Tag: Niharika Konidela

  • ‘ಮೆಗಾ’ ಫ್ಯಾಮಿಲಿಯಲ್ಲಿ ಮತ್ತೊಂದು ಡಿವೋರ್ಸ್- ದಾಂಪತ್ಯಕ್ಕೆ ಅಂತ್ಯ ಹಾಡಿದ ನಿಹಾರಿಕಾ

    ‘ಮೆಗಾ’ ಫ್ಯಾಮಿಲಿಯಲ್ಲಿ ಮತ್ತೊಂದು ಡಿವೋರ್ಸ್- ದಾಂಪತ್ಯಕ್ಕೆ ಅಂತ್ಯ ಹಾಡಿದ ನಿಹಾರಿಕಾ

    ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಕುಟುಂಬದಲ್ಲಿ ಮತ್ತೊಂದು ಡಿವೋರ್ಸ್ (Divorce) ಆಗಿದೆ. ಚಿರಂಜೀವಿ ಮನೆ ಮಗಳು ನಿಹಾರಿಕಾ ದಾಂಪತ್ಯಕ್ಕೆ ಬ್ರೇಕ್ ಬಿದ್ದಿದೆ. ಹಲವು ವರ್ಷಗಳ ಪ್ರೀತಿಗೆ ನಟಿ ಡಿವೋರ್ಸ್ ನೀಡುವ ಮೂಲಕ ಅಂತ್ಯ ಹಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪುತ್ರಿ ಶ್ರೀಜಾ ದಾಂಪತ್ಯಕ್ಕೆ ಬ್ರೇಕ್ ಬಿದ್ದ ಬೆನ್ನಲ್ಲೇ ನಿಹಾರಿಕಾ (Niharika) ಕೂಡ ಡಿವೋರ್ಸ್ ಹಾದಿ ಹಿಡಿದಿದ್ದಾರೆ.

    ಟಾಲಿವುಡ್‌ನ ನಟ ಚಿರಂಜೀವಿ ಅವರ ಸಹೋದರ, ನಟ ನಾಗ ಬಾಬು ಪುತ್ರಿ ನಿಹಾರಿಕಾ ಕೊನಿಡೆಲಾ ಅವರ ದಾಂಪತ್ಯಕ್ಕೆ ಬ್ರೇಕ್ ಬಿದ್ದಿದೆ ಎಂಬ ಸುದ್ದಿ ಹಲವು ದಿನಗಳಿಂದ ಕೇಳಿಬರುತ್ತಲೇ ಇತ್ತು. ಆದರೆ ಈ ಬಗ್ಗೆ ಯಾರೊಬ್ಬರು ಅಧಿಕೃತವಾಗಿ ತಿಳಿಸಿರಲಿಲ್ಲ. ಇದೀಗ ಸಿಕ್ಕಿರುವ ಅಧಿಕೃತ ಮಾಹಿತಿ ಪ್ರಕಾರ, ನಿಹಾರಿಕಾ- ಚೈತನ್ಯ ಜೊನ್ನಲಗಡ್ಡ ದಾಂಪತ್ಯ ಬದುಕು ಅಂತ್ಯಗೊಂಡಿದ್ದು, ಈಗಾಗಲೇ ಇಬ್ಬರಿಗೂ ಕೌಟುಂಬಿಕ ನ್ಯಾಯಾಲಯವು ಡಿವೋರ್ಸ್‌ಗೆ ಮಂಜೂರು ನೀಡಿದೆ ಎನ್ನಲಾಗಿದೆ. ಆದರೆ ಈ ಡಿವೋರ್ಸ್‌ಗೆ ಕಾರಣವೇನು ಎಂಬುದು ಮಾತ್ರ ತಿಳಿದು ಬಂದಿಲ್ಲ.

    ನಟಿ ನಿಹಾರಿಕಾ ಅವರ ಮದುವೆಯು ಪ್ರಭಾಕರ್ ರಾವ್ ಅವರ ಪುತ್ರ ಚೈತನ್ಯ ಜೊನ್ನಲಗಡ್ಡ ಅವರ ಜೊತೆ 2020ರ ಡಿಸೆಂಬರ್ 9ರಂದು ನಡೆದಿತ್ತು. ರಾಜಸ್ಥಾನದ ಉದಯಪುರದಲ್ಲಿನ ಒಬೆರಾಯ್ ಉದಯ್ ವಿಲಾಸ್‌ನಲ್ಲಿ ಅದ್ದೂರಿಯಾಗಿ ನಡೆದಿತ್ತು. ಇಡೀ ಮೆಗಾ ಸ್ಟಾರ್ ಕುಟುಂಬವು ಮದುವೆಗೆ ಹಾಜರಾಗಿತ್ತು. ವೈಭವದಿಂದ ನಡೆದಿಂದ ಮದುವೆಯಲ್ಲಿ ಇಡೀ ಕುಟುಂಬವು ಹಾಡಿ ಕುಣಿದಿತ್ತು. ಆದರೆ ನಿಹಾರಿಕಾ ಅವರ ಮದುವೆ ಕೇವಲ ಎರಡೂವರೆ ವರ್ಷಗಳಲ್ಲಿ ಮುರಿದುಬಿದ್ದಿರುವುದು ಬೇಸರದ ವಿಷ್ಯವಾಗಿದೆ. ಇದನ್ನೂ ಓದಿ:3ನೇ ಪತ್ನಿಯಿಂದಲೂ ದೂರಾವಾದ್ರಾ ನಟ ಪವನ್ ಕಲ್ಯಾಣ್?

    ನಿಹಾರಿಕಾ ಮತ್ತು ಚೈತನ್ಯ ಪರಸ್ಪರ ಒಪ್ಪಿಗೆಯೊಂದಿಗೆ ನ್ಯಾಯಾಲಯದಲ್ಲಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದರು. ನಿಹಾರಿಕಾ ಡಿವೋರ್ಸ್ ವಿಷಯವು ಸಾಕಷ್ಟು ಚರ್ಚೆ ಆಗಿತ್ತು. ನಿಹಾರಿಕಾ- ಚೈತನ್ಯ ಇನ್ಸ್ಟಾಗ್ರಾಂನಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ. ನಿಹಾರಿಕಾ ಅವರು ಮದುವೆಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡಿದ್ರು. ಅತ್ತ ಚೈತನ್ಯ ಅವರ ಕೂಡ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನಿಹಾರಿಕಾ ಜೊತೆಗಿದ್ದ ಎಲ್ಲ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಇದು ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಅನುಮಾನವನ್ನು ಹುಟ್ಟುಹಾಕಿತ್ತು. ಇಬ್ಬರು ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ವದಂತಿಯು ಎಲ್ಲ ಕಡೆ ಹಬ್ಬಿಕೊಂಡಿತ್ತು. ಇದೀಗ ವದಂತಿ ನಿಜವಾಗಿದೆ.

    ಇದರ ಜೊತೆ ಮೆಗಾ ಫ್ಯಾಮಿಲಿ ನಟ ಪವನ್ ಕಲ್ಯಾಣ್ (Pawan Kalyan) ಮೂರನೇ ಮದುವೆಯೂ ಮುರಿದುಬಿತ್ತಾ? ಹೀಗೊಂದು ಅನುಮಾನ ಕಾಡುತ್ತಿದೆ. ಟಾಲಿವುಡ್ ಸ್ಟಾರ್ ಪವನ್ ಈಗಾಗಲೇ ಎರಡು ಮದುವೆಗಳನ್ನು ಮುರಿದುಕೊಂಡಿದ್ದು, ಮೂರನೇ ಮದುವೆ ಆಗಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ಈಗ ನೋಡಿದರೆ ಮೂರನೇ ಪತ್ನಿಗೂ ಡಿವೋರ್ಸ್ ನೀಡಿದ್ದಾರಾ ಎನ್ನುವ ಗುಮಾನಿ ಎದ್ದಿದೆ. ಒಟ್ನಲ್ಲಿ ಪವನ್ ಕಲ್ಯಾಣ್, ಶ್ರೀಜಾರಂತೆಯೇ ನಿಹಾರಿಕಾ ಕೂಡ ದಾಂಪತ್ಯದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವರುಣ್, ಲಾವಣ್ಯ ನಿಶ್ಚಿತಾರ್ಥದಲ್ಲಿ ನಿಹಾರಿಕಾ ಪತಿ ಗೈರು- ಡಿವೋರ್ಸ್ ಸುದ್ದಿಗೆ ಸಿಕ್ತು ಸಾಕ್ಷಿ

    ವರುಣ್, ಲಾವಣ್ಯ ನಿಶ್ಚಿತಾರ್ಥದಲ್ಲಿ ನಿಹಾರಿಕಾ ಪತಿ ಗೈರು- ಡಿವೋರ್ಸ್ ಸುದ್ದಿಗೆ ಸಿಕ್ತು ಸಾಕ್ಷಿ

    ಮೆಗಾಸ್ಟಾರ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಜೂನ್ 9ಕ್ಕೆ ವರುಣ್ ತೇಜ್- ಲಾವಣ್ಯ(Lavanya) ಎಂಗೇಜ್‌ಮೆಂಟ್ ಅದ್ದೂರಿಯಾಗಿ ನಡೆಯಿತು. ಕುಟುಂಬಸ್ಥರು, ಆಪ್ತರಿಗಷ್ಟೇ ಇದ್ದ ಆಹ್ವಾನದಲ್ಲಿ ನಟ ಚಿರಂಜೀವಿ ಅವರ ಅಳಿಯ ಚೈತನ್ಯ ಜಿವಿ ಗೈರಾಗಿದ್ದು, ನಿಹಾರಿಕಾ(Niharika) ಡಿವೋರ್ಸ್ (Divorce) ವಿಚಾರಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

    ಮೆಗಾ ಪ್ರಿನ್ಸ್ ವರುಣ್-ಲಾವಣ್ಯ ಮೊದಲು ಭೇಟಿಯಾಗಿದ್ದು, 2016ರಲ್ಲಿ ಬಳಿಕ 2017ರಲ್ಲಿ ಇಬ್ಬರು ಮಿಸ್ಟರ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾದ ಶೂಟಿಂಗ್ ವೇಳೆ ವರುಣ್ ತೇಜ್, ಲಾವಣ್ಯ ತ್ರಿಪಾಠಿ ಇಬ್ಬರೂ ಕ್ಲೋಸ್ ಆಗಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದವರು ಬರಬರುತ್ತಾ ಪ್ರೀತಿಯಲ್ಲಿ ಬಿದ್ದಿದ್ದರು. ಇದನ್ನೂ ಓದಿ:ಮೊದಲ ವರ್ಷದ ವಿವಾಹ ಸಂಭ್ರಮದಲ್ಲಿ ‘ಸ್ವಯಂವಿವಾಹಿತೆ’ ಕ್ಷಮಾ ಬಿಂದು

    ಇಬ್ಬರೂ ಡೇಟಿಂಗ್ ಮಾಡುತ್ತಿದ್ದರೂ, ಅದು ಪಬ್ಲಿಕ್ ಆಗದಂತೆ ನೋಡಿಕೊಂಡಿದ್ದಾರೆ. ಹಲವು ವರ್ಷಗಳವರೆಗೂ ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಷಯ ಗೊತ್ತೇ ಇರಲಿಲ್ಲ. ಆದರೆ, ಅಂತರಿಕ್ಷಂ ಸಿನಿಮಾದ ವೇಳೆ ಇಬ್ಬರ ಬಗ್ಗೆ ಮೊದಲ ಬಾರಿಗೆ ಗಾಳಿಸುದ್ದಿ ಹಬ್ಬಿತ್ತು. ಅಲ್ಲಿಂದ ಎಂಗೇಜ್‌ಮೆಂಟ್ ಆಗುವವರೆಗೂ ಪ್ರೀತಿಯ ಬಗ್ಗೆ ಎಲ್ಲೂ ಈ ಜೋಡಿ ರಿಯಾಕ್ಟ್ ಮಾಡಿರಲಿಲ್ಲ. ಇದೀಗ ವರುಣ್-ಲಾವಣ್ಯ ಅವರ ಎಂಗೇಜ್‌ಮೆಂಟ್‌ನಲ್ಲಿ ನಿಹಾರಿಕಾ ಪತಿ ಚೈತನ್ಯ ಗೈರಾಗಿರೋದು ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.

    ಈ ದಿನಕ್ಕಾಗಿ ಕಾಯುತ್ತಿದ್ದೆ, ನನ್ನ ಕುಟುಂಬಕ್ಕೆ ಸ್ವಾಗತ ಅಂತಾ ಸಹೋದರ ವರುಣ್ (Varun Tej) ಮತ್ತು ಭಾವಿ ಅತ್ತಿಗೆ ಜೊತೆ ಖುಷಿಯಿಂದ ಪೋಸ್ ಕೊಟ್ಟಿರುವ ಫೋಟೋವನ್ನ ನಟಿ ನಿಹಾರಿಕಾ ಪೋಸ್ಟ್‌ ಮಾಡಿದ್ದಾರೆ. ಈ ಫೋಟೋ ಅಪ್‌ಲೋಡ್ ಮಾಡ್ತಿದ್ದಂತೆ ಚೈತನ್ಯ ಎಲ್ಲಿ ಎಂದು ನಟಿ ಕಾಮೆಂಟ್ಸ್‌ಗಳ ಮೂಲಕ ಫ್ಯಾನ್ಸ್ ಪ್ರಶ್ನೆ ಮಾಡಿದ್ದಾರೆ.

    ವರುಣ್ ನಿಶ್ಚಿತಾರ್ಥದ ಸಂಭ್ರಮದಲ್ಲಿ ಚೈತನ್ಯ ಮಿಸ್ಸಿಂಗ್ ಆಗಿರೋದು ನಿಹಾರಿಕಾ ಜೊತೆಗಿನ ಡಿವೋರ್ಸ್ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಮೂಲಗಳ ಪ್ರಕಾರ, ನಿಹಾರಿಕಾ- ಚೈತನ್ಯ (Chaitanya) ಡಿವೋರ್ಸ್ ಪಡೆದಿರುವುದು ನಿಜ. ಹಾಗಾಗಿ ಇದೀಗ ನಿಹಾರಿಕಾ, ಆಕ್ಟಿಂಗ್-ನಿರ್ಮಾಣ ಅಂತಾ ಬ್ಯುಸಿಯಾಗಿದ್ದಾರೆ. ಮೆಗಾಸ್ಟಾರ್ ಕುಟುಂಬದಲ್ಲಿ ಮಕ್ಕಳಾದ ಶ್ರೀಜಾ, ನಿಹಾರಿಕಾ ಡಿವೋರ್ಸ್ ವಿಚಾರ ಸದ್ಯ ಟಾಲಿವುಡ್ ಹಾಟ್ ಟಾಪಿಕ್ ಆಗಿದೆ.

  • ಸಹೋದರ ವರುಣ್ ತೇಜ್- ಲಾವಣ್ಯ ಮದುವೆ ಬಗ್ಗೆ ನಿಹಾರಿಕಾ ಪ್ರತಿಕ್ರಿಯೆ

    ಸಹೋದರ ವರುಣ್ ತೇಜ್- ಲಾವಣ್ಯ ಮದುವೆ ಬಗ್ಗೆ ನಿಹಾರಿಕಾ ಪ್ರತಿಕ್ರಿಯೆ

    ಮೆಗಾಸ್ಟಾರ್ ಚಿರಂಜೀವಿ ಮನೆಮಗಳು ನಿಹಾರಿಕಾ ಕೊನಿಡೆಲಾ (Niharika Konidela)  ಅವರು ತಮ್ಮ ಅಭಿಮಾನಿಗಳಿಗೆ ಮತ್ತೆ ನಟನೆಗೆ ಕಮ್‌ಬ್ಯಾಕ್ ಆಗುವ ಮೂಲಕ ಸಿಹಿಸುದ್ದಿ ನೀಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ವರುಣ್ ತೇಜ್ (Varun Tej) ಮತ್ತು ಲಾವಣ್ಯ ತ್ರಿಪಾಠಿ ಮದುವೆ ಬಗ್ಗೆ ಕೇಳಲಾಗಿದ್ದು, ಈ ಬಗ್ಗೆ ಅವರು ರಿಯಾಕ್ಟ್ ಮಾಡಿದ್ದಾರೆ.

    ನಿಹಾರಿಕಾ ಕೊನಿಡೆಲಾ ಅವರು ನಿರ್ಮಾಪಕಿ, ನಟಿಯಾಗಿ ಮತ್ತೆ ತೆಲುಗು ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ‘ಡೆಡ್ ಪಿಕ್ಸೆಲ್’ ವೆಬ್ ಸೀರಿಸ್‌ಗೆ ಬಣ್ಣ ಹಚ್ಚುವ ಮೂಲಕ ನಿಹಾರಿಕಾ ಸುದ್ದಿಯಲ್ಲಿದ್ದಾರೆ. ವೆಬ್ ಸೀರಿಸ್ ಪ್ರಚಾರ ಕಾರ್ಯದಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ಅತೀ ಶೀಘ್ರದಲ್ಲೇ 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ ದಿ ಕೇರಳ ಸ್ಟೋರಿ

    ಇತ್ತೀಚಿನ ಸಂದರ್ಶನವೊಂದರಲ್ಲಿ ನಿಹಾರಿಕಾಗೆ, ಸಹೋದರ ವರುಣ್- ಲಾವಣ್ಯ (Lavanya) ಮದುವೆ ಸುದ್ದಿ ಬಗ್ಗೆ ಪ್ರಶ್ನೆ ಎದುರಾಗಿದೆ. ಆಗ ಈ ಪ್ರಶ್ನೆಯನ್ನ ನಟಿ ನಿರಾಕರಿಸಿ, ‘ಡೆಡ್ ಪಿಕ್ಸೆಲ್’ ಬಗ್ಗೆ ಮಾತನಾಡೋಣ ಎಂದಿದ್ದಾರೆ. ಈ ಮೂಲಕ ನೋ ಕಾಮೆಂಟ್ಸ್ ಎಂದಿದ್ದಾರೆ.

    ಮೂಲಗಳ ಪ್ರಕಾರ, ವರುಣ್- ಲಾವಣ್ಯ ಇದೇ ಜೂನ್‌ಗೆ ಎಂಗೇಜ್‌ಮೆಂಟ್ ಮಾಡಿಕೊಳ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವರ್ಷದ ಅಂತ್ಯದಲ್ಲಿ ಮದುವೆ ಎಂಬ ಸುದ್ದಿ ಇದೆ. ಮೆಗಾ ಫ್ಯಾಮಿಲಿಗೆ ಲಾವಣ್ಯ ಆತ್ಮೀಯರಾಗಿದ್ದಾರೆ.  2 ವರ್ಷಗಳ ಹಿಂದೆ ಲಾವಣ್ಯ ನಿಹಾರಿಕಾ- ಚೈತನ್ಯ ಮದುವೆಗೆ ಬಂದಿದ್ದರು. ವರುಣ್ ತೇಜ್ ಕುಟುಂಬದಲ್ಲಿ ತಾವು ಒಬ್ಬರಾಗಿ ಭಾಗಿಯಾಗಿದ್ದರು. ಹಾಗಾಗಿ ವರುಣ್‌ ಮದುವೆ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಇದೀಗ ನಿಹಾರಿಕಾ ದಾಂಪತ್ಯಕ್ಕೆ ಡಿವೋರ್ಸ್ ಮೂಲಕ ಬ್ರೇಕ್ ಬಿದ್ದಿದೆ ಎಂದು ಹೇಳಲಾಗುತ್ತಿದೆ.

  • ‘ಹಾಸಿಗೆಯಲ್ಲಿ ರೋಷನ್ ಇರಬೇಕು’ ಡೈಲಾಗ್ ಬಿಟ್ಟ ನಿಹಾರಿಕಾ ವಿರುದ್ಧ ಕಿಡಿಕಾರಿದ ನೆಟ್ಟಿಗರು

    ‘ಹಾಸಿಗೆಯಲ್ಲಿ ರೋಷನ್ ಇರಬೇಕು’ ಡೈಲಾಗ್ ಬಿಟ್ಟ ನಿಹಾರಿಕಾ ವಿರುದ್ಧ ಕಿಡಿಕಾರಿದ ನೆಟ್ಟಿಗರು

    ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಮನೆಮಗಳು ನಿಹಾರಿಕಾ Niharika) ಡಿವೋರ್ಸ್ (Divorce) ವಿಚಾರವಾಗಿ ಸದ್ದು ಮಾಡ್ತಿದ್ದಾರೆ. ಚೈತನ್ಯ ಜಿವಿ ಜೊತೆ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ವೆಬ್ ಸಿರೀಸ್‌ನಲ್ಲಿ ನಟಿಸುವ ಮೂಲಕ ನಟಿ ಸುದ್ದಿಯಲ್ಲಿದ್ದಾರೆ. ‘ಡೆಡ್ ಫಿಕ್ಸೆಲ್’ (Dead Pixel) ಟ್ರೈಲರ್‌ನಲ್ಲಿ ಹೇಳಿರುವ ಹೇಳಿಕೆ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಮಕ್ಕಳಿಗೆ ಪೋಷಕರ ಪ್ರೀತಿ ಸಿಗಬೇಕು ಎಂದು ಶ್ರೀಜಾಗೆ ಕಲ್ಯಾಣ್ ದೇವ್ ಟಾಂಗ್

    ನಿಹಾರಿಕಾ- ಚೈತನ್ಯ (Chaitanya) ಇಬ್ಬರು ಪರಸ್ಪರ ಪ್ರೀತಿಸಿ ಗುರುಹಿರಿಯರ ಸಮ್ಮುಖದಲ್ಲಿ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಆ ದಾಂಪತ್ಯ ಕೊನೆಯವರೆಗೂ ಬಾಳಿಕೆಗೆ ಬರಲೇ ಇಲ್ಲ. ಹಲವು ವರ್ಷಗಳ ಪ್ರೀತಿಗೆ ಡಿವೋರ್ಸ್ ಮೂಲಕ ಅಂತ್ಯ ಹಾಡಿದ್ದಾರೆ ಎಂದು ಹೇಳಲಾಗುತ್ತಿದೆ. ವೈಯಕ್ತಿಕ ಜೀವನ ಸರಿ ಇಲ್ಲದೇ ಇರುವ ಕಾರಣ ಸಿನಿಮಾ- ನಿರ್ಮಾಣ ಸಂಸ್ಥೆ ಅಂತಾ ನಿಹಾರಿಕಾ ವೃತ್ತಿ ಬದುಕಿನತ್ತ ಬ್ಯುಸಿಯಾಗಿದ್ದಾರೆ.

     

    View this post on Instagram

     

    A post shared by Niharika Konidela (@niharikakonidela)

    ಡಿವೋರ್ಸ್ ವಿಚಾರ ಸಖತ್ ಸದ್ದು ಮಾಡ್ತಿದ್ದರು ಕೂಡ ಯಾವುದೇ ಸ್ಪಷ್ಟನೆ ನೀಡದೇ ನಿಹಾರಿಕಾ ಮತ್ತು ಮೆಗಾ ಫ್ಯಾಮಿಲಿ (Mega Family) ಮೌನವಾಗಿದ್ದಾರೆ. ಇದೀಗ ಡೆಡ್ ಫಿಕ್ಸೆಲ್ ಸಿರೀಸ್‌ನಲ್ಲಿ ಆನ್‌ಲೈನ್ ಗೇಮ್ ತೋರಿಸಲಾಗಿದೆ. ಆನ್‌ಲೈನ್ ಗೇಮ್ ಯಾವ ಹಂತಕ್ಕೆ ತಲುಪಿಸುತ್ತದೆ ಎಂದು ಟ್ರೈಲರ್‌ ಮೂಲಕ ಝಲಕ್ ತೋರಿಸಲಾಗಿದೆ. ಈ ಟ್ರೈಲರ್‌ನಲ್ಲಿ ನಿಹಾರಿಕಾ ಡೈಲಾಗ್ ಸದ್ದು ಮಾಡ್ತಿದೆ. ರೋಷನ್ ಬೆಡ್ ಮೇಲೆ, ಭಾರ್ಗವ್ ಮನಸ್ಸಿನಲ್ಲಿ ಎಂಬರ್ಥದಲ್ಲಿ ನಿಹಾರಿಕಾ ಡೈಲಾಗ್ ಹೊಡೆದಿದ್ದಾರೆ. ಈ ಟ್ರೈಲರ್‌ ಇದೀಗ ಪ್ರೇಕಕ್ಷಕ ಕುತೂಹಲಕ್ಕೆ ಕಾರಣವಾಗಿದೆ. ಹಾಗೆಯೇ ಅಭಿಮಾನಿಗಳು ಟ್ರೈಲರ್‌ ನೋಡಿ ತೀವ್ರ ವಿರೋಧ ಕೂಡ ವ್ಯಕ್ತಪಡಿಸಿದ್ದಾರೆ.

    ಓಕಾ ಮನಸ್ಸು ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಮೆಗಾಸ್ಟಾರ್ ಮನೆಮಗಳು ನಿಹಾರಿಕಾ, ಮದುವೆ ನಂತರ ನಟನೆಯಿಂದ ದೂರ ಸರಿದ್ದರು. ಇದೀಗ ಮತ್ತೆ ನಟನೆಯತ್ತ ನಿಹಾರಿಕಾ ಮುಖ ಮಾಡಿದ್ದಾರೆ. ‘ಡೆಡ್ ಫಿಕ್ಸೆಲ್’ ವೆಬ್ ಸಿರೀಸ್‌ನಿಂದ ಸದ್ದು ಮಾಡ್ತಿದ್ದಾರೆ.

  • ಡಿವೋರ್ಸ್ ಸುದ್ದಿ ಬೆನ್ನಲ್ಲೇ ‘ಪುಷ್ಪ 2’ ಸಿನಿಮಾದಲ್ಲಿ ನಿಹಾರಿಕಾ ಕೊನಿಡೆಲಾ

    ಡಿವೋರ್ಸ್ ಸುದ್ದಿ ಬೆನ್ನಲ್ಲೇ ‘ಪುಷ್ಪ 2’ ಸಿನಿಮಾದಲ್ಲಿ ನಿಹಾರಿಕಾ ಕೊನಿಡೆಲಾ

    ಭಾರತೀಯ ಚಿತ್ರರಂಗದಲ್ಲಿ ಹೊಸ ಹೈಪ್ ಕ್ರಿಯೇಟ್ ಮಾಡಿದ ‘ಪುಷ್ಪ’ (Pushpa) ಸಿನಿಮಾ ನೋಡಿ ಫ್ಯಾನ್ಸ್ ಫಿದಾ ಆಗಿದ್ದರು. ಹಾಗಾಗಿ ಸಹಜವಾಗಿ ಪುಷ್ಪ 2 (Pushpa) ಮೇಲೆ ನಿರೀಕ್ಷೆ ಬೆಟ್ಟದಷ್ಟಿದೆ. ಅಲ್ಲು ಅರ್ಜುನ್ (Allu Arjun) , ರಶ್ಮಿಕಾ ಮಂದಣ್ಣ (Rashmika Mandanna), ಡಾಲಿ ನಟನೆಯ ಈ ಸಿನಿಮಾಗೆ ಹೊಸ ನಟಿಯ ಆಗಮನವಾಗಿದೆ. ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಮನೆ ಮಗಳು ‘ಪುಷ್ಪ’ 2 ಚಿತ್ರತಂಡಕ್ಕೆ ಸೇರಿಕೊಂಡಿದ್ದಾರೆ.

    ಶ್ರೀಜಾ ಬಳಿಕ ಮೆಗಾಸ್ಟಾರ್ ಚಿರಂಜೀವಿ ಅವರ ಅಣ್ಣನ ಮಗಳು ನಾಗಬಾಬು (Nagababu) ಪುತ್ರಿ ನಿಹಾರಿಕಾ ಕೊನಿಡೆಲಾ ದಾಂಪತ್ಯದಲ್ಲಿ ಬಿರುಕಾಗಿದೆ. ಉದ್ಯಮಿ ಚೈತನ್ಯ ಜೊತೆ ವೈವಾಹಿಕ ಜೀವನಕ್ಕೆ (Divorce) ಬ್ರೇಕ್ ಬಿದ್ದ ಮೇಲೆ ಸಿನಿಮಾಗಳತ್ತ ಮುಖ ಮಾಡಿರುವ ನಟಿ ನಿಹಾರಿಕಾ ಅವರು ಅಲ್ಲು ಅರ್ಜುನ್ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:‘ಭಜರಂಗಿ’ ಹೆಸರಿನಲ್ಲಿ ನಟಿಸಿ, ಬಜರಂಗದಳದ ನಿಷೇಧದ ಬಗ್ಗೆ ನಿಮ್ಮ ನಡೆಯೇನು? ಶಿವಣ್ಣಗೆ ಸಂಬರ್ಗಿ ಕೌಂಟರ್

    ‘ಪುಷ್ಪ 2’ ಸಿನಿಮಾದಲ್ಲಿ ಫಹಾದ್ ಫಾಸಿಲ್ ಅವರು ಮುಖ್ಯವಾದೊಂದು ಪಾತ್ರ ಮಾಡುತ್ತಿದ್ದಾರೆ. ಅವರ ಪತ್ನಿಯ ಪಾತ್ರಕ್ಕೆ ಸಾಯಿ ಪಲ್ಲವಿ ಬಣ್ಣ ಹಚ್ಚುತ್ತಾರೆ ಎಂದು ಈ ಮೊದಲು ಗಾಸಿಪ್ ಹಬ್ಬಿತ್ತು. ಆದರೆ ಆ ಪಾತ್ರ ಮಾಡಲು ಸಾಯಿ ಪಲ್ಲವಿ ಅವರು ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ಈಗ ಅದೇ ಪಾತ್ರವನ್ನು ನಿಹಾರಿಕಾ ಕೊನಿಡೆಲಾ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

    ಟಾಲಿವುಡ್‌ನಲ್ಲಿ ನಟಿ, ನಿರ್ಮಾಪಕಿಯಾಗಿ ನಿಹಾರಿಕಾ ಕೊನಿಡೆಲಾ (Niharika Konidela) ಅವರು ತೊಡಗಿಕೊಂಡಿದ್ದಾರೆ. ‘ಒಕ ಮನಸು’, ‘ಸೂರ್ಯಕಾಂತಂ’, ‘ಹ್ಯಾಪಿ ವೆಡ್ಡಿಂಗ್’ ಮುಂತಾದ ಸಿನಿಮಾಗಳಲ್ಲಿ ಅವರ ನಟಿಸಿದ್ದಾರೆ. 2015ರಲ್ಲಿ ಅವರು ‘ಪಿಂಕ್ ಎಲಿಫೆಂಟ್ ಪಿಕ್ಚರ್ಸ್’ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿದರು. ಇದರ ಹೊಸ ಕಚೇರಿಯನ್ನು ಅವರು ಇತ್ತೀಚೆಗೆ ತೆರೆದಿದ್ದಾರೆ. ನಟಿಯಾಗಿ ಅವರು ಕಮ್‌ಬ್ಯಾಕ್ ಮಾಡುತ್ತಾರೆ ಎಂದು ನಿರೀಕ್ಷಿಸಲಾಗುತ್ತಿದೆ.

  • ಬದುಕಲು ಬಿಡಿ: ಹೊಸ ಪೋಸ್ಟ್ ಮೂಲಕ ಡಿವೋರ್ಸ್ ಸುಳಿವು ನೀಡಿದ್ರಾ ಮೆಗಾ ಕುಟುಂಬದ ಪುತ್ರಿ?

    ಬದುಕಲು ಬಿಡಿ: ಹೊಸ ಪೋಸ್ಟ್ ಮೂಲಕ ಡಿವೋರ್ಸ್ ಸುಳಿವು ನೀಡಿದ್ರಾ ಮೆಗಾ ಕುಟುಂಬದ ಪುತ್ರಿ?

    ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಮನೆ ಮಗಳು ನಿಹಾರಿಕಾ ಕೊನಿಡೆಲಾ (Niharika Konidela)  ಅವರ ವೈಯಕ್ತಿಕ ಜೀವನ ಸುದ್ದಿಯಲ್ಲಿದೆ. ನಟ ಚಿರಂಜೀವಿ ಮಗಳು ಶ್ರೀಜಾ ದಾಂಪತ್ಯ ಜೀವನಕ್ಕೆ ಬ್ರೇಕ್ ಬಿದ್ದ ಬಳಿಕ ನಿಹಾರಿಕಾ ವೈವಾಹಿಕ ಬದುಕು ಕೂಡ ಏರುಪೇರಾಗಿದೆ. ಡಿವೋರ್ಸ್ (Divorce)  ವಿಚಾರಕ್ಕೆ ಸಂಬಂಧಿಸಿದಂತೆ ನಟಿ ನಿಹಾರಿಕಾ ‘ಬದುಕಲು ಬಿಡಿ’ ಎಂದು ಇದೀಗ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ ಇದೀಗ ಹಲವರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಸಿದ್ದರಾಮಯ್ಯನವರು ಮತ್ತೆ ಸಿಎಂ ಆಗ್ಬೇಕು – ದುನಿಯಾ ವಿಜಯ್

    ನಟಿ ನಿಹಾರಿಕಾ- ಉದ್ಯಮಿ ಚೈತನ್ಯ (Chaitanya) ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಹಲವು ವರ್ಷಗಳ ಪ್ರೀತಿಗೆ ಗುರುಹಿರಿಯರ ಸಮ್ಮತಿ ಪಡೆದು 2020ರಲ್ಲಿ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಆದರೆ ಇದೀಗ ಕೆಲ ತಿಂಗಳಿಂದ ಡಿವೋರ್ಸ್ ವದಂತಿ ಕೇಳಿ ಬರುತ್ತಿದೆ. ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡದೇ ಇದ್ದರೂ ಈಗ ಹೊಸ ಪೋಸ್ಟ್‌ನಿಂದ ನಟಿ ಸದ್ದು ಮಾಡ್ತಿದ್ದಾರೆ.

    ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವೀಡಿಯೋ ನಿಹಾರಿಕಾ ಶೇರ್ ಮಾಡಿ ವೀಡಿಯೋದಲ್ಲಿ ಒಂದಷ್ಟು ಅಡಿಬರಹ ನೀಡಿದ್ದಾರೆ. ನಿಮ್ಮ ಎನರ್ಜಿ ಸೇವ್ ಮಾಡಿ, ನೀವು ಸಮರ್ಥರು, ನಿಮ್ಮ ಬಗ್ಗೆ ನೀವು ದಯೆ ತೋರಿ, ಯೋಚಿಸುವುದಕ್ಕಿಂತ ನೀವು ಬಲಶಾಲಿ, ನಿಮ್ಮ ನಿದ್ರೆಗೆ ಆದ್ಯತೆ ನೀಡಿ, ಹೆಚ್ಚು ನೀರನ್ನು ಕುಡಿಯಿರಿ, ಬದುಕಿ ಮತ್ತು ಇತರರನ್ನು ಬದುಕಲು ಬಿಡಿ ಎನ್ನುವ ವಿಚಾರವನ್ನ ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    A post shared by Niharika Konidela (@niharikakonidela)

    ನಿಹಾರಿಕಾ- ಚೈತನ್ಯ ಇನ್ಸ್ಟಾಗ್ರಾಂನಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದಾರೆ. ಮೆಗಾ ಫ್ಯಾಮಿಲಿಯ (Mega Family) ಎಲ್ಲರನ್ನೂ ಫಾಲೋ ಮಾಡುತ್ತಿರುವ ಚೈತನ್ಯ, ನಿಹಾರಿಕಾ ಅವರನ್ನು ಮಾತ್ರ ಅನ್‌ಫಾಲೋ ಮಾಡಿದ್ದರು. ಮದುವೆಯ ಫೋಟೋಸ್‌ನ ಇಬ್ಬರೂ ಡಿಲೀಟ್ ಮಾಡಿದ್ದಾರೆ. ಡಿವೋರ್ಸ್ ಸುದ್ದಿಗೆ ಮತ್ತಷ್ಟು ಪುಷ್ಟಿ ಸಿಕ್ಕಿದೆ.

  • ಮೆಗಾಸ್ಟಾರ್ ಚಿರಂಜೀವಿ ಮಗಳ ದಾಂಪತ್ಯದಲ್ಲಿ ಬಿರುಕು- ಡಿವೋರ್ಸ್ ಸುದ್ದಿಗೆ ಸಿಕ್ತು ಸಾಕ್ಷಿ

    ಮೆಗಾಸ್ಟಾರ್ ಚಿರಂಜೀವಿ ಮಗಳ ದಾಂಪತ್ಯದಲ್ಲಿ ಬಿರುಕು- ಡಿವೋರ್ಸ್ ಸುದ್ದಿಗೆ ಸಿಕ್ತು ಸಾಕ್ಷಿ

    ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಮಗಳ ಕುಟುಂಬದಲ್ಲಿ ಬಿರುಗಾಳಿ ಎದ್ದಿದೆ. ಚಿರಂಜೀವಿ ಸಹೋದರ ನಾಗೇಂದ್ರ ಬಾಬು (Nagendra Babu) ಮಗಳು ನಿಹಾರಿಕಾ (Niharika) ಡಿವೋರ್ಸ್ ಅಂತೆ ಕಂತೆ ಸುದ್ದಿಗೆ ಇದೀಗ ಸಾಕ್ಷಿ ಸಿಕ್ಕಿದೆ. ನಿಹಾರಿಕಾ ವೈವಾಹಿಕ ಬದುಕಿನಲ್ಲಿ ಏರುಪೇರಾಗಿದೆ ಎಂದು ಸುದ್ದಿ ಹಬ್ಬಿತ್ತು. ಆದರೆ ಈ ವಿಚಾರ ನಿಜ ಎಂಬುದಕ್ಕೆ ಸಾಕ್ಷಿ ಸಿಕ್ಕಿದೆ.

    ನಿಹಾರಿಕಾ ಕೊನಿಡೆಲಾ ಅವರು ಚೈತನ್ಯ ಅವರನ್ನ 2020ರಲ್ಲಿ ಪ್ರೀತಿಸಿ, ಗುರುಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಈಗ ಮದುವೆಯಾಗಿ ಎರಡೇ ವರ್ಷಕ್ಕೆ ದಾಂಪತ್ಯ ಬದುಕಿಗೆ ಅಂತ್ಯ ಹಾಡಲಿದ್ದಾರೆ. ಡಿವೋರ್ಸ್ ಬಗ್ಗೆ ಮೌನವಾಗಿರುವ ಈ ಜೋಡಿ, ದಾಂಪತ್ಯದಲ್ಲಿ ಬಿರುಕಾಗಿರುವ ಬಗ್ಗೆ ಸುಳಿವು ಸಿಕ್ಕಿದೆ. ಇದನ್ನೂ ಓದಿ:‘ರಾಮನ ಅವತಾರ’ ಟೀಸರ್ ರಿಲೀಸ್ : ರಿಷಿ ಸಖತ್ ಕಾಮಿಡಿ ಮಾಡ್ತಾರಪ್ಪ

    ನಟಿ ನಿಹಾರಿಕಾ ಮತ್ತು ಚೈತನ್ಯ ನಡುವೆ ವೈಮನಸ್ಸು ಉಂಟಾಗಿದೆ ಎಂಬುದಕ್ಕೆ ಒಂದಷ್ಟು ದಿನಗಳ ಹಿಂದೆಯೇ ಸಾಕ್ಷಿ ಸಿಕ್ಕಿತ್ತು. ವೆಂಕಟ ಚೈತನ್ಯ ಅವರು ನಿಹಾರಿಕಾರನ್ನು ಅನ್‌ಫಾಲೋ ಮಾಡಿದ್ದರು. ಮದುವೆ – ಎಂಗೇಜ್‌ಮೆಂಟ್ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಆದರೂ ಕೂಡ ನಿಹಾರಿಕಾ ಅವರು ಸೈಲೆಂಟ್ ಆಗಿದ್ದರು. ಆದರೆ ಈಗ ಅವರು ಕೂಡ ಗಂಡನನ್ನು ಅನ್‌ಫಾಲೋ ಮಾಡಿ, ಫೋಟೋಸ್ ತೆಗೆದುಹಾಕಿರುವುದು ಡಿವೋರ್ಸ್ ಅನುಮಾನಕ್ಕೆ ಪುಷ್ಠಿ ನೀಡಿದೆ.

    ಮೆಗಾ ಸ್ಟಾರ್ ಚಿರಂಜೀವಿ ಅವರದ್ದು ಪ್ರತಿಷ್ಠಿತ ಕುಟುಂಬ. ಈ ಫ್ಯಾಮಿಲಿಯ ಕೆಲವು ಹಿರಿಯರ ಸಮ್ಮುಖದಲ್ಲಿ ಸಂಧಾನ ಮಾತುಕಥೆ ಕೂಡ ನಡೆಯುತ್ತಿದ್ದು, ನಿಹಾರಿಕಾ- ಚೈತನ್ಯ ಮತ್ತೆ ಒಂದಾಗುವ ಸೂಚನೆ ಇದೆ ಎನ್ನಲಾಗಿತ್ತು. ಆದರೆ ಸಂಧಾನ ಸಫಲ ಆದಂತೆ ಕಾಣುತ್ತಿಲ್ಲ. ನಿಹಾರಿಕಾ ಕೊನಿಡೆಲಾ ಅವರು ಕೊನೆಗೂ ಗಟ್ಟಿ ನಿರ್ಧಾರ ತೆಗೆದುಕೊಂಡಂತೆ ಕಾಣುತ್ತಿದೆ. ಈ ಬಗ್ಗೆ ಅವರು ಅಧಿಕೃತವಾಗಿ ಘೋಷಿಸುವುದೊಂದೇ ಬಾಕಿ ಇದೆ.

    ನಿಹಾರಿಕಾ ಕೂಡ ನಿರ್ಮಾಪಕಿಯಾಗಿ ಆಗಿ ಕಂಬ್ಯಾಕ್ ಆಗಿದ್ದಾರೆ. ನಿರ್ಮಾಣದ ಜೊತೆ ನಟನೆಯ ಕಡೆಗೂ ಒಲವು ತೋರಿಸ್ತಿದ್ದಾರೆ ಎನ್ನಲಾಗುತ್ತಿದೆ. ಹೊಸ ಆಫೀಸ್ ಕೂಡ ನಿಹಾರಕಾ ಓಪನ್ ಮಾಡಿದ್ದಾರೆ. ಸಿನಿಮಾ ಕಾರ್ಯಕ್ಕೆ ಸಂಬಂಧಿಸಿದ ಕೆಲಸಗಳಿಗಾಗಿ ನಟಿ ಹೊಸ ಹೆಜ್ಜೆ ಇಟ್ಟಿದ್ದಾರೆ.

  • ರೇವ್ ಪಾರ್ಟಿಯಲ್ಲಿ ಸಿಕ್ಕಿ ಬಿದ್ದ ಮೆಗಾಸ್ಟರ್ ಕುಟುಂಬದ ಕುಡಿ – ತಂದೆ ಹೇಳುವುದೇ ಬೇರೆ

    ರೇವ್ ಪಾರ್ಟಿಯಲ್ಲಿ ಸಿಕ್ಕಿ ಬಿದ್ದ ಮೆಗಾಸ್ಟರ್ ಕುಟುಂಬದ ಕುಡಿ – ತಂದೆ ಹೇಳುವುದೇ ಬೇರೆ

    ಣ್ಣದ ಲೋಕದ ಸೆಲೆಬ್ರೆಟಿಗಳು ಪಾರ್ಟಿಗಾಗಿ ಸೇರುವುದು ಹೊಸದೇನೂ ಅಲ್ಲ. ಐಷಾರಾಮಿ ಜೀವನ ನಡೆಸುವ ಅನೇಕ ನಟ, ನಟಿಯರು ಪ್ರತಿನಿತ್ಯ ಒಂದಲ್ಲಾ ಒಂದು ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಲೇ ಇರುತ್ತಾರೆ. ಅದರಲ್ಲಿಯೂ ಅನೇಕ ನಟ, ನಟಿಯರು ಪಾರ್ಟಿ ವೇಳೆ ಮಾದಕ ವಸ್ತುಗಳನ್ನು ಸೇವಿಸಿ ಸಿಕ್ಕಿಬಿದ್ದಿರುವ ಘಟನೆಗಳು ಸಾಕಷ್ಟಿವೆ. ಮೊದ ಮೊದಲು ಬಾಲಿವುಡ್‍ನಲ್ಲಿ ನಟ, ನಟಿಯರು ರೇವ್ ಪಾರ್ಟಿಗಳಲ್ಲಿ ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದಿರುವುದೇ ಹೆಚ್ಚು. ಸದ್ಯ ಇಂತಹದೇ ಪ್ರಕರಣದಲ್ಲಿ ಟಾಲಿವುಡ್ ಮೆಗಾ ಕುಟುಂಬದ ಕುಡಿಯೊಂದು ಪೊಲೀಸರ ಕೈಗೆ ಸಿಕ್ಕಿಬಿದ್ದು, ಕುಟುಂಬವನ್ನು ಹೈರಾಣಾಗಿಸಿದೆ.

    niharika konidela

    ಹೌದು, ಡಗ್ರ್ಸ್ ಪಾರ್ಟಿಯಲ್ಲಿ ಟಾಲಿವುಡ್ ನಟ ನಾಗಬಾಬು ಅವರ ಪುತ್ರಿ ನಿಹಾರಿಕಾ ಕೊನಿಡೆಲಾ ಇದ್ದರು ಎನ್ನುವ ಕಾರಣಕ್ಕಾಗಿ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಯುಗಾದಿ ಹಬ್ಬದಂದು ಹೈದರಾಬಾದ್‍ನ ಫೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ರೇವ್ ಪಾರ್ಟಿ ನಡೆದಿದ್ದು, ಈ ಪಾರ್ಟಿಯಲ್ಲಿ ಸೆಲೆಬ್ರೆಟಿಗಳ ಮಕ್ಕಳು ಮತ್ತು ಪ್ರಭಾವಿ ಮಕ್ಕಳು ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಮಂದಿ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಹೊಟೇಲ್‍ನಲ್ಲಿಯೇ ಇದ್ದ ನಿಹಾರಿಕಾ ಕೊನಿಡೆಲಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇನ್ನೂ ಈ ಸುದ್ದಿ ಟಿ-ಟೌನ್‍ನಲ್ಲಿ ಭಾರೀ ಸದ್ದು ಮಾಡಿತ್ತು. ಇದನ್ನೂ ಓದಿ : ಸ್ಟಾರ್ ತಾರಾಗಣದ ಬಹು ನಿರೀಕ್ಷಿತ ‘ತ್ರಿಕೋನ’ ಬಿಡುಗಡೆಗೆ ರೆಡಿ

    niharika konidela

    ಸದ್ಯ ತಮ್ಮ ಪುತ್ರಿಯ ವಿಚಾರವಾಗಿ ನಟ ನಾಗಬಾಬು ಅವರು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೆ ವೀಡಿಯೋವನ್ನು ಹಂಚಿಕೊಂಡಿದ್ದು, ತಮ್ಮ ಪುತ್ರಿ ನಿಹಾರಿಕಾ ಪಬ್‍ನಲ್ಲಿದ್ದದ್ದು ನಿಜ. ಆದರೆ ನಿಹಾರಿಕಾ ರೇವ್ ಪಾರ್ಟಿಯಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಏಪ್ರಿಲ್ 2ರಂದು ರಾತ್ರಿ ನನ್ನ ಮಗಳು ನಿಹಾರಿಕಾ ಕೊನಿಡೆಲಾ ಪಬ್‍ಗೆ ಹೋಗಿದ್ದರು. ಪಬ್ ಬಂದ್ ಮಾಡುವ ಸಮಯ ಮೀರಿದ್ದರೂ, ಮುಂದುವರೆಸಿದ್ದರಿಂದ ಪಬ್ ನಡೆಸುತ್ತಿದ್ದವರನ್ನು ಹಾಗೂ ಇಲ್ಲಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನನ್ನ ಮಗಳು ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಈ ವೇಳೆ ಪೊಲೀಸರು ವಶಪಡಿಸಿಕೊಂಡ ಮಾದಕ ವಸ್ತುಗಳಿಗೂ ಆಕೆಗೂ ಯಾವುದೇ ಸಂಬಂಧವಿಲ್ಲವೆಂದು ಪೊಲೀಸರು ಹೇಳಿದ್ದಾರೆ. ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ ಮತ್ತು ಇಂತಹ ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ : ಸ್ಟಾರ್ ತಾರಾಗಣದ ಬಹು ನಿರೀಕ್ಷಿತ ‘ತ್ರಿಕೋನ’ ಬಿಡುಗಡೆಗೆ ರೆಡಿ

    ಬಂಜಾರಾ ಹಿಲ್ಸ್ ಠಾಣೆಯ ಪೊಲೀಸರು ನಿಹಾರಿಕ ಅವರನ್ನು ವಶಕ್ಕೆ ಪಡೆದು ಕೆಲ ಸಮಯ ವಿಚಾರಣೆ ನಡೆಸಿ, ಮನೆಗೆ ಕಳುಹಿಸಿದ್ದಾರೆ ಎನ್ನಲಾಗಿದ್ದು, ವಿಚಾರಣೆ ಬಳಿಕ ನಿಹಾರಿಕಾ ಕೊನಿಡೆಲಾ ಪೊಲೀಸ್ ಠಾಣೆಯಿಂದ ಹೊರಬರುತ್ತಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

  • ಪ್ರಭಾಸ್ ಜೊತೆ ಮದ್ವೆ- ಮೌನ ಮುರಿದ ನಿಹಾರಿಕಾ

    ಪ್ರಭಾಸ್ ಜೊತೆ ಮದ್ವೆ- ಮೌನ ಮುರಿದ ನಿಹಾರಿಕಾ

    ಹೈದರಾಬಾದ್: ಬಾಹುಬಲಿ ಖ್ಯಾತಿಯ ಪ್ರಭಾಸ್ ಇತ್ತೀಚೆಗೆ ವಿವಾಹದ ವಿಚಾರವಾಗಿ ಸುದ್ದಿಯಾಗುತ್ತಿದ್ದು, ಈ ಹಿಂದೆ ಕನ್ನಡತಿ ಅನುಷ್ಕಾ ಶೆಟ್ಟಿ ಜೊತೆ ಸುತ್ತಾಡುವ ಮೂಲಕ ಇವರಿಬ್ಬರು ವಿವಾಹವಾಗಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ನಂತರ ಸ್ವತಃ ಅನುಷ್ಕಾ ಶೆಟ್ಟಿ ಅವರೇ ಈ ಕುರಿತು ಪ್ರತಿ ಪ್ರತಿಕ್ರಿಯಿಸಿ ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದು ಸ್ಪಷ್ಟಪಡಿಸಿದ್ದರು. ಇದೀಗ ಮೆಗಾ ಫ್ಯಾಮಿಲಿ ಜೊತೆಗೆ ಸಂಬಂಧ ಬೆಳೆಸುತ್ತಿದ್ದಾರೆ ಎಂಬ ಗಾಸಿಪ್ ಹಬ್ಬಿದೆ.

    ಹೌದು ಅನುಷ್ಕಾ ಶೆಟ್ಟಿ ಬಳಿಕ ಇದೀಗ ಪ್ರಭಾಸ್ ಮದುವೆ ಬಗ್ಗೆ ಮತ್ತೊಂದು ಸುದ್ದಿ ಹಬ್ಬಿದ್ದು, ಇದೀಗ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ, ನಟಿ ನಿಹಾರಿಕಾ ಜೊತೆ ಯಂಗ್ ರೆಬೆಲ್ ಸ್ಟಾರ್ ಹೆಸರು ಕೇಳಿ ಬಂದಿದೆ. ಕೆಲ ದಿನಗಳ ಹಿಂದೆ ಟಾಲಿವುಡ್ ಅಂಗಳದಲ್ಲಿ ಈ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ನಟಿ ನಿಹಾರಿಕಾ, ಆ ರೀತಿ ಏನೂ ಇಲ್ಲ ಎಂದಿದ್ದರು. ಸ್ವತಃ ಮೆಗಾ ಸ್ಟಾರ್ ಚಿರಂಜೀವಿ ಪ್ರತಿಕ್ರಿಯಿಸಿ ಈ ಕುರಿತು ಯಾವುದೇ ರೀತಿಯ ಚರ್ಚೆ ನಡೆದಿಲ್ಲ. ಇದೆಲ್ಲ ಸುಳ್ಳು ಸುದ್ದಿ ಅಲ್ಲದೆ ನಮ್ಮ ಕುಟುಂಬಕ್ಕೆ ಹೊಸದೇನೂ ಅಲ್ಲ ಬಿಡಿ ಎಂದಿದ್ದರು. ಈಗ ಮತ್ತೆ ಅದೇ ಸುದ್ದಿಗೆ ಜೀವ ಬಂದಿದೆ.

    ಲಾಕ್‍ಡೌನ್ ಹಿನ್ನೆಲೆ ಬುಹುತೇಕ ನಟ ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಬ್ಯುಸಿಯಾಗಿದ್ದು, ಅಭಿಮಾನಿಗಳ ಜೊತೆ ಬೆರೆಯುತ್ತಿದ್ದಾರೆ. ಅದೇ ರೀತಿ ನಟಿ ನಿಹಾರಿಕಾ ಸಹ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬ ಪ್ರಭಾಸ್‍ರನ್ನು ನೀವು ವಿವಾಹವಾಗುತ್ತೀರಾ ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಉತ್ತರಿಸಿದ ನಿಹಾರಿಕಾ, ಇದೆಲ್ಲ ಸುಳ್ಳು ಸುದ್ದಿ, ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಟಿವಿ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿದ್ದ ನಿಹಾರಿಕಾ, ‘ಒಕ ಮನಸು’ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟರು. ಬಳಿಕ ಹ್ಯಾಪಿ ವೆಡ್ಡಿಂಗ್, ಸೂರ್ಯಕಾಂತಂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ಕಳೆದ ವರ್ಷ ಬಿಡುಗಡೆಯಾದ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.