Tag: Nidumamidi swamiji

  • ಕಲ್ಬುರ್ಗಿ, ಗೌರಿಯ ಹಂತಕರ ಹಿಟ್‌ಲಿಸ್ಟ್‌ನಲ್ಲಿ ಸಿದ್ದರಾಮಯ್ಯ ಕೂಡಾ ಇದ್ರು: ನಿಡುಮಾಮಿಡಿ ಸ್ವಾಮೀಜಿ

    ಕಲ್ಬುರ್ಗಿ, ಗೌರಿಯ ಹಂತಕರ ಹಿಟ್‌ಲಿಸ್ಟ್‌ನಲ್ಲಿ ಸಿದ್ದರಾಮಯ್ಯ ಕೂಡಾ ಇದ್ರು: ನಿಡುಮಾಮಿಡಿ ಸ್ವಾಮೀಜಿ

    ಚಿಕ್ಕಬಳ್ಳಾಪುರ: ಹತ್ಯೆಗೀಡಾಗಿರುವ ಎಂ.ಎಂ ಕಲ್ಬುರ್ಗಿ (MM Kalburgi), ಗೌರಿ ಲಂಕೇಶ್ (Gauri Lankesh) ಅವರಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕೂಡಾ ಹಿಟ್ ಲಿಸ್ಟ್‌ನಲ್ಲಿದ್ರು ಅಂತ ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ (Nidumamidi Swamiji) ಹೇಳಿಕೆ ನೀಡಿದ್ದಾರೆ.

    ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಗೌರಿಬಿದನೂರು ನಗರದ ಅಂಬೇಡ್ಕರ್ ಸಮಾನತಾ ಸೌಧದಲ್ಲಿ ನಡೆದ ಚಿಂತಕ ಪ್ರೋ.ಬಿ ಗಂಗಾಧರಮೂರ್ತಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಂ.ಎಂ ಕಬ್ಬುರ್ಗಿ ಹತ್ಯೆ ಅದಾಗ ಮೇಣದ ಬತ್ತಿ ಹಚ್ಚಿ ಸುಮ್ಮನಾಗಿದ್ದೀವಿ. ಗೌರಿ ಹೋದಾಗ ನಾವು ಗೌರಿ ಅಂತ ಮೇಣದ ಬತ್ತಿ ಹಚ್ಚಿ ಸುನ್ಮನಾಗಿದ್ದೀವಿ. ಕೊಲೆಯಂತಹ ಆತಂಕ ನಿಡುಮಾಮಿಡಿ, ಭಗವಾನ್, ಚಂಪಾಗೂ ಬಂದಿತ್ತು. ಸಿದ್ದರಾಮಯ್ಯನವರಿಗೂ ಬಂದಿತ್ತು, ಅವರು ಹಿಟ್ ಲಿಸ್ಟ್ ನಲ್ಲಿದ್ರು ಎಂದು ಹೇಳಿದರು.

    ಸಿದ್ದರಾಮಯ್ಯನವರು ಹಿಟ್ ಲಿಸ್ಟ್‌ನಲ್ಲಿದ್ದು, ಅವರಿಗೆ ತೀವ್ರವಾದ ಬೆದರಿಕೆ ಇತ್ತು. ದೇವರ ಕೃಪೆ ಕೊಲ್ಲುವವನು ಒಬ್ಬ ಇದ್ರೆ, ಕಾಯುವವನೂ ಒಬ್ಬ ಇರುತ್ತಾನೆ. ನಾನು ಹೋದ್ರೆ ನಿಡುಮಾಮಿಡಿ ಅಂತ ಒಂದು ದಿನ ಮೇಣದ ಬತ್ತಿ ಹಚ್ಚಿ ಬಿಡುತ್ತೀರಿ. ಸಿದ್ದರಾಮಯ್ಯನವರು ಹೋದ್ರೂ ಒಂದು ದಿನ ಮೇಣದ ಬತ್ತಿ ಹಚ್ಚಿ ಬಿಡುತ್ತೀವಿ. ಸತ್ತ ಮೇಲೆ ಮೇಣದ ಬತ್ತಿ ಹಚ್ಚಿ ಸಮಾಧಾನ ಪಡುವ ಬದಲು ಬದುಕಿದ್ದಾಗ ಅವರಿಗೆ ಶಕ್ತಿ ತುಂಬಿ. ಅಧಿಕಾರವನ್ನು ಅವರಿಗೆ ಕೊಟ್ಟು, ಸಮಾಜದಲ್ಲಿ ಬದಲಾವಣೆ ತನ್ನಿ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯನವರೇ 10% ಕಮಿಷನ್‍ ತಗೊಳ್ಳಿ – ಬಿಜೆಪಿಯವರ ತರ 40% ಬೇಡ: ನಿಡುಮಾಮಿಡಿ ಶ್ರೀ

    ಕರ್ನಾಟಕದ ಜನತೆ ಈಗಾಗಲೇ ಬದಲಾವಣೆಯನ್ನು ಬಯಸುತ್ತಿದೆ. ಅದನ್ನು ಮತವನ್ನಾಗಿ ಪರಿವರ್ತಿಸಿ, ಆ ಸ್ಥಾನಕ್ಕೆ ಬರುವುದು ನಿಮ್ಮ ಮೇಲೆ ನಿಂತಿದೆ. ಸಿದ್ದರಾಮಯ್ಯನವರು ಈ ರಾಜ್ಯದ ಆಶಾಕಿರಣ. ದೇವರು ಅವರಿಗೆ ಆ ಶಕ್ತಿ ಒದಗಿಸಿಕೊಡಲಿ ಎಂದು ನಿಡುಮಾಮಿಡಿ ಶ್ರೀಗಳು ಪರೋಕ್ಷವಾಗಿ ಅವರನ್ನು ಸಿಎಂ ಆಗಬೇಕು ಅಂತ ಆಶಿಸಿದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಸರ್ಕಾರ ಉರುಳಿಸುವ ಶಕ್ತಿ ಇದೆ – ಸತೀಶ್ ಜಾರಕಿಹೊಳಿ

    Live Tv
    [brid partner=56869869 player=32851 video=960834 autoplay=true]

  • ಹಂತಕರ ಮುಂದಿನ ಟಾರ್ಗೆಟ್ ನಾನು, ನಂತ್ರ ಭಗವಾನ್: ನಿಡುಮಾಮಿಡಿ ಶ್ರೀ

    ಹಂತಕರ ಮುಂದಿನ ಟಾರ್ಗೆಟ್ ನಾನು, ನಂತ್ರ ಭಗವಾನ್: ನಿಡುಮಾಮಿಡಿ ಶ್ರೀ

    ಬೆಂಗಳೂರು: ಹಂತಕರು ಒಟ್ಟು ಐವರು ವಿಚಾರವಂತರ ಹತ್ಯೆಯ ಗುರಿ ಇಟ್ಟುಕೊಂಡಿದ್ದು, ಅದರಲ್ಲಿ ಕಲ್ಬುರ್ಗಿ ಹಾಗೂ ಗೌರಿ ಹತ್ಯೆ ಆಗಿದೆ. ಈಗ ಅವರ ಮುಂದಿನ ಹಿಟ್ ಲಿಸ್ಟ್‍ನಲ್ಲಿ ನಾನು ಇರಬಹುದು ಮುಂದೆ ಭಗವಾನ್ ಇರಬಹುದು ಎಂದು ನಿಡುಮಾಮಿಡಿ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಹೇಳಿದ್ದಾರೆ.

    ಖಾಸಗಿ ಹೋಟೆಲ್ ನಲ್ಲಿ ಗೌರಿ ಲಂಕೇಶ್ ಅವರಿಗೆ ಪರಿಯಾರ್ ಪ್ರಶಸ್ತಿ ಸಮಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೌರಿ ಹತ್ಯೆಯನ್ನು ಸಂಭ್ರಮಿಸುವವರನ್ನು ನೋಡಿದಾಗಲೇ ಹಂತಕರು ಯಾರು ಅನ್ನೋದು ತಿಳಿಯುತ್ತದೆ. ಕಲ್ಬುರ್ಗಿ ಅವರದ್ದು ಧಾರ್ಮಿಕ ಹತ್ಯೆ ಹಾಗೂ ಗೌರಿ ಅವರದ್ದು ರಾಜಕೀಯ ಹತ್ಯೆ. ಮುಂದೆ ನನ್ನನ್ನೇ ಟಾರ್ಗೆಟ್ ಮಾಡಲಾಗಿದೆ ಅನ್ನೋದು ನನಗೆ ಗೊತ್ತಿದೆ. ನನಗೆ ಸಾಕಷ್ಟು ಜನ ಹೇಳಿದ್ದಾರೆ ಎಂದು ಸ್ವಾಮೀಜಿ ತಿಳಿಸಿದರು.

    ಅನಂತಮೂರ್ತಿಯವರ ಪುಸ್ತಕದ ಒಂದು ಮಾತನ್ನು ಕಲ್ಬುರ್ಗಿ ಅವರು ಸಭೆಯಲ್ಲಿ ಉಲ್ಲೇಖ ಮಾಡಿದ್ದರು. ಅದೇ ಅವರ ಹತ್ಯೆಗೆ ಕಾರಣವಾಯಿತು. ಕಲ್ಬುರ್ಗಿ ಮತ್ತು ಗೌರಿಯ ಹಂತಕರು ಹಿಂದು ಭಯೋತ್ಪಾದಕರಾಗಿದ್ದಾರೆ. ರಾಘವೇಶ್ವರ ಶ್ರೀ ವಿರುದ್ಧ ತನಿಖೆ ನಡೆಯುತ್ತಿದೆ ಹಾಗೂ ಎಲ್ಲಾ ಆಯಾಮದಿಂದಲೂ ತನಿಖೆ ನಡೆಯುತ್ತಿದೆ. ಅಷ್ಟಕ್ಕೆ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸೋದು ಸರಿಯಿಲ್ಲ ಎಂದು ನಿಡುಮಾಮಿಡಿ ಸ್ವಾಮೀಜಿ ಹೇಳಿದರು.

    ವಿಚಾರವಾದಿಗಳ ವೇದಿಕೆಯಲ್ಲಿ ಗೌರಿ ಹಂತಕರನ್ನು ಹಿಡಿಯಲು ರಾಜ್ಯ ಸರ್ಕಾರಕ್ಕೆ ಡೆಡ್‍ಲೈನ್ ಕೊಟ್ಟು ಮುಂದಿನ ವಿಜಯದಶಮಿಯೊಳಗೆ ಹಂತಕರನ್ನು ಹಿಡಿಯಬೇಕೆಂದು ಆಗ್ರಹಿಸಿದೆ. ಹಂತಕರನ್ನು ಹಿಡಿಯದೆ ಇದ್ದರೆ ರಾಜ್ಯ ಸರ್ಕಾರ ತನ್ನ ವೈಫಲ್ಯವನ್ನು ಒಪ್ಪಿಕೊಂಡು ರಾಜ್ಯ ಜನರ ಮುಂದೆ ಕ್ಷಮೆ ಯಾಚಿಸಬೇಕು ಎಂದು ಸ್ವಾಮೀಜಿ ತಿಳಿಸಿದರು.

    ಗೌರಿ ಮತ್ತು ಕಲ್ಬುರ್ಗಿ ಹಂತಕರು ಯಾರು ಎನ್ನುವುದಕ್ಕೆ ನಿಡುಮಾಮಿಡಿ ಶ್ರೀ ಪ್ರಣವಾನಂದ ಸ್ವಾಮೀಜಿ ಕಡೆ ಬೊಟ್ಟು ಮಾಡಿದ್ದಾರೆ. ಕಲ್ಬುರ್ಗಿ ಹತ್ಯೆಗೆ ಹದಿನೈದು ದಿನದ ಮುಂಚೆ ಪ್ರಣವಾನಂದ ಸ್ವಾಮೀಜಿ ಸುದ್ದಿಗೋಷ್ಟಿ ಕರೆದು ಐದು ಜನರ ಪ್ರಾಣ ತೆಗೆಯುತ್ತೇನೆ ಎಂದಿದ್ದರು. ಈಗ ಇಬ್ಬರ ಕೊಲೆಯಾಗಿದೆ. ಮುಂದೆ ನಾನು ಮತ್ತು ಭಗವಾನ್ ಲಿಸ್ಟ್ ನಲ್ಲಿದ್ದೇವೆ ಎಂದು ಸ್ವಾಮಿಜಿ ಹೇಳಿದರು.

    ಪ್ರಣವಾನಂದ ಕೊಲೆಯ ಪ್ರಾಯೋಜಕರು ಅವರನ್ನು ವಿಚಾರಣೆ ಮಾಡಿದರೆ ಹಂತಕರು ಗೊತ್ತಾಗಲಿದ್ದಾರೆ. ಐವರು ವಿಚಾರವಾದಿಗಳನ್ನು ಹತ್ಯೆ ಮಾಡೋದಾಗಿ ಹೇಳಿದರೂ ಯಾಕೆ ಸರ್ಕಾರ ಕ್ರಮ ಕೈಗೊಂಡಿಲ್ಲ ಆಗಲೇ ಎಲ್ಲರ ಲಿಸ್ಟ್ ರೆಡಿಯಾಗಿದೆ ಹಂತಕರು ಕರ್ನಾಟಕದವರು. ಆದರೆ ಬಾಡಿಗೆ ಕೊಲೆಗಾರರನ್ನು ತಂದಿರಬಹುದು. ಗೌರಿ ಹತ್ಯೆಗೆ ನ್ಯಾಯ ಸಿಗಲಿದೆ ಅನ್ನೋ ನಂಬಿಕೆ ನನಗಿಲ್ಲ ಎಂದರು.

    ವರ್ಷಕ್ಕೊಂದು ವಿಚಾರವಾದಿಗಳು ಸಾಯುತ್ತಾರೆ. ಇಂದು ಗೌರಿ ನಾಳೆ ನಾನು ನಾಡಿದ್ದು ಭಗವಾನ್ ಅದರಾಚೆ ಅಗ್ನಿ ಶ್ರೀಧರ್. ಬಿಜೆಪಿಗೆ ಮೋದಿ ಸರ್ಕಾರಕ್ಕೆ ಹಿಂಸೆ ಅನಿವಾರ್ಯ. ಹಿಂಸೆಯ ಮೂಲಕವೇ ರಾಜಕೀಯ ಪ್ರಾಬಲ್ಯ ಸ್ಥಾಪಿಸಲು ಹೊರಟಿದ್ದಾರೆ. ಹಿಂದುತ್ವದ ಬಗ್ಗೆ ಮಾತಾನಾಡಿದವರನ್ನು ಬಿಡಲ್ಲ ಅವರನ್ನು ಕೊಲ್ಲುತ್ತೇವೆ ಅನ್ನೋ ಸಂದೇಶವನ್ನು ಇವರಿಬ್ಬರನ್ನು ಹತ್ಯೆ ಮಾಡುವುದರ ಮೂಲಕ ನೀಡಿದ್ದಾರೆ ಎಂದು ಆರೋಪಿಸಿದರು.

    ಭಾರತದಲ್ಲಿ ವಧಾ ಸಂಸ್ಕೃತಿ ವಿಜೃಂಭಿಸುತ್ತಿದೆ. ಸನಾತನ ಧರ್ಮ ಪುನಶ್ಚೇತನಗೊಂಡಾಗೆಲ್ಲ ವಧಾ ಸಂಸ್ಕೃತಿ ಹತ್ಯೆ ಮಾಡುವ ಸಂಸ್ಕೃತಿ ಬರುತ್ತದೆ. ಹಿಂದೆ “ಭಟ್ಟ” ಅನ್ನೋ ಹೆಸರಿನ ವ್ಯಕ್ತಿಯಿಂದ ಬೆದರಿಕೆ ಬಂದಿತ್ತು. ಈ ಬಗ್ಗೆ ಮಠದಿಂದ ಠಾಣೆಗೂ ದೂರು ಕೊಡಲಾಗಿದೆ ಹಾಗೂ ಹಿಂದುತ್ವದ ಬಗ್ಗೆ ಮಾತಾನಾಡೋ ನಿನ್ನನ್ನು ಉಳಿಸಲ್ಲ, ಖಾವಿ ಕಳಚಿ ಓಡಿಸುತ್ತೇವೆ ಅಂತಾ ಬೆದರಿಕೆ ಹಾಕಿದ್ದಾರೆ. ಮಠಕ್ಕೆ ಬನ್ನಿ ಮಾತಾನಾಡೋಣ ಅಂತಾ ಹೇಳಿದೆ ಆದರೆ ಯಾರು ಬಂದಿಲ್ಲ. ಕೆಲದಿನದ ಹಿಂದೆ ನಡೆದ ಘಟನೆ ಇದು ಈ ಬಗ್ಗೆ ದೂರು ನೀಡಲಾಗಿದೆ ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದರು.

    ಸರ್ಕಾರಿ ಕಚೇರಿ, ಶಿಕ್ಷಣ ಸಂಸ್ಥೆ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಎಲ್ಲಾ ಧರ್ಮದ ದೇವರ ಭಾವಚಿತ್ರ ತೆಗೆಯಬೇಕು. ಕಚೇರಿಗಳಲ್ಲಿ ಧಾರ್ಮಿಕ ಆಚರಣೆ ಸಂಪ್ರದಾಯಗಳನ್ನು ಅನುಸರಿಸೋದನ್ನು ನಿಷೇಧಿಸಬೇಕೆಂದು ಸರ್ಕಾರಕ್ಕೆ ವಿಚಾರವಾದಿಗಳ ವೇದಿಕೆ ಒತ್ತಾಯ ಮಾಡಿದೆ.

  • ಅನಿಷ್ಟ ಪದ್ಧತಿ ಉಳಿಯಬೇಕು ಎನ್ನೋ ಮಂದಿ ನಮ್ಮ ಹತ್ಯೆಗೆ ಮುಂದಾಗ್ತಿದ್ದಾರೆ: ಕೆಎಸ್ ಭಗವಾನ್

    ಅನಿಷ್ಟ ಪದ್ಧತಿ ಉಳಿಯಬೇಕು ಎನ್ನೋ ಮಂದಿ ನಮ್ಮ ಹತ್ಯೆಗೆ ಮುಂದಾಗ್ತಿದ್ದಾರೆ: ಕೆಎಸ್ ಭಗವಾನ್

    ಮೈಸೂರು: ನಿಡುಮಾಮಿಡಿ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಅವರು ಹೇಳಿರುವ ಮಾತಿನಲ್ಲಿ ಸತ್ಯ ಇದೆ. ಅನಿಷ್ಟ ಪದ್ಧತಿ ಉಳಿಯಬೇಕು ಎನ್ನುವ ಜನ ನಮ್ಮ ಹತ್ಯೆಗೆ ಮುಂದಾಗುತ್ತಿದ್ದಾರೆ ಎಂದು ವಿಚಾರವಾದಿ ಕೆಎಸ್ ಭಗವಾನ್ ಹೇಳಿದ್ದಾರೆ.

    ಹತ್ಯೆಗಳ ಟಾರ್ಗೆಟ್ ಲಿಸ್ಟ್ ನಲ್ಲಿ ವಿಚಾರವಾದಿ ಪ್ರೊ. ಕೆಎಸ್ ಭಗವಾನ್ ಇದ್ದಾರೆ ಎಂದು ನಿಡುಮಾಮಿಡಿ ಸ್ವಾಮೀಜಿ ಹೇಳಿದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಇಂತಹ ಪರಿಸ್ಥಿತಿ ಇದೆ ಎಂಬುದು ನನಗೆ ಸ್ಪಷ್ಟವಾಗಿ ಗೊತ್ತಿದೆ. ಕಲಬುರಗಿ ಅವರ ಹತ್ಯೆ ಆದ ಮರುದಿನವೇ ದಕ್ಷಿಣ ಕನ್ನಡದ ಹುಡುಗನೊಬ್ಬ ಮುಂದಿನ ಟಾರ್ಗೆಟ್ ಭಗವಾನ್ ಅಂತ ಘೋಷಣೆ ಮಾಡಿದ್ದ. ತಕ್ಷಣ ಆತನನ್ನ ಪೊಲೀಸರು ಬಂಧಿಸಿದ್ದರು. ಆತ ಹೊರಗೆ ಬಂದಿದ್ದಾನೋ ಅಥವಾ ಅಲ್ಲಿಯೇ ಇದಾನೋ ಗೊತ್ತಿಲ್ಲ. ಹಾಗಾಗಿ ಇದು ಬಹಳ ವರ್ಷಗಳಿಂದ ನಡೆಯುತ್ತಿರುವ ಕುತಂತ್ರ ಎಂದು ಹೇಳಿದರು.

    ನಿಡುಮಾಮಿಡಿ ಸ್ವಾಮೀಜಿ ಅವರು ಹೇಳಿರುವ ಮಾತಿನಲ್ಲಿ ಸತ್ಯ ಇದೆ. ಅವರಲ್ಲಿ ಅಪಾರವಾದ ಮಾಹಿತಿಗಳು ಬರುತ್ತವೆ ಆದ್ದರಿಂದ ಯಾರ‌್ಯಾರೋ  ಅಸಮಾನತೆ, ಭೇದಭಾವ, ಜಾತೀಯತೆಯನ್ನ ಹೋಗಲಾಡಿಸಬೇಕು. ಅನಿಷ್ಟ ಪದ್ಧತಿಗಳು ಉಳಿಯಬೇಕು ಚಿಂತನೆ ಮಾಡುವ ಜನರು ಈಗ ನಮ್ಮನ್ನು ಕೊಲ್ಲಲು ಮುಂದಾಗಿದ್ದಾರೆ ಎಂದರು.

    ಈಗ ನನ್ನ ರಕ್ಷಣೆಗೆ ಇಬ್ಬರು ಅಂಗರಕ್ಷಕರನ್ನು ಕೊಟ್ಟಿದ್ದಾರೆ. ಹಾಗಾಗಿ ಸರ್ಕಾರ ನನಗೆ ಎಲ್ಲಾ ರೀತಿಯ ರಕ್ಷಣೆ ಕೊಟ್ಟಿದೆ. ಈ ಹಿಂದೆ ತುಂಬಾ ಬೆದರಿಕೆ ಕರೆಗಳು ಬರುತ್ತಿದ್ದವು. ಈಗ ಬಹುಪಾಲು ಬೆದರಿಕೆ ಕರೆಗಳು ನಿಂತಿವೆ ಎಂದು ಹೇಳಿದರು.

    ಇದುವರೆಗೂ ಇಷ್ಟೊಂದು ಹತ್ಯೆಗಳು ಆಗಿವೆ. ಆದರೆ ಪ್ರಧಾನಿ ಮೋದಿ ಅವರು ಇದರ ಬಗ್ಗೆ ಮಾತನಾಡಬೇಕು. ಈ ಹತ್ಯೆ ವಿಷಯಗಳ ಬಗ್ಗೆ ಅವರು ಮಾತನಾಡುತ್ತಿಲ್ಲ. ನಾನು ಯಾವುದೇ ರೀತಿಯ ಭಯವಿಲ್ಲದೆ ನನ್ನ ಕೆಲಸ ಮಾಡುತ್ತಿದ್ದೆನೆ ಎಂದು ಹೇಳಿದರು.