Tag: Ninasam Satish

  • ಎರಡು ಭಾಗದಲ್ಲಿ ಬರಲಿದೆ ನೀನಾಸಂ ಸತೀಶ್ ನಟನೆಯ ಅಶೋಕ ಬ್ಲೇಡ್

    ಎರಡು ಭಾಗದಲ್ಲಿ ಬರಲಿದೆ ನೀನಾಸಂ ಸತೀಶ್ ನಟನೆಯ ಅಶೋಕ ಬ್ಲೇಡ್

    ನ್ನಡ ಚಿತ್ರೋದ್ಯಮದ ಹೆಸರಾಂತ ನಟ ನೀನಾಸಂ ಸತೀಶ್ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸದ್ಯ ತಾವು ನಟಿಸುತ್ತಿರುವ ಅಶೋಕ ಬ್ಲೇಡ್ (Ashoka Blade) ಕುರಿತಾಗಿ ಮಹತ್ವದ ಸುದ್ದಿಯೊಂದನ್ನು ನೀಡಿದ್ದು, ಈ ಸಿನಿಮಾ ಎರಡು ಭಾಗದಲ್ಲಿ ಮೂಡಿ ಬರಲಿದೆ ಎಂದಿದ್ದಾರೆ. ಪಾರ್ಟ್ 1  (Part 1) ಮತ್ತು ಪಾರ್ಟ್ 2 (Part 2) ಒಟ್ಟಿಗೆ ಶೂಟ್ ಮಾಡಿ, ನಂತರದ ದಿನಗಳಲ್ಲಿ ಒಂದೊಂದೇ ಸಿನಿಮಾವನ್ನು ರಿಲೀಸ್ ಮಾಡುವುದಾಗಿ ತಿಳಿಸಿದ್ದಾರೆ.

    ಈ ಸಿನಿಮಾ ಎರಡು ಕಾಲ ಘಟ್ಟದಲ್ಲಿ ಮೂಡಿ ಬರಲಿದ್ದು, 70ರ ದಶಕದಿಂದ 2022ರವರೆಗಿನ ಕಥೆಯು ಸಿನಿಮಾದಲ್ಲಿದೆಯಂತೆ. ಈ ಎರಡು ಘಟ್ಟಗಳನ್ನು ವಿಭಾಗಗಳಾಗಿ ವಿಂಗಡಿಸಿ ಸಿನಿಮಾ ಮಾಡುತ್ತಿರುವುದಾಗಿ ಸತೀಶ್ (Ninasam Satish) ಮಾತನಾಡಿದ್ದಾರೆ. ಎರಡು ಭಾಗಗಳಲ್ಲಿ ಸಿನಿಮಾ ಮಾಡಲು ಕಥೆಯೇ ಪ್ರೇರೇಪಿಸಿತು. ಹಾಗಾಗಿ ಇಂಥದ್ದೊಂದು ತೀರ್ಮಾನಕ್ಕೆ ಬರಲಾಗಿದೆ ಎನ್ನುವುದು ಸತೀಶ್ ಮಾತು.

    ಈಗಾಗಲೇ ಬರೋಬ್ಬರಿ 100 ದಿನಗಳ ಕಾಲ ಅಶೋಕ ಬ್ಲೇಡ್ ಸಿನಿಮಾದ ಶೂಟಿಂಗ್ ನಡೆದಿದೆ. ಇನ್ನೂ ಮೂವತ್ತು ದಿನಗಳ ಕಾಲ ಚಿತ್ರೀಕರಣವಾದರೆ, ಸಿನಿಮಾ ಕಂಪ್ಲೀಟ್. ಇದೊಂದು ನೈಜ ಘಟನೆಯನ್ನು ಆಧರಿಸಿದ ಸಿನಿಮಾವಾಗಿದ್ದರಿಂದ ಆದಷ್ಟು ನೈಜತೆಗೆ ಹತ್ತಿರವಾಗುವಂತೆ ಚಿತ್ರೀಕರಣ ಮಾಡಲಾಗಿದೆ. ಈ ಸಿನಿಮಾದಲ್ಲಿ ಸತೀಶ್ ಹೊಸ ಬಗೆಯ ಪಾತ್ರವನ್ನು ಮಾಡಿದ್ದಾರೆ. ಹಲವು ಭಾಷೆಗಳಲ್ಲಿ ಈ ಸಿನಿಮಾ ತಯಾರಾಗಲಿದೆ. ಇದನ್ನೂ ಓದಿ:ನೀನು ಆಂಟಿಯಾಗಿ 1 ವರ್ಷದ ಅನುಭವವಿದೆ- ಬರ್ತ್‌ಡೇಯಂದು ಪತ್ನಿ ಕಾಲೆಳೆದ ನಟ ಸುದರ್ಶನ್

    ಸತೀಶ್ ನಾಯಕನಾದರೆ, ಕಾವ್ಯ ಶೆಟ್ಟಿ (Kavya Shetty) ನಾಯಕಿಯಾಗಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಕಾವ್ಯ ಪೊಲೀಸ್ ಇನ್ಸೆಪೆಕ್ಟರ್ ಪಾತ್ರವನ್ನು ಮಾಡಿದ್ದಾರೆ. ವಿನೋದ್ ಈ ಸಿನಿಮಾದ ನಿರ್ದೇಶಕರಾದರೆ, ನರಹರಿ ನಿರ್ಮಾಪಕರು.

    ಮೈಸೂರು ಸೀಮೆಯಲ್ಲಿ 70ರ ದಶಕದಲ್ಲಿ ನಡೆದ ಒಂದು ಘಟನೆ ಬಗ್ಗೆ ಕೇಳಿದ್ದೆ. ಅದು ಎಲ್ಲೂ ದಾಖಲಾಗಿಲ್ಲ. ಎಲ್ಲೂ ಅದರ ಬಗ್ಗೆ ಉಲ್ಲೇಖವಿಲ್ಲ. ಕೊನೆಗೆ ಆ ಕಥೆಯ ವಿವರಗಳನ್ನು ಹುಡುಕಿಕೊಂಡು ಹೋದಾಗ ಹಲವು ಮಹತ್ವದ ವಿಷಯಗಳು ಗೊತ್ತಾಯಿತು. ಇದು ಕನ್ನಡ ನೆಲದ ವೀರರ ಕಥೆ. ಯುದ್ಧ ಎಂದರೆ ಯುದ್ಧಭೂಮಿ ಅಥವಾ ಸಾಮ್ರಾಜ್ಯ ವಿಸ್ತರಣೆಯ ಕಥೆಯಲ್ಲ. ಎರಡು ಸಮುದಾಯಗಳ ಕುರಿತ ಕಥೆ ಇದೆ. ವ್ಯಾಪಾರಿಗಳು ಮತ್ತು ಕಾರ್ಮಿಕರ ನಡುವಿನ ಕಥೆ ಇದೆ. ಇದರಲ್ಲಿ ಭಾಗವಹಿಸಿದ ಕೆಲವರನ್ನು ಹುಡುಕಿ ಮಾತಾಡಿಸಿದೆ. ಒಂದಿಷ್ಟು ಮಾಹಿತಿ ಸಿಕ್ಕಿತು. ಅದನ್ನು ಬೆಳೆಸಿ ಚಿತ್ರಕಥೆ ಮಾಡಿದ್ದೇನೆ. ಈ ಕಥೆ ಎಲ್ಲರಿಗೂ ಇಷ್ಟವಾಗಿದೆ ಎಂದು‌ ಚಿತ್ರದ ಕಥೆಯ ಬಗ್ಗೆ ಟಿ.ಕೆ.ದಯಾನಂದ್ ಹೇಳುವ ಮಾತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪೊಲೀಸ್ ಅಧಿಕಾರಿಯಾದ ನಟ ರಿಷಿ: ಅಭಿನಂದಿಸಿದ ನೀನಾಸಂ ಸತೀಶ್

    ಪೊಲೀಸ್ ಅಧಿಕಾರಿಯಾದ ನಟ ರಿಷಿ: ಅಭಿನಂದಿಸಿದ ನೀನಾಸಂ ಸತೀಶ್

    ಪರೇಶನ್ ಅಲಮೇಲಮ್ಮ, ಕವಲುದಾರಿ ಮುಂತಾದ ಚಿತ್ರಗಳ ಮೂಲಕ ಮನೆಮಾತಾಗಿರುವ ನಟ ರಿಷಿ (Rishi) ನಾಯಕರಾಗಿ ನಟಿಸುತ್ತಿರುವ,  ಕೆ.ಎಸ್ ನಂದೀಶ್ (Nandish) ನಿರ್ದೇಶನದ ನೂತನ ಚಿತ್ರದ ಮುಹೂರ್ತ ಸಮಾರಂಭ ಹಾಗೂ ಶೀರ್ಷಿಕೆ ಅನಾವರಣ ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ನಟ ನೀನಾಸಂ ಸತೀಶ್ (Ninasam Satish)ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು ಹಾಗೂ ಶೀರ್ಷಿಕೆ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ರುದ್ರ ಗರುಡ ಪುರಾಣ (Rudra Garuda Purana) ಎಂದು ಚಿತ್ರಕ್ಕೆ ಹೆಸರಿಡಲಾಗಿದೆ.

    ಚಂಬಲ್, ಡಿಯರ್ ವಿಕ್ರಮ್ ಚಿತ್ರಗಳು ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ದೇಶಿಸಿರುವ ಕೆ.ಎಸ್ ನಂದೀಶ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕಥೆ ಹಾಗೂ ಚಿತ್ರಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಸಂಭಾಷಣೆ ರಘು ನಿಡುವಳ್ಳಿ ಅವರದು. ಉದ್ಯಮಿ ಲೋಹಿತ್ ನಿರ್ಮಾಣ ಮಾಡುತ್ತಿದ್ದಾರೆ. ರಿಷಿ ಅವರಿಗೆ ನಾಯಕಿಯಾಗಿ ಪ್ರಿಯಾಂಕಾ ಕುಮಾರ್ ಅಭಿನಯಿಸುತ್ತಿದ್ದಾರೆ.

    ರುದ್ರ ಗರುಡ ಪುರಾಣ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಇಂದಿನಿಂದ ಚಿತ್ರೀಕರಣ ಆರಂಭವಾಗಲಿದೆ. ಸಿನಿಮಾ ಜನರ ಮೇಲೆ ಉತ್ತಮ ಪ್ರಭಾವ ಬೀರಬೇಕು. ಅಂತಹ ಸಿನಿಮಾವನ್ನು ಜನರಿಗೆ ಕೊಡುವ ಆಸೆ ನನಗೆ.  2022 UPSC ಪರೀಕ್ಷೆಯಲ್ಲಿ 265ನೇ ರ‍್ಯಾಂಕ್‌ ಪಡೆದಿರುವ ಮೈಸೂರು ಮೂಲದ ಕೆ‌.ಸೌರಭ್  ಅವರು ಸಂದರ್ಶನವೊಂದರಲ್ಲಿ ನನಗೆ ಪುನೀತ್ ರಾಜಕುಮಾರ್ ಅಭಿನಯದ ಪೃಥ್ವಿ ಚಿತ್ರ ಪ್ರೇರಣೆ ಎಂದಿದ್ದಾರೆ. ಪೃಥ್ವಿ ಚಿತ್ರ ಸೌರಭ್ ಅವರಿಗಷ್ಟೆ ಅಲ್ಲ. ಸಾಕಷ್ಟು ಜನರಿಗೆ ಸ್ಪೂರ್ತಿಯಾಗಿದೆ.  ನಾನು ಆ ಚಿತ್ರದ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೆ.‌ ನಾವು ಮಾಡುವ ಚಿತ್ರ, ಈ ರೀತಿ ಜನರಿಗೆ ತಲುಪಿದಾಗ ಮುಂದೆ ಇಂತಹ ಹೆಚ್ಚುಹೆಚ್ಚು ಚಿತ್ರಗಳನ್ನು ಮಾಡುವ ಹುಮ್ಮಸ್ಸು ನಿರ್ದೇಶಕನಿಗೆ ಹೆಚ್ಚಾಗುತ್ತದೆ ಎಂದು ನಿರ್ದೇಶಕ ಕೆ.ಎಸ್ ನಂದೀಶ್ ತಿಳಿಸಿದರು.

    ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಹಿಂದೆ ಕವಲುದಾರಿ ಚಿತ್ರದಲ್ಲೂ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದೆ. ಹಾಗಾಗಿ, ಅದೇ ಜಾನರ್ ನ ಇನ್ನೊಂದು ಚಿತ್ರ ಮಾಡುವುದಕ್ಕೆ ಇಷ್ಟವಿರಲಿಲ್ಲ. ಆದರೆ ನಂದೀಶ್ ಅವರು ಈ ಚಿತ್ರದ ಕಥೆ ಕೇಳಿದಾಗ ಬಹಳ ಇಷ್ಟವಾಯಿತು. ಎರಡೂ ಚಿತ್ರಗಳ ಮಧ್ಯೆ ಯಾವುದೇ ಹೋಲಿಕೆ ಇಲ್ಲ.  ಇದರಲ್ಲಿ ನಾನು ಪೊಲೀಸ್ ಅಧಿಕಾರಿಯಾದರೂ ಬಹಳ ವಿಭಿನ್ನವಾಗಿದೆ.  ಜೊತೆಗೆ ಕರ್ಮ, ಪಾಪ, ಪುಣ್ಯಕ್ಕೆ ಸಂಬಂಧಿಸಿದ ಗರುಡ ಪುರಾಣದ ಸಾಕಷ್ಟು ಅಂಶಗಳು ಈ ಚಿತ್ರದಲ್ಲಿದೆ.  ಈ ಚಿತ್ರಕ್ಕೆ ಗರುಡ ಪುರಾಣ ಎಂದು ಹೆಸರಿಡಲು ನಿರ್ಧರಿಸಿದ್ದೆವು. ಚಿತ್ರದಲ್ಲಿ ನನ್ನ ಪಾತ್ರದ ಹೆಸರು ರುದ್ರ. ಹಾಗಾಗಿ ರುದ್ರ ಗರುಡ ಪುರಾಣ ಅಂತ ಶೀರ್ಷಿಕೆ ಇಡಲಾಗಿದೆ. ಚಿತ್ರಕ್ಕೆ ಚಾಲನೆ ನೀಡಿದ ನೀನಾಸಂ ಸತೀಶ್ ಅವರಿಗೆ ಧನ್ಯವಾದ ಎಂದರು ನಾಯಕ ರಿಷಿ.  ನಾಯಕಿ ಪ್ರಿಯಾಂಕ ಕುಮಾರ್, ನಟರಾದ ಶಿವರಾಜ್ ಕೆ ಆರ್ ಪೇಟೆ, ಪವನ್  ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

  • ಚುನಾವಣಾ ರಾಯಭಾರಿಯಾಗಿ ಖ್ಯಾತನಟ ಸತೀಶ್ ನೀನಾಸಂ ನೇಮಕ

    ಚುನಾವಣಾ ರಾಯಭಾರಿಯಾಗಿ ಖ್ಯಾತನಟ ಸತೀಶ್ ನೀನಾಸಂ ನೇಮಕ

    ನ್ನಡದ ಹೆಸರಾಂತ ನಟ ಸತೀಶ್ ನೀನಾಸಂ (Ninasam Satish) ಅವರನ್ನು ಮಂಡ್ಯ (Mandya) ಜಿಲ್ಲಾ ಮತದಾನ ಜಾಗೃತಿ ರಾಯಭಾರಿಯನ್ನಾಗಿ (Election Ambassador) ಚುನಾವಣಾ ಆಯೋಗ ನೇಮಿಸಿದೆ. ಕರ್ನಾಟಕ ವಿಧಾನಸಭೆ (Assembly) ಚುನಾವಣೆ 2023 ಜಾರಿಯಲ್ಲಿದ್ದು, ಅತೀ ಹೆಚ್ಚು ಮತದಾನ ಆಗುವ ಉದ್ದೇಶದಿಂದ ಆಯೋಗವು ಮಂಡ್ಯ ಜಿಲ್ಲೆಯವರೇ ಆಗಿರುವ ಸತೀಶ್ ಅವರನ್ನು ನೇಮಿಸಿ ಜಾಗೃತಿ ಕಾರ್ಯಕ್ರಮವನ್ನು ಶುರು ಮಾಡಿದೆ.

    ನಿನ್ನೆ ಮಂಡ್ಯದಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸತೀಶ್, ‘ಜಾತಿ, ಮತ, ಕುಲ ಯಾವುದನ್ನೂ ಲೆಕ್ಕಿಸದೇ, ಆಮಿಷಗಳಿಗೆ ಒಳಗಾಗದೇ ಪ್ರಮಾಣಿಕ ವ್ಯಕ್ತಿಗಳಿಗೆ ಮತದಾನ ಮಾಡಿ, ಮತದಾನ ಅಮೂಲ್ಯವಾದದ್ದು ಅದನ್ನು ಮಾರಿಕೊಳ್ಳಬೇಡಿ ಮತ್ತು ಹಾಳು ಮಾಡಬೇಡಿ’ ಎಂದು ಅವರು ಮಾತನಾಡಿದರು. ಇದನ್ನೂ ಓದಿ:ಖುಷ್ಬೂ ಮೊದಲ ಸಂಬಂಧದ ಬಗ್ಗೆ ಶಾಕಿಂಗ್‌ ಹೇಳಿಕೆ ನೀಡಿದ ತೆಲುಗು ನಟಿ

    ಮತದಾನದ ಶಕ್ತಿಯನ್ನು ಅರಿವು ಮಾಡಿಕೊಟ್ಟ ಸತೀಶ್, ‘ಮತದಾನ ಪ್ರಕ್ರಿಯೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಭಾಗಿಯಾಗಿ. ನಾನ್ಯಾಕೆ ಮತದಾನ ಮಾಡಬೇಕು ಎಂದು ಆಲೋಚಿಸುವ ಬದಲು, ಮತದಾನ ಮಾಡಿದರೆ ಎಂತಹ ರಾಷ್ಟ್ರವನ್ನು ಕಟ್ಟಬಹುದು ಎನ್ನುವುದರತ್ತ ಯೋಚಿಸಿ. ರಾಜ್ಯದಲ್ಲೇ ಮಂಡ್ಯದಲ್ಲಿ ಅತೀ ಹೆಚ್ಚು ಮತದಾನ ಆಗುವಂತೆ ಮಾಡಬೇಕಾಗಿದ್ದು ನಮ್ಮೆಲ್ಲರ ಜವಾಬ್ದಾರಿ ಆಗಿದೆ’ ಎಂದು ಸತೀಶ್ ತಿಳಿಸಿದರು.

    ಮತದಾನದ ಕುರಿತಾಗಿ ಸತೀಶ್ ಯಾವಾಗಲೂ ಜಾಗೃತಿ ಮೂಡಿಸುತ್ತಲೇ ಬಂದಿದ್ದಾರೆ. ಈ ಬಾರಿ ಚುನಾವಣೆಯ ರಾಯಭಾರಿ ಆಗಿದ್ದರಿಂದ ಮತ್ತಷ್ಟು ಜವಾಬ್ದಾರಿ ತಗೆದುಕೊಂಡು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಮಂಡ್ಯದಲ್ಲಿ ಮಾತ್ರವಲ್ಲ ಕರ್ನಾಟಕದ ತುಂಬಾ ಅವರ ಅಭಿಮಾನಿಗಳು ಇದ್ದು ಮುಂದಿನ ದಿನಗಳಲ್ಲಿ ಅವರು ಬೇರೆ ಬೇರೆ ಜಿಲ್ಲೆಗಳಿಗೂ ರಾಯಭಾರಿ ಆಗಲಿ ಎನ್ನುವುದು ಸತೀಶ್ ಅಭಿಮಾನಿಗಳ ಆಸೆ.

    ಸದ್ಯ ಅಶೋಕ ಬ್ಲೇಡ್, ಮ್ಯಾಟ್ನಿ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಸತೀಶ್, ಹೊಸ ರೀತಿಯ ಆಲೋಚನೆಯನ್ನು ಮಾಡಬಲ್ಲಂತ ನಟ. ವಿಭಿನ್ನ ಸಿನಿಮಾಗಳ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಕಾರಣದಿಂದಾಗಿಯೇ ಚುನಾವಣಾ ಆಯೋಗ ಅವರಿಗೆ ಮಹತ್ತರವಾದ ಜವಾಬ್ದಾರಿಯನ್ನು ನೀಡಿದೆ.

  • ಡಿ.12ರಂದು ರಜನಿಕಾಂತ್ ಕುರಿತಾದ ‘ಗೆಳೆಯ ಶಿವಾಜಿ’ ಪುಸ್ತಕ ಬಿಡುಗಡೆ

    ಡಿ.12ರಂದು ರಜನಿಕಾಂತ್ ಕುರಿತಾದ ‘ಗೆಳೆಯ ಶಿವಾಜಿ’ ಪುಸ್ತಕ ಬಿಡುಗಡೆ

    ಹಿರಿಯ ನಟ ಅಶೋಕ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಆತ್ಮೀಯ ಸ್ನೇಹಿತರು. ರಜನಿ ಬಗ್ಗೆ ಯಾರಾದರೂ ವಸ್ತುನಿಷ್ಠವಾಗಿ ಬರೆಯಬಲ್ಲರು ಅಂದರೆ, ಅದು ಅಶೋಕ್ ಅವರಿಗೆ ಮಾತ್ರ ಸಾಧ್ಯವಾಗುವಂಥದ್ದು. ರಜನಿ ಅವರ ಕಷ್ಟದ ದಿನಗಳಿಂದ ಸೂಪರ್ ಸ್ಟಾರ್ ಆಗಿ ಬೆಳೆದ ಪರಿಯನ್ನು ಕಣ್ಣಾರೆ ಕಂಡವರು. ಕಂಡುಂಡು ಮೆರೆದವರು. ಹಾಗಾಗಿ ಗೆಳೆಯನ ಜೊತೆಗಿನ ಅಪರೂಪದ ಭಾವನೆಗಳನ್ನು ಈ ಪುಸ್ತಕದಲ್ಲಿ ಹಿಡಿದಿಟ್ಟಿದ್ದಾರೆ ಅಶೋಕ್.

    ಇದು ಕೇವಲ ಭಾವನೆಗಳ ಗುಚ್ಛವಲ್ಲವಂತೆ. ಸಾಕಷ್ಟು ಘಟನೆಗಳಿಗೆ ಸಾಕ್ಷಿಯಾಗಿಯೂ ಇರಲಿದೆಯಂತೆ. ಅಲ್ಲದೇ, ಅನೇಕ ಊಹಾಪೋಹಗಳಿಗೆ ಈ ಪುಸ್ತಕ ಉತ್ತರವಾಗಿ ನಿಲ್ಲಬಲ್ಲದು. ಗೊತ್ತಿರದ ರಜನಿಯನ್ನು ಗೆಳೆಯ ಅನ್ನುವ ಆಪ್ತತೆಯ ಮೂಲಕ ಅಶೋಕ್ ಅವರು ಅನೇಕ ಸಂಗತಿಗಳನ್ನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಹಾಗಾಗಿ ‘ಗೆಳೆಯ ಶಿವಾಜಿ’ ರಜನಿಕಾಂತ್ ಜೀವನದ ದಿ ಬೆಸ್ಟ್ ಪುಸ್ತಕವೂ ಆಗಿದೆ. ಗಿರಿಜಾ ಲೋಕೇಶ್ ಈ ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದರೆ, ಬೆಂಗಳೂರಿನ ಬೀ ಕಲ್ಚರ್ ಪ್ರಕಾಶನ ಈ ಪುಸ್ತಕವನ್ನು ಹೊರ ತಂದಿದೆ.  ಇದನ್ನೂ ಓದಿ: `ಬಿಗ್ ಬಾಸ್’ ಖ್ಯಾತಿಯ ಭೂಮಿ ಶೆಟ್ಟಿ ಫಿಟ್ನೆಸ್ ನೋಡಿ ವಾವ್ ಎಂದ ಫ್ಯಾನ್ಸ್

    ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಡಿಸೆಂಬರ್ 12ರ ಸಂಜೆ 5.30ಕ್ಕೆ ಈ ಪುಸ್ತಕ ಬಿಡುಗಡೆ ಆಗುತ್ತಿದ್ದು, ಅಗ್ರಹಾರ ಕೃಷ್ಣಮೂರ್ತಿ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ನಟ ನೀನಾಸಂ ಸತೀಶ್ ಈ ಪುಸ್ತಕವನ್ನು ಬಿಡುಗಡೆ ಮಾಡಿದರೆ, ನಿರ್ದೇಶಕಿ ಸುಮನಾ ಕಿತ್ತೂರ್ ಕೃತಿಯನ್ನು ಪರಿಚಯಿಸುತ್ತಾರೆ. ಸಿ.ಎಸ್.ದ್ವಾರಕನಾಥ್ ಅತಿಥಿಯಾಗಿ ಆಗಮಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸ್ಯಾಂಡಲ್ ವುಡ್ ನಲ್ಲಿ ಎರಡು ದಿನ ಟೆಲಿವಿಷನ್ ಕ್ರಿಕೆಟ್ ಲೀಗ್

    ಸ್ಯಾಂಡಲ್ ವುಡ್ ನಲ್ಲಿ ಎರಡು ದಿನ ಟೆಲಿವಿಷನ್ ಕ್ರಿಕೆಟ್ ಲೀಗ್

    ಟ್ರಿನ್ಕೊ ಇನ್ಫ್ರಾ ಪ್ರೈವೇಟ್ ಲಿಮಿಟೆಡ್ ಟೆಲಿವಿಷನ್ ಕ್ರಿಕೆಟ್ ಲೀಗ್ ಸೀಸನ್ 4 ರ ಟೈಟಲ್ ಸ್ಪಾನ್ಸರ್ ಆಗಿದ್ದಾರೆ. ಟೆಲಿವಿಷನ್ ಕ್ರಿಕೆಟ್ ಯಶಸ್ವಿಯಾಗಿ 3 ಸೀಸನ್ ಪೂರೈಸಿದೆ. 4 ಸೀಸನ್ ನಲ್ಲಿ 6 ತಂಡಗಳು ಭಾಗಿಯಾಗಲಿದೆ.  ಈ ಸೀಸನ್ ನಲ್ಲಿ ಭಾಗಿಯಾಗಲಿರುವ 6 ತಂಡಗಳ ವಿವರ ಈ ರೀತಿಯಿದೆ.

    ಪ್ರೊವಿಟೇಲ್ ಹೆಲ್ತ್  ನ ಡಾ.ಶಿಲ್ಪ ಮಾಲೀಕತ್ವದ ರೋರಿಂಗ್ ಲಯನ್ಸ್ ತಂಡದ ನಾಯಕ ಕಿರಿಕ್ ಕೀರ್ತಿ ಹಾಗೂ ಉಪನಾಯಕ ಕಾರ್ತಿಕ್ ಮಹೇಶ್. ಶೃತಿ ರಮೇಶ್, ಶುಭ ರಕ್ಷ ಹಾಗೂ ಸುಶ್ಮಿತ. ಚೇತನ ಪ್ರೊಡಕ್ಷನ್ಸ್ ನ ಡಾ.ಚೇತನ ಮಾಲೀಕತ್ವದ “ಜಟಾಯು” ತಂಡದ ನಾಯಕನಾಗಿ ಹರ್ಷ ಸಿ.ಹೆಚ್ ಗೌಡ ಹಾಗೂ ಉಪನಾಯಕನಾಗಿ ಹರೀಶ್ ಇದ್ದಾರೆ. ಸಾಕ್ಷಿ ಮೇಘನಾ ಹಾಗೂ ಪೂಜಾ. ಇದನ್ನೂ ಓದಿ: ಪುಷ್ಪ 2 ಅಲ್ಲು ಅರ್ಜುನ್ ಮುಂದೆ ಅಬ್ಬರಿಸಲು ಬರುತ್ತಿದ್ದಾರೆ ವಿದೇಶಿ ವಿಲನ್

    ಡಿ ಜಿ ಇನ್ಫಿನಿಟಿ ಕಂಪನಿಯ ಸುಲ್ತಾನ್ ಹಾಗೂ ಎಂ.ಆರ್ ಸ್ವಾಮಿ ಮಾಲೀಕರಾಗಿರುವ “ಕ್ರೇಜಿ ಕಿಲ್ಲರ್” ತಂಡದ ನಾಯಕ ಅರ್ಜುನ್ ಯೋಗಿ ಹಾಗೂ ಉಪನಾಯಕ ಚೇತನ್ ವಿಕಾಸ್. ಮೇಘನಾ ಹಾಗೂ ಆವಂತಿಕ ಈ ತಂಡದ ರಾಯಭಾರಿಗಳು.  “ಅಮ್ಮಾಸ್ ಫುಡ್” ಶ್ರೀನಿಧಿ ಅವರ ಮಾಲೀಕತ್ವದ “ಗ್ಯಾಂಗ್ ಗರುಡಾಸ್” ತಂಡದ ನಾಯಕನಾಗಿ ಮಾಸ್ಟರ್ ಆನಂದ್ ಹಾಗೂ ಉಪನಾಯಕನಾಗಿ ಕರಿಬಸವ ಇದ್ದಾರೆ. ತನಿಶಾ, ಪಲ್ಲವಿ ಗೌಡ ಹಾಗೂ ದ್ರವ್ಯ ಶೆಟ್ಟಿ ಈ ತಂಡದ ರಾಯಭಾರಿಗಳು.

    ಪ್ರಧಾನ್ ಟೀವಿಯ ಪ್ರಶಾಂತ್ ಹಾಗೂ ನಾಗಶ್ರೀ ಮಾಲೀಕರಾಗಿರುವ “ಚಾಂಪಿಯನ್ ಚೀತಸ್” ತಂಡದ ನಾಯಕನಾಗಿ ಹೇಮಂತ್ ಹಾಗೂ ಮಂಜು ಪಾವಗಡ ಉಪನಾಯಕನಾಗಿದ್ದಾರೆ.  ವಿಜಯಲಕ್ಷ್ಮಿ, ಯಶಸ್ವಿನಿ  ಮತ್ತು ಜಾಹ್ನವಿ ಈ ತಂಡದ ರಾಯಭಾರಿಗಳು. ಕಿರೀಟಿ ವೆಂಚರ್ ನ ಕುಶಾಲ್ ಗೌಡ ಮಾಲೀಕತ್ವದ “ಗಜಪಡೆ ವಾರಿಯರ್ಸ್” ತಂಡದ ನಾಯಕನಾಗಿ ವಿವಾನ್ ಹಾಗೂ ಉಪನಾಯಕನಾಗಿ ಶ್ರೀರಾಮ್ ಇದ್ದಾರೆ.  ವರ್ಷಿತಾ, ಅಮೂಲ್ಯ ಹಾಗೂ ಅನಿಕಾ ಈ ತಂಡದ ರಾಯಭಾರಿಗಳಾಗಿದ್ದಾರೆ. ಎರಡು ದಿನಗಳ ಕಾಲ “ಟೆಲಿವಿಷನ್ ಕ್ರಿಕೆಟ್ ಲೀಗ್ ಸೀಸನ್ 4” ರ ಪಂದ್ಯಗಳು ನಡೆಯಲಿದೆ. ಪಂದ್ಯಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಫೌಂಡರ್ ದೀಪಕ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಪೆಟ್ರೋಮ್ಯಾಕ್ಸ್’ ಸಿನಿಮಾ ಓಡುತ್ತಿದ್ದರೂ ಸೋಲೊಪ್ಪಿಕೊಂಡ ನಿರ್ದೇಶಕನ ನಡೆಗೆ ಮೆಚ್ಚುಗೆ ಮಹಾಪೂರ

    ‘ಪೆಟ್ರೋಮ್ಯಾಕ್ಸ್’ ಸಿನಿಮಾ ಓಡುತ್ತಿದ್ದರೂ ಸೋಲೊಪ್ಪಿಕೊಂಡ ನಿರ್ದೇಶಕನ ನಡೆಗೆ ಮೆಚ್ಚುಗೆ ಮಹಾಪೂರ

    ನೀರ್ ದೋಸೆ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ಸ್ಯಾಂಡಲ್ ವುಡ್ ಗೆ ಕೊಟ್ಟಿರುವ ನಿರ್ದೇಶಕ ವಿಜಯ್ ಪ್ರಸಾದ್ ಅವರ ಪೆಟ್ರೋಮ್ಯಾಕ್ಸ್ ಸಿನಿಮಾ ಎರಡು ವಾರಗಳ ಹಿಂದೆಯಷ್ಟೇ ರಿಲೀಸ್ ಆಗಿದೆ. ನೀನಾಸಂ ಸತೀಶ್, ಹರಿಪ್ರಿಯಾ, ಕಾರುಣ್ಯ ರಾಮ್, ಅರುಣ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದ ಈ ಸಿನಿಮಾಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಮೂರನೇ ವಾರಕ್ಕೆ ಸಿನಿಮಾ ಕಾಲಿಟ್ಟಿರುವ ಸಂದರ್ಭದಲ್ಲಿ ಏಕಾಏಕಿ ಸೋಲನ್ನು ಒಪ್ಪಿಕೊಂಡು ಬಿಟ್ಟಿದ್ದಾರೆ ನಿರ್ದೇಶಕರು.

    ನಿನ್ನೆಯಷ್ಟೇ ನಿರ್ದೇಶಕ ವಿಜಯ್ ಪ್ರಸಾದ್ ಸೋಷಿಯಲ್ ಮೀಡಿಯಾದಲ್ಲಿ ‘ನಮ್ಮ ಪೆಟ್ರೋಮ್ಯಾಕ್ಸ್ ಚಿತ್ರ ನಾವು ಅಂದುಕೊಂಡಂತೆ ಎಲ್ಲರನ್ನೂ ತಲುಪಲು ಆಗಲಿಲ್ಲ. ಅದಕ್ಕೆ ಕಾರಣ ಖಂಡಿತವಾಗಿಯೂ ನೀವಂತೂ ಅಲ್ಲ. ಹಾಗೆ ನಮ್ಮ ಚಿತ್ರತಂಡದ ಯಾರೊಬ್ಬರೂ ಅಲ್ಲ. ಇದಕ್ಕೆ ಕಾರಣ ನಾನೊಬ್ಬನೇ. ಕ್ಷಮೆ ಇರಲಿ’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ನಿರ್ದೇಶಕರು ಹೇಳಿದಂತೆ ಅಪಾರ ಸಂಖ್ಯೆಯಲ್ಲಿ ಈ ಸಿನಿಮಾ ಜನರಿಗೆ ತಲುಪದೇ ಇರಬಹುದು. ಆದರೆ, ತಲುಪಿದವರೆಲ್ಲ ಇಷ್ಟಪಟ್ಟಿದ್ದಾರೆ. ದ್ವಂದ್ವಾರ್ಥದ ಸಂಭಾಷಣೆಯ ಮಧ್ಯೆಯೂ ತಲುಪಬೇಕಾದ ಸಂದೇಶ ತಲುಪಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಮಗಳಿಗೆ ಮುದ್ದಾದ ಹೆಸರಿಟ್ಟ ಪ್ರಣಿತಾ ಸುಭಾಷ್

    ನಿರ್ದೇಶಕ ವಿಜಯ್ ‍ಪ್ರಸಾದ್ ಈ ರೀತಿಯಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಂತೆಯೇ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. ಸಿನಿಮಾಗಳು ಸೋತರೂ, ನೂರಾರು ಕೋಟಿ ದುಡ್ಡು ಬಂದಿದೆ ಎಂದು ಹೇಳುವ, ತಮ್ಮ ಸಿನಿಮಾ ಸೂಪರ್ ಹಿಟ್ ಆಗಿದೆ ಎಂದು ಬೊಗಳೆ ಬಿಡುವ ನಿರ್ದೇಶಕರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ದಿನಮಾನದಲ್ಲಿ, ತಮ್ಮ ಸಿನಿಮಾ ತಲುಪಿಲ್ಲ ಎಂದು ಪ್ರಮಾಣಿಕವಾಗಿ ಒಪ್ಪಿಕೊಂಡ ನಿರ್ದೇಶಕರ ನಡೆಯನ್ನು ಬಹುತೇಕರ ಮೆಚ್ಚಿದ್ದಾರೆ. ಮುಂದಿನ ಸಿನಿಮಾ ಚೆನ್ನಾಗಿ ಆಗಲಿ ಎಂದೂ ಹಾರೈಸಿದ್ದಾರೆ.

    ಇಂದಿನಿಂದ ನಿರ್ದೇಶಕರು ಅವರ ಮತ್ತೊಂದು ಸಿನಿಮಾ ತೋತಾಪುರಿ ಕೆಲಸದಲ್ಲಿ ತೊಡಗಿಕೊಂಡಿದ್ದಾರಂತೆ. ಅದನ್ನೂ ಅವರು ಪೋಸ್ಟ್ ಮಾಡಿದ್ದಾರೆ. ತೋತಾಪುರಿ ಸಿನಿಮಾ ವಿಜಯ್ ಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್ ನ ಎರಡನೇ ಸಿನಿಮಾ. ಇದು ಎರಡು ಭಾಗಗಳಲ್ಲಿ ಮೂಡಿ ಬಂದಿದೆ. ರಿಲೀಸ್ ಆಗಿರುವ ಟ್ರೈಲರ್ ಭರವಸೆ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಈ ವರ್ಷ ಯಾರೆಲ್ಲ ನಟರು ನಿರ್ದೇಶನ ಮಾಡಲಿದ್ದಾರೆ ಗೊತ್ತಾ?

    ಈ ವರ್ಷ ಯಾರೆಲ್ಲ ನಟರು ನಿರ್ದೇಶನ ಮಾಡಲಿದ್ದಾರೆ ಗೊತ್ತಾ?

    ಟನೆಯಲ್ಲಿ ಸದ್ಯ ಬ್ಯುಸಿಯಾಗಿರುವ ಹಲವು ನಟರು ಮುಂದಿನ ದಿನಗಳಲ್ಲಿ ನಿರ್ದೇಶನಕ್ಕೂ ಮುಂದಾಗಲಿದ್ದಾರೆ. ಹಾಗಾಗಿ ಅಂದುಕೊಂಡಂತೆ ಆದರೆ, ಈ ವರ್ಷದಲ್ಲಿ ನಿರ್ದೇಶಕರ ಜತೆ ನಟ ಕಂ ನಿರ್ದೇಶಕರ ಪೈಪೋಟಿ ಶುರುವಾಗಲಿದೆ. ಈ ವರ್ಷದಲ್ಲಿ ಯಾರೆಲ್ಲ ನಟರು ನಿರ್ದೇಶನ ಮಾಡಲಿದ್ದಾರೆ ಎನ್ನುವುದಕ್ಕೆ ಇಲ್ಲಿದೆ ಉತ್ತರ. ಇದನ್ನೂ ಓದಿ : ಕರ್ನಾಟಕದಲ್ಲಿ ಹಿಜಬ್ ವಿವಾದ ಬೆನ್ನಲ್ಲೇ ಸ್ವರಾ ಭಾಸ್ಕರ್ ಟ್ರೋಲ್

    ಸಲ್ಮಾನ್ ಖಾನ್ ಗೆ ಕಿಚ್ಚ ಡೈರೆಕ್ಷನ್
    ಕಿಚ್ಚ ಸುದೀಪ್ ಮತ್ತೆ ನಿರ್ದೇಶನಕ್ಕೆ ಮುಂದಾಗಲಿದ್ದಾರೆ ಎನ್ನುವ ಸುದ್ದಿ ಗಾಂಧಿ ನಗರದಲ್ಲಿ ಕೆಲ ತಿಂಗಳಿಂದ ಹರಿದಾಡುತ್ತಲೇ ಇದೆ. ಈಗ ಅದು ನಿಕ್ಕಿ ಆದಂತೆ ಕಾಣುತ್ತಿದೆ. ಕಿಚ್ಚನ ಅಡ್ಡದಿಂದ ಬಂದ ಮಾಹಿತಿಯ ಪ್ರಕಾರ, ಈ ಬಾರಿ ಅವರು ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ಅವರ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಸಲ್ಮಾನ್ ಜತೆ ಒಂದು ಸುತ್ತಿನ ಮಾತುಕಥೆ ಕೂಡ ನಡೆದಿದೆ. ಮೊದಲ ಹಂತದ ಕಥೆಯನ್ನು ಸಲ್ಮಾನ್ ಕೂಡ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹಿಂದಿಯಲ್ಲಿ ಸಲ್ಮಾನ್ ನಟಿಸಿದರೆ, ದಕ್ಷಿಣದ ಉಳಿದ ಭಾಷೆಗಳಲ್ಲಿ ಸ್ವತಃ ಕಿಚ್ಚ ಅವರೇ ಅಭಿನಯಿಸಲಿದ್ದಾರೆ.  ಇದನ್ನು ಓದಿ : ಈ ವಾರ 10 ಚಿತ್ರಗಳು ರಿಲೀಸ್ : ಯಾವುದು ನೋಡ್ಬೇಕು, ಯಾವುದು ಬಿಡ್ಬೇಕು?

    ಎರಡನೇ ಚಿತ್ರಕ್ಕೆ ದುನಿಯಾ ವಿಜಯ್ ಸಿದ್ಧತೆ
    ಸಲಗದ ಯಶಸ್ಸಿನ ಗುಂಗಿನಲ್ಲಿರುವ ದುನಿಯಾ ವಿಜಯ್ ಸದ್ಯ ತೆಲುಗು ಸಿನಿಮಾ ರಂಗಕ್ಕೆ ಹಾರಿದ್ದಾರೆ. ಬಾಲಯ್ಯ ಅವರ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಈ ನಡುವೆಯೇ ದುನಿಯಾ ವಿಜಯ್, ತಮ್ಮ ನಿರ್ದೇಶನದ ಎರಡನೇ ಸಿನಿಮಾದ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿಯೂ ಅವರು ಮಾಸ್ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದು, ಶಿವರಾತ್ರಿ ಹೊತ್ತಿಗೆ ಚಿತ್ರಕ್ಕೆ ಚಾಲನೆ ಸಿಗಲಿದೆ.   ಇದನ್ನೂ ಓದಿ : ರಮ್ಯಾಗಾಗಿ ಕಾದ ದಿಲ್ ಕಾ ರಾಜಾ

    ನಟನೆಯ ಜತೆಗೆ ನಿರ್ದೇಶನ ಎಂದ ರಕ್ಷಿತ್ ಶೆಟ್ಟಿ
    ಸದ್ಯ ಚಾರ್ಲಿ 777 ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡಿರುವ ರಕ್ಷಿತ್ ಶೆಟ್ಟಿ, ಇದೇ ವರ್ಷ ‘ರಿಚರ್ಡ್ ಆಂಟನಿ’ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ನಿರ್ದೇಶನದ ಜತೆ ಜತೆಗ ಈ ಸಿನಿಮಾದಲ್ಲಿ ಅವರು ನಾಯಕನಾಗಿಯೂ ಕಾಣಿಸಿಕೊಳ್ಳಲಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಈಗಾಗಲೇ ಕಥೆ ಬರೆಯುವುದರಲ್ಲಿ ಚಿತ್ರತಂಡ ತೊಡಗಿದೆ. ‘ಉಳಿದವರು ಕಂಡಂತೆ’ ಸಿನಿಮಾದ ಮುಂದುವರೆದ ಕಥೆಯಿದಾಗಿದ್ದು, ಈ ವರ್ಷದಲ್ಲೇ ಸಿನಿಮಾ ಬರಲಿದೆಯಂತೆ. ಇದನ್ನೂ ಓದಿ :ಗೆಳೆಯನ ಸಿನಿಮಾದಲ್ಲಿ ಕೊತ್ವಾಲ್ ಆದ ವಸಿಷ್ಠ ಸಿಂಹ

    ಮೈ ನೇಮ್ ಇಸ್ ಸಿದ್ದೇಗೌಡನಿಗೆ ಸತೀಶ್ ನೀನಾಸಂ ಆ್ಯಕ್ಷನ್ ಕಟ್
    ಮ್ಯಾಟ್ನಿ, ಪೆಟ್ರೋಮ್ಯಾಕ್ಸ್, ದಸರಾ ಸೇರಿದಂತೆ ಹಲವು ಚಿತ್ರಗಳ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸತೀಶ್ ನೀನಾಸಂ ಎರಡು ವರ್ಷಗಳ ಹಿಂದೆಯೇ “ಮೈ ನೇಮ್ ಇಸ್ ಸಿದ್ಧೇಗೌಡ’ ಸಿನಿಮಾ ಅನೌನ್ಸ್ ಮಾಡಿದ್ದರು. ಈ ಸಿನಿಮಾದ ಟೈಟಲ್ ಕೂಡ ಲಾಂಚ್ ಆಗಿದೆ. ಇದನ್ನೂ ಓದಿ : ರಮ್ಯಾಗಾಗಿ ಕಾದ ದಿಲ್ ಕಾ ರಾಜಾ

    ಈ ವರ್ಷಕ್ಕೆ ನಟಿಸಬೇಕಾದ ಚಿತ್ರಗಳು ಮುಗಿದರೆ, ಮೈ ನೇಮ್ ಇಸ್ ಸಿದ್ಧೇಗೌಡ ಚಿತ್ರಕ್ಕೆ ಸತೀಶ್ ನಿರ್ದೇಶನ ಮಾಡಲಿದ್ದಾರೆ. ನಿರ್ದೇಶನದ ಜತೆ ಜತೆಗೆ ನಟನೆಯನ್ನೂ ಮಾಡಲಿದ್ದಾರೆ.

  • ಸಂಚಾರಿ ವಿಜಯ್ ಔಟ್ ಆಫ್ ಡೇಂಜರ್: ನೀನಾಸಂ ಸತೀಶ್

    ಸಂಚಾರಿ ವಿಜಯ್ ಔಟ್ ಆಫ್ ಡೇಂಜರ್: ನೀನಾಸಂ ಸತೀಶ್

    – ಇನ್ನೂ ಪ್ರಜ್ಞೆ ಬಂದಿಲ್ಲ, 24 ಗಂಟೆ ಅಬ್ಸರ್ವೇಶನ್‍ನಲ್ಲಿಟ್ಟಿದ್ದಾರೆ
    – ಕಳೆದ ಹಲವು ದಿನಗಳಿಂದ ಫುಡ್ ಕಿಟ್ ಹಂಚುತ್ತಿದ್ದರು

    ಬೆಂಗಳೂರು: ನಟ ಸಂಚಾರಿ ವಿಜಯ್ ಅವರನ್ನು 24 ಗಂಟೆಗಳ ಕಾಲ ಅಬ್ಸರ್ವೇಶನ್‍ನಲ್ಲಿಟ್ಟಿದ್ದಾರೆ, ಇನ್ನೂ ಪ್ರಜ್ಞೆ ಬಂದಿಲ್ಲ. ಆದರೆ ಔಟ್ ಆಫ್ ಡೇಂಜರ್ ಎಂದು ವೈದ್ಯರು ಹೇಳಿರುವುದಾಗಿ ನಟ ನೀನಾಸಂ ಸತೀಶ್ ಮಾಹಿತಿ ನೀಡಿದರು.

    ಆಸ್ಪತ್ರೆಗೆ ಭೇಟಿ ನೀಡಿ ಸಂಚಾರಿ ವಿಜಯ್ ಅವರನ್ನು ನೊಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಂಚಾರಿ ವಿಜಯ್ ಅವರ ಪಲ್ಸ್ ರೇಟ್, ಬಿಪಿ ಎಲ್ಲ ನಾರ್ಮಲ್ ಇದೆ. ಆಪರೇಷನ್ ಮಾಡುವಾಗ ಅರವಳಿಕೆ ನೀಡಿರುವುದರಿಂದ ಪ್ರಜ್ಞೆ ಇನ್ನೂ ಬಂದಿಲ್ಲ. ವೈದ್ಯರು 24 ಗಂಟೆಗಳ ಕಾಲ ಅಬ್ಸರ್ವೇಶನ್‍ನಲ್ಲಿ ಇಟ್ಟಿದ್ದಾರೆ. ಆದರೆ ಪ್ರಜ್ಞೆ ಬರುತ್ತದೆ, ಔಟ್ ಆಫ್ ಡೇಂಜರ್ ಎಂದು ವೈದ್ಯರು ಹೇಳಿದ್ದಾರೆ.

    ಸ್ವತಃ ನಾನೇ ಐಸಿಯು ಒಳಗಡೆ ಹೋಗಿದ್ದೆ, ಪಲ್ಸ್ ರೇಟ್, ಬಿಪಿ ನಾರ್ಮಲ್, ಜೀವಕ್ಕೆ ತೊಂದರೆ ಇಲ್ಲ. ಆದರೆ ಕೆಲವು ಕಡೆ ಜೀವಕ್ಕೆ ಅಪಾಯ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಆ ರೀತಿ ಇಲ್ಲ, ನಾನು ಮನ್ಸೂರೆ ಒಟ್ಟಿಗೆ ಹೋಗಿ ನೋಡಿ ಬಂದೆವು, ಆರಾಮಾಗಿದ್ದಾರೆ. ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಬೇಕಷ್ಟೆ. ಅವರ ಜೊತೆಗಿದ್ದ ನವೀನ್ ಅವರಿಗೂ ಏನೂ ತೊಂದರೆ ಇಲ್ಲ ಅರಾಮಾಗಿದ್ದಾರೆ. ನಾನು ಹಾಗೂ ಮನ್ಸೂರೆ ಒಟ್ಟಿಗೆ ವೈದ್ಯರ ಬಳಿ ಮಾತನಾಡಿದ್ದೇವೆ, ಮಾಹಿತಿ ಪಡೆದಿದ್ದೇವೆ. ಆಪರೇಷನ್ ಆಗಿದೆ, ಔಟ್ ಆಫ್ ಡೇಂಜರ್ ಎಂದು ಹೇಳಿದ್ದಾರೆ. 48 ಗಂಟೆಗಳಲ್ಲಿ ಸಂಚಾರಿ ವಿಜಯ್ ಮಾತನಾಡುತ್ತಾರೆ ಎಂಬ ಭರವಸೆಯನ್ನು ವೈದ್ಯರು ನೀಡಿದ್ದಾರೆ. ಇದನ್ನೂ ಓದಿ: ತಲೆಭಾಗಕ್ಕೆ ಬಲವಾದ ಪೆಟ್ಟು – ಸಂಚಾರಿ ವಿಜಯ್ ಬೈಕ್ ಅಪಘಾತವಾಗಿದ್ದೇಗೆ?

    ತುಂಬಾ ಒಳ್ಳೆಯ ಸ್ನೇಹಿತ, ಒಂದು ವಾರದಿಂದ ನನ್ನ ಜೊತೆಗೇ ಇದ್ದರು, ನಿನ್ನೆ ಮಾತ್ರ ನನ್ನ ಜೊತೆಗಿರಲಿಲ್ಲ. ನಾನು, ಅವರು ಹಾಗೂ ನಮ್ಮ ತಂಡದವರು ಸೇರಿಕೊಂಡು ಫುಡ್ ಕಿಟ್ ಹಂಚುತ್ತಿದ್ದೆವು. ಅವರೂ ಸಹ ಕಳೆದ ಎರಡು ತಿಂಗಳಿಂದ ಅವರ ‘ಉಸಿರು’ ತಂಡದಿಂದ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದರು. ಲಾಕ್‍ಡೌನ್ ವೇಳೆ ಸಹಾಯ ಮಾಡುತ್ತಿದ್ದರು, ಫುಡ್ ಕಿಟ್ ಹಂಚುತ್ತಿದ್ದರು. ಲಾಕ್‍ಡೌನ್ ಆದಾಗಿನಿಂದ ದಿನದ 24 ಗಂಟೆ ಸಹಾಯ ಮಾಡುವ ಕೆಲಸ ಮಾಡುತ್ತಿದ್ದರು. ಎಷ್ಟು ಜನಕ್ಕೆ ಸಹಾಯ ಮಾಡಿದ್ದಾರೆ ಲೆಕ್ಕವೇ ಇಲ್ಲ, ಅಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಬಳಿಕ ನಮ್ಮ ಜೊತೆಗೂ ಕೈ ಜೋಡಿಸಿದ ಎಂದು ವಿವರಿಸಿದರು.

    ಬಲಗಡೆ ತೊಡೆಗೆ ಏಟು ಬಿದ್ದಿದ್ದು, ಆಪರೇಷನ್ ಮಾಡಿದ್ದಾರೆ. ಅದರದ್ದೇನು ಸಮಸ್ಯೆ ಇಲ್ಲ, ಜೀವ ಭಯವಿಲ್ಲ, ಬೇಗ ಗುಣಮುಖರಾಗುತ್ತಾರೆ. ಆದರೆ ಅಪಘಾತ ಬಳಿಕ ಕೈ, ಕಾಲು ಮುರಿದಾಗ ಯಾವ ರೀತಿ ಸಮಸ್ಯೆ ಆಗುತ್ತದೋ ಅದು ಇದ್ದೇ ಇರುತ್ತೆ. ಒಳ್ಳೆಯ ವ್ಯಕ್ತಿ, ಅವರಿಗೆ ಕೆಟ್ಟದ್ದಾಗಲ್ಲ, ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಒಳ್ಳೆಯ ಸಿನಿಮಾ ಮಾಡಿದ್ದಾರೆ. ಸಮಾಜದ ಜೊತೆ ಯಾವಾಗಲೂ ಸ್ಪಂದಿಸಿದ್ದಾನೆ, ಹೀಗಾಗಿ ಏನೂ ಆಗುವುದಿಲ್ಲ ಎಂದು ಭರವಸೆ ವ್ಯಕ್ತಪಡಿಸಿದರು.

  • ಮಾರುವೇಷದಲ್ಲಿ ದಸರಾ ವೀಕ್ಷಿಸಿದ ಸ್ಯಾಂಡಲ್‍ವುಡ್ ಖ್ಯಾತ ನಟ

    ಮಾರುವೇಷದಲ್ಲಿ ದಸರಾ ವೀಕ್ಷಿಸಿದ ಸ್ಯಾಂಡಲ್‍ವುಡ್ ಖ್ಯಾತ ನಟ

    ಮೈಸೂರು: ಸ್ಟಾರ್ ನಟ ಎಂದರೆ ಸಾಮಾನ್ಯ ದಿನಗಳಲ್ಲೇ ಜನ ಮುಗಿ ಬೀಳುತ್ತಾರೆ. ಇನ್ನೂ ದಸರಾ ಸಂದರ್ಭದಲ್ಲಿ ಕೇಳ್ತೀರಾ ಇರುವೆ ತರ ಮುತ್ತಿಕೊಳ್ಳುತ್ತಾರೆ. ಇದರಿಂದಾಗಿಯೇ ಹಲವು ನಟ, ನಟಿಯರು ಮಾರುವೇಷದಲ್ಲಿ ಸುತ್ತಾಡುತ್ತಾರೆ. ಅದೇ ರೀತಿ ದಸರಾ ನೋಡಲು ನಟ ನೀನಾಸಂ ಸತೀಶ್ ಮಾರುವೇಷದಲ್ಲಿ ಮೈಸೂರು ಸುತ್ತಿದ್ದಾರೆ.

    ಹೌದು ಮೈಸೂರು ದಸರಾ ನೋಡುವ ಆಸೆ ಯಾರಿಗಿರಲ್ಲ ಹೇಳಿ, ಅದರೆ ಜನಪ್ರಿಯ ನಟರು ಜನಸಾಮಾನ್ಯರಂತೆ ಜಾಲಿಯಾಗಿ ನಿಂತು ದಸರಾ ವೀಕ್ಷಿಸಲು ಸಾಧ್ಯವಿಲ್ಲ. ಹೀಗೆ ಮಾಡಿದರೆ ಅಭಿಮಾನಿಗಳು ಅವರನ್ನು ನೋಡಲು ಮುಗಿ ಬೀಳುತ್ತಾರೆ. ಇದಕ್ಕಾಗಿ ನಟ ನಿನಾಸಂ ಸತೀಶ್ ಭರ್ಜರಿ ಪ್ಲಾನ್ ಮಾಡಿ ಫುಲ್ ಪ್ಯಾಕಪ್ ಆಗಿ ದಸರಾ ವೀಕ್ಷಿಸಿದ್ದಾರೆ. ಅಲ್ಲದೆ ತಮ್ಮ ಸ್ನೇಹಿತರೊಂದಿಗೆ ಸಖತ್ ಎಂಜಾಯ್ ಮಾಡಿದ್ದಾರೆ.

    ದಸರಾ ಸಂದರ್ಭದಲ್ಲಿ ತಾವು ಮೈಸೂರಿನಲ್ಲಿ ಕಳೆದ ದಿನಗಳ ಕುರಿತು ನಿನಾಸಂ ಸತೀಶ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಪೆಟ್ರೊಮ್ಯಾಕ್ಸ್ ಸಿನಿಮಾದ ಶೂಟಿಂಗ್‍ಗಾಗಿ ನಿನಾಸಂ ಸತೀಶ್ ಮೈಸೂರಿನಲ್ಲಿಯೇ ಬೀಡು ಬಿಟ್ಟಿದ್ದು, ಇದೇ ವೇಳೆ ದಸರಾ ಸಹ ಆಗಮಿಸಿದೆ. ಹೀಗಾಗಿ ದಸರಾ ಸಮಯವನ್ನೂ ಎಂಜಾಯ್ ಮಾಡುತ್ತಿದ್ದಾರೆ. ಹಗಲೆಲ್ಲ ಸಿನಿಮಾ ಶೂಟಿಂಗ್ ನಡೆಸಿದರೆ, ರಾತ್ರಿ ವೇಳೆ ತಮ್ಮ ಸ್ನೇಹಿತರೊಂದಿಗೆ ದಸರಾ ವೀಕ್ಷಿಸಿದ್ದಾರೆ. ಅರಮನೆ ಸೇರಿದಂತೆ ಮೈಸೂರಿನ ವಿವಿಧ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡಿ, ಆನಂದಿಸಿದ್ದಾರೆ.

    ಈ ಕುರಿತು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರು, ಮೊದಲು ವಿಡಿಯೋ ಪೋಸ್ಟ್ ಮಾಡಿ, ವಿಜಯದಶಮಿಯ ಶುಭಾಶಯಗಳು ಎಂದು ಬರೆದು ಮೈಸೂರಿನ ಲೈಟಿಂಗ್ ಸೊಬಗನ್ನು ತೋರಿಸಿದ್ದಾರೆ. ಅಲ್ಲದೆ ಸ್ನೇಹಿತರೊಂದಿಗೆ ನಡೆದು ಬಹುತೇಕ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡಿರುವುದನ್ನು ಸೆರೆ ಹಿಡಿದಿದ್ದಾರೆ. ಇಷ್ಟೆಲ್ಲ ಸುತ್ತಾಡಿದರೂ ಯಾರಿಗೂ ಸುಳಿವು ಸಿಕ್ಕಿಲ್ಲ. ಅಲ್ಲದೆ ಅವರ ಅಭಿಮಾನಿಗಳು ಕಮೆಂಟ್ ಮಾಡಿ ಆಶ್ಚರ್ಯ ವ್ಯಕ್ತಪಡಿಸಿದ್ದು, ನಮ್ಮ ಮೈಸೂರಿಗೆ ಬಂದಿದ್ದಿರಾ? ಗೊತ್ತೇ ಆಗಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

     

    View this post on Instagram

     

    #mysurudasara2020

    A post shared by My Name Is S…. (@sathish_ninasam_official) on

    ಮತ್ತೊಂದು ಪೋಸ್ಟ್ ನಲ್ಲಿ ಮೈಸೂರಿನ ಪ್ರಸಿದ್ಧ ಜಯಚಾಮರಾಜೇಂದ್ರ ವೃತ್ತದ ಬಳಿ ನಿಂತಿರುವ ಫೋಟೋ ಹಾಕಿ ಸಾಲುಗಳನ್ನು ಬರೆದಿರುವ ಅವರು, ಇಂದು ನನ್ನ ವೃತ್ತಿ ಜೀವನದಲ್ಲಿ ಮರೆಯಲಾಗದ ದಿನ. ನನ್ನ ಮೂರು ಚಿತ್ರಗಳ ಚಿತ್ರೀಕರಣ ಒಂದೇ ದಿನದಲ್ಲಿ ನಡೆಯುತ್ತಿದೆ. ‘ಮ್ಯಾಟ್ನಿ’ ಮತ್ತು ‘ದಸರಾ’ ನಾನಿಲ್ಲದ ದೃಶ್ಯಗಳನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸುತ್ತಿದ್ದರೆ ಮೈಸೂರಿನಲ್ಲಿ ‘ಪೆಟ್ರೊಮ್ಯಾಕ್ಸ್’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ಸೌಭಾಗ್ಯ ದೊರಕಲು ಇಷ್ಟು ವರ್ಷದ ನಿಮ್ಮ ಪ್ರೀತಿ ಕಾರಣ. ದಸರಾ ಹಬ್ಬದ ಶುಭಾಶಯಗಳು. ಲವ್ ಯೂ ಆಲ್… ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    ಇಂದು ನನ್ನ ವೃತ್ತಿ ಜೀವನದಲ್ಲಿ ಮರೆಯಲಾಗದ ದಿನ. ನನ್ನ ಮೂರು ಚಿತ್ರಗಳ, ಚಿತ್ರೀಕರಣ ಒಂದೇ ದಿನದಲ್ಲಿ ನಡೆಯುತ್ತಿದೆ. “ಮ್ಯಾಟ್ನಿ” ಮತ್ತು “ದಸರಾ” ನಾನಿಲ್ಲದ ದೃಶ್ಯಗಳನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸುತ್ತಿದ್ದರೇ, ಮೈಸೂರಿನಲ್ಲಿ “ಪೆಟ್ರೊಮ್ಯಾಕ್ಸ್” ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ಸೌಭಾಗ್ಯ ದೊರಕಲು ಇಷ್ಟು ವರ್ಷದ ನಿಮ್ಮ ಪ್ರೀತಿ ಕಾರಣ. ದಸರಾ ಹಬ್ಬದ ಶುಭಾಶಯಗಳು. ಲವ್ ಯೂ ಆಲ್… #sathishninasam @sharmielamandre #petromax @arvind_sastry

    A post shared by My Name Is S…. (@sathish_ninasam_official) on

    ಸದ್ಯ ನಿನಾಸಂ ಸತೀಶ್ ಕೈಯ್ಯಲ್ಲಿ ಒಟ್ಟು 7 ಸಿನಿಮಾಗಳಿದ್ದು, ಇದರಲ್ಲಿ ಮೂರು ಸಿನಿಮಾಗಳ ಚಿತ್ರೀಕರಣ ಪ್ರಗತಿಯಲ್ಲಿದೆ. ಮ್ಯಾಟ್ನಿ, ದಸರಾ ಹಾಗೂ ಪೆಟ್ರೊಮ್ಯಾಕ್ಸ್ ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ತಮಿಳಿನ ಪಗೈವನುಕು ಅರುಳ್ವೈ ಸೇರಿ ಕನ್ನಡದ ಮೈ ನೇಮ್ ಇಸ್ ಸಿದ್ದೇಗೌಡ, ಪರಿಮಳ ಲಾಡ್ಜ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಸತೀಶ್ ಸಖತ್ ಬ್ಯುಸಿಯಾಗಿದ್ದಾರೆ.

  • ಬ್ರಹ್ಮಚಾರಿ ಬಳಿಕ ಮತ್ತೆ ಒಂದಾಗುತ್ತಿದೆ ಅದಿತಿ-ಸತೀಶ್ ಜೋಡಿ

    ಬ್ರಹ್ಮಚಾರಿ ಬಳಿಕ ಮತ್ತೆ ಒಂದಾಗುತ್ತಿದೆ ಅದಿತಿ-ಸತೀಶ್ ಜೋಡಿ

    ಬೆಂಗಳೂರು: ಸಖತ್ ಸದ್ದು ಮಾಡಿದ್ದ ಬ್ರಹ್ಮಚಾರಿ ಸಿನಿಮಾ ಮೂಲಕ ಮೋಡಿ ಮಾಡಿದ್ದ ನಿನಾಸಂ ಸತೀಶ್ ಹಾಗೂ ಅದಿತಿ ಪ್ರಭುದೇವಾ ಜೋಡಿ ಇದೀಗ ಮತ್ತೊಮ್ಮೆ ಬೆಳ್ಳಿ ಪರದೆ ಮೇಲೆ ಮೋಡಿ ಮಾಡಲು ಮುಂದಾಗಿದೆ.

    ತಮ್ಮ ವಿಭಿನ್ನ ಸಿನಿಮಾಗಳ ಮೂಲಕವೇ ಗುರುತಿಸಿಕೊಂಡಿರುವ ನಿನಾಸಂ ಸತೀಶ್ ಕ್ವಾಟ್ಲೆ ಸತೀಶಾ, ಲವ್ ಇನ್ ಮಂಡ್ಯ, ಅಯೋಗ್ಯ ಸೇರಿದಂತೆ ಹತ್ತು ಹಲವು ವಿಭಿನ್ನ ಸಿನಿಮಾಗಳ ಮೂಲಕ ಪರಿಚಿತರಾಗಿದ್ದಾರೆ. ಅಲ್ಲದೆ ಗೋದ್ರಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಇದೀಗ ಬ್ಯುಸಿಯಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮತ್ತೊಮ್ಮೆ ಅದಿತಿ ಪ್ರಭುದೇವಾ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಬ್ರಹ್ಮಚಾರಿ ಸಿನಿಮಾ ಮೂಲಕ ಪಡ್ಡೆ ಹುಡುಗರ ಮನಸ್ಸು ಕದ್ದಿದ್ದ ಜೋಡಿ ಈ ಹೊಸ ಸಿನಿಮಾದಲ್ಲಿ ಯಾವ ರೀತಿ ಮೋಡಿ ಮಾಡಲಿದೆ ನೋಡಬೇಕಿದೆ.

    ಅಂದಾಗೆ ಹೊಸ ಸಿನಿಮಾಗೆ ‘ಪೆಟ್ರೋಮ್ಯಾಕ್ಸ್’ ಎಂದು ಹೆಸರಿಡಲಾಗಿದ್ದು, ವಿಜಯ ಪ್ರಸಾದ್ ಅವರು ನಿರ್ದೇಶಿಸುತ್ತಿದ್ದಾರೆ. ಅಕ್ಟೋಬರ್ ಎರಡನೇ ವಾರದಿಂದ ಶೂಟಿಂಗ್ ಆರಂಭವಾಗಲಿದೆ ಎಂದು ಹೇಳಲಾಗಿದೆ. ಮೈಸೂರಿನಲ್ಲಿ ಚಿತ್ರೀಕರಣ ನಡೆಸಲು ಸಿದ್ಧತೆ ನಡೆಸಲಾಗಿದೆ.

    ಈ ಕುರಿತು ಮಾಹಿತಿ ನೀಡಿರುವ ನಿರ್ದೇಶಕ ವಿಜಯ ಪ್ರಸಾದ್, ಈ ಸಿನಿಮಾವನ್ನು 2013ರಲ್ಲೇ ಆರಂಭಿಸಲು ಚಿಂತಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಇದೀಗ ನಿನಾಸಂ ಸತೀಶ್ ಹಲವು ವರ್ಷಗಳಿಂದ ವಿಭಿನ್ನ ಚಿತ್ರಗಳಲ್ಲಿ ನಟಿಸುವ ಮೂಲಕ ಬೆಳೆದು ನಿಂತಿದ್ದು, ಅವರಿಗೆ ತಕ್ಕಂತೆ ಸಿನಿಮಾ ಕಥೆಯನ್ನು ಮಾರ್ಪಾಡು ಮಾಡಲಾಗಿದೆ. ಚಿತ್ರದ ಟೈಟಲ್ ಹೊರತುಪಡಿಸಿ ಮೂಲ ಕಥೆಯಲ್ಲಿ ಉಳಿದೆಲ್ಲವನ್ನೂ ಬದಲಾಯಿಸಲಾಗಿದೆ. ಸತೀಶ್‍ಗೆ ಜೋಡಿಯಾಗಿ ಅದಿತಿ ಪ್ರಭುದೇವಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ನಾಲ್ವರು ಅನಾಥರ ಸುತ್ತ ಕಥೆ ಸುತ್ತುತ್ತದೆ. ಇದನ್ನು ಸತೀಶ್, ಅರುಣ್, ನಾಗಭೂಷಣ್ ಹಾಗೂ ಹೇಮಾ ದತ್ ಬರೆದಿದ್ದಾರೆ. ಪೆಟ್ರೋಮ್ಯಾಕ್ಸ್ ಬೆಳಕನ್ನು ಸೂಚಿಸುತ್ತದೆ. ಅದು ಈ ನಾಲ್ವರ ಜೀವನದಲ್ಲಿ ಅವಶ್ಯವಾಗಿದೆ. ಹೀಗಾಗಿ ಈ ಟೈಟಲ್ ಇಡಲಾಗಿದೆ. ನನ್ನ ಹಿಂದಿನ ಸಿನಿಮಾಗಳ ರೀತಿಯಲ್ಲೇ ಈ ಚಿತ್ರದಲ್ಲಿ ಸಹ ಭಾವನೆ, ಮಾನವೀಯ ಮೌಲ್ಯ, ಬುದ್ಧಿ, ಹಾಸ್ಯ ಹಾಗೂ ಸಾಮಾಜಿಕ ಅಂಶಗಳ ಮೇಲೆ ಕೇಂದ್ರಿಕೃತವಾಗಿದೆ ಎಂದು ಸಿನಿಮಾದ ಕಥೆ ಕುರಿತು ವಿವರಿಸಿದ್ದಾರೆ.

    ಸತೀಶ್ ಸಹ ತಮ್ಮ ಹೊಸ ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡಿದ್ದು, ಟಿವಿ ಸಿರಿಯಲ್‍ಗಳಲ್ಲಿ ವಿಜಯ ಅವರ ಜೊತೆ ಕೆಲಸ ಮಾಡಿದ್ದೇನೆ. ಅವರ ಬರವಣಿಗೆಯ ದೊಡ್ಡ ಫ್ಯಾನ್ ನಾನು. ಹೀಗಾಗಿ ಈ ಪ್ರಾಜೆಕ್ಟ್ ಒಪ್ಪಿಕೊಂಡೆ. ಈ ಸಿನಿಮಾ ಪ್ರೇಕ್ಷಕರನ್ನು ಒಂದು ಫನ್ ಲೋಕಕ್ಕೆ ಕೊಂಡೊಯ್ಯುತ್ತದೆ. ಇದರ ಜೊತೆಗೆ ಪ್ರತಿಯೊಬ್ಬರ ಜೀವನದಲ್ಲಿ ಸಂಬಂಧಗಳು ಹೇಗೆ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

    ಸಿನಿಮಾದಲ್ಲಿ ನಿನಾಸಂ ಸತೀಶ್ ಹಾಗೂ ಅದಿತಿ ಪ್ರಭುದೇವಾ ಅವರ ಕೆಮಿಸ್ಟ್ರಿ ಹೇಗೆ ಮೂಡಿ ಬರಲಿದೆ ಎಂಬುದು ಅಭಿಮಾನಿಗಳ ಕುತೂಹಲವಾಗಿದೆ. ಮತ್ತೊಮ್ಮೆ ಈ ಜೋಡಿ ಪ್ರೇಕ್ಷಕರನ್ನು ಹೇಗೆ ಸೆಳೆಯುತ್ತೆ ಕಾದು ನೋಡಬೇಕಿದೆ.