Tag: Nirmala Sitaraman

  • Budget 2022ರ ಪ್ರಮುಖಾಂಶಗಳು ಹೀಗಿವೆ…

    Budget 2022ರ ಪ್ರಮುಖಾಂಶಗಳು ಹೀಗಿವೆ…

    ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ 4ನೇ ಬಜೆಟ್‌ ಅನ್ನು ಇಂದು ಸಂಸತ್‌ನಲ್ಲಿ ಮಂಡಿಸಿದರು. 1 ಗಂಟೆ 32 ನಿಮಿಷಗಳ ಕಾಲ ಬಜೆಟ್‌ ಭಾಷಣವನ್ನು ಮಾಡಿದ್ದಾರೆ.

    ಈ ಬಾರಿಯ ಬಜೆಟ್‌ನಲ್ಲಿ ಮಧ್ಯಮ ವರ್ಗದವರು, ರೈತರು, ಮಹಿಳೆಯರನ್ನು ಕಡೆಗಣಿಸಲಾಗಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು, ಬಡವರ ಉನ್ನತಿಗೆ ಬಜೆಟ್‌ ಆದ್ಯತೆ ನೀಡಿದೆ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಬಡವರ ಕಲ್ಯಾಣವೇ ನಮ್ಮ ಆದ್ಯತೆ: ನರೇಂದ್ರ ಮೋದಿ

    ಬಜೆಟ್‌ನ 5 ಪ್ರಮುಖಾಂಶಗಳು…

    ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ:
    ಈ ಸಾಲಿನ ಬಜೆಟ್‌ನಲ್ಲಿ ಆದಾಯ ತೆರಿಗೆ ಮೇಲಿನ ಯಾವುದೇ ಬದಲಾವಣೆ ಇಲ್ಲ. ಸಹಕಾರಿ ಮತ್ತು ವೈಯಕ್ತಿಕ ಆದಾಯ ತೆರಿಗೆ ದರಗಳೂ ಬದಲಾಗದೆ ಹಾಗೇ ಉಳಿದಿವೆ.

    ಬಜೆಟ್‌ ವೆಚ್ಚ 39.5 ಲಕ್ಷ ಕೋಟಿ ರೂ.:
    ಈ ಸಾಲಿನ ಬಜೆಟ್‌ ವೆಚ್ಚ 39.5 ಲಕ್ಷ ಕೋಟಿ ರೂ. ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.7.4ರಷ್ಟು ಹೆಚ್ಚಿದೆ. 2021ರ ಹಣಕಾಸು ವರ್ಷದ ಬಜೆಟ್‌ ವೆಚ್ಚ 35.1 ಲಕ್ಷ ಕೋಟಿ ಇತ್ತು. 2020ರಲ್ಲಿ ಬಜೆಟ್‌ ವೆಚ್ಚ 37.7 ಲಕ್ಷ ಕೋಟಿ ರೂ. ಇತ್ತು. ಇದನ್ನೂ ಓದಿ: Budget 2022: ಯಾವುದು ಇಳಿಕೆ? ಯಾವುದು ಏರಿಕೆ?

    60 ಲಕ್ಷ ಮೇಕ್‌ ಇನ್‌ ಇಂಡಿಯಾ ಇದ್ಯೋಗ:
    ಮುಂದಿನ ಐದು ವರ್ಷಗಳಲ್ಲಿ 60 ಲಕ್ಷ ಹೊಸ ಉದ್ಯೋಗಗಳು ಮತ್ತು 30 ಲಕ್ಷ ಕೋಟಿ ಹೆಚ್ಚುವರಿ ಉತ್ಪಾದನೆಯನ್ನು ಸೃಷ್ಟಿಸುವ ಸಾಮರ್ಥ್ಯದೊಂದಿಗೆ ಆತ್ಮ ನಿರ್ಭರ್‌ ಭಾರತ್‌ ಸಾಧಿಸಲು ಪ್ರೊಡಕ್ಷನ್‌ ಲಿಂಕ್ಡ್‌ ಇನ್ಸೆಂಟಿವ್‌ (ಪಿಐಎಲ್‌) ಯೋಜನೆಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.

    ವರ್ಜುವಲ್‌ ಡಿಜಿಟಲ್‌ ಸ್ವತ್ತುಗಳ ವರ್ಗಾವಣೆಗೆ ಶೇ.30 ತೆರಿಗೆ:
    ವರ್ಜುವಲ್‌ ಡಿಜಿಟಲ್‌ ಸ್ವತ್ತುಗಳ ವರ್ಗಾವಣೆಯಿಂದ ಬರುವ ಯಾವುದೇ ಆದಾಯಕ್ಕೆ ಶೇ.30 ತೆರಿಗೆ ವಿಧಿಸಲಾಗುತ್ತದೆ. ವರ್ಚುವಲ್‌ ಸ್ವತ್ತುಗಳ ಉಡುಗೊರೆಗಳನ್ನು ಸ್ವೀಕರಿಸುವವರಿಗೆ ತೆರಿಗೆ ಹಾಕಲಾಗುವುದು. ಸ್ವಾಧೀನದ ವೆಚ್ಚವನ್ನು ಹೊರತುಪಡಿಸಿ ಅಂತಹ ಆದಾಯವನ್ನು ಲೆಕ್ಕಾಚಾರ ಮಾಡುವಾಗ ಯಾವುದೇ ಖರ್ಚು ಅಥವಾ ಭತ್ಯೆಗೆ ಸಂಬಂಧಿಸಿದಂತೆ ತೆರಿಗೆ ಕಡಿತವನ್ನು ಅನುಮತಿಸಲಾಗುವುದಿಲ್ಲ.

    RBI

    ಆರ್‌ಬಿಐನಿಂದ ಡಿಜಿಟಲ್‌ ಕರೆನ್ಸಿ ಪರಿಚಯ:
    ಡಿಜಿಟಲ್‌ ರುಪಿಯನ್ನು ಪರಿಚಯಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಮಂಡಿಸಿದೆ. ಬ್ಲಾಕ್‌ಚೈನ್‌ ಮತ್ತು ಇತರೆ ತಂತ್ರಜ್ಞಾನಗಳನ್ನು ಬಳಸಿಕೊಂಡು ಡಿಜಿಟಲ್‌ ರುಪಿಯನ್ನು ನೀಡಲಾಗುವುದು. ಪರಿಣಾಮಕಾರಿ ಮತ್ತು ಅಗ್ಗದ ಕರೆನ್ಸಿ ನಿರ್ವಹಣಾ ವ್ಯವಸ್ಥೆಗಾಗಿ ಇದನ್ನು 2022-23ರಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌ ಬಿಡುಗಡೆ ಮಾಡುತ್ತದೆ. ಇದನ್ನೂ ಓದಿ: ಮೋದಿ ಸರ್ಕಾರದ ಶೂನ್ಯ ಬಜೆಟ್: ರಾಹುಲ್ ಗಾಂಧಿ ವ್ಯಂಗ್ಯ

  • Union Budget: ದೇಶದ ಅಭಿವೃದ್ಧಿ: ಶ್ರೀರಾಮುಲು

    Union Budget: ದೇಶದ ಅಭಿವೃದ್ಧಿ: ಶ್ರೀರಾಮುಲು

    ಬಳ್ಳಾರಿ: ಕೇಂದ್ರ ಬಜೆಟ್ ಜನಪರ ಬಜೆಟ್ ಹಾಗೂ ದೇಶ ವೇಗವಾಗಿ ಬೆಳೆಯಲು ಅನುಕೂಲವಾಗುವ ಬಜೆಟ್ ಎಂದ ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.

    ಬಳ್ಳಾರಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಾಂಕ್ರಾಂಮಿಕ ಕಾಲದಲ್ಲೂ ಒಳ್ಳೆ ಬಜೆಟ್ ಮಂಡನೆ ಮಾಡಿದ್ದಾರೆ. ಪ್ರಧಾನಿ ಮೋದಿ ಹಾಗೂ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    100 ಕೋಟಿ ಜನರಿಗೆ ಲಸಿಕೆ ಕೊಟ್ಟು ಜನರ ಪ್ರಾಣ ಉಳಿಸಿದ್ದಾರೆ. ಈ ರೀತಿಯ ಕಷ್ಟ ಪರಿಸ್ಥಿತಿಯಲ್ಲಿ ಸಹ ಒಳ್ಳೆಯ ಬಜೆಟ್ ನೀಡಿದ್ದಾರೆ. ಈ ಬಜೆಟ್ ನಲ್ಲಿ ಮಾಹಿತಿ ತಂತ್ರಜ್ಞಾನ, ಐಟಿ ಬಿಟಿಗೆ ಒತ್ತು ಕೊಟ್ಟಿದ್ದಾರೆ ಎಂದರು.

    ರೈತಪರ ಅನೇಕ ಯೋಜನೆಗಳಿಂದ ರೈತ ಹಿತ ಕಾದಿದ್ದಾರೆ. ಇದರ ಜೊತೆಗೆ ಆರೋಗ್ಯಕ್ಕೆ, ಶಿಕ್ಷಣಕ್ಕೆ, ರಸ್ತೆ, ಸಾರಿಗೆ, ಮೂಲಭೂತ ಸಮಸ್ಯೆಗೆ ಸ್ಪಂದಿಸಿದ್ದಾರೆ. ರಕ್ಷಣಾ ಕ್ಷೇತ್ರದಲ್ಲಿ ಬದಲಾವಣೆ ಮಾಡಿದ್ದಾರೆ. ಇನ್ನು 2022ರ 5ಜಿ ತರಲು ಮುಂದಾಗಿದ್ದು, ಬಹುದಿನದ ಕನಸು ನನಸಾಗಿಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಗ್ರಾಮೀಣ, ನಗರಾಭಿವೃದ್ಧಿ ಎರಡು ಕ್ಷೇತ್ರಗಳ ಅಭಿವೃದ್ಧಿಗೆ ಪೂರಕ: ಬಿಎಸ್‌ವೈ ಮೆಚ್ಚುಗೆ

    ದೇಶದಲ್ಲಿ ಎಲ್ಲೇ ಇದ್ದರೂ ಭೂಮಿ ಖರಿದಿಸಲು ರಿಜಿಸ್ಟರ್ ಮಾಡಿಸಲು ಅನುಮಾಡಿರೋದು ಒಳ್ಳೆಯದು. ಇದರಿಂದ ದೇಶದ ಬಹುತೇಕ ಜನರಿಗೆ ಅನುಕೂಲ ಆಗಲಿದೆ. ಮಹಿಳೆಯ ಸಬಲಿಕರಣಕ್ಕಾರಿ ಮಿಷನ್ ಶಕ್ತಿ ಜಾರಿಗೆ ತಂದಿದ್ದಾರೆ. ಶಾಲಾ ವಿದ್ಯಾರ್ಥಿಗಳಿಗೆ ಬಸ್ ಉಚಿತ ಕೊಡಲು ಮುಂದಾಗಿರೋದು ಒಳ್ಳೆದು. ನದಿ ಜೋಡಣೆಗೆ ಪೂರಕವಾಗುವ ಪ್ರಸ್ತಾಪ ಮಾಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ಇಲ್ಲ: ಶಶಿ ತರೂರ್‌

  • Budget 2022: ಯಾವುದು ಇಳಿಕೆ? ಯಾವುದು ಏರಿಕೆ?

    Budget 2022: ಯಾವುದು ಇಳಿಕೆ? ಯಾವುದು ಏರಿಕೆ?

    ನವದೆಹಲಿ: 2022-23ನೇ ಸಾಲಿನ ಕೇಂದ್ರ ಬಜೆಟ್‌ ಅನ್ನು ಮಂಗಳವಾರ ಸಂಸತ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ್ದಾರೆ. ಈ ಸಾಲಿನ ಬಜೆಟ್‌ನಲ್ಲಿ ಕೆಲವು ಸರಕು ಸೇವೆಗಳ ಬೆಲೆಯಲ್ಲಿ ಇಳಿಕೆಯಾಗಿದೆ. ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡದಿರುವುದು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

    ಯಾವುದು ಇಳಿಕೆ?
    ಕೃಷಿ ಉಪಕರಣಗಳು
    ಮೊಬೈಲ್‌ ಕ್ಯಾಮೆರಾ ಮಾಡ್ಯುಲ್ಸ್‌ ಲೆನ್ಸ್‌
    ಮೊಬೈಲ್‌ ಫೋನ್‌, ಚಾರ್ಜರ್‌ಗಳು
    ಹಿಯರಿಂಗ್‌ ಡಿವೈಸಸ್‌ (ಶ್ರವಣ ಉಪಕರಣ)
    ಎಲೆಕ್ಟ್ರಿಕ್‌ ಸಾಧನಗಳು
    ಪೆಟ್ರೋಲಿಯಂ ಸಂಸ್ಕರಣೆಯ ರಾಸಾಯನಿಕಗಳು
    ಚಿನ್ನ, ಕತ್ತರಿಸಿದ ವಜ್ರಾಭರಣಗಳ ಮೇಲಿನ ಆಮದು ಸುಂಕ
    ಎಲೆಕ್ಟ್ರಾನಿಕ್‌ ಉಪಕರಣಗಳು
    ಚಪ್ಪಲಿ, ಚರ್ಮದ ಉತ್ಪನ್ನಗಳು
    ಬಟ್ಟೆ ಇದನ್ನೂ ಓದಿ: Budget 2022: ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಇಲ್ಲ

    ಯಾವುದು ಏರಿಕೆ?
    ಪೆಟ್ರೋಲ್‌
    ಅನ್‌ ಬ್ಲೆಂಡೆಡ್‌ ಇಂಧನ
    ಆಮದು ಮಾಡಿಕೊಂಡ ಸರಕುಗಳು
    ಛತ್ರಿಗಳು ಇದನ್ನೂ ಓದಿ: Budget: 2022-23ರ ಹೊತ್ತಿಗೆ 5G ಮೊಬೈಲ್‌ ಸೇವೆ

  • Budget 2022: ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಇಲ್ಲ

    Budget 2022: ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಇಲ್ಲ

    ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೇಂದ್ರ ಬಜೆಟ್‌ ಅನ್ನು ಸಂಸತ್‌ನಲ್ಲಿ ಮಂಗಳವಾರ ಮಂಡಿಸಿದರು. ಬಜೆಟ್‌ನಲ್ಲಿ ಆದಾಯ ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

    ಆದಾಯ ತೆರಿಗೆ ಪದ್ಧತಿಯಲ್ಲಿ ಬದಲಾವಣೆ ಬಗ್ಗೆ ಹೆಚ್ಚು ನಿರೀಕ್ಷೆ ಹೊಂದಲಾಗಿತ್ತು. ಆದರೆ ಬಜೆಟ್‌ನಲ್ಲಿ ಅದ್ಯಾವುದೇ ಬದಲಾವಣೆ ಆಗಿಲ್ಲ. ಆದಾಗ್ಯೂ ತೆರಿಗೆದಾರರು ಈಗ ಎರಡು ವರ್ಷಗಳಲ್ಲಿ ಐಟಿ ರಿಟರ್ನ್ಸ್‌ ಅನ್ನು ನವೀಕರಿಸಬಹುದು ಎಂದು ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ. ಇದನ್ನೂ ಓದಿ: Budget 2022: ರಾಷ್ಟ್ರೀಯ ಹೆದ್ದಾರಿ 25 ಸಾವಿರ ಕಿ.ಮೀ ವಿಸ್ತರಣೆ – 400 ವಂದೇ ಭಾರತ್ ರೈಲು ತಯಾರಿ ಗುರಿ

    ಐಟಿ ರಿಟರ್ನ್ಸ್‌ ಸಲ್ಲಿಕೆ ವೇಳೆ ಆಗಿರುವ ಲೋಪ ಸರಿಪಡಿಸಿ, ನವೀಕೃತ ರಿಟರ್ನ್ಸ್‌ ಸಲ್ಲಿಸಲು ಮೌಲ್ಯಮಾಪನ ವರ್ಷದಿಂದ 2 ವರ್ಷಗಳವರೆಗೆ ಕಾಲಾವಕಾಶ ನೀಡಲಾಗಿದೆ. ವರ್ಜುವಲ್‌ ಡಿಜಿಟಲ್‌ ಸ್ವತ್ತುಗಳ ವರ್ಗಾವಣೆಯಿಂದ ಬರುವ ಯಾವುದೇ ಆದಾಯಕ್ಕೆ ಶೇ.30 ತೆರಿಗೆ ವಿಧಿಸಲಾಗುತ್ತದೆ. ವರ್ಚುವಲ್‌ ಸ್ವತ್ತುಗಳ ಉಡುಗೊರೆಗಳನ್ನು ಸ್ವೀಕರಿಸುವವರಿಗೆ ತೆರಿಗೆ ಹಾಕಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Budget 2022: ವರ್ಲ್ಡ್‌ ಕ್ಲಾಸ್‌ ಶಿಕ್ಷಣಕ್ಕೆ ಡಿಜಿಟಲ್‌ ವಿಶ್ವವಿದ್ಯಾಲಯ ಸ್ಥಾಪನೆ

    ಆದಾಯ ತೆರಿಗೆ ದರಗಳು
    2.5 ಲಕ್ಷ ರೂ.ವರೆಗೆ – ಶೂನ್ಯ
    2.5-5 ಲಕ್ಷ – ಶೇ.5
    5-7.50 ಲಕ್ಷ – ಶೇ.10 (ಒಟ್ಟು ಆದಾಯ 5 ಲಕ್ಷ ಮೇಲ್ಪಟ್ಟು ಇದ್ದರೆ 12,500 ರೂ. ಹೆಚ್ಚುವರಿ ತೆರಿಗೆ)
    7.50-10 ಲಕ್ಷ – ಶೇ.15 (ಒಟ್ಟು ಆದಾಯ 7.5 ಲಕ್ಷ ಮೇಲ್ಪಟ್ಟು ಇದ್ದರೆ 37,500 ರೂ. ಹೆಚ್ಚುವರಿ ತೆರಿಗೆ)
    10-12.50 ಲಕ್ಷ – ಶೇ.20 (ಒಟ್ಟು ಆದಾಯ 10 ಲಕ್ಷ ಮೇಲ್ಪಟ್ಟು ಇದ್ದರೆ 75,000 ರೂ. ಹೆಚ್ಚುವರಿ ತೆರಿಗೆ)
    12.50-15 ಲಕ್ಷ – ಶೇ.25 (ಒಟ್ಟು ಆದಾಯ 12.5 ಲಕ್ಷ ಮೇಲ್ಪಟ್ಟು ಇದ್ದರೆ 1,25,000 ರೂ. ಹೆಚ್ಚುವರಿ ತೆರಿಗೆ)
    15 ಲಕ್ಷ ಮೇಲ್ಪಟ್ಟು – ಶೇ.30 (ಒಟ್ಟು ಆದಾಯ 15 ಲಕ್ಷ ಮೇಲ್ಪಟ್ಟು ಇದ್ದರೆ 1,87,500 ರೂ. ಹೆಚ್ಚುವರಿ ತೆರಿಗೆ)

  • ಬಜೆಟ್‍ನಲ್ಲಿ ರಾಜ್ಯಕ್ಕೆ ಏನೂ ಇಲ್ಲ: ಪ್ರಜ್ವಲ್ ರೇವಣ್ಣ ಕಿಡಿ

    ಬಜೆಟ್‍ನಲ್ಲಿ ರಾಜ್ಯಕ್ಕೆ ಏನೂ ಇಲ್ಲ: ಪ್ರಜ್ವಲ್ ರೇವಣ್ಣ ಕಿಡಿ

    ನವದೆಹಲಿ: ಕೇಂದ್ರ ಹಣಕಾಸು ಬಜೆಟ್ ನಮ್ಮೆಲ್ಲರ ಹಾಗೂ ರಾಜ್ಯದ ಜನತೆಯ ನಿರೀಕ್ಷೆ ಹಾಗೂ ನಂಬಿಯನ್ನು ಹುಸಿ ಮಾಡಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ವಾಗ್ದಾಳಿ ನಡೆಸಿದರು.

    ಈ ಬಗ್ಗೆ ಮಾತನಾಡಿದ ಅವರು, ಬಜೆಟ್‍ನಲ್ಲಿ ಯಾವ ಸತ್ವವೂ ಇಲ್ಲ. ನಮ್ಮ ರಾಜ್ಯದ 25 ಸಂಸದರು ರಾಜ್ಯಕ್ಕೆ ಏನು ತಂದೆವು ಎಂದು ಹೇಳಬೇಕು ಎಂದು ಪ್ರಶ್ನಿಸಿದ ಅವರು, ಬಜೆಟ್‍ನಲ್ಲಿ ರಾಜ್ಯಕ್ಕೆ ಏನೂ ಇಲ್ಲ. ಜೊತೆಗೆ ದಕ್ಷಿಣ ಭಾರತಕ್ಕೆ ಯಾವ ಅನುಕೂಲವನ್ನು ಮಾಡಿಲ್ಲ. ಕೇಂದ್ರ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಕಿಡಿಕಾರಿದರು.

    ಬಜೆಟ್‍ನಲ್ಲಿ ಎಮ್ಸ್ ಬರುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಮೂಲಸೌಕರ್ಯಕ್ಕೆ ನೆರವು ಕೂಡ ಸಿಗಲಿಲ್ಲ. ಮೇಕೆದಾಟು ವಿಷಯಕ್ಕೆ ಸಂಬಂಧಿಸಿದಂತೆ ನಮಗೆ ನ್ಯಾಯವೂ ಸಿಕ್ಕಿಲ್ಲ. ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ:  ದೇಶದ ಆರ್ಥಿಕತೆಗೆ ಬೂಸ್ಟರ್ ಡೋಸ್ ನೀಡುವ ಬಜೆಟ್: ಶಶಿಕಲಾ ಜೊಲ್ಲೆ

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. 400 ಹೊಸ ತಲೆಮಾರಿನ ವಂದೆ ಭಾರತ್ ರೈಲು, 2 ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೆರಿಸುವ ಯೋಜನೆ, ಗ್ರಾಮೀಣ ಮಕ್ಕಳಿಗೆ ವನ್ ಕ್ಲಾಸ್ ವನ್ ಟಿವಿ, ಕೆನ್ ಬೆಟ್ಟಾ ನದಿ ಜೋಡಣೆ ಯೋಜನೆ, ಪಿಎಂ ಆವಾಸ್ ಯೋಜನೆಯಡಿ 80 ಲಕ್ಷ ಮನೆ ನಿರ್ಮಾಣ, ಜಿಎಸ್‍ಟಿ ಸಂಗ್ರಹ, 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಹೀಗೆ ಹಲವು ಯೋಜನೆಗಳನ್ನು ಕೇಂದ್ರ ಬಜೆಟ್ ಒಳಗೊಂಡಿತ್ತು. ಇದನ್ನೂ ಓದಿ: ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ಇಲ್ಲ: ಶಶಿ ತರೂರ್‌

  • Union Budget : ಶಿಕ್ಷಣದ ಪ್ರಸರಣಕ್ಕೆ ಇನ್ನಷ್ಟು ನೆರವು: ಬಿಸಿ ನಾಗೇಶ್

    Union Budget : ಶಿಕ್ಷಣದ ಪ್ರಸರಣಕ್ಕೆ ಇನ್ನಷ್ಟು ನೆರವು: ಬಿಸಿ ನಾಗೇಶ್

    ಬೆಂಗಳೂರು: ಕೇಂದ್ರ ಬಜೆಟ್‍ನಲ್ಲಿ ಶಿಕ್ಷಣಕ್ಕೆ ಅಭೂತಪೂರ್ವ ಕೊಡುಗೆಯನ್ನು ನೀಡಿದ್ದು, ಡಿಜಿಟಲ್ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಟ್ವೀಟ್ ಮಾಡಿ ಕೇಂದ್ರ ಸಕಾರವನ್ನು ಶ್ಲಾಘಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಒಂದು ತರಗತಿ, ಒಂದು ಟಿವಿ ಚಾನಲ್ ಕಾರ್ಯಕ್ರಮದಲ್ಲಿ ಸ್ಥಳೀಯ ಭಾಷೆಯಲ್ಲಿ ಕಲಿಸಲು ಚಾನಲ್‍ಗಳ ಸಂಖ್ಯೆಯನ್ನು 200ಕ್ಕೆ ಹೆಚ್ಚಿಸುವ ಪ್ರಧಾನಿ ನರೇದ್ರ ಮೋದಿ ಸರ್ಕಾರದ ಘೋಷಣೆ ಶ್ಲಾಘನೀಯ. ಇದು ಶಿಕ್ಷಣದ ಪ್ರಸರಣಕ್ಕೆ ಇನ್ನಷ್ಟು ನೆರವಾಗಲಿದೆ ಎಂದು ಪೋಸ್ಟ್ ಮಾಡಿದ್ದಾರೆ.

    ಕೇಂದ್ರ ಸರ್ಕಾರ ಡಿಜಿಟಲ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಇದೊಂದು ದೊಡ್ಡ ನಿರ್ಧಾರವಾಗಿದ್ದು, ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡಲು ಈ ಯೋಜನೆ ತರಲಾಗಿದೆ. ಇದನ್ನೂ ಓದಿ: ಗ್ರಾಮೀಣ, ನಗರಾಭಿವೃದ್ಧಿ ಎರಡು ಕ್ಷೇತ್ರಗಳ ಅಭಿವೃದ್ಧಿಗೆ ಪೂರಕ: ಬಿಎಸ್‌ವೈ ಮೆಚ್ಚುಗೆ

    ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಈ ಯೋಜನೆಯಲ್ಲಿ ಕೈಜೋಡಿಸಲಿದೆ ಎಂದು ಅವರು ಮಾಹಿತಿ ನೀಡಿದರು. ಜೊತೆಗೆ ಒಂದನೇ ತರಗತಿಯಿಂದ 12ನೇ ತರಗತಿಯವರೆಗೆ ಪಠ್ಯ ಬೋಧಿಸಲು 200 ಪ್ರಾದೇಶಿಕ ಟಿವಿ ಚಾನೆಲ್‍ಗಳನ್ನು ತೆರೆಯಲಾಗುತ್ತದೆ ಎಂದು ಬಜೆಟ್‍ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: Budget 2022: ವರ್ಲ್ಡ್‌ ಕ್ಲಾಸ್‌ ಶಿಕ್ಷಣಕ್ಕೆ ಡಿಜಿಟಲ್‌ ವಿಶ್ವವಿದ್ಯಾಲಯ ಸ್ಥಾಪನೆ

  • ಕ್ರಿಪ್ಟೋ ಕರೆನ್ಸಿಗೆ ಭಾರತ ಎಂಟ್ರಿ – ಆರ್‌ಬಿಐ ನೀಡಲಿದೆ ಡಿಜಿಟಲ್‌ ರುಪಿ

    ಕ್ರಿಪ್ಟೋ ಕರೆನ್ಸಿಗೆ ಭಾರತ ಎಂಟ್ರಿ – ಆರ್‌ಬಿಐ ನೀಡಲಿದೆ ಡಿಜಿಟಲ್‌ ರುಪಿ

    ನವದೆಹಲಿ: ಭಾರತವೂ ಈಗ ಅಧಿಕೃತವಾಗಿ ಕ್ರಿಪ್ಟೋ ಕರೆನ್ಸಿಗೆ ಎಂಟ್ರಿಕೊಟ್ಟಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಮ್ಮ ಬಜೆಟ್‌ ಭಾಷಣದಲ್ಲಿ (Union Budget 2022) ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಡಿಜಿಟಲ್‌ ರುಪಿಯನ್ನು ಬಿಡುಗಡೆ ಮಾಡಲಿದೆ ಎಂದು ಘೋಷಿಸಿದ್ದಾರೆ.

    ಬ್ಲಾಕ್‌ಚೈನ್ ಮತ್ತು ಇತರ ತಂತ್ರಜ್ಞಾನಗಳನ್ನು ಬಳಸಿಕೊಂಡು ಆರ್‌ಬಿಐ 2022-23ನೇ ಹಣಕಾಸು ವರ್ಷದಲ್ಲಿ ಡಿಜಿಟಲ್ ರೂಪಾಯಿಯನ್ನು ನೀಡಲಿದೆ. ಇದರಿಂದ ಆರ್ಥಿಕತೆಗೆ ದೊಡ್ಡ ಉತ್ತೇಜನ ಸಿಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಇದರ ಜೊತೆ ಕ್ರಿಪ್ಟೋ ಮೇಲಿನ ಆದಾಯಕ್ಕೆ 30% ತೆರಿಗೆ ವಿಧಿಸಿದ್ದಾರೆ. ಇದರಿಂದಾಗಿ ಕ್ರಿಪ್ಟೋಗೆ ಭಾರತದಲ್ಲಿ ಕಾನೂನು ಮಾನ್ಯತೆ ಸಿಕ್ಕಿದೆ. ವಿಶ್ವದ ಕ್ರಿಪ್ಟೋ ಮಾರುಕಟ್ಟೆಯಲ್ಲಿ ಭಾರತದವರೇ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ಭಾರತದ ನಿಲುವು ಏನು ಎನ್ನುವ ಕುತೂಹಲ ಇತ್ತು. ಇದನ್ನೂ ಓದಿ: Budget: 2022-23ರ ಹೊತ್ತಿಗೆ 5G ಮೊಬೈಲ್‌ ಸೇವೆ

    ಬೆಂಗಳೂರಿನ ಶ್ರೀಕೀ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದರಿಂದ ಬಿಟ್‌ ಕಾಯಿನ್‌ ಸೇರಿದಂತೆ ಕ್ರಿಪ್ಟೋ ಕರೆನ್ಸಿಗಳನ್ನು ಸರ್ಕಾರ ನಿಷೇಧ ಮಾಡುತ್ತಾ ಎಂಬ ಪ್ರಶ್ನೆ ಎದ್ದಿತ್ತು. ಈ ನಡುವೆ ಸರ್ಕಾರ ಮಸೂದೆ ಮಂಡನೆ ಕ್ರಿಪ್ಟೋ ಕರೆನ್ಸಿಗಳ ಮೇಲೆ ನಿಯಂತ್ರಣ ಹೇರಲಿದೆ ಎಂಬ ಸುದ್ದಿಯೂ ಪ್ರಕಟವಾಗಿತ್ತು. ಈಗ ಕೇಂದ್ರ ಸರ್ಕಾರವೇ ಡಿಜಿಟಲ್‌ ಕರೆನ್ಸಿ ತರುವುದಾಗಿ ಘೋಷಣೆ ಮಾಡಿ ಎಲ್ಲ ಗೊಂದಲಗಳಿಗೆ ಬ್ರೇಕ್‌ ಹಾಕಿದೆ. ಇದನ್ನೂ ಓದಿ: Budget 2022: ವರ್ಲ್ಡ್‌ ಕ್ಲಾಸ್‌ ಶಿಕ್ಷಣಕ್ಕೆ ಡಿಜಿಟಲ್‌ ವಿಶ್ವವಿದ್ಯಾಲಯ ಸ್ಥಾಪನೆ

  • Budget: 2022-23ರ ಹೊತ್ತಿಗೆ 5G ಮೊಬೈಲ್‌ ಸೇವೆ

    Budget: 2022-23ರ ಹೊತ್ತಿಗೆ 5G ಮೊಬೈಲ್‌ ಸೇವೆ

    ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2022-23ನೇ ಸಾಲಿನ ಕೇಂದ್ರ ಬಜೆಟ್‌ ಅನ್ನು ಸಂಸತ್‌ನಲ್ಲಿ ಮಂಡಿಸುತ್ತಿದ್ದಾರೆ.

    2022-23ರ ವೇಳೆಗೆ 5G ಮೊಬೈಲ್‌ ಸೇವೆಗಳನ್ನು ಒದಗಿಸಲು ಕ್ರಮವಹಿಸಲಾಗುವುದು ಎಂದು ಬಜೆಟ್‌ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್‌ ಅವರು ತಿಳಿಸಿದ್ದಾರೆ. ಇದನ್ನೂ ಓದಿ: Budget 2022: ವರ್ಲ್ಡ್‌ ಕ್ಲಾಸ್‌ ಶಿಕ್ಷಣಕ್ಕೆ ಡಿಜಿಟಲ್‌ ವಿಶ್ವವಿದ್ಯಾಲಯ ಸ್ಥಾಪನೆ

    5G ತಂತ್ರಜ್ಞಾನ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಿದೆ. 5ಜಿ ಬಿಡುಗಡೆಗಾಗಿ 2022ರಲ್ಲಿ ಸ್ಪೆಕ್ಟ್ರಮ್‌ ಹರಾಜು ನಡೆಸಲಾಗುವುದು ಎಂದು ಹಣಕಾಸು ಸಚಿವರು ಮಾಹಿತಿ ನೀಡಿದ್ದಾರೆ.

    ಅಲ್ಲದೇ, ಮುಂದಿನ ಮೂರು ವರ್ಷಗಳಲ್ಲಿ ಹೊಸ ತಲೆಮಾರಿನ 400 ವಂದೇ ಭಾರತ್‌ ರೈಲುಗಳನ್ನು ತರಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇದು 25 ವರ್ಷಗಳ ದೂರದೃಷ್ಟಿಯ ಬಜೆಟ್‌: ನಿರ್ಮಲಾ ಸೀತಾರಾಮನ್‌

  • ಅಮಿತ್ ಶಾಗೆ ಗೃಹ, ಸೀತಾರಾಮನ್‍ಗೆ ಹಣಕಾಸು – ಮೋದಿ ಸಂಪುಟದಲ್ಲಿ ಯಾರಿಗೆ ಯಾವ ಖಾತೆ?

    ಅಮಿತ್ ಶಾಗೆ ಗೃಹ, ಸೀತಾರಾಮನ್‍ಗೆ ಹಣಕಾಸು – ಮೋದಿ ಸಂಪುಟದಲ್ಲಿ ಯಾರಿಗೆ ಯಾವ ಖಾತೆ?

    ನವದೆಹಲಿ: ಬಿಜೆಪಿಯ ಚಾಣಕ್ಯ ಅಮಿತ್ ಶಾ ಅವರಿಗೆ ಮೋದಿ 2 ಸರ್ಕಾರದಲ್ಲಿ ಗೃಹ ಇಲಾಖೆ ಸಿಕ್ಕಿದೆ. ಈ ಹಿಂದೆ ಗೃಹ ಇಲಾಖೆ ನಿರ್ವಹಿಸಿದ್ದ ರಾಜನಾಥ್ ಸಿಂಗ್ ಅವರಿಗೆ ಈ ಬಾರಿ ರಕ್ಷಣಾ ಇಲಾಖೆಯನ್ನು ಮೋದಿ ನೀಡಿದ್ದಾರೆ.

    ರಫೇಲ್ ವಿವಾವದವನ್ನು ಸಮರ್ಥವಾಗಿ ನಿರ್ವಹಿಸಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ ಹಣಕಾಸು ಇಲಾಖೆ ಸಿಕ್ಕಿದೆ. ಕಳೆದ ಬಾರಿ ನಿರ್ವಹಿಸಿದ್ದ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಖಾತೆಯನ್ನೇ ಮೋದಿ ಮತ್ತೊಮ್ಮೆ ನಿತಿನ್ ಗಡ್ಕರಿ ಅವರಿಗೆ ನೀಡಿದ್ದಾರೆ. ಧರ್ಮೆಂದ್ರ ಪ್ರಧಾನ್ ಪೆಟ್ರೋಲಿಯಂ, ಪಿಯೂಶ್ ಗೋಯಲ್ ರೈಲ್ವೇ, ಜೈ ಶಂಕರ್ ಅವರಿಗೆ ವಿದೇಶಾಂಗ ಇಲಾಖೆ ಸಿಕ್ಕಿದೆ.

    ಗುಜರಾತ್ ನಲ್ಲಿ ಮೋದಿ ಸಿಎಂ ಆಗಿದ್ದಾಗ ಅಮಿತ್ ಶಾ ಗೃಹ ಖಾತೆಯನ್ನು ನೋಡಿಕೊಳ್ಳುತ್ತಿದ್ದರು. ಈಗ ಮತ್ತೊಮ್ಮೆ ಅಮಿತ್ ಶಾ ಮೋದಿ ಕ್ಯಾಬಿನೆಟ್‍ನಲ್ಲಿ ಗೃಹ ಖಾತೆಯನ್ನು ನಿರ್ವಹಿಸಲಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ – ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ, ಪರಮಾಣು ಶಕ್ತಿ ಇಲಾಖೆ, ಬಾಹ್ಯಾಕಾಶ ಇಲಾಖೆ, ಹಂಚಿಕೆಯಾಗದ ಎಲ್ಲ ಖಾತೆಗಳು.

    ಸಂಪುಟ ದರ್ಜೆ ಸಚಿವರು:
    ರಾಜನಾಥ್ ಸಿಂಗ್ – ರಕ್ಷಣೆ
    ಅಮಿತ್ ಶಾ – ಗೃಹ, ಸಣ್ಣ ಮತ್ತು ಮಧ್ಯಮ ಉದ್ಯಮ
    ನಿತಿನ್ ಗಡ್ಕರಿ – ಸಾರಿಗೆ ಮತ್ತು ರಾಷ್ಟ್ರಿಯ ಹೆದ್ದಾರಿ
    ಸದಾನಂದ ಗೌಡ – ರಾಸಾಯನಿಕ ಮತ್ತು ರಸಗೊಬ್ಬರ
    ನಿರ್ಮಲಾ ಸೀತಾರಾಮನ್ – ಹಣಕಾಸು, ಕಾರ್ಪೋರೆಟ್ ವ್ಯವಹಾರ
    ರಾಮ್ ವಿಲಾಸ್ ಪಾಸ್ವಾನ್ – ಆಹಾರ ಮತ್ತು ಸಾರ್ವಜನಿಕ ವಿತರಣೆ

    ನರೇಂದ್ರ ಸಿಂಗ್ ತೋಮರ್ – ಕೃಷಿ, ಗ್ರಾಮೀಣ ಅಭಿವೃದ್ಧಿ, ರೈತ ಕಲ್ಯಾಣ, ಪಂಚಾಯತ್ ರಾಜ್
    ರವಿಶಂಕರ್ ಪ್ರಸಾದ್ – ಕಾನೂನು ಮತ್ತು ನ್ಯಾಯ, ಸಂವಹನ ಮತ್ತು ಮಾಹಿತಿ, ತಂತ್ರಜ್ಞಾನ
    ಹರ್ಸಿಮ್ರತ್ ಕೌರ್ – ಆಹಾರ ಸಂಸ್ಕರಣಾ ಕೈಗಾರಿಕೆ
    ತಾವರ್ ಚಂದ್ ಗೆಹ್ಲೋಟ್ – ಸಾಮಾಜಿಕ ಕಲ್ಯಾಣ ಮತ್ತು ಸಬಲೀಕರಣ
    ಎಸ್.ಜೈಶಂಕರ್ – ವಿದೇಶಾಂಗ ಇಲಾಖೆ
    ರಮೇಶ್ ಪೋಖ್ರಿಯಾಲ್ – ಮಾನವ ಸಂಪನ್ಮೂಲ
    ಅರ್ಜುನ್ ಮುಂಡಾ – ಬುಡಕಟ್ಟು ಅಭಿವೃದ್ಧಿ

    ಸ್ಮೃತಿ ಇರಾನಿ – ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
    ಡಾ.ಹರ್ಷವರ್ಧನ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ, ತಂತ್ರಜ್ಞಾನ ಮತ್ತು ಭೂ ವಿಜ್ಞಾನ
    ಪ್ರಕಾಶ್ ಜಾವ್ಡೇಕರ್ – ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಮತ್ತು ಪ್ರಸಾರ ಮತ್ತು ಮಾಹಿತಿ ತಂತ್ರಜ್ಞಾನ
    ಪಿಯುಷ್ ಗೋಯಲ್ – ರೈಲ್ವೇ, ವಾಣಿಜ್ಯ ಮತ್ತು ಕೈಗಾರಿಕೆ
    ಧರ್ಮೇಂದ್ರ ಪ್ರಧಾನ್ – ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಉಕ್ಕು

    ಮುಕ್ತಾರ್ ಅಬ್ಬಾಸ್ ನಖ್ವಿ – ಅಲ್ಪ ಸಂಖ್ಯಾತ ಕಲ್ಯಾಣ
    ಪ್ರಹ್ಲಾದ್ ಜೋಷಿ – ಸಂಸದೀಯ ವ್ಯವಹಾರ, ಕಲಿದ್ದಲು ಮತ್ತು ಗಣಿಗಾರಿಕೆ
    ಮಹೇಂದ್ರನಾಥ್ ಪಾಂಡೆ – ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮ ಶೀಲತೆ
    ಅರವಿಂದ್ ಸಾವಂತ್ – ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ
    ಗಿರಿರಾಜ್ ಸಿಂಗ್ – ಪಶು ಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಮೀನುಗಾರಿಕೆ
    ಗಜೇಂದ್ರ ಸಿಂಗ್ ಶೇಖಾವತ್‌ – ಜಲ ಶಕ್ತಿ

    ರಾಜ್ಯ ಖಾತೆ ಸಚಿವರು:
    ಫಗನ್ ಸಿಂಗ್ ಕುಲಸ್ತೆ – ಉಕ್ಕು
    ಅಶ್ವಿನಿ ಚೌಬೆ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ
    ಬಿಕನೇರ್ ಅರ್ಜುನ್ ರಾಮ್ ಮೇಘವಾಲ್ – ಸಂಸದೀಯ ವ್ಯವಹಾರ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ
    ವಿ.ಕೆ.ಸಿಂಗ್ – ರಸ್ತೆ ಸಾರಿಗೆ ಮತ್ತು ಹೆದ್ದಾರಿ
    ಕೃಷ್ಣಪಾಲ್ ಗುರ್ಜರ್ – ಸಾಮಾಜಿಕ ನ್ಯಾಯ ಸಬಲೀಕರಣ
    ರಾವ್ ಸಾಹೇಬ್ ದಾನವೆ ರಾವ್ – ಗ್ರಾಹಕ ವ್ಯವಹಾರ ಮತ್ತು ಆಹಾರ ಮತ್ತು ಸಾರ್ವಜನಿಕರ ವಿತರಣೆ
    ಕಿಶಾನ್ ರೆಡ್ಡಿ- ಗೃಹ ಇಲಾಖೆ

    ಪುರುಷೋತ್ತಮ ರುಪಾಲಾ – ಕೃಷಿ ಮತ್ತು ರೈತರ ಕಲ್ಯಾಣ
    ರಾಮದಾಸ್ ಅಠಾವಳೆ – ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
    ಸಾಧ್ವಿ ನಿರಂಜನ್ ಜ್ಯೋತಿ – ಗ್ರಾಮೀಣ ಅಭಿವೃದ್ಧಿ
    ಬಾಬುಲ್ ಸುಪ್ರಿಯೋ – ಪರಿಸರ, ಅರಣ್ಯ, ಹವಾಮಾನ ಬದಲಾವಣೆ

    ಸಂಜೀವ್ ಬಲಿಯಾನ್ – ಪಶುಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ
    ಸಂಜಯ್ ಧೋತ್ರೆ – ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಂವಹನ, ಮಾಹಿತಿ ತಂತ್ರಜ್ಞಾನ
    ಅನುರಾಗ್ ಠಾಕೂರ್ – ಹಣಕಾಸು ಮತ್ತು ಕಾರ್ಪೋರೆಟ್ ವ್ಯವಹಾರ
    ಸುರೇಶ್ ಅಂಗಡಿ – ರೈಲ್ವೇ ಖಾತೆ
    ನಿತ್ಯಾನಂದ್ ರಾಯ್ – ಗೃಹ ವ್ಯವಹಾರ ಖಾತೆ

    ರತನ್ ಲಾಲ್ ಕಟಾರಿಯಾ – ಜಲ ಶಕ್ತಿ, ಸಾಮಾಜಿಕ ನ್ಯಾಯ, ಸಬಲೀಕರಣ,
    ವಿ.ಮುರಳೀಧರನ್ – ವಿದೇಶಾಂಗ ಮತ್ತು ಸಂಸದೀಯ ವ್ಯವಹಾರ,
    ರೇಣುಕಾ ಸಿಂಗ್ – ಬುಡಕಟ್ಟು ವ್ಯವಹಾರ,
    ಸೋಮ್ ಪ್ರಕಾಶ್ – ವಾಣಿಜ್ಯ ಮತ್ತು ವ್ಯವಹಾರ

    ರಾಮೇಶ್ವರ್ ತೇಲಿ – ಆಹಾರ ಸಂಸ್ಕರಣ ಉದ್ಯಮ
    ಸಾರಂಗಿ – ಸಣ್ಣ ಮತ್ತು ಮಧ್ಯಮ ಉದ್ಯಮ, ಪಶು ಸಂಗೋಪನೆ, ಮೀನುಗಾರಿಕೆ,
    ಕೈಲಾಶ್ ಚೌಧರಿ – ಕೃಷಿ ಮತ್ತು ರೈತರ ಕಲ್ಯಾಣ
    ದೆಬೊಶ್ರೀ ಚೌಧರಿ – ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

    ಸ್ವತಂತ್ರ ಖಾತೆ ಸಚಿವರು:
    ಸಂತೋಷ್ ಕುಮಾರ್ ಗಂಗ್ವಾರ್ – ಕಾರ್ಮಿಕ ಮತ್ತು ಉದ್ಯೋಗ
    ಇಂದ್ರಜಿತ್ ಸಿಂಗ್ – ಸಾಂಖ್ಯಿಕ ಅಭಿವೃದ್ಧಿ ಮತ್ತು ಅನುಷ್ಠಾನ ಖಾತೆ
    ಶ್ರೀಪಾದ್ ಎಸ್ ನಾಯಕ್- ಆಯುಶ್, ರಕ್ಷಣಾ
    ಜಿತೇಂದ್ರ ಸಿಂಗ್- ಈಶಾನ್ಯ ಅಭಿವೃದ್ಧಿ ಮತ್ತು ಬಾಹ್ಯಾಕಾಶ, ಪರಮಾಣು ಶಕ್ತಿ

    ಕಿರಣ್ ರಿಜಿಜು- ಕ್ರೀಡಾ ಮತ್ತು ಯುವ ಸಬಲೀಕರಣ – ಅಲ್ಪ ಸಂಖ್ಯಾತ
    ಪ್ರಹ್ಲಾದ್ ಸಿಂಗ್ ಪಟೇಲ್ – ಸಂಸ್ಕ್ರತಿ ಮತ್ತು ಪ್ರವಾಸ್ಯೋದಮ
    ರಾಜ್‍ಕುಮಾರ್ ಸಿಂಗ್ – ಇಂಧನ, ನವೀಕರಿಸಬಹುದಾದ ಶಕ್ತಿ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮ ಶೀಲತೆ
    ಹರ್ದೀಪ್ ಸಿಂಗ್ ಪುರಿ – ವಸತಿ ಮತ್ತು ನಗರಾಭಿವೃದ್ಧಿ, ನಾಗರೀಕ ವಿಮಾನಯಾನ, ವಾಣಿಜ್ಯ ಮತ್ತು ಕೈಗಾರಿಕೆ
    ಮನಸುಖ್ ಮಾಂಡವ್ಯ – ಹಡಗು, ರಾಸಾಯನಿಕ ಮತ್ತು ರಸಗೊಬ್ಬರ

  • ಇಮ್ರಾನ್ ಖಾನ್ ಹೇಳಿಕೆ ಹಿಂದೆ ಕಾಂಗ್ರೆಸ್ ಕೈವಾಡ – ನಿರ್ಮಲಾ ಸೀತಾರಾಮನ್

    ಇಮ್ರಾನ್ ಖಾನ್ ಹೇಳಿಕೆ ಹಿಂದೆ ಕಾಂಗ್ರೆಸ್ ಕೈವಾಡ – ನಿರ್ಮಲಾ ಸೀತಾರಾಮನ್

    ನವದೆಹಲಿ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಯ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅರೋಪಿಸಿದ್ದಾರೆ.

    ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ನಿರ್ಮಲಾ ಸೀತಾರಾಮನ್ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಭಾರತದಲ್ಲಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯದ್ರೆ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಬಹುದು ಎಂದು ಪಾಕ್ ಪ್ರಧಾನಿ ಹೇಳುತ್ತಾರೆ. 2019ರ ಚುನಾವಣೆಯನ್ನು ಗೆಲ್ಲಲು ಕಾಂಗ್ರೆಸ್ ಪಾಕಿಸ್ತಾನದ ಸಹಾಯವನ್ನು ಪಡೆಯುತ್ತಿದೆ. ಹೀಗಾಗಿ ಇಮ್ರಾನ್ ಖಾನ್ ಅವರಿಂದ ಈ ರೀತಿಯ ಹೇಳಿಕೆ ಹೇಳಿಸುತ್ತಿದೆ ಎಂದರು.

    ಪಾಕ್ ವಿದೇಶ ಮಂತ್ರಿ ಮಹಮೂದ್ ಖುರೇಶಿ, ಏಪ್ರಿಲ್ 16ರಿಂದ 20ರೊಳಗೆ ಭಾರತ ದಾಳಿ ನಡೆಸುತ್ತೆ ಎಂಬ ಹೇಳಿಕೆಯನ್ನು ನೀಡುತ್ತಾರೆ. ಖುರೇಶಿ ಅವರಿಗೆ ಈ ದಿನಾಂಕವನ್ನು ಯಾರು ನೀಡಿದರೂ ಎಂಬುವುದು ನನಗೆ ಗೊತ್ತಿಲ್ಲ. ಚುನಾವಣೆ ವೇಳೆಯಲ್ಲಿ ಈ ರೀತಿಯ ಕಾಲ್ಪನಿಕ ಹೇಳಿಕೆಗಳು ಬರುತ್ತಿರುತ್ತಿವೆ ಎಂದು ವ್ಯಂಗ್ಯ ಮಾಡಿದರು.

    ಮಹಿಳಾ ಅಭ್ಯರ್ಥಿಗಳ ವಿರುದ್ಧ ರಾಜಕೀಯ ನಾಯಕರು ನೀಡುತ್ತಿರುವ ಕೀಳುಮಟ್ಟದ ಮಾತುಗಳಿಗೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್, ಚುನಾವಣೆಯಲ್ಲಿ ಅಭಿವೃದ್ಧಿಯ ವಿಷಯಗಳ ಕುರಿತಾಗಿ ಚರ್ಚಿಸಬೇಕು. ಅಭ್ಯರ್ಥಿಯ ಖಾಸಗಿ ವಿಚಾರಗಳನ್ನು ಪ್ರಸ್ತಾಪಿಸಬಾರದು. ರಾಜಕೀಯಕ್ಕೆ ವಿಚಾರಗಳಲ್ಲಿ ಆರೋಪಗಳನ್ನು ಮಾಡುವ ವೇಳೆ ಮತ್ತೊಬ್ಬರ ವ್ಯಕ್ತಿತ್ವಕ್ಕೆ ಧಕ್ಕೆಯಾಗದಂತೆ ಮಾತನಾಡಬೇಕು. ಪ್ರತಿ ಮಾತುಗಳನ್ನು ಯೋಚಿಸಿ ಮಾತನಾಡಬೇಕಾಗುತ್ತದೆ. ಮುಂದಿನ ಪೀಳಿಗೆಗೆ ಈ ರೀತಿಯ ಹೇಳಿಕೆಗಳನ್ನು ಕೊಡುಗೆ ನೀಡಿದಂತೆ ಆಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

    ಇಮ್ರಾನ್ ಖಾನ್ ಹೇಳಿದ್ದೇನು?
    ಲೋಕಸಭಾ ಚುನಾವಣೆ ಬಳಿಕ ಭಾರತದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಪಾಕಿಸ್ತಾನದ ಜೊತೆಗಿರುವ ಕಾಶ್ಮೀರದ ಸಮಸ್ಯೆ ಬಗೆಹರಿಸಲು ಸ್ವಲ್ಪ ಭಯಪಡುವ ಸಾಧ್ಯತೆಯಿದೆ. ಒಂದು ವೇಳೆ ಬಲಪಂಥೀಯ ಪಕ್ಷವಾದ ಬಿಜೆಪಿಯು ಅಧಿಕಾರಕ್ಕೆ ಬಂದರೆ ಸಮಸ್ಯೆಗೆ ಕೆಲವು ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಇಮ್ರಾನ್ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.