Tag: Nikhil Gowda

  • ಮಡದಿ ಅಡುಗೆ ಮಾಡುವ ವಿಡಿಯೋ ಹಂಚಿಕೊಂಡ ನಿಖಿಲ್

    ಮಡದಿ ಅಡುಗೆ ಮಾಡುವ ವಿಡಿಯೋ ಹಂಚಿಕೊಂಡ ನಿಖಿಲ್

    ಬೆಂಗಳೂರು: ವಿವಾಹದ ಬಳಿಕ ನಟ ನಿಖಿಲ್ ಕುಮಾರಸ್ವಾಮಿ ಹಾಗೂ ಪತ್ನಿ ರೇವತಿ ದಾಂಪತ್ಯ ಜೀವನವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಬಹುತೇಕ ಕಡೆಗಳಲ್ಲಿ ಸುತ್ತಾಟ ನಡೆಸುವ ಮೂಲಕ ಲಾಕ್‍ಡೌನ್ ಸಮಯವನ್ನು ಕಳೆಯುತ್ತಿದ್ದಾರೆ. ಆದರೆ ರೇವತಿ ಮನೆ ಕೆಲಸ ಮಾಡಿದ ವಿಡಿಯೋವನ್ನು ಹಂಚಿಕೊಂಡಿರಲಿಲ್ಲ. ಇದೀಗ ನಿಖಿಲ್ ಕುಮಾರಸ್ವಾಮಿಯವರು ವಿಡಿಯೋವೊಂದನ್ನು ರಿವೀಲ್ ಮಾಡಿದ್ದಾರೆ.

    ಹೌದು. ಈ ಕುರಿತು ನಿಖೀಲ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಸ್ಟೇಟಸ್ ಅಪ್‍ಡೇಟ್ ಮಾಡಿದ್ದು, ರೇವತಿಯವರು ಅಡುಗೆ ಮಾಡುವ ವಿಡಿಯೋವನ್ನು ಹಾಕಿಕೊಂಡಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಮೆಚ್ಚುಗೆ ಸಹ ವ್ಯಕ್ತವಾಗಿದೆ. ಇತ್ತೀಚೆಗಷ್ಟೇ ಒಂದು ಬಾರಿಯೂ ಪತ್ನಿ ಅಡುಗೆ ಮಾಡಿಲ್ಲ. ಆದರೆ ಅಡುಗೆ ಮಾಡಲು ಬರುತ್ತೆ ಎಂಬುದು ತಿಳಿದಿದ್ದೇನೆ ಎಂದು ನಿಖೀಲ್ ಹೇಳಿದ್ದರು. ಆದರೆ ಇದೀಗ ಪತ್ನಿ ಅಡುಗೆ ಮಾಡುತ್ತಿರುವ ವಿಡಿಯೋವನ್ನೇ ಹಂಚಿಕೊಂಡಿದ್ದಾರೆ.

    ರೇವತಿಯವರು ಅಡುಗೆ ಮಾಡುವ ಎರಡು ವಿಡಿಯೋವನ್ನು ಪೋಸ್ಟ್ ಮಾಡಿದ್ದು, ನಾನ್ ವೆಜ್ ಮಾಡುತ್ತಿರುವಂತೆ ಕಾಣುತ್ತದೆ. ಇದನ್ನು ಖುಷಿಯಿಂದಲೇ ನಿಖಿಲ್ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ಸದ್ದು ಮಾಡುತ್ತಿದೆ.

    ರೇವತಿ ಅವರು ಅಡುಗೆ ಮಾಡುತ್ತಾರಂತೆ, ಆದರೆ ಅದರ ಬಗ್ಗೆ ನನಗೆ ಗೊತ್ತಿಲ್ಲ. ಈವರೆಗೂ ಅವರು ಅಡುಗೆ ಮಾಡಿದ್ದನ್ನು ನೋಡಿಲ್ಲ. ಒಮ್ಮೆ ಬಿರಿಯಾನಿ ಏನೋ ಮಾಡಿದ್ದರಂತೆ. ಆದರೆ ಆ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ತಂದೆ-ತಾಯಿ ನನಗೆ ತುಂಬಾ ಪ್ರೀತಿ ಕೊಟ್ಟಿದ್ದಾರೆ. ಅದೇ ರೀತಿ ನನ್ನ ತಂದೆ-ತಾಯಿಯೊಂದಿಗೆ ಚೆನ್ನಾಗಿ ಹೊಂದಿಕೊಳ್ಳುವ ಹುಡುಗಿ ಸಿಕ್ಕರೆ ಸಾಕು ಎಂದುಕೊಂಡಿದ್ದೆ. ಆದರೆ ಅದಕ್ಕಿಂತ ಮಿಗಿಲಾದವರು ಸಿಕ್ಕಿದ್ದಾರೆ. ಯಾವುದೇ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ರೇವತಿ ಬಹಳ ಮೃದು ಹೃದಯಿ, ಆದರೆ ಸುಮ್ಮಸುಮ್ಮನೆ ಅಳುತಿರುತ್ತಾರೆ. ಅಣ್ಣ ವಿಷಯಕ್ಕೂ ಮಗು ರೀತಿ ಅಳುತಿರುತ್ತಾರೆ. ಕಾವೇರಿಯನ್ನು ಕಣ್ಣಲ್ಲೇ ತುಂಬಿಕೊಂಡಿದ್ದಾರೆ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಪತ್ನಿ ರೇವತಿಯನ್ನು ಕಿಚಾಯಿಸಿದ್ದರು.

    ನನ್ನ ಪತ್ನಿಗೆ ಸ್ವಚ್ಛತೆಯ ಗೀಳು ಎಲ್ಲವೂ ಸ್ವಚ್ಛವಾಗಿರಬೇಕು ಎಂದುಕೊಳ್ಳುತ್ತಾರೆ. ನಾನು ನನ್ನ ರೂಮಿಗೆ ಬಂದರೆ ತುಂಬಾ ವಸ್ತುಗಳು ಹರಡುತ್ತಿದ್ದವು. ಮದುವೆಗೆ ಮುಂಚೆ ನನ್ನ ರೂಂ ಅನ್ನು ವರ್ಷಕ್ಕೆ ಒಮ್ಮೆ ಮಾತ್ರ ಕ್ಲೀನ್ ಮಾಡುತ್ತಿದ್ದೆ. ಆದರೆ ಈಗ ಸಾಕಷ್ಟು ಬದಲಾಗಿದ್ದೀನಿ. ನನ್ನ ಪತ್ನಿ ರೇವತಿಗೆ ಇದು ಸಾಲದಂತೆ, ಇನ್ನೂ ಬದಲಾಗಬೇಕೆಂತೆ ಎಂದು ನಿರೂಪಕಿ ಅನುಶ್ರೀ ನಡೆಸಿದ ಸಂದರ್ಶನದಲ್ಲಿ ನಿಖಿಲ್ ತಮ್ಮ ಪತ್ನಿ ಬಗ್ಗೆ ಮಾತನಾಡಿದ್ದಾರೆ.

    ನಾಲ್ಕು ತಿಂಗಳ ದಾಂಪತ್ಯ ಜೀವನವನ್ನು ಕಳೆದಿರುವ ನಿಖಿಲ್ ಹಾಗೂ ರೇವತಿ ಸಖತ್ ಆಗೇ ಎಂಜಾಯ್ ಮಾಡುತ್ತಿದ್ದಾರೆ ಎಂಬುದು ತಿಳಿದೇ ಇದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವರು ಪೋಸ್ಟ್ ಗಳನ್ನು ಸಹ ಹಾಕುತ್ತಿರುತ್ತಾರೆ. ಇತ್ತೀಚೆಗೆ ಲಾಕ್‍ಡೌನ್ ಸಮಯದಲ್ಲಿ ಫಾರ್ಮ್ ಹೌಸ್‍ನಲ್ಲಿ ಸುತ್ತಾಡುತ್ತಿರುವ ಚಿತ್ರವನ್ನು ಅವರು ಹಂಚಿಕೊಂಡಿದ್ದರು.

    ಕಳೆದ ವಾರ ನಾಗರಹೊಳೆ ಅಭಯಾರಣ್ಯಕ್ಕೂ ಭೇಟಿ ನೀಡಿದ್ದ ಜೋಡಿ ಮೈಸೂರು ದಸರಾದ ಅಂಬಾರಿ ಹೊರುವ ಗಜಪಡೆಯ ನಾಯಕ ಅರ್ಜುನ ಹಾಗೂ ದುರ್ಗಾಪರಮೇಶ್ವರಿಯೊಂದಿಗೆ ಫೋಟೋ ತೆಗೆಸಿಕೊಂಡಿತ್ತು. ಅಲ್ಲದೆ ಕುಟುಂಬ ಸಮೇತರಾಗಿ ಸರಳವಾಗಿ ಗಣೇಶೋತ್ಸವ ಆಚರಿಸಿದ ಕುರಿತು ಸಹ ನಿಖಿಲ್ ಅಪ್‍ಡೇಟ್ ನೀಡಿದ್ದರು. ಲಾಕ್‍ಡೌನ್ ಬಳಿಕ ನಿಖಿಲ್ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದು, ಇತ್ತೀಚೆಗಷ್ಟೇ ಅವರ ಮುಂದಿನ ರೈಡರ್ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಮತ್ತೆ ನಟೆನೆಯತ್ತ ಮುಖ ಮಾಡಿದ್ದಾರೆ.

  • ನಮಗೆ ಈ ಸಂಬಂಧ ಇಷ್ಟವಿಲ್ಲ ಅಂದ್ರಂತೆ ಅನಿತಾಕುಮಾರಸ್ವಾಮಿ!

    ನಮಗೆ ಈ ಸಂಬಂಧ ಇಷ್ಟವಿಲ್ಲ ಅಂದ್ರಂತೆ ಅನಿತಾಕುಮಾರಸ್ವಾಮಿ!

    ಬೆಂಗಳೂರು: ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಯವರು ತಮ್ಮ ಪುತ್ರ ನಿಖಿಲ್ ಗೆ ಆಂಧ್ರ ಮೂಲದ ಹುಡುಗಿಯೊಂದಿಗೆ ವಿವಾಹ ಮಾಡಲು ಮಾತುಕತೆ ನಡೆದಿದೆ ಎಂಬ ಸುದ್ದಿಗೆ ಇಂದು ಮತ್ತೊಂದು ಟ್ವಿಸ್ಟ್ ದೊರೆತಿದೆ.

    ಶುಕ್ರವಾರ ಕುಮಾರಸ್ವಾಮಿ ದಂಪತಿ ಆಂಧ್ರದ ಉದ್ಯಮಿ ಬೋಡಪುಡಿ ಶಿವ ಕೋಟೇಶ್ವರ್ ರಾವ್ ಮನೆಗೆ ಹೋಗಿದ್ದರು. ವಿಜಯವಾಡದಲ್ಲಿರುವ ಉದ್ಯಮಿಯ ಮನೆಗೆ ಹೋಗಿ ದಂಪತಿ ಮದ್ವೆ ಮಾತುಕತೆ ನಡೆಸಿದ್ದರು. ಆದ್ರೆ ಈ ಸಂಬಂಧ ಅನಿತಾ ಕುಮಾರಸ್ವಾಮಿಗೆ ಇಷ್ಟನೇ ಇರಲಿಲ್ಲ. ಆದ್ರೆ ಮನೆಗೆ ಬರ್ತಿವಿ ಅಂತ ಕುಮಾರಸ್ವಾಮಿ ಮೊದಲೇ ಹುಡುಗಿ ಮನೆಯವರಿಗೆ ಮಾತು ಕೊಟ್ಟಿದ್ದರು. ಕೊಟ್ಟ ಮಾತು ಉಳಿಸಿಕೊಳ್ಳಲು ಅನಿವಾರ್ಯವಾಗಿ ಕುಮಾರಸ್ವಾಮಿ ದಂಪತಿ ಹುಡುಗಿ ಮನೆಗೆ ಹೋಗಿದ್ದರು. ಮಾತುಕತೆ ವೇಳೆ ಅನಿತಾ ಕುಮಾರಸ್ವಾಮಿ ಅವರು `ನಮಗೆ ಈ ಸಂಬಂಧ ಇಷ್ಟ ಇಲ್ಲ’ ಅಂತ ಹುಡುಗಿ ಮನೆಯವರಿಗೆ ತಿಳಿಸಿದ್ದಾರೆ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಇತ್ತ ಮದ್ವೆ ಮಾತುಕತೆ ಸುದ್ದಿಯ ಬಗ್ಗೆ ಪುತ್ರ ನಿಖಿಲ್ ತಾಯಿ ಬಳಿ ವಿಚಾರಿಸಿದ್ದಾರೆ. ಈ ವೇಳೆ `ಕರ್ನಾಟಕ ಬಿಟ್ಟು ಬೇರೆ ಕಡೆಯಿಂದ ಹೆಣ್ಣು ತರಲ್ಲ, ತಲೆಕೆಡಿಸಿಕೊಳ್ಳಬೇಡ’ ಅಂತ ಅನಿತಾ ಅವರು ತಮ್ಮ ಪುತ್ರನಿಗೆ ಸಮಾಧಾನಪಡಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಆಂಧ್ರ ಅಲ್ಲ, ಕನ್ನಡದ ಹುಡುಗಿಯನ್ನೇ ವರಿಸಲಿದ್ದಾರೆ ನಿಖಿಲ್

    ನಿನ್ನೆ ನಿಖಿಲ್ ಅವರಿಗೆ ಹುಡುಗಿ ನೋಡುವುದಕ್ಕಾಗಿ ಸಿಎಂ ದಂಪತಿ ಆಂಧ್ರಕ್ಕೆ ತೆರಳಿದ್ದರು ಎಂಬ ಸುದ್ದಿಯ ಬೆನ್ನಲ್ಲೇ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿರುವ ನಿಖಿಲ್ ಅವರ ಮ್ಯಾನೇಜರ್, ಈ ಕುರಿತು ಶೀಘ್ರವೇ ಅಧಿಕೃತವಾಗಿ ಕುಟುಂಬ ಸದಸ್ಯರು ಮಾಹಿತಿ ನೀಡಲಿದ್ದಾರೆ. ಆದರೆ ನಿಖಿಲ್ ಅವರು ಆಂಧ್ರ ಹುಡುಗಿಯನ್ನು ಮದುವೆಯಾಗಲಿದ್ದಾರೆ ಎನ್ನುವುದು ಸುಳ್ಳು. ಅವರು ಕನ್ನಡ ಹುಡುಗಿಯನ್ನೇ ಮದುವೆಯಾಗಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು.

    ಈ ವೇಳೆ ಆಂಧ್ರ ಪ್ರದೇಶದ ಖ್ಯಾತ ಉದ್ಯಮಿ ಬೋಡೆಪುಡಿ ಶಿವ ಕೋಟೇಶ್ವರ ರಾವ್ ಕೂಡ ಪ್ರತಿಕ್ರಿಯೆ ನೀಡಿದ್ದು, ಸಿಎಂ ಕುಮಾರಸ್ವಾಮಿ ಅವರು ನಾವು ಸ್ನೇಹಿತರಾಗಿದ್ದು, ಸಹಜವಾಗಿ ಇಂದು ಮನೆಗೆ ಭೇಟಿ ನೀಡಿದ್ದಾರೆ. ನಿಖಿಲ್‍ರೊಂದಿಗೆ ಮದುವೆಯ ಸುದ್ದಿ ಬಗ್ಗೆ ಈ ವೇಳೆ ಚರ್ಚೆ ನಡೆದಿಲ್ಲ. ಸ್ನೇಹಿತರಾದ ಕಾರಣಕ್ಕೆ ಮಾತ್ರ ಭೇಟಿ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=yCWzT5DwKiM

    https://www.youtube.com/watch?v=gRdK_wrERMI

  • `ಜಾಗ್ವಾರ್’ ಖ್ಯಾತಿಯ ನಿಖಿಲ್ ಗೌಡಗೆ 28ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ

    `ಜಾಗ್ವಾರ್’ ಖ್ಯಾತಿಯ ನಿಖಿಲ್ ಗೌಡಗೆ 28ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ

    ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಮನೆಯ ಕುಡಿ ಜಾಗ್ವಾರ್ ಖ್ಯಾತಿಯ ನಿಖಿಲ್ ಗೌಡ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

    28ನೇ ವಸಂತಕ್ಕೆ ಕಾಲಿಟ್ಟ ನಿಖಿಲ್ ಗೌಡ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ನೂರಾರು ಸಂಖ್ಯೆಯ ಅಭಿಮಾನಿಗಳು ತಂದಿದ್ದ ಕೇಕ್ ಕತ್ತರಿಸಿ ನಿಖಿಲ್ ನರೆದಿದ್ದವರನ್ನು ಸಂತೋಷ ಪಡಿಸಿದರು.

    ರಾಜಕೀಯ ಕೆಲಸ ಕಾರ್ಯಗಳ ನಿಮಿತ್ತ ತಂದೆ ಹೆಚ್ ಡಿ ಕುಮಾರಸ್ವಾಮಿ ಜೆಪಿ ನಗರದ ಮನೆಯಲ್ಲಿರಲಿಲ್ಲ. ಆದರೂ ನಿಖಿಲ್ ಹುಟ್ಟುಹಬ್ಬದ ಸಂಭ್ರಮ ಮುಗಿಲುಮುಟ್ಟಿತ್ತು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುನಿರೀಕ್ಷೆ ಹುಟ್ಟು ಹಾಕಿರುವ `ಕುರುಕ್ಷೇತ’್ರ ಚಿತ್ರ ಮಾರ್ಚ್‍ಗೆ ತೆರೆಕಾಣಲಿದೆ. ದರ್ಶನ್ ಅಭಿನಯನದ 50 ನೇ ಮತ್ತು ನಿಖಿಲ್ ಅಭಿನಯನದ 2ನೇ ಚಿತ್ರ. ಎಲ್ಲರಿಗೂ ಅಭಿನಂದನೆಗಳು. ಮುಂಬರುವ ಚುನಾವಣೆಯಲ್ಲಿ ತಂದೆಗೆ ಪ್ರಚಾರದಲ್ಲಿ ನೆರವಾಗುತ್ತೇನೆ. ರಾಜಕೀಯಕ್ಕೆ ಬರುವ ಉದ್ದೇಶವಿಲ್ಲ. ಕುರುಕ್ಷೇತ್ರದ ಚಿತ್ರ ಗೆಲ್ಲುವ ವಿಶ್ವಾಸವಿದೆ. ಇದೀಗ ಬಜರಂಗಿ ಖ್ಯಾತಿಯ ಹರ್ಷ ಜೊತೆ `ಸೀತರಾಮಕಲ್ಯಾಣ’ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ ಎಂದರು.

  • ಮುನಿರತ್ನ ‘ಕುರುಕ್ಷೇತ್ರ’ದಲ್ಲಿ ದೀಪಾವಳಿ ಸಂಭ್ರಮಾಚರಣೆ

    ಮುನಿರತ್ನ ‘ಕುರುಕ್ಷೇತ್ರ’ದಲ್ಲಿ ದೀಪಾವಳಿ ಸಂಭ್ರಮಾಚರಣೆ

    ಬೆಂಗಳೂರು: ಶೂಟಿಂಗ್ ನಲ್ಲಿ ಫುಲ್ ಬ್ಯುಸಿಯಾಗಿರೋ ಮುನಿರತ್ನ ಕುರುಕ್ಷೇತ್ರ ಚಿತ್ರತಂಡ ಹೈದರಾಬಾದ್‍ನಲ್ಲಿ ದೀಪಾವಳಿ ಆಚರಿಸಿಕೊಂಡಿದೆ. ಅಭಿಮನ್ಯು ಪಾತ್ರಧಾರಿ ನಿಖಿಲ್ ಗೌಡ, ಕುರುಕ್ಷೇತ್ರದ ನಿರ್ಮಾಪಕ ಮುನಿರತ್ನ, ನಿರ್ದೇಶಕ ನಾಗಣ್ಣ ಸೇರಿದಂತೆ ಹಲವು ಸಹ ಕಲಾವಿದರು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ರು.

    ಪಟಾಕಿ ಸಿಡಿಸಿ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿಕೊಂಡ ಚಿತ್ರತಂಡ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಭೂಮಿಕೆಯ ಮಲ್ಟಿಸ್ಟಾರ್ ಕುರುಕ್ಷೇತ್ರ ಮುಂದಿನ ಸಂಕ್ರಾಂತಿಗೆ ತೆರೆಕಾಣುವ ಸಾಧ್ಯತೆಯಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಸ್ಯಾಂಡಲ್ ವುಡ್ ಖ್ಯಾತ ಕಲಾವಿದರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಎಂಬ ಖ್ಯಾತಿಯೂ ಮುನಿರತ್ನ ಕುರುಕ್ಷೇತ್ರಕ್ಕಿದೆ.