Tag: Nikhi Kumaraswamy

  • ಮುಖಂಡರು, ಕಾರ್ಯಕರ್ತರು ನಿದ್ದೆಗೆಟ್ಟು ಕೆಲಸ ಮಾಡಿದ್ದಾರೆ, ನಿಮ್ಮ ಜೊತೆ ಶಾಶ್ವತವಾಗಿ ಇರ್ತೇನೆ: ನಿಖಿಲ್ ಭರವಸೆ

    ಮುಖಂಡರು, ಕಾರ್ಯಕರ್ತರು ನಿದ್ದೆಗೆಟ್ಟು ಕೆಲಸ ಮಾಡಿದ್ದಾರೆ, ನಿಮ್ಮ ಜೊತೆ ಶಾಶ್ವತವಾಗಿ ಇರ್ತೇನೆ: ನಿಖಿಲ್ ಭರವಸೆ

    ರಾಮನಗರ: ಉಪಚುನಾವಣೆ (By Election) ಹಿನ್ನೆಲೆ, ಕಳೆದ 18 ದಿನಗಳಿಂದ ಸರಿಯಾಗಿ ನಿದ್ದೆ ಮಾಡಲಿಲ್ಲ. ಮುಖಂಡರು, ಕಾರ್ಯಕರ್ತರು ನಿದ್ದೆಗೆಟ್ಟು ಕೆಲಸ ಮಾಡಿದ್ದಾರೆ. ಈ ಚುನಾವಣೆಯಲ್ಲಿ ನನಗೆ ಪೂರಕವಾಗಿ ಜನ ಆಶೀರ್ವಾದ ಮಾಡಿದ್ದಾರೆ. ಹಿರಿಯ ನಾಗರೀಕರು, ಯುವಕರು ಹೆಚ್ಚು ಬೆಂಬಲ ನೀಡಿದ್ದಾರೆ. ಹಾಗಾಗಿ ನಿಮ್ಮ ಜೊತೆಯಲ್ಲಿ ನಾನು ಶಾಶ್ವತವಾಗಿ ಇರುತ್ತೇನೆ ಎಂದು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಭರವಸೆ ನೀಡಿದರು.

    ಚನ್ನಪಟ್ಟಣದ (Channapatna) ಎನ್‌ಡಿಎ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಉಪಚುನಾವಣೆ ನನಗೆ ಅಗ್ನಿ ಪರೀಕ್ಷೆ ಎಂದು ಹೇಳಿದ್ದೆ. ಬುಧವಾರ ಶೇ.88.80 ರಷ್ಟು ಮತದಾನ ಆಗಿದೆ. ಚನ್ನಪಟ್ಟಣ ಇತಿಹಾಸದಲ್ಲಿ ಇದು ದೊಡ್ಡ ಪ್ರಮಾಣದ ಮತದಾನವಾಗಿದೆ. ತಾಲೂಕಿನ ಜನತೆ ಒಂದು ದೊಡ್ಡ ಸಂದೇಶ ಕೊಟ್ಟಿದ್ದಾರೆ. ಹೊರಗಡೆ ನೆಲೆಸಿರುವ ಕ್ಷೇತ್ರದ ಮತದಾರರು ಬಂದು ಮತದಾನ ಮಾಡಿ ಹೋಗಿದ್ದಾರೆ. ಜೆಡಿಎಸ್-ಬಿಜೆಪಿ ಎಂಬ ತಾರತಮ್ಯ ಬಿಟ್ಟು ಎರಡೂ ಪಕ್ಷದ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಕ್ಷೇತ್ರದ ಎಲ್ಲಾ ಮತದಾರರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಯುವಕನಿಗೆ ಈ ಬಾರಿ ಅವಕಾಶ ಕೊಡುವ ತೀರ್ಮಾನ ಮಾಡಿದ್ದೀರಿ ಅನ್ನೋ ವಿಶ್ವಾಸ ಇದೆ ಎಂದರು. ಇದನ್ನೂ ಓದಿ: ಕೋವಿಡ್‌ ಅಕ್ರಮ ತನಿಖೆಗೆ ಎಸ್‌ಐಟಿ ರಚನೆ – ಬಿಎಸ್‌ವೈ ವಿರುದ್ಧ ಶೀಘ್ರ FIR ಸಾಧ್ಯತೆ!

    ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಚನ್ನಪಟ್ಟಣ ಫಲಿತಾಂಶದ ಬಗ್ಗೆ ಕುತೂಹಲ ಇದೆ. ಈ ಉಪಚುನಾವಣೆ ರಾಜ್ಯದ ಇತಿಹಾಸದ ಪುಟದಲ್ಲಿ ಉಳಿಯುತ್ತದೆ. ಈ ಉಪಚುನಾವಣೆ ನಿಖಿಲ್ ಕುಮಾರಸ್ವಾಮಿ ಉಪಚುನಾವಣೆ ಆಗಿರಲಿಲ್ಲ. ಎರಡೂ ಪಕ್ಷದ ಕಾರ್ಯಕರ್ತರ ಚುನಾವಣೆ ಆಗಿತ್ತು. ಮೊನ್ನೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾಜಿ ಅವರು ಸ್ಪಷ್ಟ ಸಂದೇಶ ಕೊಟ್ಟಿದ್ದರು. ನಡ್ಡಾರವರು ಮಾತನಾಡಿದ್ದಕ್ಕೆ ಧನ್ಯವಾದ ತಿಳಿಸುತ್ತೇನೆ. ಎರಡೂ ಪಕ್ಷದ ಕಾರ್ಯಕರ್ತರು ಒಟ್ಟಾಗಿ ಚುನಾವಣೆ ಮಾಡಿದ್ದಾರೆ ಎಂದು ಹೇಳಿದರು.

    ಕಳೆದ 18 ದಿನಗಳ ಹಿಂದೆ ಎನ್‌ಡಿಎ (NDA) ಅಭ್ಯರ್ಥಿ ಯಾರು ಆಗಬೇಕು ಎಂಬ ಪ್ರಶ್ನೆ ಉದ್ಭವ ಆಯ್ತು. ಆಗ ಮಾಜಿ ಸಿಎಂ ಬಿಎಸ್‌ವೈ ಅವರ ನಿವಾಸಕ್ಕೆ ಕರೆದು ನನ್ನ ಹೆಸರು ಘೋಷಣೆ ಮಾಡಿದ್ದರು. ಕಳೆದ ಎರಡು ಬಾರಿ ರಾಜಕೀಯ ಕುತಂತ್ರದಿಂದ ಸೋಲು ಅನುಭವಿಸಿದ್ದೇನೆ. ಈಗಲೂ ಚುನಾವಣೆಗೆ ನಿಲ್ಲುವ ಭಾವನೆ ಇರಲಿಲ್ಲ. ಆದರೆ ಕೊನೆ ಕ್ಷಣದಲ್ಲಿ ಆದ ರಾಜಕೀಯ ಪರಿಸ್ಥಿತಿಗೆ ಕಾರ್ಯಕರ್ತರು ಆತಂಕ, ಗೊಂದಲಕ್ಕೆ ಪರಿಹಾರ ಕೊಡಬೇಕಿತ್ತು. ಹಾಗಾಗಿ ಸ್ಪರ್ಧೆ ಅನಿವಾರ್ಯ ಆಯಿತು ಎಂದು ತಿಳಿಸಿದರು. ಇದನ್ನೂ ಓದಿ: Waqf Board Case: ಎಎಪಿ ಶಾಸಕ ಅಮಾನತುಲ್ಲಾ ಖಾನ್‌ಗೆ ಜಾಮೀನು

    ಕುಮಾರಸ್ವಾಮಿ ಬಗ್ಗೆ ಜಮೀರ್ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರ ಎಲ್ಲಾ ಹೇಳಿಕೆಗೂ ಜನ ಉತ್ತರ ಕೊಡ್ತಾರೆ. ನಾವು ಅವರ ಯಾವುದೇ ಹೇಳಿಕೆಗೂ ಪ್ರತಿಕ್ರಿಯೆ ನೀಡಲ್ಲ. ಗೆಲುವಿನ ಅಂತರವನ್ನ 23ನೇ ತಾರೀಖು ಜನ ನಿರ್ಧಾರ ಮಾಡ್ತಾರೆ ಎಂದರು. ಇದನ್ನೂ ಓದಿ: ನಕ್ಸಲರು ಊಟ ಮಾಡಿದ್ದ ಮನೆಗೆ ಎಎನ್‍ಎಫ್ ತಂಡ ಭೇಟಿ – ಚುರುಕುಗೊಂಡ ಕೂಂಬಿಂಗ್

  • ನಿಮ್ಮ ಜೊತೆ ಯೋಗ್ಯನಾಗಿ ಕೆಲಸ ಮಾಡಲು ಇದೊಂದು ಬಾರಿ ಅವಕಾಶ ಮಾಡಿಕೊಡಿ: ನಿಖಿಲ್‌

    ನಿಮ್ಮ ಜೊತೆ ಯೋಗ್ಯನಾಗಿ ಕೆಲಸ ಮಾಡಲು ಇದೊಂದು ಬಾರಿ ಅವಕಾಶ ಮಾಡಿಕೊಡಿ: ನಿಖಿಲ್‌

    – ಮಂಡಿಯೂರಿ ಜನತೆಗೆ ನಮಸ್ಕರಿಸಿದ ನಿಖಿಲ್‌ – ರೇವತಿ

    ರಾಮನಗರ: ಹಳ್ಳಿ-ಹಳ್ಳಿಗಳಲ್ಲಿ ನಿಖಿಲ್ ಗೆಲ್ಲಬೇಕು ಎಂದು ಜನ ಅಂದುಕೊಂಡಿದ್ದಾರೆ. ಇದು ನಿಖಿಲ್ ಭವಿಷ್ಯದ ಪ್ರಶ್ನೆ ಅಲ್ಲ, ಪ್ರಾದೇಶಿಕ ಪಕ್ಷದ ಅಸ್ತಿತ್ವದ ಪ್ರಶ್ನೆಯಾಗಿದೆ. ಈ ಭೂಮಿ ಮೇಲೆ ನಿಮ್ಮ ಜೊತೆ ಯೋಗ್ಯನಾಗಿ ಕೆಲಸ ಮಾಡಲು ಮೂರೂವರೆ ವರ್ಷ ಅವಕಾಶ ಮಾಡಿಕೊಡಿ ಎಂದು ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಜನತೆಗೆ ಮನವಿ ಮಾಡಿದ್ದಾರೆ. ಇದೇ ವೇಳೆ ಪತ್ನಿ ರೇವತಿ ಜೊತೆಗೂಡಿ ನಿಖಿಲ್‌ ಮಂಡಿಯೂರಿ ಜನರಿಗೆ ನಮಸ್ಕರಿಸಿದ್ದಾರೆ.

    ರಾಮನಗರದಲ್ಲಿ (Ramanagara) ಪ್ರಚಾರದ ವೇಳೆ ಮಾತನಾಡಿದ ಅವರು, ನಾನು ಭಾವನಾತ್ಮಕ ಜೀವಿ, ಕ್ಷಮಿಸಿ ಇದರ ಹಿಂದೆ ಬೇರೆ ಉದ್ದೇಶ ಇಲ್ಲ. ಪ್ರತೀ ಹಳ್ಳಿಯಲ್ಲಿ ತಾಯಂದಿರು ಆಶೀರ್ವಾದ ಮಾಡಿದರು. ಪ್ರತೀ ದೇವಸ್ಥಾನಗಳ ದೇವರು ಆಶೀರ್ವಾದ ಮಾಡಿದ್ದಾರೆ. ನನಗೊಂದು ಅವಕಾಶ ಮಾಡಿಕೊಡುವ ಆತ್ಮಸ್ಥೈರ್ಯ ಇಲ್ಲಿನ ಜನ ಮೂಡಿಸಿದ್ದಾರೆ ಅದಕ್ಕಾಗಿ, ಇದನ್ನು ಕಂಡು ನಾನೆಂಥ ಪುಣ್ಯವಂತ ಅನ್ನಿಸಿತು. ಹಳ್ಳಿ ಹಳ್ಳಿಗಳಲ್ಲಿ ನಿಖಿಲ್ ಗೆಲ್ಲಬೇಕೆಂದು ಜನ ಅಂದುಕೊಂಡಿದ್ದಾರೆ. ಇದು ನಿಖಿಲ್ ಭವಿಷ್ಯದ ಪ್ರಶ್ನೆ ಅಲ್ಲ, ಪ್ರಾದೇಶಿಕ ಪಕ್ಷದ ಅಸ್ತಿತ್ವದ ಪ್ರಶ್ನೆಯಾಗಿದೆ. ಮೂರೂವರೆ ವರ್ಷ ಅವಕಾಶ ಮಾಡಿಕೊಡಿ ನಾನು ಹೇಗೆ ಕೆಲಸ ಮಾಡುತ್ತೇನೆ ಎಂದು ನೀವೇ ನೋಡಿ ಎಂದು ವೇದಿಕೆ ಮೇಲೆ ಪತಿ-ಪತ್ನಿ ಜೊತೆಯಾಗಿ ಕೈಮುಗಿದು ಮತ ಯಾಚನೆ ಮಾಡಿದರು. ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆಗೆ 5,000 ಕೋಟಿ ಅಕ್ರಮವಾಗಿ ಕಳಿಸಿದ್ದಾರೆ: ಮೋದಿ ಬಳಿಕ ಹೆಚ್‌ಡಿಡಿ ಬಾಂಬ್‌

    ದೇವೇಗೌಡರು ಮೊಮ್ಮಗನನ್ನು ಗೆಲ್ಲಿಸಲು ಆಂಬುಲೆನ್ಸ್‌ನಲ್ಲಿ ಬರುತ್ತಾರೆ ಎಂದು ವಿರೋಧ ಪಕ್ಷದ ನಾಯಕರೊಬ್ಬರು ಹೇಳಿದ್ದರು. ಚನ್ನಪಟ್ಟಣದಲ್ಲಿ (Channapatna) ನಿಖಿಲ್ ನಿಂತಿದ್ದಾನೆ ಎಂದು ದೇವೇಗೌಡರು ಬಂದು ಪ್ರಚಾರ ಮಾಡುತ್ತಿದ್ದಾರೆ ಅನ್ನುವ ಪ್ರಶ್ನೆ ಅಲ್ಲ. ಯಾವುದೇ ಸಾಮಾನ್ಯ ಕಾರ್ಯಕರ್ತ ನಿಂತಿದ್ದರೂ ದೇವೇಗೌಡರು (HDDevegowda) ಪ್ರಚಾರಕ್ಕೆ ಬರುತ್ತಿದ್ದರು. ಈ ಜಿಲ್ಲೆಗೂ ದೇವೇಗೌಡರಿಗೂ ಬಹಳ ಹಳೆಯ ನಂಟಿದೆ. ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದೇನೆ. ಈಗ ನಾನು ನಿಲ್ಲುವುದಿಲ್ಲ, ಪಕ್ಷ ಕಟ್ಟೋದಿಕ್ಕೆ ಸ್ವಲ್ಪ ಸಮಯ ಕೊಡಿ ಎಂದು ಹೇಳಿದ್ದೆ. ನಂತರ ಏನೇನಾಯ್ತು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಸದ್ಯದಲ್ಲೇ ನನ್ನ ನಿಶ್ಚಿತಾರ್ಥ: ಮದುವೆಯಾಗಲಿರುವ ಹುಡುಗನ ಬಗ್ಗೆ ಸೋನು ಓಪನ್‌ ಟಾಕ್

    ವರದೇಗೌಡರು ನಮ್ಮ ಪಕ್ಷದಿಂದ ಶಾಸಕರಾಗಿ ಮನೆ ಮಗನಾಗಿ ಇಲ್ಲಿ ಕೆಲಸ ಮಾಡಿದವರು. ಇವರೆಲ್ಲ ನನಗೆ ಆದರ್ಶ ಹಾಗೂ ಸ್ಫೂರ್ತಿಯಾಗಿದ್ದಾರೆ. ಈ ಚುನಾವಣೆ ನನ್ನ ಬದುಕಿನ ಬಹುದೊಡ್ಡ ಅಗ್ನಿಪರೀಕ್ಷೆಯಾಗಿದೆ. ನೀನು ಇಲ್ಲಿ ಯಾವ ಪಾತ್ರ ಮಾಡ್ತೀಯಪ್ಪ ಎಂದು ಹಲವರು ಕೇಳುತ್ತಾರೆ. ಕುರುಕ್ಷೇತ್ರ ಸಿನೆಮಾದಲ್ಲಿ ನಾನು ಅಭಿಮನ್ಯು ಆಗಿದ್ದೆ. ನಾನು ಅರ್ಜುನನಾ ಅಥವಾ ಅಭಿಮನ್ಯುನಾ ಎಂದು ಚನ್ನಪಟ್ಟಣ ಜನರೇ ನಿರ್ಧಾರ ಮಾಡುತ್ತಾರೆ. ನನಗೆ ಗೊತ್ತಿರುವುದು ಮನುಷ್ಯತ್ವ ಮಾತ್ರ ಎಂದರು. ಇದನ್ನೂ ಓದಿ: ರಾಮಮಂದಿರ ಸೇರಿ ಹಿಂದೂ ದೇವಾಲಯಗಳ ಮೇಲೆ ದಾಳಿ ಬೆದರಿಕೆ; ಖಲಿಸ್ತಾನಿ ಉಗ್ರ ಪನ್ನುನ್ ವೀಡಿಯೋ ರಿಲೀಸ್‌

    ಇದು ಕುಮಾರಣ್ಣ (H D Kumaraswamy) ಅವರ ಸ್ವಕ್ಷೇತ್ರ, ಅವರು ಸಂಸದರಾದ ಹಿನ್ನೆಲೆ ಕ್ಷೇತ್ರ ತೆರವಾಯಿತು. ಕಳೆದ ಎರಡು ಮೂರು ತಿಂಗಳ ಬೆಳವಣಿಗೆ ಎಲ್ಲರಿಗೂ ಗೊತ್ತಿದೆ. ಈ ಉಪಚುನಾವಣೆ ನನ್ನ ಪಾಲಿಗೆ ಅನಿರೀಕ್ಷಿತವಾಗಿದೆ. ಕಳೆದೆರಡು ಸೋಲುಗಳಿಂದ ನನ್ನ ಎದೆ ಗುಂದಲಿಲ್ಲ. ಮಂಡ್ಯದಲ್ಲಿ 5.45 ಲಕ್ಷ ಜನ ಆಶೀರ್ವಾದ ಮಾಡಿದರು, ಆದರೆ ವಿಪರ್ಯಾಸ ಗೆಲ್ಲಲು ಆಗಲಿಲ್ಲ. ಅದಕ್ಕೆ ಅನೇಕ ಕಾರಣ ಇದ್ದವು ಈಗ ಅದನ್ನು ಮಾತನಾಡುವುದಿಲ್ಲ. ರಾಮನಗರದಲ್ಲೂ ಕೊನೆಯ ಕ್ಷಣದಲ್ಲಿ ನನ್ನ ಸ್ಪರ್ಧೆಯ ತೀರ್ಮಾನ ಆಯ್ತು. 76.5 ಸಾವಿರ ಜನ ನನಗೆ ಆಶೀರ್ವಾದ ಮಾಡಿದರು. ಅಲ್ಲಿನ ಸೋಲಿಗೆ ಕಾಂಗ್ರೆಸ್ ಗಿಫ್ಟ್ ಕೂಪನ್ ಕಾರ್ಡ್ ಕಾರಣವಾಗಿದೆ. ಯಾವ ಕೂಪನ್, ಯಾವ ಆಮಿಷಕ್ಕೂ ಚನ್ನಪಟ್ಟಣದ ಜನ ಬಲಿಯಾಗುವುದಿಲ್ಲ ಅನ್ನುವ ವಿಶ್ವಾಸ ನನಗಿದೆ ಎಂದು ತಿಳಿಸಿದರು. ಇದನ್ನೂ  ಓದಿ: 6.79 ಲಕ್ಷಕ್ಕೆ 5 ಸ್ಟಾರ್ ಸೇಫ್ಟಿ ರೇಟೆಡ್ ಡಿಸೈರ್ ಕಾರು ಬಿಡುಗಡೆ