳಾಗಿರುವುದಿಲ್ಲ ನನ್ನನ್ನು ನಂಬಿರಿ ಎಂದು ಹೇಳಿದ್ದಾರೆ.

ಅಲ್ಲದೆ ಹಾರ್ಮೋನ್ ಸಮಸ್ಯೆಯಿಂದ ಅಥವಾ ಇತರ ಸಮಸ್ಯೆಗಳಿಂದ ತೂಕ ಹೆಚ್ಚಾಗುತ್ತದೆ. ಇದು ನಮಗೆ ಹೆಚ್ಚು ನೋವನ್ನು ಉಂಟು ಮಾಡುತ್ತದೆ. ನಾವು ಸುಮ್ಮನೆ ಕುಳಿತು ನಮ್ಮ ಜೀವನವನ್ನು ಎಂಜಾಯ್ ಮಾಡುವ ಮೂಲಕ ತೂಕ ಹೆಚ್ಚಿಸಿಕೊಂಡಿದ್ದೇವೆ ಎಂದು ಜನರು ತಿಳಿದುಕೊಂಡಿದ್ದಾರೆ. ಅವರ ಈ ಯೋಚನೆಯನ್ನು ನಾವು ಬದಲಾಯಿಸಬೇಕು. ಟ್ರೋಲ್‍ಗಳು ನೋಡಿದರೆ ನನಗೆ ನೋವಾಗುತ್ತದೆ ಅಲ್ಲದೆ ಬೇಸರ ಕೂಡ ಆಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.
ನಿತ್ಯಾ ಮೆನನ್ ಈಗಾಗಲೇ ಕನ್ನಡ, ತಮಿಳು, ತೆಲುಗು, ಮಲೆಯಾಳಂ ಚಿತ್ರದಲ್ಲಿ ನಟಿಸಿದ್ದಾರೆ. ಈಗ ಅವರು ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಅವರ ‘ಮಿಷನ್ ಮಂಗಲ್’ ಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದಾರೆ.

