Tag: nipani

  • ಕರ್ನಾಟಕದ ಮರಾಠಿ ಮಾತನಾಡುವ ಪ್ರದೇಶಗಳು ಇನ್ನೂ ಮಹಾರಾಷ್ಟ್ರ ಭಾಗವಾಗಿಲ್ಲ: ಅಜಿತ್‌ ಪವಾರ್‌

    ಕರ್ನಾಟಕದ ಮರಾಠಿ ಮಾತನಾಡುವ ಪ್ರದೇಶಗಳು ಇನ್ನೂ ಮಹಾರಾಷ್ಟ್ರ ಭಾಗವಾಗಿಲ್ಲ: ಅಜಿತ್‌ ಪವಾರ್‌

    – ಬೆಳಗಾವಿ, ಕಾರವಾರ, ನಿಪ್ಪಾಣಿಗಳನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸಬೇಕು ಎಂದ ‘ಮಹಾ’ ಡಿಸಿಎಂ

    ಮುಂಬೈ: ಕರ್ನಾಟಕದ ಮರಾಠಿ ಮಾತನಾಡುವ ಪ್ರದೇಶಗಳು ಇನ್ನೂ ಮಹಾರಾಷ್ಟ್ರ ಭಾಗವಾಗಿಲ್ಲ ಎಂದು ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ಹೇಳಿಕೆ ನೀಡಿದ್ದಾರೆ.

    ಮಹಾರಾಷ್ಟ್ರ ರಚನೆಯಾಗಿ 65 ವರ್ಷಗಳ ನಂತರವೂ, ಪಕ್ಕದ ಕರ್ನಾಟಕದ ಬೆಳಗಾವಿ ಮತ್ತು ಕಾರವಾರ ಇನ್ನೂ ಪಶ್ಚಿಮ ಮರಾಠಿ ಮಾತನಾಡುವ ರಾಜ್ಯದೊಂದಿಗೆ ವಿಲೀನಗೊಂಡಿಲ್ಲ ಎಂಬುದು ವಿಷಾದದ ಸಂಗತಿ ಎಂದಿದ್ದಾರೆ.

    ಮಹಾರಾಷ್ಟ್ರವು ಹೋರಾಟದಿಂದ ರೂಪುಗೊಂಡಿತು. ಮಹಾರಾಷ್ಟ್ರವು ತನ್ನ ಅಸ್ತಿತ್ವಕ್ಕೆ 65 ವರ್ಷಗಳನ್ನು ಪೂರೈಸಿದ್ದರೂ, ನಮ್ಮ ಹೃದಯದಲ್ಲಿ ಒಂದು ವಿಷಾದವಿದೆ. ಇಂದಿಗೂ, ಬೆಳಗಾವಿ ಮತ್ತು ಕಾರವಾರದ ಮರಾಠಿ ಮಾನೂಗಳು (ಮರಾಠಿ ಮಾತನಾಡುವ ಜನರು) ನಮ್ಮೊಂದಿಗೆ ಇಲ್ಲ. ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿದೆ. ಅವರು ಮಹಾರಾಷ್ಟ್ರದೊಂದಿಗೆ ವಿಲೀನಗೊಂಡ ದಿನ, ಮಹಾರಾಷ್ಟ್ರ ಈಗ ಪೂರ್ಣಗೊಂಡಿದೆ ಎಂದು ನಾವು ವಿಶ್ವಾಸದಿಂದ ಹೇಳಬಹುದು ಎಂದು ಮಾತನಾಡಿದ್ದಾರೆ.

    ಕರ್ನಾಟಕದ ಮರಾಠಿ ಮಾತನಾಡುವ ಪ್ರದೇಶಗಳಾದ ಬೆಳಗಾವಿ, ಕಾರವಾರ, ನಿಪ್ಪಾಣಿಗಳನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸಬೇಕೆಂದು ಅಜಿತ್‌ ಪವಾರ್‌ ಆಗ್ರಹಿಸಿದ್ದಾರೆ.

  • ಕಲುಷಿತ ನೀರು ಸೇವನೆ: ನಿಪ್ಪಾಣಿ ತಾಲೂಕಿನ ಕಸನಾಳದಲ್ಲಿ 30 ಜನ ಅಸ್ವಸ್ಥ

    ಕಲುಷಿತ ನೀರು ಸೇವನೆ: ನಿಪ್ಪಾಣಿ ತಾಲೂಕಿನ ಕಸನಾಳದಲ್ಲಿ 30 ಜನ ಅಸ್ವಸ್ಥ

    ಚಿಕ್ಕೋಡಿ : ಕಲುಷಿತ ನೀರು (Contaminated Water) ಸೇವಿಸಿ 30 ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ನಿಪ್ಪಾಣಿ (Nipani) ತಾಲೂಕಿನ ಕಸನಾಳ ಗ್ರಾಮದಲ್ಲಿ ನಡೆದಿದೆ.

    ಕಳೆದ ಎರಡು ದಿನಗಳಿಂದ 30 ಜನರಿಗೆ ಸಮಸ್ಯೆ ಕಾಣಿಸಿಕೊಂಡಿದ್ದು,ಕುಡಿಯುವ ನೀರಲ್ಲಿ (Drinking Water) ಕೊಳವೆಯಲ್ಲಿ, ಪೈಪ್ ಒಡೆದು ಕೊಳಚೆ ನೀರು ಮಿಶ್ರಣದ ನೀರು ಸೇವಿಸಿರುವವರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ . ಇದನ್ನೂ ಓದಿ: Telangana| ಬ್ಯಾಂಕ್‌ನಲ್ಲಿದ್ದ 13.6 ಕೋಟಿ ಮೌಲ್ಯದ 19 ಕೆಜಿ ಚಿನ್ನಾಭರಣ ದರೋಡೆ

     

    ಗ್ರಾಮದ ಬೋರವೆಲ್ ಮೂಲಕ ನಳಗಳಿಗೆ ನೀರು ಸರಬರಾಜು ಮಾಡುವ ಪೈಪ್‌ಲೈನ್‌ನಲ್ಲಿ  ಕಲುಷಿತ ನೀರು ಮಿಶ್ರಣದ ನೀರು ಸೇವಿಸಿ ಅಸ್ವಸ್ಥಗೊಂಡ 10 ಕ್ಕೂ ಹೆಚ್ಚು ಜನರಿಗೆ ನಿಪ್ಪಾಣಿ ಸರ್ಕಾರಿ ಆಸ್ಪತ್ರೆಯ ಚಿಕಿತ್ಸೆ ನೀಡಲಾಗುತ್ತಿದೆ.

    ಕೆಲವರನ್ನು ಗ್ರಾಮದಲ್ಲೇ  ಚಿಕಿತ್ಸೆ ನೀಡಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ತಾಲೂಕು ವೈದ್ಯಾಧಿಕಾರಿಗಳ ತಂಡ ಠಿಕಾಣಿ ಹೂಡಿದೆ.

  • 10 ರೂ. ಆಸೆ ತೋರಿಸಿ 10ರ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ – ಕಾಮುಕ ಅರೆಸ್ಟ್

    10 ರೂ. ಆಸೆ ತೋರಿಸಿ 10ರ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ – ಕಾಮುಕ ಅರೆಸ್ಟ್

    ಚಿಕ್ಕೋಡಿ: ಹತ್ತು ರೂಪಾಯಿ ನೀಡುವ ಆಮಿಷ ಒಡ್ಡಿ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಜಿಲ್ಲೆಯ ನಿಪ್ಪಾಣಿ (Nipani) ಪಟ್ಟಣದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಶೋಷಣೆ ನಿಲ್ಲುತ್ತಿಲ್ಲ ಎನ್ನುವ ಕೂಗು ಹೆಚ್ಚಾಗುತ್ತಿದ್ದಂತೆ, ಗಡಿ ಜಿಲ್ಲೆ ಬೆಳಗಾವಿಯ ನಿಪ್ಪಾಣಿಯಲ್ಲಿ ಕಾಮುಕನೋರ್ವ ಅಪ್ರಾಪ್ತ 10 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.ಇದನ್ನೂ ಓದಿ: ಬೆಳಗಾವಿ ಎಸಿ ಕಚೇರಿಯನ್ನೇ ಜಪ್ತಿ ಮಾಡಿ ವಸ್ತುಗಳನ್ನು ಹೊತ್ತೊಯ್ದ ರೈತರು!

    ಆಸಿಫ್ ಭಾಗವಾನ ಕೃತ್ಯ ಎಸಗಿದ ಆರೋಪಿ. ನಿಪ್ಪಾಣಿಯ ಬಾದಲ್‌ಪ್ಲಾಟ್‌ನಲ್ಲಿ (Badal Plot) ಈ ಘಟನೆ ನಡೆದಿದೆ.

    ಕಾಮುಕ ಬಾಲಕಿಯ ಅಂಗಾಂಗ ಮುಟ್ಟಿದಾಗ ಪಾಲಕರ ಬಳಿ ವಿಷಯ ತಿಳಿಸಿದ್ದಾಳೆ. ಬಳಿಕ ಕಾಮುಕ ಆಸಿಫ್‌ನನ್ನು ಪಾಲಕರು ಥಳಿಸಿದ್ದಾರೆ. ಆ.16 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಬುಧವಾರ ನಿಪ್ಪಾಣಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಮೀಡಿಯಾ, ಸಾರ್ವಜನಿಕರು ಬೈದ್ರೂ ನೀರಿನ ದರ ಏರಿಸಿಯೇ ಏರಿಸುತ್ತೇವೆ: ಡಿಕೆಶಿ

  • ನೀತಿ ಸಂಹಿತೆ ಉಲ್ಲಂಘನೆ – ಶಶಿಕಲಾ ಜೊಲ್ಲೆ ವಿರುದ್ಧ ಪ್ರಕರಣ ದಾಖಲು

    ನೀತಿ ಸಂಹಿತೆ ಉಲ್ಲಂಘನೆ – ಶಶಿಕಲಾ ಜೊಲ್ಲೆ ವಿರುದ್ಧ ಪ್ರಕರಣ ದಾಖಲು

    ಚಿಕ್ಕೋಡಿ: ನೀತಿ ಸಂಹಿತೆ ಉಲ್ಲಂಘನೆ (Violation of Code of Conduct) ಮಾಡಿರುವುದಕ್ಕಾಗಿ ಸಚಿವೆ ಶಶಿಕಲಾ ಜೊಲ್ಲೆ (Shashikala Jolle) ವಿರುದ್ಧ ಪ್ರಕರಣ ದಾಖಲಾಗಿದೆ. ನಿಪ್ಪಾಣಿ (Nipani) ಮತಕ್ಷೇತ್ರದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ.

    ನೀತಿ ಸಂಹಿತೆ ಘೋಷಣೆಯ ಮೊದಲ ದಿನವೇ ಸಚಿವೆ ಶಶಿಕಲಾ ಜೊಲ್ಲೆ ಸಮ್ಮುಖದಲ್ಲೇ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ನಿಪ್ಪಾಣಿಯ ರಣರಾಗಿಣಿ ಮಹಿಳಾ ಮಂಡಳದಿಂದ ಅರಿಶಿನ ಕುಂಕುಮ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಚಿಹ್ನೆ ಹಾಗೂ ಲೋಕಸಭಾ ಸದಸ್ಯ ಅಣ್ಣಾಸಾಬ ಜೊಲ್ಲೆ ಅವರ ಫೋಟೋ ಬಳಕೆ ಮಾಡಲಾಗಿತ್ತು. ಇದನ್ನೂ ಓದಿ: ಬಿಜೆಪಿ-ಕಾಂಗ್ರೆಸ್‍ನ ಹೊಸ ಮುಖಗಳ ಪ್ರಯೋಗ ಶಾಲೆಯಾಗುತ್ತಾ ರಾಜ್ಯದ ಏಕೈಕ ಮೀಸಲು ಕ್ಷೇತ್ರ ಸುಳ್ಯ?

    ಈ ಕಾರ್ಯಕ್ರಮದಲ್ಲಿ 4-5 ಸಾವಿರ ಮಹಿಳೆಯರು ಭಾಗವಹಿಸಿದ್ದು, ಶಶಿಕಲಾ ಜೊಲೆ ಕೂಡಾ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ನೀತಿಸಂಹಿತೆ ಉಲ್ಲಂಘನೆಯಾಗಿರುವ ಹಿನ್ನೆಲೆ ರಣರಾಗಿಣಿ ಮಹಿಳಾ ಮಂಡಳ ಅಧ್ಯಕ್ಷೆ ಹಾಗೂ ಶಶಿಕಲಾ ಜೊಲ್ಲೆ ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಚೆಕ್‍ಬೌನ್ಸ್ ಕೇಸ್- ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಬಂಧನದ ಭೀತಿ?

  • ನಿಪ್ಪಾಣಿಯಿಂದ ಕಿತ್ತೂರುವರೆಗಿನ ರಾಷ್ಟ್ರೀಯ ಪಕ್ಕದಲ್ಲಿ ಜಲಶಕ್ತಿ ನಿರ್ಮಾಣ: ಬೊಮ್ಮಾಯಿ

    ನಿಪ್ಪಾಣಿಯಿಂದ ಕಿತ್ತೂರುವರೆಗಿನ ರಾಷ್ಟ್ರೀಯ ಪಕ್ಕದಲ್ಲಿ ಜಲಶಕ್ತಿ ನಿರ್ಮಾಣ: ಬೊಮ್ಮಾಯಿ

    ಬೆಳಗಾವಿ: ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ನಿಪ್ಪಾಣಿಯಿಂದ ಕಿತ್ತೂರಿನವರೆಗಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಜಲಶಕ್ತಿ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

    ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಐದು ರಾಷ್ಟ್ರೀಯ ಹೆದ್ದಾರಿಗಳ ಶಂಕು ಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ದೂರದೃಷ್ಟಿಯಿಂದ ದೇಶದಲ್ಲಿ ರಸ್ತೆ ಅಭಿವೃದ್ಧಿಗಳಾಗುತ್ತಿವೆ. ರಸ್ತೆ ಮೂಲಕ ನರೇಂದ್ರ ಮೋದಿ ಕಂಡಿರುವ ಕನಸನ್ನು ನನಸು ಮಾಡಲು ರಸ್ತೆ ಅಭಿವೃದ್ಧಿಗೆ ಚಾಲನೆ ಕೊಡಲಾಗುತ್ತಿದೆ. ಮೋದಿ ಅವರ ಕನಸನ್ನು ನಿತಿನ್ ಗಡ್ಕರಿ ಅವರು ಸಾಕಾರಗೊಳಿಸುವ ಕಾರ್ಯ ಮಾಡುತ್ತಿದ್ದಾರೆ. ನಿತಿನ್ ಗಡ್ಕರಿ ಅವರು ಮಹಾರಾಷ್ಟ್ರ ಲೋಕೋಪಯೋಗಿ ಸಚಿವರಾಗಿ ಕ್ರಾಂತಿಯನ್ನು ಮಾಡಿದ್ದಾರೆ. 20 ವರ್ಷಗಳ ಹಿಂದೆ ಈ ಕಾರ್ಯವನ್ನ ಮಾಡಿದ್ದರು. ಇಂದು ಇಡೀ ದೇಶದಲ್ಲಿ ನ್ಯಾಷನಲ್ ಹೈವೇ ಅಭಿವೃದ್ಧಿ ಮಾಡುತ್ತಿದ್ದಾರೆ. ರಸ್ತೆಗಳನ್ನ ರಸ್ತೆಗಳಾಗಿ ನೋಡಲಿಲ್ಲ. ಹಲವು ಉಪಯುಕ್ತ ಯೋಜನೆಗಳನ್ನ ರೂಪಿಸಲಾಗುತ್ತಿದೆ. ಬೆಳಗಾವಿಯಲ್ಲಿನ ನ್ಯಾಷನಲ್ ಹೈವೇ ಪಕ್ಕದಲ್ಲಿ ಜಲಶಕ್ತಿ ನಿರ್ಮಾಣ ಮಾಡುತ್ತೇನೆ. ನಿಪ್ಪಾಣಿಯಿಂದ ಕಿತ್ತೂರುವರೆಗಿನ ರಾಷ್ಟ್ರೀಯ ಪಕ್ಕದಲ್ಲಿ ಜಲಶಕ್ತಿ ನಿರ್ಮಾಣ ಮಾಡಲಾಗುವುದು. ಬೆಳಗಾವಿಯಿಂದಲೇ ಈ ಯೋಜನೆ ಆರಂಭ ಮಾಡುತ್ತೇನೆ ಎಂದು ಸಿಎಂ ಘೋಷಣೆ ಮಾಡಿದರು. ಇದನ್ನೂ ಓದಿ: ವಿದ್ಯುತ್ ಪೂರೈಕೆ ಉಚಿತವಲ್ಲ, ಬಿಲ್ ಪಾವತಿಸದಿದ್ದರೆ ಕರೆಂಟ್ ಕಟ್ : ನಿತಿನ್ ರಾವತ್

    ಗಡ್ಕರಿಯವರು ರಿಂಗ್ ರೋಡ್ ಮಾಡಲು ಒತ್ತು ನೀಡಿದ್ದಾರೆ. ಬೆಳಗಾವಿಯಲ್ಲಿ ರಿಂಗ್ ರೋಡ್ ಮಾಡಬೇಕೆಂದು ಬಹಳ ವರ್ಷಗಳ ಯೋಜನೆಯಿದೆ. ಆದಷ್ಟು ಬೇಗ ಬೆಳಗಾವಿಯಲ್ಲಿ ರಿಂಗ್ ರೋಡ್ ಮಾಡುತ್ತೇನೆ. ಮಹಾರಾಷ್ಟ್ರ ಧಾರ್ಮಿಕ ಸ್ಥಳಗಳು, ಕರ್ನಾಟಕ ಧಾರ್ಮಿಕ ಸ್ಥಳಗಳಿಗೆ ಜೋಡಣೆ ಮಾಡುವ ಕನಸು ಗಡ್ಕರಿ ಕಂಡಿದ್ದಾರೆ. ಆ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿದ್ದಾರೆ. ರಸ್ತೆಗಳು ಅಭಿವೃದ್ಧಿಗೆ ಮಾದರಿ ಆಗಲಿ. ಇದು ರಾಷ್ಟ್ರೀಯ ಐಕ್ಯತೆಗೆ ಸಹಕಾರಿ ಆಗಿದೆ ಎಂದು ಹೇಳಿದರು. ಇದನ್ನೂ ಓದಿ: ಭಾರತೀಯರನ್ನು ತಾಯ್ನಾಡಿಗೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಮೋದಿ ಸರ್ಕಾರ ಮಾಡುತ್ತಿದೆ: ಖೂಬಾ

  • ಗಾಂಜಾ ಮಾರಾಟ – ಇಬ್ಬರು ಯುವಕರ ಬಂಧನ

    ಗಾಂಜಾ ಮಾರಾಟ – ಇಬ್ಬರು ಯುವಕರ ಬಂಧನ

    ಚಿಕ್ಕೋಡಿ(ಬೆಳಗಾವಿ): ಅಕ್ರಮವಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಸ್ಥಳೀಯ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

    ನಿಪ್ಪಾಣಿ ಪಟ್ಟಣದ ಬಾದಲ್ ಪ್ಲಾಟ್‍ನ ಸೋಹೆಲ್ ಶಬ್ಬೀರ ದೇಸಾಯಿ(26) ಹಾಗೂ ಶಿವಾಜಿನಗರ ಹಮೀದ ಸಲಮಾನ ಶೇಖ(21) ಬಂಧಿತ ಯುವಕರು. ಬಂಧಿತರಿಂದ ಸುಮಾರು 15 ಸಾವಿರ ಮೌಲ್ಯದ ಒಂದು ಕೆ.ಜಿ ಗೂ ಅಧಿಕ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಮುಸ್ಲಿಮರಲ್ಲಿ ಸಂತಾನೋತ್ಪತ್ತಿ ದರ ಕಡಿಮೆಯಾಗಿದೆ: ದಿಗ್ವಿಜಯ ಸಿಂಗ್

    ಇನ್ನೊಬ್ಬ ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಶೋಧ ನಡೆಸಿದ್ದಾರೆ. ನ್ಯಾಯಾಂಗ ಬಂಧನಕ್ಕಾಗಿ ಇಬ್ಬರನ್ನೂ ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಇದನ್ನೂ ಓದಿ: ಕಾಂಗ್ರೆಸ್ಸಿಗೆ ಹೆಚ್‍ಡಿಕೆ ಟಕ್ಕರ್ – ಸಿ.ಎಂ ಇಬ್ರಾಹಿಂ ಜೆಡಿಎಸ್ ಸೇರೋದು ಪಕ್ಕಾ!

    ಗಾಂಜಾ ಮಾರಟದ ಖಚಿತ ಮಾಹಿತಿ ಆಧಾರದ ಮೇಲೆ ವೃತ್ತ ನಿರೀಕ್ಷಕ ಸಂಗಮೇಶ ಶಿವಯೋಗಿ, ಪಿಎಸ್‍ಐ ಕೃಷ್ಣವೇಣಿ ಗುರ್ಲಹೊಸೂರ ನೇತೃತ್ವದಲ್ಲಿ ಶೇಖರ ಅಸೋದೆ, ಉದಯ ಕಾಂಬಳೆ, ಮೊದಲಾದ ಪೊಲೀಸ್ ಸಿಬ್ಬಂದಿ ದಾಳಿ ನಡೆಸಿದ್ದಾರೆ. ದಾಳಿ ಕುರಿತು ನಿಪ್ಪಾಣಿ ಶಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.