Tag: nikki galrani

  • ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ನಿಕ್ಕಿ ಗಲ್ರಾನಿ ದಂಪತಿ

    ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ನಿಕ್ಕಿ ಗಲ್ರಾನಿ ದಂಪತಿ

    ನ್ನಡ ಮತ್ತು ತೆಲುಗು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನಟಿ ನಿಕ್ಕಿ ಗಲ್ರಾನಿ(Nikki Galrani), ಸದ್ಯ ವೈವಾಹಿಕ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ. ನಿಕ್ಕಿ ದಂಪತಿಯ ಬದುಕಲ್ಲಿ ಹೊಸ ಸದಸ್ಯನ ಆಗಮನವಾಗಲಿದೆ ಎನ್ನಲಾಗುತ್ತಿದೆ. ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ಸಂಜನಾ ಗಲ್ರಾನಿ(Sanjana Galrani) ಸಹೋದರಿ ನಿಕ್ಕಿ ತೆಲುಗಿನ ಸಿನಿಮಾಗಳ ಮೂಲಕ ಸಂಚಲನ ಮೂಡಿಸುತ್ತಿದ್ದಾರೆ. ಕಳೆದ ಮೇನಲ್ಲಿ ಆದಿ ಪಿನಿಸೆಟ್ಟಿ ಜೊತೆ ಹಸೆಮಣೆ ಏರಿದ್ದ ಈ ಚೆಲುವೆ, ವೈವಾಹಿಕ ಬದುಕಲ್ಲಿ ಹಾಯಾಗಿದ್ದಾರೆ. ಸದ್ಯದಲ್ಲಿಯೇ ಈ ಜೋಡಿ ಗುಡ್ ನ್ಯೂಸ್ ಕೊಡುವ ಮುನ್ಸೂಚನೆ ಕೊಟ್ಟಿದ್ದಾರೆ.

    ಇಬ್ಬರೂ ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಗುರುಹಿರಿಯರ ಸಮ್ಮುಖದಲ್ಲಿ ಆದಿ ಮತ್ತು ನಿಕ್ಕಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ವಿವಾಹದ ಕೆಲವೇ ತಿಂಗಳುಗಳ ನಂತರ ನಿಕ್ಕಿ ಪ್ರೆಗ್ನೆಂಟ್ ಆಗಿದ್ದಾರೆ. ಸೂಕ್ತ ಸಮಯದಲ್ಲಿ ಅಧಿಕೃತವಾಗಿ ಫ್ಯಾನ್ಸ್‌ಗೆ ತಿಳಿಸಲಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ.

    ಇನ್ನೂ ನಿಕ್ಕಿ ಗಲ್ರಾನಿ ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ೩೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆರತಕ್ಷತೆಯಲ್ಲಿ ಮಿಂಚಿದ ನಿಕ್ಕಿ ಗಲ್ರಾನಿ- ಆದಿ ಪಿನಿಸೆಟ್ಟಿ ಜೋಡಿ

    ಆರತಕ್ಷತೆಯಲ್ಲಿ ಮಿಂಚಿದ ನಿಕ್ಕಿ ಗಲ್ರಾನಿ- ಆದಿ ಪಿನಿಸೆಟ್ಟಿ ಜೋಡಿ

    ಸೌತ್ ಸಿನಿರಂಗದ ಮುದ್ದಾದ ಜೋಡಿಗಳಲ್ಲಿ ನಿಕ್ಕಿ ಗಲ್ರಾನಿ ಮತ್ತು ಆದಿ ಪಿನಿಸೆಟ್ಟಿ ಕೂಡ ಒಬ್ಬರು. ಇತ್ತೀಚೆಗಷ್ಟೇ ಪ್ರೀತಿಸಿ ಹಸೆಮಣೆ ಏರಿರುವ ಈ ಜೋಡಿಗೆ ಹಾರೈಸಲು ಇಡೀ ಚಿತ್ರರಂಗವೇ ಈ ನವಜೋಡಿಯ ಆರತಕ್ಷತೆಯಲ್ಲಿ ಭಾಗಿಯಾಗಿದ್ದರು. ಸದ್ಯ ನಿಕ್ಕಿ ಗಲ್ರಾನಿ ಮತ್ತು ಆದಿ ಪಿನಿಸೆಟ್ಟಿ ಅವರ ಆರತಕ್ಷತೆಯ ಫೋಟೋಗಳು ವೈರಲ್ ಆಗುತ್ತಿದೆ.

    ಸ್ಯಾಂಡಲ್‌ವುಡ್ ಬ್ಯೂಟಿ ಸಂಜನಾ ಗಲ್ರಾನಿ ತಂಗಿ ನಿಕ್ಕಿ ಗಲ್ರಾನಿ ಕನ್ನಡದ ಜೊತೆಗೆ ಸೌತ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಕಲಾವಿದೆ. ಚಿತ್ರರಂಗದಲ್ಲಿ ಬೇಡಿಕೆಯಿರುವಾಗಲೇ ಆದಿ ಪಿನಿಸೆಟ್ಟಿಯನ್ನು ಪ್ರೀತಿಸಿ ಮದುವೆಯಾದರು. ಕೆಲ ಸಿನಿಮಾಗಳು ಒಟ್ಟಿಗೆ ನಟಿಸಿರುವ ಈ ಜೋಡಿಗೆ ಪ್ರೀತಿಯಾಗಿದೆ, ಬಳಿಕ ಕೆಲ ವರ್ಷಗಳ ಡೇಟಿಂಗ್ ನಂತರ ಕುಟುಂಬದ ಸಮ್ಮತಿಯ ಮೇರೆಗೆ ಮಾರ್ಚ್ 24ರಂದು ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು.

    ಈ ವರ್ಷದ ಶುರುವಿನಲ್ಲಿಯೇ ಅಧಿಕೃತವಾಗಿ ನಿಕ್ಕಿ ಮತ್ತು ಆದಿ ನಿಶ್ಚಿತಾರ್ಥ ಮಾಡಿಕೊಂಡರು. ಮೇ 18ರಂದು ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ಈ ಜೋಡಿಯ ವಿವಾಹವಾಯಿತು. ಇದೇ ದಿನ ಅಕ್ಕ ಸಂಜನಾ ಕೂಡ ಗಂಡು ಮಗುವಿಗೆ ತಾಯಿಯಾದರು. ಗಲ್ರಾನಿ ಕುಟುಂಬದಿಂದ ಡಬಲ್ ಗುಡ್ ನ್ಯೂಸ್ ಸಿಕ್ಕಿತ್ತು. ಇದನ್ನೂ ಓದಿ: ಸಂಭಾಷಣೆಗಾರನಿಂದ ನಿರ್ದೇಶಕನವರೆಗೆ… ‘ವೀಲ್ ಚೇರ್ ರೋಮಿಯೋ’ ಸೂತ್ರಧಾರನ ಪರಿಶ್ರಮದ ಕಥೆ ಗೊತ್ತಾ ನಿಮಗೆ?

    ಇದೀಗ ಇಡೀ ಚಿತ್ರರಂಗವೇ ನಿಕ್ಕಿ ಗಲ್ರಾನಿ- ಆದಿ ಪಿನಿಸೆಟ್ಟಿ ಜೋಡಿಯ ಅದ್ದೂರಿ ಆರತಕ್ಷತೆಗೆ ಭಾಗಿಯಾಗಿ ನವಜೋಡಿಗೆ ಶುಭಹಾರೈದ್ದಾರೆ. ಚಿತ್ರರಂಗದ ದಿಗ್ಗಜರು ಭಾಗಿಯಾಗಿ ಜೋಡಿಗೆ ವಿಶ್ ಮಾಡಿದ್ದಾರೆ.

  • ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ ವಿವಾಹ: ಆದಿ ಪಿನಿಸೆಟ್ಟಿ ಜತೆ ನಿಕ್ಕಿ ಮದುವೆ

    ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ ವಿವಾಹ: ಆದಿ ಪಿನಿಸೆಟ್ಟಿ ಜತೆ ನಿಕ್ಕಿ ಮದುವೆ

    ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ, ಆದಿ ಪಿನಿಸೆಟ್ಟಿ ಜತೆ ಹಸೆಮಣೆ ಏರಿದ್ದಾರೆ. ಇತ್ತೀಚೆಗಷ್ಟೇ ಇಂಗೇಜ್‌ಮೆಂಟ್ ಮಾಡಿಕೊಂಡಿದ್ದ ಈ ಜೋಡಿ ಸದ್ದಿಲ್ಲದೇ ಇಬ್ಬರೂ ಹಸೆಮಣೆ ಏರಿದ್ದಾರೆ.

    ಕನ್ನಡ ಸೇರಿದಂತೆ ಸಾಕಷ್ಟು ಸಿನಿಮಾಗಳ ಮೂಲಕ ಬಹುಭಾಷಾ ನಟಿಯಾಗಿ ನಿಕ್ಕಿ ಗಲ್ರಾನಿ ಮಿಂಚ್ತಿದ್ದಾರೆ. ಇದೀಗ ಬಹುಕಾಲದ ಗೆಳೆಯ ಆದಿ ಪಿನಿಸೆಟ್ಟಿ ಜತೆ ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ ಮದುವೆ ಆಗಿದ್ದಾರೆ. ಗುರು ಹಿರಿಯರು ಮತ್ತು ಆಪ್ತರ ಸಮ್ಮುಖದಲ್ಲಿ ಖ್ಯಾತ ನಟ ಆದಿ ಪಿನಿಸೆಟ್ಟಿ ಜತೆ ನಿಕ್ಕಿ ಹಸೆಮಣೆ ಏರಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನವದಂಪತಿಗೆ ಶುಭಾಶಯಗಳು ಹರಿದು ಬರುತ್ತಿದೆ.

    ನಿಕ್ಕಿ ಮತ್ತು ಆದಿ ಹಲವು ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ನಿಕ್ಕಿ ಮತ್ತು ಆದಿ ಗುರುಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಕುಟುಂಬದ ಮತ್ತು ಸಿನಿಮಾ ರಂಗದ ಸ್ನೇಹಿತರ ಸಮ್ಮುಖದಲ್ಲಿ ಸದ್ದಿಲ್ಲದೇ ಹಸೆಮಣೆ ಏರಿದ್ದಾರೆ. ಮೇ 18ರಂದು ಅರಿಶಿಣ ಶಾಸ್ತ್ರ ನೆರವೇರಿತ್ತು. ಇಂದು ನಿಕ್ಕಿ ಮತ್ತು ಆದಿ ಪಿನಿಸೆಟ್ಟಿ ಮದುವೆ ಆಗಿದ್ದಾರೆ. ಮದುವೆ ಸಂಭ್ರಮದಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಕೂಡ ಭಾಗಿದ್ದಾರೆ. ಇದನ್ನೂ ಓದಿ: ಪ್ರಿಯಾಂಕ ಚೋಪ್ರಾ ರಕ್ತ ಸಿಕ್ತ ಮುಖ ನೋಡಿ ಬೆಚ್ಚಿ ಬಿದ್ದ ಫ್ಯಾನ್ಸ್: ಅಷ್ಟಕ್ಕೂ ಆಗಿದ್ದೇನು?

    ಗಲ್ರಾನಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಸಂಜನಾ ಗಲ್ರಾನಿ ಈಗ ಪ್ರೆಗ್ನೆಂಟ್. ಅವರ ಕುಟುಂಬಕ್ಕೆ ಶೀಘ್ರವೇ ಹೊಸ ಸದಸ್ಯನ ಆಗಮನ ಆಗಲಿದೆ. ಇನ್ನೊಂದ್ ಕಡೆ ತಂಗಿ ನಿಕ್ಕಿ ಗಲ್ರಾನಿ ಮದುವೆ, ಈ ಎರಡು ಸಂತಸದ ಸುದ್ದಿ ಕೇಳಿ ಅಭಿಮಾನಿಗಳು ಥ್ರೀಲ್ ಆಗಿದ್ದಾರೆ.

  • ಆದಿ ಪಿನಿಸೆಟ್ಟಿ ಜತೆ ನಿಕ್ಕಿ ಗಲ್ರಾನಿ ಮದುವೆ ಫಿಕ್ಸ್

    ಆದಿ ಪಿನಿಸೆಟ್ಟಿ ಜತೆ ನಿಕ್ಕಿ ಗಲ್ರಾನಿ ಮದುವೆ ಫಿಕ್ಸ್

    ಟಾಲಿವುಡ್ ನಟಿ ನಿಕ್ಕಿ ಗಲ್ರಾನಿ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ತೆಲುಗು ನಟ ಆದಿ ಪಿನಿಸೆಟ್ಟಿ ಜತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ ನಿಕ್ಕಿ ಗಲ್ರಾನಿ ಮದುವೆ ವಿಚಾರ ಸಿಕ್ಕಾಪಟ್ಟೆ ಸೌಂಡ್‌ ಮಾಡುತ್ತಿದೆ. ನಟಿ ಸಂಜನಾ ಗಲ್ರಾನಿ ಸೀಮಂತದ ಶಾಸ್ತ್ರದ ವಿಚಾರವಾಗಿ ಸುದ್ದಿಯಲ್ಲಿದ್ರೆ, ಈಗ ತಂಗಿ ನಿಕ್ಕಿ ಗಲ್ರಾನಿ ಹಸೆಮಣೆ ಏರೋಕೆ ಸಜ್ಜಾಗಿದ್ದಾರೆ.

    ಕನ್ನಡದ `ಅಜಿತ್’, `ಜಂಬುಸವಾರಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ನಿಕ್ಕಿ ಗಲ್ರಾನಿ ಇದೀಗ ಸೌತ್ ಸಿನಿಮಾಗಳಲ್ಲಿ ಸ್ಟಾರ್ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಹಲವು ವರ್ಷಗಳಿಂದ ತೆಲುಗಿನ ಸ್ಟಾರ್ ಆದಿ ಪಿನಿಸೆಟ್ಟಿ ಜತೆ ಪ್ರೀತಿಯಲ್ಲಿದ್ದ ನಿಕ್ಕಿ ಗಲ್ರಾನಿ ಇತ್ತೀಚೆಗೆ ಮಾರ್ಚ್‌ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಈಗ ಈ ಜೋಡಿಯ ಮದುವೆಯ ಸಿದ್ಧತೆ ಭರದಿಂದ ಸಾಗುತ್ತಿದೆ.

     

    View this post on Instagram

     

    A post shared by Nikki Galrani (@nikkigalrani)

    ತೆಲುಗು, ತಮಿಳಿನಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನ ಕೊಟ್ಟಿರೋ ಆದಿ ಪಿನಿಸೆಟ್ಟಿ, ಪೋಷಕ ಪಾತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದಿ ಮತ್ತು ನಿಕ್ಕಿ ತಮಿಳಿನ ಎರಡು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಇತ್ತೀಚಿಗೆ ಎಂಗೇಜ್‌ಮೆಂಟ್ ಆಗಿರೋ ಈ ಜೋಡಿ ಇದೀಗ ಗುರು ಹಿರಿಯರ ಸಮ್ಮುಖದಲ್ಲಿ ಮೇ 18ರಂದು ಹಸೆಮಣೆ ಏರೋದಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಮಾರ್ಚ್ 23 ಎಂಗೇಜ್ ಆಗಿದ್ದ ಆದಿ ಮತ್ತು ನಿಕ್ಕಿ ಜಾಸ್ತಿ ಗ್ಯಾಪ್ ತೆಗೆದುಕೊಳ್ಳದೇ ಮದುವೆಗೆ ಸಿದ್ಧರಾಗುತ್ತಿದ್ದಾರೆ. ಇದನ್ನೂ ಓದಿ: `ಕೆಜಿಎಫ್ 2′ ಹೊಸ ದಾಖಲೆ: 1200 ಕೋಟಿ ಕಲೆಕ್ಷನ್ ಮಾಡುವತ್ತ ರಾಕಿಭಾಯ್ ಚಿತ್ರ

    ಸಂಜನಾ ಗಲ್ರಾನಿ ಬದುಕಿನಲ್ಲಿ ಸಾಕಷ್ಟು ಏಳು ಬೀಳು ಕಂಡ ನಂತರ ಸಿನಿಮಾದಿಂದಲೂ ಗ್ಯಾಪ್ ತೆಗೆದುಕೊಂಡು ಗಂಡ ಮತ್ತು ಸಂಸಾರ ಅಂತಾ ತಾಯ್ತನದ ಖುಷಿ ಅನುಭವಿಸುತ್ತಿದ್ದಾರೆ. ಇನ್ನು ಸಂಜನಾ ತಂಗಿ ನಿಕ್ಕಿ ಗಲ್ರಾನಿ ಹಸೆಮಣೆ ಏರೋದಕ್ಕೆ ರೆಡಿಯಾಗಿದ್ದಾರೆ.

  • ನಿಶ್ಚಿತಾರ್ಥ ಮಾಡಿಕೊಂಡ ಸಂಜನಾ ಸಹೋದರಿ ನಿಕ್ಕಿ ಗಲ್ರಾನಿ

    ನಿಶ್ಚಿತಾರ್ಥ ಮಾಡಿಕೊಂಡ ಸಂಜನಾ ಸಹೋದರಿ ನಿಕ್ಕಿ ಗಲ್ರಾನಿ

    ಸ್ಯಾಂಡಲ್‍ವುಡ್ ನಟಿ ಸಂಜನಾ ಗಲ್ರಾನಿ ಅವರ ಸಹೋದರಿ ನಿಕ್ಕಿ ಗಲ್ರಾನಿ ನಟ ಆದಿ ಪಿನಿಸೆಟ್ಟಿ ಅವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ತಾವು ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿರುವ ಕುರಿತು ಹೇಳಿಕೊಂಡಿದ್ದಾರೆ. ಅಭಿಮಾನಿಗಳು, ಸಿನಿಮಾ ಕಲಾವಿದರು ಕಾಮೆಂಟ್ ಮಾಡುವ ಮೂಲಕವಾಗಿ ಶುಭ ಕೋರುತ್ತಿದ್ದಾರೆ.

    ಜೀವನದಲ್ಲಿ ಹಿಡಿದಿಟ್ಟುಕೊಳ್ಳುವ ಅತ್ಯುತ್ತಮ ವಿಷಯವೆಂದರೆ ಪರಸ್ಪರ. ನಾವು ಒಂದೆರಡು ವರ್ಷಗಳ ಹಿಂದೆ ಒಬ್ಬರನ್ನೊಬ್ಬರು ಕಂಡುಕೊಂಡಿದ್ದೇವೆ ಮತ್ತು ಅದು ಈಗ ಅಧಿಕೃತವಾಗಿದೆ. 2022 ಮಾರ್ಚ್ 24 ಈ ದಿನ ನಮಗೆ ನಿಜಕ್ಕೂ ವಿಶೇಷವಾಗಿತ್ತು. ನಮ್ಮಿಬ್ಬರ ಮನೆಯವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡೆವು. ನಾವು ಈ ಹೊಸ ಪ್ರಯಾಣವನ್ನು ಒಟ್ಟಿಗೆ ಆರಂಭಿಸುತ್ತಿದ್ದೇವೆ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದ ನಮ್ಮ ಜೊತೆಗೆ ಇರಲಿ ಎಂದು ಬರೆದುಕೊಂಡು ನಿಶ್ಚಿತಾರ್ಥ ಕೆಲವು ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಫ್ಯಾನ್ಸ್ ಜೊತೆ ‘ಜೇಮ್ಸ್’ ವೀಕ್ಷಿಸಿದ ಶಿವಣ್ಣ ದಂಪತಿ – ಏನ್ ಹೇಳಲಿ ನನ್ನ ತಮ್ಮನ ಆ್ಯಕ್ಟಿಂಗ್ ಬಗ್ಗೆ

     

    View this post on Instagram

     

    A post shared by Aadhi Pinisetty (@aadhiofficial) 

    ಖ್ಯಾತ ನಟ ಆದಿ ಪಿನಿಸೆಟ್ಟಿ ಜೊತೆಗೆ ಹೊಸ ಬಾಳು ಆರಂಭಿಸಲು ನಿಕ್ಕಿ ಸಿದ್ಧರಾಗಿದ್ದಾರೆ. ನಿಕ್ಕಿ ಮತ್ತು ಆದಿ ಈ ಮೊದಲಿನಂದಲೂ ಡೇಟಿಂಗ್ ಮಾಡುತ್ತಿದ್ದರು. ಆದರೆ ಈ ವಿಚಾರವನ್ನು ಒಪ್ಪಿಕೊಂಡಿರಲಿಲ್ಲ. ಈಗ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಅವರು ತಮ್ಮ ಪ್ರೀತಿ ವಿಚಾರವನ್ನು ಬಹಿರಂಗ ಮಾಡಿದ್ದಾರೆ.

    ಸ್ಯಾಂಡಲ್‍ವುಡ್ ನಟಿ ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ 2014ರಲ್ಲಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು. ಕನ್ನಡ, ತಮಿಳು, ಮಲಯಾಳಂ ಭಾಷೆಯ ಸಿನಿಮಾ ಸೇರಿ 30ಕ್ಕೂ ಅಧಿಕ ಚಿತ್ರಗಳಲ್ಲಿ ನಿಕ್ಕಿ ನಟಿಸಿದ್ದಾರೆ. ಪರಭಾಷೆಯಲ್ಲಿ ನಿಕ್ಕಿ ಹೆಚ್ಚು ಪರಿಚಿತರಾಗಿದ್ದಾರೆ. ಮಲಯಾಳಂ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದರು ನಿಕ್ಕಿ. ಕನ್ನಡದ ಕೆಲ ಚಿತ್ರಗಳಲ್ಲೂ ಅವರು ನಟಿಸಿದ್ದಾರೆ. ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿರುತ್ತಾರೆ. ಆದಿ ಅವರು ಟಾಲಿವುಡ್ ಹಾಗೂ ತಮಿಳು ಚಿತ್ರರಂಗದಲ್ಲಿ ಬೇಡಿಕೆ ಹೊಂದಿರುವ ನಟರ ಪಟ್ಟಿಯಲ್ಲಿ ಒಬ್ಬರಾಗಿದ್ದಾರೆ. ಇದನ್ನೂ ಓದಿ: RRR ಸಿನಿಮಾದಲ್ಲಿ ತಾಂತ್ರಿಕ ದೋಷ- ಥಿಯೇಟರ್‌ ಗಾಜು ಹೊಡೆದ ಫ್ಯಾನ್ಸ್‌, ಟಿಕೆಟ್‌ ದರ ವಾಪಸ್‌