Tag: ninna sanihake

  • ಸೌತ್ ಸಿನಿಮಾ ರಂಗಕ್ಕೆ ಅಣ್ಣಾವ್ರ ಮೊಮ್ಮಗಳ ಎಂಟ್ರಿ

    ಸೌತ್ ಸಿನಿಮಾ ರಂಗಕ್ಕೆ ಅಣ್ಣಾವ್ರ ಮೊಮ್ಮಗಳ ಎಂಟ್ರಿ

    ಣ್ಣಾವ್ರ ಮೊಮ್ಮಕ್ಕಳು ಒಬ್ಬೊಬ್ಬರಾಗಿಯೇ ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಈಗಾಗಲೇ `ನಿನ್ನ ಸನಿಹಕೆ’ ಚಿತ್ರದ ಮೂಲಕ ಧನ್ಯಾ ರಾಮ್‌ಕುಮಾರ್ ಎಂಟ್ರಿ ಕೊಟ್ಟಾಗಿದೆ. ಸ್ಯಾಂಡಲ್‌ವುಡ್‌ನಲ್ಲೇ ಧನ್ಯಾಗೆ ಒಳ್ಳೆಯ ಅವಕಾಶಗಳು ಅರಸಿ ಬರುತ್ತಿರಬೇಕಾದರೆ, ತೆಲುಗು, ತಮಿಳು ಚಿತ್ರರಂಗದಿಂದ ನಟಿ ಧನ್ಯಾಗೆ ಬುಲಾವ್ ಬರುತ್ತಿದೆ.

    `ನಿನ್ನ ಸನಿಹಕೆ’ ಚಿತ್ರ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಗುರುತಿಸಿಕೊಂಡ ನಟಿ, ಮೊದಲ ಚಿತ್ರದಲ್ಲೇ ತಾನೆಂತಹ ಕಲಾವಿದೆ ಅಂತಾ ಪ್ರೂವ್ ಮಾಡಿದ್ದರು. ಈ ಚಿತ್ರದ ನಂತರ ಧನ್ಯಾಗೆ ಸಾಲು ಸಾಲು ಸಿನಿಮಾ ಅವಕಾಶಗಳು ಅರಸಿ ಬರುತ್ತಿವೆ. ಸಖತ್ ಚ್ಯೂಸಿಯಾಗಿ ಭಿನ್ನ ಕಥೆಗೆ ಗ್ರೀನ್ ಸಿಗ್ನಲ್ ಕೊಡ್ತಿದ್ದಾರೆ. ತೆಲುಗು ಮತ್ತು ತಮಿಳಿನಲ್ಲೂ ಧನ್ಯಾ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಸೌತ್ ಅಂಗಳದಲ್ಲೂ ತಾನು ಮಿಂಚಬೇಕು ಅಂತಾ ಧನ್ಯಾ ಕೂಡ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

    ಡಾ.ರಾಜ್ ಅವರ ಮೊಮ್ಮಗಳು ಧನ್ಯಾಗೆ ಸೌತ್ ಸಿನಿ ಇಂಡಸ್ಟ್ರಿಯಿಂದ ಸಿನಿಮಾ ಮಾಡಲು ಬುಲಾವ್ ಬಂದಿದೆ. ಅಳೆದು ತೂಗಿ ಕಥೆ ಕೇಳಿ ಒಂದಿಷ್ಟು ಚಿತ್ರಗಳಿಗೆ ಓಕೆ ಅಂದಿದ್ದಾರೆ. ತೆಲುಗು ಮತ್ತು ತಮಿಳು ಎರಡು ಭಾಷೆಯಲ್ಲೂ ಬೇರೆ ಬೇರೆ ಸಿನಿಮಾ ಮಾಡುತ್ತಿದ್ದು, ಸದ್ಯದಲ್ಲೇ ಈ ಚಿತ್ರದ ಬಗ್ಗೆ ಅನೌನ್ಸ್ ಮಾಡಲಿದ್ದಾರೆ. ಅಧಿಕೃತ ಮಾಹಿತಿಯನ್ನು ಆಯಾ ಚಿತ್ರತಂಡದವರೇ ರಿವೀಲ್ ಮಾಡಲಿದ್ದಾರೆ. ಇದನ್ನೂ ಓದಿ:`ಜವಾನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಶಾರುಖ್ ಖಾನ್ ಎಂಟ್ರಿ

    ಕನ್ನಡದ `ಕಾಲಾಪತ್ಥರ್’ ಚಿತ್ರದಲ್ಲೂ ನಟಿಸಿರುವ ಧನ್ಯಾ ಈಗ ದಕ್ಷಿಣ ಭಾರತದ ಸಿನಿಮಾದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಒಂದೊಳ್ಳೆ ಸಿನಿಮಾದ ಮೂಲಕ ಧನ್ಯಾ ಸೌತ್ ಸಿನಿಪ್ರೇಕ್ಷಕರ ಮನ ಗೆಲ್ಲುತ್ತಾರಾ ಅಂತಾ ಕಾದುನೋಡಬೇಕಿದೆ.

  • ‘ನಿನ್ನ ಸನಿಹಕೆ’ ವೀಡಿಯೋ ಹಾಡಿಗೆ ಎಲ್ಲರೂ ಫಿದಾ..!

    ‘ನಿನ್ನ ಸನಿಹಕೆ’ ವೀಡಿಯೋ ಹಾಡಿಗೆ ಎಲ್ಲರೂ ಫಿದಾ..!

    – ರಘು ದೀಕ್ಷಿತ್, ವಾಸುಕಿ ವೈಭವ್ ಮತ್ತೆ ಮೋಡಿ

    ಟ ಸೂರಜ್ ಗೌಡ ಮೊದಲ ಬಾರಿ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ‘ನಿನ್ನ ಸನಿಹಕೆ’ ಚಿತ್ರದ ಮೊದಲ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ. ರಘು ದೀಕ್ಷಿತ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಬ್ಯೂಟಿಫುಲ್ ಹಾಡಿಗೆ ವಾಸುಕಿ ವೈಭವ್ ಸಾಹಿತ್ಯ ಬರೆದಿದ್ದು ಸಿದ್ದಾರ್ಥ್ ಬೆಲ್ಮಣ್ಣು, ರಕ್ಷಿತಾ ಸುರೇಶ್ ಹಾಡಿಗೆ ಜೀವತುಂಬಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ಮಳೆ ಮಳೆ ಲಿರಿಕಲ್ ವೀಡಿಯೋ ಸಾಂಗ್ ರಘು ದೀಕ್ಷಿತ್ ಕಂಠದಲ್ಲಿ ಮೋಡಿ ಮಾಡಿತ್ತು. ಇದೀಗ ಬಿಡುಗಡೆಯಾಗಿರುವ ‘ನೀ ಪರಿಚಯ’ ವೀಡಿಯೋ ಹಾಡು ಕೂಡ ಸೊಗಸಾಗಿ ಮೂಡಿ ಬಂದಿದ್ದು ಗಾನಪ್ರಿಯರು ಮತ್ತೆ ಮತ್ತೆ ಕೇಳುತ್ತಾ ತಲೆದೂಗುತ್ತಿದ್ದಾರೆ.

    ರಾಮ್ಕುಮಾರ್ ಪುತ್ರಿ ಧನ್ಯ ರಾಮ್ಕುಮಾರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು ಚೊಚ್ಚಲ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಒಂದು ಕಡೆ ರಾಜ್ ಕುಟುಂಬದ ಕುಡಿ ಮೊದಲ ಬಾರಿ ನಟಿಸಿರೋ ಚಿತ್ರ, ಇನ್ನೊಂದು ಕಡೆ ಮೊಟ್ಟ ಮೊದಲ ಬಾರಿಗೆ ಸೂರಜ್ ಗೌಡ ಸ್ವತಃ ಕಥೆ, ಚಿತ್ರಕಥೆ ಬರೆದು ನಿರ್ದೇಶಕನಾಗಿಯೂ ಬಡ್ತಿ ಪಡೆದಿರೋದು ‘ನಿನ್ನ ಸನಿಹಕೆ’ ಚಿತ್ರದ ಮೇಲಿನ ನಿರೀಕ್ಷೆಯನ್ನು ಚಂದನವನದಲ್ಲಿ ಹೆಚ್ಚು ಮಾಡಿದೆ.

    ಇದೊಂದು ರೊಮ್ಯಾಂಟಿಂಕ್ ಕಾಮಿಡಿ ಸಿನಿಮಾವಾಗಿದ್ದು ಸೂರಜ್ ಹಾಗೂ ಧನ್ಯಾ ರಾಮ್ ಕುಮಾರ್ ಜೋಡಿ ತುಂಬಾ ಮುದ್ದಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಸೂರಜ್ ಗೌಡ ಆಕ್ಷನ್ ಹೀರೋ ಆಗಿಯೂ ತೆರೆ ಮೇಲೆ ಮಿಂಚಲಿದ್ದಾರೆ. ಕೊರೋನಾ ಆರಂಭಕ್ಕೂ ಮುನ್ನವೇ ಚಿತ್ರೀಕರಣ ಕಂಪ್ಲೀಟ್ ಮಾಡಿರೋ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿದೆ. ಅಕ್ಷಯ್ ರಾಜಶೇಖರ್ ಮತ್ತು ರಂಗನಾಥ್ ಕುಡ್ಲಿ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಅಭಿಲಾಷ್ ಕಲತಿ ಛಾಯಾಗ್ರಹಣ ‘ನಿನ್ನ ಸನಿಹಕೆ’ ಚಿತ್ರಕ್ಕಿದೆ.