Tag: night patrolling

  • ಭಟ್ಕಳದಲ್ಲಿ ಮಹಿಳಾ ಪೊಲೀಸರಿಂದಲೇ ರಾತ್ರಿ ಗಸ್ತು – ನಿರ್ಭೀತಿಯಿಂದ ವಾಹನಗಳ ತಪಾಸಣೆ, ವಿಚಾರಣೆ

    ಭಟ್ಕಳದಲ್ಲಿ ಮಹಿಳಾ ಪೊಲೀಸರಿಂದಲೇ ರಾತ್ರಿ ಗಸ್ತು – ನಿರ್ಭೀತಿಯಿಂದ ವಾಹನಗಳ ತಪಾಸಣೆ, ವಿಚಾರಣೆ

    ಕಾರವಾರ: ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಮಾನರಾಗಿ ಪೈಪೋಟಿ ನೀಡುತ್ತಿದ್ದಾರೆ. ಅದರಲ್ಲೂ ಪೊಲೀಸ್ ಇಲಾಖೆಯಲ್ಲೂ ಸಹ ಸೇವೆ ಸಲ್ಲಿಸುವ ಮೂಲಕ ತಮ್ಮ ಸಾಮರ್ಥ್ಯವನ್ನ ಪ್ರದರ್ಶಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಉತ್ತರಕನ್ನಡ ಜಿಲ್ಲೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಗೆ ರಾತ್ರಿ ಗಸ್ತಿಗೆ ನಿಯೋಜನೆ ಮಾಡಿದ್ದಾರೆ. ಸಂಪೂರ್ಣ ಮಹಿಳಾ ಪೊಲೀಸರ ತಂಡವೇ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸಿದೆ.

    ಹೌದು, ಸಾಮಾನ್ಯವಾಗಿ ಪೊಲೀಸ್ ಇಲಾಖೆಯಲ್ಲಿ ರಾತ್ರಿ ಕರ್ತವ್ಯಕ್ಕೆ ಮಹಿಳಾ ಸಿಬ್ಬಂದಿಯನ್ನು ಠಾಣೆಯಲ್ಲಿ ಮಾತ್ರ ನಿಯೋಜನೆ ಮಾಡುತ್ತಿದ್ದರು. ಇದೀಗ ಮೊದಲ ಬಾರಿಗೆ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ರಾತ್ರಿ ವೇಳೆ ಮಹಿಳಾ ಪೊಲೀಸರನ್ನು ಗಸ್ತು ಕಾರ್ಯಕ್ಕೆ ನಿಯೋಜಿಸಲಾಗಿದೆ. ಪಿಎಸ್‍ಐ ಸುಮಾ ನೇತೃತ್ವದಲ್ಲಿ ತಡರಾತ್ರಿ ಆಯಕಟ್ಟಿನ ಸ್ಥಳಗಳಲ್ಲಿ ವಾಹನ ತಪಾಸಣೆ ನಡೆಸಿದ್ದಾರೆ. ಶಂಕಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಸುರಕ್ಷತೆ ಮರೆತ ಬಿಎಂಟಿಸಿ – ಕಳ್ಳರ ಅಡ್ಡವಾದ ಬಸ್‍ಗಳು

    ಈ ವಿಚಾರವಾಗಿ ಮಾತನಾಡಿದ ಸ್ಥಳೀಯರೊಬ್ಬರು, ಮಹಿಳಾ ಸಿಬ್ಬಂದಿಯ ರಾತ್ರಿ ಗಸ್ತು ಇತರೆ ಮಹಿಳೆಯರಿಗೂ ಸ್ಫೂರ್ತಿ ನೀಡುವಂತಿದೆ. ಜೊತೆಗೆ ಮಹಿಳೆಯರಿಗೂ ಸುರಕ್ಷತೆಯ ಭಾವನೆ ಮೂಡಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಠಾಣೆಯಲ್ಲೂ ಹದಿನೈದು ದಿನಗಳಿಗೊಮ್ಮೆ ಮಹಿಳಾ ಸಿಬ್ಬಂದಿಯನ್ನು ರಾತ್ರಿ ಗಸ್ತಿಗೆ ನಿಯೋಜಿಸಲು ಚಿಂತನೆ ನಡೆದಿದೆ. ಇದು ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗಲಿದೆ. ಇದನ್ನೂ ಓದಿ: ಕಸದ ವಾಹನಗಳ ಮೇಲೆ BBMP ನಾಮಫಲಕ ಹಾಕುವಂತಿಲ್ಲ – ಹೆಸರು ಹಾಕಿದ ವಾಹನಗಳ ಮೇಲೆ ಕ್ರಿಮಿನಲ್ ಕೇಸ್

    Live Tv
    [brid partner=56869869 player=32851 video=960834 autoplay=true]