Tag: Night Traffic Ban‌

  • ಗಡಿನಾಡು ಚಾಮರಾಜನಗರದಲ್ಲಿ ಜೋರಾಯ್ತು ‘ಬಂಡೀಪುರ ಉಳಿಸಿ’ ಹೋರಾಟ

    ಗಡಿನಾಡು ಚಾಮರಾಜನಗರದಲ್ಲಿ ಜೋರಾಯ್ತು ‘ಬಂಡೀಪುರ ಉಳಿಸಿ’ ಹೋರಾಟ

    ಚಾಮರಾಜನಗರ: ಗಡಿನಾಡು ಚಾಮರಾಜನಗರದಲ್ಲಿ ‘ಸೇವ್ ಬಂಡೀಪುರ’ ಹೋರಾಟ ಮತ್ತೆ ಮುನ್ನೆಲೆಗೆ ಬಂದಿದೆ. ಬಂಡೀಪುರ ನೈಟ್ ಬ್ಯಾನ್ ತೆರವು ಮಾಡದಂತೆ ಅನ್ನದಾತರು ಆಗ್ರಹಿಸಿದ್ದಾರೆ.

    ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ವನ್ಯಮೃಗಗಳ ಪ್ರಾಣಕ್ಕೆ ಸಂಚಕಾರ ಎದುರಾಗಲಿದೆ. ತಡರಾತ್ರಿ ಕಾಡು ಪ್ರಾಣಿಗಳ ಬೇಟೆ, ಮಾಂಸಕ್ಕಾಗಿ ಶಿಕಾರಿ ಹಾಗೂ ಸ್ಮಗ್ಲಿಂಗ್ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ನೈಟ್ ಬ್ಯಾನ್ ತೆರವು ಮಾಡದಂತೆ ರೈತರ ಆಗ್ರಹಿಸಿದ್ದಾರೆ.

    ಬಂಡೀಪುರ ಉಳಿಸಿ ಎಂದು ಅಭಿಯಾನವನ್ನು ರೈತರು ಶುರು ಮಾಡಿದ್ದಾರೆ. ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆ ವರೆಗೆ ರಾತ್ರಿ ಸಂಚಾರಕ್ಕೆ ನಿರ್ಬಂಧವಿದೆ. ಸುಪ್ರೀಂ ಕೋರ್ಟ್ ಗೈಡ್‌ಲೈನ್ಸ್ ಪ್ರಕಾರ ನೈಟ್ ಬ್ಯಾನ್ ಜಾರಿಯಲ್ಲಿದೆ. ಆದರೆ, ನೈಟ್ ಬ್ಯಾನ್ ತೆರವಿಗೆ ಸಂಸದೆ ಪ್ರಿಯಾಂಕಾ ಗಾಂಧಿ ಕರ್ನಾಟಕ ಸರ್ಕಾರಕ್ಕೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

    ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿಯಿಂದ ರಾಜ್ಯ ಸರ್ಕಾರಕ್ಕೆ ಒತ್ತಡ ಹೇರಲಾಗುತ್ತಿದೆ. ಸಂಸದೆ ಪ್ರಿಯಾಂಕಾ ಮಾತಿಗೆ ಮಣಿದು ನೈಟ್ ಬ್ಯಾನ್‌ಗೆ ತಡೆ ಒಡ್ಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ರಾಜ್ಯ ಕಬ್ಬು ಬೆಳೆಗಾರರ ಸಂಘ ಪ್ರತಿಭಟನೆ ನಡೆಸುತ್ತಿದೆ.

    ನಗರದ ಭುವನೇಶ್ವರಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೈತರು ಧರಣಿ ಕುಳಿತಿದ್ದಾರೆ.

    ಸೇವ್ ಬಂಡಿಪುರ ಅಭಿಯಾನ ಜೋರಾಗ್ತಿದ್ದು, ಇಂದು ಲೋಕಸಭೆಯಲ್ಲೂ ಪ್ರತಿಧ್ವನಿಸಿದೆ. ವಯನಾಡಿನ ಹಾಲಿ ಮತ್ತು ಮಾಜಿ ಸಂಸದರ ಒತ್ತಡದ ಕಾರಣ ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಡಲು ಕಾಂಗ್ರೆಸ್ ಮುಂದಾಗ್ತಿದೆ. ಇದನ್ನು ತಡೆಯಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಒತ್ತಾಯಿಸಿದ್ದಾರೆ.

  • ಕರ್ನಾಟಕ-ಕೇರಳ ಗಡಿಯ ನೈಟ್ ಬ್ಯಾನ್ ತೆರವಾಗುತ್ತಾ? – ಪ್ರಿಯಾಂಕಾ ಗಾಂಧಿ ಹೇಳಿದ್ದೇನು?

    ಕರ್ನಾಟಕ-ಕೇರಳ ಗಡಿಯ ನೈಟ್ ಬ್ಯಾನ್ ತೆರವಾಗುತ್ತಾ? – ಪ್ರಿಯಾಂಕಾ ಗಾಂಧಿ ಹೇಳಿದ್ದೇನು?

    ತಿರುವನಂತಪುರಂ: ಬಂಡೀಪುರದಲ್ಲಿ (Bandipur) ರಾತ್ರಿ ಸಂಚಾರಕ್ಕೆ ಅವಕಾಶ ಮಾಡಿಕೊಡುವುದೇ ನನ್ನ ಗುರಿ ಎಂದು ಸಂಸದೆ ಪ್ರಿಯಾಂಕಾ ಗಾಂಧಿ (Priyanka Gandhi) ಭರವಸೆ ನೀಡಿದ್ದಾರೆ.

    ವಯನಾಡಿನ (Wayanad) ನೂತನ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಸಹೋದರ ರಾಹುಲ್ ಗಾಂಧಿ ಜೊತೆಗೂಡಿ ಕ್ಷೇತ್ರ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ, ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ಮಾಡಿಕೊಡುವುದೇ ನನ್ನ ಗುರಿ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಫೆಂಗಲ್‌ ಅಬ್ಬರ; ಚೆನ್ನೈನ ಎಟಿಎಂ ಬಳಿ ವಿದ್ಯುತ್‌ ಪ್ರವಹಿಸಿ ವ್ಯಕ್ತಿ ಸಾವು – ಪ್ರವಾಹದ ನೀರಿನಲ್ಲಿ ತೇಲಿದ ಶವ

    ಬಂಡೀಪುರ ಭಾಗದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ಇಲ್ಲದಿರುವುದರಿಂದ ನಿಮಗೆ ಎಷ್ಟು ಸಮಸ್ಯೆ ಆಗ್ತಿದೆ ಎಂಬುದು ನನಗೆ ಗೊತ್ತಾಗಿದೆ. ಈ ವಿಷಯ ನನಗೆ ಬಿಡಿ.. ಈ ಸಮಸ್ಯೆ ಇತ್ಯರ್ಥ ಮಾಡುವುದೇ ನನ್ನ ಗುರಿ ಎಂದು ತಿಳಿಸಿದ್ದಾರೆ.

    ನನಗೆ ನೈಟ್ ಬ್ಯಾನ್ ವಿಚಾರವೂ ಗೊತ್ತು. ಮನುಷ್ಯ-ಪ್ರಾಣಿಗಳ ನಡುವಿನ ಸಂಘರ್ಷದ ವಿಚಾರವೂ ಗೊತ್ತು. ನಿಮ್ಮೆಲ್ಲರ ಪರವಾಗಿ ನಾನು ಹೋರಾಡುತ್ತೇನೆ. ನನ್ನ ಮನೆ, ಕಚೇರಿ ನಿಮಗಾಗಿ ತೆರೆದಿರುತ್ತದೆ. ನಾನು ನಿಮ್ಮನ್ನು ನಿರಾಸೆಗೊಳಿಸಲ್ಲ ಎಂದು ಜನರಿಗೆ ಅಭಯ ನೀಡಿದ್ದಾರೆ. ಇದನ್ನೂ ಓದಿ: ಡಿ.10ರ ವರೆಗೆ ಸಂಭಾಲ್‌ಗೆ ಹೊರಗಿನವರ ಪ್ರವೇಶ ನಿಷೇಧ; ಎಸ್‌ಪಿ ಮುಖಂಡರಿಗೆ ಗೃಹ ಬಂಧನ

    ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಯುಡಿಎಫ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಅವರ ಪರ ಪ್ರಚಾರದ ರ‍್ಯಾಲಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ರಾತ್ರಿ ಪ್ರಯಾಣದ ನಿರ್ಬಂಧವನ್ನು ತೆಗೆದುಹಾಕಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದರು.

    ಪ್ರಿಯಾಂಕಾ ಗಾಂಧಿ ಅವರು ಎರಡು ದಿನಗಳ ಹಿಂದೆ ತಮ್ಮನ್ನು ಕರೆದಿದ್ದರು. ರಾಷ್ಟ್ರೀಯ ಹೆದ್ದಾರಿ 766 ರಲ್ಲಿ ರಾತ್ರಿ ಸಂಚಾರ ನಿಷೇಧ ಹೇರಿರುವ ಬಗ್ಗೆ ಚರ್ಚೆ ಮಾಡಲು ಕರ್ನಾಟಕಕಕ್ಕೆ ಬರುವುದಾಗಿ ಹೇಳಿದ್ದರೆಂದು ಡಿಕೆಶಿ ಆಗ ತಿಳಿಸಿದ್ದರು.

    ಏನಿದು ನೈಟ್ ಬ್ಯಾನ್?
    2009ರಿಂದ ಬಂಡೀಪುರದಲ್ಲಿ ಊಟಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 67 ಹಾಗೂ ಕೇರಳದ ಸುಲ್ತಾನ್ ಬತ್ತೇರಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ರಾತ್ರಿ ವೇಳೆ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ವನ್ಯಜೀವಿ ರಕ್ಷಣೆ ಮತ್ತು ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟುವ ಉದ್ದೇಶದಿಂದ ರಾಜ್ಯ ಸರ್ಕಾರ 2009 ರಲ್ಲಿ ಎರಡೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆ ವರೆಗೆ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿತ್ತು. ಇದಕ್ಕೆ ಕೇರಳದಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೆ, ಕರ್ನಾಟಕ ತನ್ನ ನಿಲುವನ್ನು ಸಡಿಲಿಸಿರಲಿಲ್ಲ.