Tag: Nishant

  • ಟ್ರೆಕ್ಕಿಂಗ್ ಹೋಗಿ ಅಪಾಯಕ್ಕೆ ಸಿಲುಕಿದ್ದ ಯುವಕನ ವಿರುದ್ಧ ಕೇಸ್ ದಾಖಲು!

    ಟ್ರೆಕ್ಕಿಂಗ್ ಹೋಗಿ ಅಪಾಯಕ್ಕೆ ಸಿಲುಕಿದ್ದ ಯುವಕನ ವಿರುದ್ಧ ಕೇಸ್ ದಾಖಲು!

    ಚಿಕ್ಕಬಳ್ಳಾಪುರ: ನಂದಿಬೆಟ್ಟಕ್ಕೆ ಬಂದು ಪಕ್ಕದ ಬ್ರಹ್ಮಗಿರಿ ಬೆಟ್ಟಕ್ಕೆ ಟ್ರೆಕ್ಕಿಂಗ್ ಹೋಗಿ ಅಪಾಯ ತಂದುಕೊಂಡಿದ್ದ ಪ್ರವಾಸಿಗ ನಿಶಾಂಶ್ ಗುಲ್ ವಿರುದ್ಧ ಕರ್ನಾಟಕ ಅರಣ್ಯ ಇಲಾಖೆ ಕಾಯ್ದೆಯಡಿ ಅತಿಕ್ರಮ ಪ್ರವೇಶದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಅರಣ್ಯಾಧಿಕಾರಿ(ಡಿಎಫ್‍ಒ) ಅರಸಲನ್ ತಿಳಿಸಿದ್ದಾರೆ.

    ಕರ್ನಾಟಕ ಅರಣ್ಯ ಕಾಯ್ದೆ ವಿಧಿ 24ರ ಅಡಿ ಪ್ರಕರಣ ದಾಖಲಿಸಲಾಗಿದ್ದು, ನಿಶಾಂತ್ ಆಸ್ಪತ್ರೆಯಿಂದ ಬಿಡುಗಡೆ ಆದ ಮೇಲೆ ವಿಚಾರಣೆಗೆ ಗುರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ. ನಂದಿಬೆಟ್ಟದ ಬಹುತೇಕ ಕಡೆ ಟ್ರೆಕ್ಕಿಂಗ್ ಗೆ ಅನುಮತಿ ಇಲ್ಲ. ನಂದಿಬೆಟ್ಟದ ಹಲವು ಕಡೆ ಮೊಬೈಲ್ ಸಿಗ್ನಲ್ ಸಹ ದೊರೆಯುವುದಿಲ್ಲ. ಇದ್ರಿಂದ ಅಪಾಯಕ್ಕೆ ಸಿಕ್ಕಿಕೊಂಡರೆ ಸಹಾಯಕ್ಕೆ ಬರಲು ಸಹ ಆಗುವುದಿಲ್ಲ. ಈತ ಅದೃಷ್ಟ ಎಂಬಂತೆ ಉಳಿದಿದ್ದಾನೆ. ಇಲ್ಲಿ ಕಾಡುಪ್ರಾಣಿಗಳು ಕೂಡ ಸಂಚರಿಸುತ್ತಿವೆ. ಮೇಲಾಗಿ ಕಡಿದಾದ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡು ಜೀವಂತ ನಿಶಾಂತ್ ಬಂದಿರುವುದೇ ಪವಾಡ ಎಂದು ಹಲವರು ಆಶ್ಚರ್ಯ ವ್ಯಕ್ತಪಡಿಸಿದರು. ಇದನ್ನೂ ಓದಿ: ನಂದಿಬೆಟ್ಟದಲ್ಲಿ ಸಿಲುಕಿದ ಯುವಕ – ಹೆಲಿಕಾಪ್ಟರ್ ಮೂಲಕ ರಕ್ಷಣೆ!

    ಟ್ರೆಕ್ಕಿಂಗ್‍ಗೆ ಅನುಮತಿ ಕಡ್ಡಾಯ!
    ಟ್ರೆಕ್ಕಿಂಗ್ ಗೆ ಜಿಲ್ಲಾಡಳಿತ ಗುರುತಿಸಿರುವ ಕೆಲವು ಆಯ್ದೆ ಚಾರಣದ ಸ್ಥಳಗಳಿಗೆ ಅರಣ್ಯ ಇಲಾಖೆಯ ಅನುಮತಿ ಪತ್ರ ಪಡೆಯಬೇಕು. ಅಲ್ಲದೆ ಸೂಕ್ತ ಮಾರ್ಗದರ್ಶಕರ ನೆರವಿನಿಂದ ಹೋಗಿಬರುವುದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದು. ಅದನ್ನು ಬಿಟ್ಟು ಅನುಮತಿ ಪಡೆಯದೆ ಅತಿಕ್ರಮವಾಗಿ ಪ್ರವೇಶಿಸಿದರೆ ಕರ್ನಾಟಕ ಅರಣ್ಯ ಇಲಾಖೆ ಕಾಯ್ದೆ 24ರ ಅಡಿ ಪ್ರಕರಣ ದಾಖಲಿಸಲಾಗುವುದು.

    ಅನಂತರ ನಡೆಯುವ ಕಾನೂನು ಹೋರಾಟಕ್ಕೆ ಸಿಕ್ಕಿ ಒದ್ದಾಡುವ ಅಪಾಯವಿರುತ್ತದೆ ಎಂಬುದನ್ನು ಚಾರಣಿಗರು ಅರಿಯುವುದು ಸೂಕ್ತ ಎಂಬುದನ್ನು ಡಿಎಫ್‍ಒ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಚಾರಣಕ್ಕೆ ಅರಣ್ಯ ಇಲಾಖೆ ಅನುಮತಿಸುವ ಸ್ಥಳಗಳಾದ ನಂದಿಬೆಟ್ಟವನ್ನು ಕಾಲುದಾರಿಯ ಮೂಲಕ ಪ್ರವೇಶಿಸಬಹುದು. ಸ್ಕಂದಗಿರಿ, ಕೈವಾರಬೆಟ್ಟ, ಬೆಂಗಳೂರು ಗ್ರಾಮಾಂತರದ ಮಾಕಳಿ ಬೆಟ್ಟ, ಸಾವನದುರ್ಗ ಇಂತಹ ಕಡೆ ಮಾತ್ರ ಟ್ರೆಕ್ಕಿಂಗ್ ಮಾಡಬಹುದು ಎಂದು ತಿಳಿಸಿದರು. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಹೆಡ್ ಕಾನ್‌ಸ್ಟೇಬಲ್ ಮೇಲೆ ಮಾರಣಾಂತಿಕ ಹಲ್ಲೆ

  • ಎಸ್‍ಟಿಎಸ್ ಪುತ್ರನಿಗೆ ಬ್ಲ್ಯಾಕ್ ಮೇಲ್ – ಮಗಳ ಪಾತ್ರ ಇಲ್ಲ ಎಂದ ಶಾಸಕ ಯಶವಂತರಾಯಗೌಡ ಪಾಟೀಲ್

    ಎಸ್‍ಟಿಎಸ್ ಪುತ್ರನಿಗೆ ಬ್ಲ್ಯಾಕ್ ಮೇಲ್ – ಮಗಳ ಪಾತ್ರ ಇಲ್ಲ ಎಂದ ಶಾಸಕ ಯಶವಂತರಾಯಗೌಡ ಪಾಟೀಲ್

    ಬೆಂಗಳೂರು: ಸಹಕಾರ ಸಚಿವ ಎಸ್‍.ಟಿ.ಸೋಮಶೇಖರ್ ಪುತ್ರನಿಗೆ ಬ್ಲ್ಯಾಕ್‍ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಮಗಳ ಪಾತ್ರ ಏನು ಇಲ್ಲ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳಿದ್ದಾರೆ.

    ಸೋಮಶೇಖರ್ ಪುತ್ರ ನಿಶಾಂತ್‍ಗೆ ನಕಲಿ ವೀಡಿಯೋ ಸೃಷ್ಟಿಸಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ ಪ್ರಕರಣ ಕುರಿತಂತೆ ಯಶವಂತರಾಯಗೌಡ ಪಾಟೀಲ್ ಅವರು ಇಂದು ಬೆಳಗ್ಗೆ ಶಾಸಕರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ರಾಜಕಾರಣ ಮಾಡುವವರು ನೇರವಾಗಿ ನನ್ನ ವಿರುದ್ಧ ರಾಜಕಾರಣ ಮಾಡಲಿ. ಮನೆಯವರು, ಮಕ್ಕಳನ್ನು ಇದರಲ್ಲಿ ಯಾಕೆ ತರುತ್ತಾರೆ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೆಂಗಳೂರಲ್ಲಿ ಸೋಂಕಿಗೆ ತುತ್ತಾದವರಲ್ಲಿ ಯುವಕರದ್ದೇ ಸಿಂಹ ಪಾಲು!

    ಸುದ್ದಿಗೋಷ್ಠಿಯಲ್ಲಿ ಹೇಳಿದ್ದು ಏನು?
    ನನ್ನ ಸುಪುತ್ರಿ ಮೇಲೆ ಆಪಾದನೆಯೊಂದು ಬಂದಿದೆ. ನನ್ನ ಮಗಳು ಇಂಗ್ಲೆಂಡ್‍ಗೆ ಎಂಎಸ್ ಕಲಿಯಲು ಹೋಗಿದ್ದಾರೆ. ಡಿಸೆಂಬರ್ 25ಕ್ಕೆ ಆಕೆ ತನ್ನ ಸ್ನೇಹಿತ ರಾಕೇಶ್ ಅಣ್ಣಪ್ಪಗೆ ಒಂದು ಬಿಸಿನೆಸ್ ಕಾಂಟ್ಯಾಕ್ಟ್‍ಗೆ ಒಂದು ಒಟಿಪಿ ಕೊಟ್ಟಿದಾಳೆ. ಈ ಪ್ರಕರಣ ಕುರಿತಂತೆ ಸಿಸಿಬಿ ಅವರು ರಾಕೇಶ್ ವಿಚಾರಣೆ ನಡೆಸಿದಾಗ, ರಾಕೇಶ್ ಬೆಂಗಳೂರಿನಲ್ಲಿರುವ ರಾಹುಲ್ ಭಟ್‍ಗೆ ಸಿಮ್ ಒಟಿಪಿ ಕೊಟ್ಟಿರುವುದಾಗಿ ತಿಳಿಸಿದ್ದಾನೆ. ಇದನ್ನೂ ಓದಿ: S.T. ಸೋಮಶೇಖರ್ ಪುತ್ರನಿಗೆ ನಕಲಿ ಅಶ್ಲೀಲ ವೀಡಿಯೋ ಬ್ಲ್ಯಾಕ್‍ಮೇಲ್

    ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ನಾನೂ ಉತ್ತಮ ಸ್ನೇಹಿತರು. ನಾವಿಬ್ಬರೂ ಸಿಎಂರನ್ನು ಭೇಟಿ ಮಾಡಿ ಸೂಕ್ತ ತನಿಖೆ ನಡೆಸುವಂತೆ ಮನವಿ ಮಾಡಿದ್ದೇವೆ. ಏನೋ ತಪ್ಪಾಗಿ ಹೀಗೆಲ್ಲಾ ಆಗಿದೆ. ಪ್ರಕರಣದ ಹಿಂದೆ ಇರುವವರನ್ನು ಬಯಲಿಗೆಳೆಯಲಿ. ನನ್ನ ಮಗಳ ಹೆಸರು ಯಾಕೆ ತಂದಿದ್ದಾರೆ ಅಂತ ಗೊತ್ತಿಲ್ಲ. ನನ್ನ ಮಗಳು ಸಹ ಇದೇ 7 ರಂದು ಬಂದಿದ್ದಾಳೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು.

    ರಾಜಕಾರಣ ಮಾಡುವವರು ನೇರವಾಗಿ ನನ್ನ ವಿರುದ್ಧ ರಾಜಕಾರಣ ಮಾಡಲಿ. ಮನೆಯವರು, ಮಕ್ಕಳನ್ನು ಇದರಲ್ಲಿ ಯಾಕೆ ತರುತ್ತಾರೆ? ನಿಶಾಂತ್ ಮತ್ತು ನನ್ನ ಮಗಳು ಕ್ಲಾಸ್ ಮೇಟ್ಸ್ ಅಲ್ಲ. ಇಬ್ಬರಿಗೂ ಕನೆಕ್ಷನ್ ಇಲ್ಲ. ರಾಕೇಶ್ ಅಪ್ಪಣ್ಣನವರ್ ನನ್ನ ಮಗಳಿಗೆ ಪರಿಚಯ. ಆತನಿಗೆ ಸಿಮ್ ಕೊಟ್ಟಿದ್ದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ. ಸಿಮ್ ದುರ್ಬಳಕೆ ಆಗುತ್ತದೆ ಅಂತ ಗೊತ್ತಿರಲಿಲ್ಲ. ಇದನ್ನೂ ಓದಿ: ಸಚಿವರ ಪುತ್ರನಿಗೆ ಬ್ಲ್ಯಾಕ್ ಮೇಲ್ ಮಾಡಿದ್ದ ಆರೋಪಿ ಅಂದರ್

    ಸಿಮ್ ನನ್ನ ಮಗಳ ಬಳಿಯೇ ಇದೆ. ಒಟಿಪಿ ಮಾತ್ರ ರಾಕೇಶ್‍ಗೆ ನನ್ನ ಮಗಳು ಕೊಟ್ಟಿದಾಳೆ. ಒಟಿಪಿಯನ್ನು ವಾಟ್ಸಪ್‍ಗೆ ಬಳಸಿದ್ದಾರೋ ಇಲ್ಲವೋ ಅಂತ ಗೊತ್ತಿಲ್ಲ. ನನ್ನ ಮಗಳು ಸಣ್ಣವಳು, ಒಟಿಪಿ ಶೇರ್ ಬಗ್ಗೆ ಏನ್ ಗೊತ್ತಾಗುತ್ತದೆ. ನನ್ನ ಮಗಳ ಜೊತೆ ಈಗಾಗಲೇ ಪೊಲೀಸರು ಫೋನಿನಲ್ಲಿ ಮಾತನಾಡಿದ್ದಾರೆ. ಈಗ ಆಕೆಯೇ ಯುಕೆಯಿಂದ ಬಂದಿದ್ದಾಳೆ. ಪೊಲೀಸರು ಆಕೆಯನ್ನೂ ಸಹ ವಿಚಾರಣೆ ನಡೆಸಲಿ. ಇದರಲ್ಲಿ ನನ್ನ ಮಗಳ ಪಾತ್ರ ಏನು ಇಲ್ಲ. ಸದ್ಯ ಪ್ರಕರಣ ಕುರಿತಂತೆ ತನಿಖೆ ನಡೆಯುತ್ತಿದೆ. ನನಗೆ ಯಾರ ಮೇಲೂ ಅನುಮಾನ ಇಲ್ಲ. ಆದರೆ ತನಿಖೆಯ ನಂತರ ಸತ್ಯ ಹೊರಬೀಳಲಿದೆ.

  • ಸಚಿವರ ಪುತ್ರನಿಗೆ ಬ್ಲ್ಯಾಕ್ ಮೇಲ್ ಮಾಡಿದ್ದ ಆರೋಪಿ ಅಂದರ್

    ಸಚಿವರ ಪುತ್ರನಿಗೆ ಬ್ಲ್ಯಾಕ್ ಮೇಲ್ ಮಾಡಿದ್ದ ಆರೋಪಿ ಅಂದರ್

    ಬೆಂಗಳೂರು: ಸಚಿವ ಎಸ್.ಟಿ ಸೋಮಶೇಖರ್ ಪುತ್ರ ನಿಶಾಂತ್ ಅವರಿಗೆ ನಕಲಿ ಅಶ್ಲೀಲ ವೀಡಿಯೋ ಬಿಡುಗಡೆಗೊಳಿಸುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಎಸ್.ಟಿ. ಸೋಮಶೇಖರ್ ಪುತ್ರ ನಿಶಾಂತ್ ಅವರಿಗೆ ಮಹಿಳೆಯೊಂದಿಗಿರುವ ವೀಡಿಯೋವನ್ನು ಸೋಶಿಯಲ್ ಮೀಡಿಯದಲ್ಲಿ ಹರಿಬಿಡುವುದಾಗಿ ಬೆದರಿಕೆಯೊಡ್ಡಿದ್ದ ಪ್ರಕರಣದಲ್ಲಿ ಖ್ಯಾತ ಜ್ಯೋತಿಷಿಯ ಪುತ್ರ ರಾಹುಲ್ ಭಟ್ (22) ನನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಅಲ್ಲದೆ ಕೋರ್ಟ್ ಮುಂದೆ ಹಾಜರುಪಡಿಸಿ, ಇದೀಗ ಹೆಚ್ಚಿನ ತನಿಖೆಗಾಗಿ 5 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ.

    ಈ ಪ್ರಕರಣ ಹಿಂದೆ ಕಾಂಗ್ರೆಸ್ ಶಾಸಕರ ಪುತ್ರಿಯ ಹೆಸರು ಪ್ರಸ್ತಾಪವಾಗುತ್ತಿದ್ದು, ಇನ್ನೂ ನಾಲ್ಕು ಮಂದಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಶಾಸಕರ ಪುತ್ರಿ ವಿದ್ಯಾಭ್ಯಾಸಕ್ಕಾಗಿ ಲಂಡನ್‍ಗೆ ಹೋಗಿದ್ದು, ಯುಕೆ ಮೂಲದ ಇಂಟರ್ನೆಟ್ ನಂಬರ್ ಬಳಸಿ ವೀಡಿಯೋ ಕಳುಹಿಸಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಮತ್ತು ಈ ಪ್ರಕರಣ ಸಂಬಂಧ ಮತ್ತು ಆರ್‍ಟಿ ನಗರದಲ್ಲಿ ನೆಲೆಸಿರುವ ಮತ್ತೋರ್ವ ಅಸ್ಟ್ರಾಲಜಿಸ್ಟ್ ಪುತ್ರನನ್ನು ಸಹ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಆರೋಪಿಗಳಿಗೂ ನಿಶಾಂತ್‍ಗೂ ಈ ಹಿಂದೆಯೇ ಪರಿಚಯವಿದ್ದು, ಸಾಕಷ್ಟು ವರ್ಷಗಳಿಂದ ರಾಹುಲ್ ಭಟ್, ಶಾಸಕರ ಪುತ್ರಿ ಮತ್ತು ನಿಶಾಂತ್ ಜೊತೆಯಲ್ಲಿಯೇ ಇದ್ದರು. ಶಾಸಕರ ಮಗಳಿಗೂ ನಿಶಾಂತ್ ಇಬ್ಬರು ಆಪ್ತ ಸ್ನೇಹಿತರಾಗಿದ್ದು, ಈ ಮಧ್ಯೆ ನಿಶಾಂತ್ ಬೇರೊಬ್ಬರ ಜೊತೆ ಓಡಾಟ ಶುರು ಮಾಡಿದ್ದರು. ಇದನ್ನು ಸಹಿಸಲಾಗದೇ ಎಸ್.ಟಿ ಸೋಮಶೇಖರ್ ಅವರ ಮಾಜಿ ಗನ್ ಮ್ಯಾನ್ ಬಳಸಿಕೊಂಡು ಈ ಕೃತ್ಯವೆಸಲಾಗಿದೆ ಎನ್ನಲಾಗುತ್ತಿದೆ.

    ಸದ್ಯ ಈ ಪ್ರಕರಣ ಸಂಬಂಧ ಶಾಸಕರ ಪುತ್ರಿಯ ವಿಚಾರಣೆ ನಡೆಸಲು ಪೊಲೀಸರು ಹುಡುಕಾಟ ನಡೆಸುತ್ತಿದ್ದು, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

  • S.T. ಸೋಮಶೇಖರ್ ಪುತ್ರನಿಗೆ ನಕಲಿ ಅಶ್ಲೀಲ ವೀಡಿಯೋ ಬ್ಲ್ಯಾಕ್‍ಮೇಲ್

    S.T. ಸೋಮಶೇಖರ್ ಪುತ್ರನಿಗೆ ನಕಲಿ ಅಶ್ಲೀಲ ವೀಡಿಯೋ ಬ್ಲ್ಯಾಕ್‍ಮೇಲ್

    ಬೆಂಗಳೂರು: ಬಿಜೆಪಿ ಸಚಿವ ಎಸ್.ಟಿ.ಸೋಮಶೇಖರ್ ಪುತ್ರನಿಗೆ ನಕಲಿ ಅಶ್ಲೀಲ ವೀಡಿಯೋ ಕಳುಹಿಸಿ ಅಪರಿಚಿತರು ಬ್ಲಾಕ್ ಮೇಲ್ ಮಾಡಿದ್ದಾರೆ.

    ಎಸ್.ಟಿ.ಸೋಮಶೇಖರ್ ಪುತ್ರ ನಿಶಾಂತ್‍ಗೆ ನಕಲಿ ವೀಡಿಯೋ ಸೃಷ್ಟಿಸಿ ಹಣಕ್ಕೆ ಅಪರಿಚಿತರು ಬ್ಲಾಕ್ ಮೇಲ್ ಮಾಡುತ್ತಿದ್ದರು. ಈ ಹಿನ್ನೆಲೆ ಆಡುಗೋಡಿಯಲ್ಲಿರುವ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿಶಾಂತ್ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ವಾಮಾಚಾರ ನಡೆಸಿ ಮನೆಯ ಬೆಡ್ ರೂಂನ ಮಣ್ಣಿನಡಿಯಲ್ಲಿ ನಿಧಿಗಾಗಿ ಶೋಧ – ಇಬ್ಬರ ಬಂಧ

    ನಾನು ರಾಜಕೀಯವಾಗಿ ಬಿಜೆಪಿ ಪಕ್ಷದಿಂದ ಗುರುತಿಸಿಕೊಂಡಿದ್ದೇನೆ. ನನ್ನ ಮತ್ತು ನನ್ನ ತಂದೆ ರಾಜಕೀಯ ಬೆಳವಣಿಗೆ ಸಹಿಸದ ಕೆಲವು ದುಷ್ಕರ್ಮಿಗಳು ರಾಜಕೀಯವಾಗಿ ನಮ್ಮನ್ನು ಮುಗಿಸಬೇಕೆಂಬ ದುರುದ್ದೇಶದಿಂದ ಈ ಕೃತ್ಯವೆಸಗಿದ್ದಾರೆ. ಯಾರೋ ಮಹಿಳೆಯ ಜೊತೆಯಲ್ಲಿರುವಂತೆ ಆಶ್ಲೀಲವಾದ ನಕಲಿ ವೀಡಿಯೋ ಸೃಷ್ಟಿಸಿ ನನ್ನನ್ನು ನೇರವಾಗಿ ಟಾರ್ಗೆಟ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.  ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್, ಹೆಣ್ಣು-ಗಂಡೆಂಬ ಭೇದ ಕೊರೊನಾಗೆ ಇಲ್ಲ: ಆನಂದ್ ಸಿಂಗ್

    ವೀಡಿಯೋ ಮತ್ತು ಫೋಟೋಸ್‍ಗಳನ್ನು ನನ್ನ ತಂದೆಯ ಪಿಎ ಶೀನಿವಾಸಗೌಡ ಮತ್ತು ಭಾನುಪ್ರಕಾಶ್ ಅವರಿಗೆ ಕಳುಹಿಸಿದ್ದಾರೆ. ವಾಟ್ಸಾಪ್ ಮೂಲಕ ಪದೇ, ಪದೇ ಮೇಸೆಜ್‍ಗಳನ್ನು ಕಳುಹಿಸಿ ತಾವು ಕೇಳಿದಷ್ಟು ಹಣವನ್ನು ಕೊಡಬೇಕೆಂದು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಹಣವನ್ನು ನೀಡದಿದ್ದಲ್ಲಿ ಅಶ್ಲೀಲ ವೀಡಿಯೋ ಹಾಗೂ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಡುವುದಾಗಿ ಬೆದರಿಕೆಯೊಡ್ಡಿದ್ದಾರೆ.

    ನನ್ನ ಹಾಗೂ ನಮ್ಮ ತಂದೆಯ ರಾಜಕೀಯ ಭವಿಷ್ಯವನ್ನು ಮುಗಿಸುವುದಾಗಿಯೂ ಸಹ ಬೆದರಿಕೆ ಹಾಕಿದ್ದು, ಈ ಸಂಚಿನ ಹಿಂದೆ ತುಂಬಾ ಪ್ರಭಾವಶಾಲಿ ವ್ಯಕ್ತಿಗಳು ಭಾಗಿಯಾಗಿರುವ ಸಾಧ್ಯತೆ ಇದೆ. ಕೆಲ ದುಷ್ಕರ್ಮಿಗಳು, ನಮಗೆ ತೊಂದರೆ ನೀಡಬೇಕೆಂಬ ದುರುದ್ದೇಶದಿಂದ ಈ ರೀತಿ ಸಂಚು ರೂಪಿಸಿದ್ದಾರೆ. ಆ ಆಸಾಮಿಗಳ ಪತ್ತೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಮನವಿಮಾಡಿದ್ದಾರೆ.