Tag: Nirav Modi

  • ಪ್ರಧಾನಿ ಮೋದಿಯನ್ನು ಟ್ರೋಲ್ ಮಾಡಿದ ರಾಹುಲ್ ಗಾಂಧಿ

    ಪ್ರಧಾನಿ ಮೋದಿಯನ್ನು ಟ್ರೋಲ್ ಮಾಡಿದ ರಾಹುಲ್ ಗಾಂಧಿ

    ನವದೆಹಲಿ: ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚಿಸಿ ದೇಶ ಬಿಟ್ಟು ಓಡಿ ಹೋಗಿರುವ ನೀರವ್ ಮೋದಿ ಬಗ್ಗೆ ಮಾತನಾಡಿ ಎಂದು ರಾಹುಲ್ ಗಾಂಧಿ  ಸಲಹೆ ನೀಡಿದ್ದಾರೆ.

    ಫೆಬ್ರವರಿ 14 ರಂದು ಮೋದಿ, ಇದೇ 25ರಂದು ನಡೆಯಲಿರುವ ಮನ್ ಕೀ ಕಾರ್ಯಕ್ರಮದಲ್ಲಿ ಯಾವೆಲ್ಲ ವಿಚಾರಗಳನ್ನು ಪ್ರಸ್ತಾಪಿಸಬೇಕು. ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಟ್ವೀಟ್ ಮಾಡಿ ಜನರಲ್ಲಿ ಕೇಳಿದ್ದರು.

    ಮೋದಿ ಅವರ  ಈ ಟ್ವೀಟ್ ಗೆ ರಾಹುಲ್ ಗಾಂಧಿ, 22 ಸಾವಿರ ಕೋಟಿ ರೂ. ವಂಚಿಸಿರುವ ನೀರವ್ ಮೋದಿ ಮತ್ತು ರಾಫೇಲ್ ಡೀಲ್ ಬಗ್ಗೆ ಮಾತನಾಡಿ ಎಂದು ಟ್ವಿಟ್ಟರ್ ನಲ್ಲಿ  ಬರೆದು ಟ್ರೋಲ್ ಮಾಡಿದ್ದಾರೆ.

     

  • ಪ್ರಧಾನಿ ಮೋದಿಯನ್ನು ಅಪ್ಪಿ 12 ಸಾವಿರ ಕೋಟಿ ರೂ. ಲೂಟಿ ಮಾಡಿ: ರಾಹುಲ್ ಗಾಂಧಿ

    ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿನ ವಂಚನೆ ಬಯಲಿಗೆ ಬಂದ ಬೆನ್ನಲ್ಲೇ, ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ಖ್ಯಾತ ಉದ್ಯಮಿ ಮತ್ತು ಆಭರಣ ವ್ಯಾಪಾರಿ ನೀರವ್ ಮೋದಿ ಅವರ ಸಂಬಂಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರನ್ನು ಗುರಿ ಮಾಡಿ ಟ್ವೀಟ್ ಮಾಡಿದ್ದಾರೆ.

    ರಾಹುಲ್ ತಮ್ಮ ಟ್ವೀಟ್ ನಲ್ಲಿ ಭಾರತವನ್ನು ಲೂಟಿ ಮಾಡಲು ಮಾರ್ಗದರ್ಶನ ನೀಡಿ ಎಂದು ನೀರವ್ ಮೋದಿ ಎಂದು ಬರೆದಿದ್ದು, ಇತ್ತೀಚೆಗೆ ಪ್ರಧಾನಿ ಮೋದಿ ಅವರು ಸ್ವಿಜರ್‍ಲ್ಯೆಂಡ್ ದಾವೋಸ್ ನಲ್ಲಿ ಭಾಗವಹಿಸಿದ್ದ ವಿಶ್ವ ಆರ್ಥಿಕ ಒಕ್ಕೂಟ ಶೃಂಗ ಸಭೆಯಲ್ಲಿ ನೀರವ್ ಭಾಗವಹಿಸಿದ್ದ ವಿಚಾರವನ್ನು ಉಲ್ಲೇಖಿಸಿದ್ದಾರೆ.

    ರಾಹುಲ್ ಟ್ವೀಟ್ ಗೂ ಕೆಲ ಸಮಯದ ಮುನ್ನ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ನೀರವ್ ಮೋದಿ ಅಥವಾ ವಿಜಯ್ ಮಲ್ಯ ಬಿಜೆಪಿಯ ಸಹಕಾರವಿಲ್ಲದೇ ದೇಶವನ್ನು ತೊರೆದರು ಎಂಬುದನ್ನು ನಂಬಲು ಸಾಧ್ಯವೇ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು.

    ಮೂಲಗಳ ಪ್ರಕಾರ ಪಿಎನ್‍ಬಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ನೀರವ್ ಮೋದಿ ಅವರಿಗೆ ಸಂಬಂಧಿಸಿದ ಕಚೇರಿಗಳ ಮೇಲೆ ಕೇಂದ್ರದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳು ನೀರವ್ ಹಾಗೂ ಅವರ ಸಹೋದರ, ಪತ್ನಿ ಮತ್ತು ಕೆಲವರು ಬ್ಯಾಂಕ್ ಗೆ ಮೋಸ ಮಾಡಿದ್ದು, ಇದರಿಂದ ನಷ್ಟ ಉಂಟಾಗಿದೆ ಎಂದು ಸಿಬಿಐ ಗೆ ದೂರು ನೀಡಿದೆ. ಪ್ರಸ್ತುತ ಉದ್ಯಮಿ ನೀರವ್ ಮೋದಿ ತಲೆ ಮರೆಸಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ಪ್ರಸ್ತುತ ಪ್ರಕರಣದಲ್ಲಿ ನೀರಜ್ ಅವರಿಗೆ ಸಂಬಂಧಿಸಿದ ಮುಂಬೈ, ಸೂರತ್ ಕಚೇರಿಗಳು ಸೇರಿದಂತೆ 10 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

    ಪಂಜಾಬ್ ನ್ಯಾಷನಲ್ ಬ್ಯಾಂಕ್ ಅವ್ಯವಹಾರ ಕುರಿತು ಬುಧವಾರವಷ್ಟೇ ಬ್ಯಾಂಕ್ ಮಾಹಿತಿ ಬಹಿರಂಗ ಪಡಿಸಿತ್ತು. ಇನ್ನು ಅಕ್ರಮ ಹಣ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪಿಎನ್‍ಬಿ ತನ್ನ 10 ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿದೆ.

    ಮುಂಬೈ ಶಾಖೆಯಲ್ಲಿ 11,300 ಕೋಟಿ ರೂ. ಅಕ್ರಮ ವಹಿವಾಟು ನಡೆದಿರುವುದು ತನಿಖೆ ವೇಳೆ ಪತ್ತೆಯಾಗಿದೆ. ತಮಗೇ ಬೇಕಾದ ಗ್ರಾಹಕರ ಜೊತೆ ವ್ಯವಹಾರ ನಡೆಸಿ ಈ ಅಕ್ರಮ ಎಸಗಲಾಗಿದೆ ಎಂದು ಪಿಎನ್‍ಬಿ ಮುಂಬೈ ಶೇರು ವಿನಿಮಯ ಕೇಂದ್ರಕ್ಕೆ ಮಾಹಿತಿ ನೀಡಿತ್ತು. ಪಿಎನ್‍ಬಿ ಗ್ರಾಹಕರಿಗೆ ಬೃಹತ್ ಪ್ರಮಾಣದಲ್ಲಿ ಸಾಲ ನೀಡುವ ದೇಶದ ಎರಡನೇ ಅತೀ ದೊಡ್ಡ ರಾಷ್ಟ್ರೀಕೃತ ಬ್ಯಾಂಕ್ ಆಗಿದೆ. ಅಷ್ಟೇ ಅಲ್ಲದೇ ತನ್ನ ಆಸ್ತಿಯಿಂದಾಗಿ ದೇಶದ ನಾಲ್ಕನೇ ಅತೀ ದೊಡ್ಡ ಬ್ಯಾಂಕ್ ಎನಿಸಿಕೊಂಡಿದೆ. ಇದನ್ನೂ ಓದಿ: ಪಿಎನ್‍ಬಿಯಲ್ಲಿ 11,300 ಕೋಟಿ ರೂ. ಭಾರೀ ಅಕ್ರಮ!

    ಪಿಎನ್‍ಬಿ 2016-17ರ ಅವಧಿಯಲ್ಲಿ ವಸೂಲಾಗದ 9,205 ಕೋಟಿ ರೂ. ಸಾಲದ ಮೊತ್ತವನ್ನು ವಜಾ ಮಾಡಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಳಿಕ ಅತಿ ಹೆಚ್ಚು ಸಾಲದ ಮೊತ್ತವನ್ನು ವಜಾಗೊಳಿಸಿದ ಎರಡನೇ ಬ್ಯಾಂಕ್ ಪಿಎನ್‍ಬಿ ಆಗಿದೆ. ಎಸ್‍ಬಿಐ ವಸೂಲಾಗದ 20,339 ಕೋಟಿ ರೂ. ಸಾಲದ ಮೊತ್ತವನ್ನು ವಜಾಗೊಳಿಸಿತ್ತು.