ಕನ್ನಡತಿ, ‘ಕಿಸ್ಸಿಕ್’ ಬೆಡಗಿ ಶ್ರೀಲೀಲಾ (Sreeleela) ಫ್ಯಾನ್ಸ್‌ಗೆ ಇದು ಕಹಿ ಸುದ್ದಿ. ಶ್ರೀಲೀಲಾ ನಟನೆಯ ‘ರಾಬಿನ್‌ಹುಡ್’ ಚಿತ್ರ (Robinhood Film) ನೋಡಲು ಕಾಯುತ್ತಿದ್ದವರಿಗೆ ಈ ವಿಚಾರ ಬೇಸರ ಮೂಡಿಸಿದೆ. ಡಿ.25ರಂದು ರಿಲೀಸ್ ಆಗಬೇಕಿದ್ದ ಸಿನಿಮಾ ಮತ್ತೆ ಮುಂದೂಡಲಾಗಿದೆ. ಇದನ್ನೂ ಓದಿ:BBK 11: ಹದ್ದು ಮೀರಿದ ವರ್ತನೆ- ಉಗ್ರಂ ಮಂಜು, ರಜತ್ ನಡುವೆ ಕಿರಿಕ್

ಶ್ರೀಲೀಲಾ ಟಾಲಿವುಡ್‌ಗೆ ಎಂಟ್ರಿ ಕೊಟ್ಟು 4 ವರ್ಷಗಳಾಗಿವೆ. ಇವರ ನಟನೆ ಮತ್ತು ಡ್ಯಾನ್ಸ್‌ಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ ಬೇಸ್ ಇದೆ. ಅದರಲ್ಲೂ ಇತ್ತೀಚಿನ ‘ಪುಷ್ಪ 2’ ಸಿನಿಮಾದಲ್ಲಿನ ಅವರ ‘ಕಿಸ್ಸಿಕ್’ ಡ್ಯಾನ್ಸ್ ನೋಡಿದ್ಮೇಲೆ ನಟಿಯ ಮೇಲಿನ ಕ್ರೇಜ್ ಹೆಚ್ಚಾಗಿದೆ. ಹೀಗಿರುವಾಗ ಬಹುನಿರೀಕ್ಷಿತ ‘ರಾಬಿನ್‌ಹುಡ್’ ಚಿತ್ರ ಮುಂದಕ್ಕೆ ಹೋಗಿರುವ ಬಗ್ಗೆ ನಿರ್ಮಾಣ ಸಂಸ್ಥೆ ಅಧಿಕೃತವಾಗಿ ತಿಳಿಸಿದೆ.
View this post on Instagram
ಕಾರಣಾಂತರಗಳಿಂದ ಡಿ.25ರಂದು ‘ರಾಬಿನ್‌ಹುಡ್’ ಸಿನಿಮಾ ಬಿಡುಗಡೆಯಾಗುತ್ತಿಲ್ಲ. ಸದ್ಯದಲ್ಲೇ ಹೊಸ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ. ನಿಮ್ಮ ಕಾಯುವಿಕೆಯು ಮುಂದೆ ನಮ್ಮ ಸಿನಿಮಾ ಬೇಸರ ಮೂಡಿಸಲ್ಲ ಎಂದು ‘ಪುಷ್ಪ 2’ (Pushpa 2) ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ತಿಳಿಸಿದೆ.
ಅಂದಹಾಗೆ, ನಿತಿನ್‌ಗೆ ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದಾರೆ. ‘ರಾಬಿನ್‌ಹುಡ್’ ಚಿತ್ರದ ಮೂಲಕ 2ನೇ ಬಾರಿ ಜೋಡಿಯಾಗಿದ್ದಾರೆ. ಈ ಚಿತ್ರದ ಮೂಲಕ ನಟಿಗೆ ಸಕ್ಸಸ್ ಸಿಗುತ್ತಾ ಕಾದುನೋಡಬೇಕಿದೆ.


ನೀಲಿ ಬಣ್ಣದ ಗೌನ್ ಧರಿಸಿ ಕೈಯಲ್ಲಿ ಗುಲಾಬಿ ಹಿಡಿದು ನಟಿ ಕ್ಯೂಟ್ ಆಗಿ ಪೋಸ್ ನೀಡಿದ್ದಾರೆ. ಸಪ್ತಮಿ ಮುದ್ದಾಗಿ ಬೀರಿರುವ ನಗುವಿಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ನಟಿಯ ಫೋಟೋಗೆ ಏಂಜಲ್, ಸಿಂಗಾರ ಸಿರಿ ಹೀಗೆ ನಾನಾ ಕಾಮೆಂಟ್‌ಗಳು ನೆಟ್ಟಿಗರಿಂದ ಹರಿದು ಬರುತ್ತಿವೆ. ಇದನ್ನೂ ಓದಿ:






