Tag: nilgai

  • ರೈತ ಮುಖಂಡ ರಾಕೇಶ್ ಟಿಕಾಯತ್ ಕಾರು ಅಪಘಾತ – ಸೀಟ್‌ ಬೆಲ್ಟ್‌ ಹಾಕಿದ್ದಕ್ಕೆ ಬಚಾವ್‌

    ರೈತ ಮುಖಂಡ ರಾಕೇಶ್ ಟಿಕಾಯತ್ ಕಾರು ಅಪಘಾತ – ಸೀಟ್‌ ಬೆಲ್ಟ್‌ ಹಾಕಿದ್ದಕ್ಕೆ ಬಚಾವ್‌

    ಲಕ್ನೋ: ರೈತ ಚಳುವಳಿಯ ಪ್ರಮುಖ ನಾಯಕ ರಾಕೇಶ್ ಟಿಕಾಯತ್ (Rakesh Tikait) ಅವರ ಕಾರು ಉತ್ತರ ಪ್ರದೇಶದ (Uttar Pradesh) ಮುಜಫರ್ ಪುರ್ – ಮಿರಾಪುರ ಬೈಪಾಸ್ ರಸ್ತೆಯಲ್ಲಿ (Accident) ಅಪಘಾತಕ್ಕೀಡಾಗಿದೆ. ಅವರು ಸೀಟ್‌ ಬೆಲ್ಟ್‌ ಹಾಕಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

    ಅವರ ಕಾರು ರಸ್ತೆ ದಾಟುತ್ತಿದ್ದಾಗ ನೀಲಗೈಗೆ (Nilgai) ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನ ಏರ್‌ಬ್ಯಾಗ್‌ಗಳು ಓಪನ್‌ ಆಗಿದ್ದು, ಕಾರಿನಲ್ಲಿದ್ದವರು ಬಚಾವ್‌ ಆಗಿದ್ದಾರೆ. ಶುಕ್ರವಾರ ಸಂಜೆ 7:20ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ನೀಲಗೈಗೆ ಕಾರು ಡಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗ ಜಖಂ ಆಗಿದೆ.

    ಅಪಘಾತದ ಬಗ್ಗೆ ಪ್ರತಿಕ್ರಿಯಿಸಿರುವ ಟಿಕಾಯತ್‌ ಅವರು, ಅಪಘಾತದ ಸಮಯದಲ್ಲಿ ನಮಗೆ ಏನೂ ಅರ್ಥವಾಗಲಿಲ್ಲ. ಅದು ಕ್ಷಣಾರ್ಧದಲ್ಲಿ ಸಂಭವಿಸಿತು. ನನಗೆ ಪ್ರಜ್ಞೆ ಬಂದಾಗ ಕಾರಿನ ಏರ್‌ಬ್ಯಾಗ್‌ ತೆರೆದಿತ್ತು. ಕಾರಿನಲ್ಲಿದ್ದವರೆಲ್ಲ ಸುರಕ್ಷಿತರಾಗಿದ್ದೇವೆ ಎಂದು ಹೇಳಿದ್ದಾರೆ.

    ವಾಹನ ಚಾಲನೆ ಹಾಗೂ ಸೀಟ್‌ ಬೆಲ್ಟ್‌ ಧರಿಸುವುದರ ಮಹತ್ವದ ಬಗ್ಗೆ ಮಾತನಾಡಿ, ವಾಹನ ಚಾಲನೆ ಸಮಯದಲ್ಲಿ ಕಡ್ಡಾಯವಾಗಿ ಎಲ್ಲರೂ ಸೀಟ್ ಬೆಲ್ಟ್ ಧರಿಸಬೇಕು. ವಾಹನ ಚಾಲನೆ ಮಾಡುವಾಗ, ವೇಗ 100 KM/hಗಿಂತ ಕಡಿಮೆ ಇರಬೇಕು ಎಂದು ಒತ್ತಿ ಹೇಳಿದ್ದಾರೆ.

  • ಹರಿಯಾಣ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಕಾರು ಅಪಘಾತ

    ಹರಿಯಾಣ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಕಾರು ಅಪಘಾತ

    ಚಂಡೀಗಢ: ಹರಿಯಾಣದ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ (Bhupinder Singh Hooda) ಅವರು ಪ್ರಯಾಣಿಸುತ್ತಿದ್ದ ಟೊಯೊಟಾ ಲ್ಯಾಂಡ್ ಕ್ರೂಸರ್ ಭಾನುವಾರ ಹಿಸ್ಸಾರ್‌ನಲ್ಲಿ (Hisar) ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಹೂಡಾ ಯಾವುದೇ ಹಾನಿಗೊಳಗಾಗದೇ ಪಾರಾಗಿದ್ದಾರೆ. ವಾಹನದಲ್ಲಿದ್ದ ಇತರ ಪ್ರಯಾಣಿಕರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.

    ಹೂಡಾ ಅವರು ಬಾಕ್ಸರ್ ಸವೀತಿ ಬೂರಾ ಅವರನ್ನು ಗೌರವಿಸಲು ಹಿಸ್ಸಾರ್‍ನ ಗಿರಾಯೆ ಗ್ರಾಮದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ವಾಹನವು ನೀಲಗಾಯ್‍ಗೆ (Nilgai) ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗದ ಎರಡು ಏರ್ ಬ್ಯಾಗ್‍ಗಳು (Air bags) ತೆರೆದುಕೊಂಡು ಅನಾಹುತದ ತೀವ್ರತೆ ಕಡಿಮೆಗೊಳಿಸಿದೆ. ನಂತರ ಹೂಡಾ ಅವರು ಬೆಂಗಾವಲು ವಾಹನದಲ್ಲಿ ಕಾರ್ಯಕ್ರಮಕ್ಕೆ ತೆರಳಿದರು. ಇದನ್ನೂ ಓದಿ: ಯಾದಗಿರಿಯಲ್ಲಿ ಖಾಸಗಿ ಬಸ್ ಪಲ್ಟಿ – ಓರ್ವ ಸಾವು, ಹಲವರಿಗೆ ಗಂಭೀರ ಗಾಯ

    ಹೂಡಾ ಅವರು ಚೆನ್ನಾಗಿದ್ದಾರೆ ಮತ್ತು ನಿಗದಿತ ಕಾರ್ಯಕ್ರಮಗಳಿಗೆ ಹಾಜರಾಗಿದ್ದರು. ವಾಹನಕ್ಕೆ ಹಾನಿಯಾಗಿದೆ ಆದರೆ ಅದರಲ್ಲಿದ್ದವರು ಕ್ಷೇಮವಾಗಿದ್ದಾರೆ. ಅವರು ಪ್ರಸ್ತುತ ತಮ್ಮ ಆಪ್ತ ಸಹಾಯಕರೊಬ್ಬರ ವಿವಾಹ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಅವರ ಮಾಧ್ಯಮ ಸಲಹೆಗಾರ ಸುನಿಲ್ ಪಾರ್ಟಿ ತಿಳಿಸಿದ್ದಾರೆ. ಇದನ್ನೂ ಓದಿ: ಗಡಿ ನುಸುಳಲು ಉಗ್ರರ ಸ್ಕೆಚ್ – ಸೈನಿಕರ ಗುಂಡಿಗೆ ಓರ್ವ ಬಲಿ

  • ಬೀದರ್‌ನಲ್ಲಿ ಅಪರೂಪದ ನೀಲ್‍ಗಾಯ್ ಪ್ರತ್ಯಕ್ಷ- ರೈತರಲ್ಲಿ ಆತಂಕ

    ಬೀದರ್‌ನಲ್ಲಿ ಅಪರೂಪದ ನೀಲ್‍ಗಾಯ್ ಪ್ರತ್ಯಕ್ಷ- ರೈತರಲ್ಲಿ ಆತಂಕ

    ಬೀದರ್: ಉತ್ತರ ಭಾರತದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಅಪರೂಪದ ಪ್ರಾಣಿ ಬೀದರ್ ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದೆ. ರಾಜ್ಯದಲ್ಲೇ ಪ್ರಥಮ ಬಾರಿಗೆ ಬೀದರ್ ನಲ್ಲಿ ಅಪರೂಪದ ನೀಲ್‍ಗಾಯ್(ನೀಲಿ ಜಿಂಕೆ) ಪ್ರತ್ಯಕ್ಷವಾಗಿದೆ.

    ಈ ಅಪರೂಪದ ಪ್ರಾಣಿ ಪ್ರತ್ಯಕ್ಷದಿಂದಾಗಿ ಜಿಲ್ಲೆಯ ಜನರು ಅಚ್ಚರಿಪಟ್ಟಿದ್ದಾರೆ. ನೀಲ್‍ಗಾಯ್ ಪ್ರಾಣಿ ಮಹಾರಾಷ್ಟ್ರ, ಬಿಹಾರ ಸೇರಿದಂತೆ ಉತ್ತರ ಭಾರತದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಂದಿ ಬಿಜ್ಜಲಗಾಂವ್ ಗ್ರಾಮದ ಬಳಿ ಅಪರೂಪದ ನೀಲ್‍ಗಾಯ್ ಕಾಣಿಸಿಕೊಂಡಿದೆ.

    ಗಡಿ ಭಾಗದಲ್ಲಿ ಹೆಚ್ಚಾಗಿ ಅರಣ್ಯ ಪ್ರದೇಶವಿರುವ ಕಾರಣ ಈ ಕಡೆ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಸಿಬ್ಬಂದಿ ಹೊದಾಗ ಈ ಅಪರೂಪದ ಪ್ರಾಣಿ ಅವರ ಕಣ್ಣಿಗೆ ಬಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ನೀಲ್‍ಗಾಯ್ ಹೊಲ-ಗದ್ದೆಗಳಿಗೆ ಬಾರಿ ಪ್ರಮಾಣದಲ್ಲಿ ಹಾನಿ ಉಂಟು ಮಾಡುತ್ತದೆ ಎಂದು ಅರಣ್ಯ ಅಧಿಕಾರ ಹೇಳುತ್ತಿದ್ದು, ಇದು ರೈತರ ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಅಕ್ಷತಾ ಪಾಂಡವಪುರಗೆ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಪ್ರಶಸ್ತಿ

  • ಬೆಳೆ ಹಾಳು ಮಾಡಿದಕ್ಕೆ ನೀಲಿಜಿಂಕೆ ಜೀವಂತ ಸಮಾಧಿ – ವಿಡಿಯೋ ವೈರಲ್

    ಬೆಳೆ ಹಾಳು ಮಾಡಿದಕ್ಕೆ ನೀಲಿಜಿಂಕೆ ಜೀವಂತ ಸಮಾಧಿ – ವಿಡಿಯೋ ವೈರಲ್

    ಪಾಟ್ನಾ: ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನೀಲ್‍ಗಾಯ್(ನೀಲಿ ಜಿಂಕೆ) ಒಂದನ್ನು ಜೀವಂತವಾಗಿ ಸಮಾಧಿ ಮಾಡಲಾಗಿದೆ. ಜೆಸಿಬಿ ಮೂಲಕ ಪ್ರಾಣಿಯನ್ನು ಖೆಡ್ಡಕ್ಕೆ ಬೀಳಿಸಿ, ಮಣ್ಣು ಮಾಡಲಾಗಿದೆ.

    ಮಾನವಿಯತೆ ಮರೆತು ನೀಲಿ ಜಿಂಕೆಯನ್ನು ಜೀವಂತವಾಗಿ ಸಮಾಧಿ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈಶಾಲಿ ಜಿಲ್ಲೆಯಲ್ಲಿ ನೀಲಿ ಜಿಂಕೆಗಳ ಹಾವಳಿ ಹೆಚ್ಚಿದ್ದು, ಇದರಿಂದ ರೈತರು ಬೇಸತ್ತು ಹೋಗಿದ್ದರು. ಆಹಾರ ಅರಸಿ ಜಮೀನುಗಳಿಗೆ ನುಗ್ಗುವ ನೀಲಿ ಜಿಂಕೆಗಳು ಬೆಳೆಗಳನ್ನು ಹಾಳು ಮಾಡುತ್ತಿದ್ದರಿಂದ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು.

    ಈ ಬಗ್ಗೆ ರೈತರು ಅರಣ್ಯ ಇಲಾಖೆಗೆ ತಿಳಿಸಿ ನೀಲಿ ಜಿಂಕೆಗಳ ಕಾಟದಿಂದ ಪಾರು ಮಾಡಿ ಎಂದು ಮನವಿ ಮಾಡಿದ್ದರು. ಹೀಗಾಗಿ ಇವನ್ನು ಕೊಲ್ಲುವಂತೆ ಅರಣ್ಯ ಇಲಾಖೆಗೆ ಆದೇಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಸುಮಾರು 300ಕ್ಕೂ ಅಧಿಕ ನೀಲ್ಗಾಯ್‍ಗಳನ್ನು ಜಿಲ್ಲೆಯಲ್ಲಿ ಗುಂಡಿಟ್ಟು ಕೊಲ್ಲಲಾಗಿದೆ. ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿಯನ್ನೂ ಕೂಡ ಅರಣ್ಯ ಇಲಾಖೆಯೇ ನೇಮಿಸಿದೆ.

    ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಮೂಕ ಪ್ರಾಣಿಯನ್ನು ಹೀಗೆ ಅಮಾನುಷವಾಗಿ ಹತ್ಯೆ ಮಾಡುವುದು, ಜೀವಂತ ಸಮಾಧಿ ಮಾಡುವುದು ತಪ್ಪು. ಮನುಷ್ಯರನ್ನು ಹೀಗೆ ಮಾಡಿದರೆ ಸುಮ್ಮನ್ನಿರುತ್ತೀರಾ? ಮೂಕ ಪ್ರಾಣಿಗಳ ಮೇಲೆ ದರ್ಪ ಮೆರೆಯುವುದು ತಪ್ಪು ಎಂದು ಪ್ರಾಣಿ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    https://twitter.com/JayaseelanTD/status/1169777775621754880