Tag: nirmala chennapa

  • ಬಿಗ್ ಮನೆಯಿಂದ ಹೊರನಡೆದ ಮತ್ತೊಬ್ಬ ಸೆಲೆಬ್ರಿಟಿ

    ಬಿಗ್ ಮನೆಯಿಂದ ಹೊರನಡೆದ ಮತ್ತೊಬ್ಬ ಸೆಲೆಬ್ರಿಟಿ

    – ಕೈ ಹಿಡಿಯದ ಬಿಗ್‍ಮನೆ ಅಭಿಮಾನಿಗಳು

    ಬಿಗ್ ಬಾಸ್ ಮನೆಯಲ್ಲಿ ವಾರಾಂತ್ಯಕ್ಕೆ ಮನೆಯಿಂದ ಒಬ್ಬರು ಹೊರಗೆ ಹೋಗಬೇಕು. ಮೊದಲವಾರ ಧನುಶ್ರೀ ಹೊರ ನಡೆದಿದ್ದರು. 2ನೇ ವಾರ ಯಾರು ಮನೆಯಲ್ಲಿ ತನ್ನ ಆಟವನ್ನು ಮುಗಿಸಿ ಹೊರ ನಡೆಯುತ್ತಾರೆ ಎನ್ನುವ ಪ್ರಶ್ನಗೆ ಉತ್ತರ ಸಿಕ್ಕಿದೆ.

    ಹೌದು. ಈ ಬಾರಿ ನಿರ್ಮಲಾ ಚೆನ್ನಪ್ಪ ಬಿಗ್‍ಬಾಸ್‍ಮನೆಯ ಜರ್ನಿಯನ್ನು ಮುಗಿಸಿದ್ದಾರೆ. ಮನೆಯಲ್ಲಿರುವ ಸದಸ್ಯರುಗಳಲ್ಲಿ ನಿರ್ಮಲಾ ಕೊಂಚ ವಿಭಿನ್ನವಾಗಿಯೇ ಇರುತ್ತಿದ್ದರು. ಒಬ್ಬರೇ ಹೆಚ್ಚಾಗಿ ಇರುತ್ತಿದ್ದರು. ಅವರು ನಡೆದುಕೊಳ್ಳುವ ರೀತಿ, ಹೆಚ್ಚಿನವರಿಗೆ ಇಷ್ಟವಾಗುತ್ತಿರಲಿಲ್ಲ. ಅತೀ ಹೆಚ್ಚು ಚರ್ಚೆಗೊಳಗಾದ ಸದಸ್ಯರುಗಳಲ್ಲಿ ನಿರ್ಮಲಾ ಕೂಡ ಒಬ್ಬರು. ನಾಮಿನೇಷನ್‍ನಲ್ಲಿ ಹೆಚ್ಚು ಮತ ಕೂಡಾ ನಿರ್ಮಲಾ ಅವರಿಗೆ ಬಿದ್ದಿದ್ದವು. ಆದರೂ ಬಿಗ್‍ಬಾಸ್ ವೀಕ್ಷಕರು ನಿರ್ಮಲಾ ಚೆನ್ನಪ್ಪ ಅವರು ಕೈ ಹಿಡಿಯಲಿಲ್ಲ.

    ನಿರ್ಮಲಾ ಮನೆಯಲ್ಲಿ ಇರುವಷ್ಟು ದಿನ ಸಖತ್ ಆ್ಯಕ್ಟಿವ್ ಆಗಿದ್ದರು. ಜಗಳ, ಮಾತು, ಅಡುಗೆ ಮನೆ ವಿಚಾರ ಹೀಗೆ ನಾನಾ ವಿಷಯಗಳ ಕುರಿತಾಗಿ ಧ್ವನಿ ಎತ್ತುವ ಸದಸ್ಯೆಯಾಗಿದ್ದರು. ಆದರೆ ಮನೆಯಲ್ಲಿ ಇವರ ಆಟ ಅಭಿಮಾನಿಗಳಿಗೆ ಇಷ್ಟವಾಗಿಲ್ಲ ಎಂದು ಅನ್ನಿಸುತ್ತದೆ ಮನೆಯಿಂದ ಗೇಟ್‍ಪಾಸ್ ಕೊಟ್ಟಿದ್ದಾರೆ.

    ಒಂದೇ ಬಟ್ಟೆಯಲ್ಲಿ ಒಂದು ವಾರ ಇದ್ದ ನಿರ್ಮಲಾ!
    ಒಂದು ವಾರ ಒಂದೇ ಬಟ್ಟೆಯಲ್ಲಿ ಕಳೆದಿದ್ದರು. ಬಿಗ್‍ಬಾಸ್ ಬಟ್ಟೆ ಕಳಿಸುತ್ತಿದ್ದಂತೆ ಮಧ್ಯರಾತ್ರಿ ಸೀರೆ ಧರಿಸಿ ಮೇಕಪ್ ಹಾಕಿ ಮೂಲೆಯಲ್ಲಿ ಕ್ಯಾಮೆರಾ ಮುಂದೆ ಕುಳಿತು ಒಬ್ಬರೇ ಮಾತನಾಡುತ್ತಿರುವುದು ಮನೆಯವರಿಗೆ ಭಯ ತರಿಸಿತ್ತು. ಈ ವಿಚಾರ ಸಾಕಷ್ಟು ಚರ್ಚೆ ಕೂಡ ಆಗಿತ್ತು.

    ನಿಧಿ ಸುಬ್ಬಯ್ಯ, ಶುಭಾ ಪೂಂಜಾ, ದಿವ್ಯಾ ಸುರೇಶ್, ಪ್ರಶಾಂತ್ ಸಂಬರ್ಗಿ, ಗೀತಾ, ಚಂದ್ರಕಲಾ ಮೋಹನ್, ವಿಶ್ವನಾಥ್, ನಿರ್ಮಲಾ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಆದರೆ ಇವರುಗಳ ಪೈಕಿ ನಿರ್ಮಲಾ ತನ್ನ ಆಟವನ್ನು ಮನೆಯಲ್ಲಿ ಮುಗಿಸಿ ಹೊರಬಂದಿದ್ದಾರೆ.