Tag: nikhil jain

  • ನುಸ್ರತ್ ಜಹಾನ್ 6 ತಿಂಗಳ ಗರ್ಭಿಣಿ, ಮಗು ನನ್ನದಲ್ಲ ಎಂದ ಗಂಡ – ಬಿರುಕಿಗೆ ಕಾರಣರಾದ್ರಾ ಯಶ್?

    ನುಸ್ರತ್ ಜಹಾನ್ 6 ತಿಂಗಳ ಗರ್ಭಿಣಿ, ಮಗು ನನ್ನದಲ್ಲ ಎಂದ ಗಂಡ – ಬಿರುಕಿಗೆ ಕಾರಣರಾದ್ರಾ ಯಶ್?

    ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಸಂಸದೆ, ಬೆಂಗಾಲಿ ನಟಿ ನುಸ್ರತ್ ಜಹಾನ್ ಸದಾ ಸುದ್ದಿಯಲ್ಲಿರುತ್ತಾರೆ. ಮೊದಲು ನಟಿಯಾಗಿ, ನಂತರ ಸಂಸದೆಯಾಗಿ ಬಳಿಕ ನಿಖಿಲ್ ಜೈನ್ ಜೊತೆ ವಿವಾಹದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇದೀಗ ಅವರು ಆರು ತಿಂಗಳ ಗರ್ಭಿಣಿ ಎಂಬ ಸುದ್ದಿಹರಿದಾಡುತ್ತಿದೆ. ಅದರೆ ನಿಖಿಲ್ ಜೈನ್ ಮಾತ್ರ ಆ ಮಗು ನನ್ನದಲ್ಲ ಎನ್ನುವ ಮೂಲಕ ಇವರ ಕೌಟುಂಬಿಕ ಕಲಹ ಬೀದಿಗೆ ಬಂದಿದೆ.

    ನುಸ್ರತ್ ಜಹಾನ್ 2019 ಜೂನ್‍ನಲ್ಲಿ ಉದ್ಯಮಿ ನಿಖಿಲ್ ಜೈನ್ ಅವರನ್ನು ಟರ್ಕಿಯಲ್ಲಿ ವಿವಾಹವಾಗಿದ್ದರು. ಆ ಬಳಿಕ ಕೆಲ ಕಾರಣಗಳಿಂದ ಇವರಿಬ್ಬರ ನಡುವೆ ಪರಸ್ಪರ ಬಿರುಕು ಮೂಡಿ ಬೇರೆ ಬೇರೆಯಾಗಿದ್ದರು. ಇವರ ಕುಟುಂಬ ಕಲಹ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಆದರೆ ಈ ಬಗ್ಗೆ ಅವರಿಬ್ಬರಿಂದಲೂ ಯಾವುದೇ ಅಧಿಕೃತ ಹೇಳಿಕೆ ಹೊರ ಬಂದಿರಲಿಲ್ಲ. ಇದನ್ನೂ ಓದಿ:ನೂತನ ಸಂಸದೆಯ ಅದ್ಧೂರಿ ಆರತಕ್ಷತೆ – ಮಮತಾ ಬ್ಯಾನರ್ಜಿ ಆಗಮನ

    ನುಸ್ರತ್ ಈಗ ನಿಖಿಲ್ ಜೈನ್ ಜೊತೆಗಿನ ಮದುವೆಗೆ ಯಾವುದೇ ಮಾನ್ಯತೆ ಇಲ್ಲ. ಟರ್ಕಿಯಲ್ಲಿ ಮದುವೆ ನಡೆದಿದ್ದು, ಟರ್ಕಿ ಕಾನೂನಿನ ಪ್ರಕಾರ ಇದಕ್ಕೆ ಮಾನ್ಯತೆ ಇಲ್ಲ. ಭಾರತದಲ್ಲೂ ಅಧಿಕೃತವಾಗಿ ಯಾವುದೇ ಕಾನೂನಿನ ಪ್ರಕಾರ ನಾವು ಮದುವೆ ಆಗಿಲ್ಲ ನಮ್ಮದು ಲಿವ್ ಇನ್ ರಿಲೇಷನ್‍ಶಿಪ್ ಅಷ್ಟೇ ಎಂದಿದ್ದಾರೆ. ಇದನ್ನೂ ಓದಿ:ದುರ್ಗಾ ಪೂಜೆ ಮಾಡಿದಕ್ಕೆ ಕಿಡಿಕಾರಿದ ಮೌಲ್ವಿಗಳಿಗೆ ನುಸ್ರತ್ ತಿರುಗೇಟು

    ಆದರೆ ಕೆಲ ಮಾಹಿತಿಗಳ ಪ್ರಕಾರ ನುಸ್ರತ್ ಅವರು 6 ತಿಂಗಳ ಗರ್ಭಿಣಿ ಎಂದು ಸುದ್ದಿ ಹರಿದಾಡುತ್ತಿದೆ ಆದರೆ ಇದನ್ನು ಅಧಿಕೃತವಾಗಿ ನುಸ್ರತ್ ಅವರು ಹೇಳಿಕೊಂಡಿಲ್ಲ. ಆದರೆ ನಿಖಿಲ್ ಮಾತ್ರ ಆ ಮಗು ನನ್ನದಲ್ಲ. ನಾವು 6 ತಿಂಗಳಿಂದ ಜೊತೆಯಾಗಿ ಸಂಸಾರ ನಡೆಸುತ್ತಿಲ್ಲ ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ:ಜಗನ್ನಾಥ ಯಾತ್ರೆಯಲ್ಲಿ ನುಸ್ರತ್ ಜಹಾನ್- ನನ್ನ ಧರ್ಮ ಯಾವುದು ಅಂತ ನನಗೆ ಗೊತ್ತು

    ನುಸ್ರತ್ ಅವರ ಕುಟುಂಬ ಕಲಹಕ್ಕೆ ಬಿಜೆಪಿ ನಾಯಕ, ಬೆಂಗಾಲಿ ನಟ ಯಶ್ ದಾಸ್‍ಗುಪ್ತ ಅವರು ಕಾರಣ ಎಂಬ ಗುಸುಗುಸು ಕೂಡ ಕೇಳಿಬರುತ್ತಿದೆ. ಯಶ್ ದಾಸ್‍ಗುಪ್ತ ಮತ್ತು ನುಸ್ರತ್ ಬೆಂಗಾಲಿಯ ‘ಒನ್’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು ಆ ಬಳಿಕ ಇವರಿಬ್ಬರ ನಡುವೆ ಹೆಚ್ಚಿನ ಸ್ನೇಹ ಬೆಳೆದಿತ್ತು. ಇದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರು ಜೊತೆಯಾಗಿರುವ ಹಲವು ಫೋಟೋಗಳು ಹರಿದಾಡುತ್ತಿದೆ.

  • ನಾನು ದೇವರ ವಿಶೇಷ ಮಗು- ನುಸ್ರತ್ ಜಹಾನ್

    ನಾನು ದೇವರ ವಿಶೇಷ ಮಗು- ನುಸ್ರತ್ ಜಹಾನ್

    ನವದೆಹಲಿ: ಸಂಸದೆಯಾದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸದಾ ಸುದ್ದಿಯಲ್ಲಿರುವ ನಟಿ  ನುಸ್ರತ್ ಜಹಾನ್ ಅವರು ಇದೀಗ ನಾನು ದೇವರ ವಿಶೇಷ ಮಗು ಎಂದು ಹೇಳಿದ್ದಾರೆ.

    ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ‘ಸಿಂಧೂರ್ ಖೇಲಾ’ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಸಂಸದೆ, ನಾನು ದೇವರ ವಿಶೇಷ ಮಗು ಎಂದು ಹೇಳಿದ್ದಾರೆ. ಇದೇ ವೇಳೆ ಮಾನವೀಯತೆ ಬಗ್ಗೆ ಮಾತನಾಡಿದ ಅವರು, ನಾನು ಮಾನವೀಯತೆಯನ್ನು ಹೆಚ್ಚಾಗಿ ಗೌರವಿಸುತ್ತೇನೆ. ಎಲ್ಲದಕ್ಕಿಂತಲೂ ಹೆಚ್ಚು ನಾನು ಅದನ್ನು ಪ್ರೀತಿಸುತ್ತೇನೆ. ವಿವಾದಗಳಿಗೆ ನಾನು ತಲೆಕೆಡಿಸಿಕೊಳ್ಳಲ್ಲ. ಅದರಿಂದ ನನಗೆ ಯಾವುದೇ ಪರಿಣಾಮ ಬೀರಲ್ಲ ಎಂದು ತಿಳಿಸಿದ್ದಾರೆ.

    ದೇವರ ಮಗಳಾಗಿರುವ ನಾನು ಯಾವುದೇ ಮುಜುಗರವಿಲ್ಲದೆ ಎಲ್ಲಾ ಹಬ್ಬಗಳನ್ನು ಆಚರಿಸುತ್ತೇನೆ. ಇದರಿಂದ ನಾನು ತುಂಬಾ ಸಂತೋಷವಾಗುತ್ತೇನೆ. ಏನೇ ವಿವಾದಗಳು ಆಗಲಿ, ನಾನು ಯಾವುದನ್ನೂ ಕೇರ್ ಮಾಡಲ್ಲ ಎಂದು ಅವರು ಹೇಳಿದ್ದಾರೆ.

    ಬಂಗಾಳಿ ಮಹಿಳೆಯರು ವಿಜಯದಶಮಿ ದಿನದಂದು ‘ಸಿಂಧೂರ್ ಖೇಲಾ’ವನ್ನು ಆಚರಣೆ ಮಾಡುತ್ತಾರೆ. ಕೊನೆಯ ದಿನವಾದ ದುರ್ಗಾ ಪೂಜೆಯಂದು ಮಹಿಳೆಯರು ಪರಸ್ಪರ ಸಿಂಧೂರವನ್ನು ಹಚ್ಚಿ, ಸಿಹಿ ತಿನ್ನಿಸುವ ಸಂಪ್ರದಾಯವಿದೆ. ಈ ಕಾರ್ಯಕ್ರಮಕ್ಕೆ ಸಂಸದೆಯ ಜೊತೆ ಆಕೆಯ ಪತಿ ನಿಖಿಲ್ ಜೈನ್ ಕೂಡ ಭಾಗವಹಿಸಿ, ಅದ್ಧೂರಿಯಾಗಿ ಹಬ್ಬ ಆಚರಣೆ ಮಾಡಿದ್ದಾರೆ.

    ಇತ್ತೀಗಷ್ಟೇ ನುಸ್ರತ್ ತಮ್ಮ ಪತಿ ಜೊತೆ ದುರ್ಗಾ ಪೂಜೆ ಕೂಡ ನೆರವೇರಿಸಿ ಸಾಕಷ್ಟು ಚರ್ಚೆಗೆ ಗ್ರಾಸರಾಗಿದ್ದರು. ದುರ್ಗಾ ಪೂಜೆ ಮಾಡಿದ್ದಕ್ಕೆ ಇಸ್ಲಾಂ ಧರ್ಮ ಗುರು ಕಿಡಿಕಾರಿದ್ದರು. ಆದರೆ ಸಂಸದೆ ತಮ್ಮ ನಡೆಯನ್ನು ಸಮರ್ಥಿಸಿಕೊಂಡು ಸಖತ್ ತಿರುಗೇಟು ಕೂಡ ನೀಡಿದ್ದರು.

    ಅಲ್ಲಾಹು ಹೊರತುಪಡಿಸಿ ಇತರೆ ದೇವರುಗಳನ್ನು ಪೂಜಿಸಲು ಇಸ್ಲಾಂ ಧರ್ಮದಲ್ಲಿ ಅನುಮತಿ ನೀಡಿಲ್ಲ. ಆದರೆ, ನುಸ್ರತ್ ದುರ್ಗಾ ಪೂಜೆಯನ್ನು ನೆರವೇರಿಸಿದ್ದಾರೆ. ಇದು ಸಂಪೂರ್ಣವಾಗಿ ಇಸ್ಲಾಂ ವಿರೋಧಿಯಾಗಿದೆ. ಅವರು ಇಸ್ಲಾಂ ಅನ್ನು ಅನುಸರಿಸುತ್ತಿಲ್ಲ. ಇದಲ್ಲದೆ ಮುಸ್ಲಿಮೇತರ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಹೀಗಾಗಿ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಲಿ, ಅದನ್ನು ಬಿಟ್ಟು ಇಸ್ಲಾಂಗೆ ಅಪಮಾನ ಮಾಡುವುದು ಸರಿಯೇ ಎಂದು ಮುಫ್ತಿ ಅಸಾದ್ ಕಾಸ್ಮಿ ಪ್ರಶ್ನಿಸಿದ್ದರು.

    ಇದಕ್ಕೆ ಪ್ರತಿಕ್ರಿಯಿಸಿದ್ದ ನುಸ್ರತ್, ಎಲ್ಲ ಧರ್ಮದ ಸೌಹಾರ್ದತೆ ಸಾರಲು ನನ್ನದೇ ಆದ ದಾರಿಯಲ್ಲಿ ನಾನು ಹೋಗುತ್ತಿದ್ದೇನೆ. ನಾನು ಮಾಡುತ್ತಿರುವ ಸರಿಯೆಂದು ನನಗೆ ಅನಿಸುತ್ತಿದೆ. ನಾವು ಎಲ್ಲಾ ಧರ್ಮದ ಹಬ್ಬಗಳನ್ನು ಆಚರಿಸಬೇಕು. ಅವರು ನನಗೆ ಹೆಸರು ಇಟ್ಟಿಲ್ಲ. ಹೀಗಾಗಿ ನಿನ್ನ ಹೆಸರನ್ನು ಬದಲಿಸಿಕೋ ಎಂದು ಹೇಳುವ ಹಕ್ಕು ಅವರಿಗಿಲ್ಲ ಎಂದು ಮಾತಿನ ಚಾಟಿ ಬೀಸಿದ್ದರು.