Tag: Nidhi Subbiah

  • ತುಂಬಾ ಜನ ನನ್ನ ಮೇಲೆ ದೃಷ್ಟಿ ಹಾಕಿದ್ದಾರೆ ಅಂದ ಶಮಂತ್

    ತುಂಬಾ ಜನ ನನ್ನ ಮೇಲೆ ದೃಷ್ಟಿ ಹಾಕಿದ್ದಾರೆ ಅಂದ ಶಮಂತ್

    ಬೆಂಗಳೂರು: ಇಷ್ಟು ದಿನ ಬಿಗ್‍ಬಾಸ್ ಮನೆಯಲ್ಲಿ ಹಾಡುಗಳನ್ನು ಹೇಳುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ಬ್ರೋ ಗೌಡ ಶಮಂತ್ ನನ್ನ ಮೇಲೆ ತುಂಬಾ ಜನ ದೃಷ್ಟಿ ಹಾಕಿರುವುದಾಗಿ ಹೇಳಿಕೊಂಡಿದ್ದಾರೆ.

    ವೇದಿಕೆ ಮೇಲೆ ಯೆಲ್ಲೋ ಆ್ಯಂಡ್ ಯೆಲ್ಲೋ ಡ್ರೆಸ್‍ನಲ್ಲಿ ಎಂಟ್ರಿ ಕೊಟ್ಟ ಶಮಂತ್, ಬರುತ್ತಿದ್ದಂತೆ ತುಂಬಾ ಜನ ನನ್ನ ಮೆಲೆ ದೃಷ್ಟಿಂ ಹಾಕಿರುವುದು ಗೊತ್ತಾಗಿದೆ. ಹೀಗಾಗಿ ದೃಷ್ಟಿ ಹೋಗಬೇಕೆಂದು ಈ ಕಲರ್ ಡ್ರೆಸ್ ಚೂಸ್ ಮಾಡಿಕೊಂಡು ಹಾಕಿಕೊಂಡು ಬಂದೆ ಎಂದಿದ್ದಾರೆ. ಆಗ ಸುದೀಪ್ ನನಗೆ ಗೊತ್ತಿರುವಂತೆ ದೃಷ್ಟಿ ಹೋಗುವುದಕ್ಕೆ ಯೂಸ್ ಮಾಡುವುದು ಬ್ಲಾಕ್, ಇದು ಯಾವುದು ಹೊಸ ಕಲರ್, ಹಲೋ ಲಕ್ಕಿ ಸ್ಟಾರ್ ಸ್ವಲ್ಪ ವಿವರಣೆ ಕೊಡಿ ಅರ್ಥವಾಗುತ್ತಿಲ್ಲ ಎಂದು ಕೇಳಿದ್ದಾರೆ.

    ಇದಕ್ಕೆ ಇರೋ ಬರುವ ದೃಷ್ಟಿ ಎಲ್ಲಾ ಕಳೆಯಲಿ ಎಂದು ಬಟ್ಟೆ ಧರಿಸಿದೆ ಎಂದು ಶಮಂತ್ ಹೇಳಿದಾಗ, ನಿಧಿ ಸುಬ್ಬಯ್ಯ ಜಾತ್ರೆಯಂತಿದೆ ಎಂದು ಅಣುಕಿಸುತ್ತಾರೆ. ಹೌದು ಯಾವ ವಿಚಾರಕ್ಕೆ ನಿಮ್ಮ ಮೇಲೆ ದೃಷ್ಟಿ ಬಿದ್ದರುವುದು ಎಂದು ಸುದೀಪ್ ಕೇಳಿದಾಗ, ಶಮಂತ್ ಲಕ್ ವಿಚಾರಕ್ಕೆ ಎಂದು ಉತ್ತರಿಸುತ್ತಾರೆ. ಹಾ ಲಕ್ ವಿಚಾರದಲ್ಲಿ ಬಿದ್ದಿದೆ ಎಂಬುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಈಗಲೂ ನಿಮಗೆ ಆ ಲಕ್ ಇದ್ಯಾ ಅಂತ ಪ್ರಶ್ನಿಸುತ್ತಾರೆ.

    ಲಕ್ ನನ್ನ ಹಾರ್ಡ್ ವರ್ಕ್‍ಗೆ ಕನ್ವರ್ಟ್ ಆಗಿದೆ. ಇನ್ನೂ ಒಂದರಿಂದ ಹತ್ತ ಅಂಕಗಳಲ್ಲಿ ನನಗೆ ಇರುವ ಲಕ್‍ಗೆ 8 ಅಂಕ ನೀಡಬಹುದು. ಆದರೆ ಲಾಸ್ಟ್ ನಲ್ಲಿ ಲಕ್ ಹಾಗೂ ಹಾರ್ಡ್ ವರ್ಕ್ ಎರಡು ಬ್ಯಾಲೆನ್ಸ್ ಆಯಿತು. ಎರಡಕ್ಕೂ 5-5 ಅಂಕಗಳನ್ನು ನೀಡಬಹುದು ಎಂದು ಶಮಂತ್ ಹೇಳಿದ್ದಾರೆ. ಇದನ್ನೂ ಓದಿ:ಐ ವಾಂಟೂ ಮ್ಯಾರಿ ಯೂ ಅಂದವರ ಮೇಲೆ ನಿಧಿ ಕೆಂಡ

  • ತಾಯಿ ಪುಣ್ಯಾತಗಿತ್ತಿ ಸುಮ್ಮನಿರು: ಸಂಬರಗಿ

    ತಾಯಿ ಪುಣ್ಯಾತಗಿತ್ತಿ ಸುಮ್ಮನಿರು: ಸಂಬರಗಿ

    ಪ್ರಶಾಂತ್ ಸಂಬರಗಿ ಮತ್ತೆ ಮೊದಲಿನಂತೆ ಎಲ್ಲರ ಜೊತೆ ಜಗಳ ಮಾಡಲು ಪ್ರಾರಂಭಿಸಿದ್ದಾರೆ. ಮೊಟ್ಟೆ ತಿಂದಿದ್ದಾರೆ ಎಂದು ಆರೋಪ ಮಾಡಿದ್ದಕ್ಕೆ ನಿಧಿ ಸುಬ್ಬಯ್ಯ ಅವರ ಚರಿತ್ರೆ ಹೇಳ್ತೀನಿ ಎಂದು ಸಂಬರಗಿ ನಿಧಿಗೆ ಕಣ್ಣೀರು ಹಾಕಿಸಿದ್ದಾರೆ. ಬಿಗ್‍ಬಾಸ್ ಮನೆಯಲ್ಲಿ ನಿಧಿ ಮತ್ತೆ ಪ್ರಶಾಂತ್ ಸಂಬರಗಿ ನಡುವೆ ಜಗಳ ವೈಯಕ್ತಿಕ ವಿಚಾರಗಳನ್ನು ತೆಗೆದುಕೊಂಡು ಪ್ರಶಾಂತ್ ಮಾತನಾಡುತ್ತಿದ್ದಾರೆ.

     ಪ್ರಶಾಂತ್ ಸಂಬರಗಿ ಅವರು ಎರಡು ಮೊಟ್ಟೆ ತಿಂದರು ಎಂದು ಜಗಳ ಶುರುವಾಗಿದೆ. ನಿಧಿ ಸುಬ್ಬಯ್ಯ ಅವರು ಪ್ರಶಾಂತ್ ಸಂಬರಗಿ ಮೊಟ್ಟೆ ತಿನ್ನೋದನ್ನು ನೋಡಿ ಪ್ರಶ್ನೆ ಮಾಡಿದ್ದಾರೆ. ಆಗ ಅರವಿಂದ್, ದಿವ್ಯಾ ಉರುಡುಗ ಕೂಡ ನಿಧಿಗೆ ಬೆಂಬಲ ಸೂಚಿಸಿದ್ದಾರೆ. ನಾನು ಹೆಚ್ಚು ಮೊಟ್ಟೆ ತಿಂದಿಲ್ಲ ಎಂದು ಪ್ರಶಾಂತ್ ಸಂಬರಗಿ ಅವರು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಪುಣ್ಯಾತಗಿತ್ತಿ, ಸುಮ್ಮನಿರಮ್ಮ, ನಿನ್ನ ಚರಿತ್ರೆ ಗೊತ್ತಿದೆ, ನಿನ್ನ ಸಂಸ್ಕøತಿ ಗೊತ್ತಿದೆ, ಹೇಳಬೇಕಾ ಹೇಳು ಹೇಳುತ್ತೇನೆ ಎಂದು ಪ್ರಶಾಂತ್ ಅವರು ನಿಧಿ ಸುಬ್ಬಯ್ಯಗೆ ಬೆದರಿಕೆ ಹಾಕಿದ್ದಾರೆ.

    ಮೊಟ್ಟೆ ಕಳ್ಳ ಅಂತ ಮಾಡಬೇಡಿ, ನೀವೆಲ್ಲ ಹಾಲಿನಲ್ಲಿ ಸ್ನಾನ ಮಾಡಿಕೊಂಡು ಬಂದವರು ಪರಿಶುದ್ಧರು ಅಂತ ಪ್ರಶಾಂತ್ಅವರು ನಿಧಿ ಸುಬ್ಬಯ್ಯ, ದಿವ್ಯಾ ಉರುಡುಗ ಅವರನ್ನು ವ್ಯಂಗ್ಯ ಮಾಡಿಕೊಂಡಿದ್ದಾರೆ. ಸಣ್ಣತನವನ್ನು ತೋರಿಸುತ್ತಿದ್ದೀರಾ. ಮನೆಮಂದಿಗೆ ಜೊತೆಗೆ ವಾಗ್ವಾದ ಮಾಡಿದ್ದಾರೆ. ಒಟ್ಟಿನಲ್ಲಿ ಒಂದು ವಾರಗಳ ಕಾಲ ಸೈಲೆಂಟ್ ಆಗಿದ್ದ ಪ್ರಶಾಂತ್ ಸಂಬರಗಿ ಮತ್ತೆ ಮಾತಿನ ವರಸೆಯನ್ನು ಶುರು ಮಾಡಿಕೊಂಡಿದ್ದಾರೆ.

     ಮೊಟ್ಟೆ ತಿಂದರು ಎಂಬ ಆರೋಪ ಬಂದಿದ್ದಕ್ಕೆ ಪ್ರಶಾಂತ್ ಸಂಬರಗಿ ಅವರು ಎಲ್ಲ ಹೆಸರನ್ನು ತಗೊಂಡು ಜಗಳ ಆಡಿದ್ದಾರೆ. ರಾಜೀವ್, ನಿಧಿ ಸುಬ್ಬಯ್ಯ, ಮಂಜು ಪಾವಗಡ, ರಘು ಅವರ ಹತ್ತಿರ ಕೂಡ ಸಂಬರಗಿ ಜಗಳ ಆಡಿಕೊಂಡಿದ್ದರು. ಇನ್ನು ವೈಯಕ್ತಿಕ ವಿಷಯ ತಗೊಂಡು ಜಗಳ ಆಡಿದ್ದರು. ನಿಧಿ ಅವರು ಪ್ರಶಾಂತ್‍ಗೆ ಚೀಪ್ ಎಂದಿದ್ದಾರೆ, ಅದಕ್ಕೆ ಸಂಬರಗಿ ಅವರು ನಿಧಿಗೆ ನಿನ್ನ ಚರಿತ್ರೆ ಹೇಳಲಾ? ಅಂತ ಕೇಳಿದ್ದಾರೆ. ಆಗ ಮನೆ ಮಂದಿ ಪ್ರಶಾಂತ್ ಅವರಿಗೆ ಸಮಾಧಾನ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಪ್ರಶಾಂತ್ ಮಾತ್ರ ತಮ್ಮದೇ ಆಗಿರುವ ವಾದವನ್ನು ಮಾಡಿದ್ದಾರೆ. ಪ್ರಶಾಂತ್ ವೈಯಕ್ತಿಕ ವಿಚಾರ ತೆಗೆದರು ಎಂದು ಉಳಿದ ಸ್ಪರ್ಧಿಗಳು ಅವರ ಮೇಲೆ ಬೇಸರ ಮಾಡಿಕೊಂಡಿದ್ದಾರೆ.

    ದಿನನಿತ್ಯ ಒಂದಲ್ಲ ಒಂದು ವಿಚಾರಕ್ಕೆ ಜಗಳ ಆಡುತ್ತಿರುತ್ತಾರೆ. ಊಟ-ತಿಂಡಿ ವಿಚಾರದಲ್ಲಿಯೂ ವಾದ ವಿವಾದ ಆಗುತ್ತಿದೆ. ಯಾರು ಹೆಚ್ಚು ತಿಂದರು ಯಾರು ಕಡಿಮೆ ತಿಂದರು ಎಂಬುದಕ್ಕೂ ಜಗಳ, ಮನಸ್ತಾಪ, ಕೋಪ. ಈಗ ಮೊಟ್ಟೆ ತಿಂದ ವಿಚಾರಕ್ಕೆ ಪ್ರಶಾಂತ್ ಸಂಬರಗಿ ಜಗಳ ಮಾಡಿ ಸುದ್ದಿಯಾಗಿದ್ದಾರೆ.

  • ದೊಡ್ಮನೆಯಲ್ಲಿ ಮರೆಯಲಾಗದ ನೆನಪುಗಳನ್ನು ಹಂಚಿಕೊಂಡ ಅರವಿಂದ್!

    ದೊಡ್ಮನೆಯಲ್ಲಿ ಮರೆಯಲಾಗದ ನೆನಪುಗಳನ್ನು ಹಂಚಿಕೊಂಡ ಅರವಿಂದ್!

    ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾಗಿ ಸೋಮವಾರಕ್ಕೆ ಐವತ್ತು ದಿನ ಮುಕ್ತಾಯಗೊಂಡಿದೆ. ಸದ್ಯ ನಿನ್ನೆ ಬಿಗ್‍ಬಾಸ್ ಮನೆಯ ಸ್ಪರ್ಧಿಗಳಿಗೆ ‘ನೆನಪುಗಳ ಮಾತು ಮಧುರ’ ಎಂಬ ಚಟುವಟಿಕೆಯನ್ನು ನೀಡಿದ್ದರು. ಅದರ ಅನುಸಾರ ಮನೆಯ ಸದಸ್ಯರು ಇಷ್ಟು ದಿನ ದೊಡ್ಮನೆಯಲ್ಲಿ ನಡೆದ ಮರೆಯಲಾಗದ ಹಾಗೂ ಮರೆಯಲು ಇಷ್ಟಪಡುವಂತಹ ಒಂದು ಘಟನೆಗಳನ್ನು ಹಂಚಿಕೊಳ್ಳುವಂತೆ ತಿಳಿಸಿದ್ದರು.

    ಅದರಂತೆ ಈ ವಾರ ಕ್ಯಾಪ್ಟನ್ ಆಗಿ ಮಿಂಚುತ್ತಿರುವ ಅರವಿಂದ್, ನಾನು ಹೊರಗಡೆ ಇರುವಂತೆಯೇ ಇಲ್ಲಿಯೂ ಇದ್ದೇನೆ. ಎದುರುತ್ತರ ಮಾತನಾಡುವುದಾಗಲಿ, ಯಾವುದೇ ಘರ್ಷಣೆಯಾಗುತ್ತಿದ್ದರೆ ತುಪ್ಪ ಸುರಿಯುವುದು ಬಹಳ ಕಡಿಮೆ. ಯಾರು ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅದು ನನಗೆ ಎಫೆಕ್ಟ್ ಕೂಡ ಆಗುವುದಿಲ್ಲ. ಆದರೆ ಕೆಲವೊಮ್ಮೆ ಮಿತಿ ಮೀರಿ ಪ್ರಶಾಂತ್ ಹಾಗೂ ನಿಧಿಗೆ ಕೆಲವು ಮಾತನ್ನು ಆಡಿದ್ದೇನೆ. ಅದನ್ನು ಮರೆಯಲು ಇಷ್ಟ ಪಡುತ್ತೇನೆ ಎಂದು ಹೇಳುತ್ತಾರೆ.

    ನಂತರ ನನಗೆ ಮರೆಯುವುದಕ್ಕೆ ಆಗದೇ ಇರುವುದು ಎಂದರೆ ರಿಂಗ್. ಅಲ್ಲದೇ ರಿಂಗ್ ಸಿಕ್ಕಿ ಅರ್ಧ ಗಂಟೆಗೆ ಕಳೆದು ಹೋಗಿತ್ತು. ಆಗ ಇಡೀ ಮನೆ ಒಟ್ಟಾಗಿ ಸೇರಿಕೊಂಡು ರಿಂಗ್ ಹುಡುಕುವುದಕ್ಕೆ ಸಹಾಯ ಮಾಡಿದ್ದು, ನನಗೆ ಯಾವತ್ತಿಗೂ ಮರೆಯುವುದಕ್ಕೆ ಆಗುವುದಿಲ್ಲ. ದಿವ್ಯಾ ಉರುಡಗಗೆ 4 ರಿಂದ 5 ಗಂಟೆ ಈ ರೀತಿ ರಿಂಗ್ ಕಳೆದು ಹೋಗಿದೆ ಎಂಬುವುದು ಗೊತ್ತೆ ಇರಲಿಲ್ಲ. ನೀವು ಮಾಡಿದ ಹೆಲ್ಪ್ ಅನ್ನು ಎಂದು ಕೂಡ ಹೇಳಲು ಆಗುವುದಿಲ್ಲ. ಏಕೆಂದರೆ ಎಲ್ಲರೂ ನಿಮ್ಮದೇ ವಸ್ತು ಕಳೆದು ಹೋಗಿರುವಂತೆ ಹುಡುಕಿದ್ರಿ. ಈ ಗಿಫ್ಟ್ ಹಾಗೂ ನೀವು ಮಾಡಿರೋ ಸಹಾಯ ನನಗೆ ಎಂದಿಗೂ ಮರೆಯುವುದಕ್ಕೆ ಆಗುವುದಿಲ್ಲ.

    ಹಾಗೆಯೇ ಇನ್ನು ಮುಂದಿನ ಐವತ್ತು ದಿನ ಉಳಿದುಕೊಂಡರೆ ಇದೇ ರೀತಿ ಮರೆಯಲಾಗದಂತಹ ಘಟನೆಗಳು ಜಾಸ್ತಿಯಾಗಲಿ, ದಿವ್ಯಾ ಉರುಡುಗ ಅಂತೂ ಮರೆಯಲಾಗದ ಸಾಕಷ್ಟು ನೆನಪುಗಳನ್ನು ಕೊಟ್ಟಿದ್ದಾಳೆ ಎಂದು ಹೇಳುತ್ತಾ ಕಿರುನಗೆ ಬೀರಿದರು.

  • ದಿವ್ಯಾ-ಅರವಿಂದ್ ಲವ್ ಸ್ಟೋರಿಗೆ ಶಮಂತ್ ಬಳಿಯಲ್ಲಿದೆ ಸಾಕ್ಷಿ!

    ದಿವ್ಯಾ-ಅರವಿಂದ್ ಲವ್ ಸ್ಟೋರಿಗೆ ಶಮಂತ್ ಬಳಿಯಲ್ಲಿದೆ ಸಾಕ್ಷಿ!

    ಬಿಗ್‍ಬಾಸ್ ಮನೆಯಲ್ಲಿ ಅರವಿಂದ್, ದಿವ್ಯಾ ಲವ್ ಸ್ಟೋರಿ ನಡೆಯುತ್ತಿದೆ ಎಂಬುವುದಕ್ಕೆ ಶಮಂತ್ ಸಾಕ್ಷಿ ಸಮೇತವಾಗಿ ಕಿಚ್ಚ ಸುದೀಪ್ ಎದುರಿಗೆ ಸಾಬೀತು ಪಡಿಸಿದ್ದಾರೆ.

    ಪ್ರತಿವಾರದಂತೆ ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ್ ಸಂಚಿಕೆಯಲ್ಲಿ ನಿನ್ನೆ ಯೆಸ್ ಆರ್ ನೋ ರೌಂಡ್ಸ್ ನಡೆಯಿತು ಈ ವೇಳೆ ಕಿಚ್ಚ ಸುದೀಪ್ ದಿವ್ಯಾ ಯು ಅವರಿಗೆ ಇತ್ತೀಚೆಗೆ ರಾತ್ರಿ ಹೊತ್ತು ನಿದ್ದೆಯೇ ಬರುತ್ತಿಲ್ಲ ಎಂದು ಪ್ರಶ್ನೆ ಕೇಳುತ್ತಾರೆ.

    ಆಗ ಮನೆಮಂದಿಯೆಲ್ಲಾ ಯೆಸ್ ಎಂದು ಬೋರ್ಡ್ ತೋರಿಸುತ್ತಾರೆ. ಈ ವೇಳೆ ಶಮಂತ್ ಅರವಿಂದ್ ಮಲಗುವವರೆಗೂ ದಿವ್ಯಾ ಮಲಗುವುದಿಲ್ಲ. ಎಂಬುದಕ್ಕೆ ನನ್ನ ಕತ್ತು ಹಿಡಿದುಕೊಂಡಿರುವುದೇ ಸಾಕ್ಷಿ. ನಿನ್ನೆ ಸರಿಯಾಗಿರುವ ಬಟ್ಟೆಗಳನ್ನು ಮತ್ತೆ ಮತ್ತೆ ಮಡಚಿಡುತ್ತಿದ್ದರು. ಅರವಿಂದ್ ಅವರು ಎಲ್ಲಿಯವರೆಗೂ ಮಲಗಲ್ಲವೋ ಅಲ್ಲಿಯವರೆಗೂ ಬಟ್ಟೆ ಮಡಚುತ್ತಲೇ ಇರುತ್ತಿದ್ದರು. ನಾನು ನೋಡುವವರೆಗೂ ನೋಡಿದೆ. ಕೊನೆಗೆ ಕತ್ತು ನೋವು ಬಂತು. ಹಾಗಾಗಿ ಈ ಕಡೆ ತಿರುಗಿಕೊಂಡು ಮಲಗಿಕೊಂಡೆ. ಆದರೆ ಬೆಳಗ್ಗೆ ನೋಡಿದರೆ ಕತ್ತು ಹಿಡಿದುಕೊಂಡಿದೆ ಎಂದು ಹೇಳಿದ್ದಾರೆ.

    ಇನ್ನೂ ಈ ವೇಳೆ ನಿಧಿ ಸುಬ್ಬಯ್ಯ, ಅವನು ನಿದ್ದೆ ಮಾಡಿಕೊಂಡು ಗೊರಕೆ ಹೊಡೆಯುವಾಗ, ದಿವ್ಯಾ ಕೈನಲ್ಲಿ ಹಾರ್ಟ್ ಚಿಹ್ನೆ ಮಾಡಿ ತೋರಿಸುತ್ತಿರುತ್ತಾರೆ. ಆದಾದ ಮೇಲೆ ಬೆಳಗ್ಗೆ ಎದ್ದಿದ ಕೂಡಲೇ ಇಬ್ಬರು ಎಂದು ಒಬ್ಬರಿಗೊಬ್ಬರು ತಬ್ಬಿಕೊಳ್ಳುತ್ತಾರೆ. ಆಗ ದಿವ್ಯಾ ಅರವಿಂದ್‍ನನ್ನು ಫುಲ್ ತಬ್ಬಿಕೊಂಡಿದ್ದರೆ, ಅರವಿಂದ್ ಒಂದು ಕೈನಲ್ಲಿ ತಬ್ಬಿಕೊಂಡು ಮತ್ತೊಂದು ಕೈನಲ್ಲಿ ಮೂಗಿಗೆ ಕೈ ಹಾಕಿಕೊಂಡು ಗೊಣ್ಣೆ ತೆಗೆಯುತ್ತಿರುತ್ತಾನೆ ಎಂದು ಹೇಳುತ್ತಾರೆ.

    ಒಟ್ಟಾರೆ ನಿಧಿ ಶಮಂತ್ ಹಾಗೂ ನಿಧಿ ಸುಬ್ಬಯ್ಯ ಮಾತು ಕೇಳಿ ಮನೆ ಮಂದಿ ಜೊತೆ ಕಿಚ್ಚ ಕೂಡ ಜೋರಾಗಿ ಹೊಟ್ಟೆ ಹುಣ್ಣಾಗುವಷ್ಟು ನಗುತ್ತಾರೆ.

  • ಲ್ಯಾಗ್ ಮಂಜುಗೆ ಸಾಂಗ್ ಡೆಡಿಕೇಟ್ ಮಾಡಿ ನಿಧಿ ಕಕ್ಕಾಬಿಕ್ಕಿ!

    ಲ್ಯಾಗ್ ಮಂಜುಗೆ ಸಾಂಗ್ ಡೆಡಿಕೇಟ್ ಮಾಡಿ ನಿಧಿ ಕಕ್ಕಾಬಿಕ್ಕಿ!

    ಬಿಗ್‍ಬಾಸ್ ಕಾರ್ಯಕ್ರಮ ಪ್ರಾರಂಭವಾದಾಗಿನಿಂದಲೂ ದೊಡ್ಮನೆಯಲ್ಲಿ ಲ್ಯಾಂಗ್ ಮಂಜುದೇ ಭಾರೀ ಸದ್ದು. ಬಿಗ್‍ಬಾಸ್ ಮನೆ ಮಂದಿಗೆಲ್ಲಾ ಮೋಡಿ ಮಾಡಿರುವ ಮಂಜುಗೆ ನಿನ್ನೆ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ನಿಧಿ ಸುಬ್ಬಯ್ಯ ಹಾಡೊಂದನ್ನು ಡೆಡಿಕೇಟ್ ಮಾಡಿದ್ದಾರೆ.

    ಹೌದು. ನಿನ್ನೆ ಕಿಚ್ಚ ಸುದೀಪ್, ನಿಧಿ ಸುಬ್ಬಯ್ಯರವರಿಗೆ ಯಾವುದಾದರೂ ಒಂದು ಕನ್ನಡದ ಹಾಡನ್ನು ಹೇಳಲು ಸೂಚಿಸುತ್ತಾರೆ. ಈ ವೇಳೆ ರವಿಚಂದ್ರನ್ ಅಭಿನಯದ ರಾಮಾಚಾರಿ ಸಿನಿಮಾದ ‘ಆಕಾಶದಾಗೆ ಯಾರೋ ಮಾಯಾಗಾರನು..’ ಎಂಬ ಹಾಡನ್ನು ಹಾಡುತ್ತಾರೆ. ಇದನ್ನು ಮನೆಯ ಯರಾದರೂ ಒಬ್ಬ ಸದಸ್ಯರಿಗೆ ಡೆಡೆಕೇಟ್ ಮಾಡಿ ಎಂದರೆ ಯಾರಿಗೆ ಮಾಡುತ್ತೀರಾ ಎಂದು ಪ್ರಶ್ನಿಸಿದಾಗ ನಿಧಿ ಲ್ಯಾಂಗ್ ಮಂಜು ಹೆಸರನ್ನು ತೆಗೆದುಕೊಳ್ಳುತ್ತಾರೆ.

    ಆಗ ಸುದೀಪ್ ಯಾಕೆ ಎಲ್ಲರೂ ಮಂಜು ಹೆಸರನ್ನೆ ಸೂಚಿಸುತ್ತೀರಾ? ನನಗೆಲ್ಲೋ ಮಂಜುಗೆ ಮದುವೆಯಾಗಿದೆ. ಹಾಗಾಗಿ ಅವರ ಹೆಸರನ್ನು ಸೂಚಿಸಿದರೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸೂಚಿಸುತ್ತೀರಾ ಎಂದು ಕೇಳುತ್ತಾರೆ. ಆಗ ನಿಧಿ ಮಂಜುಗೆ ಮದುವೆಯಾಗಿದ್ದೀಯಾ ಎಂದು ಗೊಂದಲಕ್ಕೊಳಗಾಗುತ್ತಾರೆ. ಈ ವೇಳೆ ಕಿಚ್ಚ ಹಾ.. ಅವರಿಗೆ ಮದುವೆಯಾಗಿರುವುದು ನಿಮಗೆ ಗೊತ್ತಿಲ್ಲವಾ.. ಎಂದು ಪ್ರಶ್ನಿಸುತ್ತಾರೆ. ಬಳಿಕ ಮನೆಯ ಸದಸ್ಯರೆಲ್ಲರೂ ಮಂಜು ಹಾಗೂ ದಿವ್ಯಾ ಸುರೇಶ್‍ರ ಮುಖವನ್ನು ನೋಡಿ ನಗುತ್ತಾರೆ. ಏಕೆಂದರೆ ಈ ಹಿಂದೆ ಮಂಜು ಮತ್ತು ದಿವ್ಯಾ ಕತ್ತಿಗೆ ಹಾಕಿಕೊಂಡಿದ್ದ ಮೈಕ್‍ನನ್ನು ಬದಲಾಯಿಸಿಕೊಂಡಿದ್ದರು. ಆಗ ಮಂಜು ನಮ್ಮಿಬ್ಬರಿಗೂ ಮದುವೆಯಾಯಿತು ಎಂದು ಹೇಳಿದ್ದರು.

    ಈ ವೇಳೆ ಒಂದು ಸೆಕೆಂಡ್ ಮಂಜು ಕೂಡ ಮೊದಲಿಗೆ ಕಕ್ಕಾಬಿಕ್ಕಿಯಾಗಿದ್ದರು. ಬಳಿಕ ನೆನಪಿಸಿಕೊಂಡು ಮಂಜು ಅರ್ಥವಾಯಿತು ಒಕೆ ಒಕೆ ಎಂದು ಹೇಳುತ್ತಾರೆ. ನಂತರ ಕಿಚ್ಚ ನಾನು ಹೇಳಿದ್ದು ಕೇಳಿ ನಿಮ್ಮ ಫ್ಯೂಚರ್‍ರೆ ಹಾಳಾಗುತ್ತಿದೆ ಎಂದು ಅನಿಸಿರಬಹುದಲ್ಲವಾ? ಮಾಡ್ಲಾ ಎಂದು ಪ್ರಶ್ನಿಸುತ್ತಾರೆ ಆಗ ಮಂಜು ಬೇಡ ಸರ್ ನಾನೇ ಮಾಡಿಕೊಳ್ಳುತ್ತೇನೆ ಎಂದು ಹಾಸ್ಯಮಯವಾಗಿ ನುಡಿದರು.

    ನಂತರ ಕಿಚ್ಚ ನಿಮ್ಮ ಮದುವೆಯಾಗದೇ ಇರಬಹುದು ಆದರೆ ಒಂದೆರಡು ಒಳ್ಳೆಯ ವಿಚಾರ ನನಗೆ ತಿಳಿದಿದೆ. ಬಹಿರಂಗವಾಗಿ ಹೇಳಲೇ ಎಂದಾಗ ಮಂಜು ಬೇಡ ಸರ್.. ನಾನು ಮಾಡಿದ್ದು ಕೇವಲ ತಮಾಷೆಗಾಗಿ ಅಷ್ಟೇ ಬೇರೆ ಏನೂ ಇಲ್ಲ ಎಂದು ಹೇಳಿತ್ತಾರೆ. ಮಂಜು ಮುಖಭಾವದಲ್ಲಿ ಆದ ಬದಲಾವಣೆ ನೋಡಿ ಕಿಚ್ಚ ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ.

    ನೀವು ಮಾಡಿದ ತಮಾಷೆಗಳಲ್ಲಿ ಒಂದೆರಡು ಬಿಗ್‍ಬಾಸ್ ಮನೆಯತ್ತ ಹುಡುಕಿಕೊಂಡು ಓಡಾಡುತ್ತಿದ್ದಾರೆ. ಒಳಗೆ ಕಳುಹಿಸುವುದೇ ಎನ್ನುತ್ತಾರೆ. ಬೇಡ ಸರ್ ನಾನು ಇಲ್ಲಿ ಇರುತ್ತೇನೆ ಅವರು ಅಲ್ಲೇ ಇರಲಿ. ನಾನು ಖುಷಿಯಾಗಿ ಇಲ್ಲೆ ಚೆನ್ನಾಗಿ ಇದ್ದೇನೆ ಎಂದು ಹೇಳುವ ಮೂಲಕ ನಗೆ ಚಟಾಕಿ ಹರಿಸಿದರು.

    ಒಟ್ಟಾರೆ ಮಂಜು ಹಾಗೂ ಕಿಚ್ಚನ ನಡುವಿನ ಸಂಭಾಷಣೆ ಮನೆಮಂದಿಯನೆಲ್ಲಾ ನಗೆಯ ಅಲೆಯಲ್ಲಿ ತೇಲಿಸಿತು.

  • ಬಿಗ್‍ಬಾಸ್ ಮನೆಯಲ್ಲಿ ಗೊರಕೆಯದ್ದೇ ಸದ್ದು

    ಬಿಗ್‍ಬಾಸ್ ಮನೆಯಲ್ಲಿ ಗೊರಕೆಯದ್ದೇ ಸದ್ದು

    ಬೆಂಗಳೂರು: ಬಿಗ್‍ಬಾಸ್ ಸದಸ್ಯರೊಂದಿಗೆ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆ ಮುಂದುವರಿಸಿದ ಸುದೀಪ್ ಭಾನುವಾರ ವೈಟ್ ಆ್ಯಂಡ್ ವೈಟ್ ಲುಕ್‍ನಲ್ಲಿ ವೇದಿಕೆ ಮೇಲೆ ಪ್ರೇಕ್ಷಕರ ಮುಂದೆ ಎಂಟ್ರಿಕೊಟ್ಟರು. ವಾರದ ಪಂಚಾಯತಿ ಜೊತೆ ಜೊತೆಗೆ ಕಿಚ್ಚ ಈ ಮನೆಯಲ್ಲಿ ಅತೀ ಹೆಚ್ಚು ಗೊರಕೆ ಹೊಡೆಯುವವರು ಯಾರು ಎಂದು ಪ್ರಶ್ನಿಸುತ್ತಾರೆ.

    ಆಗ ಎಲ್ಲರೂ ಮಂಜು ಹಾಗೂ ರಾಘವೇಂದ್ರರವರು ಎಂದು ಹೇಳಿದರೆ, ಶಂಕರ್‍ರವರು ಪ್ರಶಾಂತ್ ಹಾಗೂ ಮಂಜು ಕೂಡ ಸ್ಟೀರಿಯೋ ಫೋನ್ ರೀತಿ ಗೊರಕೆ ಹೊಡೆಯುತ್ತಾರೆ ಜೊತೆಗೆ ಇಬ್ಬರೂ ಸದ್ದು ಮಾಡದಂತೆ ಮಲಗಿಬಿಡುತ್ತಾರೆ ಎಂದರು. ಬಳಿಕ ಕಿಚ್ಚ ಕ್ಷಮಿಸಿ ಸರ್ ಪ್ರಶಾಂತ್‍ರವರದ್ದು ಗೊರಕೆ ಸದ್ದು ಅಲ್ಲ. ಅದು ಲೋಕದ ಜ್ಞಾನ, ವಿಚಾರಣೆ, ಅವರ ಒಳಗಿನಿಂದ ಬರುತ್ತಿರುವುದು ಅವರ ಧ್ವನಿಯಲ್ಲ. ಕರ್ನಾಟಕದ ಧ್ವನಿ. ಅವರು ನಿದ್ದೆಯಲ್ಲಿ ಕೂಡ ಮಾಹಿತಿ ಹಂಚುತ್ತಿರುತ್ತಾರೆ. ಅದನ್ನು ನೀವು ಸದ್ದು ಎಂದು ಭಾವಿಸಿದ್ದಿರಾ ಎಂದು ಹಾಸ್ಯಮಯವಾಗಿ ನುಡಿದರು.

    ಬಳಿಕ ರಘುರವರು ನಿಧಿ ಸುಬ್ಬಯ್ಯರವರು ಕೂಡ ಗೊರಕೆ ಹೊಡೆಯುತ್ತಾರೆ. ನಾನು ಅಂದು ಸ್ವಲ್ಪ ಬೇಗ ಎದ್ದಿದ್ದೆ ಮೊಬೈಲ್ ಏನಾದರೂ ಸಿಕ್ಕಿದ್ದರೆ ರೆಕಾರ್ಡ್ ಮಾಡಿ ತೋರಿಸಿಬಿಡುತ್ತಿದ್ದೆ. ಆದರೆ ನನ್ನ ಬಳಿ ಮೊಬೈಲ್ ಇರಲಿಲ್ಲ. ಈ ವೇಳೆ ರಾಜೀವ್ ನಿಧಿಯವರು ಗೊರಕೆ ಹೊಡೆಯುವುದು ಬಹಳ ಚೆನ್ನಾಗಿರುತ್ತದೆ ಎಂದು ಹೇಳುವ ಮೂಲಕ ಗೊರಕೆ ಸದ್ದನ್ನು ಮಿಮಿಕ್ರಿ ಮಾಡಿ ತೋರಿಸಿದ್ರು. ಇದಕ್ಕೆ ನಿಧಿ ಸುಬ್ಬಯ್ಯ ಮುಖ ಮುಚ್ಚಿಕೊಂಡು ನಾಚುತ್ತಾ ಮುಗುಳುನಗೆ ಬೀರಿದ್ರು. ಈ ಸದ್ದು ಕೇಳಿ ಮಂಜು ಹಾಗೂ ರಘು ಇಬ್ಬರು ಎರಡು ಬಾರಿ ರಾತ್ರಿ ಎದ್ದು ನನ್ನ ಮುಖ ನೋಡಿ ನಕ್ಕಿದ್ದಾರೆ ಎಂದರು. ಇನ್ನೂ ನಿಧಿ ಸುಬ್ಬಯ್ಯ ಗೊರಕೆ ಹೊಡೆಯುವ ಸೌಂಡ್ ಮಿಮಿಕ್ರಿ ನೋಡಿ ಕಿಚ್ಚ ಹಾಗೂ ಮನೆಯ ಸದಸ್ಯರು ಹೊಟ್ಟೆ ಹುಣ್ಣಾಗುವಂತೆ ನಕ್ಕರು.

    ಬಳಿಕ ಲ್ಯಾಗ್ ಮಂಜು ಶಂಕರ್ ರಾತ್ರಿವಿಡೀ ಸ್ಕ್ರಿಪ್ಟ್ ಓದುತ್ತಾರೆ. ಒಮ್ಮೆ ನಿದ್ದೆ ಮಾಡುವ ವೇಳೆ ಶಂಕರ್‍ರವರು ಅಗರ್‍ವಾಲ್ ಎಂದು ಕರೆದರು. ರಾಜೀವ್ ನಿದ್ದೆಯಲ್ಲಿ ಮಾತನಾಡುತ್ತಿರಬಹುದು ಎಂದು ಹೇಳುತ್ತಾರೆ ಆದರೆ ಮಂಜು ಅವರು ನಿಮಗೆ ಗೊತ್ತಿಲ್ಲ. ಬಿಗ್‍ಬಾಸ್ ಎಲ್ಲೋ ಕನಸಿನಲ್ಲಿ ಸ್ಕ್ರಿಪ್ಟ್ ನೀಡಿರಬೇಕು ಅದನ್ನು ಓದುತ್ತಿದ್ದಾರೆ ಎಂದು ಹೇಳಿರುವುದಾಗಿ ರಾಜೀವ್ ತಿಳಿಸಿದರು.

    ಒಮ್ಮೆ ನಾನು ಶಂಕರ್ ಅವರ ಪಕ್ಕದಲ್ಲಿ ಮಲಗಲೆಂದು ಹೋದೆ ಸರ್ ಆದರೆ ಐದು ನಿಮಿಷದ ನಂತರ ಶಂಕರ್‍ರವರು ಗೊರಕೆ ಹೊಡೆಯಲು ಆರಂಭಿಸಿದರು. ಅವರು ಹೊಡೆದ ಗೊರಕೆ ಸದ್ದು ಹೇಗಿತ್ತು ಎಂದರೆ ಅವರೆಲ್ಲೋ ನನಗೆ ಉಗುಳುತ್ತಿದ್ದಾರೆ ಎಂಬಂತೆ ಇತ್ತು. ಆಗ ತಕ್ಷಣ ಅವರ ಕಡೆ ಮುಖ ಮಾಡಿಕೊಂಡು ಮಲಗಿದ್ದ ನಾನು ಮತ್ತೊಂದೆಡೆ ತಿರುಗಿಸಿಕೊಂಡು ಮಲಗಿದೆ ಎಂದು ಹೇಳುವ ಮೂಲಕ ಮಂಜು ಹಾಸ್ಯಚಟಾಕಿ ಹರಿಸಿದರು.

    ಸದ್ಯ ಮನೆಯ ಸದಸ್ಯರ ಗೊರಕೆ ಕಥೆ ಕೇಳಿದ ಸುದೀಪ್ ವೇದಿಕೆ ಮೇಲೆ ಜೋರು ನಗೆಬೀರಿದರು. ನಂತರ ಇಂದು ಎಲ್ಲರೂ ಎಷ್ಟು ಚೆಂದದ ಬಟ್ಟೆಗಳನ್ನು ಧರಿಸಿ ಕುಳಿತಿದ್ದೀರಿ ಆದರೆ ಎಲ್ಲರ ಅಭಿಪ್ರಾಯಗಳೇ ಬದಲಾಗಿ ಹೋಯಿತು ಎಂದು ಹೇಳಿದರು.