Tag: #Nishannanaiah

  • ಮುಗ್ದ ಗಂಡಂದಿರ ಪಾಲಿಗೆ ಉಡುಗೊರೆಯಾಗಲಿದೆಯಾ ಈ ವೆಡ್ಡಿಂಗ್ ಗಿಫ್ಟ್?

    ಮುಗ್ದ ಗಂಡಂದಿರ ಪಾಲಿಗೆ ಉಡುಗೊರೆಯಾಗಲಿದೆಯಾ ಈ ವೆಡ್ಡಿಂಗ್ ಗಿಫ್ಟ್?

    ಟೈಟಲ್ ಮೂಲಕವೇ ಚಂದನವನದಲ್ಲೊಂದು ನಿರೀಕ್ಷೆಯನ್ನ ಹುಟ್ಟುಹಾಕಿರುವ ಚಿತ್ರ ವೆಡ್ಡಿಂಗ್ ಗಿಫ್ಟ್. ಈ ಚಂದದ ಕ್ಯಾಚಿ ಹೆಸರನ್ನ ಕೇಳಿದಾಕ್ಷಣ ಇದ್ಯಾವ ಗಿಫ್ಟ್ ಕೊಡ್ತಿದ್ದಾರೆ ನಿರ್ದೇಶಕ ವಿಕ್ರಂ ಪ್ರಭು ಅಂತ ಕೇಳಿದ್ದ ಪ್ರೇಕ್ಷಕರಿಗೆ ಉತ್ತರವಾಗಿ ಟೀಸರ್ ಮತ್ತು ಟ್ರೈಲರ್ ಗಿಫ್ಟ್ ಕೊಟ್ಟು ಕಥೆಯ ಜಾಡಿನ ಬಗ್ಗೆ ಸುಳಿವು ಕೊಟ್ಟಿದ್ದರು.

    ಅದರಂತೆ ಹೇಳೋದಾದ್ರೆ, ಕಾನೂನಿನಲ್ಲಿ ಎಲ್ಲದಕ್ಕೂ ಕಾಯ್ದೆಗಳಿದೆ. ಆದ್ರೆ ಕಾಯ್ದೆ ಕಾನೂನುಗಳೇ ಕೆಲವರ ದುರ್ಬಳಕೆಗೆ ಒಳಗಾಗಿ ಅದರಿಂದ ನೊವುಂಡವರು ಹಲವರಿದ್ದಾರೆ. ಕಾನೂನಿನ ಕಣ್ಣಿಗೆ ಮಣ್ಣೆರಚಿದ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಆದ್ರೆ ವೆಡ್ಡಿಂಗ್ ಗಿಫ್ಟ್‌ನಲ್ಲಿ ಸೆಕ್ಷನ್ 498 Aನ ದುರ್ಬಳಕೆ ಬಗ್ಗೆ ಹೇಳಲಾಗಿದೆ. ಹೆಣ್ಣುಮಕ್ಕಳ ರಕ್ಷಣೆ ವಿಚಾರವಾಗಿ ಇರುವ ಈ ಕಾಯ್ದೆ ಹೆಣ್ಣೊಬ್ಬಳು ಜಿದ್ದಿಗೆ ಬಿದ್ದು ಮುಗ್ದ ಗಂಡನ ಮೇಲೆ ಕಾನೂನಾತ್ಮಕವಾಗಿ ಎಸಗುವ ದೌರ್ಜನ್ಯದ ಬಗ್ಗೆ ವೆಡ್ಡಿಂಗ್ ಗಿಫ್ಟ್ ಹೇಳಹೊರಟಿದ್ದು, ಈ ಮೂಲಕ ಸಮಾಜಕ್ಕೊಂದು ಸಂದೇಶದೊಂದಿಗೆ ಅರಿವು, ಜಾಗೃತಿ ಮೂಡಿಸುವ ಕೆಲಸಕ್ಕೆ ವಿಕ್ರಂ ಪ್ರಭು ನಿಂತಿದ್ದಾರೆ. ಸೀರಿಯಸ್ ವಿಚಾರಗಳನ್ನ ಚಿತ್ರ ಹೊತ್ತಿದೆಯಾದ್ರೂ, ಕಮರ್ಷಿಯಲ್ ಎಳೆಯೊಂದಿಗೆ, ಮನರಂಜನಾ ಅಂಶವನ್ನು ಹೊಂದಿದೆ.

    ಪ್ರೀತಿ, ಮದುವೆ, ಸಾವಿರ ಕನಸುಗಳು, ಯಾವುದೋ ವೈಮನಸ್ಸು, ಪ್ರೀತಿ ಇರಬೇಕಾದ ಕಡೆ ಜಗಳ-ದ್ವೇಷ, ಕಡೆಗೆ ಇವೆಲ್ಲಕ್ಕಿಂತಲೂ ಹಣ ಮುಖ್ಯವಾಗಿ, ಮಾಡದ ತಪ್ಪಿಗೆ ಗಂಡನಾದವನನ್ನು ಜೈಲಿಗಟ್ಟುವ ಹೆಣ್ಣೊಬ್ಬಳ ಗುರಿ ಈ ಚಿತ್ರದಲ್ಲಿ ಗರಿ ಬಿಚ್ಚತ್ತೆ. ಇದರಂತೆ, ಸುಳ್ಳಿನ ಸರಮಾಲೆಗಳ ಪರ ವಾದಿಸುವ ವಕೀಲರು, ಸತ್ಯಕ್ಕೆ ತಡವಾಗಿ ಆದರೂ ಜಯ ಲಭಿಸತ್ತೋ ಇಲ್ಲವೋ ಎಂಬಿತ್ಯಾದಿ ಪ್ರಶ್ನೆ. ಅಷ್ಟಕ್ಕೂ ಚಂದದ ಸಂಸಾರದಲ್ಲಿ ಈ ಹುಳುಕಿಗೆ ಕಾರಣವಾದ ಅಂಶದ ಹುಡುಕಾಟ ಇವೆಲ್ಲವೂ ಟ್ರೈಲರ್ ತುಣುಕಲ್ಲಿ ಕಂಡಿದೆಯಾದ್ರೂ, ನಿರ್ದೇಶಕರು ಮಾತ್ರ ಚಿತ್ರ ರಿಲೀಸ್ ನಂತ್ರವೇ ಇವೆಲ್ಲಕ್ಕೂ ಉತ್ತರ ಅನ್ನೋದನ್ನ ಜಾಣ್ಮೆಯಿಂದ ಕಾಪಾಡಿಟ್ಟುಕೊಂಡಿದ್ದಾರೆ. ಇದನ್ನೂ ಓದಿ: ಕರ್ನಾಟಕ ಮೂಲದ ಬೆಡಗಿಗೆ ಮಿಸ್ ಇಂಡಿಯಾ ವರ್ಲ್ಡ್ ಕಿರೀಟ – ಯಾರು ಈ ಸಿನಿ ಶೆಟ್ಟಿ?

    ಗಾಂಧಿನಗರದ ಹಲವು ಪ್ರತಿಭಾವಂತ ನಿರ್ದೇಶಕರ ಬಳಿ ಪಳಗಿರುವ ವಿಕ್ರಂ ಪ್ರಭು ಆಕ್ಷನ್ ಕಟ್ ಹೇಳುವುದರ ಜೊತೆಗೆ ಸಿನಿಮಾ ನಿರ್ಮಾಣದ ಜವಬ್ದಾರಿಯನ್ನು ಹೊತ್ತಿದ್ದು, ವಿಕ್ರಂ ಪ್ರಭು ಫಿಲಂಸ್ ಲಾಂಛನದಲ್ಲಿ ಚಿತ್ರ ನಿರ್ಮಾಣವಾಗಿದೆ. ಚಿತ್ರದ ನಾಯಕಿಯಾಗಿ ಸೋನುಗೌಡ, ನಿಶಾನ್ ನಾಯಕನಾಗಿ ನಟಿಸಿದರೆ, ಹಿರಿಯ ನಟಿ ಪ್ರೇಮಾ ಲಾಯರ್ ಆಗಿ ಈ ಚಿತ್ರದಲ್ಲಿ ಸತ್ಯದ ಪರ ವಾದ ಮಾಡುವ ಪಾತ್ರದಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ. ಅಚ್ಯುತ ಕುಮಾರ್ ಸುಳ್ಳಿನ ಪರ ವಾದ ಮಂಡಿಸುವ ವಕೀಲರಾಗಿ ಗಮನ ಸೆಳೆಯಲಿದ್ದು, ಪವಿತ್ರ ಲೋಕೇಶ್ ಸೇರಿದಂತೆ ಹಲವರು ನುರಿತ ಕಲಾವಿದರ ಬಳಗ ವೆಡ್ಡಿಂಗ್ ಗಿಫ್ಟ್‌ನ ಭಾಗವಾಗಿದ್ದಾರೆ. ಇದನ್ನೂ ಓದಿ: ಸುದೀಪ್‌ಗೆ ಅವಹೇಳನ ಮಾಡಿದವನಿಗೆ ನಂದಕಿಶೋರ್ ತರಾಟೆ – ನೀನು ಗಂಡಸಾಗಿದ್ರೆ ಸಾಕ್ಷಿ ಸಮೇತ ಪ್ರೂವ್ ಮಾಡು ಎಂದ ನಿರ್ದೇಶಕ

    ಇನ್ನುಳಿದಂತೆ ಉದಯ್‌ಲೀಲಾ ಛಾಯಾಗ್ರಹಣ, ಬಾಲಚಂದ್ರ ಪ್ರಭು ಸಂಗೀತ ನಿರ್ದೇಶನ, ವಿಜೇತ್ ಚಂದ್ರ ಸಂಕಲನ ವೆಡ್ಡಿಂಗ್ ಗಿಫ್ಟ್ ಚಿತ್ರಕ್ಕಿದ್ದು, ನೈಜ ಘಟನಾವಳಿಗಳ ಸುತ್ತ ಸುಳಿದು, ಸಂದೇಶ ಸಾರುವ ವೆಡ್ಡಿಂಗ್ ಗಿಫ್ಟ್ ಜುಲೈ 8ಕ್ಕೆ ರಾಜ್ಯಾದ್ಯಂತ ತೆರೆಕಾಣಲಿದೆ.

    Live Tv
    [brid partner=56869869 player=32851 video=960834 autoplay=true]

  • ಕೌಟುಂಬಿಕ ಕಲಹ, ಸ್ತ್ರೀ ರಕ್ಷಣೆ ಕಾನೂನುಗಳೇ ಪುರುಷರಿಗೆ ಮಾರಕ – ಇದು ವೆಡ್ಡಿಂಗ್ ಗಿಫ್ಟ್ ಟ್ರೇಲರ್ ಝಲಕ್!

    ಕೌಟುಂಬಿಕ ಕಲಹ, ಸ್ತ್ರೀ ರಕ್ಷಣೆ ಕಾನೂನುಗಳೇ ಪುರುಷರಿಗೆ ಮಾರಕ – ಇದು ವೆಡ್ಡಿಂಗ್ ಗಿಫ್ಟ್ ಟ್ರೇಲರ್ ಝಲಕ್!

    ಹೇಳಿಕೇಳಿ ಇದು ಪ್ರಯೋಗಾತ್ಮಕ ಸಿನಿಮಾಗಳ ಯುಗ. ಅದರ ಮುಂದುವರೆದ ಭಾಗವಾಗಿ ತಯಾರಾಗಿರುವ ಸಿನಿಮಾ ವೆಡ್ಡಿಂಗ್ ಗಿಫ್ಟ್. ಹೊಡಿಬಡಿ ಸಿನಿಮಾಗಳ ಮಧ್ಯೆ ಸಮಾಜಕ್ಕೊಂದು ಉತ್ತಮ ಸಂದೇಶ ಕೊಡುವ, ಜನರಿಗೆ ಕಾನೂನುಗಳ ಬಗ್ಗೆ ಅರಿವೂ ಮುಡಿಸುವ, ಫ್ಯಾಮಿಲಿ, ಪ್ರೀತಿ, ಪ್ರೇಮ, ಮದುವೆ, ಪತಿ-ಪತ್ನಿ, ಕೋರ್ಟ್ ಡ್ರಾಮಾ ಹೀಗೆ ಎಲ್ಲಾ ಅಂಶಗಳನ್ನು ಹದವಾಗಿ ಬೆರೆಸಿ ತಯಾರಾಗಿರುವ ಸಿನಿಮಾ ವೆಡ್ಡಿಂಗ್ ಗಿಫ್ಟ್.

    ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ತನ್ನ ಘಮಲು ಪಸರಿಸಿರುವ ವೆಡ್ಡಿಂಗ್ ಗಿಫ್ಟ್ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ವೆಡ್ಡಿಂಗ್ ಗಿಫ್ಟ್ ಸಿನಿಮಾದ ಟ್ರೇಲರ್ ಪರಿಣಾಮಕಾರಿಯಾಗಿ ಮೂಡಿಬಂದಿದೆ. ನಮ್ಮ ಸುತ್ತಮುತ್ತ ನಡೆಯುವ ನೈಜ ಘಟನೆಯನ್ನು ಹೆಕ್ಕಿ ತೆಗೆದು ನಿರ್ದೇಶಕ ವಿಕ್ರಂ ಪ್ರಭು ಸಿನಿಮಾ ಮಾಡಿದ್ದಾರೆ. ನಿರ್ದೇಶನದ ಜೊತೆಗೆ ತಾವೇ ಸಿನಿಮಾಗೆ ಕಥೆ ಬರೆದು ನಿರ್ಮಾಣ ಮಾಡಿರುವ ವಿಕ್ರಂ ಪ್ರಭು, ಸ್ತ್ರೀ ರಕ್ಷಣೆಗೆ ಇರುವ ಕಾನೂನುಗಳು ಪುರುಷರಿಗೆ ಹೇಗೆಲ್ಲಾ ಮಾರಕವಾಗುತ್ತದೆ. ಆ ಕಾನೂನುಗಳನ್ನು ಸ್ತ್ರೀ ಹೇಗೆಲ್ಲಾ ದುರುಪಯೋಗಪಡಿಸಿಕೊಳ್ಳುತ್ತಾಳೆ? ಈ ಸಂಕಷ್ಟದಿಂದ ಪುರುಷ ಪಾರಾಗಲು ಎಷ್ಟೆಲ್ಲಾ ಹೆಣಗಾಟ ನಡೆಸಬೇಕು ಎಂಬ ಸೂಕ್ಷ್ಮ ಎಳೆಯನ್ನೂ ಅಷ್ಟೇ ಸೊಗಸಾಗಿ ಟ್ರೇಲರ್‌ನಲ್ಲಿ ಕಟ್ಟಿಕೊಡಲಾಗಿದೆ. ಇದನ್ನೂ ಓದಿ: ಕುಟುಂಬ ಕಲಹದ ಕಥೆ ಹೊತ್ತು ಬಂದ ವೆಡ್ಡಿಂಗ್ ಗಿಫ್ಟ್ ಟೀಸರ್

    ವೆಡ್ಡಿಂಗ್ ಗಿಫ್ಟ್ ಟ್ರೇಲರ್ ನೋಡ್ತಿದ್ರೆ ಸ್ಯಾಂಡಲ್‍ವುಡ್ ಅಂಗಳಕ್ಕೆ ಮತ್ತೊಬ್ಬ ಪ್ರತಿಭಾನ್ವಿತ ನಿರ್ದೇಶಕನ ಆಗಮನವಾದಂತಿದೆ. ಗಾಂಧಿನಗರದ ಅಂಗಳದ ಹಿರಿಯ ನಿರ್ದೇಶಕರ ಗರಡಿಯಲ್ಲಿ ಪಳಗಿರುವ ವಿಕ್ರಮ್ ಪ್ರಭು ಬಹು ವರ್ಷಗಳ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ. ಮೊದಲ ಬಾರಿಯೇ ಚಾಲೆಂಜಿಂಗ್ ಕಥೆಗೆ ಆಕ್ಷನ್ ಕಟ್ ಹೇಳಿದ್ದಾರೆ. ಅಷ್ಟೇ ನೈಜವಾಗಿ ಪ್ರತಿ ಪಾತ್ರಗಳು ಪ್ರೇಕ್ಷಕರನ್ನು ಆವರಿಸಿಬಿಡುತ್ತವೆ. ಲಾಯರ್‌ಗಳಾಗಿ ಪ್ರೇಮಾ ಹಾಗೂ ಅಚ್ಯುತ್ ಕುಮಾರ್ ತಮ್ಮ ವಾದವನ್ನು ಅಚ್ಚುಕಟ್ಟಾಗಿ ಮಂಡಿಸಿದ್ದಾರೆ. ತನ್ನ ಹೆಂಡತಿಯಿಂದಲೇ ಸಂಕಷ್ಟಕ್ಕೆ ಸಿಲುಕುವ ಪತಿಯಾಗಿ ನಿಶಾನ್, ಗಂಡನನ್ನೇ ದ್ವೇಷಿಸುವ ನಾಯಕಿಯಾಗಿ ಸೋನು ಗೌಡ ನಟಿಸಿದ್ದಾರೆ. ವಿಕ್ರಂ ಪ್ರಭು ಫಿಲ್ಮಂಸ್ ಬ್ಯಾನರ್ ನಡಿ ನಿರ್ಮಾಣ ಮಾಡಿರುವ ವೆಡ್ಡಿಂಗ್ ಗಿಫ್ಟ್ ಸಿನಿಮಾಗೆ ಉದಯ್ ಲೀಲಾ ಕ್ಯಾಮೆರಾ, ಬಾಲಚಂದ್ರ ಪ್ರಭು ಸಂಗೀತ ನಿರ್ದೇಶನ, ವಿಜೇತ್ ಚಂದ್ರ ಸಂಕಲನ ಸಿನಿಮಾಕ್ಕಿದೆ. ಸದ್ಯ ಸ್ಯಾಂಪಲ್ಸ್‌ನಲ್ಲಿ ನಿರೀಕ್ಷೆ ಹೆಚ್ಚಿಸಿರುವ ವೆಡ್ಡಿಂಗ್ ಗಿಫ್ಟ್ ಸಿನಿಮಾ ಜುಲೈ 8 ರಂದು ತೆರೆಗೆ ಬರ್ತಿದೆ.

    Live Tv

  • ಕುಟುಂಬ ಕಲಹದ ಕಥೆ ಹೊತ್ತು ಬಂದ ವೆಡ್ಡಿಂಗ್ ಗಿಫ್ಟ್ ಟೀಸರ್

    ಕುಟುಂಬ ಕಲಹದ ಕಥೆ ಹೊತ್ತು ಬಂದ ವೆಡ್ಡಿಂಗ್ ಗಿಫ್ಟ್ ಟೀಸರ್

    ಕೆಲವೊಂದಷ್ಟು ಸಿನಿಮಾಗಳು ಟೈಟಲ್‍ಗಳಿಂದ, ಮತ್ತೊಂದಷ್ಟು ಸಿನಿಮಾಗಳು ಸ್ಯಾಂಪಲ್ಸ್‍ನಲ್ಲಿಯೇ ಪ್ರೇಕ್ಷಕರನ್ನು ಆಕರ್ಷಿಸುತ್ತವೆ. ಆದರೆ ವೆಡ್ಡಿಂಗ್ ಗಿಫ್ಟ್ ಸಿನಿಮಾ ಈ ಎರಡು ಬಗೆಯಿಂದಲೂ ಚಿತ್ರರಸಿಕರನ್ನು ಸೆಳೆಯುತ್ತಿದೆ. ಅದರಲ್ಲಿಯೂ ಈಗಷ್ಟೇ ಯೂಟ್ಯೂಬ್ ಪ್ರಪಂಚಕ್ಕೆ ಲಗ್ಗೆ ಇಟ್ಟ ವೆಡ್ಡಿಂಗ್ ಗಿಫ್ಟ್ ಟೀಸರ್ ಸಿನಿಮಾದ ಗಟ್ಟಿತನವನ್ನು ತೋರಿಸಿದೆ.

    ಮದುವೆ ನಂತರ ಗಂಡ-ಹೆಂಡತಿ ಸಂಬಂಧದಲ್ಲಿ ಬಿರುಕು ಮೂಡುವುದು. ನಾನು ಎಂಬುವುದು ಸಂಸಾರದಲ್ಲಿ ಬಂದಾಗ ಅದು ಯಾವೆಲ್ಲಾ ರೀತಿ ಬದುಕಿಗೆ ತಿರುವು ನೀಡುತ್ತದೆ. ತಮ್ಮ ರಕ್ಷಣೆಗಾಗಿ ಇರುವ ಕಾನೂನುಗಳನ್ನು ಬಳಸಿಕೊಂಡು ಗಂಡು ಮಕ್ಕಳಿಗೆ ಹೇಗೆಲ್ಲಾ ಹೆಣ್ಣುಮಕ್ಕಳು ಹಿಂಸೆ ನೀಡುತ್ತಾರೆ ಎಂಬ ಸೂಕ್ಷ್ಮ ಕಂಟೆಂಟನ್ನು ಟೀಸರ್‍ನಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆ. ಇದನ್ನೂ ಓದಿ: ಕನ್ನಡದ ಬಹುತೇಕ ದಿಗ್ಗಜರ ಜೊತೆ ನಟಿಸಿರುವ ನಟ ಉದಯ್ ಹುತ್ತಿನಗದ್ದೆ ನಿಧನ

    ವಿಕ್ರಂ ಪ್ರಭು ಚೊಚ್ಚಲ ನಿರ್ದೇಶನವಾದರೂ ಪಳಗಿದ ನಿರ್ದೇಶಕನಂತೆ ತಮ್ಮ ಚಾಕಚಕ್ಯತೆ ತೋರಿಸಿದ್ದು, ನಿರ್ದೇಶನದ ಜೊತೆಗೆ ಸಿನಿಮಾ ನಿರ್ಮಾಣದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡು ನಿಭಾಯಿಸಿದ್ದಾರೆ. ಸೋನು ಗೌಡ, ನಿಶಾನ್ ನಾಣಯ್ಯ ನಾಯಕಿ-ನಾಯಕನಾಗಿ ಅಭಿನಯಿಸಿದ್ದು, ಪವಿತ್ರಾ ಲೋಕೇಶ್, ಅಚ್ಯುತ್ ಕುಮಾರ್ ಸೇರಿದಂತೆ ಅನುಭವಿ ಕಲಾಬಳಗ ಈ ಸಿನಿಮಾದಲ್ಲಿದೆ. ಇದನ್ನೂ ಓದಿ: ಅಣ್ಣಾವ್ರ ಕುಟುಂಬದ ಜೊತೆಗಿನ ನೆನಪು ಹಂಚಿಕೊಂಡ ಕಮಲ್ ಹಾಸನ್

    ಸ್ಯಾಂಡಲ್‍ವುಡ್‍ನಿಂದ ಕೆಲ ವರ್ಷ ದೂರವೇ ಉಳಿದಿದ್ದ ಪ್ರೇಮಾ ವೆಡ್ಡಿಂಗ್ ಗಿಫ್ಟ್ ಮೂಲಕ ಮತ್ತೆ ವಾಪಸ್ ಆಗಿದ್ದು, ಲಾಯರ್ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಹಾಜರಾಗಲಿದ್ದಾರೆ. ಬಾಲಚಂದ್ರ ಪ್ರಭು ಸಂಗೀತ ನಿರ್ದೇಶನ, ಉದಯಲೀಲ ಛಾಯಾಗ್ರಹಣ ಹಾಗೂ ವಿಜೇತ್ ಚಂದ್ರ ಸಂಕಲನ ಸಿನಿಮಾಕ್ಕಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಹಾಡುಗಳ ಹವಾ ಹಾಗೇ ಇರುವ ಹೊತ್ತಿನಲ್ಲಿ ವೆಡ್ಡಿಂಗ್ ಗಿಫ್ಟ್ ಅಂಗಳದಿಂದ ಹೊರ ಬಂದಿರುವ ಟೀಸರ್ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.