Tag: Nirmalandanatha Swamiji

  • ನನ್ನ ಮಗಳನ್ನು ರೈತಳನ್ನಾಗಿ ಮಾಡುವೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

    ನನ್ನ ಮಗಳನ್ನು ರೈತಳನ್ನಾಗಿ ಮಾಡುವೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

    ಹಾಸನ: ನಾನು ಬಾರ್ಬರ್ ಆಗಲಿಕ್ಕೂ ರೆಡಿ ಇದ್ದೇನೆ. ನನ್ನ ಮಗಳನ್ನು ರೈತಳನ್ನಾಗಿ ಮಾಡುವೆ. ನೀವೆಲ್ಲರೂ ಡಾಕ್ಟರ್ ಎಂಜಿನಿಯರ್ ಆಗುತ್ತೀನಿ ಅಂದುಕೊಳ್ಳಬೇಡಿ. ಬೇರೆ ಬೇರೆ ಕೆಲಸಗಳ ಬಗ್ಗೆ ಕಡೆಗಣಿಸಬೇಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

    ನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದಿನ ಮಕ್ಕಳು ಎಂಜಿನಿಯರ್, ಡಾಕ್ಟರ್, ಐಎಎಸ್, ಐಪಿಎಸ್ ಅಧಿಕಾರಿ ಆಗಬೇಕೆಂದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಲ್ಲಾ ರೀತಿಯ ಉದ್ಯೋಗಳಲ್ಲೂ ಉತ್ತಮ ಭವಿಷ್ಯವಿದೆ. ಎಲ್ಲರೂ ಉನ್ನತ ಹುದ್ದೆಗೆ ಸೇರಿದರೆ ಕೃಷಿ ಮಾಡುವವರು ಯಾರು? ಮುಂದಿನ ದಿನಗಳಲ್ಲಿ ಬಾರ್ಬರ್ ಗೂ ಹೆಚ್ಚಿನ ಬೇಡಿಕೆ ಬರಲಿದೆ ಎಂದು ಹೇಳಿದ್ದಾರೆ.

    ಇಂತಹ ಉದ್ಯೋಗ ಮೇಲೂ ಈ ಕೆಲಸ ಕೀಳು. ಇವರು ಇದೇ ಕೆಲಸ ಮಾಡಬೇಕಿಂದಿಲ್ಲ. ಅವರವರ ಕೆಲಸದಲ್ಲಿ ಯಶಸ್ಸಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನನ್ನ ಮಗಳನ್ನು ರೈತಳನ್ನಾಗಿ ಮಾಡುವೆ. ಹಾಸನದಲ್ಲಿ ನಾನು ಕರ್ತವ್ಯ ನಿರ್ವಹಿಸಿರುವುದು ಅತ್ಯಂತ ಸಂತಸ ತಂದಿದೆ. ಇಡೀ ರಾಜ್ಯದಲ್ಲಿ ನನ್ನಷ್ಟು ಸಂತೋಷವಾಗಿ ಕೆಲಸ ನಿರ್ವಹಿಸಿದ ಐಪಿಎಸ್ ಅಧಿಕಾರಿ ಇಲ್ಲ ಎಂದು ಸಂತಸ ವ್ಯಕ್ತಪಡಿಸದರು. ಈ ಸಂದರ್ಭದಲ್ಲಿ ಶ್ರೀ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉಪಸ್ಥಿತರಿದ್ದರು.

  • ಸಂತರ ಕೆಲ್ಸ ಸಂತರು ಮಾಡ್ಬೇಕು, ಸರ್ಕಾರದ ಕೆಲ್ಸ ಸರ್ಕಾರ ಮಾಡ್ಬೇಕು, ಮಠ ವಶಕ್ಕೆ ಪಡೆಯೋ ದುಸ್ಸಾಹಸ ಬೇಡ- ನಿರ್ಮಲಾನಂದ ಸ್ವಾಮೀಜಿ

    ಸಂತರ ಕೆಲ್ಸ ಸಂತರು ಮಾಡ್ಬೇಕು, ಸರ್ಕಾರದ ಕೆಲ್ಸ ಸರ್ಕಾರ ಮಾಡ್ಬೇಕು, ಮಠ ವಶಕ್ಕೆ ಪಡೆಯೋ ದುಸ್ಸಾಹಸ ಬೇಡ- ನಿರ್ಮಲಾನಂದ ಸ್ವಾಮೀಜಿ

    ಬೆಂಗಳೂರು: ಮಠ ಮಾನ್ಯಗಳ ಸುಪರ್ದಿಗೆ ಸರ್ಕಾರದ ಸುತ್ತೋಲೆ ವಿಚಾರವಾಗಿ ಸರ್ಕಾರದ ನಡೆಯ ವಿರುದ್ಧ ಆದಿಚುಂಚನಗಿರಿಯ ನಿರ್ಮಾಲಾನಂದನಾಥ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸುತ್ತೋಲೆಯನ್ನು ವಾಪಸ್ ಪಡೆದಿರುವ ಬಗ್ಗೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಬಹುಶಃ ಸಾರ್ವಜನಿಕರಲ್ಲಿ ಎದ್ದಿದ್ದ ಗೊಂದಲ, ಆತಂಕ ನಿವಾರಣೆಯಾಗಿದೆ. ಈ ರೀತಿಯ ಪ್ರಯತ್ನವನ್ನು ಯಾವ ಕಾಲಕ್ಕೂ ಮಾಡಬಾರದು ಎಂದರು.

    ಸಂತರು ಮಾಡುವ ಕೆಲಸವೇ ಬೇರೆ. ಸರ್ಕಾರ ಮಾಡುವ ಕೆಲಸವೇ ಬೇರೆ. ಆ ದೃಷ್ಟಿಯಿಂದ ಸಂಸ್ಕತಿಯನ್ನ, ಆಧ್ಯತ್ಮವನ್ನು, ಅರಿವನ್ನ ಮತ್ತು ತಿಳಿವಳಿಕೆಯನ್ನು ಕೊಡಲು ಹೊರಟ್ಟಿದ್ದ ಮಠಗಳ ಕೆಲಸವನ್ನು ಸ್ವತಂತ್ರವಾಗಿ ಮಾಡಲು ಬಿಡಬೇಕು. ಮುಂದೆ ಇಂತಹ ದುಸ್ಸಾಸಹಕ್ಕೆ ಕೈ ಹಾಕಬಾರದು. ಈಗಾಗಲೇ ಸಿದ್ದರಾಮಯ್ಯ ಅವರ ಈ ವಿಚಾರದ ಬಗ್ಗೆ ಸುತ್ತೋಲೆಯನ್ನು ವಾಪಸ್ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಆದ್ದರಿಂದ ಈ ವಿವಾದ ಮುಗಿದಿದೆ ಎಂದು ನಿರ್ಮಲಾನಂದ ಸ್ವಾಮೀಜಿ ಹೇಳಿದ್ರು.

    ಗುರುವಾರದಂದು ಪರಿಷತ್ ನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಯಾವುದೇ ಮಠ, ಮಾನ್ಯಗಳನ್ನು ವಶಪಡಿಸಿಕೊಳ್ಳುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಧಾರ್ಮಿಕ ದತ್ತಿ ಇಲಾಖೆಯ ಆದೇಶವನ್ನು ಈ ಕೂಡಲೇ ಹಿಂದೆ ಪಡೆಯುವುದಾಗಿ ಹೇಳಿದರು. ಹೈಕೋರ್ಟ್ ವಿಭಾಗಿಯ ಪೀಠದ ಆದೇಶದಂತೆ ಸಮಿತಿ ರಚನೆ ಮಾಡಿ ಸಾರ್ವಜನಿಕರ ಅಭಿಪ್ರಾಯಕ್ಕೆ ಸರ್ಕಾರ ಮುಂದಾಗಿತ್ತು. ಮುಜರಾಯಿ ಇಲಾಖೆಯ ದೇವಸ್ಥಾನಗಳನ್ನು ಹೊರತುಪಡಿಸಿ ಬೇರೆಯವರ ಉಸಾಬರಿ ನಮಗೆ ಯಾಕೆ ಎಂದು ಪ್ರಶ್ನಿಸಿದರು.

    ಪರಿಷತ್ ಪ್ರತಿಪಕ್ಷದ ನಾಯಕ ಈಶ್ವರಪ್ಪ ಮಾತನಾಡಿ, ಇದು ತುಘಲಕ್ ಸರ್ಕಾರದ ರೀತಿ ನಡೆದುಕೊಳ್ಳುತ್ತಿದೆ. ಹಿಂದೂಗಳನ್ನ ಪದೇ ಪದೇ ಟಾರ್ಗೆಟ್ ಮಾಡುತ್ತಿದೆ. ಈ ಆದೇಶದಿಂದ ಮಠಾಧೀಶರಿಗೆ ಆಘಾತವಾಗಿದ್ದು ಸರ್ಕಾರ ಕೂಡಲೇ ಆದೇಶ ಹಿಂಪಡೆದು ಮಠಾಧೀಶರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಇದನ್ನು ಓದಿ:  ಮಠಗಳನ್ನು ಸರ್ಕಾರದ ಸುಪರ್ದಿಗೆ ಪಡೆಯುವುದಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ವಿರೋಧ

    ಇದು ತುಘಲಕ್ ಪಕ್ಷ ಎಂದು ಈಶ್ವರಪ್ಪ ಟೀಕಿಸಿದಾಗ 2007ರ ಮಾರ್ಚ್ 1 ರಂದು ರಾಮಾಜೋಯಿಸ್ ಅಧ್ಯಕ್ಷತೆಯ ಸಮಿತಿ ಇದೇ ರೀತಿ ಆದೇಶ ಮಾಡಿತ್ತು ಎಂದು ಸಿಎಂ ಉತ್ತರಿಸಿದರು. ಇದಕ್ಕೆ ಈಶ್ವರಪ್ಪ ಅಂದು ಸಮಿತಿ ಆದೇಶ ಮಾಡಿತ್ತು, ಇಂದು ಸರ್ಕಾರವೇ ಆದೇಶ ಮಾಡಿದೆ ಎಂದು ತಿರುಗೇಟು ನೀಡಿದರು. ಇದನ್ನು ಓದಿ: ಯಾವುದೇ ಮಠಗಳನ್ನು ವಶಪಡಿಸಿಕೊಳ್ಳುವ ಉದ್ದೇಶ ಸರ್ಕಾರಕ್ಕಿಲ್ಲ: ಸಿಎಂ