Tag: Niranjan Deshpande

  • ಫಿನಾಲೆ ತಲುಪಿದ ಭರ್ಜರಿ ಬ್ಯಾಚುಲರ್ಸ್- ಗೆಲುವಿಗಾಗಿ ಸುನಿಲ್, ರಕ್ಷಕ್ ಬುಲೆಟ್ ಪೈಪೋಟಿ

    ಫಿನಾಲೆ ತಲುಪಿದ ಭರ್ಜರಿ ಬ್ಯಾಚುಲರ್ಸ್- ಗೆಲುವಿಗಾಗಿ ಸುನಿಲ್, ರಕ್ಷಕ್ ಬುಲೆಟ್ ಪೈಪೋಟಿ

    ರುನಾಡಿನ ಎಲ್ಲರ ನೆಚ್ಚಿನ ವಾಹಿನಿ ಜೀ ಕನ್ನಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಸರಿಗಮಪ, ವೀಕೆಂಡ್ ವಿತ್ ರಮೇಶ್, ಡ್ರಾಮಾ ಜೂನಿಯರ್ಸ್ ಮತ್ತು ಕಾಮಿಡಿ ಕಿಲಾಡಿಗಳು ಸೇರಿ ಹಲವಾರು ಶೋಗಳ ಮೂಲಕ ವೀಕ್ಷಕರನ್ನು ಮನರಂಜಿಸುತ್ತಾ ಬಂದಿದೆ. ಈ ಪಟ್ಟಿಗೆ ಭರ್ಜರಿ ಬ್ಯಾಚುಲರ್ಸ್ (Bharjari Bachelors) ಸೀಸನ್ 2 ಸೇರ್ಪಡೆಯಾಗಿದ್ದು, ಇದು ಜೀವನದ ಪ್ರಮುಖ ಮೈಲಿಗಲ್ಲುಗಳಲ್ಲಿ ಒಂದಾದ ಮದುವೆಗೆ ತಯಾರಿ ನಡೆಸುತ್ತಿರುವ ಯುವ ಬ್ಯಾಚುಲರ್ಗಳ ಜೀವನ ಮತ್ತು ವ್ಯಕ್ತಿತ್ವಗಳ ಮೇಲೆ ಕೇಂದ್ರೀಕರಿಸುವ ರಿಯಾಲಿಟಿ ಶೋ ಆಗಿದೆ.

    ಭರ್ಜರಿ ಬ್ಯಾಚುಲರ್ಸ್ ಮೊದಲ ಸೀಸನ್ ಯಶಸ್ಸಿನ ಬಳಿಕ ಎರಡನೇ ಸೀಸನ್ ಕೂಡ ಕರ್ನಾಟಕದಾದ್ಯಂತ ಪ್ರೇಕ್ಷಕರ ಹೃದಯ ಗೆದ್ದಿದೆ. ಈ ಸೀಸನ್‌ನಲ್ಲಿ ಹೊಸ ಬ್ಯಾಚುಲರ್‌ಗಳನ್ನು ಪರಿಚಯಿಸಲಾಯಿತು. ಅವರು ತಮ್ಮ ಆತ್ಮವಿಶ್ವಾಸ, ಸಂವಹನ ಕೌಶಲ್ಯ, ಸ್ವಾಭಾವಿಕತೆ ಮತ್ತು ಒಟ್ಟಾರೆ ವ್ಯಕ್ತಿತ್ವವನ್ನು ಪರೀಕ್ಷಿಸಲು ಮಾಡಲಾಗಿದ್ದ ಅನೇಕ ಸುತ್ತುಗಳಲ್ಲಿ ಭಾಗವಹಿಸಿ ಎಲ್ಲರ ಮನಗೆದ್ದಿದ್ದಾರೆ.

    ಸೀಸನ್ ನಲ್ಲಿ ಬ್ರಹ್ಮಚಾರಿ vs ಸಂಸಾರಿ, ಡೆಡಿಕೇಶನ್ ರೌಂಡ್, ಕಂಪ್ಯಾಟಿಬಿಲಿಟಿ ರೌಂಡ್, ಪ್ರೊಪೋಸ್ ರೌಂಡ್, ಸೀನಿಯರ್ಸ್ vs ಜೂನಿಯರ್ಸ್ ಹೀಗೆ ವಿಭಿನ್ನ ಸುತ್ತುಗಳು ಇದ್ದು ಇದರಲ್ಲಿ ಏಂಜೆಲ್ಸ್ ಮತ್ತು ಬ್ಯಾಚುಲರ್ಸ್ ಸಕ್ಕತಾಗಿ ಭಾಗವಹಿಸಿ ಎಲ್ಲರನ್ನೂ ಮನರಂಜಿಸಿದ್ದಾರೆ. ಅಷ್ಟೇ ಅಲ್ಲದೇ ಈ ಶೋ ಭಾವನಾತ್ಮಕವಾಗಿ ಜನರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

    ಅದ್ಬುತ ನಿರೂಪಣೆಯ ಮೂಲಕ ನಿರಂಜನ್ ದೇಶಪಾಂಡೆ (Niranjan Deshpande) ಈ ಶೋನ ನಡೆಸಿಕೊಟ್ಟಿದ್ದು, ಜಡ್ಜ್‌ಗಳಾದ ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಈ ಶೋನ ಮತ್ತೊಂದು ಕೇಂದ್ರ ಬಿಂದುವಾಗಿದ್ದರು. ಹಾಗೆಯೇ ಶೋನಲ್ಲಿ ಭಾಗವಹಿಸಿದ ಬ್ಯಾಚುಲರ್ಸ್ ಹಾಗೂ ಏಂಜೆಲ್ಸ್ ಗಳು ತಮ್ಮದೇ ಆದ ಶೈಲಿಯಲ್ಲಿ ವೀಕ್ಷಕರನ್ನು ಮನರಂಜಿಸಿದ್ದಾರೆ.  ಇದನ್ನೂ ಓದಿ: ದರ್ಶನ್‌-ಪವಿತ್ರಾ ಲಿವ್‌ ಇನ್‌ ರಿಲೇಷನ್‌ ಶಿಪ್‌ನಲ್ಲಿದ್ದರು: ಸರ್ಕಾರ ಪರ ವಕೀಲ

    ಅಂತಿಮ ಸುತ್ತಿನಲ್ಲಿ ಸುನೀಲ್-ಅಮೃತಾ, ದರ್ಶನ್-ಅಪೇಕ್ಷಾ, ರಕ್ಷಕ್ ಬುಲೆಟ್- ರಮೋಲ, ಹುಲಿ ಕಾರ್ತಿಕ್- ಧನ್ಯ, ಗಾಬ್ರಿ -ಅನನ್ಯಾ, ಉಲ್ಲಾಸ್-ಪವಿ, ಪ್ರವೀಣ್ ಜೈನ್- ಸುಕೃತಾ, ಪ್ರೇಮ್ ಥಾಪಾ-ವಿಜಯಲಕ್ಷ್ಮಿ, ಡ್ರೋನ್ ಪ್ರತಾಪ್-ಗಗನಾ, ಮತ್ತು ಸೂರ್ಯಾ- ಅಭಿಜ್ಞಾ ಭಾಗವಹಿಸಲಿದ್ದಾರೆ. ಹಾಗೆಯೇ ಭರ್ಜರಿ ಬ್ಯಾಚುಲರ್ ಸೀಸನ್ 2 ನ ವಿಜೇತರು ಯಾರಾಗುತ್ತಾರೆ ಅನ್ನುವುದಕ್ಕೆ ಈ ವಾರಾಂತ್ಯದಲ್ಲಿ ಸಿಗಲಿದೆ ಉತ್ತರ.

    ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ನ ವಿಜೇತರು ಯಾರಾಗ್ತಾರೆ? ತಿಳ್ಕೊಳೋಕೆ ಮಿಸ್ ಮಾಡದೇ ನೋಡಿ ಜೀ಼ ಕನ್ನಡ ಇದೇ ಭಾನುವಾರ ಸಂಜೆ 6 ಗಂಟೆಗೆ.

  • 2ನೇ ವಾರವೂ ‘ಆ್ಯಕ್ಟ್ 1978’ ಚಿತ್ರ ಹೌಸ್‍ಫುಲ್: ಮಂಸೂರೆ ಚಿತ್ರಕ್ಕೆ ಡೈನಾಮಿಕ್ ಪ್ರಿನ್ಸ್, ನಿರಂಜನ್ ದೇಶಪಾಂಡೆ ಫಿದಾ

    2ನೇ ವಾರವೂ ‘ಆ್ಯಕ್ಟ್ 1978’ ಚಿತ್ರ ಹೌಸ್‍ಫುಲ್: ಮಂಸೂರೆ ಚಿತ್ರಕ್ಕೆ ಡೈನಾಮಿಕ್ ಪ್ರಿನ್ಸ್, ನಿರಂಜನ್ ದೇಶಪಾಂಡೆ ಫಿದಾ

    ಸ್ಯಾಂಡಲ್‍ವುಡ್ ಅಂಗಳದಲ್ಲಿ ಕೊರೊನಾ ಲಾಕ್‍ಡೌನ್ ಬಳಿಕ ಹೊಸ ಅಲೆ ಸೃಷ್ಟಿಸಿರುವ ‘ಆ್ಯಕ್ಟ್ 1978’ ಚಿತ್ರ ಪ್ರತಿಯೊಬ್ಬರಿಂದ ಬಹುಪರಾಕ್ ಹೇಳಿಸಿಕೊಳ್ಳುತ್ತ ಮುನ್ನುಗ್ಗುತ್ತಿದೆ. ಪ್ರೇಕ್ಷಕ ಮಹಾಪ್ರಭು ಹಾಗೂ ಸಿನಿ ದಿಗ್ಗಜರಿಂದ ಅಭೂತ ಪೂರ್ವ ಮೆಚ್ಚುಗೆ ಪಡೆದುಕೊಂಡಿರುವ ‘ಆ್ಯಕ್ಟ್ 1978’ ಚಿತ್ರಕ್ಕೆ ಇದೀಗ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ಬಿಗ್ ಬಾಸ್ ಸ್ಪರ್ಧಿ ನಿರಂಜನ್ ದೇಶಪಾಂಡೆ ಫಿದಾ ಆಗಿದ್ದಾರೆ.

    ಎರಡನೇ ವಾರವೂ ಹೌಸ್‍ಫುಲ್ ಪ್ರದರ್ಶನ ಕಾಣುತ್ತಿರುವ ‘ಆ್ಯಕ್ಟ್ 1978′ ಚಿತ್ರವನ್ನು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ನಿರೂಪಕ, ಬಿಗ್‍ಬಾಸ್ ಸ್ಪರ್ಧಿ ನಿರಂಜನ್ ದೇಶಪಾಂಡೆ ಕೊಂಡಾಡಿದ್ದಾರೆ. ನಟ ಪ್ರಜ್ವಲ್ ದೇವರಾಜ್ ಮಾತನಾಡಿ ಈ ಚಿತ್ರದ ಬಗ್ಗೆ ಮಾತನಾಡೋದಕ್ಕೆ ನನಗೆ ತುಂಬಾ ಹೆಮ್ಮೆ ಆಗುತ್ತದೆ. ನಿಜ ಜೀವನಕ್ಕೆ ಹತ್ತಿರವಾದ ಈ ಸಿನಿಮಾ ನೋಡಿ ನಾನು ತುಂಬಾ ಭಾವುಕನಾದೆ ಎಂದಿದ್ದಾರೆ. ಇನ್ನು ನಿರಂಜನ್ ದೇಶಪಾಂಡೆ ಮಾತನಾಡಿ, ಕೆಲವು ಸಿನಿಮಾ ಬಗ್ಗೆ ಏನು ಮಾತನಾಡಬೇಕು ಅನ್ನೋದೇ ತಿಳಿಯೋದಿಲ್ಲ. ಸಿನಿಮಾ ನೋಡಿ ಆಚೆ ಬಂದ ಮೇಲೆ ಒಂದು ಕ್ಷಣ ಮೂಕವಿಸ್ಮಿತನಾದೆ. `ಆ್ಯಕ್ಟ್ 1978’ ಸಿನಿಮಾ ಒಂದು ರೆವಲೂಶನ್ ಕ್ರಿಯೇಟ್ ಮಾಡುವ ಚಿತ್ರ ಎಂದು ಪ್ರಶಂಸಿದ್ದಾರೆ. ಜೊತೆಗೆ ನಿರ್ದೇಶನ ಹಾಗೂ ಪಾತ್ರವರ್ಗಗಳ ನಟನೆಯನ್ನು ನಿರಂಜನ್ ದೇಶಪಾಂಡೆ ಕೊಂಡಾಡಿದ್ದಾರೆ.

    ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಂಸೂರೆ ನಿರ್ದೇಶನದ ‘ಆ್ಯಕ್ಟ್ 1978’ ಚಿತ್ರ ನವೆಂಬರ್ 20ರಂದು ಬಿಡುಗಡೆಯಾಗಿತ್ತು. ಬಿಡುಗಡೆಯಾದ ಮೊದಲ ದಿನವೇ ಚಿತ್ರತಂಡದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿನಿರಸಿಕರಿಂದ ಚಿತ್ರಕ್ಕೆ ಸಿಕ್ಕಿತ್ತು. ಎರಡನೇ ವಾರವೂ ಚಿತ್ರ ಜನಭರಿತ ಪ್ರದರ್ಶನವನ್ನು ಕಾಣುತ್ತಿದ್ದು, ಅಭೂತಪೂರ್ವ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಚಿತ್ರದ ಬಗ್ಗೆ ಕೇಳಿ ಬರುತ್ತಿದ್ದ ಮಾತುಗಳಿಂದ ಪ್ರಭಾವಿತರಾಗಿ ಪುನೀತ್ ರಾಜ್‍ಕುಮಾರ್, ಸುದೀಪ್, ದರ್ಶನ್, ಶ್ರೀಮುರಳಿ, ಖ್ಯಾತ ಹಾಗೂ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ, ನಟಿ ಆಶಿಕಾ ರಂಗನಾಥ್ ಸೇರಿದಂತೆ ಚಿತ್ರರಂಗದ ಖ್ಯಾತನಾಮರು ಹಾಗೂ ರಾಜಕೀಯ ನಾಯಕರು ಸಿನಿಮಾ ನೋಡಿ ಇಡೀ ಚಿತ್ರತಂಡಕ್ಕೆ ಶಹಬ್ಬಾಸ್ ಹೇಳಿ ‘ಆಕ್ಟ್ 1978’ ಚಿತ್ರದ ಯಶಸ್ಸಿನ ಪಯಣಕ್ಕೆ ಸಾಥ್ ನೀಡಿದ್ದರು.

    ದೇವರಾಜ್. ಆರ್ ನಿರ್ಮಾಣದಲ್ಲಿ ಮೂಡಿ ಬಂದಿರುವ ‘ಆ್ಯಕ್ಟ್ 1978’ ಚಿತ್ರದಲ್ಲಿ ಯಜ್ಞಾ ಶೆಟ್ಟಿ, ದತ್ತಣ್ಣ, ಅಚ್ಯುತ್ ಕುಮಾರ್, ಸಂಚಾರಿ ವಿಜಯ್, ಶ್ರುತಿ, ಸುಧಾ ಬೆಳವಾಡಿ ಸೇರಿದಂತೆ ಸ್ಟಾರ್ ಕಲಾವಿದರು ನಟಿಸಿದ್ದಾರೆ. ಕೊರೊನಾ ಭೀತಿ ನಡುವೆಯೂ ಜನ ಚಿತ್ರವನ್ನು ಚಿತ್ರಮಂದಿರಕ್ಕೆ ಬಂದು ನೋಡಿ ಪ್ರೀತಿ ತೋರಿಸುತ್ತಿರುವುದಕ್ಕೆ ಚಿತ್ರತಂಡ ದಿಲ್‍ಖುಷ್ ಆಗಿದೆ.

  • ಪ್ರೇಕ್ಷಕರ ಮನಸಿನ ತುಂಬಾ ಪ್ರಶ್ನೆಗಳ ಪಾದರಸ!

    ಪ್ರೇಕ್ಷಕರ ಮನಸಿನ ತುಂಬಾ ಪ್ರಶ್ನೆಗಳ ಪಾದರಸ!

    ಬೆಂಗಳೂರು: ಆರ್ಟ್ ಆಂಡ್ ಸೋಲ್ ಮೀಡಿಯಾ ನಿರ್ಮಾಣ ಮಾಡಿರುವ, ಸಂಚಾರಿ ವಿಜಯ್ ಮುಖ್ಯಭೂಮಿಕೆಯಲ್ಲಿರೋ ಪಾದರಸ ಚಿತ್ರ ಬಿಡುಗಡೆಯಾಗೋದು ಯಾವಾಗ..? ಈ ಚಿತ್ರದ ಟ್ರೇಲರ್ ನೋಡಿ ಥ್ರಿಲ್ ಆಗಿದ್ದವರನ್ನೆಲ್ಲ ಒತ್ತರಿಸಿಕೊಂಡು ಕಾಡಿದ್ದ ಪ್ರಶ್ನೆ ಇದೊಂದೇ. ಆಗಸ್ಟ್ ಹತ್ತರಂದು ಪಾದರಸ ರಿಲೀಸಾಗೋ ನಿರ್ಧಾರ ಹೊರ ಬೀಳುವ ಮೂಲಕ ಆ ಪ್ರಶ್ನೆಗೆ ಪರಿಹಾರ ಸಿಕ್ಕಿದೆ.

    ಹೃಶಿಕೇಶ್ ಜಂಬಗಿ ನಿರ್ದೇಶನದ ಈ ಚಿತ್ರ ಇಂಥಾದ್ದೊಂದು ವ್ಯಾಪಕ ಕುತೂಹಲ ಕೆರಳಿಸಿದ್ದು ಟ್ರೇಲರ್ ಮೂಲಕ. ಬಹುಶಃ ಸಂಚಾರಿ ವಿಜಯ್ ತಮ್ಮ ನಟನೆಯ ಮೂಲಕವೇ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಹಾಸ್ಯ ಪ್ರಧಾನ ಚಿತ್ರದಲ್ಲಿಯೂ ಘನ ಗಂಭೀರವಾದ ಪಾತ್ರವನ್ನೇ ಮಾಡಿದ್ದ ಸಂಚಾರಿ ವಿಜಯ್ ಏಕಾಏಕಿ ಪ್ಲೇಬಾಯ್ ಗೆಟಪ್ಪಿನಲ್ಲಿ ಕಾಣಿಸಿಕೊಂಡರೆ ಯಾರಿಗಾದರೂ ಶಾಕ್ ಆಗದಿರಲು ಸಾಧ್ಯವೇ?

    ಈ ಕಾರಣದಿಂದಲೇ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಈ ಟ್ರೇಲರ್ ಮಿಲಿಯನ್ನುಗಟ್ಟಲೆ ವೀವ್ಸ್ ಪಡೆಯೋ ಮೂಲಕ ಸಂಚಲನ ಸೃಷ್ಟಿಸಿದೆ. ಇಡೀ ಚಿತ್ರದ ತುಂಬಾ ವಿಜಯ್ ಇದೇ ರೀತಿ ಪ್ಲೇ ಬಾಯ್ ಗೆಟಪ್ಪಿನಲ್ಲಿ ಕಾಣಿಸಿಕೊಳ್ಳುತ್ತಾರಾ? ಅವರ ಪಾತ್ರಕ್ಕೆ ಇನ್ನೂ ಒಂದಷ್ಟು ಶೇಡುಗಳಿವೆಯಾ ಅಂತೆಲ್ಲ ಪ್ರೇಕ್ಷಕರು ತಲೆ ಕೆಡಿಸಿಕೊಂಡಿದ್ದರೆ, ಪೋಸ್ಟರುಗಳು ಮತ್ತಷ್ಟು ಕ್ಯೂರಿಯಾಸಿಟಿಗೆ ಕಾರಣವಾಗಿವೆ.

    ಇದೇ ರೀತಿ ಸಂಚಾರಿ ವಿಜಯ್ ಗೆಳೆಯನಾಗಿ ನಟಿಸಿರೋ ನಿರಂಜನ್ ದೇಶಪಾಂಡೆ ಕೂಡಾ ತಮ್ಮೊಳಗಿನ ಅಸಲೀ ನಟನನ್ನು ಈ ಚಿತ್ರದಲ್ಲಿ ಹೊರ ಹಾಕಿದ್ದಾರಂತೆ. ಈವರೆಗೂ ರೇಡಿಯೋ ಜಾಕಿ, ನಿರೂಪಕ ಮುಂತಾದ ಅವತಾರಗಳಲ್ಲಿ ಕಾಣಿಸಿಕೊಂಡಿದ್ದ ನಿರಂಜನ್ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದರೂ ಕೂಡಾ ಪಾದರಸ ಅವರನ್ನು ನಟನಾಗಿ ನೆಲೆಯೂರಿಸುವ ಲಕ್ಷಣಗಳೂ ಇದ್ದಾವೆ.

    ಒಟ್ಟಾರೆಯಾಗಿ ನಿರ್ದೇಶಕ ಹೃಶಿಕೇಶ್ ಜಂಬಗಿ ಸಂಚಾರಿ ವಿಜಯ್ ಅವರ ಗೆಟಪ್ಪನ್ನೇ ಬದಲಿಸಿದ್ದಾರೆ. ಒಂದೆಡೆ ಟ್ರೇಲರ್ ಹವಾ, ಮತ್ತೊಂದೆಡೆ ಹಾಡುಗಳ ಹಾವಳಿಯೊಂದಿಗೇ ಪ್ರೇಕ್ಷಕರನ್ನು ಆವರಿಸಿಕೊಂಡಿರೋ ಪಾದರಸ ಥಿಯೇಟರುಗಳಲ್ಲಿ ಹರಿದಾಡಲು ವಾರಗಳಷ್ಟೇ ಬಾಕಿ ಉಳಿದಿವೆ.

    https://www.youtube.com/watch?v=q9_ZKAGpbOw