Tag: niharika movies

  • ಜಮಾಲಿಗುಡ್ಡದ ಕಥೆ ಹೇಳಲು ಡಾಲಿ, ಅದಿತಿ ರೆಡಿ

    ಜಮಾಲಿಗುಡ್ಡದ ಕಥೆ ಹೇಳಲು ಡಾಲಿ, ಅದಿತಿ ರೆಡಿ

    ಟರಾಕ್ಷಸ ಧನಂಜಯ್ ನಟನೆಯ ʻOnce Upon a Time In ಜಮಾಲಿಗುಡ್ಡʼ ಸಿನಿಮಾ ತೆರೆಗೆ ಬರಲು ಕೌಂಟ್‌ಡೌನ್ ಶುರುವಾಗಿದೆ. ಈ ವರ್ಷದ ಅಂತ್ಯಕ್ಕೆ ಡಾಲಿ ಮತ್ತು ಅದಿತಿ ಜೋಡಿ, ಮೋಡಿ ಮಾಡಲು ಸಜ್ಜಾಗಿದ್ದಾರೆ.

    ನಿಹಾರಿಕಾ ಮೂವೀಸ್ (Niharika Movies) ನಿರ್ಮಾಣದ `ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರಕ್ಕೆ ಕುಶಾಲ್ ಗೌಡ ನಿರ್ದೇಶನ ಮಾಡಿದ್ದಾರೆ. ಇದೊಂದು 90ರ ದಶಕದ ಕಾಲ್ಪನಿಕ ಪ್ರಪಂಚದ ಭಾವನಾತ್ಮಕ ಕಥೆಯಾಗಿದ್ದು, ಧನಂಜಯ್ ಮತ್ತು ಬೇಬಿ ಪ್ರಾಣ್ಯ ನಡುವಿನ ಸನ್ನಿವೇಶಗಳು ಸುಂದರವಾಗಿ ಮೂಡಿ ಬಂದಿದೆ. ಈ ಚಿತ್ರವನ್ನು ಚಿಕ್ಕಮಗಳೂರು ಮತ್ತು ಬಾಬಾಬುಡನ್‌ಗಿರಿ ಸೇರಿದಂತೆ ಹಲವೆಡೆ ಚಿತ್ರೀಕರಿಸಲಾಗಿದೆ. ಇದನ್ನೂ ಓದಿ: ಬಾಲಿವುಡ್‌ನಿಂದ ಬಂತು ಬಿಗ್ ಆಫರ್: ಬನ್ಸಾಲಿ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ

    ಚಿತ್ರದಲ್ಲಿ ನಟ ಡಾಲಿ ಮುಗ್ಧ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಲುಕ್‌ನಲ್ಲಿ ಮಿಂಚಿದ್ದಾರೆ. ಅದ್ಭುತ ಪ್ರೇಮಕಥೆ, ಆ್ಯಕ್ಷನ್, ಬಾಂಧವ್ಯ, ಪ್ರತಿಯೊಂದನ್ನ ಕೂಡ ಗಮನದಲ್ಲಿಟ್ಟುಕೊಂಡು ಈ ಸಿನಿಮಾ ರೂಪಿಸಲಾಗಿದೆ. ಖಡಕ್ ಪಾತ್ರಗಳ ಮೂಲಕ ಡಾಲಿನ ನೋಡಿದ್ದ ಅಭಿಮಾನಿಗಳಿಗೆ ಈ ಚಿತ್ರದಲ್ಲಿನ ಡಾಲಿ ಪಾತ್ರ ಗಮನ ಸೆಳೆಯಲಿದೆ.

    ಇನ್ನೂ ನಟಿ ಅದಿತಿ ಪ್ರಭುದೇವಾ (Aditi Prabhudeva) ಕೂಡ ಮೊದಲ ಬಾರಿಗೆ ಧನಂಜಯ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಅದಿತಿ ಕೂಡ ಮಧ್ಯಮ ವರ್ಗದ ಸಿಂಪಲ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಟಿ ಸಿಗರೇಟ್ ಕೂಡ ಸೇದಿದ್ದಾರಂತೆ. ಡಾಲಿ, ಅದಿತಿ ಜೊತೆ ಭಾವನಾ (Bhavana) ಕೂಡ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರದಲ್ಲಿ ಧನಂಜಯ್, ಅದಿತಿ, ಭಾವನಾ, ಪ್ರಕಾಶ್ ಬೆಳವಾಡಿ, ಪ್ರಾಣ್ಯ, ಯಶ್ ಶೆಟ್ಟಿ, ತ್ರಿವೇಣಿ ರಾವ್ ನಟಿಸಿದ್ದಾರೆ.

    ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ಮೂಲಕ ಅಭಿಮಾನಿಗಳ ಗಮನ ಸೆಳೆದಿರುವ `ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಇದೇ ಡಿಸೆಂಬರ್ 30ಕ್ಕೆ ತೆರೆಗೆ ಅಪ್ಪಳಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • ಮಯೂರಿಯ ‘ಮೌನಂ’ ಮೂಡ್!

    ಮಯೂರಿಯ ‘ಮೌನಂ’ ಮೂಡ್!

    ಕಿರುತೆರೆಯಲ್ಲಿ ನಾಯಕಿ ಪಾತ್ರ ಮಾಡಿ ಪ್ರಸಿದ್ಧಿ ಪಡೆಯುತ್ತಲೇ ಹಿರಿತೆರೆಗೂ ನಾಯಕಿಯರಾಗಿ ಎಂಟ್ರಿ ಕೊಟ್ಟವರ ಪಟ್ಟಿ ದೊಡ್ಡದಿದೆ. ಅದರಲ್ಲಿ ಯಶಸ್ವಿಯಾದವರ ಪಟ್ಟಿಯೂ ಮತ್ತೊಂದಿದೆ. ಅದರಲ್ಲಿ ತಮ್ಮ ಹೆಸರನ್ನೂ ಛಾಪಿಸಿಕೊಂಡಿರೋ ನಟಿ ಮಯೂರಿ. ಜಯ ಕಾರ್ತಿಕ್ ಅವರಿಗೆ ಜೋಡಿಯಾಗಿ ನಟಿಸಿ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದ ಮಯೂರಿಯೀಗ ಸ್ಯಾಂಡಲ್‍ವುಡ್ಡಿನ ಬೇಡಿಕೆಯ ನಟಿಯಾಗಿಯೂ ಹೊರ ಹೊಮ್ಮಿದ್ದಾರೆ.

    ಕೃಷ್ಣಲೀಲಾ ಚಿತ್ರದ ಮೂಲಕ ಅಜೇಯ್ ರಾವ್ ಜೋಡಿಯಾಗಿ ಹಿರಿತೆರೆಗೆ ಪಾದಾರ್ಪಣೆ ಮಾಡಿದ್ದ ಮಯೂರಿ ಆ ನಂತರದಲ್ಲಿ ಬ್ಯುಸಿಯಾಗಿದ್ದಾರೆ. ಹೀಗೆ ಆರಂಭಿಕ ಹೆಜ್ಜೆಯಲ್ಲಿಯೇ ಚಿತ್ರರಂಗದಲ್ಲಿಯೂ ಗೆಲುವು ದಾಖಲಿಸಿದ ಅವರೀಗ ಮೌನಂ ಮೂಡಿಗೆ ಜಾರಿದ್ದಾರೆ!

    ಮೌನಂ ಮಯೂರಿ ನಾಯಕಿಯಾಗಿ ನಟಿಸಿರೋ ಹೊಸ ಚಿತ್ರದ ಶೀರ್ಷಿಕೆ. ನಿಹಾರಿಕಾ ಮೂವೀಸ್ ಬ್ಯಾನರಿನಡಿಯಲ್ಲಿ ಶ್ರೀಹರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಾಜ್ ಪಂಡಿತ್ ನಿರ್ದೇಶನದ ಈ ಚಿತ್ರದಲ್ಲಿ ಮಯೂರಿ ಎರಡು ಶೇಡ್ ಗಳಿರೋ ಪಾತ್ರದಲ್ಲಿ ನಟಿಸಿದ್ದಾರಂತೆ. ಅದರಲ್ಲೊಂದು ಮೌನಗೌರಿಯಂಥಾ ಹೋಮ್ಲೀ ಪಾತ್ರವಾದರೆ ಮತ್ತೊಂದು ಪಕ್ಕಾ ಮಾಸ್ ಶೇಡಿನ ಪಾತ್ರವಂತೆ.

    ವಿಶೇಷವೆಂದರೆ, ಎರಡನೇ ಶೇಡಿನ ಪಾತ್ರದಲ್ಲಿ ಮಯೂರಿ ಪಕ್ಕಾ ಆಕ್ಷನ್ ಮೂಡಿನಲ್ಲಿಯೂ ನಟಿಸಿದ್ದಾರಂತೆ. ಇದು ಅವರ ಪಾಲಿಗೆ ಹೊಸಾ ಅನುಭವ. ಇದಕ್ಕಾಗಿ ಸಾಕಷ್ಟು ತಯಾರಿ ನಡೆಸಿಕೊಂಡೇ ಮಯೂರಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ವಿಶಿಷ್ಟವಾದ ಕಥೆ ಹೊಂದಿರೋ ಈ ಚಿತ್ರದಲ್ಲಿ ಪ್ರತೀ ಪಾತ್ರಗಳೂ ವಿಭಿನ್ನವಾಗಿರಲಿವೆಯಂತೆ. ಅವಿನಾಶ್ ಕೂಡಾ ಅಷ್ಟೇ ಭಿನ್ನವಾದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರ ಪಾತ್ರಕ್ಕೆ ಬರೋಬ್ಬರಿ ಆರು ಶೇಡುಗಳಿವೆಯಂತೆ.

    ಜೀವನಕ್ಕೆ ಹತ್ತಿರವಾದ ಕಥೆ ಹೊಂದಿರೋ ಈ ಚಿತ್ರವೀಗ ಎಲ್ಲ ಕೆಲಸ ಕಾರ್ಯಗಳನ್ನೂ ಮುಗಿಸಿಕೊಳ್ಳುತ್ತಾ ಬೇಗನೆ ಪ್ರೇಕ್ಷಕರಿಗೆ ಮುಖಾಮುಖಿಯಾಗುವ ಸನ್ನಾಹದಲ್ಲಿದೆ. ಮೌನಂ ತಮ್ಮ ಚಿತ್ರ ಜೀವನಕ್ಕೆ ಹೊಸ ಓಘ ಮತ್ತು ಮತ್ತೊಂದಷ್ಟು ಅವಕಾಶಗಳನ್ನು ತಂದು ಕೊಡಲಿದೆ ಎಂಬ ಗಾಢ ಭರವಸೆ ಮಯೂರಿಯದ್ದು.