ಕ್ರಾಂತಿ ಸಿನಿಮಾದ ಸ್ಪೆಷಲ್ ಸಾಂಗ್‍ನಲ್ಲಿ ಪುಷ್ಪವತಿ ಹೆಜ್ಜೆ ಹಾಕಿದ್ದರು. ಆ ವೇಳೆ ಸೆಟ್‍ನಲ್ಲಿ ನಟ ದರ್ಶನ್ (Darshan) ಅವರನ್ನು ಉಪಚರಿಸಿದ ರೀತಿ ಬಗ್ಗೆ ನಟಿ ನಿಮಿಕಾ ರತ್ನಾಕರ್ (Nimika Ratnakar) ಹೇಳಿಕೊಂಡಿದ್ದಾರೆ. ಸದ್ಯ ಫೀನಿಕ್ಸ್ ಸಿನಿಮಾದ (Phoenix Cinema) ಶೂಟಿಂಗ್‍ನಲ್ಲಿ ಭಾಗಿಯಾಗಿರುವ ನಿಮಿಕಾ ರತ್ನಾಕರ್, ಸಿನಿಮಾದಲ್ಲಿ ತಮ್ಮ ಪಾತ್ರ ಹಾಗೂ ಸಿನಿಮಾ ಶೂಟಿಂಗ್ ಎಕ್ಸ್‌ಪೀರಿಯನ್ಸ್ ಹಂಚಿಕೊಂಡಿದ್ದಾರೆ.
ಫೀನಿಕ್ಸ್ ಸಿನಿಮಾ ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಚಿತ್ರದ ಕೊನೆಯ ದಿನದ ಶೂಟಿಂಗ್‍ನ್ನ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಿಸಿದೆ ಚಿತ್ರತಂಡ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ನಿಮಿಕಾ ರತ್ನಾಕರ್ ದರ್ಶನ್ ಅವರ ಜೊತೆ ಕ್ರಾಂತಿ ಸಿನಿಮಾದ ಅನುಭವವನ್ನ ಹಂಚಿಕೊಂಡಿದ್ದಾರೆ. “ದರ್ಶನ್ ಸರ್ ಇರೋದಕ್ಕೂ, ಕೆಲವರು ಅವರನ್ನ ತೋರಿಸೋದಕ್ಕೂ ವ್ಯತ್ಯಾಸವಿದೆ. ಪ್ರತಿದಿನ ಅಮ್ಮ ತಿಂಡಿ ಆಯ್ತಾ, ಊಟ ಆಯ್ತಾ ಅಂತಾ ಕೇಳ್ತಿದ್ರು. ಅಮೇಝಿಂಗ್ ವ್ಯಕ್ತಿ ದರ್ಶನ್ ಸರ್” ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಂಜಯ್ ದತ್ ಕತ್ತಿಗೆ ರೇಜರ್ ಹಿಡಿದಿದ್ದ ಡಬಲ್ ಮರ್ಡರ್ ಅಪರಾಧಿ!
‘ಕ್ರಾಂತಿ’ ಚಿತ್ರದ ಶೇಕ್ ಇಟ್ ಪುಷ್ಪವತಿ ಹಾಡಿನ ಮೂಲಕವೇ ಭಾರೀ ಕ್ರೇಜ್ ಹುಟ್ಟು ಹಾಕಿದ್ದವರು ಮಂಗಳೂರು ಹುಡುಗಿ ನಿಮಿಕಾ ರತ್ನಾಕರ್. ಇದೊಂದು ಹಾಡಿನ ಮೂಲಕವೇ ಕರ್ನಾಟಕದ ಕ್ರಶ್ ಆಗಿ ಮಿಂಚಿದ್ದ ನಿಮಿಕಾ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ನಾಯಕಿಯಾಗಿ ಬ್ಯುಸಿಯಾಗಿದ್ದಾರೆ. ವಿಶೇಷವೆಂದರೆ, ಮಹಿಳಾ ಪ್ರಧಾನ ಸಿನಿಮಾ ಅವಕಾಶ ಕೂಡ ಅವರ ಪಾಲಿಗೆ ಒಲಿದು ಬಂದಿದೆ. ಹೀಗೆ ಒಂದಷ್ಟು ಸಿನಿಮಾಗಳು ಚಿತ್ರೀಕರಣದ ಅಂತಿಮ ಘಟ್ಟದಲ್ಲಿರುವಾಗಲೇ, ಅವರು ನಾಯಕಿಯಾಗಿ ನಟಿಸಿರುವ ಮತ್ತೊಂದು ಸಿನಿಮಾಗೆ ತಯಾರಿ ಆರಂಭವಾಗಿದೆ. ಆ ಚಿತ್ರಕ್ಕೆ ‘ವೈಲ್ಡ್ ಟೈಗರ್ ಸಫಾರಿ’ (Wild Tiger Safari) ಎಂಬ ಶೀರ್ಷಿಕೆ ನಿಕ್ಕಿಯಾಗಿದೆ. ಇದರ ಮುಹೂರ್ತ ಸಮಾರಂಭ ಮಾರ್ಚ್ 7ರಂದು ಮಂಗಳೂರಿನಲ್ಲಿ ಅದ್ಧೂರಿಯಾಗಿ ನೆರವೇರಲಿದೆ.
‘ವೈಲ್ಡ್ ಟೈಗರ್ ಸಫಾರಿ’ ಚಿತ್ರವನ್ನು ಚಂದ್ರಮೌಳಿ ನಿರ್ದೇಶನ ಮಾಡಲಿದ್ದಾರೆ. ಇವರು ಕೆಜಿಎಫ್ (KGF) ಸರಣಿಯ ರೈಟರ್ ಆಗಿ ಗಮನ ಸೆಳೆದಿದ್ದವರು. ಸದರಿ ಸಿನಿಮಾದ ಕಲಾ ನಿರ್ದೇಶನದ ಜವಾಬ್ದಾರಿಯನ್ನು ಶಿವಕುಮಾರ್ ನಿಭಾಯಿಸಲಿದ್ದಾರೆ. ಇವರೂ ಕೂಡ ಕೆಜಿಎಫ್ ಸರಣಿಯ ಕಲಾ ನಿರ್ದೇಶಕರಾಗಿದ್ದವರು. ಇನ್ನುಳಿದಂತೆ ಎ.ಜೆ ಶೆಟ್ಟಿ ಛಾಯಾಗ್ರಹಣ ಮಾಡಲಿದ್ದಾರೆ. ಈ ಸಿನಿಮಾದ ಮೂಲಕ ಶಿಥಿಲ್ ಪೂಜಾರಿ ನಾಯಕನಾಗಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಬಾಲಿವುಡ್‌ನಲ್ಲಿ ಹೆಸರುವಾಸಿಯಾಗಿರುವ ಡ್ಯಾನ್ಸರ್ ಧರ್ಮೇಶ್ ಹಾಗೂ ಸುಶಾಂತ್ ಪೂಜಾರಿ ಈ ಚಿತ್ರದಲ್ಲಿ ಬಹುಮುಖ್ಯವಾದ ಪಾತ್ರಗಳಲ್ಲಿ ನಟಿಸಲಿದ್ದಾರೆ. ನಿಮಿಕಾ ರತ್ನಾಕರ್ (Nimika Ratnakar) ಚೆಂದದ ಪಾತ್ರವೊಂದರ ಮೂಲಕ ನಾಯಕಿಯಾಗಿ ಸಾಥ್ ಕೊಡಲಿದ್ದಾರೆ. ಸದ್ಯದ ಮಟ್ಟಿಗೆ ಈ ಸಿನಿಮಾದ ಬಗ್ಗೆ ಇಷ್ಟು ಮಾಹಿತಿಗಳು ಜಾಹೀರಾಗಿವೆ.
ಒಟ್ಟಾರೆಯಾಗಿ, ಕೆಜಿಎಫ್ ಭಾಗವಾಗಿದ್ದ ಪ್ರತಿಭಾನ್ವಿತರ, ಕಟ್ಟುಮಸ್ತಾದ ತಂಡ ‘ವೈಲ್ಡ್ ಟೈಗರ್ ಸಫಾರಿ’ಯ ಹಿಂದಿರೋದು ಖಾತರಿಯಾಗಿದೆ. ಶೇಕ್ ಇಟ್ ಪುಷ್ಪವತಿ ಹಾಡಿನ ಪ್ರಭೆಯಲ್ಲಿಯೇ ಒಂದಷ್ಟು ಉತ್ತಮ ಅವಕಾಶಗಳು ನಿಮಿಕಾರನ್ನು ಅರಸಿ ಬರುತ್ತಿದೆ. ಅವರು ಈಗಾಗಲೇ ಓಂಪ್ರಕಾಶ್ ರಾವ್ ನಿರ್ದೇಶನದ ‘ತ್ರಿಶೂಲಂ’ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆ ನಾಯಕಿಯಾಗಿ ನಟಿಸಿದ್ದಾರೆ. ಅದರ ಚಿತ್ರೀಕರಣವೀಗ ಅಂತಿಮ ಹಂತದಲ್ಲಿದೆ. ಇದರ ಜೊತೆಗೆ ‘ಫ್ಲರ್ಟ್’ ಅಂತೊಂದು ಚಿತ್ರದಲ್ಲಿ ನಟಿಸಿರೋ ನಿಮಿಕಾರ ಪಾಲಿಗೆ ‘ಫೀನಿಕ್ಸ್’ ಎಂಬ ಚಿತ್ರದಲ್ಲಿಯೂ ನಾಯಕಿಯಾಗೋ ಅವಕಾಶ ಕೂಡಿ ಬಂದಿದೆ.
‘ಫೀನಿಕ್ಸ್’ ಚಿತ್ರವನ್ನು ಓಂಪ್ರಕಾಶ್ ರಾವ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಮಹಿಳಾ ಪ್ರಧಾನ ಕಥಾಹಂದರ ಇರುವ ಸಿನಿಮಾ ಆಗಿದೆ. ಇದರಲ್ಲಿ ನಿಮಿಕಾ ಎಲ್ಲರನ್ನೂ ಅಚ್ಚರಿಗೀಡು ಮಾಡುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಹೀಗೆ ಒಂದೇ ಸಲಕ್ಕೆ ಎರಡ್ಮೂರು ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ನಿಮಿಕಾ ಪಾಲಿಗೆ ‘ವೈಲ್ಡ್ ಟೈಗರ್ ಸಫಾರಿ’ ಮೂಲಕ ಮತ್ತೊಂದು ಸುವರ್ಣಾವಕಾಶ ಒಲಿದು ಬಂದಂತಿದೆ. ಈ ಸಿನಿಮಾದ ಮುಹೂರ್ತ ಸಮಾರಂಭ ನಾಳೆ ಮಂಗಳೂರಿನಲ್ಲಿ ನಡೆಯಲಿದೆ. ಈ ವೇಳೆ, ಚಿತ್ರದ ಬಗ್ಗೆ ಮತ್ತೊಂದಷ್ಟು ವಿಚಾರಗಳು ಜಾಹೀರಾಗಲಿವೆ.
ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಸ್ಮರಿಸಿಕೊಳ್ಳುವ ಈ ವರ್ಷದ ಹಂಪಿ ಉತ್ಸವಕ್ಕೆ (Hampi Utsav) ರಾಜ್ಯ ಸರ್ಕಾರ ಮುಹೂರ್ತ ನಿಗಧಿ ಮಾಡಿದೆ. ಇದೇ ತಿಂಗಳ 4ರಂದು ಮೂರು ದಿನಗಳ ಹಂಪಿ ಉತ್ಸವಕ್ಕೆ ಚಾಲನೆ ಸಿಗಲಿದೆ. ನಾನಾ ಪ್ರಕಾರಗಳ ಕಲಾ ಪ್ರದರ್ಶನ, ಥರ ಥರದ ಕಾರ್ಯಕ್ರಮಗಳು ಈ ಉತ್ಸವದ ಪ್ರಧಾನ ಆಕರ್ಷಣೆ. ಇಷ್ಟೂ ವರ್ಷಗಳಲ್ಲಿ ಕನ್ನಡ ಚಿತ್ರರಂಗದ ಅನೇಕ ನಟ ನಟಿಯರು ಈ ಉತ್ಸವದಲ್ಲಿ ಭಾಗಿಯಾಗಿ ಮೆರುಗು ನೀಡಿದ್ದಾರೆ. ಈ ಬಾರಿ ಅಂಥಾದ್ದೊಂದು ಸುವರ್ಣಾವಕಾಶ ಶೇಕ್ ಇಟ್ ಪುಷ್ಪವತಿ ಖ್ಯಾತಿಯ ನಿಮಿಕಾ ರತ್ನಾಕರ್ (Nimika Ratnakar) ಅವರಿಗೆ ಲಭಿಸಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಶೇಕ್ ಇಟ್ ಪುಷ್ಪವತಿ (Shake It Pushpavati) ಎಂಬ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಪ್ರಸಿದ್ಧಿ ಪಡೆದುಕೊಂಡಿರುವವರು ನಿಮಿಕಾ ರತ್ನಾಕರ್. ವಿಶೇಷವೆಂದರೆ, ಈ ಹಾಡೇ ಅವರನ್ನು ಹಂಪಿ ಉತ್ಸವದಲ್ಲಿ ಭಾಗಿಯಾಗಿ ನೃತ್ಯ ಪ್ರದರ್ಶನ ನೀಡುವ ಅವಕಾಶ ಕಲ್ಪಿಸಿದೆ. ಈಗಾಗಲೇ ಅದಕ್ಕೆ ಬೇಕಾದ ತಯಾರಿಗಳನ್ನು ಮಾಡಿಕೊಂಡಿರುವ ನಿಮಿಕಾ, ಆ ಕ್ಷಣಕ್ಕಾಗಿ ಕಾಯುತ್ತಿದ್ದಾರೆ.
ಹಂಪಿ ಎಂದರೇನೇ ಅದೇನೋ ಆಕರ್ಷಣೆ. ನಿಮಿಕಾ ರತ್ನಾಕರ್ ಪಾಲಿಗೂ ಅಂಥಾದ್ದೊಂದು ಸೆಳೆತವಿದೆಯಂತೆ. ಆದರೆ ಈ ವರೆಗೂ ಅಲ್ಲಿಗೆ ಭೇಟಿ ಕೊಡುವ ಅವಕಾಶ ಕೂಡಿ ಬಂದಿರಲಿಲ್ಲ. ಕೆಲ ಹಾಡುಗಳ ಮೂಲಕವಷ್ಟೇ ಹಂಪಿಯನ್ನು ಕಣ್ತುಂಬಿಕೊಂಡಿದ್ದ ತಮ್ಮ ಪಾಲಿಗೆ ಆ ಪರಿಸರದಲ್ಲಿ ಬೆರೆಯುವ ಅವಕಾಶ ಸಿಕ್ಕಿದ್ಚದು ಖುಷಿ ಕೊಟ್ಟಿದೆ ಎಂಬುದು ನಿಮಿಕಾ ಮನದ ಮಾತು. ಈ ಹಿಂದೆ ನಿಮಿಕಾ ದಸರಾ ಉತ್ಸವದಲ್ಲಿಯೂ ಭಾಗಿಯಾಗಿದ್ದರು. ಆ ಸಂದರ್ಭದಲ್ಲಿ ಅವರ ಪೋಷಕರು ಹಾಜರಿದ್ದು ಖುಷಿಗೊಂಡಿದ್ದರು. ಈ ಬಾರಿಯೂ ಪೋಷಕರೊಂದಿಗೆ ಹಂಪಿ ಉತ್ಸವದಲ್ಲಿ ಭಾಗಿಯಾಗೋ ಇಂಗಿತ ನಿಮಿಕಾರದ್ದು.
ಅಷ್ಟಕ್ಕೂ ಶೇಕ್ ಇಟ್ ಪುಷ್ಪವತಿ ಎಂಬ ಹಾಡು ನಿಮಿಕಾಗೆ ಒಂದಿಡೀ ಕರ್ನಾಟಕಕ್ಕೆ ಪ್ರದಕ್ಷಿಣೆ ಹಾಕುವ ಅವಕಾಶ ಕಲ್ಪಿಸುತ್ತಿದೆ. ಈಗಾಗಲೇ ಅವರು ರಾಜ್ಯದ ನಾನಾ ಪ್ರದೇಶಗಳಲ್ಲಿ ಈ ನೃತ್ಯ ಪ್ರದರ್ಶನ ನೀಡಿದ್ದಾರೆ. ಇದೀಗ ಹಂಪಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರೋದು ಅವರ ಪಾಲಿಗೆ ವಿಶೇಷ ಘಳಿಗೆ. ಯಾಕೆಂದರೆ, ಉತ್ತರ ಕರ್ನಾಟಕ ಮಂದಿಯ ಪ್ರೀತಿ, ಅಭಿಮಾನ ಪಡೆದುಕೊಂಡಿರುವ ಅವರಿಗೆ, ಅಭಿಮಾನಿಗಳ ಸಮ್ಮುಖದಲ್ಲಿ ನೃತ್ಯ ಪ್ರದರ್ಶನ ನೀಡುವ ಸುಯೋಗ ಕೂಡಿ ಬಂದಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಚಿತ್ರದ ಹಾಡೊಂದರ ಮೂಲಕ ವ್ಯಾಪಕ ಪ್ರಸಿದ್ಧಿ ಪಡೆದುಕೊಂಡಿರುವವರು ನಿಮಿಕಾ ರತ್ನಾಕರ್ (Nimika Ratnakar). ಬಣ್ಣದ ಜಗತ್ತಿನ ಭಾಗವಾಗಿದ್ದುಕೊಂಡು, ಸದಾ ಕ್ರಿಯಾಶೀಲವಾಗಿರುವ ನಿಮಿಕಾ ಇದೀಗ ಖ್ಯಾತ ಕ್ರಿಕೆಟ್ ಆಟಗಾರ ಪೃಥ್ವಿ ಶಾ (Prithvi Shah)ರನ್ನು ಭೇಟಿಯಾಗಿದ್ದಾರೆ. ಅದಕ್ಕೆ ಕಾರಣವಾಗಿರೋದು ಕ್ರಿಸ್ ಮಸ್ (Christmas) ಹಬ್ಬ.
ನಿಮಿಕಾ ರತ್ನಾಕರ್ ತಮ್ಮಿಬ್ಬರು ಸಹೋದರರೊಂದಿಗೆ ಕ್ರಿಕೆಟರ್ ಪೃಥ್ವಿ ಶಾರನ್ನು ಮುಂಬೈನಲ್ಲಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಪೃಥ್ವಿ ಜೊತೆಗೂಡಿ ಕ್ರಿಸ್ ಮಸ್ ಹಬ್ಬವನ್ನು ಸಂಭ್ರಮಿಸಿದ್ದಾರೆ.
ಮಾಡೆಲಿಂಗ್ ಕ್ರೇತ್ರದಲ್ಲಿ ಮಿಂಚುತ್ತಾ, ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ನೆಲೆ ಕಂಡುಕೊಂಡಿರುವವರು ನಿಮಿಕಾ ರತ್ನಾಕರ್. ಮಂಗಳೂರು ಮೂಲದ ನಿಮಿಕಾ ಸಿನಿಮಾದಾಚೆಗೂ ಒಂದಷ್ಟು ಸೆಲೆಬ್ರಿಟಿಗಳ ಸ್ನೇಹ ವಲಯದಲ್ಲಿ ಭಾಗಿಯಾಗಿದ್ದಾರೆ. ಅದರಲ್ಲೊಬ್ಬರಾಗಿರುವ ಪೃಥ್ವಿ ಶಾ ಜೊತೆಗಿನ ಕ್ರಿಸ್ ಮಸ್ ಆಚರಣೆ ನಿಮಿಕಾ ಖುಷಿಗೆ ಕಾರಣವಾಗಿದೆ.
ಶೇಕ್ ಇಟ್ ಪುಷ್ಪವತಿ ಹಾಡಿನ ಮೂಲಕ ಭಾರೀ ಕ್ರೇಜ್ ಮೂಡಿಸಿದ್ದ ನಿಮಿಕಾ ರತ್ನಾಕರ್ (Nimika Ratnakar) ನೋಡ ನೋಡುತ್ತಲೇ ಕರ್ನಾಟಕದ ಹೊಸಾ ಕ್ರಶ್ ಅನ್ನಿಸಿಕೊಂಡಿದ್ದೊಂದು ಅಚ್ಚರಿ. ಈ ಹಾಡಿನ ಪ್ರಭೆಯಲ್ಲಿಯೇ ನಿಮಿಕಾ ಇದೀಗ ಕನ್ನಡ ಚಿತ್ರಂಗದ ಭರವಸೆಯ ನಾಯಕಿಯಾಗಿ ಹೊರಹೊಮ್ಮಿದ್ದಾರೆ. ಎಂಥವರೂ ಅಚ್ಚರಿಗೊಳ್ಳುವಂತಹ ಅವಕಾಶಗಳೂ ಕೂಡಾ ನಿಮಿಕಾರನ್ನು ಅರಸಿ ಬರುತ್ತಿವೆ. ಸದ್ಯಕ್ಕೆ ಓಂ ಪ್ರಕಾಶ್ ರಾವ್ ನಿರ್ದಶನದ `ತ್ರಿಶೂಲಂ’ (Trishulam) ಚಿತ್ರದಲ್ಲಿ ಉಪೇಂದ್ರ (Upendra) ಅವರಿಗೆ ಜೋಡಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಹೀಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಸಂಚಲನ ಸೃಷ್ಟಿಸಿರುವ ನಿಮಿಕಾಗಿಂದು ಹುಟ್ಟುಹಬ್ಬದ ಸಂಭ್ರಮ.
ಒಂದೇ ಒಂದು ಚೆಂದದ ಅವಕಾಶ ಒಮ್ಮೊಮ್ಮೆ ಬದುಕಿನ ದಿಕ್ಕನ್ನೇ ಬದಲಿಸಿ ಬಿಡುತ್ತದೆ. ಮಂಗಳೂರು ಹುಡುಗಿ ನಿಮಿಕಾ ಪಾಲಿಗೆ ಅಂಥಾದ್ದೊಂದು ಅದೃಷ್ಟದ ಬಿಂದುವಿನಂತಿರೋದು ಕ್ರಾಂತಿ ಚಿತ್ರ. ಅದರಲ್ಲಿ ಶೇಕ್ ಇಟ್ ಪುಷ್ಪವತಿ ಹಾಡಿಗೆ ಕುಣಿದಿದ್ದ ನಿಮಿಕಾ, ಏಕಾಏಕಿ ಕರ್ನಾಟಕದ ಕ್ರಶ್ ಅನ್ನಿಸಿಕೊಂಡಿದ್ದರು. ಸೋಶಿಯಲ್ ಮೀಡಿಯಾಗಳಲ್ಲಂತೂ ಫ್ಯಾನ್ ಫಾಲೋವರ್ಸ್ ಸಂಖ್ಯೆ ಜ್ವರದಂತೆ ಏರಿಕೊಂಡಿತ್ತು. ಹಾಗೆ ಹುಟ್ಟಿಕೊಂಡ ಅಭಿಮಾನಿಗಳೆಲ್ಲ ನಿಮಿಕಾ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ತಂಡೋಪತಂಡವಾಗಿ ಮನೆಯ ಬಳಿಯೇ ಬಂದು ನಿಮಿಕಾರನ್ನು ಹತ್ತಿರದಿಂದ ಕಂಡು ಖುಷಿಗೊಳ್ಳುತ್ತಿದ್ದಾರೆ. ಓರ್ವ ನಟಿಯಾಗಿ ನಿಮಿಕಾ ಪಾಲಿಗಿದು ನಿಜಕ್ಕೂ ಸಂತಸದ ಸಂಗತಿ.
ಈ ಹುಟ್ಟುಹಬ್ಬ (birthday) ನಿಮಿಕಾರ ಬದುಕಿ ಮಟ್ಟಿಗೆ ಟರ್ನಿಂಗ್ ಪಾಯಿಂಟ್ ಆಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಯಾಕೆಂದರೆ, ರಿಯಲ್ ಸ್ಟಾರ್ ಉಪೇಂದ್ರ ಚಿತ್ರದಲ್ಲಿ ನಾಯಕಿಯಾಗಿ ನಟಿಸಬೇಕೆಂಬುದು ಬಹುತೇಕ ನಟಿಯರ ಮಹಾ ಕನಸು. ಒಂದಷ್ಟು ಹೆಜ್ಜೆಗಳಲ್ಲಿಯೇ ಅಂಥದ್ದೊಂದು ಅವಕಾಶ ನಿಮಿಕಾ ರನ್ನು ಅರಸಿ ಬಂದಿದೆ. ಹಾಗೆ ಸಿಕ್ಕ ಅವಕಾಶವನ್ನು ಶಕ್ತಿ ಮೀರಿ ಬಳಸಿಕೊಂಡು, ಆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ ಖುಷಿ ನಿಮಿಕಾಗಿದೆ. ಈ ಚಿತ್ರವನ್ನು ಓಂ ಪ್ರಕಾಶ್ ರಾವ್ ನಿರ್ದೇಶನ ಮಾಡಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್, ಸಾಧು ಕೋಕಿಲಾ ಮುಂತಾದ ಘಟಾನುಘಟಿಗಳ ಜೊತೆ ನಟಿಸೋ ಅವಕಾಶ, ಅವರ ಮಾರ್ಗದರ್ಶನದಲ್ಲಿ ತಿದ್ದಿಕೊಳ್ಳುವ ಸೌಭಾಗ್ಯಗಳೆಲ್ಲವೂ ನಿಮಿಕಾ ಪಾಲಿಗೆ ಲಭಿಸಿದೆ. ಇದನ್ನೂ ಓದಿ:ಕೆಟ್ಟ ಸಿನಿಮಾ ಬಗ್ಗೆ ಬಾಯ್ಬಿಟ್ಟ ತಮನ್ನಾ ನೇರ ಮಾತಿಗೆ ವಿಜಯ್ ಫ್ಯಾನ್ಸ್ ಕಿಡಿ
ಅದರಲ್ಲಿಯೂ ವಿಶೇಷವಾಗಿ ರವಿಚಂದ್ರನ್ ಅವರ ಸಿನಿಮಾಗಳನ್ನು ನೋಡುತ್ತಾ, ಅವರನ್ನು ಆರಾಧಿಸುತ್ತಾ ಬೆಳೆದು ಬಂದಿರುವರು ನಿಮಿಕಾ ರತ್ನಾಕರ್. ಈ ಚಿತ್ರದಲ್ಲಿ ಸಾಕ್ಷಾತ್ ರವಿಮಾಮಾ ಜತೆಗೇ ನಟಿಸುವ ಅವಕಾಶ ಸಿಕ್ಕಿದ್ದರಿಂದಾಗಿ ಸಹಜವಾಗಿಯೇ ನಿಮಿಕಾ ಥ್ರಿಲ್ ಆಗಿದ್ದಾರೆ. ಓಂಪ್ರಕಾಶ್ ರಾವ್, ಉಪೇಂದ್ರ, ಸಾಧು ಕೋಕಿಲಾ ಥರದ ನಿರ್ದೇಶಕರಿಂದ ಟಿಪ್ಸ್ ತೆಗೆದುಕೊಂಡು ನಟಿಯಾಗಿ ಪಳಗುವ ಅವಕಾಶ ಸಿಕ್ಕಿದ್ದರ ಬಗ್ಗೆ ನಿಮಿಕಾರಲ್ಲೊಂದು ಧನ್ಯತಾ ಭಾವವಿದೆ. ಈ ಚಿತ್ರದಲ್ಲಿ ಬಬ್ಲಿ ಶೇಡಿನ ಪಾತ್ರದಲ್ಲಿ ನಿಮಿಕಾ ನಟಿಸಿದ್ದಾರಂತೆ. ಅದಕ್ಕೊಂದಷ್ಟು ಎಮೋಷನಲ್ ಛಾಯೆಯೂ ಇದೆಯಂತೆ. ಒಟ್ಟಾರೆಯಾಗಿ ತ್ರಿಶೂಲಂ ಚಿತ್ರ ನಿಮಿಕಾ ವೃತಿ ಬದುಕಿಗೆ ಮತ್ತೊಂದಷ್ಟು ಆವೇಗ ತಂದು ಕೊಡುವ ಲಕ್ಷಣಗಳು ದಟ್ಟವಾಗಿವೆ.
ಮಂಗಳೂರು ಮೂಲದಿಂದ ಬಂದು ಕನ್ನಡ ಮಾತ್ರವಲ್ಲದೇ ಬಾಲಿವುಡ್ ಮಟ್ಟದಲ್ಲಿ ಹೆಸರು ಮಾಡಿರುವ ಅನೇಕ ನಟಿಯರಿದ್ದಾರೆ. ನಿಮಿಕಾರ ವೇಗ ನೋಡಿದರೆ, ಆ ಸಾಲಿನಲಿ ಸೇರ್ಪಡೆಗೊಳ್ಳುವ ಲಕ್ಷಣಗಳು ದಟ್ಟವಾಗಿವೆ ಮೂಲತಃ ಇಂಜಿನಿಯರ್ ಆಗಿರುವ ನಿಮಿಕಾ, ಕಲೆಯ ಕರೆಗೆ ಓಗೊಟ್ಟು ನಟಿಯಾದವರು. ಗಾಯನದ ಬಗ್ಗೆಯೂ ಅತೀವ ಆಸಕ್ತಿ ಇಟ್ಟುಕೊಂಡಿರುವ ನಿಮಿಕಾ ತುಳು ಚಿತ್ರವೊಂದಕ್ಕೆ ಹಾಡೊಂದಕ್ಕೆ ಧ್ವನಿಯಾಗಿದ್ದರು. ರಾಮಧಾನ್ಯ ಚಿತ್ರದ ಮೂಲಕ ನಟಿಯಾದ ಅವರು ಮಿಸ್ ಇಂಡಿಯಾ ಸೂಪರ್ ಟ್ಯಾಲೆಂಟ್ ವಿನ್ನರ್ ಕೂಡಾ ಹೌದು. ಹೀಗೆ ಸಾಗಿ ಬಂದಿರುವ ನಿಮಿಕಾ ಈಗ ಪುಷ್ಪವತಿ ಸಾಂಗಿನ ಫೇಮಿನಲ್ಲಿ ಫೇಮಸ್ ಆಗಿದ್ದಾರೆ. ಈ ಕ್ಷಣಕ್ಕೂ ಕರ್ನಾಟಕ ಕ್ರಶ್ ಸ್ಥಾನ ಕಾಯ್ದುಕೊಂಡಿರುವ ನಿಮಿಕಾರ ವೃತ್ತಿ ಬದುಕು, ತ್ರಿಶೂಲಂ ಮೂಲಕ ಮತ್ತಷ್ಟು ಮಿಂಚುವ ಸಾಧ್ಯತೆಗಳಿವೆ.
ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವವರು ನಿರ್ದೇಶಕ ಓಂಪ್ರಕಾಶ್ ರಾವ್ (Om Prakash Rao). ಇತ್ತೀಚೆಗೆ ಓಂಪ್ರಕಾಶ್ ರಾವ್ ನಿರ್ದೇಶನದ ಚಿತ್ರಗಳು ಯಾವುದು ಬಂದಿಲ್ಲ ಎಂಬ ನಿರಾಸೆ ಅವರ ಅಭಿಮಾನಿ ವಲಯದಲ್ಲಿತ್ತು.
ಪ್ರಸ್ತುತ ಅವರು ನಿರ್ದೇಶಿಸುತ್ತಿರುವ ‘ಫೀನಿಕ್ಸ್’ (Phoenix) ಎಂಬ ಚಿತ್ರದ ಚಿತ್ರೀಕರಣ ಆಗಸ್ಟ್ ನಲ್ಲಿ ಆರಂಭವಾಗಲಿದೆ. ಶ್ರೀಗುರು ಚಿತ್ರಾಲಯ ಲಾಂಛನದಲ್ಲಿ ತ್ರಿಶಾ ಪ್ರಕಾಶ್ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಫೀನಿಕ್ಸ್ ನನ್ನ ನಿರ್ದೇಶನದ 49 ನೇ ಚಿತ್ರ. ನಮ್ಮ ಸಂಸ್ಥೆಯ ನಿರ್ಮಾಣದ 4ನೇ ಚಿತ್ರ. ಇದೊಂದು ಮಹಿಳಾ ಪ್ರಾಧಾನ ಚಿತ್ರವಾಗಿದ್ದು, ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಕಮರ್ಷಿಯಲ್ ಚಿತ್ರವೊಂದಕ್ಕೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ನಿಮಿಕಾ ರತ್ನಾಕರ್ (Nimika Ratnakar),ಶಿಲ್ಪಾ ಶೆಟ್ಟಿ (Shilpa Shetty) ಹಾಗೂ ಕೃತಿಕಾ ಲೋಬೊ ಇದನ್ನೂ ಓದಿ:18 ವರ್ಷಗಳ ದಾಂಪತ್ಯಕ್ಕೆ ನಟ ಫರ್ದೀನ್ ಖಾನ್ ವಿದಾಯ?
ಮೂವರು ನಾಯಕಿಯರಾಗಿ, ಜಗದೀಶ್, ಭಾಸ್ಕರ್ ಶೆಟ್ಟಿ ಮತ್ತು ಪ್ರತಾಪ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಕಿನ್ನಿ ವಿನೋದ್ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪ್ರದೀಪ್ ರಾಹುತ್ ಮುಖ್ಯ ಖಳನಟನಾಗಿ ನಟುಸುತ್ತಿದ್ದಾರೆ. ಸ್ವಸ್ತಿಕ್ ಶಂಕರ್, ಅನಿಲ್ ಕುಮಾರ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಆಗಸ್ಟ್ ನಲ್ಲಿ ಚಿತ್ರೀಕರಣ ಶುರುವಾಗಲಿದ್ದು, ಬೆಂಗಳೂರು, ಜರ್ಮನ್ ಹಾಗೂ ಆಸ್ರೀಯಾದಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಓಂಪ್ರಕಾಶ್ ರಾವ್ ತಿಳಿಸಿದ್ದಾರೆ.
ಸುಬ್ರಹ್ಮಣಿ ಅವರು ಬರೆದಿರುವ ಕಥೆಗೆ ನಿರ್ದೇಶಕರೆ ಚಿತ್ರಕಥೆ ಬರೆದಿದ್ದಾರೆ. ಸಾಧುಕೋಕಿಲ ಸಂಗೀತ ನಿರ್ದೇಶನ, ರವಿಕುಮಾರ್ ಛಾಯಾಗ್ರಹಣ, ಲಕ್ಷ್ಮಣ್ ರೆಡ್ಡಿ ಸಂಕಲನ ಹಾಗೂ ವಿಜಯನ್ ಅವರ ಸಾಹಸ ನಿರ್ದೇಶನವಿರುವ ಈ ಫೀನಿಕ್ಸ್ ಚಿತ್ರಕ್ಕೆ ಎಂ.ಎಸ್ ರಮೇಶ್ ಸಂಭಾಷಣೆ ಬರೆಯುತ್ತಿದ್ದಾರೆ. ಇತ್ತೀಚಿಗೆ ಓಂಪ್ರಕಾಶ್ ರಾವ್ ಅವರ ಹುಟ್ಟುಹಬ್ಬದಂದು ಈ ಚಿತ್ರದ ಮೊದಲ ಪೋಸ್ಟರ್ ಸಹ ಬಿಡುಗಡೆಯಾಗಿದೆ.