Tag: Nipha

  • ರಾಜ್ಯದ ಮಾವು ಬೆಳೆಗಾರರಿಗೆ ತಟ್ಟಿದ ನಿಪಾ ವೈರಸ್ ಬಿಸಿ

    ರಾಜ್ಯದ ಮಾವು ಬೆಳೆಗಾರರಿಗೆ ತಟ್ಟಿದ ನಿಪಾ ವೈರಸ್ ಬಿಸಿ

    ಬೆಂಗಳೂರು: ಪಕ್ಕದ ರಾಜ್ಯ ಕೇರಳದಲ್ಲಿ ನಿಪಾ ಕಾಣಿಸಿಕೊಂಡಿದ್ರಿಂದ ರಾಜ್ಯದ ಮಾವಿಗೆ ಬೆಳೆಗಾರರಿಗೆ ಬಿಸಿ ತಟ್ಟಿದೆ.

    ಆಸ್ಟ್ರೇಲಿಯಾ, ಅಮೆರಿಕ, ಸ್ವಿಜರ್‍ಲ್ಯಾಂಡ್‍ಗೆ ರಾಜ್ಯದಿಂದಲೇ ಟನ್ ಗಟ್ಟಲೇ ಮಾವು ರಫ್ತಾಗುತ್ತಿತ್ತು. ಕೇರಳದಲ್ಲಿ ನಿಪಾ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯದಿಂದ ರಫ್ತಾಗುವ ಮಾವಿಗೆ ಬೆಳೆಗಾರರು ಪ್ರಮಾಣ ಪತ್ರ ಸೇರಿದಂತೆ ನಾನಾ ಸರ್ಟಿಫಿಕೇಟ್ ಗಳನ್ನು ಪಡೆಯುವ ಸ್ಥತಿ ನಿರ್ಮಾಣವಾಗಿದೆ. ಒಂದೆಡೆ ಹೆಚ್ಚಾಗಿರುವ ಮಳೆ ಹಾಗೂ ನಿಪಾ ವೈರಸ್ ಮಾವು ಬೆಳೆಗಾರರಿಗೆ ಬಿಸಿ ಮುಟ್ಟಿಸಿದೆ.

    ಮುಂಗಾರಿನಲ್ಲಿ ಸಾಂಕ್ರಾಮಿಕ ರೋಗ ಕೂಡ ಹೆಚ್ಚುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದ ಬೆನ್ನಲ್ಲೇ ನಿಫಾ ಬಗ್ಗೆ ಮತ್ತೆ ಸಂಶೋಧನೆ ಮಾಡುವಂತೆ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಸೂಚಿಸಿದ್ದಾರೆ.

  • ನಿಪಾ ವೈರಸ್ ಸುಳ್ಳು ಸುದ್ದಿ ಹರಡಿದ 7 ಮಂದಿ ಅರೆಸ್ಟ್

    ನಿಪಾ ವೈರಸ್ ಸುಳ್ಳು ಸುದ್ದಿ ಹರಡಿದ 7 ಮಂದಿ ಅರೆಸ್ಟ್

    ತಿರುವನಂತಪುರಂ: ಕೆಲವು ಸ್ಥಳಗಳಲ್ಲಿ ನಿಪಾ ವೈರಸ್ ಪತ್ತೆಯಾಗಿದೆ, ಅದು ಕೋಳಿ ಮಾಂಸದಿಂದ ಹರಡುತ್ತಿದೆ ಎಂಬ ಸುಳ್ಳು ಸುದ್ದಿ ಹರಡುತ್ತಿದ್ದ ಏಳು ಜನರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

    ನಿಪಾ ವೈರಸ್ ಕುರಿತು ವಾಟ್ಸಪ್ ಮೂಲಕ ಸುಳ್ಳು ಸುದ್ದಿಯನ್ನು ಧ್ವನಿ ಸಂದೇಶಗಳನ್ನು ರಚಿಸಿ ರವಾನಿಸುತ್ತಿದ್ದರು.

    ಈ ಕುರಿತಂತೆ ಕೊಝಿಕ್ಕೋಡು ಜಿಲ್ಲಾ ವ್ಯಾಪ್ತಿಯ ಮೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಸುಳ್ಳು ಸುದ್ದಿಯನ್ನು ಹರಡುತ್ತಿದ್ದ ವೈಷ್ಣವ್, ನಿಮೇಶ್, ಬಿವಿಜ್, ದಿಲ್ಜಿತ್, ವಿಷ್ಣುದಾಸ್ ಎಂಬುವರನ್ನು ಬಂಧಿಸಲಾಗಿದೆ. ಅಲ್ಲದೇ ಈ ಧ್ವನಿ ಸಂದೇಶ ರಚಿಸಿದ ಕಿಡಿಗೇಡಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ನಿಪಾ ವೈರಸ್ ಕೋಳಿ ಮಾಂಸದಲ್ಲಿ ಪತ್ತೆಯಾದ ಕುರಿತು ಆರೋಗ್ಯ ಇಲಾಖೆಯ ವಿರುದ್ಧ ಸುಳ್ಳು ಸುದ್ದಿಯನ್ನೂ ಹಬ್ಬಿಸಲಾಗಿತ್ತು. ಹಾಗಾಗಿ ಯಾರೂ ಕೋಳಿ ಮಾಂಸವನ್ನು ಬಳಸಬಾರದೆಂದು ಕಿಡಿಗೇಡಿಗಳು ಹರಿಬಿಟ್ಟಿದ್ದರು. ಈ ಕುರಿತಂತೆಯೂ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ:ಕೋಳಿಯಿಂದ ನಿಪಾ ವೈರಸ್ ಹರಡಲ್ಲ: ಉಡುಪಿ ವೈದ್ಯ

    ಇದಕ್ಕೆ ಪ್ರತಿಕ್ರಿಯಿಸಿದ ಫರೂಕ್ ಪೊಲೀಸ್ ಠಾಣಾಧಿಕಾರಿ ಸುಳ್ಳು ಸುದ್ದಿಯನ್ನು ಹರಡುತ್ತಿದ್ದ ಐವರನ್ನು ಈಗಾಗಲೇ ಬಧಿಸಿದ್ದೇವೆ. ಅಲ್ಲದೇ ನಲ್ಲಾಲಂನಲ್ಲೂ ಇಬ್ಬರ ಬಂಧನವಾಗಿದೆ. ಫಿರೋಕ್ ಆಸ್ಪತ್ರೆಯ ಕಿರಿಯ ವೈದ್ಯಾಧಿಕಾರಿಗಳು ಈ ಕುರಿತಂತೆ ದೂರನ್ನೂ ಕೂಡಾ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.

  • ಕೋಳಿಯಿಂದ ನಿಪಾ ವೈರಸ್ ಹರಡಲ್ಲ: ಉಡುಪಿ ವೈದ್ಯ

    ಕೋಳಿಯಿಂದ ನಿಪಾ ವೈರಸ್ ಹರಡಲ್ಲ: ಉಡುಪಿ ವೈದ್ಯ

    ಉಡುಪಿ: ಕೋಳಿಯಿಂದ ನಿಪಾ ವೈರಸ್ ಹರಡವುದಿಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಮಣಿಪಾಲ ವೈರಸ್ ರಿಸರ್ಚ್ ಇಲಾಖೆ ಮುಖ್ಯಸ್ಥ ಡಾ. ಅರುಣ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

    ಲಕ್ಷ ಬಾವಲಿಗಳಲ್ಲಿ ಕೇವಲ ಐದರಲ್ಲಿ ಮಾತ್ರ ಇಂತಹ ವೈರಸ್ ಕಾಣಲು ಸಾಧ್ಯ. ಮಣಿಪಾಲ ಸೆಂಟರ್ ನಲ್ಲಿ ನಿಪಾ ವೈರಸ್ ಮಾದರಿ ಪರೀಕ್ಷೆ ಮಾಡಲಾಗಿತ್ತು. ಪರೀಕ್ಷೆಯಲ್ಲಿ ನಿಪಾ ವೈರಸ್ ಪತ್ತೆಯಾಗಿಲ್ಲ ಎಂದು ತಿಳಿಸಿದರು.

    ಕೇರಳ ಸರ್ಕಾರದ ಕೋರಿಕೆಯ ಮೇರೆಗೆ ನಿಫಾ ವೈರಸ್ ರೋಗಿಗಳನ್ನು ಪರೀಕ್ಷಿಸಲು ಮಣಿಪಾಲದ ವೈದ್ಯರ ತಂಡ ಕೇರಳಕ್ಕೆ ತೆರಳಿತ್ತು. ಬಾವಲಿ ಹೊರತಾಗಿ ಬೇರೆ ಯಾವ ಪ್ರಾಣಿ-ಪಕ್ಷಿಗಳಲ್ಲೂ ನಿಪಾ ವೈರಸ್ ಕಾಣಸಿಕ್ಕಿಲ್ಲ ಎಂದು ದೃಢಪಡಿಸಿದರು.

    ನಿಪಾ ಎನ್ನುವುದು ಸಾಂಕ್ರಾಮಿಕ ರೋಗವಲ್ಲ. ಆದರೆ ಮುನ್ನೆಚ್ಚರಿಕೆ ಅತ್ಯಗತ್ಯ. ಬಾವಲಿ ಕಚ್ಚಿದ ಹಣ್ಣುಗಳನ್ನು ತಿನ್ನದಿರುವುದು ಒಳಿತು. ಕೋಳಿಯಿಂದ ಹರಡುತ್ತದೆ ಅನ್ನೋದೆಲ್ಲ ಸುಳ್ಳು ಸುದ್ದಿ. ಈ ಬಗ್ಗೆ ಅನಗತ್ಯ ಭಯಪಡುವ ಅಗತ್ಯವೇ ಇಲ್ಲ. ಕೇರಳದಲ್ಲಿ ಈಗಾಗಲೇ ವಿದೇಶಗಳಿಂದ ಔಷಧಿಗಳನ್ನು ತರಲಾಗಿದೆ ಎಂದು ತಿಳಿಸಿದರು.