Tag: night traffic

  • `ಪಬ್ಲಿಕ್’ ಇಂಪ್ಯಾಕ್ಟ್: ಬಂಡೀಪುರದಲ್ಲಿ ರಾತ್ರಿ ಸಂಚಾರ ನಿರ್ಬಂಧ ತೆರವು ಇಲ್ಲ- ಎಚ್‍ಡಿಕೆ ಸ್ಪಷ್ಟನೆ

    `ಪಬ್ಲಿಕ್’ ಇಂಪ್ಯಾಕ್ಟ್: ಬಂಡೀಪುರದಲ್ಲಿ ರಾತ್ರಿ ಸಂಚಾರ ನಿರ್ಬಂಧ ತೆರವು ಇಲ್ಲ- ಎಚ್‍ಡಿಕೆ ಸ್ಪಷ್ಟನೆ

    ಬೆಂಗಳೂರು: ಬಂಡೀಪುರದಲ್ಲಿ ರಾತ್ರಿ ವೇಳೆ ವಾಹನ ಸಂಚಾರ ಮತ್ತು ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡುವ ವಿಚಾರವನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ.

    ಈ ಬಗ್ಗೆ ನಿಮ್ಮ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ವರದಿಗೆ ಸ್ಪಂದಿಸಿದ ಕುಮಾರಸ್ವಾಮಿ, ಬಂಡಿಪುರದಲ್ಲಿ ರಾತ್ರಿ ವೇಳೆ ವಾಹನ ಸಂಚಾರವನ್ನು ತೆರವು ಮಾಡಬೇಕೆಂಬ ಕೋರಿಕೆಯ ಬಗ್ಗೆ ನಾನು ಪರಾಮರ್ಶಿಸಿದ್ದೇನೆ. ರಾತ್ರಿ ಸಂಚಾರವನ್ನು ತೆರವು ಮಾಡುವುದಿಲ್ಲ. ಈಗಿರುವ ನಿರ್ಬಂಧ ಮುಂದುವರಿಯಲಿದೆ ಅಂತ ಸ್ಪಷ್ಟಪಡಿಸಿದ್ದಾರೆ.  ಇದಲ್ಲದೆ ಎಲಿವೆಟೆಡ್ ರಸ್ತೆ ನಿರ್ಮಾಣ ಕಾರ್ಯಸಾಧುವಲ್ಲ ಎಂದೂ ತೀರ್ಮಾನಿಸಿದ್ದೇನೆ ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅನುಮತಿ- ಕೇರಳದ ಲಾಬಿಗೆ ಮಣಿದ್ರಾ ಸಿಎಂ? ಏನಿದು ವಿವಾದ?

    ಈ ಬಗ್ಗೆ ಶುಕ್ರವಾರ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಸುದ್ದಿಗಾರರ ಪ್ರಶ್ನೆಗೆ ಗರಂ ಆಗಿ ಉತ್ತರಿಸಿದ್ದರು. ಬಂಡೀಪುರ ಅರಣ್ಯ ಪ್ರದೇಶದ ಕುರಿತಾಗಿ ಸರ್ಕಾರದ ನಿರ್ಧಾರ ಏನು ಎಂದು ಪ್ರಶ್ನಿಸಿದಕ್ಕೆ ಸಿಡಿಮಿಡಿಗೊಂಡ ಅವರು, ಸುಪ್ರೀಂ ಕೋರ್ಟ್ ನಿಂದ ಆದೇಶ ಹೊರ ಬರದೇ ನಾನು ವೈಯಕ್ತಿಕವಾಗಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ತಮ್ಮ ಹಿಂದಿನ ಹೇಳಿಯನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದರು. ಇದನ್ನೂ ಓದಿ:  ಬಂಡೀಪುರದಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅವಕಾಶವಿಲ್ಲ: ಸಚಿವ ಆರ್ ಶಂಕರ್

    ಸುಪ್ರೀಂ ಕೋರ್ಟ್, ಅರಣ್ಯ ಹಾಗೂ ಪರಿಸರ ಇಲಾಖೆ ಸೇರಿ ಒಪ್ಪಿಗೆ ನೀಡದೇ ನಾನು ಒಪ್ಪಿಕೊಂಡರೆ ಸಮಸ್ಯೆ ಇತ್ಯರ್ಥ ಆಗುವುದಿಲ್ಲ. ನಾನು ಹೀಗೆ ತೀರ್ಪು ನೀಡಿ ಅಂತಾ ಸುಪ್ರೀಂ ಕೋರ್ಟ್ ಗೆ ಹೇಳಲು ಬರುವುದಿಲ್ಲ. ರಸ್ತೆ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ಕೊಟ್ಟರೆ ಬೇಡ ಅಂತಾ ಹೇಳುವುದಕ್ಕೆ ನಾನು ಯಾರು? ಆದರೆ ಪತ್ರದ ಬಗ್ಗೆ ನನಗೆ ಕೇಳಬೇಡಿ, ಮುಖ್ಯ ಕಾರ್ಯದರ್ಶಿಗಳನ್ನು ವಿಚಾರಿಸಿ ಎಂದು ಹೇಳಿದ್ದರು. ಇದನ್ನೂ ಓದಿ: ಅಣ್ಣ ಬಂಡೀಪುರದಲ್ಲಿ ಫ್ಲೈಓವರ್ ಬಗ್ಗೆ ಮಾತನಾಡಿದ್ರೆ, ತಮ್ಮ ಇಲ್ಲ ಅಂದ್ರು!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews