Tag: Nidhi Subbayya

  • ಹಿಮಾಚಲ ಪ್ರದೇಶದಿಂದ ಬೆಂಗ್ಳೂರಿಗೆ ಬಂದು ಮಂಜನನ್ನು ಭೇಟಿಯಾದ ನಟಿ ನಿಧಿ

    ಹಿಮಾಚಲ ಪ್ರದೇಶದಿಂದ ಬೆಂಗ್ಳೂರಿಗೆ ಬಂದು ಮಂಜನನ್ನು ಭೇಟಿಯಾದ ನಟಿ ನಿಧಿ

    ಬೆಂಗಳೂರು: ಬಿಗ್‍ಬಾಸ್ ಸೀಸನ್-8ರ ಸ್ಪರ್ಧಿ ನಿಧಿ ಸುಬ್ಬಯ್ಯ ಹಿಮಾಚಲ ಪ್ರದೇಶಕ್ಕೆ ಹಾರಿದ್ದು, ಬೆಂಗಳೂರಿಗೆ ಬಂದು ಮಂಜು ಪಾವಗಡ ಅವರನ್ನು  ಭೇಟಿಯಾಗಿದ್ದಾರೆ.

    nidhi

    ಬಿಗ್‍ಬಾಸ್ ನಂತರ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ನಿಧಿ ತಮ್ಮ ದಿನನಿತ್ಯದ ಅಪ್ಡೇಟ್ ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇಂದು ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ, ನಾನು ಮತ್ತೆ ಬೆಂಗಳೂರಿಗೆ ಬಿಗ್‍ಬಾಸ್ ವಿನ್ನರ್ ಮಂಜು ಪಾವಗಡ ಜೊತೆ ಬಂದಿದ್ದು, ನಮ್ಮನ್ನು ಬಿಟ್ಟ ಶುಭಾಗೆ ಧನ್ಯವಾದ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಶುಭಾ ಇದಕ್ಕೆ ಪ್ರತಿಕ್ರಿಯಿಸಿದ್ದು, ಮುಂದಿನ ಬಾರಿ ಬಿಡುವುದು ಮಾತ್ರವಲ್ಲ, ಬೇಗ ಸಿಗೋಣ ನಾನು ಕಾಯುತ್ತಿದ್ದೇನೆ ಎಂದು ಬರೆದಿದ್ದಾರೆ. ಇದನ್ನೂ ಓದಿ:  ಫರಾ ಖಾನ್‍ಗೆ ಕೊರೊನಾ – ದೀಪಿಕಾ, ಅಮಿತಾಭ್ ಬಗ್ಗೆ ಅಭಿಮಾನಿಗಳ ಪ್ರಶ್ನೆ

     

    View this post on Instagram

     

    A post shared by Nidhi Subbaiah (@nidhisubbaiah)

    ಬಿಗ್‍ಬಾಸ್ ನಂತರ ನಿಧಿ ಸುಮಾರು 22 ದಿನಗಳ ಕಾಲ ಹಿಮಾಚಲ ಪ್ರದೇಶದಲ್ಲಿ ಪ್ರವಾಸ ಕೈಗೊಂಡಿದ್ದು, ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಅದನ್ನು ನೋಡಿದ ಅವರ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ: 22 ದಿನ ಹಿಮಾಚಲ ಪ್ರದೇಶದಲ್ಲಿ ನಿಧಿ ಸುಬ್ಬಯ್ಯ ಮಾಡಿದ್ದೇನು?

    nidhi

    ಮದುವೆಯ ನಂತರ ನಿಧಿ ಸಿನಿಮಾಗಳಿಗೆ ಬ್ರೇಕ್ ತೆಗೆದುಕೊಂಡಿದ್ದರು. ಬಿಗ್‍ಬಾಸ್ ನಂತರ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಯಾವ ರೀತಿಯ ಪಾತ್ರಗಳನ್ನು ಮಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ.

  • ನಿಧಿ ಅವರನ್ನು ಒಂದೇ ಸಾಲಲ್ಲಿ ವರ್ಣಿಸಲು ಆಗದು!

    ನಿಧಿ ಅವರನ್ನು ಒಂದೇ ಸಾಲಲ್ಲಿ ವರ್ಣಿಸಲು ಆಗದು!

    ಸೂಪರ್ ಸಂಡೆ ವಿಥ್ ಸುದೀಪ್‍ದಲ್ಲಿ ಈ ವಾರ ಹೆಚ್ಚು ಹೈಲೆಟ್ ಆಗಿದ್ದು ನಿಧಿ ಸುಬ್ಬಯ್ಯ. ನಿಧಿ ಅವರ ಒಂದೊಂದು ಸಮಸ್ಯೆಗಳನ್ನು ಹೇಳುತ್ತಿರುವುದನ್ನು ಕೇಳಿದ ಸುದೀಪ್, ಸಖತ್ ಎಂಜಾಯ್ ಮಾಡುತ್ತಿದ್ದರು. ಬಿಗ್‍ಬಾಸ್ ಮನೆಯಲ್ಲಿ ನಿಧಿ ಸುಬ್ಬಯ್ಯ ಅವರಿಗೆ ಕೋಪ ಬಂದಾಗ ಅಳು ಬರುತ್ತಾ ಅಥವಾ ಅಳು ಬಂದಾಗ ಕೋಪ ಬರುತ್ತಾ ಎಂದು ಸುದೀಪ್ ಕೇಳಿದ್ದಾರೆ. ಈ ವೇಳೆ ನಿಧಿ ಸುಬ್ಬಯ್ಯ ಅವರು ಹೇಳಿದ ಮಾತನ್ನು ಕೇಳಿ ಸುದೀಪ್ ಒಂದು ಕ್ಷಣ ಸುಮ್ಮನೆ ನಿಂತಿದ್ದಾರೆ.

    ಮನೆಗೆ ಬಂದು ಇಷ್ಟು ದಿನದಲ್ಲಿ ಎಷ್ಟು ಬಾರಿ ಕೋಪ ಬಂದಿದೆ ಎಂದು ಸುದೀಪ್ ಅವರು ಕೇಳಿದ್ದಾರೆ. ಆಗ ನಿಧಿ ಅವರು ಎರಡರಿಂದ ಮೂರು ಸಲ ಎಂದು ಹೇಳಿದ್ದಾರೆ. ಈ ವೇಳೆ ಪಕ್ಕದಲ್ಲೇ ಇದ್ದ ಶುಭಾ ಇಲ್ಲ ಸರ್ ಪ್ರತಿ ಸಲ ಕೋಪ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಆಗ ನಿಧಿ ತೊದಲುತ್ತಾ 2, 3 ಯಾವಾಗಲೂ ಕೋಪ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಈ ವೇಳೆ ಮನೆ ಮಂದಿ ಜೋರಾಗಿ ನಕ್ಕಿದ್ದಾರೆ.

     ನಾನು ಅಡುಗೆಯನ್ನು ಮಾಡುತ್ತೇನೆ ಕೆಲವರು ಚೆನ್ನಾಗಿ ಮಾಡುತ್ತೀಯಾ ಎಂದು ಹೇಳಿದ್ದಾರೆ. ಆದರೆ ರಾಜೀವ್ ಮಾತ್ರ ನೀನು ತರಕಾರಿ ಕಟ್ ಮಾಡೋದು ಒಗ್ಗರಣೆ ಹಾಕುವುದು ಮಾಡುತ್ತೀಯಾ ಎಂದು ಹೇಳುತ್ತಾರೆ ನನಗೆ ಬೇರಸವಾಯಿತ್ತು ಎಂದಿದ್ದಾರೆ.

    ನಿಧಿ ಅವರ ಫನ್ನಿ ಆಪಾದನೆಯನ್ನು ಕೇಳಿದ ಸುದೀಪ್, ಇನ್ನು ಮುಂದೆ ನಿಧಿ ಅವರನ್ನು ಹೊಗಳಬೇಕು ಎಂದರೆ ಅವರಿಗೆ ವಾರ ಪೂರ್ತಿ ಜೋರಾಗಿ ಹೊಗಳಬೇಕು. ಅದೇ ಅವರಿಗೆ ಏನಾದರೂ ಬೈಯಬೇಕು ಎಂದರೆ ಸಣ್ಣದಾಗಿ ಹೇಳಬೇಕು. ನೀವು ನಿಧಿ ಅವರನ್ನು ಹೊಗಳುತ್ತಿರುವುದು ಎಲ್ಲರಿಗೂ ಗೊತ್ತಾಗಬೇಕು ಹಾಗೇ ನೀವು ಹೊಗಳಬೇಕು ಇದು ನಾನು ನಿಮಗೆ ಕೊಡುತ್ತಿರುವ ಟಾಸ್ಕ್ ಎಂದು ಸುದೀಪ್ ಹೇಳಿದ್ದಾರೆ.

    ನಿಧಿ ಸಖತ್ ಆಗಿ ರೆಡಿ ಆಗಿದ್ದಾರೆ ಹೊಡಿರೋ ಚಪ್ಪಾಳೆ ಎಂದು ರಘು ಹೇಳಿದ್ದಾರೆ. ನಿಧಿ ಆಯಮ್ಮ ಸಖತ್ ಆಗಿ ಮಾಡುತ್ತಾರೆ, ಟಾಸ್ಕ್ , ಅಡುಗೆ ಎಲ್ಲಾ ಎಂದು ಮಂಜು ಹೇಳಿದ್ದಾರೆ. ನಿಧಿ ಸಖತ್ ಆಗಿ ಕಾಮಿಡಿ ಮಾಡುತ್ತಾರೆ, ಎಷ್ಟು ಚಂದವಾಗಿ ನಗುತ್ತಾರೆ ಎಂದು ಪ್ರಶಾಂತ್ ಹೇಳಿದ್ದಾರೆ. ಸುದೀಪ್ ಮನೆಯವರೆಲ್ಲ ನಿಧಿ ಅವರನ್ನು ಹೊಗಳಿದ್ದು ಕೇಳಿ ಸಖತ್ ಎಂಜಾಯ್ ಮಾಡಿದ್ದಾರೆ. ಮುಂದಿನ ವಾರದವರೆಗೂ ನಿಧಿ ಅವರನ್ನು ಹೊಗಳುತ್ತಾ ಇರಿ. ಅದು ಜೋರಾಗಿ ಎಲ್ಲರಿಗೂ ಕೇಳುವಂತೆ ಹೊಗಳಬೇಕು ಎಂದು ಹೇಳಿದ್ದಾರೆ.

  • ಪಂಚರಂಗಿ ಚೆಲುವೆಯ ಕೆನ್ನೆ, ಮೂಗಿಗೆ ಶುಭಾ ಪಂಚ್

    ಪಂಚರಂಗಿ ಚೆಲುವೆಯ ಕೆನ್ನೆ, ಮೂಗಿಗೆ ಶುಭಾ ಪಂಚ್

    ಬಿಗ್‍ಬಾಸ್ ಮನೆಯಲ್ಲಿ ನಟಿ ನಿಧಿ ಸುಬ್ಬಯ್ಯ ಕೆನ್ನೆಗೆ ಶುಭಾ ಪೂಂಜಾ ಹೊಡೆದಿದ್ದಾರೆ. ಈ ಇಬ್ಬರ ನಡುವೆ ಅಂತಹ ಜಗಳ ಏನು ನಡೆಯಿತು ಎನ್ನುವುದನ್ನು ಸುದೀಪ್ ಕಟ್ಟೆ ಪಂಚಾಯ್ತಿಯಲ್ಲಿ ಮಾತನಾಡಿದ್ದಾರೆ.

    ಹೌದು ಬಿಗ್ ಬಾಸ್ ಮನೆಯಲ್ಲಿ ಯಾರು ಯಾರ ಮೇಲೂ ಕೈ ಮಾಡುವಂತಿಲ್ಲ. ಆದರೆ ಶುಭಾ ನಿಧಿಗೆ ಯಾಕೆ ಹೊಡೆದರು ಎನ್ನುವ ವಿಚಾರವನ್ನು ಕೇಳಿದ ಸುದೀಪ್ ಮತ್ತು ಮನೆ ಮಂದಿ ಬಿದ್ದು ಬಿದ್ದು ನಕ್ಕಿದ್ದಾರೆ.

    ನಿಧಿ ಸುಬ್ಬಯ್ಯ ಹಾಗೂ ಶುಭಾ ಪೂಂಜಾ ಹೆಚ್ಚು ಅನ್ಯೂನ್ಯತೆಯಿಂದಿರುತ್ತಾರೆ. ಒಟ್ಟಾಗಿ ಸಮಯವನ್ನು ಕಳೆಯುತ್ತಾರೆ. ಒಂದೇ ಮಂಚದಲ್ಲಿ ಮಲಗುತ್ತಾರೆ. ರಾತ್ರಿ ನಿದ್ದೆ ಮಾಡುತ್ತಿರುವಾಗ, ನಿದ್ದೆಗಣ್ಣಿನಲ್ಲಿ ನಿಧಿ ಸುಬ್ಬಯ್ಯ ಕೆನ್ನೆಗೆ ಶುಭಾ ಪೂಂಜಾ ಹೊಡೆದಿದ್ದಾರೆ.

    ಅಯ್ಯೋ ಸರ್ ಹೌದು ಮುಖದ ಮೇಲೆ ಅದ್ರಲ್ಲೂ ಮೂಗು ಮೇಲೆ ಸರಿಯಾಗಿ ಒದೆ ಬಿತ್ತು. ಏನಾಯ್ತು ಅಂತ ಎದ್ದರೆ.. ಶುಭಾ ಪೂಂಜಾ… ಕನಸಿನಲ್ಲಿ ಏನೋ ವಾದ ಮಾಡುತ್ತಿದ್ದಾರೆ.. ಜಗಳ ಮಾಡುತ್ತಿದ್ದಾಳೆ.. ಆಮೇಲೆ ಎದ್ದೇಳು ಅಂತ ಎಬ್ಬಿಸಿದೆ. ನನ್ನ ನಿದ್ದೆ ಹೋಯ್ತು. ಶುಭಾ ಚೆನ್ನಾಗಿ ನಿದ್ದೆ ಮಾಡಿದರು ಎಂದು ನಿಧಿ ಸುಬ್ಬಯ್ಯ ಹೇಳಿದ್ದಾರೆ.

    ನಿದ್ದೆಗಣ್ಣಿನಲ್ಲಿ ಯಾವ ಆಸೆ ತೀರಿಸಿಕೊಳ್ಳುತ್ತಿರುವುದು ನೀವು ಎಂದು ಸುದೀಪ್ ಹೇಳಿದ್ದಾರೆ. ಈ ವೇಳೆ ಶುಭಾ ಪೂಂಜಾ ಇಲ್ಲ ಸರ್.. ನಾನು ಹೊಡೆಯುವ ತರಹ ಕಾಣ್ತೀನಾ ಎಂದು ಪ್ರಶ್ನಿಸಿದ್ದಾರೆ. ಹೌದು ಖಂಡಿತ ಹಾಗೆ ಕಾಣ್ತೀರಾ. ಹೊಡೆಯುವ ತರಹ ಕಾಣಲ್ಲ ಅಂತ ಯಾರು ಹೇಳಿದ್ದು ನಿಮಗೆ? ಹೊಡೆದಿದ್ದು ಹೌದು ಅಂದ್ರೆ ನಿಧಿ ಸುಬ್ಬಯ್ಯ.. ಮಾವ ಅವರನ್ನು ಇಟ್ಟುಕೊಂಡು ಕೇಸ್ ಹಾಕ್ಬಹುದು. ಆದರೆ ಇದನ್ನು ಇಲ್ಲಿಗೆ ಬಿಟ್ಟುಬಿಡಿ ಹೊರಗೆ ಹೋದ್ಮೇಲೆ ಮದುವೆ ಆಗಬೇಕು. ಇದೇ ತರಹ ಪ್ರತಿ ದಿನ ಬೀಳುತ್ತಿದ್ದರೆ, ಪಾಪ… ಹುಷಾರು ಎಂದು ಸುದೀಪ್ ಜೋಕ್ ಮಾಡಿದ್ದಾರೆ.

    ನನಗೆ ನಿದ್ದೆ ಮಾಡುವಾಗ ಸ್ಪೇಸ್ ಸ್ವಲ್ಪ ಜಾಸ್ತಿ ಬೇಕು. ಆಗ ಅವರು ನನ್ನ ಹತ್ತಿರ ಬಂದಿರುತ್ತಾರೆ.. ಅದಕ್ಕೆ ಕೊಟ್ಟಿರುತ್ತೇನೆ ಎಂದು ಮುದ್ದ ಮುದ್ದಾಗಿ ಶುಭಾ ಹೇಳಿದ್ದಾರೆ.

    ಶುಭಾ ಪೂಂಜಾ ಬಿಗ್‍ಬಾಸ್ ಮನೆಯಲ್ಲಿ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಾ ಮನರಂಜನೆಯನ್ನು ನೀಡುತ್ತಿದ್ದಾರೆ. ನಿಧಿ, ಶುಭಾ ಸದ್ಯಕ್ಕೆ ಒಳ್ಳೆಯ ಸ್ನೇಹಿತರಾಗಿ ಮನೆಯಲ್ಲಿ ಚೆನ್ನಾಗಿ ಇದ್ದಾರೆ. ಈ ಇಬ್ಬರು ಕೊನೆಯವರೆಗೂ ಹೀಗೆ ಇವರ ಸ್ನೇಹ ಮುಂದುವರೆಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.

  • ಬಿಗ್‍ಬಾಸ್ ಮನೆ ತುಪ್ಪದ ವಿಷ್ಯ ಬ್ಯಾಡವೋ ಶಿಷ್ಯ..

    ಬಿಗ್‍ಬಾಸ್ ಮನೆ ತುಪ್ಪದ ವಿಷ್ಯ ಬ್ಯಾಡವೋ ಶಿಷ್ಯ..

    ಬಿಗ್‍ಬಾಸ್ ಮನೆಯಲ್ಲಿ ತುಪ್ಪದ ವಿಷ್ಯಕ್ಕೆ ಗಲಾಟೆ ನಡೆದಿದೆ. ರುಚಿಯಾದ ತುಪ್ಪ ಎಲ್ಲರ ಮನದಲ್ಲಿ ಕೊಂಚ ಬಿಸಿ ಬಿಸಿ ಮಾಡಿದ್ದಂತೂ ಸುಳ್ಳಲ್ಲ. ತುಪ್ಪಕ್ಕಾಗಿ ಮನೆ ಮಂದಿ ಕಿತ್ತಾಡಿಕೊಂಡಿದ್ದಾರೆ.

    ಹೌದು ಬಿಗ್‍ಬಾಸ್ ಮನೆಯಲ್ಲಿ ರೇಶನ್ ಒಂದು ಅಳತೆಯಲ್ಲಿ ಬರುತ್ತದೆ. ಬೇಕಾ ಬಿಟ್ಟಿಯಾಗಿ ಖರ್ಚು ಮಾಡುವಂತಿಲ್ಲ. ಮಾಡಿದರೆ ಅವರೆ ಮುಂದೆ ಮತ್ತೆ ರೇಶನ್ ಬರುವವರೆಗೂ ಅದೇ ಸಾಮಾಗ್ರಿಗಳಲ್ಲಿ ಅಡುಗೆ ಮಾಡಿಕೊಂಡು ಹೋಗಬೇಕು. ಆದರೆ ಒಂಟಿ ಮನೆಯ ಸದಸ್ಯರು ತುಪ್ಪ ಖಾಲಿ ಆಗಿದೆ ಎಂದು ಒಬ್ಬರಿಗೊಬ್ಬರು ಕಿತ್ತಾಡಿಕೊಂಡಿದ್ದಾರೆ.

    ಪ್ರಶಾಂತ್ ಸಂಬರಗಿ ಮನೆಯವರಿಗಾಗಿ ತಪ್ಪು ಉಪಯೋಗಿಸಿ ಹೊಸ ಅಡುಗೆ ಮಾಡಿದ್ದಾರೆ. ಶುಭಾ ಪೂಂಜಾ, ನಿಧಿ, ಚಂದ್ರಕಲಾ ಮೋಹನ್ ಮನೆಯಲ್ಲಿರುವ ತುಪ್ಪ ಖಾಲಿ ಆಗಿದೆ ಎಂದು ಹೇಳಿದ್ದಾರೆ. ಈ ವೇಳೆ ಮನೆ ಮಂದಿ ಎಲ್ಲ ಪ್ರಶಾಂತ್ ಮಾಡಿಕೊಟ್ಟಿರುವ ತಿಂಡಿಯನ್ನು ತಿಂದು ಮತ್ತೆ ತುಪ್ಪವನ್ನು ಖಾಲಿ ಮಾಡಿದ್ದೀರಾ ಎಂದು ಬೆರಳು ಮಾಡಿ ತೋರಿಸಿದ್ದಾರೆ. ಒಬ್ಬರು ಒಂದೊಂದು ರೀತಿಯಾಗಿ ಮಾತನಾಡಿದ್ದಾರೆ. ಸಂಬರಗಿ ಮಾತ್ರ ನಾನು ತಪ್ಪವನ್ನು ಬಳಕೆಯೆ ಮಾಡಿಲ್ಲ ಎಂದು ಜಾರಿಕೊಂಡ್ರು.

    ಮನೆಯಲ್ಲಿ ಎಲ್ಲರಿಗೂ ಅಡುಗೆಯನ್ನು ಮಾಡುತ್ತಾರೆ ಅದನ್ನು ಎಲ್ಲರೂ ತಿನ್ನಬೇಕು. ನಾವು ನಮಗೆ ಬೇಕಾದದ್ದನ್ನು ಹೋಗಿ ಮಾಡಿಕೊಂಡು ತಿನ್ನ ಬಾರದು. ಎಲ್ಲರೂ ಹೊಂದಿಕೊಂಡು ಹೋಗೋಣ ಎಂದು ಮನೆಯ ಕ್ಯಾಪ್ಟನ್ ಅರವಿಂದ್ ಹೇಳಿದ್ದಾರೆ. ಮನೆಯ ಸದಸ್ಯರೆಲ್ಲ ಈ ವಿಚಾರವಾಗಿ ಒಪ್ಪಿಕೊಂಡಿದ್ದಾರೆ.

    ನಿಧಿ, ಶುಭಾ ವಾದ ಮನೆಗೆ ಬರುವ ರೇಶನ್ ಬಳಕೆ ಸರಿಯಾಗಿ ಆಗಬೇಕು, ಎಲ್ಲರಿಗೂ ಸಿಗಬೇಕು ಎನ್ನುತ್ತಾರೆ. ಆದರೆ ಮನೆಮಂದಿ ಮಾತ್ರ ಈ ವಿಚಾರವನ್ನು ಅರ್ಥ ಮಾಡಿಕೊಳ್ಳದೆ ಒಬ್ಬೊಬ್ಬರು ಒಂದೊಂದು ರೀತಿಯಾಗಿ ಮಾತಾಡಿದ್ದರಿಂದ ಡೊಡ್ಡ ಮನೆಯಲ್ಲಿ ಡೊಡ್ಡದಾಗಿಯೇ ಒಂದು ಗಲಾಟೆ ಆಗಿದೆ.

    ಆದರೆ ನಿನ್ನೆ ಪೂರ್ತಿಯಾಗಿ ಮನೆ ಮಂದಿ ಮಾತನಾಡಿಕೊಂಡಿದ್ದೇಲ್ಲ ತುಪ್ಪದ್ದೇ ವಿಚಾರ. ತುಪ್ಪ ಖಾಲಿಯಾಗಿದೆ ಎಂದು ಮನೆಯಲ್ಲಿ ಒಂದು ಡ್ರಾಮಾವೇ ನಡೆದಿದೆ.

  • ಬಿಗ್‍ಬಾಸ್ ಮನೆಯಲ್ಲಿ ನಾನು ಹೈಲೈಟ್ ಆಗುತ್ತಿಲ್ಲ – ಬೇಸರದಲ್ಲಿ ದಿವ್ಯಾ

    ಬಿಗ್‍ಬಾಸ್ ಮನೆಯಲ್ಲಿ ನಾನು ಹೈಲೈಟ್ ಆಗುತ್ತಿಲ್ಲ – ಬೇಸರದಲ್ಲಿ ದಿವ್ಯಾ

    ಬಿಗ್‍ಬಾಸ್ ಮನೆಯಲ್ಲಿ ಮೇಲ್ನೋಟಕ್ಕೆ ಎಲ್ಲರೂ ಚೆನ್ನಾಗಿದ್ದಾರೆ. ಆದರೆ ಅವರೊಳಗೊಳಗೆ ಎನೋ ಒಂದು ನಡೆಯುತ್ತಿದೆ ಎನ್ನುವುದು ಮಾತ್ರ ಸತ್ಯ. ಮನೆಯಲ್ಲಿ ನೋವು, ಕಷ್ಟ, ಸುಖ, ದುಃಖ ಇದೆ. ಜೊತೆಯಲ್ಲಿ ಗೆಲ್ಲಬೇಕು ಎನ್ನುವ ಹಂಬಲವು ಎಲ್ಲರಲ್ಲಿದೆ. ಈ ಮಧ್ಯೆ ಒಬ್ಬ ಸ್ಪರ್ಧಿ ನಾನು ಹೈಲೈಟ್ ಆಗಿ ಕಾಣುತ್ತಿಲ್ಲ ಎಂದು ಬೇಸರ ಮಾಡಿಕೊಂಡಿದ್ದಾರೆ.

    ಹೌದು ಬಿಗ್‍ಬಾಸ್ ಆರಂಭವಾದ ದಿನದಿಂದಲೂ ದಿವ್ಯಾ ಸುರೇಶ್ ಹಾಗೂ ಮಂಜು ಸ್ಟೋರಿ ಹೈಲೈಟ್ ಆಗಿತ್ತು. ಬಿಗ್‍ಬಾಸ್ ಕ್ಯಾಮೆರಾಗಳು ಮಂಜು ಮತ್ತು ದಿವ್ಯಾ ಸುರೇಶ್ ಅವರನ್ನು ಸೆರೆಹಿಡಿದದ್ದೆ ಹೆಚ್ಚು. ಹೀಗಿರುವಾಗ ದಿವ್ಯಾ ಮೂರನೇ ವಾರದಲ್ಲಿ ಮನೆಯಲ್ಲಿ ಒಂದು ಹೊಸ ಲವ್ ಸ್ಟೋರಿ ಹುಟ್ಟಿಕೊಂಡಿದೆ. ಅದೇ ದಿವ್ಯಾ ಉರುಡುಗ ಮತ್ತು ಅರವಿಂದ್. ಈ ಈಬ್ಬರು ಹೆಚ್ಚು ಹೈಲೈಟ್ ಆಗಿದ್ದಾರೆ. ನಾವು ಸೈಡ್‍ಲೈನ್ ಆಗುತ್ತಿದ್ದೇವೆ ಎನ್ನುವ ರೀತಿಯಲ್ಲಿ ದಿವ್ಯಾ ಸುರೇಶ್ ಬೇಸರವಾಗಿದ್ದಾರೆ ಅಂತೆ. ಈ ಕುರಿತಾಗಿ ನಿಧಿ ಮತ್ತು ಶುಭಾ ಪೂಂಜಾ ಮಾತನಾಡಿಕೊಂಡಿದ್ದಾರೆ.

    ದಿವ್ಯಾ ಅವರು ಬೇಸರದಿಂದ ಕೂತಿದ್ದರು. ನಾನು ಹೋಗಿ ಏಕೆ ಏನಾಯಿತ್ತು ಎಂದು ವಿಚಾರಿಸಿದೆ. ಆಗ ದಿವ್ಯಾ ಸುರೇಶ್ ಈಗ ದಿವ್ಯಾ ಉರುಡುಗ ಅವರದ್ದೇ ಹೈಲೈಟ್ ಆಗ್ತಾ ಇದೇ ಅಲ್ಲವಾ ಎಂದು ಹೇಳಿದರು. ನಾನು ನೀವು ಮತ್ತೆ ಮಂಜು ಹೈಲೈಟ್ ಆಗುತ್ತಿಲ್ಲ ಎಂದು ಬೇಜಾರಾ ಎಂದು ಹೇಳಿದೆ. ಅವರು ತುಂಬಾ ಬುದ್ಧಿವಂತರು ಎಂದು ನಿಧಿ ಹೇಳಿದ್ದಾರೆ. ಈ ವೇಳೆ ಶುಭಾ ಹೌದು ನಾನು ನೋಡಿದೆ ದಿವ್ಯಾ ಸುರೇಶ್ ಬೇಜಾರ್ ಆಗಿದ್ದಾರೆ ಎಂದು ಹೇಳುತ್ತಾ ಇಬ್ಬರು ಸೇರಿ ನಕ್ಕಿದ್ದಾರೆ.

    ಅವರ ಗೇಮ್‍ಪ್ಲಾನ್ ಅವರು ಮಾಡುತ್ತಿದ್ದಾರೆ. ನಾವು ಇಬ್ಬರು ಸ್ಟ್ರಾಂಗ್ ಆಗಿ ಇದ್ದೇವೆ ನಮಗೆ ಅದರ ಅವಶ್ಯಕತೆ ಇಲ್ಲ. ನಾವು ಇಬ್ಬರು ಸ್ಟ್ರಾಂಗ್ ಆಗಿರುವುದಕ್ಕೆ ಬಿಗ್‍ಬಾಸ್ ಮನೆಗೆ ಕರೆದಿದ್ದು ಎಂದು ಶುಭಾ ಮತ್ತು ನಿಧಿ ಮಾತನಾಡಿಕೊಂಡಿದ್ದಾರೆ.

    ಈ ವಾರ ಬಿಗ್‍ಬಾಸ್ ಮನೆಯಲ್ಲಿ ಒಂದು ದೊಡ್ಡ ಫೈಟ್ ನಡೆಯುತ್ತಿದೆ. ಮನೆಯ ಕ್ಯಾಪ್ಟನ್ ಬಿಟ್ಟು ಉಳಿದ 13 ಸ್ಪರ್ಧಿಗಳು ನೇರವಾಗಿ ನಾಮಿನೇಟ್ ಆಗಿದ್ದಾರೆ. ಪ್ರತಿಯೊಬ್ಬರು ತಾವು ಬಚಾವ್ ಆಗಬೇಕು ಎಂದು ಪಣತೊಟ್ಟಿದ್ದಾರೆ. ಸ್ಪರ್ಧಿಗಳು ತಮ್ಮ ಬಣ್ಣವನ್ನು ಬದಲಾಯಿಸುತ್ತಿದ್ದಾರೆ. ಬಿಗ್‍ಬಾಸ್ ಇವರ ಹಿಂದೆ ನಿಂತು ಸೂತ್ರದ ಗೊಂಬೆಯಂತೆ ಆಟವಾಡಿಸುತ್ತಿದ್ದಾರೆ.

  • ರೊಚ್ಚಿಗೆದ್ದ ಬಿಗ್‍ಬಾಸ್ ಹೆಂಗಳೆಯರು

    ರೊಚ್ಚಿಗೆದ್ದ ಬಿಗ್‍ಬಾಸ್ ಹೆಂಗಳೆಯರು

    ಬಿಗ್‍ಬಾಸ್ ಮನೆಯಲ್ಲಿ ಎಲ್ಲರೂ ಪ್ರೀತಿ ವಿಶ್ವಾಸದಿಂದ ಮಾತನಾಡುತ್ತಾರೆ. ಮೇಲ್ನೋಟಕ್ಕೆ ಮಾತ್ರ ಆ ನಗು, ಪ್ರೀತಿ, ಸಂತೋಷ ಪ್ರತಿಯೊಬ್ಬರ ಮನಸ್ಸಲ್ಲಿ ತಾನೂ ಗೆಲ್ಲಬೇಕು ಎನ್ನುವ ಆಸೆ ಇದೆ. ಆದರೆ ಅದನ್ನು ಯಾರು ಬಾಯಿ ಬಿಟ್ಟು ಹೇಳುತ್ತಿರಲಿಲ್ಲ. ಆದರೆ ಇದೀಗ ದೊಡ್ಡಮನೆ ಫಿಮೇಲ್ ಸ್ಪರ್ಧಿಗಳು ನಾವು ಗೆಲ್ಲಲೇ ಬೇಕು ಎಂದು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ.

    ನಾವು ಎಲ್ಲವನ್ನು ಒಂದು ಕಡೆ ಬಿಟ್ಟು ಕೊಡುತ್ತಿದ್ದೇವೆ. ನಮಗೆ ಯಾರು ಇಷ್ಟ ಎಂದು ಕೇಳಿದರೆ ನಾವು ಪುರುಷರ ಹೆಸರನ್ನೇ ಸೂಚಿಸುತ್ತೇವೆ. ಮಂಜು, ರಾಘು, ಅರವಿಂದ್ ಎಂದು ಹೇಳುತ್ತೇವೆ. ಅಷ್ಟೇ ನಮ್ಮ ಪ್ರಪಂಚವಾಗಿದೆ. ಒಂದು ಬಾರಿಯಾದರೂ ನಮ್ಮ ಹೆಸರನ್ನು ಅವರೂ ಹೇಳಿದ್ದಾರಾ ಎಂದು ಶುಭ ಪ್ರಶ್ನಿಸಿದ್ದಾರೆ. ಅಲ್ಲಿಯೇ ಇದ್ದ ನಿಧಿ ಸುಬ್ಬಯ್ಯ ಹೌದು ಅವರು ಯಾವಾಗಲೂ ಟಾಸ್ಕ್ ಅನ್ವಯವಾಗಿ ದಿವ್ಯಾ ಸುರೇಶ್, ದಿವ್ಯಾ ಉರುಡುಗ ಎಂದು ಹೆಸರನ್ನು ಸೂಚಿಸುತ್ತಾರೆ. ಬೇರೆ ಯಾರು ಕಾಣುವುದಿಲ್ಲ ಎಂದು ಮನೆಯವರ ನಡುವಳಿಕೆ ಕುರಿತಾಗಿ ಶುಭ ಪೂಂಜಾ ಹಾಗೂ ನಿಧಿ ಸುಬ್ಬಯ್ಯ ಮಾತನಾಡಿಕೊಂಡಿದ್ದಾರೆ.

    ನಾವು ಯಾರಿಗೂ ಬಕೆಟ್ ಹಿಡಿಯಲ್ಲ. ನಾವು ಇರೋದನ್ನ ಹಾಗೇ ಹೇಳುತ್ತೇವೆ ಹಾಗಾಗಿ ಅವರ ನಮ್ಮ ಹೆಸರುಗಳನ್ನು ಸೂಚಿಸುವುದಿಲ್ಲ. ಮೂರು ಜನ ಹೆಣ್ಣು ಮಕ್ಕಳಾದರೂ ಫೈನಲ್ ನಲ್ಲಿ ಕುಳಿತುಕೊಳ್ಳಬೇಕು ಎಂದು ನಿಧಿ ಹೇಳಿದ್ದಾರೆ.

    ಫೈನಲ್‍ನಲ್ಲಿ ಹೆಣ್ಣು ಮಕ್ಕಳು ಇರಬೇಕು ಹಾಗೇ ಆಡಬೇಕು!
    ಹೌದು ನಾನು ಯೋಚನೆ ಮಾಡುತ್ತಿದ್ದೆ ಯಾವಾಗಲೂ ಯಾಕೆ ಹುಡುಗರೇ ಬಿಗ್‍ಬಾಸ್ ವೀನ್ ಆಗುತ್ತಾರೆ ಎಂದು. ನಾವು ಹೇಗೆ ಆಡಬೇಕು ಎಂದರೆ ಕೊನೆಯಲ್ಲಿ ಹೆಣ್ಣು ಮಕ್ಕಳು ಇರಬೇಕು. ಇಷ್ಟು ಸೀಸನ್ ಅಲ್ಲಿ ಶ್ರುತಿ ಮೇಡಂ ಒಬ್ಬರೆ ವಿನ್ ಆಗಿದ್ದು. ಅವರು ಗುಂಪಲ್ಲಿ ಗೋವಿಂದ ಆಗಲಿಲ್ಲ. ಹೀಗಾಗಿ ಅವರು ಬಿಗ್‍ಬಾಸ್ ಗೆದ್ದಿರುವುದು ಎಂದು ಶುಭ ಹೇಳುತ್ತಾ ಗೇಮ್ ಪ್ಲಾನ್ ಮಾಡಿದ್ದಾರೆ.

    ಮನೆಯ ಸ್ಪರ್ಧಿಗಳ ಆಟ ಪ್ರಾರಂಭವಾಗಿದೆ. ತಮ್ಮನ್ನೂ ತಾವು ಬಚಾವ್ ಮಾಡಿಕೊಳ್ಳಲು ಹೊಸ ರೀತಿಯ ಉಪಾಯವನ್ನು ಹುಡುಕುತ್ತಿದ್ದಾರೆ. ನಾವು ಗೆಲ್ಲಲೇ ಬೇಕು ಎಂದು ಮನೆಯ ಹೆಂಗಳೆಯರು ಮಾಸ್ಟರ್ ಪ್ಲಾನ್ ರೂಪಿಸುತ್ತಿದ್ದಾರೆ. ಮನೆಯಲ್ಲಿರುವ ಸೆಲೆಬ್ರಿಟಿ ಮಹಿಳಾ ಮಣಿಗಳು ಹೇಗೆ ಆಡುತ್ತಾರೆ. ಏನೆಲ್ಲಾ ಚಮತ್ಕಾರಗಳನ್ನು ಮಾಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.