Tag: nigerians

  • ಲಿವಿಂಗ್ ಟುಗೆದರ್‌ನಲ್ಲಿದ್ದ ಪ್ರಿಯತಮೆಯೊಂದಿಗೆ ಸಲುಗೆಯಿಂದಿದ್ದ ಸ್ನೇಹಿತನನ್ನೇ ಇರಿದು ಕೊಂದ

    ಲಿವಿಂಗ್ ಟುಗೆದರ್‌ನಲ್ಲಿದ್ದ ಪ್ರಿಯತಮೆಯೊಂದಿಗೆ ಸಲುಗೆಯಿಂದಿದ್ದ ಸ್ನೇಹಿತನನ್ನೇ ಇರಿದು ಕೊಂದ

    ಬೆಂಗಳೂರು: ಲಿವಿಂಗ್ ಟುಗೆದರ್‌ನಲ್ಲಿದ್ದ (Living Together) ಪ್ರಿಯಮೆಯೊಂದಿಗೆ ತನ್ನ ಗೆಳೆಯ ಸಲುಗೆಯಿಂದ ಇರುತ್ತಿದ್ದನ್ನು ನೋಡಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಅಮೃತಹಳ್ಳಿ ಠಾಣಾ ವ್ಯಾಪ್ತಿಯ ದಾಸರಹಳ್ಳಿಯಲ್ಲಿ ನಡೆದಿದೆ.

    ನೈಜೀರಿಯ (Nigeria) ಮೂಲದ ಇಬ್ಬರು ವ್ಯಕ್ತಿಗಳ ಗಲಾಟೆ, ಓರ್ವನ ಕೊಲೆಯಲ್ಲಿ ಅಂತ್ಯಗೊಂಡಿದೆ. ಭಾನುವಾರ ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗಲಾಟೆಯಲ್ಲಿ ಸ್ನೇಹಿತ ಸುಲೇಮಾನ್ (38)ನನ್ನು ಕೊಲೆ ಮಾಡಿರುವ ಆರೋಪಿ ವಿಕ್ಟರ್‌ನನ್ನು ಪೊಲೀಸರು (Bengaluru Police) ಬಂಧಿಸಿದ್ದಾರೆ. ಇದನ್ನೂ ಓದಿ: ವಿಶ್ವವಿದ್ಯಾಲಯದಿಂದ ಎಡವಟ್ಟು- ಹಾಲ್ ಟಿಕೆಟ್‍ನಲ್ಲಿ ವಿದ್ಯಾರ್ಥಿನಿ ಫೋಟೋ ಬದಲು ಐಶ್ವರ್ಯ ರೈ ಫೋಟೋ

    ಆರೋಪಿ ವಿಕ್ಟರ್ ತನ್ನ ಪ್ರಿಯತಮೆಯೊಂದಿಗೆ ಲಿವಿಂಗ್ ಟುಗೆದರ್‌ನಲ್ಲಿದ್ದ. ಆಗಾಗ್ಗೆ ರೂಮಿಗೆ ಬರ್ತಿದ್ದ ಸುಲೇಮಾನ್, ಆತನ ಗೆಳತಿಯ (Girlfriend) ಜೊತೆ ಸಲುಗೆಯಿಂದ ಇರುವುದನ್ನು ನೋಡಿದ್ದಾನೆ. ಇದೇ ಕಾರಣಕ್ಕೆ ಗಲಾಟೆ ಮಾಡಿ ಚಾಕು ತೆಗೆದುಕೊಂಡು ಇರಿದು ಗೆಳೆಯನನ್ನೇ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಇತ್ತ ಪ್ರಕರಣ (FIR) ದಾಖಲಿಸಿಕೊಂಡಿದ್ದ ಅಮೃತಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: CJI ಹುದ್ದೆಗೆ ನ್ಯಾಯಮೂರ್ತಿ ಚಂದ್ರಚೂಡ್ ಹೆಸರು ಶಿಫಾರಸು

    ವೀಸಾ (Visa), ಪಾಸ್‌ಪೋರ್ಟ್ (PassPort) ಬಗ್ಗೆ ಪೊಲೀಸರಿಂದ ಪರಿಶೀಲನೆ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ನೈಜೀರಿಯನ್ಸ್ ಯುವತಿಯರಿಂದ ಮಾಂಸ ದಂಧೆ ಬಯಲು

    ನೈಜೀರಿಯನ್ಸ್ ಯುವತಿಯರಿಂದ ಮಾಂಸ ದಂಧೆ ಬಯಲು

    – ಶಾಸಕನ ಮನೆ ಮುಂದೆನೇ ದಂಧೆ
    – ಅರ್ಧ ಕಿ.ಮೀ ದೂರದಲ್ಲಿದೆ ಪೊಲೀಸ್ ಠಾಣೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನೈಜೀರಿಯನ್ಸ್ ಯುವತಿಯರು ಮಾಂಸ ದಂಧೆ ನಡೆಸುತ್ತಿದ್ದಾರೆ. ಈ ದಂಧೆಯ ಕರಾಳ ಮುಖವನ್ನು ಪಬ್ಲಿಕ್ ಟಿವಿ ಬಯಲು ಮಾಡಿದೆ.

    ನೈಜೀರಿಯನ್ಸ್ ಪ್ರಜೆಗಳು ಎಂದರೆ ಸಾಕು, ನಮ್ಮ ಕಣ್ಣ ಮುಂದೆ ಬರೋದು, ಕಪ್ಪು ವರ್ಣದ ದೈತ್ಯ ದೇಹ. ಹೆಲ್ಮೆಟ್ ಇಲ್ಲದೆ ಟ್ರಾಫಿಕ್ ರೂಲ್ಸ್ ಗೆ ಡೋಂಟ್ ಕೇರ್ ಎಂದುಕೊಂಡು ಪೊಲೀಸರಿಗೆ ಅವಾಜ್ ಹಾಕುತ್ತಾರೆ. ಅಲ್ಲದೆ ಕಂಠಪೂರ್ತಿ ಕುಡಿದು ಮಧ್ಯರಾತ್ರಿವರೆಗೂ ಮೋಜು ಮಸ್ತಿ ಮಾಡುತ್ತಾರೆ. ಇಷ್ಟೆಲ್ಲ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವ ನೈಜೀರಿಯನ್ಸ್ ಪ್ರಜೆಗಳು ವೇಶ್ಯವಾಟಿಕೆ ದಂಧೆ ಮಾಡುವ ಮೂಲಕ ನಮ್ಮ ಬೆಂಗಳೂರಿಗೆ ಕಳಂಕ ತರಲು ಯತ್ನಿಸುತ್ತಿದ್ದಾರೆ.

    ಈ ಬಗ್ಗೆ ಖಚಿತ ಮಾಹಿತಿ ಪಡೆದ ಪಬ್ಲಿಕ್ ಟಿವಿ ತಂಡ, ನೇರವಾಗಿ ಬೆಂಗಳೂರಿನ ಕಲ್ಯಾಣನಗರ ಸಿಗ್ನಲ್‍ಗೆ ಹೋಗಿದೆ. ಅಲ್ಲಿಗೆ ಹೋಗಿ ಕಾರು ಇಳಿದ ತಂಡಕ್ಕೆ ಶಾಕ್ ಆಗಿತ್ತು. ಏಕೆಂದರೆ ಕಲ್ಯಾಣನಗರ ಸಿಗ್ನಲ್ ಸುತ್ತಮುತ್ತಲಿನ ಸುಮಾರು 4 ಕಿ.ಮೀ ಸುತ್ತಮುತ್ತ ಕೇವಲ ನೈಜೀರಿಯನ್ಸ್ ಯುವತಿಯರ ಗುಂಪು ಇರುತ್ತದೆ.

    ಇವರ ಜೊತೆ ಮಾತನಾಡಿಸಲು ಪಬ್ಲಿಕ್ ಟಿವಿ ತಂಡ ಕಾರಿನಿಂದ ರಸ್ತೆಗೆ ಇಳಿಯುತ್ತಿದ್ದ ಹಾಗೆ ಅರ್ಥವಾಗದ ಇಂಗ್ಲೀಷ್ ಭಾಷೆಯಲ್ಲಿ ಮಾತಾಡಿಸುತ್ತಾ ಹತ್ತಿರಕ್ಕೆ ಬಂದರು. ಬಳಿಕ ತಂಡ ಹಾಗೂ ನೈಜೀರಿಯನ್ಸ್ ಯುವತಿ ನಡುವೆ ನಡೆದ ಸಂಭಾಷಣೆ ಇಲ್ಲಿದೆ;

    ಪಬ್ಲಿಕ್ ಟಿವಿ – ಎಷ್ಟು ರೇಟು
    ನೈಜೀರಿಯನ್ಸ್ ಯುವತಿ – ಐದು ಸಾವಿರ
    ಪಬ್ಲಿಕ್ ಟಿವಿ – ಇಡೀ ರಾತ್ರಿಗೆ ಎಷ್ಟು
    ಯುವತಿ ಹತ್ತು ಸಾವಿರ
    ಪಬ್ಲಿಕ್ ಟಿವಿ – ಕ್ಯಾಶ್ ಅಥವಾ ಕಾರ್ಡ್
    ಯುವತಿ – ಒನ್ಲೀ ಕ್ಯಾಶ್

    ಪಬ್ಲಿಕ್ ಟಿವಿ – ನಾವು ಇಬ್ಬರು ಇದ್ದೀವಿ ಎಷ್ಟು?
    ಯುವತಿ- ಐದು ಸಾವಿರ
    ಪಬ್ಲಿಕ್ ಟಿವಿ – ಮನೆ?
    ಯುವತಿ – ಇಲ್ಲೇ ಪಕ್ಕದಲ್ಲಿ ನಮ್ಮ ಜಾಗ ಇದೆ, ಎರಡು ನಿಮಿಷ ಜರ್ನಿ ಅಷ್ಟೇ
    ಪಬ್ಲಿಕ್ ಟಿವಿ – ನಿಮ್ಮ ಜೊತೆಯಲ್ಲಿ ಯಾರಿದ್ದಾರೆ?
    ಯುವತಿ – ನನ್ನ ತಂಗಿ ಇದ್ದಾಳೆ. ಏನೂ ಪ್ರಾಬ್ಲಮ್ ಇಲ್ಲ.
    ಪಬ್ಲಿಕ್ ಟಿವಿ – ನಮ್ಮ ಜೊತೆ ಬನ್ನಿ
    ಯುವತಿ – ನೋ

    ಪಬ್ಲಿಕ್ ಟಿವಿ – ಫಸ್ಟ್ ಟೈಂ ಬರುತ್ತಿದ್ದೀವಿ, ಪೊಲೀಸರು?
    ಯುವತಿ – ಏನೂ ಪ್ರಾಬ್ಲಮ್ ಇಲ್ಲ. ನಮ್ಮದೆ ಮನೆ ಇದೆ. ಯಾರೂ ಬರಲ್ಲ.. ಆಟೋ ಕರೀಲಾ? ಹೋಗೋಣ.
    ಯುವತಿ- ಇಬ್ಬರಿಗೆ 3 ಸಾವಿರ, ಫುಲ್ ನೈಟ್ 10 ಸಾವಿರ

    ಪಬ್ಲಿಕ್ ಟಿವಿ – ನಿಮ್ಮ ಜಾಗ ಎಲ್ಲಿದೆ.
    ಯುವತಿ- ಟು ಬಿಎಚ್‍ಕೆ ಮನೆ ಇದೆ. ನಾವು ಇಬ್ಬರು ಹುಡುಗಿಯರು ಇದ್ದೇವೆ. ಏನೂ ಪ್ರಾಬ್ಲಮ್ ಇಲ್ಲ. ಪೊಲೀಸರು ಆ ಕಡೆ ಬರಲ್ಲ. (ಒಬ್ಬರ ನಂತರ ಒಬ್ಬರು ಇಬ್ಬರು ಯುವತಿಯರು ಆಟೋ ಹತ್ತಿರ ಬಂದು ಮಾತಾಡ್ತಾರೆ)
    ಪಬ್ಲಿಕ್ ಟಿವಿ – ಓಕೆ ಕ್ಯಾಷ್ ಇಲ್ಲ. ಎಟಿಎಂ ನಿಂದ ದುಡ್ಡು ತರುತ್ತೀವಿ ಇರಿ

    ಮತ್ತೊಂದು ಇಂಟರೆಸ್ಟಿಂಗ್ ವಿಚಾರ ಎಂದರೆ ಅನರ್ಹ ಶಾಸಕ ಬಿಸಿ ಪಾಟೀಲ್ ಮನೆ ಕೂಡ ಇಲ್ಲಿಯೇ ಇದೆ. ಬಿ.ಸಿ ಪಾಟೀಲ್ ಅವರಿಗೆ ಗೊತ್ತಿದೆಯೋ ಇಲ್ಲವೋ. ಆದರೆ ಈ ಕಪ್ಪು ಸುಂದರಿಯರು ಅವರ ಮನೆ ಮುಂದೆನೇ ರಾಜಾರೋಷವಾಗಿ ಮಾಂಸ ದಂಧೆ ನಡೆಸುತ್ತಿದ್ದಾರೆ. ಇಲ್ಲಿಂದ ಕೇವಲ ಅರ್ಧ ಕಿ.ಮೀ ದೂರದಲ್ಲೇ ಬಾಣಸವಾಡಿ ಪೊಲೀಸ್ ಠಾಣೆ ಕೂಡ ಇದೆ. ಹೊಯ್ಸಳ ವಾಹನ ಬಂದಾಗ ಕತ್ತಲೆಗೆ ಸರಿಯುವ ಈ ಯುವತಿಯರು, ಹೊಯ್ಸಳ ಪಾಸ್ ಆಗುತ್ತಿದ್ದಂತೆಯೇ ಮತ್ತೆ ರೋಡಿಗೆ ಬರುತ್ತಾರೆ.

    ಈ ವಿಚಾರ ಪೊಲೀಸರಿಗೂ ಗೊತ್ತಿದೆ. ನಾವು ಪೊಲೀಸರನ್ನು ಏನ್ ಸಾರ್ ಇದೆಲ್ಲ, ನೀವು ಏನ್ ಮಾಡಲ್ವಾ ಎಂದು ಪ್ರಶ್ನಿಸಿದಾಗ, ನಮಗೂ ಓಡಿಸಿ ಓಡಿಸಿ ಸಾಕಾಗಿದೆ. ಠಾಣೆಗೆ ಕರೆದುಕೊಂಡು ಹೋದರೆ, ಬಟ್ಟೆ ಹರಿದುಕೊಂಡು ಗಲಾಟೆ ಮಾಡುತ್ತಾರೆ. ಇಲ್ಲಿಯೇ ಹಿಡಿಯೋಕೆ ಹೋದರೆ ನಮ್ಮ ಮೇಲೆಯೇ ಗಲಾಟೆಗೆ ಬರುತ್ತಾರೆ. ನಾವ್ ತಾನೇ ಏನ್ ಮಾಡಲಿ ಎಂದು ಪೊಲೀಸರು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

  • ಹೆಲ್ಮೆಟ್ ಇಲ್ಲದೆ ಜಾಲಿ ರೈಡ್ – ತಡೆಯೋಕೆ ಹೋದ್ರೆ ಪೊಲೀಸರ ಮೇಲೆಯೇ ಹಲ್ಲೆ

    ಹೆಲ್ಮೆಟ್ ಇಲ್ಲದೆ ಜಾಲಿ ರೈಡ್ – ತಡೆಯೋಕೆ ಹೋದ್ರೆ ಪೊಲೀಸರ ಮೇಲೆಯೇ ಹಲ್ಲೆ

    ಬೆಂಗಳೂರು: ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸುತ್ತಿದ್ದ ಸವಾರರನ್ನು ಪ್ರಶ್ನಿಸಿದಕ್ಕೆ ನೈಜಿರಿಯನ್ಸ್ ಪ್ರಜೆಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

    ನಗರದ ಕಮ್ಮನಹಳ್ಳಿ ವ್ಯಾಪ್ತಿಯಲ್ಲಿ ಹೆಲ್ಮೆಟ್ ಇಲ್ಲದೆ ಓಡಾಡುತ್ತಿದ್ದ ನೈಜಿರಿಯನ್ಸ್ ಪ್ರಜೆಗಳಿಬ್ಬರನ್ನು ಪೊಲೀಸರು ತಡೆದಿದ್ದರು. ಬಳಿಕ ಹೆಲ್ಮೆಟ್ ಹಾಗೂ ದಾಖಲೆ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಪೊಲೀಸರು ಪ್ರಶ್ನಿಸುತ್ತಿದ್ದಂತೆ ಇಬ್ಬರು ಜೋರು ಧ್ವನಿಯಲ್ಲಿ ಗಲಾಟೆ ಶುರು ಮಾಡಿ, ಎಎಸ್‍ಐ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಹಲ್ಲೆ ತಡೆಯುವುದಕ್ಕೆ ಹೋದ ಪೇದೆಯ ಮೇಲೆ ಹಲ್ಲೆ ಮಾಡಿದ್ದಾರೆ.

    ನಗರದ ಹೆಣ್ಣೂರು, ಕಮ್ಮನಹಳ್ಳಿ, ಅಮೃತಹಳ್ಳಿ, ಬಾಗಲೂರು, ರಾಮಮೂರ್ತಿನಗರ ಭಾಗದಲ್ಲಿ ಹೆಚ್ಚಾಗಿ ನೈಜಿರಿಯನ್ಸ್ ವಾಸ ಮಾಡುತ್ತಿದ್ದಾರೆ. ಇವರು ಯಾರಿಗೂ ಹೆದರುವುದಿಲ್ಲ. ಅಲ್ಲದೆ ಪೊಲೀಸರು ಕೂಡ ಇವರನ್ನು ತಡೆಯುವುದಕ್ಕೆ ಭಯಪಡುತ್ತಾರೆ. ಏಕೆಂದರೆ ಸುಖಾಸುಮ್ಮನೆ ಕೇಸ್ ಹಾಕುತ್ತಾರೆ, ಹೆಚ್ಚು ಕಡಿಮೆ ಆದರೆ ನಮ್ಮ ಕೆಲಸಕ್ಕೆ ಕುತ್ತು ಬರುತ್ತೆ ಎಂದು ನೋಡಿ ನೋಡದ ರೀತಿ ವರ್ತಿಸಿದ್ದಾರೆ.

    ಒಂದು ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಹಿಂದಿ, ಇಂಗ್ಲೀಷ್ ಭಾಷೆ ಬಿಟ್ಟು ಅವರ ಸ್ಥಳೀಯ ಭಾಷೆಯಲ್ಲಿ ಮಾತಾನಾಡುವುದಕ್ಕೆ ಶುರು ಮಾಡುತ್ತಾರೆ. ಪೊಲೀಸರು ಎಷ್ಟೇ ಹೇಳಿದರೂ, ಅದೇ ಅರ್ಥವಾಗದ ಭಾಷೆಯಲ್ಲಿ ಜಗಳಕ್ಕೆ ಬಿದ್ದು ನಡುರಸ್ತೆಯಲ್ಲೇ ಹೈಡ್ರಾಮ ಮಾಡುತ್ತಾರೆ. ಕೊನೆಗೆ ಅವರ ಹತ್ತಿರ ಜಗಳ ಮಾಡುವುದಕ್ಕೆ ಆಗದೇ ಪೊಲೀಸರೇ ಅವರನ್ನು ಬಿಟ್ಟು ಕಳುಹಿಸುತ್ತಾರೆ.

    ಹಲ್ಲೆಗೊಳಾಗಾದ ಪೊಲೀಸರು ಸಹ ಈ ಬಗ್ಗೆ ದೂರು ನೀಡಲು ಹೋಗುವುದಿಲ್ಲ. ಯಾಕೆ ದೂರು ನೀಡುವುದಿಲ್ಲ ಎಂದು ಪೊಲೀಸರಲ್ಲಿ ಪ್ರಶ್ನಿಸಿದಾಗ, ನಾವು ದೂರು ನೀಡಿದರೆ ಅವರ ದೇಶದ ರಾಯಭಾರಿ ಕಚೇರಿಯಿಂದ ನೋಟಿಸ್ ಕಳುಹಿಸುತ್ತಾರೆ. ನೋಟಿಸ್, ಕೇಸ್ ಎಂದು ಓಡಾಡುವುದಕ್ಕೆ ನಮಗೆ ಸಾಧ್ಯವಿಲ್ಲ ಎಂದು ಹೇಳುತ್ತಾರೆ.

  • ಗ್ರೇಟರ್ ನೋಯ್ಡಾದಲ್ಲಿ ನೈಜೀರಿಯಾ ಪ್ರಜೆಗಳ ಮೇಲೆ ದಾಳಿ: ಸಿಎಂ ಆದಿತ್ಯನಾಥ್‍ಗೆ ಕರೆ ಮಾಡಿ ವರದಿ ಕೇಳಿದ ಸುಷ್ಮಾ ಸ್ವರಾಜ್

    ಗ್ರೇಟರ್ ನೋಯ್ಡಾದಲ್ಲಿ ನೈಜೀರಿಯಾ ಪ್ರಜೆಗಳ ಮೇಲೆ ದಾಳಿ: ಸಿಎಂ ಆದಿತ್ಯನಾಥ್‍ಗೆ ಕರೆ ಮಾಡಿ ವರದಿ ಕೇಳಿದ ಸುಷ್ಮಾ ಸ್ವರಾಜ್

    ನವದೆಹಲಿ: 12ನೇ ತರಗತಿಯ ಯುವಕನೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಗ್ರೇಟರ್ ನೋಯ್ಡಾದಲ್ಲಿ ಸೋಮವಾರದಂದು ಆಫ್ರಿಕಾ ಪ್ರಜೆಗಳ ಮೇಲೆ ದಾಳಿ ನಡೆದಿದ್ದು ಈ ಬಗ್ಗೆ ವರದಿ ನೀಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಕೇಳಿದ್ದಾರೆ.

    ಶನಿವಾರದಂದು ಗ್ರೇಟರ್ ನೋಯ್ಡಾದಲ್ಲಿ 19 ವರ್ಷದ ಮನಿಷ್ ಖರಿ ಮೃತಪಟ್ಟಿದ್ದು, ಈತ ಮಾದಕ ದ್ರವ್ಯದ ಓವರ್‍ಡೋಸ್‍ನಿಂದ ಸಾವನ್ನಪ್ಪಿದ್ದಾನೆಂದು ಸ್ಥಳಿಯರು ಆರೋಪಿಸಿದ್ರು. ಮನಿಷ್ ಕೊನೆಯ ಬಾರಿಗೆ ನೈಜೀರಿಯಾ ಪ್ರಜೆಗಳ ಗುಂಪಿನ ಜೊತೆಯಲ್ಲಿದ್ದಿದ್ದು ನೋಡಿದ್ದೆವು ಎಂದು ಸ್ಥಳೀಯರು ಹೇಳಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 5 ನೈಜೀರಿಯಾ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದರು.

    ಯುವಕನ ಸಾವಿನ ಹಿನ್ನೆಲೆಯಲ್ಲಿ ಸೋಮವಾರದಂದು ನೂರಾರು ಜನ ಸ್ಥಳೀಯರು ಪ್ರತಿಭಟನೆ ನಡೆಸಿದ್ರು. ಈ ವೇಳೆ ಗ್ರೇಟರ್ ನೊಯ್ಡಾದ ಪರಿ ಚೌಕ್ ಬಳಿ 4 ನೈಜೀರಿಯಾ ಪ್ರಜೆಗಳ ಮೇಲೆ ದಾಳಿ ನಡೆದಿದೆ. ಘಟನೆಯಲ್ಲಿ ನೈಜೀರಿಯ ಪ್ರಜೆಗಳು ಗಾಯಗೊಂಡಿದ್ದಾರೆ. ಈ ಬಗ್ಗೆ ನೈಜೀರಿಯಾದ ಯುವಕನೊಬ್ಬ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ್ದು, ಇದಕ್ಕೆ ಸುಷ್ಮಾ ಸ್ವರಾಜ್ ಪ್ರತಿಕ್ರಿಯಿಸಿದ್ದಾರೆ. ಯೋಗಿ ಆದಿತ್ಯನಾಥ್ ಅವರೊಂದಿಗೆ ನಾನು ಮಾತನಾಡಿದ್ದೇನೆ. ಈ ಬಗ್ಗೆ ಸೂಕ್ತ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.