Tag: Nita Mukesh Ambani Cultural Centre

  • ನೆಲ್ಸನ್ ಮಂಡೇಲಾರಿಗೆ ದೊರೆತಿದ್ದ ಪ್ರಶಸ್ತಿಗೆ ಈಗ ನೀತಾ ಅಂಬಾನಿ ಆಯ್ಕೆ!

    ನೆಲ್ಸನ್ ಮಂಡೇಲಾರಿಗೆ ದೊರೆತಿದ್ದ ಪ್ರಶಸ್ತಿಗೆ ಈಗ ನೀತಾ ಅಂಬಾನಿ ಆಯ್ಕೆ!

    ಮುಂಬೈ: ಮುಂಬೈನ ಜಿಯೋ ವರ್ಲ್ಡ್ ಸಭಾ ಭವನದಲ್ಲಿ (Jioworld convention centre) ನಡೆದ 71ನೇ ಮಿಸ್ ವರ್ಲ್ಡ್ ಫೈನಲ್ಸ್ (Miss World 2024) ಸಂದರ್ಭದಲ್ಲಿ ರಿಲಯನ್ಸ್ ಫೌಂಡೇಷನ್ ಸಂಸ್ಥಾಪಕಿ ಮತ್ತು ಅಧ್ಯಕ್ಷೆಯೂ ಆಗಿರುವ ನೀತಾ ಅಂಬಾನಿ (Nita Ambani) ಅವರು ಪ್ರತಿಷ್ಠಿತ ‘ಬ್ಯೂಟಿ ವಿತ್ ಎ ಪರ್ಪಸ್ ಹ್ಯುಮಾನಿಟೇರಿಯನ್ ಅವಾರ್ಡ್’ ಅನ್ನು ಸ್ವೀಕರಿಸಿದರು.

    ಹೆಸರಾಂತ ಅಂತಾರಾಷ್ಟ್ರೀಯ ಸ್ಪರ್ಧೆಯ ವೇಳೆ ನೀಡಿದಂತಹ ಅತ್ಯುನ್ನತ ಪ್ರಶಸ್ತಿಯನ್ನು (Beauty With a Purpose Award) ಸ್ವೀಕರಿಸಿದ ಅವರು, ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹಿಳೆಯರ ಸಬಲೀಕರಣ ಎಷ್ಟು ಮುಖ್ಯ? ಎಂಬುದರ ಬಗ್ಗೆ ಮಾತನಾಡಿ ಗಮನ ಸೆಳೆದರು. ಇದೇ ಉದ್ದೇಶಕ್ಕಾಗಿ ತಮ್ಮ ಸ್ವಂತ ಜೀವನದಲ್ಲಿ ಇರುವಂಥ ಬದ್ಧತೆಯನ್ನು ಪುನರುಚ್ಚರಿಸಿದರು.

    ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ದಿವಂಗತ ನೆಲ್ಸನ್ ಮಂಡೇಲಾ ಮತ್ತು ಆಪರೇಷನ್ ಹಂಗರ್ ಇನಾ ಪರ್ಲ್ ಮನ್ ಅವರಂತಹವರು ಈ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇದನ್ನೂ ಓದಿ: Miss World 2024: ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಎಡವಿದ ಕರ್ನಾಟಕ ಮೂಲದ ಸಿನಿ ಶೆಟ್ಟಿ

    ಇಂಥವರ ಸಾಲಿನಲ್ಲಿ ನೀತಾ ಅಂಬಾನಿ ಅವರು ಪ್ರಶಸ್ತಿ ಸ್ವೀಕರಿಸಿರುವುದು ಭಾರತೀಯ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಶಿಕ್ಷಣ, ಹೆಲ್ತ್ ಕೇರ್, ಕಲೆ ಮತ್ತು ಸಂಸ್ಕೃತಿ, ಕ್ರೀಡೆ, ದಾನ-ದತ್ತಿ ಕ್ಷೇತ್ರಗಳ ಆಚೆಗೆ ಮಾಡಿರುವಂತಹ ಸೇವೆಗೆ ಒಂದು ನಿದರ್ಶನವಾಗಿದೆ. ಇದನ್ನೂ ಓದಿ: Miss World 2024: ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಕ್ರಿಸ್ಟಿನಾ ಪಿಸ್ಕೋವಾ 

  • ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ ಆರಂಭ

    ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ ಆರಂಭ

    ಮುಂಬೈ: ಭಾರತ ಮತ್ತು ವಿದೇಶಗಳ ಕಲಾವಿದರು, ಧಾರ್ಮಿಕ ಮುಖಂಡರು, ಕ್ರೀಡಾಳುಗಳು ಮತ್ತು ಉದ್ಯಮಿಗಳ ಜತೆಗೆ ದೇಶದ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ನೀತಾ ಮುಕೇಶ್ ಅಂಬಾನಿ (Mukesh Ambani) ಸಾಂಸ್ಕೃತಿಕ ಕೇಂದ್ರವನ್ನು (Nita Mukesh Ambani Cultural Centre) ಶುಕ್ರವಾರ ಉದ್ಘಾಟಿಸಲಾಯಿತು. ರಿಲಯನ್ಸ್ ಫೌಂಡೇಷನ್ (Reliance Industries) ಅಧ್ಯಕ್ಷೆ ನೀತಾ ಅಂಬಾನಿ (Nita Ambani) ಮತ್ತು ಅವರ ಮಗಳು ಇಶಾ ಅಂಬಾನಿ ಆತಿಥ್ಯ ವಹಿಸಿದ್ದರು.

    ಉದ್ಘಾಟನಾ ಸಮಾರಂಭದಲ್ಲಿ, ನೀತಾ ಅಂಬಾನಿ ಮಾತನಾಡಿ, ಸಾಂಸ್ಕೃತಿಕ ಕೇಂದ್ರವು ಪಡೆಯುತ್ತಿರುವ ಬೆಂಬಲದಿಂದ ನಾನು ಸಂತುಷ್ಟಗೊಂಡಿದ್ದೇನೆ. ಇದು ವಿಶ್ವದ ಅತ್ಯುತ್ತಮ ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದಾಗಿದೆ. ಎಲ್ಲ ಕಲೆ ಮತ್ತು ಕಲಾವಿದರಿಗೆ ಇಲ್ಲಿ ಸ್ವಾಗತ. ಸಣ್ಣ ಪಟ್ಟಣಗಳು ​​ಮತ್ತು ದೂರದ ಪ್ರದೇಶಗಳ ಯುವಕರು ಇಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಲು ಅವಕಾಶ ಪಡೆಯುತ್ತಾರೆ. ವಿಶ್ವದ ಅತ್ಯುತ್ತಮ ಪ್ರದರ್ಶನಗಳು ಇಲ್ಲಿ ನಡೆಯಲಿವೆ ಎಂದು ನಾನು ಭಾವಿಸುತ್ತೇನೆ ಎಂದರು. ಇದನ್ನೂ ಓದಿ: ಬಣ್ಣದ ಉಡುಗೆಯಲ್ಲಿ ಮಿರಿಮಿರಿ ಮಿಂಚಿದ ರಶ್ಮಿಕಾ, ತಮನ್ನಾ – ಇಲ್ಲಿದೆ ಕಣ್ಮನ ಸೆಳೆಯುವ Photos

    ಮುಕೇಶ್ ಅಂಬಾನಿ ಮಾತನಾಡಿ, ಮುಂಬೈ ಜೊತೆಗೆ, ಇದು ದೇಶದ ದೊಡ್ಡ ಕಲಾ ಕೇಂದ್ರವಾಗಿ ಹೊರಹೊಮ್ಮುತ್ತದೆ. ಇಲ್ಲಿ ದೊಡ್ಡ ಪ್ರದರ್ಶನಗಳನ್ನು ನಡೆಸಬಹುದು. ಭಾರತೀಯರು ತಮ್ಮ ಎಲ್ಲ ಕಲಾತ್ಮಕತೆಯೊಂದಿಗೆ ಮೂಲ ಪ್ರದರ್ಶನಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

    ಸಾಂಸ್ಕೃತಿಕ ಕೇಂದ್ರದಲ್ಲಿ ಅತಿಥಿಗಳಿಗೆ ಆತಿಥ್ಯ ನೀಡಲಾಯಿತು. ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್, ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ, ಲಾನ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಅಥ್ಲೀಟ್ ದೀಪಾ ಮಲಿಕ್ ಸಹ ಕಲಾವಿದರನ್ನು ಪ್ರೋತ್ಸಾಹಿಸಲು ಕೇಂದ್ರದಲ್ಲಿ ಉಪಸ್ಥಿತರಿದ್ದರು.

    ಸೂಪರ್ ಸ್ಟಾರ್ ರಜನಿಕಾಂತ್, ಅಮೀರ್ ಖಾನ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಪ್ರಿಯಾಂಕ್ ಚೋಪ್ರಾ, ವರುಣ್ ಧವನ್, ಸೋನಮ್ ಕಪೂರ್, ಅನುಪಮ್ ಖೇರ್, ಜಾವೇದ್ ಅಖ್ತರ್, ಶಬಾನಾ ಅಜ್ಮಿ, ಸುನೀಲ್ ಶೆಟ್ಟಿ, ಶಾಹಿದ್ ಕಪೂರ್, ವಿದ್ಯಾ ಬಾಲನ್, ಆಲಿಯಾ ಭಟ್, ದಿಯಾ ಮಿರ್ಜಾ, ಶ್ರದ್ಧಾ ಕಪೂರ್, ರಾಜು ಹಿರಾನಿ, ತುಷಾರ್ ಕಪೂರ್ ಹೀಗೆ ಇಡೀ ಸಂಜೆ ಬಾಲಿವುಡ್ ತಾರೆಯರಿಂದ ತುಂಬಿತ್ತು. ಕೈಲಾಶ್ ಖೇರ್ ಮತ್ತು ಮೇಮ್ ಖಾನ್ ಸಹ ಉಪಸ್ಥಿತರಿದ್ದರು. ಇದನ್ನೂ ಓದಿ: ಮೊದಲ ದಿನವೇ 38 ಕೋಟಿ ಬಾಚಿದ ‘ದಸರಾ’ ಸಿನಿಮಾ

    ಎಮ್ಮಾ ಚೇಂಬರ್ಲೇನ್, ಗಿಗಿ ಹಡಿದ್ ಅವರಂತಹ ಅಂತಾರಾಷ್ಟ್ರೀಯ ಖ್ಯಾತಿಯ ಮಾಡೆಲ್‌ಗಳು ಈ ಸಂದರ್ಭ ರಂಗೇರುವಂತೆ ಮಾಡಿದರು. ದೇವೇಂದ್ರ ಫಡ್ನವಿಸ್, ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ, ಸ್ಮೃತಿ ಇರಾನಿ ಮುಂತಾದ ರಾಜಕಾರಣಿಗಳೂ ಕಾರ್ಯಕ್ರಮದಲ್ಲಿದ್ದರು.

    ಸದ್ಗುರು ಜಗ್ಗಿ ವಾಸುದೇವ್, ಸ್ವಾಮಿ ನಾರಾಯಣ ಪಂಥದ ರಾಧಾನಾಥ್ ಸ್ವಾಮಿ, ರಮೇಶ್ ಭಾಯಿ ಓಜಾ, ಸ್ವಾಮಿ ಗೌರ್ ಗೋಪಾಲ್ ದಾಸ್ ಅವರಂತಹ ಆಧ್ಯಾತ್ಮಿಕ ಗುರುಗಳ ಉಪಸ್ಥಿತಿಯು ಪ್ರೇಕ್ಷಕರನ್ನು ಪುಳಕಗೊಳಿಸಿತು. ಇದನ್ನೂ ಓದಿ: ಟಾಲಿವುಡ್ ಅಂಗಳಕ್ಕೆ ‘ಮಫ್ತಿ’ ಡೈರೆಕ್ಟರ್ ಕಾಲಿಡುವುದು ಪಕ್ಕಾ