Tag: Nihal

  • ನಟ ನಿಹಾಲ್- ರಿಷಿಕಾ ಶರ್ಮಾ ಅದ್ದೂರಿ ರಿಸೆಪ್ಷನ್ ಫೋಟೋಗಳು

    ನಟ ನಿಹಾಲ್- ರಿಷಿಕಾ ಶರ್ಮಾ ಅದ್ದೂರಿ ರಿಸೆಪ್ಷನ್ ಫೋಟೋಗಳು

    `ಟ್ರಂಕ್’ ಮತ್ತು `ವಿಜಯಾನಂದ’ ಚಿತ್ರ ಖ್ಯಾತಿಯ ನಟ ನಿಹಾಲ್ (Actor Nihal)  ಮತ್ತು ನಿರ್ದೇಶಕಿ ರಿಷಿಕಾ ಶರ್ಮಾ (Director Rishika Sharma) ಅವರು ಇತ್ತೀಚಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಗ್ರ್ಯಾಂಡ್ ರಿಸೆಪ್ಷನ್ (Grand Reception) ಫೋಟೋಗಳು ನಟ ನಿಹಾಲ್ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನವದಂಪತಿ ಫೋಟೋಗಳು ಸದ್ದು ಮಾಡ್ತಿದೆ.

    ಸ್ಯಾಂಡಲ್ವುಡ್ (Sandalwood) ನಟ ನಿಹಾಲ್- ರಿಷಿಕಾ ಶರ್ಮಾ ಮದುವೆ (ಫೆ.15)ರಂದು ಬೆಂಗಳೂರಿನ ಮಲೇಶ್ವರಂನಲ್ಲಿರುವ ಟಿಟಿಡಿ ದೇವಸ್ಥಾನದಲ್ಲಿ ನಡೆದಿತ್ತು. ಕುಟುಂಬಸ್ಥರು ಮತ್ತು ಆಪ್ತರು ಈ ಮದುವೆಯಲ್ಲಿ ಭಾಗಿಯಾಗಿದ್ದರು. ಇನ್ನೂ ನಿಹಾಲ್ ಮತ್ತು ರಿಷಿಕಾ ಅವರದ್ದು ಪಕ್ಕಾ ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದೆ. 9 ವರ್ಷಗಳ ಪ್ರೀತಿಯನ್ನು ಕುಟುಂಬಸ್ಥರಿಗೆ ತಿಳಿಸಿ, ಹಿರಿಯರ ಒಪ್ಪಿಗೆಯ ಮೇರೆಗೆ ಹಸೆಮಣೆ ಏರಿದ್ದಾರೆ.

    ಕನ್ನಡ ಚಿತ್ರರಂಗದ ಭೀಷ್ಮ ಎಂದೇ ಖ್ಯಾತರಾಗಿದ್ದ ಜಿ.ವಿ ಅಯ್ಯರ್ ಅವರ ಮೊಮ್ಮಗಳು ರಿಷಿಕಾ ಶರ್ಮಾ. ನಿರ್ದೇಶನದ ಕಡೆ ಹೆಚ್ಚಿನ ಒಲವಿದ್ದ ಕಾರಣ `ಟ್ರಂಕ್ ಮತ್ತು `ವಿಜಯಾನಂದ’ ಸಿನಿಮಾವನ್ನು ರಿಷಿಕಾ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದರು. ಈ ಎರಡು ಸಿನಿಮಾಗಳಿಗೆ ನಿಹಾಲ್ ನಾಯಕನಾಗಿ ಮಿಂಚಿದ್ದರು.

    ಇದೀಗ ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರ ಧಾರವಾಡದಲ್ಲಿ (Dharwad) ಫೆ.17ರಂದು ವಿಜಯಾನಂದ ನಟ ನಿಹಾಲ್-ರಿಷಿಕಾ ರಿಸೆಪ್ಷನ್ ಅದ್ದೂರಿಯಾಗಿ ನಡೆದಿದೆ. ರಿಷಿಕಾ ಕೆಂಪು ಬಣ್ಣದ ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ನಿಹಾಲ್ ಕಂದು ಬಣ್ಣದ ಸೂಟ್‌ನಲ್ಲಿ ಮಿಂಚಿದ್ದಾರೆ. ರೆಟ್ರೋ ಲುಕ್‌ನಲ್ಲಿ ಕೂಡ ಈ ಜೋಡಿ ಮಿಂಚಿದ್ದಾರೆ.

    ನಿಹಾಲ್-ರಿಷಿಕಾ ಶರ್ಮಾ ದಂಪತಿಯ ಸುಂದರ ಫೋಟೋಶೂಟ್‌ಗಳು `ಯುವ ಆರ್ಟ್ಸ್ ಸ್ಟುಡಿಯೋಸ್‌’ನ (Yuva Art Studio’s) ರೂವಾರಿ ಹರ್ಷದ್ ಉದಯ್ ಕಾಮತ್ ಅವರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಹರ್ಷದ್ ಅವರ ಕ್ಯಾಮೆರಾ ಕೈಚಳಕಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ನಿಹಾಲ್- ರಿಷಿಕಾ ಶರ್ಮಾ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ನಿಹಾಲ್- ರಿಷಿಕಾ ಶರ್ಮಾ

    ಸ್ಯಾಂಡಲ್‌ವುಡ್‌ನ (Sandalwood) ಮತ್ತೊಂದು ಜೋಡಿ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. `ಟ್ರಂಕ್’ ಚಿತ್ರ ಖ್ಯಾತಿಯ ನಟ ನಿಹಾಲ್ (Actor Nihal) ಮತ್ತು ನಿರ್ದೇಶಕಿ ರಿಷಿಕಾ ಶರ್ಮಾ (Director Rishika Sharma) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಚಿತ್ರರಂಗದಲ್ಲಿ (Film Industry) ಗಟ್ಟಿಮೇಳದ ಸೌಂಡ್ ಜೋರಾಗಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ನಟ-ನಟಿಯರು ಹಸೆಮಣೆ ಏರುತ್ತಿದ್ದಾರೆ. ಅದಿತಿ ಪ್ರಭುದೇವ-ಯಶಸ್, ಅಥಿಯಾ ಶೆಟ್ಟಿ- ಕೆ.ಎಲ್ ರಾಹುಲ್, ಹರಿಪ್ರಿಯಾ- ವಸಿಷ್ಠ ಸಿಂಹ, ಕಿಯಾರಾ-ಸಿದ್ಧಾರ್ಥ್ ಮಲ್ಹೋತ್ರಾ ಜೋಡಿ ಹೊಸ ಬಾಳಿಗೆ ಕಾಲಿಟ್ಟ ಬೆನ್ನಲ್ಲೇ ನಟ ನಿಹಾಲ್ ಮತ್ತು ರಿಷಿಕಾ ಶರ್ಮಾ ಕೂಡ ಅದ್ದೂರಿಯಾಗಿ ಮದುವೆಯಾಗಿದ್ದಾರೆ.

    ನಟ ನಿಹಾಲ್- ರಿಷಿಕಾ ಶರ್ಮಾ ಮದುವೆ (ಫೆ.15)ರಂದು ಬೆಂಗಳೂರಿನ ಮಲೇಶ್ವರಂನಲ್ಲಿರುವ ಟಿಟಿಡಿ ದೇವಸ್ಥಾನದಲ್ಲಿ ನಡೆದಿದೆ. ಕುಟುಂಬಸ್ಥರು ಮತ್ತು ಆಪ್ತರು ಮದುವೆಯಲ್ಲಿ ಭಾಗಿಯಾಗಿದ್ದರು. ಇನ್ನೂ ನಿಹಾಲ್ ಮತ್ತು ರಿಷಿಕಾ ಅವರದ್ದು ಪಕ್ಕಾ ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದೆ. 9 ವರ್ಷಗಳ ಪ್ರೀತಿಯನ್ನು ಕುಟುಂಬಸ್ಥರಿಗೆ (Family) ತಿಳಿಸಿ, ಹಿರಿಯರ ಒಪ್ಪಿಗೆಯ ಮೇರೆಗೆ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ಬಾಲಯ್ಯ ಜೊತೆ ಸೊಂಟ ಬಳುಕಿಸಲು ಮಿಲ್ಕಿ ಬ್ಯೂಟಿಗೆ ಭರ್ಜರಿ ಸಂಭಾವನೆ

    ಕನ್ನಡ ಚಿತ್ರರಂಗದ ಭೀಷ್ಮ ಎಂದೇ ಖ್ಯಾತರಾಗಿದ್ದ ಜಿ.ವಿ ಅಯ್ಯರ್ (G.v Iyer) ಅವರ ಮೊಮ್ಮಗಳು ರಿಷಿಕಾ ಶರ್ಮಾ. ನಿರ್ದೇಶನದ ಕಡೆ ಹೆಚ್ಚಿನ ಒಲವಿದ್ದ ಕಾರಣ `ಟ್ರಂಕ್’ ಮತ್ತು `ವಿಜಯಾನಂದ’ (Vijayananda Film) ಸಿನಿಮಾವನ್ನು ರಿಷಿಕಾ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದರು. ಈ ಎರಡು ಸಿನಿಮಾಗಳಿಗೆ ನಿಹಾಲ್ ನಾಯಕನಾಗಿ ಮಿಂಚಿದ್ದರು. ಸದ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಹೊಸ ಜೋಡಿಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ. ಇನ್ನೂ ಸಿನಿಮಾ ವಿಚಾರಕ್ಕೆ ಬರೋದಾದ್ರೆ ಮಾರ್ಚ್‌ನಲ್ಲಿ ಮುಂದಿನ ಚಿತ್ರದ ಬಗ್ಗೆ ಬಿಗ್‌ ಅಪ್‌ಡೇಟ್‌ ಸಿಗಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಿರ್ದೇಶಕಿ ರಿಷಿಕಾ ಜೊತೆ ಫೆ.15ಕ್ಕೆ ನಟ ನಿಹಾಲ್ ಮದುವೆ

    ನಿರ್ದೇಶಕಿ ರಿಷಿಕಾ ಜೊತೆ ಫೆ.15ಕ್ಕೆ ನಟ ನಿಹಾಲ್ ಮದುವೆ

    ಟ್ರಂಕ್ (Trunk), ವಿಜಯಾನಂದ (Vijayananda) ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದ ಜೋಡಿ ನಿರ್ದೇಶಕಿ ರಿಷಿಕಾ ಶರ್ಮಾ (Rishika Sharma) ಹಾಗೂ ನಟ ನಿಹಾಲ್ (Nihal) ಫೆಬ್ರವರಿ 15ರಂದು ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಒಂಬತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಇದೀಗ ಮದುವೆ (Marriage) ತಯಾರಿ ಮಾಡಿಕೊಂಡಿದ್ದಾರೆ. ಹತ್ತು ವರ್ಷಗಳ ಸ್ನೇಹಕ್ಕೆ ಸತಿಪತಿ ಸ್ಥಾನ ನೀಡುತ್ತಿದ್ದಾರೆ. ಈ ಮೂಲಕ ಸ್ಯಾಂಡಲ್ ವುಡ್ ಮತ್ತೊಂದು ಮದುವೆಗೆ ಸಿದ್ಧವಾಗಿದೆ.

    ಈ ಕುರಿತು ರಿಷಿಕಾ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದು, ‘ನಿಮ್ಮೆಲ್ಲರೊಂದಿಗೆ ಒಂದು ಖುಷಿ ಸುದ್ದಿಯನ್ನು ಹಂಚಿಕೊಳ್ಳುವುದಕ್ಕೆ ನಾನು ಎಕ್ಸೈಟ್ ಆಗಿದ್ದೇನೆ. ನಿಹಾಲ್ ಅವರೊಂದಿಗೆ ನಾನು ಇದೇ ಫೆಬ್ರವರಿ ತಿಂಗಳಲ್ಲಿ ಮದುವೆ ಆಗಲಿದ್ದೇನೆ. ನಮ್ಮ ಸುಂದರ ಲವ್ ಸ್ಟೋರಿ ಸೃಷ್ಟಿಯಾಗಲು ಲಕ್ಷಾಂತರ ಸಣ್ಣ ಕ್ಷಣಗಳಿವೆ. ನಮ್ಮ ಸಂತೋಷದಾಯಕ ಮತ್ತು ಅರ್ಥಪೂರ್ಣ 9 ವರ್ಷಗಳ ಸ್ನೇಹ ಮತ್ತು ಪ್ರೀತಿಗೆ ದಾರಿಯಾಗಿದೆ’ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಖ್ಯಾತ ನಟ ನಿತಿನ್ ಪಾಲಾದ ‘ಕಬ್ಜ’ ಸಿನಿಮಾದ ಆಂಧ್ರ-ತೆಲಂಗಾಣ ಹಕ್ಕು

    2018ರಲ್ಲಿ ತೆರೆಕಂಡ ಟ್ರಂಕ್ ಸಿನಿಮಾಗೆ ರಿಷಿಕಾ ನಿರ್ದೇಶಕಿಯಾಗಿದ್ದರೆ, ನಿಹಾಲ್ ನಟ. ವಿಮರ್ಶಕರಿಂದ ಮೆಚ್ಚುಗೆ ಪಡೆದ ಸಿನಿಮಾ ಇದಾಗಿತ್ತು. ನಾಲ್ಕು ವರ್ಷಗಳ ಸತತ ಶ್ರಮದ ಪರಿಣಾಮ ಭಾರೀ ಬಜೆಟ್ ಸಿನಿಮಾ ‘ವಿಜಯಾನಂದ’ದಲ್ಲಿ ಮತ್ತೆ ಈ ಜೋಡಿ ಒಂದಾಗಿತ್ತು. ಈ ಸಿನಿಮಾದಲ್ಲೂ ನಿಹಾಲ್ ಹೀರೋ. ರಿಷಿಕಾ ನಿರ್ದೇಶಕಿ. ಈ ಎರಡೂ ಚಿತ್ರಗಳು ಅವರ ವೃತ್ತಿ ಬದುಕಿಗೆ ಸಾಕಷ್ಟು ಹೆಸರು ತಂದುಕೊಟ್ಟವು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಯ್ತು ‘ವಿಜಯಾನಂದ’ ಟ್ರೈಲರ್

    ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಯ್ತು ‘ವಿಜಯಾನಂದ’ ಟ್ರೈಲರ್

    ಸಾರಿಗೆ ಕ್ಷೇತ್ರ, ಪತ್ರಿಕೋದ್ಯಮ, ಮಾಧ್ಯಮ ಹಾಗು ಹಲವಾರು ವಿಭಾಗಗಳಲ್ಲಿ ಪರಿಣತಿ ಹೊಂದಿರುವ ಆನಂದ ಸಂಕೇಶ್ವರ ಇದೀಗ ವಿ ಆರ್ ಎಲ್ ಮೀಡಿಯಾ ಸಂಸ್ಥೆಯ ಅಡಿಯಲ್ಲಿ “ವಿ ಆರ್ ಎಲ್ ಫಿಲಂ ಪ್ರೊಡಕ್ಷನ್ಸ್” ಹೆಸರಿನ ಸ್ವಂತ ನಿರ್ಮಾಣ ಸಂಸ್ಥೆಯ ಮೂಲಕ ನಿರ್ಮಾಣವಾಗಿರುವ ವಿಜಯಾನಂದ ಸಿನಿಮಾದ ಟ್ರೈಲರ್ ನಿನ್ನೆ ರಿಲೀಸ್ ಆಗಿದೆ. ಇದನ್ನೂ ಓದಿ:ಅಫೇರ್ ಆರೋಪ ಬೆನ್ನಲ್ಲೇ ಧಿಡೀರ್ ಸಂಭಾವನೆ ಹೆಚ್ಚಿಸಿಕೊಂಡ ಪವಿತ್ರಾ ಲೋಕೇಶ್

    ವಿಜಯ ಸಂಕೇಶ್ವರರ ಜೀವನಾಧಾರಿತ ಚಿತ್ರ ಇದಾಗಿದ್ದು, 1976 ರಲ್ಲಿ ಒಂದೇ ಟ್ರಕ್‌ನೊಂದಿಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಿ ಇಂದು ಭಾರತದ ಅತಿದೊಡ್ಡ ಲಾಜಿಸ್ಟಿಕ್ಸ್ ಕಂಪನಿಯ ಮಾಲೀಕರಾಗಿರುವ ವಿಜಯ ಸಂಕೇಶ್ವರ ಅವರ ಅದ್ಭುತ ಮತ್ತು ರೋಮಾಂಚನಕಾರಿ ಕಥೆಯಾಗಿದೆ. ಈ ಕಥೆಯು ವಿಜಯ ಸಂಕೇಶ್ವರ ಮತ್ತು ಅವರ ಮಗ ಆನಂದ ಸಂಕೇಶ್ವರ ಜೊತೆಗೆ ತಮ್ಮ ಪತ್ರಿಕೆ ಮತ್ತು ಮಾಧ್ಯಮ ಕ್ಷೇತ್ರಕ್ಕೆ ಹೆಸರುವಾಸಿಯಾದ ಯಶಸ್ಸಿನ ಪ್ರಯಾಣವನ್ನು ಒಳಗೊಂಡಿದೆ.

    ಈ ಚಿತ್ರದ ಮೊದಲ ಅಧಿಕೃತ ಟೀಸರನ್ನು ಚಿತ್ರ ತಂಡವು ನಿನ್ನೆಯಷ್ಟೇ ಬಿಡುಗಡೆ ಮಾಡಿದ್ದು, ಈ ಚಿತ್ರವು ಕನ್ನಡ ಚಲನಚಿತ್ರೋದ್ಯಮದ ಅಫೀಷಿಯಲ್ ಮತ್ತು ಕಮರ್ಷಿಯಲ್ ಜೀವನಚರಿತ್ರೆಯಾಗಲಿದೆ. ಅಲ್ಲದೇ, ದಕ್ಷಿಣ ಭಾರತದ ಭಾಷೆಗಳಾದ ತಮಿಳು, ತೆಲುಗು ಮತ್ತು ಮಳಯಾಳಂ ಭಾಷೆಗಳಿಗೆ ಡಬ್ ಆಗಲಿದೆ. ಹಾಗಾಗಿ ಸಿನಿಮಾದ ಟ್ರೈಲರ್ ಅಷ್ಟೂ ಭಾಷೆಯಲ್ಲಿ ಬಿಡುಗಡೆ ಆಗಿದೆ.

    ಈ ಹಿಂದೆ “ಟ್ರಂಕ್” ಎಂಬ ಹಾರರ್ ಥ್ರಿಲ್ಲರ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಮಹಿಳಾ ನಿರ್ದೇಶಕಿ ರಿಷಿಕಾ ಶರ್ಮಾರವರು ಈ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. “ವಿಜಯಾನಂದ” ಸಿನಿಮಾಗೆ ವಿಜಯ ಸಂಕೇಶ್ವರ ಅವರ ಪಾತ್ರಕ್ಕೆ “ಟ್ರಂಕ್” ಚಿತ್ರದಲ್ಲಿ ನಾಯಕ ನಟರಾಗಿದ್ದ ನಿಹಾಲ್ ಬಣ್ಣ ಹಚ್ಚಿದ್ದಾರೆ.  ಪ್ರಮುಖ ಪಾತ್ರಗಳಲ್ಲಿ ಅನಂತನಾಗ್, ವಿನಯಾ ಪ್ರಸಾದ್, ವಿ ರವಿಚಂದ್ರನ್, ಪ್ರಕಾಶ್ ಬೆಳವಾಡಿ, ಅನೀಶ್ ಕುರುವಿಲ್ಲಾ, ಸಿರಿ ಪ್ರಹ್ಲಾದ್ ಮತ್ತು ಭರತ್ ಬೋಪಣ್ಣ, ಶರಣ್ಯ ಕಾಣಿಸಿಕೊಳ್ಳುತ್ತಿದ್ದಾರೆ.  ದಕ್ಷಿಣ ಭಾರತೀಯ ಚಿತ್ರ ರಂಗದ ಖ್ಯಾತ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್ (ಬೆಂಗಳೂರು ಡೇಸ್, ಉಸ್ತಾದ್ ಹೋಟೆಲ್ , ಗೀತ ಗೋವಿಂದಂ, ಮೋಸ್ಟ ಎಲಿಜಿಬಲ್ ಬ್ಯಾಚುಲರ್ ) “ವಿಜಯಾನಂದ” ಚಿತ್ರಕ್ಕೆ ಹಿನ್ನಲೆ ಸಂಗೀತ ಮತ್ತು ಸಂಗೀತ ನಿರ್ದೇಶಕರಾಗಿ ಕೈ ಜೋಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]