Tag: nimhans hospital

  • ಇಬ್ಬರು ಯುವಕರಿಂದ ಅಂಗಾಂಗ ದಾನ – 6 ಜನರಿಗೆ ಮರುಜನ್ಮ!

    ಇಬ್ಬರು ಯುವಕರಿಂದ ಅಂಗಾಂಗ ದಾನ – 6 ಜನರಿಗೆ ಮರುಜನ್ಮ!

    ಬೆಂಗಳೂರು: ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದ ಇಬ್ಬರು ಯುವಕರ ಅಂಗಾಂಗಗಳನ್ನ ಪಡೆಯುವಲ್ಲಿ ನಿಮಾನ್ಸ್ ಆಸ್ಪತ್ರೆಯ (Nimhans Hospital) ಡಿಸಿಪ್ಲನರಿ ಟೀಂ, ಬ್ರೀಫ್ ಕೌನ್ಸಲರ್‌ಗಳು ಯಶಸ್ವಿಯಾಗಿದ್ದಾರೆ. ನಿಮಾನ್ಸ್ ಆಸ್ಪತ್ರೆಯ ಇತಿಹಾಸದಲ್ಲಿಯೇ ಏಕಕಾಲಕ್ಕೆ 2 ಕುಟುಂಬದವರನ್ನ ಮನವೊಲಿಸಿ, ಸಾವಿನಂಚಿನಲ್ಲಿದ್ದ ರೋಗಿಗಳಿಗೆ ಅಂಗಾಂಗಳನ್ನ ದಾನ (Organ donation) ಮಾಡುವ ಮೂಲಕ ನಿಮಾನ್ಸ್ ಆಸ್ಪತ್ರೆ ಆ ರೋಗಿಗಳಿಗೆ ಮರುಜನ್ಮ ನೀಡಿದೆ.

    ಕಳೆದ 15 ದಿನಗಳ ಹಿಂದೆ ಕಲಬುರಗಿ (Kalaburagi) ಜಿಲ್ಲೆಯ ಗೊಣಗಿ ಗ್ರಾಮದ 33 ವರ್ಷದ ಕೈಲಾಸ್ ಹಾಗೂ ಆಂಧ್ರಪ್ರದೇಶ ಕಡಪದ 27 ವರ್ಷದ ಸುರೇಂದ್ರ ನಿಮಾನ್ಸ್ ಆಸ್ಪತ್ರೆಗೆ ದಾಖಲಾಗಿದ್ರು. ಚಿಕಿತ್ಸೆ ಫಲಕಾರಿಯಾದೇ ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಸಿ.ಟಿ ರವಿಗೆ ಬೆಂಗಳೂರಿನಲ್ಲಿ ಅದ್ಧೂರಿ ಸ್ವಾಗತ – ಹೆಗಲ ಮೇಲೆ ಹೊತ್ತು ಕಾರ್ಯಕರ್ತರ ಸಂಭ್ರಮ

    ಈ ವೇಳೆ ಮೃತ ಯುವಕರ ಕುಟುಂಬಸ್ಥರನ್ನ ಸಂಪರ್ಕಿಸಿದ ಡಾ. ಕಣ್ಮಣಿ ತಂಡದ ಬ್ರೀಫ್ ಕೌನ್ಸಲರ್‌ಗಳು ಸತತ 27 ಬಾರಿ ಅವ್ರನ್ನ ಮನವೊಲಿಸಿ ಅಂಗಾಂಗ ದಾನಗಳನ್ನ ಮಾಡಲು ಒಪ್ಪಿಸಿದ್ದಾರೆ.

    ಕಣ್ಣು ಕಿಡ್ನಿ, ಹಾರ್ಟ್ ವಾಲ್ಸ್, ಲಿವರ್ ಅಂಗಾಂಗಗಳನ್ನ ದಾನ ಮಾಡಲು ಕುಟುಂಬಸ್ಥರೇ ಒಪ್ಪಿಕೊಂಡಿದ್ದಾರೆ. ಸಾವಿನಲ್ಲೂ ಸಾರ್ಥಕತೆ ಮೆರೆದು, ಇನ್ನೊಬ್ಬರ ಬದುಕಿಗೆ ಕುಟುಂಬಸ್ಥರು ನೆರವಾಗಿದ್ದಾರೆ.

    https://youtu.be/YlG_OlaLqTs?si=lSo-h5mJkp1GX1qv

    ಈ ವರ್ಷದಲ್ಲಿ ನಿಮಾನ್ಸ್ ಆಸ್ಪತ್ರೆಯಲ್ಲಿ 6 ಜನರ ಅಂಗಾಂಗಗಳನ್ನ ಪಡೆಯಲಾಗಿದ್ದು, ಅಂಗಾಂಗ ದಾನದ ಬಗ್ಗೆಯೂ ಜಾಗೃತಿ ಮೂಡಿಸ್ತಿದ್ದಾರೆ. ಇದನ್ನೂ ಓದಿ: ಜರ್ಮನಿಯ ಕ್ರಿಸ್ಮಸ್‌ ಮಾರುಕಟ್ಟೆಯಲ್ಲಿ ಕಾರು ದಾಳಿ – ಇಬ್ಬರು ಸಾವು, 60 ಮಂದಿಗೆ ಗಾಯ

  • ನಿಮ್ಹಾನ್ಸ್‌ ಮುಡಿಗೆ 2024 ರ ನೆಲ್ಸನ್ ಮಂಡೇಲಾ ಪ್ರಶಸ್ತಿ

    ನಿಮ್ಹಾನ್ಸ್‌ ಮುಡಿಗೆ 2024 ರ ನೆಲ್ಸನ್ ಮಂಡೇಲಾ ಪ್ರಶಸ್ತಿ

    ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ (WHO), ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ & ನ್ಯೂರೋ ಸೈನ್ಸಸ್ ( NIMHANS) ಗೆ 2024 ರ ನೆಲ್ಸನ್ ಮಂಡೇಲಾ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ನಿಮ್ಹಾನ್ಸ್ ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

    who

    ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯ ಪ್ರಚಾರಕ್ಕಾಗಿ ನೆಲ್ಸನ್ ಮಂಡೇಲಾ ಪ್ರಶಸ್ತಿಯನ್ನು 2019 ರಲ್ಲಿ ಸ್ಥಾಪಿಸಿದೆ. ಈ ಪ್ರಶಸ್ತಿಯನ್ನು ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸಾರ್ವಜನಿಕ ಆರೋಗ್ಯ ಮತ್ತು ವಿಶ್ವಾದ್ಯಂತ ಯೋಗಕ್ಷೇಮದ ಸುಧಾರಣೆಗೆ ಗಮನಾರ್ಹ ಕೊಡುಗೆ ನೀಡಿದ ಸರ್ಕಾರಿ ಅಥವಾ ಸರ್ಕಾರೇತರ ಸಂಸ್ಥೆಗಳಿಗೆ ನೀಡಲಾಗುತ್ತದೆ. ಅಂತೆಯೇ ಈ ಪ್ರಶಸ್ತಿಗೆ ನಿಮ್ಹಾನ್ಸ್‌ ಆಸ್ಪತ್ರೆಗೆ ಒಲಿದು ಬಂದಿದೆ.

    ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya) ಅವರು ಈ ಪ್ರಶಸ್ತಿಗೆ ಭಾಜನವಾದ ನಿಮ್ಹಾನ್ಸ್‌ ಅಭಿನಂದನೆಗಳನ್ನು ಸಲ್ಲಿಸಿದರು. ಕೇಂದ್ರ ಆರೋಗ್ಯ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು ಕೂಡ ನಿಮ್ಹಾನ್ಸ್ ಅನ್ನು ಅಭಿನಂದಿಸಿದರು. ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಭಾರತದ ಪ್ರಯತ್ನಗಳು ಮತ್ತು ಪ್ರವರ್ತಕ ಕೆಲಸವನ್ನು ಗುರುತಿಸಿದ್ದಕ್ಕಾಗಿ ಅವರು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಭವಾನಿ ರೇವಣ್ಣ ಜಾಮೀನು ಅರ್ಜಿ ವಜಾ – ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ

    ಪ್ರಶಸ್ತಿಯ ಕುರಿತು ನಿಮ್ಹಾನ್ಸ್ ನಿರ್ದೇಶಕಿ ಡಾ.ಪ್ರತಿಮಾ ಮೂರ್ತಿ ಪ್ರತಿಕ್ರಿಯಿಸಿ, ನಮ್ಮ ಸಾಂಸ್ಥಿಕ ಪ್ರಯಾಣದ ಈ ಹಂತದಲ್ಲಿ ಆರೋಗ್ಯ ಪ್ರಚಾರಕ್ಕಾಗಿ ಪ್ರತಿಷ್ಠಿತ ನೆಲ್ಸನ್ ಮಂಡೇಲಾ ಪ್ರಶಸ್ತಿಯನ್ನು ಸ್ವೀಕರಿಸಲು ನಾವು ಹೆಮ್ಮೆಪಡುತ್ತೇವೆ ಎಂದು ಖುಷಿ ಹಂಚಿಕೊಂಡರು. ಅಲ್ಲದೇ ಇದು ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವ ನಮ್ಮ ಧ್ಯೇಯವನ್ನು ಮುಂದುವರಿಸುವ ನಮ್ಮ ಸಂಕಲ್ಪವನ್ನು ಬಲಪಡಿಸುತ್ತದೆ ಎಂದು ಹೇಳಿದರು.

  • ನಿಮ್ಹಾನ್ಸ್ ಬಾಗಿಲು ತಟ್ಟಿದ ಕೊರೊನಾ- ಆಸ್ಪತ್ರೆಯ ಐಸಿಯು ಕಂಪ್ಲೀಟ್ ಕ್ಲೋಸ್

    ನಿಮ್ಹಾನ್ಸ್ ಬಾಗಿಲು ತಟ್ಟಿದ ಕೊರೊನಾ- ಆಸ್ಪತ್ರೆಯ ಐಸಿಯು ಕಂಪ್ಲೀಟ್ ಕ್ಲೋಸ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಿಲ್ಲರ್ ಕೊರೊನಾ ಅಟ್ಟಾಡಿಸ್ತಿದೆ. ಪರಿಸ್ಥಿತಿ ಬಿಗಡಾಯಿಸ್ತಿದ್ದು, ಗಲ್ಲಿ ಗಲ್ಲಿಗೂ ಈ ಹೆಮ್ಮಾರಿ ಸದ್ದಿಲ್ಲದೇ ಎಂಟ್ರಿಯಾಗ್ತಿದೆ. ನಿಮ್ಹಾನ್ಸ್ ಆಸ್ಪತ್ರೆಗೂ ಈ ಹೆಮ್ಮಾರಿ ಲಗ್ಗೆ ಇಟ್ಟಿದ್ದು, ಈ ವೈರಸ್ ನ ಆರ್ಭಟಕ್ಕೆ ಆಸ್ಪತ್ರೆಯ ಐಸಿಯು ವಾರ್ಡ್ ಕಂಪ್ಲೀಟ್ ಕ್ಲೋಸ್ ಆಗಿದೆ.

    ರಾಜ್ಯದಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿದೆ. ಕ್ಷಣ ಕ್ಷಣಕ್ಕೂ ಪರಿಸ್ಥಿತಿ ಕೈ ಮೀರಿ ಹೋಗ್ತಿದೆ. ತಜ್ಞರು ಹೇಳಿದಂತೆ ಮುಂದಿನ ಎರಡು ತಿಂಗಳಲ್ಲಿ ಯಾರು ಊಹಿಸಲಾಗದಷ್ಟು ಸೋಂಕಿನ ಪ್ರಮಾಣ ಸ್ಫೋಟವಾಗುತ್ತಾ ಅನ್ನೋ ನಡುಕ ಶುರುವಾಗಿದೆ. ಈ ಬೆನ್ನಲ್ಲೇ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೂ ಕೊರೊನಾ ಎಂಟ್ರಿ ಕೊಟ್ಟಿದ್ದು, ಹಲವು ಅವಾಂತರಗಳನ್ನ ಸೃಷ್ಟಿ ಮಾಡಿದೆ.

    ಡೆಡ್ಲಿ ಕೊರೊನಾ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಕದ ತಟ್ಟಿದೆ. ಆಸ್ಪತ್ರೆಯಲ್ಲಿಯೇ ಒಟ್ಟು 8 ಜನರಿಗೆ ಸೋಂಕು ತಗುಲಿದೆ. ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದ್ದು, ವೈದ್ಯರಲ್ಲಿ ಆತಂಕ ಹೆಚ್ಚಿದೆ. ಮಾನಸಿಕ ಅಸ್ವಸ್ಥರಿಗಿರುವ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಓರ್ವ ರೋಗಿಯ ದೇಹಕ್ಕೂ ವೈರಸ್ ವಕ್ಕರಿಸಿದೆ. ಈ ರೋಗಿಯ ಸಂಪರ್ಕದಲ್ಲಿದ್ದ ನಾಲ್ವರನ್ನು ಕೂಡಲೇ ಕ್ವಾರಂಟೈನ್ ಮಾಡಿದ್ದು, ಆಸ್ಪತ್ರೆಯ ಐಸಿಯು ವಾರ್ಡನ್ನು ಕಂಪ್ಲೀಟ್ ಕ್ಲೋಸ್ ಮಾಡಲಾಗಿದೆ. ಇದಕ್ಕೆ ಪರ್ಯಾಯವಾಗಿ ಐಸಿಯು ವಾರ್ಡ್ ನಲ್ಲಿದ್ದ 20 ರೋಗಿಗಳನ್ನ ಪಕ್ಕದ ಬಿಲ್ಡಿಂಗ್‍ಗೆ ಶಿಫ್ಟ್ ಮಾಡಿದ್ದು, ಎಂದಿನಂತೆ ಚಿಕಿತ್ಸೆ ನೀಡಲಾಗುತ್ತಿದೆ. ನ್ಯೂರೋ ಸರ್ಜರಿ ಹಾಗೂ ಸೈಕ್ಯಾಟ್ರಿಯ ತಲಾ ಒಬ್ಬ ರೋಗಿ ಹಾಗೂ ಆಸ್ಪತ್ರೆಯ 6 ಸ್ವಚ್ಛತಾ ಸಿಬ್ಬಂದಿ ಸೇರಿದಂತೆ ಒಟ್ಟು ನಿಮಾನ್ಸ್ ಆಸ್ಪತ್ರೆಯಲ್ಲಿ 8 ಮಂದಿಗೆ ಸೋಂಕು ಹರಡಿದೆ.

    ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಗಳಿಗೆ ಸ್ವಾಬ್ ಟೆಸ್ಟ್ ನಡೆಸಲಾಗುತ್ತಿದ್ದು, ಸೋಂಕಿನ ಚೈನ್ ಮುರಿಯಲು ನಿಮ್ಹಾನ್ಸ್ ಆಸ್ಪತ್ರೆಯ ಆಡಳಿತ ಮಂಡಳಿ ಇನ್ನಿಲ್ಲದ ಕಸರತ್ತನ್ನ ನಡೆಸುತ್ತಿದೆ. ಆಸ್ಪತ್ರೆಗೆ ಬರುವ ರೋಗಿಗಳ ಕಂಪ್ಲೀಟ್ ಮಾಹಿತಿಯನ್ನ ಟ್ರೇಸ್ ಮಾಡಿ ಚಿಕಿತ್ಸೆ ನೀಡಲು ನಿರ್ಧರಿಸಿದ್ದಾರೆ. ಐಸಿಯು ಶಿಫ್ಟ್ ಆದರೂ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಚಿಕಿತ್ಸೆ ನೀಡಲು ತಜ್ಞ ವೈದ್ಯರೇ ಫುಲ್ ಅಲರ್ಟ್ ಆಗಿದ್ದಾರೆ.

  • ನಮ್ಮ ಮೆಟ್ರೋ ನಿಲ್ದಾಣದಲ್ಲಿ ಮತ್ತೊಂದು ಅವಘಡ

    ನಮ್ಮ ಮೆಟ್ರೋ ನಿಲ್ದಾಣದಲ್ಲಿ ಮತ್ತೊಂದು ಅವಘಡ

    ಬೆಂಗಳೂರು: ನಮ್ಮ ಮೆಟ್ರೋ ರೈಲು ನಿಲ್ದಾಣದಲ್ಲಿ ಯುವಕನೊಬ್ಬ ಆತ್ಮಹತ್ಯೆ ಯತ್ನಿಸಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅವಘಡ ಸಂಭವಿಸಿದ್ದು, ಒಂದೂವರೆ ವರ್ಷದ ಮಗು ಎಸ್ಕಲೇಟರ್ ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶ್ರೀರಾಂಪುರ ಮೆಟ್ರೋ ನಿಲ್ದಾಣನದ ಬಳಿ ನಡೆದಿದೆ.

    ರೈಲ್ವೇ ನಿಲ್ದಾಣದ ಎಸ್ಕಲೇಟರ್ ಮೇಲೆ ಬರುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಒಂದೂವರೆ ವರ್ಷದ ಹಾಸಿನಿ ಎಂಬ ಮಗು ಗಂಭೀರವಾಗಿ ಗಾಯಗೊಂಡಿದೆ. ತಕ್ಷಣವೇ ಮಗುವನ್ನು ನಗರ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ ಎಂಬ ಮಾಹಿತಿ ಲಭಿಸಿದೆ.

    ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗ ಬೇಕಿದ್ದು, ಘಟನೆಗೆ ಕಾರಣವೇನು ಎಂಬುವುದು ಕೂಡ ತಿಳಿಯಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv