Tag: nikhitha

  • ಫೇಮಸ್ ಕಿರುತೆರೆ ನಟಿ ದುರ್ಮರಣ- ಅಮ್ಮನ ಕಳೆದುಕೊಂಡ 6 ತಿಂಗ್ಳ ಪುಟ್ಟ ಕಂದಮ್ಮ

    ಫೇಮಸ್ ಕಿರುತೆರೆ ನಟಿ ದುರ್ಮರಣ- ಅಮ್ಮನ ಕಳೆದುಕೊಂಡ 6 ತಿಂಗ್ಳ ಪುಟ್ಟ ಕಂದಮ್ಮ

    – ಪತಿಯನ್ನು ವಶಕ್ಕೆ ಪಡೆದ ಪೊಲೀಸ್ರು..!

    ಭುವನೇಶ್ವರ್: ಎಲ್ಲರ ಮನೆಮಾತಾಗಿ ನಿಖಿತ ಎಂದೇ ಖ್ಯಾತರಾಗಿದ್ದ ಒಡಿಶಾದ ಕಿರುತೆರೆ ನಟಿ ಲಕ್ಷ್ಮಿಪ್ರಿಯ ಬೆಹೆರಾ ಅವರು ಇತ್ತೀಚೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಈ ಸಂಬಂಧ ಪೊಲೀಸರು ಆಕೆಯ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ತಲೆಗೆ ಗಂಭೀರ ಗಾಯಗಳಾಗಿದ್ದ ನಿಖಿತಾ ಅವರು ಒಡಿಶಾದ ಕಟಕ್ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಜನವರಿ 5ರಂದು ಅವರು ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದರು.

    ಪ್ರಾಥಮಿಕ ವರದಿಗಳ ಪ್ರಕಾರ, ನಿಖಿತಾ ಅವರು ತವರು ಮನೆಗೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿ ಟೆರೇಸ್ ನಿಂದ ಬಿದ್ದು ತಲೆಗೆ ಗಂಭೀರ ಗಾಯಗಳಾಗಿದೆ ಎಂಬುದಾಗಿ ವರದಿಯಾಗಿತ್ತು. ಆದ್ರೆ ತಲೆಗೆ ಬಲವಾಗಿ ಏಟು ಬಿದ್ದ ಕಾರಣ ಆಕೆ ಮೃತಪಟ್ಟಿದ್ದಾಳೆ ಎಂದು ಆಕೆಯ ತಂದೆ, ತಾಯಿ ಹಾಗೂ ಪತಿ ಹೇಳಿದ್ದರು. ನಿಖಿತಾ ದೇಹದಲ್ಲಿ ಸಣ್ಣಮಟ್ಟಿನ ಗಾಯಗಳಾಗಿರುವ ಕುರಿತು ವೈದ್ಯರ ವರದಿಯಲ್ಲೂ ಉಲ್ಲೇಖವಾಗಿತ್ತು.

    ಆಕೆ ಟೆರೇಸ್ ನಿಂದ ಹಾರಿದ್ದಾಳೆಯೋ ಅಥವಾ ಬಿದ್ದಿದ್ದಾದ್ರೆ ಹೇಗೆ ಟೆರೇಸ್ ನಿಂದ ಬಿದ್ದಿದ್ದಾಳೆ ಅನ್ನೋದು ತಿಳಿದು ಬಂದಿಲ್ಲ. ಆದ್ರೆ ಇದೀಗ ಪೊಲೀಸರು ಆಕೆಯ ಪತಿ ಲಿಪುನ್ ಸಹುವನ್ನು ವಶಕ್ಕೆ ಪಡೆದಿದ್ದಾರೆ. ಹಾಗೂ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

    ವಶಕ್ಕೆ ಕಾರಣವೇನು..?
    ಪ್ರಕರಣ ಸಂಬಂಧ ನಿಖಿತಾ ತಂದೆ ಸನಾತನ್ ಬೆಹರಾ ಅವರು ಲಿಪುನ್, ಆತನ ತಂದೆ ಹಾಗೂ ತಾಯಿ ವಿರುದ್ಧ ದೂರು ದಾಖಲಿಸಿದ್ದರು. ಹೀಗಾಗಿ ದೂರು ಸ್ವೀಕರಿಸಿದ್ದ ಚೌಲಿಯಗಂಜ್ ಠಾಣೆಯ ಪೊಲೀಸರು ಲಿಪುನ್ ನನ್ನು ವಶಕ್ಕೆ ಪಡೆದಿದ್ದಾರೆ.

    ದೂರಿನಲ್ಲೇನಿತ್ತು..?
    ನನ್ನ ಮಗಳು ಲಿಖಿತಾಳನ್ನು ಆಕೆಯ ಪತಿ ಲಿಪುನ್ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಯಾಕಂದ್ರೆ ಲಿಪುನ್ ಹಾಗೂ ನನ್ನ ಮಗಳ ಸಂಬಂಧ ಕಳೆದ ಕೆಲ ತಿಂಗಳುಗಳಿಂದ ಅಷ್ಟೊಂದು ಚೆನ್ನಾಗಿರಲಿಲ್ಲ. ಹೀಗಾಗಿ ಆಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಪೊಲೀಸರು ಹೇಳಿದ್ದೇನು..?
    ಶುಕ್ರವಾರ ರಾತ್ರಿ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ನಿಖಿತಾ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಮಹಂದಿ ವಿಹಾರ್ ನಲ್ಲಿರುವ ತನ್ನ ತಂದೆಯ ಮನೆಯ ಮಹಡಿಯಿಂದ ಕೆಳಗೆ ಬಿದ್ದಿದ್ದರಿಂದ ತೆಲೆಗೆ ಬಲವಾದ ಏಟು ಬಿದ್ದಿತ್ತು. ಹೀಗಾಗಿ ಅವರನ್ನು ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅಲ್ಲಿಂದ ಎಸ್‍ಸಿಬಿ ಮೆಡಿಕಲ್ ಕಾಲೇಜಿಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    6 ತಿಂಗಳ ಗಂಡು ಮಗುವಿದೆ:
    ನಿಖಿತಾ ಅವರು 2016ರಲ್ಲಿ ಲಿಪಿನ್ ನನ್ನು ವರಿಸಿದ್ದು, ಈ ದಂಪತಿಗೆ 6 ತಿಂಗಳ ಗಂಡುಮಗುವಿದೆ. ಇವರು ಹೆಚ್ಚಾಗಿ ತಂದೆಯ ಮನೆಯಲ್ಲೇ ಇರುತ್ತಿದ್ದರು. ಎಸಿಪಿ ನಿಖಿತಾ ಅನ್ನೋ ಸಿರಿಯಲ್ ಹಾಗೂ ಕೆಲವು ಚಿತ್ರಗಳಲ್ಲೂ ನಟಿಸಿದ್ದು, ಎಲ್ಲರ ಮನೆ ಮಾತಾಗಿದ್ದರು. ಆದ್ರೆ ಶನಿವಾರ ಆಸ್ಪತ್ರೆಯಲ್ಲಿ ಅವರು ಇಹಲೋಕ ತ್ಯಜಿಸಿದ್ದು, ಅಲ್ಲಿನ ಚಿತ್ರರಂಗ ಕಂಬನಿ ಮಿಡಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv