Tag: niranjan

  • ನಾಗಶೇಖರ್ ಚಿತ್ರಕ್ಕೆ ಬಾಲಿವುಡ್ ನಟಿ ಆವಂತಿಕಾ ದಸ್ಸಾನಿ ನಾಯಕಿ

    ನಾಗಶೇಖರ್ ಚಿತ್ರಕ್ಕೆ ಬಾಲಿವುಡ್ ನಟಿ ಆವಂತಿಕಾ ದಸ್ಸಾನಿ ನಾಯಕಿ

    ಗಾಗಲೇ ನಾಗಶೇಖರ್ (Nagasekhar) ನಿರ್ದೇಶನದ ‘ಸಂಜು ವೆಡ್ಸ್ ಗೀತಾ’ ಚಿತ್ರದ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಅದರ ಹಿಂದೆಯೇ ನಾಗಶೇಖರ್ ತಮ್ಮ ಮುಂದಿನ ಪ್ರಾಜೆಕ್ಟನ್ನು ಅನೌನ್ಸ್ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು ಸೇರಿದಂತೆ ೩ ಭಾಷೆಗಳಲ್ಲಿ, ಬಿಗ್ ಬಜೆಟ್ ನಲ್ಲಿ  ನಿರ್ಮಾಣವಾಗುತ್ತಿರುವ ಆ ಚಿತ್ರದ ಹೆಸರು ‘ಕ್ಯೂ’.

    ತಮ್ಮದೇ ಆದ ನಾಗಶೇಖರ್ ಮ್ಯಾಜಿಕ್ಸ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುತ್ತಿರುವ ನಾಗಶೇಖರ್ ಕಥೆ, ಚಿತ್ರಕಥೆಯ ಜೊತೆಗೆ ಸಂಗೀತದ ಜವಾಬ್ದಾರಿಯನ್ನೂ ಸಹ ತಾವೇ  ಹೊತ್ತಿದ್ದಾರೆ. ರಾಮ್ ಚಿರು ಲೈನ್ ಪ್ರೊಡ್ಯೂಸರ್ ಆಗಿರುವ  ಈ ಚಿತ್ರವನ್ನು ಭಾವನಾ ರವಿ ಅವರು ಪ್ರೆಸೆಂಟ್ ಮಾಡುತ್ತಿದ್ದಾರೆ.

     

    ಈ ಚಿತ್ರದ ಮೂಲಕ ನಾಗಶೇಖರ್ ಅವರು, ಮೈನೆ ಪ್ಯಾರ್ ಕಿಯಾ ಖ್ಯಾತಿಯ ನಟಿ ಭಾಗ್ಯಶ್ರೀ ಅವರ ಪುತ್ರಿ ಅವಂತಿಕಾ ದಸ್ಸಾನಿ  (Avantika Dassani) ಅವರನ್ನು ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಉಪೇಂದ್ರ ಅಣ್ಣನ ಪುತ್ರ ನಿರಂಜನ್ ಚಿತ್ರದ ನಾಯಕ. ಮುಂದಿನ ತಿಂಗಳಿಂದ ಈ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು, ಡಿ.ಜೆ. ಚಕ್ರವರ್ತಿ ಸಂಭಾಷಣೆ ರಚಿಸಿದ್ದಾರೆ.

  • ಉಪೇಂದ್ರ ಮತ್ತು ಉಪ್ಪಿ ಅಣ್ಣನ ಮಗನಿಗೆ ಕ್ಷಮೆ ಕೇಳಿದ ಕಿಚ್ಚ ಸುದೀಪ್

    ಉಪೇಂದ್ರ ಮತ್ತು ಉಪ್ಪಿ ಅಣ್ಣನ ಮಗನಿಗೆ ಕ್ಷಮೆ ಕೇಳಿದ ಕಿಚ್ಚ ಸುದೀಪ್

    ಕಿಚ್ಚ ಸುದೀಪ್ ಸಿನಿಮಾ ರಂಗಕ್ಕೆ ಬರಲು ಹಲವರ ಪ್ರೋತ್ಸಾಹವಿದೆ. ಅದರಲ್ಲೂ ಉಪೇಂದ್ರ ಅವರು ಸುದೀಪ್ ಅವರಿಗೆ ಸಾಕಷ್ಟು ರೀತಿಯಲ್ಲಿ ಉತ್ತೇಜಿಸಿದ್ದಾರೆ. ಸುದೀಪ್ ಅವರು ಮೊದಲು ಫೋಟೋ ಶೂಟ್ ಮಾಡಿಸಲು ಕಾರಣವೂ ಉಪ್ಪಿ ಆಗಿದ್ದಾರೆ. ಹಾಗಾಗಿ ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯವಿದೆ. ಈ ಕಾರಣಕ್ಕಾಗಿಯೇ ಉಪೇಂದ್ರ ಅವರು ತಮ್ಮ ಸಹೋದರನ ಮಗ ನಿರಂಜನ್ ಅವರ ಚೊಚ್ಚಲು ಸಿನಿಮಾ ನಮ್ಮ ಹುಡುಗರು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಆದರೆ, ಅಂದು ಕಿಚ್ಚ ಗೈರಾಗಿದ್ದರು.

    ಸಿನಿಮಾ ರಿಲೀಸ್ ಗೂ ಮುನ್ನ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕಿಚ್ಚ ಸುದೀಪ್ ಬರಬೇಕಿತ್ತು. ಸ್ವತಃ ಉಪೇಂದ್ರ ಅವರೇ ಕಾಲ್ ಮಾಡಿ ಸುದೀಪ್ ಅವರನ್ನು ಆಹ್ವಾನಿಸಿದ್ದರಂತೆ. ಆದರೆ, ಕಿಚ್ಚನಿಗೆ ಆ ಕಾರ್ಯಕ್ರಮದಲ್ಲಿ ಭಾಗಿ ಆಗಲು ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ಅವರ ಕಾಲು ನೋವು. ಈ ಕುರಿತು ವಿಡಿಯೋ ಮಾಡಿ ಕಳುಹಿಸಿದ್ದ ಸುದೀಪ್, ಈ ಕಾರ್ಯಕ್ರಮಕ್ಕೆ ಬರಲಾಗುತ್ತಿಲ್ಲ. ಹಾಗಾಗಿ ಉಪ್ಪಿ ಸರ್ ಮತ್ತು ನಿರಂಜನ್ ಕ್ಷಮಿಸಿ ಎಂದು ಕೇಳಿದ್ದಾರೆ. ಇದನ್ನೂ ಓದಿ: ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ

    ಸುದೀಪ್ ಮಂಡಿಗೆ ನೋವು ಮಾಡಿಕೊಂಡಿದ್ದಾರಂತೆ. ಹಾಗಾಗಿ ಓಡಾಡಲು ಆಗುತ್ತಿಲ್ಲವಂತೆ. ಹಾಗಾಗಿ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ. ಇದೇ ತಿಂಗಳು ಕೊನೆಯಲ್ಲಿ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗುತ್ತಿದೆ. ಇದರ ಪ್ರಚಾರದಲ್ಲೂ ಸುದೀಪ್ ತೊಡಗಿದ್ದು, ಮನೆಯಲ್ಲೇ ಕುಳಿತುಕೊಂಡು ಆ ಕೆಲಸವನ್ನು ಮಾಡುತ್ತಿದ್ದಾರಂತೆ. ವೈದ್ಯರು ವಿಶ್ರಾಂತಿ ಹೇಳಿದ್ದರಿಂದ ಮತ್ತು ಹೆಚ್ಚು ನಡೆಯದಿರಲು ಸಲಹೆ ಮಾಡಿದ್ದರಂತೆ, ಸುದೀಪ್ ಎಲ್ಲಿಯೂ ಓಡಾಡುತ್ತಿಲ್ಲವಂತೆ.

    Live Tv
    [brid partner=56869869 player=32851 video=960834 autoplay=true]

  • ಪಠಾಣ್‍ಕೋಟ್ ಹುತಾತ್ಮ ಯೋಧ ನಿರಂಜನ್‍ಗೆ ರಾಜ್ಯ ಸರ್ಕಾರದಿಂದ ಅವಮಾನ

    ಪಠಾಣ್‍ಕೋಟ್ ಹುತಾತ್ಮ ಯೋಧ ನಿರಂಜನ್‍ಗೆ ರಾಜ್ಯ ಸರ್ಕಾರದಿಂದ ಅವಮಾನ

    ಬೆಂಗಳೂರು: ಕರುನಾಡ ಮಣ್ಣಿನ ವೀರ ಯೋಧ ಹುತಾತ್ಮ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಸಮಾಧಿಯಲ್ಲೂ ರಾಜಕೀಯದಾಟ, ರಸ್ತೆಗೆ ಯೋಧನ ಹೆಸರಿಡಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸಚಿವರೇ ಅಡ್ಡ, ಬೆಂಗಳೂರಿನ ವೀರ ಯೋಧನಿಗೆ ಕನ್ನಡ ಮಣ್ಣಿನಲ್ಲೇ ಅವಮಾನ.

    ಹೌದು. ಪಂಜಾಬಿನಲ್ಲಿರುವ ವಾಯುನೆಲೆ ಪಠಾಣ್ ಕೋಟ್‍ನಲ್ಲಿ ಲೆಫ್ಟಿನೆಂಟ್ ನಿರಂಜನ್ ಎದೆಯುಬ್ಬಿಸಿ ಉಗ್ರರ ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದ್ದರು. ಕನ್ನಡ ಮಣ್ಣಿನ ಯೋಧ, ನಮ್ಮ ಬೆಂಗಳೂರಿನ ಹೆಮ್ಮೆಯ ನಿರಂಜನ್ ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟರು.

    ಆದರೆ ನಮ್ಮ ನೀಚ ರಾಜಕೀಯ ವ್ಯವಸ್ಥೆ ನಿರಂಜನ್ ಹೆಸರನ್ನು ರಸ್ತೆಗೆ ಇಡುವುದಕ್ಕೆ ರಾಜಕೀಯದಾಟ ಆಡುತ್ತಿದೆ. ದೊಡ್ಡ ಬೊಮ್ಮಸಂದ್ರ ಹೆಬ್ಬಾಗಿಲಿನಿಂದ ವಿದ್ಯಾರಣ್ಯಪುರದ ನಂಜಪ್ಪ ವೃತ್ತದವರೆಗಿನ ಮುಖ್ಯರಸ್ತೆಗೆ ನಿರಂಜನ್ ಹೆಸರು ಇಡೋದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ರು. ಅಂತಿಮ ತೀರ್ಮಾನವೂ ಆಗಿತ್ತು.

    ಈ ಮಧ್ಯೆ ಇದಕ್ಕಿದ್ದ ಹಾಗೆ ಕೃಷಿ ಸಚಿವ ಕೃಷ್ಣಬೈರೇಗೌಡರು ಯೋಧನ ಹೆಸರು ಬೇಡ, ಸ್ವಾತಂತ್ರ್ಯ ಹೋರಾಟಗಾರ ಪೇಟಾ ಸಿದ್ದಪ್ಪನ ಹೆಸರು ಇಡಿ ಎಂದು ಬಿಬಿಎಂಪಿಗೆ ಆದೇಶ ಕೊಟ್ಟು ಪತ್ರ ಬರೆದಿದ್ದಾರೆ. ಅಸಲಿಗೆ ಈ ಹೆಸರಿನ ಸ್ವಾತಂತ್ರ್ಯ ಹೋರಾಟಗಾರರು ಯಾರು ಇಲ್ಲ ಎಂದು ದೊರೆಸ್ವಾಮಿಯೇ ಹೇಳಿದ್ದಾರಂತೆ. ಆದ್ರೆ ಮಿನಿಸ್ಟರ್ ಮಾತನ್ನು ಪಾಲಿಸೋದಕ್ಕೆ ಮೇಯರ್ ಅವರು ಮುಂದಾಗುತ್ತಿದ್ದಾರೆ ಎಂದು ನಿರಂಜನ್ ಸ್ನೇಹಿತ ಶಶಾಂಕ್ ಹೇಳಿದ್ದಾರೆ.

    ಶೌರ್ಯ ಚಕ್ರ ಪ್ರಶಸ್ತಿ ವಾಪಾಸ್:
    ಹರ್ಯಾಣ ಸರ್ಕಾರ ನಿರಂಜನ್ ಅವರ ಹೆಸರಿನಲ್ಲಿ ಆಡಿಟೋರಿಯಂ ಸ್ಥಾಪನೆ ಮಾಡಿದೆ. ಆದರೆ ಇಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಸಚಿವರಿಗೆ ನಿಜಕ್ಕೂ ಮಾನ ಮರ್ಯಾದೆ ಇಲ್ಲ, ನಿರಂಜನ್ ಹೆತ್ತವರು ಈ ಬೆಳವಣಿಗೆ ನೋಡಿ ಕಣ್ಣೀರಿಡುತ್ತಿದ್ದಾರೆ. ಕೇಂದ್ರ ಸರ್ಕಾರ ನಿರಂಜನ್‍ಗೆ ಶೌರ್ಯ ಚಕ್ರ ಪ್ರಶಸ್ತಿ ನೀಡಿದೆ. ಆದ್ರೇ ನಮ್ಗೆ ಈಗ ಬೇಸರವಾಗಿದೆ, ಇದನ್ನು ವಾಪಾಸ್ ಮಾಡುವ ಬಗ್ಗೆಯೂ ಯೋಚನೆ ಮಾಡುತ್ತೇವೆ ಅಂತಾ ಶಶಾಂಕ್ ಹೇಳಿದ್ದಾರೆ.

    ನಿರಂಜನ್ ಯಾರು?
    2016ರ ಜನವರಿ 1 ಮತ್ತು 2ರ ನಡುರಾತ್ರಿಯಲ್ಲಿ ಉಗ್ರರು ಪಠಾಣ್‍ಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿದಾಗ, ಎನ್‍ಎಸ್‍ಜಿ ಯೋಧರನ್ನು ಅಲ್ಲಿಗೆ ಕಳುಹಿಸಲಾಯಿತು. ಎನ್‍ಎಸ್‍ಜಿ ತಂಡದಲ್ಲಿ ಕರ್ನಾಟಕದ ನಿರಂಜನ್ ಅವರೂ ಇದ್ದರು. ದಾಳಿ ಎಸಗಿದ್ದ ಉಗ್ರನ ಬಳಿಯಿದ್ದ ಗ್ರೆನೇಡ್ ನಿಷ್ಕ್ರಿಯಗೊಳಿಸಲು ನಿರಂಜನ್ ಮುಂದಾಗಿದ್ದ ವೇಳೆ ಅದು ಸ್ಫೋಟಗೊಂಡಿತ್ತು. ಗ್ರೆನೇಡ್ ಸ್ಫೋಟದಿಂದಾಗಿ ಅವರ ಶ್ವಾಸಕೋಶಗಳು ಒಡೆದಿದ್ದವು. ಆಸ್ಪತ್ರೆಗೆ ಸಾಗಿಸುವ ಮುನ್ನವೇ ನಿರಂಜನ್ ಹುತಾತ್ಮರಾಗಿದ್ದರು. ನಿರಂಜನ್ ಅವರು ಅಮೆರಿಕದ ಎಫ್‍ಬಿಐನಿಂದ ತರಬೇತಿ ಪಡೆದಿದ್ದರು. ಪಾಲಕ್ಕಾಡ್ ಜಿಲ್ಲೆಯ ಮುನ್ನರಾರ್ ಕಾಡ್ ಮೂಲದ ನಿರಂಜನ್, ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲೇ. 40 ವರ್ಷದ ಹಿಂದೆಯೇ ಅವರ ಕುಟುಂಬವು ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿತ್ತು.

     

     

     

  • ಗುಂಡ್ಲುಪೇಟೆಯಲ್ಲಿ ಗೀತಾ ಮಹದೇವಪ್ರಸಾದ್, ನಿರಂಜನ್ ನಡುವೆ ಸಮರ – ಮತದಾರನ ಮನ ನಿರ್ಧಾರ

    ಗುಂಡ್ಲುಪೇಟೆಯಲ್ಲಿ ಗೀತಾ ಮಹದೇವಪ್ರಸಾದ್, ನಿರಂಜನ್ ನಡುವೆ ಸಮರ – ಮತದಾರನ ಮನ ನಿರ್ಧಾರ

    ಚಾಮರಾಜನಗರ: ಕಳೆದ 20 ದಿನಗಳಿಂದ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ನೇರ ಜಿದ್ದಾಜಿದ್ದಿಗೆ, ಪ್ರತಿಷ್ಠೆಗೆ ಸಾಕ್ಷಿಯಾಗಿದ್ದ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಆರಂಭವಾಗಿದೆ.

    ಸಹಕಾರ ಸಚಿವರಾಗಿದ್ದ ಮಹದೇವ ಪ್ರಸಾದ್ ಅವರ ಅಕಾಲಿಕ ನಿಧನದಿಂದಾಗಿ ಉಪ ಚುನಾವಣೆ ನಡೆಯುತ್ತಿದೆ. ಮಹದೇವಪ್ರಸಾದ್ ಅವರ ಪತ್ನಿ ಗೀತಾ ಮಹದೇವ ಪ್ರಸಾದ್‍ರನ್ನು ಅನುಕಂಪದ ಆಧಾರದ ಮೇಲೆ ಕಣಕ್ಕಿಳಿಸಿದೆ. ಇದೇ ಐದು ಬಾರಿ ಚುನಾವಣೆ ಸೋತಿರುವ ನಿರಂಜನ್ ಕುಮಾರ್‍ರನ್ನು ಬಿಜೆಪಿ ಸ್ಪರ್ಧೆಗೆ ಇಳಿಸಿದೆ.

    ಪಕ್ಷೇತರ ಅಭ್ಯರ್ಥಿಗಳಾದ ಶಿವರಾಮ್, ಕೆ.ಸೋಮಶೇಖರ್, ಮಹಾದೇವ ಪ್ರಸಾದ್ ಬಿ ಮತ್ತು ರಿಪ್ಲಬಿಕ್ ಪಾರ್ಟಿ ಆಪ್ ಇಂಡಿಯಾ ಪಕ್ಷದಿಂದ ಶಿವರಾಜು, ಭಾರತೀಯ ಡಾ.ಬಿ.ಆರ್.ಅಂಬೇಡ್ಕರ್ ಜನತಾ ಪಾರ್ಟಿ ಎಂ, ಹೊನ್ನೂರಯ್ಯ ಸೇರಿ ಏಳು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

    ಕ್ಷೇತ್ರದಲ್ಲಿ ಒಟ್ಟು 2,00,862 ಮತದಾರರಿದ್ದು, ಈ ಪೈಕಿ 1,00,144 ಪುರುಷ ಮತದಾರರು, 1,00,701 ಮಹಿಳಾ ಮತದಾರರಿದ್ದಾರೆ. ಕ್ಷೇತ್ರದಲ್ಲಿ 250 ಮತಗಟ್ಟೆಗಳಿವೆ.