Tag: nippani

  • 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ – ನಿಪ್ಪಾಣಿ ವ್ಯಕ್ತಿಗೆ 30 ವರ್ಷ ಜೈಲು ಶಿಕ್ಷೆ

    14 ವರ್ಷದ ಬಾಲಕಿ ಮೇಲೆ ಅತ್ಯಾಚಾರ – ನಿಪ್ಪಾಣಿ ವ್ಯಕ್ತಿಗೆ 30 ವರ್ಷ ಜೈಲು ಶಿಕ್ಷೆ

    – 10,000 ರೂ. ದಂಡ, ಸಂತ್ರಸ್ತೆಗೆ 4 ಲಕ್ಷ ರೂ. ಪರಿಹಾರ ನೀಡಲು ಆದೇಶ

    ಚಿಕ್ಕೋಡಿ: ನಿಪ್ಪಾಣಿ (Nippani) ತಾಲೂಕಿನ 14 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಅಪರಾಧಿ ವಿರುದ್ಧ ಬೆಳಗಾವಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪೋಕ್ಸೋ ಕಾಯ್ದೆಯಡಿ (POCSO Act) ಪ್ರಕರಣ ದಾಖಲಿಸಿದ್ದು, ಅಪರಾಧಿಗೆ 30 ವರ್ಷ ಜೈಲು ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಿದೆ.

    ಆಕಾಶ್ ಅಲಿಯಾಸ್ ಅಕ್ಷಯ್ ಮಹಾದೇವ್ಮ ಸಾಳುಂಕೆ  ಶಿಕ್ಷೆಗೊಳಗಾದ ಅಪರಾಧಿ. ಈತ ಬೆಳಗಾವಿ (Belagavi) ಜಿಲ್ಲೆಯ ನಿಪ್ಪಾಣಿಯ ಬುದ್ಧನಗರದಲ್ಲಿ ವಾಸಿಸುತ್ತಿದ್ದ. 2019ರ ಆಗಸ್ಟ್ 18ರಂದು ನಿಪ್ಪಾಣಿಯಲ್ಲಿ ಆಕಾಶ್ ಸಾಳುಂಕೆ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ. ಈ ಸಂಬಂಧ, ನಿಪ್ಪಾಣಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 55/2019ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 376 ಮತ್ತು ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ʻಬೆಂಕಿಯ ಬಲೆʼಯಲ್ಲಿ ನೇಪಾಳ – ಕನ್ನಡಿಗರ ರಕ್ಷಣೆಗೆ ತಂಡ ರಚಿಸಿದ ರಾಜ್ಯ ಸರ್ಕಾರ

    ಸಾಕ್ಷಿಗಳ ಹೇಳಿಕೆಗಳು ಮತ್ತು ಸಂಬಂಧಿತ ಕಾಂಕ್ರೀಟ್ ಸಾಕ್ಷ್ಯಗಳನ್ನು ಸಂಗ್ರಹಿಸಿದ ನಂತರ, ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ 2025ರ ಸೆಪ್ಟೆಂಬರ್ 4ರಂದು ತೀರ್ಪು ನೀಡಿದರು. ಅಪರಾಧಿ ವಿರುದ್ಧ ಐಪಿಸಿ ಸೆಕ್ಷನ್ 376 ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, 30 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಸಂತ್ರಸ್ತೆಗೆ 4 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದರು. ಇದನ್ನೂ ಓದಿ: ಮಂಗಳೂರು | ಬೈಕಂಪಾಡಿಯಲ್ಲಿ ಅಗ್ನಿ ಅವಘಡ – ಅಮೆಜಾನ್ ಸುಗಂಧದ್ರವ್ಯ ತಯಾರಕ ಕಂಪನಿ ಬೆಂಕಿಗಾಹುತಿ

  • ಚಿಕ್ಕೋಡಿ | ಗ್ರಾಮಕ್ಕೆ ನುಗ್ಗಿದ ವೇದಗಂಗಾ ನದಿ ನೀರು- 20ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರ

    ಚಿಕ್ಕೋಡಿ | ಗ್ರಾಮಕ್ಕೆ ನುಗ್ಗಿದ ವೇದಗಂಗಾ ನದಿ ನೀರು- 20ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರ

    ಚಿಕ್ಕೋಡಿ: ಮಹಾರಾಷ್ಟ್ರದ (Maharashtra) ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ವೇದಗಂಗಾ ನದಿ  (Vedaganga River) ಉಕ್ಕಿ ಹರಿಯುತ್ತಿದೆ. ಪರಿಣಾಮ ನದಿ ಪಾತ್ರ ಬಿಟ್ಟು ನಿಪ್ಪಾಣಿ ತಾಲೂಕಿನ ಹುನ್ನರಗಿ ಗ್ರಾಮಕ್ಕೆ ನೀರು ನುಗ್ಗಿದೆ.

    ಗ್ರಾಮದ 20ಕ್ಕೂ ಹೆಚ್ಚು ಮನೆಗಳನ್ನು ಅಧಿಕಾರಿಗಳು ಖಾಲಿ ಮಾಡಿಸಿ, ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ. ತಗ್ಗು ಪ್ರದೇಶಗಳಲ್ಲಿ ವಾಸವಿದ್ದ ಕುಟುಂಬಗಳನ್ನು ಗ್ರಾಮದ ಸರ್ಕಾರಿ ಶಾಲೆಯಲ್ಲಿ  ತೆರೆಯಲಾದ ಕಾಳಜಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಕಾಳಜಿ ಕೇಂದ್ರಕ್ಕೆ ಪ್ರಾದೇಶಿಕ ಆಯುಕ್ತೆ ಜಾನಕಿ.ಕೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ʻಮಹಾʼ ಮಳೆಗೆ ಮೈದುಂಬಿದ ಕೃಷ್ಣೆ, ಭೀಮಾ, ಘಟಪ್ರಭಾ ನದಿಗಳು – ಮುಳುಗಿದ ಸೇತುವೆ

    ನದಿ ಪಾತ್ರ ಬಿಟ್ಟು 2 ಕಿಮೀ ನುಗ್ಗಿದ ಘಟಪ್ರಭಾ ನದಿ
    ಘಟಪ್ರಭಾ ನದಿ ತೀರದಲ್ಲಿ ಪ್ರವಾಹ ಸ್ಥಿತಿ ಮುಂದುವರೆದಿದ್ದು, ಮಳೆಯ ಅಬ್ಬರಕ್ಕೆ ಗೋಕಾಕ್ ತಾಲೂಕಿನ ಉದಗಟ್ಟಿ ಗ್ರಾಮದ ಅನ್ನದಾತರು ಬೆಳೆದ ಬೆಳೆಗಳು ಕೊಚ್ಚಿ ಹೋಗಿವೆ. ಘಟಪ್ರಭಾ ನದಿ ತನ್ನ ಪಾತ್ರ ಬಿಟ್ಟು 2 ಕಿ.ಮೀ ದೂರಕ್ಕೆ ಹರಿಯುತ್ತಿದ್ದು, ಜಮೀನಿಗಳು ಜಲಾವೃತವಾಗಿವೆ. ಕಬ್ಬು, ಜೋಳ, ಟೊಮ್ಯಾಟೊ, ಸೊಯಾಬೀನ್, ಉದ್ದು ಸೇರಿದಂತೆ ಬಹುತೇಕ ಬೆಳೆಗಳು ನಾಶವಾಗಿವೆ. ಇದನ್ನೂ ಓದಿ: ಹಾಸನ | ನಾಯಿ ಬೊಗಳಿದ್ದಕ್ಕೆ ಕಾರನ್ನೇ ಎತ್ತಿ ಎಸೆದ ಒಂಟಿ ಸಲಗ!

  • ರಾಧಾನಗರಿ ಜಲಾಶಯದಿಂದ 4 ಗೇಟ್‌ಗಳ ಮೂಲಕ ನೀರು ಬಿಡುಗಡೆ – ದೂದ್‌ಗಂಗಾ ನದಿ ತೀರದಲ್ಲಿ ಹೈಅಲರ್ಟ್

    ರಾಧಾನಗರಿ ಜಲಾಶಯದಿಂದ 4 ಗೇಟ್‌ಗಳ ಮೂಲಕ ನೀರು ಬಿಡುಗಡೆ – ದೂದ್‌ಗಂಗಾ ನದಿ ತೀರದಲ್ಲಿ ಹೈಅಲರ್ಟ್

    ಚಿಕ್ಕೋಡಿ: ಮಹಾರಾಷ್ಟ್ರದ (Maharashtra) ಪಶ್ಚಿಮ ಘಟ್ಟ ಪ್ರದೇಶದಗಳಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಮಹಾರಾಷ್ಟ್ರದ ಜಲಾಶಯಗಳು ಭರ್ತಿ ಹಂತ ತಲುಪಿವೆ. ರಾಧಾನಗರಿ ಜಲಾಶಯದಿಂದ 4 ಗೇಟ್‌ಗಳ ಮೂಲಕ ನೀರು ಬಿಡುಗಡೆ ಮಾಡಲಾಗಿದೆ.

    ಕೊಲ್ಲಾಪುರ ಜಿಲ್ಲೆಯ ರಾಧಾನಗರಿ ಜಲಾಶಯ (Radhanagari Dam) ಸಂಪೂರ್ಣ ಭರ್ತಿ ಹಿನ್ನಲೆಯಲ್ಲಿ ದೂದ್‌ಗಂಗಾ ನದಿ (Doodh Ganga River) ಮೂಲಕ ಕೃಷ್ಣಾ ನದಿಗೆ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. 8.5 ಟಿಎಂಸಿ ಸಾಮರ್ಥ್ಯದ ರಾಧಾನಗರಿ ಜಲಾಶಯದಿಂದ 4 ಗೇಟ್‌ಗಳ ಮೂಲಕ 10 ಸಾವಿರ ಕ್ಯೂಸೆಕ್ ನೀರು ದೂದ್‌ಗಂಗಾ ನದಿಗೆ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ಇನ್ಸ್ಟಾದಲ್ಲಿ ಬೆಂಗಳೂರಿಗರ ಬಗ್ಗೆ ನಾಲಗೆ ಹರಿಬಿಟ್ಟ ಒಡಿಶಾ ಯುವತಿ

    ಹೆಚ್ಚಿನ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಬೆಳಗಾವಿ (Belagavi) ಜಿಲ್ಲೆಯ ನಿಪ್ಪಾಣಿ ಹಾಗೂ ಚಿಕ್ಕೋಡಿ ತಾಲೂಕಿನ ದೂದ್‌ಗಂಗಾ ನದಿ ತೀರದ ಜನರು ನದಿ ಪಾತ್ರಕ್ಕೆ ಇಳಿಯದಂತೆ ತಾಲೂಕಾಡಳಿತದಿಂದ ಸೂಚನೆ ನೀಡಲಾಗಿದೆ. ಇನ್ನೂ ಕೃಷ್ಣಾ ನದಿಗೆ ಚಿಕ್ಕೋಡಿ ತಾಲೂಕಿನ ಕಲ್ಲೋಳ ಬ್ಯಾರೇಜ್ ಬಳಿ 58 ಸಾವಿರ ಕ್ಯೂಸೆಕ್ ನೀರು ಒಳ ಹರಿವು ದಾಖಲಾಗಿದೆ.

  • ಮಾಜಿ ಶಾಸಕ ಕಾಕಾಸಾಹೇಬ್ ಪಾಟೀಲ್ ನಿಧನ

    ಮಾಜಿ ಶಾಸಕ ಕಾಕಾಸಾಹೇಬ್ ಪಾಟೀಲ್ ನಿಧನ

    ಚಿಕ್ಕೋಡಿ: ನಿಪ್ಪಾಣಿ (Nippani) ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕಾಕಾಸಾಹೇಬ್ ಪಾಟೀಲ್ (70) ತಡರಾತ್ರಿ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ಕಳೆದ ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಾಕಾಸಾಹೇಬ್ ಪಾಟೀಲ್ (Kakasaheb P Patil) ಚಿಕಿತ್ಸೆ ಫಲಿಸದೇ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇದನ್ನೂ ಓದಿ: ಎಲ್ಲಿ ಅಡಗಿರೋದು ಗೊತ್ತಿದೆ – ಈಗ ಹತ್ಯೆ ಮಾಡಲ್ಲ, ಖಮೇನಿ ಶರಣಾಗಬೇಕು: ಟ್ರಂಪ್‌ ವಾರ್ನಿಂಗ್‌

    1999ರಿಂದ 2013 ರವರೆಗೆ ಸತತ ಮೂರು ಬಾರಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ವಿಧಾನ ಸಭಾ ಕ್ಷೇತ್ರದಿಂದ ಕಾಕಾಸಾಹೇಬ್ ಪಾಟೀಲ್ ಶಾಸಕರಾಗಿದ್ದರು. ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬೆಂಬಲಿಗರನ್ನು ಕಾಕಾಸಾಹೇಬ್ ಪಾಟೀಲ್ ಅಗಲಿದ್ದು, ನಿಪ್ಪಾಣಿಯಲ್ಲಿ ಇಂದು ಅಂತ್ಯಕ್ರಿಯೆ ಜರುಗಲಿದೆ. ಅಂತ್ಯಕ್ರಿಯೆಯಲ್ಲಿ ಹಲವು ಗಣ್ಯರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ವಿಮಾನ ದುರಂತದಲ್ಲಿ ಜನರ ಸಾವಾಯ್ತಲ್ಲ ನಾವೇನಾದ್ರೂ ರಾಜೀನಾಮೆ ಕೇಳಿದ್ವಾ? – ಸಿದ್ದರಾಮಯ್ಯ

  • ಚಿಕ್ಕೋಡಿ| ಪ್ರೀತಿಗೆ ವಿರೋಧ; ಪ್ರಿಯಕರನಿಂದ ಡಬಲ್ ಮರ್ಡರ್

    ಚಿಕ್ಕೋಡಿ| ಪ್ರೀತಿಗೆ ವಿರೋಧ; ಪ್ರಿಯಕರನಿಂದ ಡಬಲ್ ಮರ್ಡರ್

    ಚಿಕ್ಕೋಡಿ: ತನ್ನ ಪ್ರೀತಿಗೆ (Love) ನಿರಾಕರಣೆ ಮಾಡಿದ್ದಕ್ಕೆ ಸಿಟ್ಟಿಗೆದ್ದ ಯುವಕ ಪ್ರೀತಿಸಿದ ಯುವತಿಯ ತಾಯಿ ಹಾಗೂ ಆಕೆಯ ತಮ್ಮನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಿಪ್ಪಾಣಿ (Nippani) ತಾಲೂಕಿ ಅಕ್ಕೋಳ ಗ್ರಾಮದಲ್ಲಿ ನಡೆದಿದೆ.

    ಮಂಗಲ ನಾಯಕ್ ( 45 ), ಪ್ರಜ್ವಲ್ ನಾಯಕ್ ( 18 ) ಮೃತ ದುರ್ದೈವಿಗಳು. ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದ ಹೊರ ವಲಯದ ಮನೆಯಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದ್ದು, ಜನ ಬೆಚ್ಚಿ ಬಿದ್ದಿದ್ದಾರೆ. ಇದನ್ನೂ ಓದಿ: ಕಚ್ಚಾಡುವುದರಿಂದ ಯಾರಿಗೂ ಲಾಭವಿಲ್ಲ: ಯತ್ನಾಳ್ ವಿಚಾರಕ್ಕೆ ಬಿಎಸ್‍ವೈ ಪ್ರತಿಕ್ರಿಯೆ

    ಕೃತ್ಯ ಎಸಗಿರುವ ಪಾಗಲ್ ಪ್ರೇಮಿ ರವಿ ಎಂದು ತಿಳಿದುಬಂದಿದೆ. ಈತ ಯುವತಿಯನ್ನು ಪ್ರೀತಿ ಮಾಡುತ್ತಿದ್ದ. ಆದರೆ ಇವರ ಪ್ರೀತಿಗೆ ಮನೆಯವರು ತುಂಬಾ ವಿರೋಧ ಮಾಡಿದ್ದರು. ಯಾವುದೇ ಕಾರಣಕ್ಕೂ ಮದುವೆಗೆ ಒಪ್ಪಿಗೆ ಸಿಗದ ಕಾರಣ ಕೊಲೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.‌ ಇದನ್ನೂ ಓದಿ: ಸೂರ್ಯ ಘರ್: ಇನ್ನೆಂಟು ತಿಂಗಳಲ್ಲಿ 2 ಲಕ್ಷ ತಂತ್ರಜ್ಞರಿಗೆ ತರಬೇತಿ

    ಘಟನೆಗೆ ಸಂಬಂಧಿಸಿದಂತೆ ಆರೋಪಿ ರವಿ, ಆತನ ಸ್ನೇಹಿತ ಹಾಗೂ ಹತ್ಯೆಗೆ ಒಳಗಾದ ಮಂಗಲ ಅವರ ಮಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪವರ್ ಶೇರಿಂಗ್| ಅವರಿಬ್ಬರೇ ಎಲ್ಲಾ ಒಪ್ಪಂದ ಮಾಡಿಕೊಳ್ಳೋದಾದ್ರೆ ನಾವ್ಯಾಕೆ ಇರೋದು: ಪರಮೇಶ್ವರ್ ಪ್ರಶ್ನೆ

     

     

  • ಚಿಕ್ಕೋಡಿ| 8 ವಾಹನಗಳ ಮಧ್ಯೆ ಭೀಕರ ಸರಣಿ ಅಪಘಾತ – ಇಬ್ಬರ ದುರ್ಮರಣ, 6 ಮಂದಿ ಗಂಭೀರ

    ಚಿಕ್ಕೋಡಿ| 8 ವಾಹನಗಳ ಮಧ್ಯೆ ಭೀಕರ ಸರಣಿ ಅಪಘಾತ – ಇಬ್ಬರ ದುರ್ಮರಣ, 6 ಮಂದಿ ಗಂಭೀರ

    ಚಿಕ್ಕೋಡಿ: 8 ವಾಹನಗಳ ಮಧ್ಯೆ ಭೀಕರ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, 6 ಮಂದಿ ಗಂಭೀರ ಗಾಯಗೊಂಡ ಘಟನೆ ಬೆಳಗಾವಿ (Belagavi) ಜಿಲ್ಲೆಯ ನಿಪ್ಪಾಣಿ (Nippani) ತಾಲೂಕಿನ ಸ್ಥವನಿಧಿ ಘಾಟ್ ಬಳಿ ನಡೆದಿದೆ.

    ಕಂಟೇನರ್ ವಾಹನದ ಚಾಲಕನ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಕಂಟೇನರ್ ಮೂರು ಕಾರು, ಎರಡು ಲಾರಿ, ಒಂದು ಕಂಟೇನರ್ ಹಾಗೂ ಬೈಕ್‌ಗೆ ಗುದ್ದಿದ ಪರಿಣಾಮ ಒಬ್ಬ ಬೈಕ್ ಸವಾರ ಹಾಗೂ ಕಾರಿನಲ್ಲಿದ್ದ ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಗದಗ: ಮಾನವ ಸರಪಳಿ ವೇಳೆ ಜನರ ಮೇಲೆ ಹೆಜ್ಜೇನು ದಾಳಿ – ಸ್ಥಳದಿಂದ ಚದುರಿದ ಜನ

    ಘಟನೆಯಲ್ಲಿ ಗಂಭೀರ ಗಾಯಗೊಂಡವರಿಗೆ ನಿಪ್ಪಾಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ನಿಪ್ಪಾಣಿ ಶಹರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿಪ್ಪಾಣಿ ಶಹರ ಪೊಲೀಸ್ ಠಾಣಾ ವ್ತಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ತುಮಕೂರು| ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಮೂವರ ದಾರುಣ ಸಾವು

  • ನಿಪ್ಪಾಣಿ ರಾಮಮಂದಿರದ ಒಂದೇ ಒಂದು ಕಲ್ಲನ್ನೂ ಅಲುಗಾಡಿಸಲು ಆಗಲ್ಲ: ಮುತಾಲಿಕ್

    ನಿಪ್ಪಾಣಿ ರಾಮಮಂದಿರದ ಒಂದೇ ಒಂದು ಕಲ್ಲನ್ನೂ ಅಲುಗಾಡಿಸಲು ಆಗಲ್ಲ: ಮುತಾಲಿಕ್

    ಬೆಳಗಾವಿ: ನಿಪ್ಪಾಣಿ (Nippani) ರಾಮಮಂದಿರದ (Ram Mandir) ಒಂದೇ ಒಂದು ಕಲ್ಲನ್ನು ಕೂಡ ಅಲುಗಾಡಿಸಲು ಆಗಲ್ಲ. ನಿಮಗೆ ತಾಕತ್ತಿದ್ದರೆ ಮುಟ್ಟಿ ನೋಡೋಣ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik)  ಸವಾಲ್ ಹಾಕಿದ್ದಾರೆ.

    ಈ ಕುರಿತು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ ಅವರು, ರಾಮ ಮಂದಿರ ಸ್ಫೋಟ ಮಾಡುತ್ತೇವೆ ಎಂಬ ಬೆದರಿಕೆ ಪತ್ರ (Threat Letter) ಬರೆಯಲಾಗಿದೆ. ಈ ರೀತಿಯ ಬೆದರಿಕೆಯನ್ನು ಹಿಂದೂ ಸಮಾಜ ಸಹಿಸಲ್ಲ, ಹೆದರುವುದೂ ಇಲ್ಲ. ಈಗ ಘಜನಿ, ಘೋರಿ ಬಾಬಾ ಇಲ್ಲ. ಇಲ್ಲಿ ಇರೋದು ಭಾರತೀಯ ಮುಸ್ಲಿಮರು ಅನ್ನೋದು ನೆನಪಿರಲಿ. ಭಾರತದಲ್ಲಿ ಹಿಂದೂ ದೇವಾಲಯಗಳನ್ನು ಪೂಜಿಸಬೇಕು ಅಂತೇನಿಲ್ಲ, ಗೌರವಿಸಬೇಕು ಎಂದರು. ಇದನ್ನೂ ಓದಿ: ಈಶ್ವರಪ್ಪ ಪುತ್ರನಿಗೆ ಟಿಕೆಟ್ ಕೊಡಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ: ಬಿಎಸ್‍ವೈ

    ಕಿಡಿಗೇಡಿಗಳು ಪತ್ರ ಬರೆದಿದ್ದನ್ನ ಖಂಡಿಸುತ್ತೇನೆ, ವಿರೋಧಿಸುತ್ತೇನೆ, ಸವಾಲು ಹಾಕುತ್ತೇನೆ. ರಾಮಮಂದಿರ ಮುಟ್ಟಿದ್ರೆ ಮುಂದಿನ ಸ್ಥಿತಿ ಏನಾಗುತ್ತದೆ, ಹಿಂದೂ ಸಮಾಜ ಹೇಗೆ ತಿರುಗೇಟು ಕೊಡುತ್ತದೆ ಎಂದು ನೋಡಿ ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ಎಲ್ಲ ರಾಮ ಮಂದಿರಗಳಿಗೂ ಸರ್ಕಾರ ಭದ್ರತೆ ಕೊಡಬೇಕು ಎಂದು ಮುತಾಲಿಕ್ ಆಗ್ರಹಿಸಿದರು. ಇದನ್ನೂ ಓದಿ: ಮೋದಿ ಜಪಿಸ್ತಿರೋ ಗಂಡಂದಿರಿಗೆ ಊಟ ಬಡಿಸ್ಬೇಡಿ- ಮಹಿಳೆಯರಿಗೆ ಕೇಜ್ರಿವಾಲ್ ಕರೆ

    ಬೆದರಿಕೆ ಪತ್ರದಲ್ಲಿ ಏನಿತ್ತು?
    ರಾಮಮಂದಿರವನ್ನು ದೊಡ್ಡ ಪ್ರಮಾಣದಲ್ಲಿ ಸ್ಫೋಟಿಸುತ್ತೇವೆ ಎಂದು ಬೆದರಿಕೆ ಪತ್ರ ಬರೆದು ಮಂದಿರದಲ್ಲಿ ಅನಾಮಧೇಯ ವ್ಯಕ್ತಿಗಳು ಬಿಟ್ಟು ಹೋಗಿದ್ದಾರೆ. ಫೆಬ್ರವರಿ 7 ಹಾಗೂ 28ರಂದು ಬಂದ ಬೆದರಿಕೆ ಪತ್ರಗಳು ಈಗ ಬಹಿರಂಗವಾಗಿದ್ದು, ಮಾರ್ಚ್ 20-21ಕ್ಕೆ ಬಾಂಬ್ ಸ್ಫೋಟಿಸುವುದಾಗಿ ಪತ್ರದಲ್ಲಿ ಉಲೇಖಿಸಲಾಗಿದೆ. ಇದನ್ನೂ ಓದಿ: ಸಂಸದರಿಗೆ ಟಿಕೆಟ್ ಕೈ ತಪ್ಪೋ ಆತಂಕ-‘ We Want Pratap Simha’ ಎಂದ ಸಾರ್ವಜನಿಕರು

    101 ವರ್ಷಗಳ ಇತಿಹಾಸ ಹೊಂದಿರುವ ನಿಪ್ಪಾಣಿ ಪಟ್ಟಣದ ಶ್ರೀರಾಮ ಮಂದಿರವನ್ನ ಸ್ಫೋಟಿಸುವದಾಗಿ ಆಗಂತುಕರು ಬೆದರಿಕೆ ಹಾಕಿದ್ದಾರೆ. ಮೊದಲ ಪತ್ರ ಫೆಬ್ರವರಿ 7ರಂದು ರಾಮಮಂದಿರ ಆವರಣದ ಹನುಮ ಮಂದಿರದಲ್ಲಿ ಪತ್ತೆಯಾಗಿತ್ತು. 2ನೇ ಪತ್ರ ಫೆಬ್ರವರಿ 28ರಂದು ರಾಮಮಂದಿರದ ಗರ್ಭ ಗುಡಿಯಲ್ಲಿ ಪತ್ತೆಯಾಗಿತ್ತು. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ- ರಾಯಚೂರಿನಲ್ಲೂ ಅಲರ್ಟ್

  • 2A ಮೀಸಲಾತಿಗಾಗಿ ಸೆ.10 ರಂದು ನಿಪ್ಪಾಣಿಯಲ್ಲಿ ಮತ್ತೆ ಹೋರಾಟ ಆರಂಭ: ಕೂಡಲಸಂಗಮ ಶ್ರೀ

    2A ಮೀಸಲಾತಿಗಾಗಿ ಸೆ.10 ರಂದು ನಿಪ್ಪಾಣಿಯಲ್ಲಿ ಮತ್ತೆ ಹೋರಾಟ ಆರಂಭ: ಕೂಡಲಸಂಗಮ ಶ್ರೀ

    ಚಿಕ್ಕೋಡಿ: 2ಎ ಮೀಸಲಾತಿಗಾಗಿ (2A Reservation) ಸೆ.10 ರಂದು ನಿಪ್ಪಾಣಿಯಲ್ಲಿ (Nippani) ಮತ್ತೆ ಹೋರಾಟ ಆರಂಭವಾಗಲಿದೆ ಎಂದು ಕೂಡಲಸಂಗಮ ಪಂಚಮಸಾಲಿ (Panchamasali) ಪೀಠದ ಪೀಠಾಧಿಪತಿ ಬಸವಜಯ ಮೃತ್ಯುಂಜಯ ಸ್ವಾಮೀಜಿ (Basava Jaya Mruthyunjaya Swamiji) ಹೇಳಿದ್ದಾರೆ.

    ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪುಣೆ-ಬೆಂಗಳೂರು (Pune-Bengaluru) ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ನೇರವೇರಿಸಿ ಹೋರಾಟ ಆರಂಭ ಮಾಡಲಾಗುತ್ತಿದೆ. ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು. ಇದನ್ನೂ ಓದಿ: ಭೂಮಿ ನಿರ್ನಾಮ ಹಂತ ತಲುಪಿದ್ರೆ ಮುಂದೇನು?

     

    ಸೆ.10 ರಂದು ನಿಪ್ಪಾಣಿಯಲ್ಲಿ ಬಹಿರಂಗ ಸಭೆ ನಡೆಸಲಾಗುವುದು. ಬಳಿಕ ರಾಷ್ಟ್ರೀಯ ಹೆದ್ದಾರಿಗೆ ಪಾದಯಾತ್ರೆ ಮೂಲಕ ತೆರಳಿ ಇಷ್ಟಲಿಂಗ ಪೂಜೆ ಮಾಡಲಾಗುವುದು. ಲಿಂಗಾಯತ ಸಮುದಾಯಕ್ಕೆ (Lingayat Community) 2ಎ ಮೀಸಲಾತಿ ಸಿಗಬೇಕು. ಕೇಂದ್ರ ಸರ್ಕಾರವು ಒಬಿಸಿ ಪಟ್ಟಿಯಲ್ಲಿ (OBC List) ಸೇರ್ಪಡೆ ಮಾಡುವಂತೆ ಒತ್ತಾಯ ಮಾಡಲಾಗುತ್ತದೆ. ಸೆ.10 ರಂದು ವೀರಶೈವ ಲಿಂಗಾಯತ ಸಮುದಾಯವರು ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ಶ್ರೀಗಳು ಮನವಿ ಮಾಡಿದ್ದಾರೆ.


    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಂಬೋಲಿ ಅರಣ್ಯ ಪ್ರದೇಶದಲ್ಲಿ ಟ್ರಯಲ್ ಬ್ಲಾಸ್ಟ್ – ಪುಣೆ ಎಟಿಎಸ್‌ನಿಂದ ಇಬ್ಬರು ಶಂಕಿತ ಉಗ್ರರ ಬಂಧನ

    ಅಂಬೋಲಿ ಅರಣ್ಯ ಪ್ರದೇಶದಲ್ಲಿ ಟ್ರಯಲ್ ಬ್ಲಾಸ್ಟ್ – ಪುಣೆ ಎಟಿಎಸ್‌ನಿಂದ ಇಬ್ಬರು ಶಂಕಿತ ಉಗ್ರರ ಬಂಧನ

    ಚಿಕ್ಕೋಡಿ: ಕರ್ನಾಟಕದಿಂದ (Karnataka) 70 ಕಿಲೋಮೀಟರ್ ದೂರದಲ್ಲಿರುವ ಮಹಾರಾಷ್ಟ್ರದ (Maharashtra) ಅರಣ್ಯದಲ್ಲಿ ಟ್ರಯಲ್ ಬ್ಲಾಸ್ಟ್ (Trial Blast) ನಡೆಸಿದ ಶಂಕೆಯ ಮೇರೆಗೆ ಇಬ್ಬರು ಶಂಕಿತ ಉಗ್ರರನ್ನು (Suspected Terrorists) ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ATS) ಬಂಧಿಸಿದೆ.

    ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಅಂಬೋಲಿ (Amboli) ಅರಣ್ಯ ಪ್ರದೇಶದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಿದ್ದ ಮಾಹಿತಿ ದೊರೆತಿದ್ದು, ಶಂಕಿತ ಉಗ್ರರು ಬೆಳಗಾವಿ (Belagavi) ಜಿಲ್ಲೆಯ ನಿಪ್ಪಾಣಿ, ಸಂಕೇಶ್ವರ ಮಾರ್ಗವಾಗಿ ಅಂಬೋಲಿಗೆ ಪ್ರಯಾಣ ಬೆಳೆಸಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈ ಹಿನ್ನೆಲೆ ಬೆಳಗಾವಿಯ ನಿಪ್ಪಾಣಿ, ಸಂಕೇಶ್ವರಕ್ಕೆ ಆಗಮಿಸಿ ಎಟಿಎಸ್ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಇದನ್ನೂ ಓದಿ: ಇನ್‌ಸ್ಟಾ ಸ್ನೇಹಿತನ ಭೇಟಿಗಾಗಿ ಪಾಕಿಸ್ತಾನಕ್ಕೆ ಹೊರಟಿದ್ದ ಅಪ್ರಾಪ್ತೆ ಪೊಲೀಸರ ವಶಕ್ಕೆ

    ಕಳೆದ ವಾರ ಪಟ್ರೋಲಿಂಗ್ (Patrolling) ಮಾಡುತ್ತಿದ್ದ ವೇಳೆ ಬೈಕ್ ಕಳ್ಳತನ ಪ್ರಕರಣದಲ್ಲಿ ಇಬ್ಬರನ್ನು ಪುಣೆ ಕೊಥ್‌ರೂಡ್ ಪೊಲೀಸರು ವಶಕ್ಕೆ ಪಡೆದಿದ್ದರು. ಬೈಕ್ ಕಳ್ಳತನ ಶಂಕೆಯಡಿಯಲ್ಲಿ ಮೊಹಮ್ಮದ್ ಇಮ್ರಾನ್ ಅಲಿಯಾಸ್ ಅಮಿರ್ ಅಬ್ದುಲ್ ಹಮೀದ್ ಖಾನ್ ಮತ್ತು ಮೊಹಮ್ಮದ್ ಯೂನಿಸ್ ಮೊಹಮ್ಮದ್ ಯಾಕೂಬ್ ಸಾಕಿ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವೇಳೆ ಇಬ್ಬರು ಆರೋಪಿಗಳಿಗೆ ಐಸಿಸ್ ಉಗ್ರ ಸಂಘಟನೆ ಜೊತೆ ನಂಟಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಕೇಸ್‌ – ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ CBI

    ಬಳಿಕ ಇಬ್ಬರು ಶಂಕಿತ ಉಗ್ರರನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಅಂಬೋಲಿ ಅರಣ್ಯ ಪ್ರದೇಶದಲ್ಲಿ ಟ್ರಯಲ್ ಬಾಂಬ್ ಬ್ಲಾಸ್ಟ್ ನಡೆಸಿದ್ದ ಮಾಹಿತಿ ಬಹಿರಂಗವಾಗಿದೆ. ಕೊಲ್ಲಾಪುರ ನಿಪ್ಪಾಣಿ ಆಜರಾ ಮಾರ್ಗವಾಗಿ ಅಂಬೋಲಿಗೆ ಪ್ರಯಾಣಿಸಿದ ಮಾಹಿತಿ ದೊರೆತ ಹಿನ್ನೆಲೆ ಶಂಕಿತ ಉಗ್ರರು ಪ್ರಯಾಣಿಸಿದ ಮಾರ್ಗವನ್ನು ಮಹಾರಾಷ್ಟ್ರ ಎಟಿಎಸ್ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಜುಲೈ 27ರಂದು ಮಹಾರಾಷ್ಟ್ರ ಎಟಿಎಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ಮಾಹಿತಿ ದೊರೆತಿದ್ದು, ಈ ಬಗ್ಗೆ ಬೆಳಗಾವಿ ಪೊಲೀಸರು ಯಾವುದೇ ಮಾಹಿತಿಯನ್ನು ಖಚಿತಪಡಿಸಿಲ್ಲ. ಇದನ್ನೂ ಓದಿ: ಸರ್ಕಾರಿ ಉದ್ಯೋಗಕ್ಕೆ ತರಬೇತಿ ನಡೆಸಿದ್ದ ಯುವತಿ -‌ ಕೊಲೆಗೆ 3 ದಿನಗಳ ಹಿಂದೆಯೇ ಸ್ಕೆಚ್‌ ಹಾಕಿದ್ದ ಪಾಪಿ ಪ್ರೇಮಿ!

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗೋ ಹತ್ಯೆ ನಿಷೇಧ ಬಗ್ಗೆ ಸರ್ಕಾರದಿಂದ ಸಮೀಕ್ಷೆ: ಸತೀಶ್ ಜಾರಕಿಹೊಳಿ

    ಗೋ ಹತ್ಯೆ ನಿಷೇಧ ಬಗ್ಗೆ ಸರ್ಕಾರದಿಂದ ಸಮೀಕ್ಷೆ: ಸತೀಶ್ ಜಾರಕಿಹೊಳಿ

    ಬೆಳಗಾವಿ: ಗೋ ಹತ್ಯೆ ನಿಷೇಧ ಕಾಯ್ದೆ (Cow Slaughter Prohibition Act) ಬಗ್ಗೆ ಸರ್ಕಾರದಿಂದ ಸಮೀಕ್ಷೆ ನಡೆಸುವುದಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

    ಗೋ ಹತ್ಯೆ ನಿಷೇಧ ಕಾಯ್ದೆ ವಿಚಾರದ ಕುರಿತು ಬೆಳಗಾವಿ (Belagavi) ಜಿಲ್ಲೆಯ ನಿಪ್ಪಾಣಿ (Nippani) ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮನೆ-ಮನೆಗಳಿಗೆ ತೆರಳಿ ಗೋ ಹತ್ಯೆ ನಿಷೇಧ ಕಾಯ್ದೆ ಅನುಷ್ಠಾನದ ಕುರಿತು ಸಂದರ್ಶನ ನಡೆಸುತ್ತೇವೆ. ಮನೆ ಮನೆಗೆ ಹೋಗಿ ಈ ಕಾಯ್ದೆ ಬೇಕೋ ಬೇಡವೋ ಎಂದು ಜನರನ್ನು ಕೇಳುತ್ತೇವೆ. ಬಹುಮತದ ಆಧಾರದ ಮೇಲೆ ಗೋಹತ್ಯೆ ಕಾಯ್ದೆ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಇದನ್ನೂ ಓದಿ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪರಿಷ್ಕರಣೆ ಇಲ್ಲ- ಶಿಕ್ಷಣ ಇಲಾಖೆಗೆ ಸಿಎಂ ಮೌಖಿಕ ಸೂಚನೆ

    ಒರಿಜಿನಲ್ ಪಠ್ಯಪುಸ್ತಕವನ್ನು ಕಳೆದ ಬಾರಿ ಬಿಜೆಪಿ ತಿರುಚಿದೆ. ಬಸವೇಶ್ವರ, ಅಂಬೇಡ್ಕರ್ ಸೇರಿದಂತೆ ಬಹಳಷ್ಟು ಇತಿಹಾಸ ತಿರುಚಲಾಗಿದೆ. ಪಠ್ಯ ಪುಸ್ತಕ ಬದಲಾವಣೆ ಬಗ್ಗೆ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ. ಪ್ರಣಾಳಿಕೆ ಪ್ರಕಾರ ಪಠ್ಯ ಪುಸ್ತಕ ಬದಲಾವಣೆ ಮಾಡೇ ಮಾಡುತ್ತೇವೆ. ನುರಿತ ತಜ್ಞರ ಸಮಿತಿ ರಚಿಸಿ ಪಠ್ಯ ಬದಲಾವಣೆ ಮಾಡುತ್ತೇವೆ. ಕಳೆದ ಬಾರಿ ನಡೆದ ಲೋಕೋಪಯೋಗಿ ಇಲಾಖೆ ಅಕ್ರಮದ ಬಗ್ಗೆ ಸಮಯ ತೆಗೆದುಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದರು.  ಇದನ್ನೂ ಓದಿ: ಸೋಮಣ್ಣಗೆ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಫಿಕ್ಸ್?- ಸಂಚಲನ ಮೂಡಿಸಿದ ಸಂಸದ ಬಸವರಾಜು ಹೇಳಿಕೆ