Tag: Nightclub

  • ನೈಟ್‌ಕ್ಲಬ್‌ನಲ್ಲಿ ಡ್ರಗ್ಸ್‌ ಸೇವನೆ ಆರೋಪ – 300 ಮಂದಿ ಪೊಲೀಸರ ವಶಕ್ಕೆ

    ನೈಟ್‌ಕ್ಲಬ್‌ನಲ್ಲಿ ಡ್ರಗ್ಸ್‌ ಸೇವನೆ ಆರೋಪ – 300 ಮಂದಿ ಪೊಲೀಸರ ವಶಕ್ಕೆ

    ನವದೆಹಲಿ: ಇಲ್ಲಿನ ಉದ್ಯೋಗ್ ವಿಹಾರ್ ಹಂತ 3 ಪ್ರದೇಶದಲ್ಲಿನ ನೈಟ್‌ಕ್ಲಬ್‌ನಲ್ಲಿ ಡ್ರಗ್ಸ್ (Drugs) ಸೇವಿಸಿದ ಆರೋಪದ ಮೇಲೆ ಒಟ್ಟು 288 ಜನರನ್ನು ವಶಕ್ಕೆ ಪಡೆಯಲಾಗಿದೆ.

    ಮೂವರು ಕ್ಲಬ್ ಮಾಲೀಕರು, ಮೂವರು ಮ್ಯಾನೇಜರ್‌ಗಳು ಮತ್ತು ಇತರ ಸಿಬ್ಬಂದಿ ವಿರುದ್ಧ ಉದ್ಯೋಗ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜಂಟಿ ಪೊಲೀಸ್ ತಂಡವು ಉದ್ಯೋಗ್ ವಿಹಾರ್ ಹಂತ -3 ನಲ್ಲಿರುವ ಕಾಸಾ ಡಾಂಜಾ ಕ್ಲಬ್‌ನಲ್ಲಿ ಶನಿವಾರ ಮುಂಜಾನೆ 2 ಗಂಟೆ ಸುಮಾರಿಗೆ ದಾಳಿ ನಡೆಸಿತು ಎಂದು ದೆಹಲಿ (New Delhi) ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹೃದಯಾಘಾತದಿಂದ 16ರ ವಿದ್ಯಾರ್ಥಿನಿ ಸಾವು

    drug

    ಡ್ರಗ್ಸ್‌ ಪ್ರಕರಣದಲ್ಲಿ ಯಾವುದೇ ಕಳ್ಳಸಾಗಣೆ ಪತ್ತೆಯಾಗಿಲ್ಲ. ಕ್ಲಬ್ ಅನ್ನು ಖಾಲಿ ಮಾಡಿಸಿದ ನಂತರ ಅಪರಾಧ ದೃಶ್ಯ ತಂಡವು ತೀವ್ರ ಶೋಧವನ್ನು ನಡೆಸಿತು ಎಂದು ಉದ್ಯೋಗ್ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಮನೋಜ್ ಕುಮಾರ್ ಹೇಳಿದ್ದಾರೆ.

    14 ಡ್ರಗ್ಸ್ ಪ್ಯಾಕೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ನಾವು ರಕ್ತದ ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸುತ್ತೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹುಡ್ಗೀರಿಗೆ ಬ್ಲ್ಯಾಕ್‌ಮೇಲ್‌ ಮಾಡ್ತಿದ್ದ 17ರ ಹುಡುಗ – ಮಗನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ತಂದೆ

    ರಕ್ತದ ಮಾದರಿ ವರದಿ ಬಂದ ನಂತರ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಸಿಪಿ ತಿಳಿಸಿದ್ದಾರೆ. ನೈಟ್‌ ಕ್ಲಬ್ ಮಾಲೀಕರು, ವ್ಯವಸ್ಥಾಪಕರು, ಸಿಬ್ಬಂದಿ ವಿರುದ್ಧ ಸೆಕ್ಷನ್ 21, 22, 25, 27ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನೈಟ್ ಕ್ಲಬ್​ನಲ್ಲಿ ಯುವತಿಗೆಯೊಂದಿಗೆ ಅಸಭ್ಯ ವರ್ತನೆ – ಪ್ರಶ್ನಿಸಿದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಬೌನ್ಸರ್ಸ್!

    ನೈಟ್ ಕ್ಲಬ್​ನಲ್ಲಿ ಯುವತಿಗೆಯೊಂದಿಗೆ ಅಸಭ್ಯ ವರ್ತನೆ – ಪ್ರಶ್ನಿಸಿದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಬೌನ್ಸರ್ಸ್!

    ಚಂಡೀಗಢ: ಗುರುಗ್ರಾಮ್‍ನ ನೈಟ್‍ಕ್ಲಬ್ ಹೊರಗೆ ತಡರಾತ್ರಿ ಗ್ರಾಹಕ ಮತ್ತು ಯುವತಿಗೆ ಥಳಿಸಿದ ಆರೋಪದಡಿ ಆರು ಮಂದಿ ಬೌನ್ಸರ್ಸ್‌ಗಳು ಮತ್ತು ಕ್ಲಬ್‍ನ ಮ್ಯಾನೇಜರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

    ಬೌನ್ಸರ್ಸ್‌ಗಳಲ್ಲಿ ಓರ್ವ ತಮ್ಮ ಗ್ಯಾಂಗ್‍ನಲ್ಲಿದ್ದ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ವ್ಯಕ್ತಿ ಆರೋಪಿಸಿದ್ದಾರೆ. ಇದೀಗ ವ್ಯಕ್ತಿ ಮತ್ತು ಯುವತಿ ಮೇಲೆ ಬೌನ್ಸರ್ಸ್‌ಗಳು ಹಲ್ಲೆ ನಡೆಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಪೊಲೀಸ್ ಮೆಸ್ ಊಟ ಚೆನ್ನಾಗಿಲ್ಲ- ರಸ್ತೆಯಲ್ಲಿ ಊಟದ ತಟ್ಟೆ ಹಿಡಿದು ಅತ್ತ ಕಾನ್‍ಸ್ಟೇಬಲ್‍

    ವೀಡಿಯೋದಲ್ಲಿ ಬೌನ್ಸರ್ಸ್‌ಗಳು ವ್ಯಕ್ತಿಯನ್ನು ಎಳೆದಾಡಿಕೊಂಡು ಹೊಡೆಯುತ್ತಿರುತ್ತಾರೆ. ಈ ವೇಳೆ ವ್ಯಕ್ತಿಯನ್ನು ರಕ್ಷಿಸಲು ಬಂದ ಯುವತಿಯನ್ನು ತಳ್ಳಿದ್ದಾರೆ. ಈ ವೀಡಿಯೋವನ್ನು ಸೆರೆಹಿಡಿಯುತ್ತಿದ್ದ ಮತ್ತೋರ್ವ ಯುವತಿ ಆತನಿಗೆ ರಕ್ತ ಬರುತ್ತಿದೆ, ದಯವಿಟ್ಟು ಹೊಡೆಯುವುದನ್ನು ನಿಲ್ಲಿಸಿ ಎಂದು ಅಳುತ್ತಾ ಕೇಳಿಕೊಳ್ಳುತ್ತಿರುತ್ತಾಳೆ. ಆದರೂ ಬೌನ್ಸರ್ಸ್‌ಗಳು ನಿಲ್ಲಿಸದೇ ವ್ಯಕ್ತಿಗೆ ಕಪಾಳ ಮೋಕ್ಷ ಮಾಡುತ್ತಾ, ಗುದ್ದಿರುವುದನ್ನು ಕಾಣಬಹುದಾಗಿದೆ.

    ಮತ್ತೊಂದು ವೀಡಿಯೋದಲ್ಲಿ ಬೌನ್ಸರ್ಸ್‌ಗಳಲ್ಲಿ ಒಬ್ಬ ಕೋಲಿನಿಂದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಇತರೆ ವ್ಯಕ್ತಿಗಳು ಮತ್ತು ಯುವತಿರು ತಡೆಯಲು ಪ್ರಯತ್ನಿಸುತ್ತಾರೆ. ಆದರೆ ಬೌನ್ಸರ್ಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಿದ್ದರಿಂದ ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣ – ಪ್ರಮುಖ ಮೂವರು ಆರೋಪಿಗಳ ಬಂಧನ

    ನಗರದ ಉದ್ಯೋಗ್ ವಿಹಾರ್ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಬೌನ್ಸರ್ಸ್‌ಗಳು ಸೇರಿದಂತೆ ಕ್ಲಬ್ ಸಿಬ್ಬಂದಿ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಎಫ್‍ಐಆರ್‌ನಲ್ಲಿ ಹಲ್ಲೆಗೊಳಗಾದ ವ್ಯಕ್ತಿಗಳಲ್ಲಿ ಒಬ್ಬರು ಐಟಿ ಕಂಪನಿ ಉದ್ಯೋಗಿ ಎಂದು ತಿಳಿದುಬಂದಿದೆ. ವ್ಯಕ್ತಿ ಕ್ಲಬ್‍ಗೆ ಪ್ರವೇಶಿಸುವಾಗ ಬೌನ್ಸರ್ ಓರ್ವ ತಮ್ಮ ಗುಂಪಿನಲ್ಲಿದ್ದ ಯುವತಿಯರಲ್ಲಿ ಒಬ್ಬರನ್ನು ಅನುಚಿತವಾಗಿ ಸ್ಪರ್ಶಿಸಿದನು ಎಂದು ಆರೋಪಿಸಿದ್ದಾರೆ. ನಂತರ ಹೊರಬಂದ ಮ್ಯಾನೇಜರ್ ಅವರನ್ನು ಹೊಡೆದು ಹೊರಗೆ ಹಾಕಿ ಅಂತ ಬೌನ್ಸರ್ಸ್‌ಗಗಳಿಗೆ ಹೇಳಿದ್ದಾನೆ ಎಂದು ಕಿಡಿಕಾರಿದ್ದಾರೆ.

    ಘಟನೆ ನಂತರ ಹಲ್ಲೆಗೊಳಗಾದ ವ್ಯಕ್ತಿಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಲ್ಲೆ ವೇಳೆ ಬೌನ್ಸರ್ಸ್‌ಗಳು ಒಬ್ಬರಿಂದ ವಾಚ್ ಮತ್ತು ಸುಮಾರು 10,000 ರೂಪಾಯಿ ಕಿತ್ತುಕೊಂಡಿದ್ದಾರೆ ಎಂದು ಹೇಳಾಗುತ್ತಿದೆ. ಈ ಹಿಂಸಾಚಾರವನ್ನು ಕ್ಲಬ್ ಖಂಡಿಸಿದ್ದು, ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದೆ. ಆದರೆ ಕಿರುಕುಳ ನೀಡಿದ್ದಾರೆ ಎಂಬ ಆರೋಪವನ್ನು ನಿರಾಕರಿಸಿದೆ.

    Live Tv
    [brid partner=56869869 player=32851 video=960834 autoplay=true]

  • ನೈಟ್‍ಕ್ಲಬ್‍ನಲ್ಲಿ 20 ಯುವಕರ ನಿಗೂಢ ಸಾವು

    ನೈಟ್‍ಕ್ಲಬ್‍ನಲ್ಲಿ 20 ಯುವಕರ ನಿಗೂಢ ಸಾವು

    ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ಕರಾವಳಿ ಪಟ್ಟಣದ ಪೂರ್ವ ಲಂಡನ್‍ನಲ್ಲಿರುವ ನೈಟ್‍ಕ್ಲಬ್‍ನಲ್ಲಿ 20 ಯುವಕರು ಮೃತಪಟ್ಟಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

    ಚಳಿಗಾಲದ ಶಾಲಾ ಪರೀಕ್ಷೆ ಮುಕ್ತಾಯವಾಗಿದ್ದ ಹಿನ್ನೆಲೆ ಯುವಕರು ಪಾರ್ಟಿ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಅದಕ್ಕೆ ಪೂರ್ವ ಲಂಡನ್‍ನಲ್ಲಿರುವ ನೈಟ್‍ಕ್ಲಬ್‍ನಲ್ಲಿ ಪಾರ್ಟಿಗೆ ಎಲ್ಲ ಯುವಕರು ಪಾಲ್ಗೊಂಡಿದ್ದರು. ಆದರೆ ಬೆಳಗ್ಗೆಯಾಗುವಷ್ಟರಲ್ಲಿ ಎಲ್ಲರು ಮಸಣದ ಬಾಗಿಲನ್ನು ತಟ್ಟಿದ್ದಾರೆ. ಆದರೆ ಇವರ ಸಾವಿಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಇದನ್ನೂ ಓದಿ: ಬಿಜೆಪಿಯ ಕೊಳಕು ರಾಜಕೀಯವನ್ನು ಜನರು ಸೋಲಿಸಿದ್ದಾರೆ: ಕೇಜ್ರಿವಾಲ್

    ಸ್ಥಳೀಯ ವರದಿಗಳ ಪ್ರಕಾರ, ಮೃತದೇಹಗಳ ಮೇಲೆ ಯಾವುದೇ ರೀತಿಯ ಗಾಯಗಳು ಗೋಚರವಾಗಿಲ್ಲ. ಕ್ಲಬ್‍ನಲ್ಲಿದ್ದ ಟೇಬಲ್‍ಗಳು ಮತ್ತು ಕುರ್ಚಿಗಳು ಅಲ್ಲಲ್ಲಿ ಹರಡಿಕೊಂಡಿವೆ. ಪ್ರಸ್ತುತ ಸಾವಿನ ಕಾರಣವೇನು ಎಂದು ದೃಢೀಕರಿಸಲು ಸಾಧ್ಯವಿಲ್ಲ ಎಂದು ಆರೋಗ್ಯ ಇಲಾಖೆಯ ವಕ್ತಾರ ತಿಳಿಸಿದರು.

    ಸಾಧ್ಯವಾದಷ್ಟು ಬೇಗ ಈ ಸಾವಿಗೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳುತ್ತೇವೆ. ಪ್ರಸ್ತುತ ಮೃತದೇಹಗಳನ್ನು ಶವಪರೀಕ್ಷೆಗೆಂದು ಕಳುಹಿಸಲಾಗಿದೆ ಎಂದು ವಿವರಿಸಿದರು.

    Live Tv

  • ರಾಹುಲ್‌ ಮದುವೆಯಲ್ಲಿ ಭಾಗವಹಿಸಿದ್ರೆ ಸಂಘಿಗಳಿಗೆ ಭಯ ಯಾಕೆ: ಕಾಂಗ್ರೆಸ್‌ ಪ್ರಶ್ನೆ

    ರಾಹುಲ್‌ ಮದುವೆಯಲ್ಲಿ ಭಾಗವಹಿಸಿದ್ರೆ ಸಂಘಿಗಳಿಗೆ ಭಯ ಯಾಕೆ: ಕಾಂಗ್ರೆಸ್‌ ಪ್ರಶ್ನೆ

    ನವದೆಹಲಿ: ರಾಹುಲ್‌ ಗಾಂಧಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾದರೆ ಸಂಘಿಗಳಿಗೆ ಭಯ ಯಾಕೆ ಎಂದು ಕಾಂಗ್ರೆಸ್ ಸಂಸದ ಮಾಣಿಕ್ಕಂ ಟ್ಯಾಗೋರ್ ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ.

    ಸಾಮಾನ್ಯ ವ್ಯಕ್ತಿಯಂತೆ ಖಾಸಗಿ ಮದುವೆಯ ಆರತಕ್ಷತೆಯಲ್ಲಿ ಭಾಗವಹಿಸಿದರೆ ತಪ್ಪೇನು? ಸಂಘಿಗಳು ಏಕೆ ಸುಳ್ಳನ್ನು ಹಬ್ಬಿಸುತ್ತಿದ್ದಾರೆ? ನಾವೆಲ್ಲರೂ ಖಾಸಗಿ ಕಾರ್ಯಕ್ರಮಗಳಿಗೆ ಹಾಜರಾಗುತ್ತೇವೆ ಎಂದು ಟ್ವೀಟ್‌ ಮಾಡಿ ತಿರುಗೇಟು ನೀಡಿದ್ದಾರೆ.

    ರಾಹುಲ್‌ ಗಾಂಧಿ ನೈಟ್‌ ಕ್ಲಬ್‌ನಲ್ಲಿರುವ ವೀಡಿಯೋ ವೈರಲ್‌ ಆಗುತ್ತಿದ್ದು ಬಿಜೆಪಿ ನಾಯಕರ ಟೀಕೆಗೆ ಕಾಂಗ್ರೆಸ್‌ ವಕ್ತಾರ ರಂದೀಪ್‌ ಸುರ್ಜೇವಾಲಾ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು.

    ರಾಹುಲ್ ಗಾಂಧಿ ಅವರು ಕಠ್ಮಂಡುವಿನಲ್ಲಿರುವ ಸ್ನೇಹಿತನ ಮದುವೆಯಲ್ಲಿ ಭಾಗಿಯಾಗಿದ್ದರು. ವಿನಾಕಾರಣ ಕಾಂಗ್ರೆಸ್ ನಾಯಕರ ಹಿಂದೆ ಹೋಗುವ ಬದಲು ಬಿಜೆಪಿ ದೇಶದ ಸಮಸ್ಯೆಗಳ ಬಗ್ಗೆ ಮಾತನಾಡಬೇಕು ಎಂದು ಕುಟುಕಿದರು.

    ರಾಹುಲ್‌ ಗಾಂಧಿ ವೈಯಕ್ತಿಕ ಭೇಟಿಯಲ್ಲಿದ್ದಾರೆ. ಬಿಜೆಪಿಯವರು ವಿದ್ಯುತ್‌ ಸಮಸ್ಯೆ, ಹಣದುಬ್ಬರಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ. ಆದರೆ ರಾಹುಲ್‌ ಗಾಂಧಿ ಅವರ ಬಗ್ಗೆ ಮಾತನಾಡಲು ಸಮಯವಿದೆ ಎಂದು ಕಿಡಿಕಾರಿದರು.

    ಮದುವೆ ಮತ್ತು ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗವಹಿಸುವುದು ನಮ್ಮ ಸಂಸ್ಕೃತಿ ಮತ್ತು ನಾಗರಿಕತೆಯ ವಿಷಯವಾಗಿದೆ. ಮದುವೆಯಾಗುವುದು, ಯಾರೊಂದಿಗಾದರೂ ಸ್ನೇಹಿತರಾಗುವುದು ಅಥವಾ ಅವರ ಮದುವೆಯಲ್ಲಿ ಪಾಲ್ಗೊಳ್ಳುವುದು ಈ ದೇಶದಲ್ಲಿ ಅಪರಾಧವೇ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ತನಗಿಂತ 28 ವರ್ಷ ಚಿಕ್ಕವಳ ಕೈಹಿಡಿದ ಮಾಜಿ ಕ್ರಿಕೆಟಿಗ ಅರುಣ್ ಲಾಲ್

    ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸುರ್ಜೇವಾಲಾ, ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಹೋದಂತೆ ರಾಹುಲ್ ಗಾಂಧಿ ಆಹ್ವಾನಿಸದ ಅತಿಥಿಯಾಗಿ ತೆರಳಲಿಲ್ಲ. ಸ್ನೇಹಿತರ ಖಾಸಗಿ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ನೇಪಾಳಕ್ಕೆ ತೆರಳಿದ್ದರು ಎಂದು ಹೇಳಿದರು. ಇದನ್ನೂ ಓದಿ: ನೈಟ್‌ಕ್ಲಬ್ ಪಾರ್ಟಿಯಲ್ಲಿ ರಾಹುಲ್ – ವೀಡಿಯೋ ಫುಲ್ ವೈರಲ್

    ಮಾಣಿಕ್ಕಂ ಟ್ಯಾಗೋರ್ ಅವರು ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಕಾರ್ಯಕ್ರಮವೊಂದರಲ್ಲಿ ಶಾಂಪೇನ್ ಚಿಮ್ಮಿಸುತ್ತಿರುವ ಚಿತ್ರಗಳನ್ನು ಹಂಚಿಕೊಂಡು ತಿರುಗೇಟು ನೀಡಿದ್ದಾರೆ.

  • ನೈಟ್‌ಕ್ಲಬ್ ಪಾರ್ಟಿಯಲ್ಲಿ ರಾಹುಲ್ – ವೀಡಿಯೋ ಫುಲ್ ವೈರಲ್

    ನೈಟ್‌ಕ್ಲಬ್ ಪಾರ್ಟಿಯಲ್ಲಿ ರಾಹುಲ್ – ವೀಡಿಯೋ ಫುಲ್ ವೈರಲ್

    ಕಠ್ಮಂಡು: ಇಲ್ಲಿನ ಕಠ್ಮಂಡುವಿನ ವರ್ಲ್ಡ್‌ಕ್ಲಾಸ್‌ ನೈಟ್‌ಕ್ಲಬ್ ಪಾರ್ಟಿಯೊಂದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಣಿಸಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿದ್ದಾರೆ.

    ಪ್ರಮುಖ ರಾಜಕೀಯ ವಿದ್ಯಮಾನಗಳ ನಡುವೆ ಸದಾ ಬ್ಯುಸಿ ಶೆಡ್ಯೂಲ್‌ನಲ್ಲಿರುವ ರಾಹುಲ್‌ಗಾಂಧಿ ಈ ನಡುವೆಯೂ ಪಾರ್ಟಿಮೂಡ್‌ನಲ್ಲಿ ಕಾಣಿಸಿಕೊಂಡಿದ್ದು ಟೀಕೆಗೆ ಗುರಿಯಾಗಿದ್ದಾರೆ. ಪಾರ್ಟಿಯಲ್ಲಿ ಸ್ನೇಹಿತರೊಟ್ಟಿಗೆ ಎಂಜಾಯ್ ಮಾಡುತ್ತಿರುವ ವೀಡಿಯೋ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

    ಈ ವಿಡಿಯೋವನ್ನು ಬಿಜೆಪಿ ನಾಯಕ ಕಪಿಲ್ ಮಿಶ್ರಾ, `ಯಾರು? ಅವರು ಯಾರು?’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಬಿಜೆಪಿಯ ಸಾಮಾಜಿಕ ಜಾಲತಾಣ ಮುಖ್ಯಸ್ಥ ಅಮಿತ್ ಮಾಳವಿಯಾ ಕೂಡ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

    ರಾಹುಲ್ ಗಾಂಧಿ ಮುಂಬೈ ಮೇಲೆ ದಾಳಿ ನಡೆದಾಗಲೂ ನೈಟ್‌ಕ್ಲಬ್‌ನಲ್ಲಿದ್ದರು. ಅವರ ಪಕ್ಷ ಸ್ಫೋಟಗೊಳ್ಳುತ್ತಿರುವ ಸಮಯದಲ್ಲೂ ನೈಟ್‌ಕ್ಲಬ್‌ನಲ್ಲಿದ್ದಾರೆ ಎಂದು ಕಾಲೆಳೆದಿದ್ದಾರೆ. ಪತ್ರಕರ್ತೆಯ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲು ರಾಹುಲ್‌ ಗಾಂಧಿ ನೇಪಾಳಕ್ಕೆ ಆಗಮಿಸಿದ್ದರು.

  • 500 ಮಂದಿಯ ಮುಂದೆ ಬಟ್ಟೆ ಬಿಚ್ಚಿ ಜೋಡಿಯಿಂದ ಸೆಕ್ಸ್

    500 ಮಂದಿಯ ಮುಂದೆ ಬಟ್ಟೆ ಬಿಚ್ಚಿ ಜೋಡಿಯಿಂದ ಸೆಕ್ಸ್

    – ಮೊಬೈಲಿನಲ್ಲಿ ರೆಕಾರ್ಡ್

    ಲಂಡನ್: ನೂರಾರು ಜನರಿದ್ದ ನೈಟ್‍ಕ್ಲಬ್‍ನಲ್ಲಿಯೇ ಜೋಡಿಯೊಂದು ಬಟ್ಟೆಬಿಚ್ಚಿ ಅಸಭ್ಯವಾಗಿ ಸೆಕ್ಸ್ ಮಾಡಿರುವ ಘಟನೆ ಇಂಗ್ಲೆಂಡ್‍ನ ಕ್ಲೀಥೋರ್ಪ್ಸ್ ನಲ್ಲಿ ನಡೆದಿದೆ.

    ಕ್ಲೀಥೋರ್ಪ್ಸ್ ನಗರದ ‘ದಿ ಬೀಚ್ ನೈಟ್ ಕ್ಲಬ್’ ನಲ್ಲಿ ಈ ರೀತಿಯ ಘಟನೆ ನಡೆದಿದ್ದು, ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಜೋಡಿ ನೈಟ್‍ಕ್ಲಬ್‍ಗೆ ಪಾರ್ಟಿಗೆಂದು ಹೋಗಿದೆ. ಅಲ್ಲಿ ವೇದಿಕೆಯ ಮೇಲೆ ತುಂಬಾ ಜನರು ಡ್ಯಾನ್ಸ್ ಮಾಡುತ್ತಿದ್ದರು. ಆಗ ಈ ಜೋಡಿ ಮಧ್ಯೆ ಹೋಗಿ ಡ್ಯಾನ್ಸ್ ಮಾಡುತ್ತಿದ್ದರು. ನಂತರ ಡ್ಯಾನ್ಸ್ ಮಾಡುತ್ತಾ ಇಬ್ಬರೂ ಬಟ್ಟೆ ಬಿಚ್ಚಿದ್ದಾರೆ. ಇದನ್ನು ನೋಡಿದ ಇತರರು ಏನೋ ತಮಾಷೆಗೆ ಮಾಡುತ್ತಿದ್ದಾರೆ ಎಂದು ನಿರ್ಲಕ್ಷಿಸಿದ್ದಾರೆ. ಆದರೆ ಆ ಜೋಡಿ ನೂರಾರು ಮಂದಿ ಇದ್ದಾರೆ ಎಂದು ಗಮನಿಸದೆ ಅಲ್ಲಿಯೇ ಸೆಕ್ಸ್ ಮಾಡಿದ್ದಾರೆ.

    ಜೋಡಿಯೂ ಎಲ್ಲರ ಮುಂದೆ ಅಸಭ್ಯವಾಗಿ ಸೆಕ್ಸ್ ಮಾಡಿರುವ ವಿಡಿಯೋವನ್ನು ಕ್ಲಬ್‍ನಲ್ಲಿದ್ದ ಕೆಲವರು ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ನಂತರ ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಜೋಡಿಯ ಅಸಭ್ಯ ವರ್ತನೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ನೂರಾರು ಜನರ ಮುಂದೆ ಜೋಡಿ ಈ ರೀತಿ ಮೈಮರೆತು ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಇದರಿಂದ ಕ್ಲಬ್‍ನಲ್ಲಿದ್ದ ಇತರರಿಗೆ ಮುಜುಗರವಾಗಿದೆ. ಇದು ಒಪ್ಪಿಕೊಳ್ಳುವ ಸಂಗತಿಯಲ್ಲ. ಅಲ್ಲಿ ಸುಮಾರು 500 ರಿಂದ 600 ಜನರು ಇದ್ದರು. ಹೀಗಾಗಿ ಜೋಡಿಗೆ ಒಂದು ವರ್ಷದವರೆಗೂ ನೈಟ್‍ಕ್ಲಬ್‍ಗೆ ಬರದಂತೆ ನಿರ್ಬಂಧ ಹಾಕಲಾಗಿದೆ ಎಂದು ನೈಟ್ ಕ್ಲಬ್ ಮಾಲೀಕ ಹೇಳಿದ್ದಾನೆ.