Tag: ninagaagi

  • ಕಿರುತೆರೆಗೆ ಎಂಟ್ರಿ ಕೊಟ್ಟ ಮಳೆ ಹುಡುಗಿ ಪೂಜಾ ಗಾಂಧಿ

    ಕಿರುತೆರೆಗೆ ಎಂಟ್ರಿ ಕೊಟ್ಟ ಮಳೆ ಹುಡುಗಿ ಪೂಜಾ ಗಾಂಧಿ

    ‘ಮುಂಗಾರು ಮಳೆ’ (Mungaru Male) ನಟಿ ಪೂಜಾ ಗಾಂಧಿ (Pooja Gandhi) ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಮತ್ತೆ ನಟನೆಗೆ ಮರಳಿದ್ದಾರೆ. ‘ನಿನಗಾಗಿ’ ಎನ್ನುತ್ತಾ ಪೂಜಾ ಗಾಂಧಿ ಟಿವಿ ಪರದೆಗೆ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:‘ನೈಸ್ ರೋಡ್’ನಲ್ಲಿ ಕಾಣಿಸಿಕೊಂಡ ಧರ್ಮ : ಟ್ರೈಲರ್ ರಿಲೀಸ್

    ಸಿನಿಮಾ ನಟಿಯ ಕಥೆ ಹೊಂದಿರುವ ‘ನಿನಗಾಗಿ’ ಸೀರಿಯಲ್‌ನಲ್ಲಿ ಸೂಪರ್ ಸ್ಟಾರ್ ರಚನಾ ಎಂಬ ಪಾತ್ರದಲ್ಲಿ ‘ಬಿಗ್ ಬಾಸ್’ ಖ್ಯಾತಿಯ ದಿವ್ಯಾ ಉರುಡುಗ (Divya Uruduga) ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಕಿಶನ್‌ ಬಿಳಗಲಿ ಕೂಡ ನಟಿಸುತ್ತಿದ್ದಾರೆ.  ಸಾಕಷ್ಟು ತಿರುವು ಪಡೆದು ಮುನ್ನುಗ್ಗುತ್ತಿರುವ ಈ ಸೀರಿಯಲ್‌ಗೆ ಪೂಜಾ ಗಾಂಧಿ ವಿಶೇಷ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ.

    ಸದ್ಯ ಪೂಜಾ ಗಾಂಧಿ ಜೊತೆಗಿನ ಸುಂದರ ಫೋಟೋಗಳನ್ನು ದಿವ್ಯಾ ಉರುಡುಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಮುದ್ದು ಕನ್ನಡತಿ’ ಎಂದು ದಿವ್ಯಾ ಕ್ಯಾಪ್ಷನ್ ನೀಡಿದ್ದಾರೆ. ಈ ಸೀರಿಯಲ್‌ನಲ್ಲಿ ನಟಿಸುತ್ತಿರುವ ಸಹಕಲಾವಿದರು ಕೂಡ ಫೋಟೋಗೆ ಪೋಸ್‌ ಕೊಟ್ಟಿದ್ದಾರೆ. ಈ ಪೋಸ್ಟ್‌ ನೋಡಿ ಬಳಿಕ ಎಪಿಸೋಡ್‌ ನೋಡಲು ಕಾತರದಿಂದ ಕಾಯ್ತಿದ್ದಾರೆ ಅಭಿಮಾನಿಗಳು.

    ಅಂದಹಾಗೆ, ಮುಂಗಾರು ಮಳೆ, ಮಿಲನಾ, ಕೃಷ್ಣ, ಅನು, ತಾಜ್‌ಮಹಲ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೂಜಾ ಗಾಂಧಿ ನಟಿಸಿದ್ದಾರೆ. ‘ಬಿಗ್‌ ಬಾಸ್‌ ಸೀಸನ್‌ 3’ರಲ್ಲಿ (Bigg Boss Kannada) ಪೂಜಾ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು.