Tag: Nirmala

  • ಬಳ್ಳಾರಿ | ಪಿಯುಸಿ ಟಾಪರ್‌ಗಳಿಗೆ ಸ್ಕೂಟಿ ಜೊತೆ 5 ಲಕ್ಷ ಸಹಾಯ ಮಾಡಿದ ಜಮೀರ್

    ಬಳ್ಳಾರಿ | ಪಿಯುಸಿ ಟಾಪರ್‌ಗಳಿಗೆ ಸ್ಕೂಟಿ ಜೊತೆ 5 ಲಕ್ಷ ಸಹಾಯ ಮಾಡಿದ ಜಮೀರ್

    ಬಳ್ಳಾರಿ: ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಟಾಪರ್ ಆದ ವಿಜಯನಗರ (Vijayanagara) ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರಿಗೆ ವಿಜಯನಗರ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ವೈಯಕ್ತಿಕವಾಗಿ ತಲಾ ಐದು ಲಕ್ಷ ರೂ. ಹಾಗೂ ದ್ವಿಚಕ್ರ ವಾಹನ ಬಹುಮಾನ ನೀಡಿ ಸನ್ಮಾನಿಸಿದ್ದಾರೆ.

    ಅಲ್ಲದೇ ಜಿಲ್ಲೆಯಲ್ಲಿ ಉತ್ತಮ ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳಿಗೆ ತಲಾ 50 ಸಾವಿರ ರೂ. ನಗದು ನೀಡಿದ್ದಾರೆ. ಪಿಯುಸಿ ಕಲಾ ವಿಭಾಗದಲ್ಲಿ 600ಕ್ಕೆ 597 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದ ಸಂಜನಾಬಾಯಿ ಹಾಗೂ 600ಕ್ಕೆ 596 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದ ನಿರ್ಮಲಾ ಇಬ್ಬರೂ ಬಡತನದಲ್ಲೇ ಹುಟ್ಟಿ, ಬೆಳೆದಿದ್ದ ವಿದ್ಯಾರ್ಥಿನಿಯರು. ಹೀಗಾಗಿ ವಿದ್ಯಾರ್ಥಿನಿಯರ ಮುಂದಿನ ಶೈಕ್ಷಣಿಕ ಜೀವನಕ್ಕೆ ಅನುಕೂಲ ಆಗಲಿ ಎಂಬ ಸದುದ್ದೇಶದಿಂದ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸನ್ಮಾನಿಸಿ, ಸಹಾಯ ಮಾಡಿದ್ದಾರೆ. ಇದನ್ನೂ ಓದಿ: ತುಮಕೂರಲ್ಲಿ ಎರಡು ದಿನಗಳ ಕಾಲ ಮಳೆ ಮುನ್ಸೂಚನೆ – ಯೆಲ್ಲೋ ಅಲರ್ಟ್ ಘೋಷಣೆ

    ಈ ವೇಳೆ ಶಾಸಕರಾದ ಗವಿಯಪ್ಪ, ಲತಾ ಮಲ್ಲಿಕಾರ್ಜುನ, ಶ್ರೀನಿವಾಸ್, ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಜಿಲ್ಲಾಧಿಕಾರಿ ದಿವಾಕರ್, ಎಸ್ ಪಿ ಹರಿಬಾಬು ಉಪಸ್ಥಿತರಿದ್ದರು. ಇದನ್ನೂ ಓದಿ: ದಾವಣಗೆರೆ | ಬ್ಲಡ್‌ ಕ್ಯಾನ್ಸರ್‌ನೊಂದಿಗೆ ಹೋರಾಡಿ ಎಸ್ಎಸ್ಎಲ್‌ಸಿಯಲ್ಲಿ ಶಾಲೆಗೆ ಫಸ್ಟ್ ಬಂದ ವಿದ್ಯಾರ್ಥಿನಿ

  • ‘ನಿರ್ಮಲ’ ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ

    ‘ನಿರ್ಮಲ’ ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ

    ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಇಂಟರ್ ನ್ಯಾಶನಲ್ ಫಿಲಂ ಫೆಸ್ಟಿವಲ್ ನಲ್ಲಿ ಕನ್ನಡದ ‘ನಿರ್ಮಲ’ (Nirmala) ಚಿತ್ರ ಅತ್ಯುತ್ತಮ ಮಕ್ಕಳ ಚಿತ್ರ (Children’s Film) ಅವಾರ್ಡ್ ಪಡೆದುಕೊಂಡಿದೆ. ಉಲ್ಲಾಸ್ ಎಂಟರ್ಪ್ರೈಸಸ್ ಬ್ಯಾನರ್ ನಡಿ ನಿರ್ಮಾಣವಾದ ಈ ಚಿತ್ರ ಜರ್ಮನ್, ಥಾಯ್ಲೆಂಡ್, ಇಟಲಿ, ಉಕ್ರೇನ್ ಸೇರಿದಂತೆ ಹತ್ತಕ್ಕೂ ಹೆಚ್ಚು ಭಾಷೆಯ ಮಕ್ಕಳ ಸಿನಿಮಾಗಳ ನಡುವೆ ಅತ್ಯುತ್ತಮ ಮಕ್ಕಳ ಸಿನಿಮಾ ಪ್ರಶಸ್ತಿಗೆ ಪಾತ್ರವಾಗಿದೆ. ಥಾಯ್ಲೆಂಡ್ ಮಾಜಿ ಪ್ರಧಾನಿ ಪ್ರಶಸ್ತಿಯನ್ನು ಪ್ರಧಾನ ಮಾಡುವ ಮೂಲಕ ಕನ್ನಡ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಬ್ಯಾಂಕಾಕ್ (Bangkok) ನಲ್ಲಿ ನಡೆಯುತ್ತಿರುವ ಮೂರನೇ ಇಂಟರ್ ನ್ಯಾಶನಲ್ ಫಿಲಂ ಫೆಸ್ಟಿವಲ್ ಇದಾಗಿದ್ದು, ಕರ್ನಾಟಕದಿಂದ ಮಕ್ಕಳ ಚಿತ್ರವಾಗಿ ‘ನಿರ್ಮಲ’ ಸಿನಿಮಾ ಮಾತ್ರ ಆಯ್ಕೆ ಆಗಿತ್ತು. ಬೇರೆ ಬೇರೆ ಭಾಷೆಯ ಹಲವು ಸಿನಿಮಾಗಳು ಪ್ರಶಸ್ತಿ ರೇಸ್ ನಲ್ಲಿದ್ದರೂ ಅಂತಿಮವಾಗಿ ನಮ್ಮ ಬ್ಯಾನರ್ ನಿರ್ಮಾಣದ ‘ನಿರ್ಮಲ’ ಸಿನಿಮಾ ಈ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಕ್ಯಾಮೆರಾ ಮ್ಯಾನ್ ಹಾಗೂ ಪ್ರೊಡಕ್ಷನ್ ಹೊರತುಪಡಿಸಿ ಎಲ್ಲಾ ವಿಭಾಗದಲ್ಲೂ ಹದಿನಾರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೇ ಸೇರಿ ಮಾಡಿರುವ ಸಿನಿಮಾವಿದು. ನಿರ್ದೇಶನ, ನಟನೆ, ಸಂಕಲನ, ಮೇಕಪ್, ಮ್ಯೂಸಿಕ್ ಎಲ್ಲವನ್ನು ಮಕ್ಕಳೇ ಮಾಡಿರೋದು ಈ ಚಿತ್ರದ ವಿಶೇಷ. ಅಲ್ಲಿ ಬಂದವರೆಲ್ಲ ಸಿನಿಮಾ ಬಗ್ಗೆ ಕೇಳಿ ಆಶ್ಚರ್ಯ ಹಾಗೂ ಹರುಷ ವ್ಯಕ್ತಪಡಿಸಿದ್ರು ಎಂದು ಚಿತ್ರದ ನಿರ್ಮಾಪಕ ಉಲ್ಲಾಸ್ ಎಂಟರ್ಪ್ರೈಸಸ್ ಬ್ಯಾನರ್ ನ ಉಲ್ಲಾಸ್ ಗೌಡ (Ullas Gowda) ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸದ್ಯಕ್ಕಿಲ್ಲ ‘ಕಿರಿಕ್ ಪಾರ್ಟಿ 2’ : ಈಗೇನಿದ್ದರೂ ರಿಚರ್ಡ್ ಆಂಟನಿ ಗುಂಗಿನಲ್ಲಿ ರಕ್ಷಿತ್

    ಬೆಂಗಳೂರು ಇಂಟರ್ ನ್ಯಾಶನಲ್ ಫೆಸ್ಟಿವಲ್ ಗೆ ಆಯ್ಕೆ ಆಗಿ ಇನ್ನೇನು ಸಿನಿಮಾ ಬಿಡುಗಡೆ ಮಾಡಬೇಕು ಎನ್ನುವಾಗ ಕೋವಿಡ್ ಬಂತು. ಆನ್‌ಲೈನ್ ನಲ್ಲಿ ಹಲವು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಈ ಚಿತ್ರ ಪ್ರದರ್ಶನಗೊಂಡಿದೆ. ಬ್ಯಾಂಕಾಕ್ ಇಂಟರ್ ನ್ಯಾಶನಲ್ ಫೆಸ್ಟಿವಲ್ ನಲ್ಲಿ ಈ ಸಿನಿಮಾ ಆಯ್ಕೆ ಆಗಿ ಪ್ರಶಸ್ತಿ ಪಡೆದುಕೊಂಡಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷನಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಶಸ್ತಿ ಸ್ವೀಕರಿಸಿದ್ದು ತುಂಬಾ ಖುಷಿ ಕೊಟ್ಟಿದೆ. ನಮ್ಮ ಬ್ಯಾನರ್ ನಲ್ಲಿ ಇಂತಹದೊಂದು ಸಿನಿಮಾ ಮೂಡಿ ಬಂದಿರೋದು ಹೆಮ್ಮೆ ಎನಿಸುತ್ತದೆ ಎಂದು ಭಾ.ಮ.ಹರೀಶ್ ಸಂತಸ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಎಲ್ಲರೂ ಡಿಸ್‍ಲೈಕ್ ಮಾಡಿದ ನಿರ್ಮಲಗೆ ದಿವ್ಯಾ ಲೈಕ್ ಕೊಟ್ಟಿದ್ಯಾಕೆ..?

    ಎಲ್ಲರೂ ಡಿಸ್‍ಲೈಕ್ ಮಾಡಿದ ನಿರ್ಮಲಗೆ ದಿವ್ಯಾ ಲೈಕ್ ಕೊಟ್ಟಿದ್ಯಾಕೆ..?

    ಬೆಂಗಳೂರು: ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾಗಿ ನಾಲ್ಕು ದಿನ ಪೂರ್ಣಗೊಂಡಿದ್ದು, ಇಷ್ಟು ದಿನದಲ್ಲಿ ಒಬ್ಬರಿಗೊಬ್ಬರು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಎಂದು ತಿಳಿಯಲು ಬಿಗ್‍ಬಾಸ್ ಟಾಸ್ಕ್‍ವೊಂದನ್ನು ನೀಡಿದ್ದರು. ಅದರ ಅನುಸಾರ ಆ್ಯಕ್ಟಿವಿಟಿ ಏರಿಯಾದಲ್ಲಿ ಲೈಕ್ ಹಾಗೂ ಡಿಸ್ ಲೈಕ್ ಬ್ಯಾಡ್ಜ್ ಗಳನ್ನು ಇರಿಸಲಾಗಿತ್ತು. ಅದರಂತೆ ಮನೆಯ ಸದಸ್ಯರು ಸರದಿಯಲ್ಲಿ ಬಂದು ಮನೆಯಲ್ಲಿ ತಾವು ಹೊಂದಿಕೊಳ್ಳುವ ಒಬ್ಬ ಸದಸ್ಯರಿಗೆ ಲೈಕ್ ಬ್ಯಾಡ್ಜ್ ಮತ್ತು ಹೊಂದಿಕೊಳ್ಳಲಾಗದ ಮತ್ತೊಬ್ಬ ಸದಸ್ಯರಿಗೆ ಡಿಸ್ ಲೈಕ್ ಬ್ಯಾಡ್ಜ್ ನೀಡಿ ಅದಕ್ಕೆ ಸೂಕ್ತ ಕಾರಣ ತಿಳಿಸುವಂತೆ ಸೂಚಿಸಿದ್ದರು.

    ಈ ವೇಳೆ ಮನೆಯ ಬಹುತೇಕ ಸ್ಪರ್ಧಿಗಳು ನಿರ್ಮಲರ ನಡುವಳಿಕೆಯನ್ನು ವಿರೋಧಿಸಿ, ಅವರು ಯಾರೊಂದಿಗೂ ಬೆರೆಯುತ್ತಿಲ್ಲ. ಎಲ್ಲರೊಂದಿಗೆ ಮಾತನಾಡಬೇಕು ಹೀಗೆ ಹಲವು ಕಾರಣಗಳನ್ನು ನೀಡಿ ಡಿಸ್ ಲೈಕ್ ಬ್ಯಾಡ್ಜ್ ನೀಡಿದರು. ಆದರೆ ದಿವ್ಯಾ ಸುರೇಶ್ ಮಾತ್ರ ಎಲ್ಲರ ಹೇಳಿಕೆಗಿಂತಲೂ ವಿಭಿನ್ನವಾಗಿ ಉತ್ತರಿಸುವ ಮೂಲಕ ನಿರ್ಮಲಗೆ ಲೈಕ್ ಬ್ಯಾಡ್ಜ್ ನೀಡಿದರು.

    ಮೊದಲಿಗೆ ನಾನು ಡಿಸ್ ಲೈಕ್‍ನನ್ನು ನೀಡಲು ಇಚ್ಛಿಸುತ್ತೇನೆ. ಇದು ಡಿಸ್ ಲೈಕ್ ಎಂದಲ್ಲಾ. ನನಗೆ ಆ ವ್ಯಕ್ತಿ ಜೊತೆ ಹೆಚ್ಚಾಗಿ ಬೆರೆಯಲು ಆಗಲಿಲ್ಲ. ಮಾತಾನಾಡಿದ್ದೇನೆ, ಆದರೆ ಅಷ್ಟಾಗಿ ಮಾತನಾಡಿಲ್ಲ. ಡಿಸ್ ಲೈಕ್ ಬ್ಯಾಡ್ಜ್ ನೀಡುತ್ತಿದ್ದೇನೆ ಎಂದ ಮಾತ್ರಕ್ಕೆ ನಾನು ಆ ವ್ಯಕ್ತಿಯನ್ನು ದೂಷಿಸುತ್ತಿಲ್ಲ ಅಷ್ಟೇ ಎಂದು ಕ್ಷಮಿಸಿ ನಾನು ನಿಮಗೆ ಡಿಸ್ ಲೈಕ್ ಬ್ಯಾಡ್ಜ್ ನೀಡುತ್ತಿದ್ದೇನೆ ಅಂತ ಶಂಕರ್‍ಗೆ ಡಿಸ್‍ಲೈಕ್ ಬ್ಯಾಡ್ಜ್ ನೀಡಿದರು.

    ಬಳಿಕ ಲೈಕ್ ಬ್ಯಾಡ್ಜ್ ಅನ್ನು ನಿರ್ಮಲರಿಗೆ ನೀಡಲು ಇಷ್ಟಪಡುತ್ತೇನೆ. ಇಲ್ಲಿ ಕೆಲವರು ಗುಂಪಿನಲ್ಲಿ ಗೋವಿಂದ ಆಗುತ್ತಿದ್ದಾರೆ. ಅದರಲ್ಲಿ ನಾನು ಕೂಡ ಇರಬಹುದು. ಆದರೆ ನಿರ್ಮಲರಿಗೆ ಲೈಕ್ ಬ್ಯಾಡ್ಜ್ ಕೊಡಲು ಕಾರಣವೆಂದರೆ ನಾನು ಒಬ್ಬ ಮನುಷ್ಯಳು, ನನಗೂ ಭಾವನೆಗಳಿವೆ. ನನಗೂ ಸ್ವಲ್ಪ ನನ್ನದೇ ಆದ ಟೈಮ್ ನೀಡಬೇಕೆಂದು ಏಕಾಂಗಿಯಾಗಿ ಕುಳಿತುಕೊಳ್ಳುವುದು ಅಥವಾ ನಾನು ಈ ವಾರ ಎಲಿಮಿನೆಟ್ ಆಗುತ್ತಿದ್ದೇನೆ, ನಾನು ಅವರೊಂದಿಗೆ ಮಾತನಾಡಬೇಕು. ನಾನು ಕ್ಯಾಮೆರಾ ಕಣ್ಣೆದುರಿಗೆ ಕಾಣಿಸಿಕೊಳ್ಳಬೇಕು. ಎಲ್ಲರೊಂದಿಗೆ ನಾನು ಸೇರಿ ಜೋರಾಗಿ ನಗಬೇಕು ಎನ್ನುವ ಆಲೋಚನೆಯನ್ನು ಬಿಟ್ಟು, ನಾನು ಒಬ್ಬಳು ಮನುಷ್ಯಳು, ನಾನು ಒಬ್ಬಳು ಸ್ಪರ್ಧಿಯೇ ಎಂದು ನನಗೆ ನನ್ನದೇಯಾದಂತಹ ಸ್ಪೇಸ್ ಬೇಕು. ನಾನು ನಾನಾಗಿ ಇರುತ್ತೇನೆ ಎಂದು ತಾನಾಗಿಯೇ ಇರುವುದು ನಿರ್ಮಲರವರು ಎಂದು ನನ್ನ ಅಭಿಪ್ರಾಯ. ಹಾಗಾಗಿ ನಾನು ಲೈಕ್ ಬ್ಯಾಡ್ಜ್ ನನ್ನು ಅವರಿಗೆ ನೀಡುತ್ತೇನೆ ಎಂದು ವಿವರಿಸಿದರು.

    ಒಟ್ಟಾರೆ ಮನೆಮಂದಿಯೆಲ್ಲ ಡಿಸ್ ಲೈಕ್ ಬ್ಯಾಡ್ಜ್ ನೀಡಿದ ನಿರ್ಮಲಗೆ ದಿವ್ಯಾ ಲೈಕ್ ನೀಡಿದ್ದನ್ನು ನೋಡಿ ಸ್ಪರ್ಧಿಗಳೆಲ್ಲರೂ ಜೋರಾಗಿ ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿದರು.

  • ಮುದ್ದು ಮಕ್ಕಳ ಜೊತೆ ಮಗುವಾಗಿ ಸಖತ್ ಸ್ಟೆಪ್ ಹಾಕಿದ ರಾಕಿಂಗ್ ಸ್ಟಾರ್

    ಮುದ್ದು ಮಕ್ಕಳ ಜೊತೆ ಮಗುವಾಗಿ ಸಖತ್ ಸ್ಟೆಪ್ ಹಾಕಿದ ರಾಕಿಂಗ್ ಸ್ಟಾರ್

    ಬೆಂಗಳೂರು: ಚಂದನವನದ ರಾಕಿಂಗ್ ಸ್ಟಾರ್ ಯಶ್ ತುಂಬಾ ಸಿಂಪಲ್ ಎಂಬುವುದು ಎಲ್ಲರಿಗೂ ಗೊತ್ತು. ಸಿನಿಮಾ ಜೊತೆ ಜೊತೆಯಲ್ಲಿ ಸಾಮಾಜಿಕ ಕೆಲಸಗಳಲ್ಲಿಯೂ ಯಶ್ ಭಾಗಿಯಾಗುವ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂದು ನಗರದಲ್ಲಿ ನಡೆದ ‘ನಿರ್ಮಲ’ ಚಿತ್ರದ ಮುಹೂರ್ತಕ್ಕೆ ಆಗಮಿಸಿದ್ದ ಯಶ್ ಮುದ್ದು ಮಕ್ಕಳ ಜೊತೆ ಮಗುವಾಗಿ ಸಖತ್ ಸ್ಟೆಪ್ ಹಾಕಿದ್ದಾರೆ.

    ನಿರ್ಮಲ ಸಿನಿಮಾವನ್ನು ಮಕ್ಕಳೇ ನಟಿಸಿ, ನಿರ್ದೇಶನ ಮಾಡುತ್ತಿದ್ದು, ನಗರದ ಖಾಸಗಿ ಶಾಲೆಯಲ್ಲಿ ಆಯೋಜಿಸಿದ್ದ ಚಿತ್ರದ ಮುಹೂರ್ತಕ್ಕೆ ಆಗಮಿಸಿದ್ದ ಯಶ್, ಗೂಗ್ಲಿ ಸಿನಿಮಾದ ಹಾಡಿಗೆ ಮಕ್ಕಳ ಜೊತೆ ಹೆಜ್ಜೆಹಾಕಿದರು.

    ನಿರ್ಮಲ ಚಿತ್ರಕ್ಕೆ ನಿರ್ಮಾಪಕ ಭಾಮಾ ಹರೀಶ್ ಪುತ್ರ ಉಲ್ಲಾಸ್ ಬಂಡವಾಳ ಹಾಕಿದ್ದಾರೆ. ನಿರ್ದೇಶನ, ನಟನೇ, ನೃತ್ಯ ಸಂಯೋಜನೆ, ಎಡಿಟಿಂಗ್, ಡಬ್ಬಿಂಗ್ ಸೇರಿದಂತೆ ಬಹುತೇಕ ಸಿನಿಮಾ ಕೆಲಸಗಳನ್ನ ಮಕ್ಕಳೇ ಮಾಡ್ತಿರೊದು ಮತ್ತೊಂದು ಚಿತ್ರದ ವಿಶೇಷ.

    ಸಿನಿಮಾಗಾಗಿ ಮಕ್ಕಳಿಗೆ ಈಗಾಲೇ ಎರಡು ತಿಂಗಳು ತರಬೇತಿ ನೀಡಲಾಗಿದೆ. ಸ್ವಚ್ಛತೆ ಬಗ್ಗೆ ಬೆಳಕು ಚೆಲ್ಲಲಿರೋ ಚಿತ್ರಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದ ಯಶ್ ಮಕ್ಕಳ ಜೊತೆ ಡ್ಯಾನ್ಸ್ ಮಾಡಿ ಖುಷಿ ಪಟ್ರು.