Tag: Nidhi subayya

  • ಉಪೇಂದ್ರ ನಿರ್ದೇಶನದ ಚಿತ್ರದಲ್ಲಿ `ಪಂಚರಂಗಿ’ ಬೆಡಗಿ ನಿಧಿ ಸುಬ್ಬಯ್ಯ

    ಉಪೇಂದ್ರ ನಿರ್ದೇಶನದ ಚಿತ್ರದಲ್ಲಿ `ಪಂಚರಂಗಿ’ ಬೆಡಗಿ ನಿಧಿ ಸುಬ್ಬಯ್ಯ

    ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ಅಂದರೆ ಅವರ ಚಿತ್ರದ ಬಗ್ಗೆ ನಿರೀಕ್ಷೇ ಜೋರಾಗಿಯೇ ಇದೆ. ಅದರಲ್ಲೂ ಉಪೇಂದ್ರ ನಿರ್ದೇಶನದ ಸಿನಿಮಾ ಅಂದರೆ ಹೇಳಬೇಕಾ. ಭಿನ್ನ ಸಿನಿಮಾಗಳ ಮೂಲಕ ಅಭಿಮಾನಿಗಳ ಮುಂದೆ ಬರುವ ಉಪೇಂದ್ರ ಇದೀಗ ಮತ್ತೊಂದು ಹೊಸ ಕಾನ್ಸೆಪ್ಟ್ ಮೂಲಕ ನಿರ್ದೇಶನಕ್ಕೆ ಮರಳಿದ್ದಾರೆ. ಉಪ್ಪಿ ನಿರ್ದೇಶನದ ಈ ಚಿತ್ರದಲ್ಲಿ ಯಾರೆಲ್ಲಾ ಇದ್ದಾರೆ ಎಂಬ ಮಾಹಿತಿ ಇಲ್ಲಿದೆ.

    ನಟ ಉಪೇಂದ್ರ 7 ವರ್ಷಗಳ ನಂತರ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾ ಟೈಟಲ್ ರಿಲೀಸ್ ಆಗಿದ್ದು ಅದ್ದೂರಿಯಾಗಿ ಸಿನಿಮಾ ಸೆಟ್ಟೇರಿದೆ. ಚಿತ್ರಕ್ಕೆ ʻಯು ಐʼ ಎಂದು ಟೈಟಲ್ ಕೂಡ ಇಡಲಾಗಿದೆ. ಟೈಟಲ್ ರಿಲೀಸ್ ಆದಾಗಿನಿಂದಲೂ ಉಪ್ಪಿ ಹೊಸ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆಯ ಜತೆ ಕುತೂಹಲ ಹೆಚ್ಚಾಗಿದೆ. ಇದನ್ನೂ ಓದಿ:ನಟ ಶಿವರಂಜನ್ ಬೋಳ್ಳಣ್ಣವರ್ ಮೇಲೆ ಗುಂಡಿನ ದಾಳಿ

    `ಯು ಐ’ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಮಾಡದ ಉಪೇಂದ್ರ ಸಿನಿಮಾದಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ ಎನ್ನುವುದನ್ನು ಹೇಳಿರಲಿಲ್ಲ. ಸದ್ಯದ ಮಾಹಿತಿ ಪ್ರಕಾರ ಉಪೇಂದ್ರ ನಿರ್ದೇಶನದ ಹೊಸ ಸಿನಿಮಾದಲ್ಲಿ ಇಂದ್ರಜಿತ್, ಉಮೇಶ್ ಬಣಕರ್, ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರ್ಗಿ, ಓಂ ಪ್ರಕಾಶ್ ರಾವ್ ನಟಿಸುತ್ತಿದ್ದಾರೆ.

    ನಟ ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ `ಯು ಐ’ ಟೀಮ್ ವಿಶೇಷವಾಗಿ ವಿಶ್ ಮಾಡಿದೆ. ವಿಶ್ ಮಾಡಿರುವ ವಿಡಿಯೋದಲ್ಲಿ ಚಿತ್ರದಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಇನ್ನು ಉಪ್ಪಿಗೆ ನಾಯಕಿಯಾಗಿ ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಳ್ತಾರೆ ಎನ್ನಲಾಗುತ್ತಿದೆ.

    ಇನ್ನು ಪಂಚರಂಗಿ ಸುಂದರಿ ನಿಧಿ ಸುಬ್ಬಯ್ಯ ಚಿತ್ರರಂಗದಲ್ಲಿ ಆಕ್ಟೀವ್ ಆಗಲು ಸಿಕ್ಕಾಪಟ್ಟೆ ವರ್ಕೌಟ್ ಮಾಡಿ, ಹೊಸ ಪಾತ್ರದ ಹುಡುಕಾಟದಲ್ಲಿದ್ದರು. ಈಗ `ಯು ಐ’ ಚಿತ್ರತಂಡಕ್ಕೆ ನಿಧಿ ಸಾಥ್‌ ನೀಡಿದ್ದಾರೆ. ಈ ಚಿತ್ರದಲ್ಲಿ ನಿಧಿ ಅದ್ಯಾವ ಪಾತ್ರದಲ್ಲಿ ಕಾಣಿಸಿಕೊಳ್ತಾರೆ. ಶ್ರೀನಿಧಿ ಜತೆ ನಿಧಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರಾ ಅಸಲಿ ವಿಚಾರವೇನು ಎಂಬ ಅಧಿಕೃತ ಮಾಹಿತಿ ಹೊರ ಬೀಳುವವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್‍ಬಾಸ್ ಮನೆಯಲ್ಲಿ ಅರವಿಂದ್‍ಗೆ ಸ್ಲೆಡ್ಜಿಂಗ್ ಮಾಡಿದ್ಯಾರು?

    ಬಿಗ್‍ಬಾಸ್ ಮನೆಯಲ್ಲಿ ಅರವಿಂದ್‍ಗೆ ಸ್ಲೆಡ್ಜಿಂಗ್ ಮಾಡಿದ್ಯಾರು?

    ಬೆಂಗಳೂರು: ಬಿಗ್ ಮನೆಯಲ್ಲಿ ಹೊಸ ಕ್ಯಾಪ್ಟನ್‍ನ ನೇಮಕವಾಗಿದೆ. ಅರವಿಂದ್ ಅವರಿಗೆ ಕ್ಯಾಪ್ಟನ್ ಪಟ್ಟ ಸಿಗುತ್ತಿದ್ದಂತೆ ಕೆಲವರು ಸಂತೋಷ ಪಟ್ಟರೆ ಕೆಲವರು ತಮ್ಮ ಅಸಮಾಧಾನವನ್ನು ತೋರ್ಪಡಿಸಿದರು. ಈ ನಡುವೆ ಅರವಿಂದ್ ನನ್ನನ್ನು ಸ್ಪರ್ಧಿಯೊಬ್ಬರು ಸ್ಲೆಡ್ಜಿಂಗ್ ಮಾಡಲು ಯತ್ನಿಸಿದ್ದಾರೆ ಎಂದು ಹೇಳಿದ್ದಾರೆ.

    ಜೋಡಿ ಟಾಸ್ಕ್‍ನಲ್ಲಿ ಜೋಡಿಯಾಗಿ ಸ್ಪರ್ಧಿಸಿದ್ದ ಅರವಿಂದ್ ಮತ್ತು ದಿವ್ಯ ಉರುಡುಗ ತಡರಾತ್ರಿ ಮಾತಿಗಿಳಿಯುತ್ತಿದ್ದಂತೆ, ಇಂದು ಕ್ಯಾಪ್ಟನ್ ಆಗಿರುವ ಖುಷಿಗೆ ಚೆನ್ನಾಗಿ ನಿದ್ದೆ ಮಾಡಿ, ನನಗೆ ನೀವು ಮನೆಯ ಕ್ಯಾಪ್ಟನ್ ಆಗಿರುವುದು ತುಂಬಾ ಖುಷಿ ಕೊಟ್ಟಿದೆ ಎಂದು ದಿವ್ಯ ಅರವಿಂದ್ ಜೊತೆ ಸಂತೋಷ ಹಂಚಿಕೊಂಡರು. ಈ ವೇಳೆ ಅರವಿಂದ್ ಖುಷಿ ಸದ್ಯಕ್ಕೆ ಏನಿಲ್ಲ. ಮುಂದಿನ ದಿನಗಳಲ್ಲಿ ಖುಷಿ ಆಗಬಹುದು. ನಾನು ಕ್ಯಾಪ್ಟನ್ ಆಗಿರುವುದರಿಂದ ಕೆಲವರು ಸಪ್ಪೆ ಮೋರೆ ಹಾಕಿಕೊಂಡು ಕೂತಿದ್ದಾರೆ ಎಂದರು.

    ನಂತರ ದಿವ್ಯ ಉರುಡುಗ ಅರವಿಂದ್ ನೀವು ಕ್ಯಾಪ್ಟನ್ ಆಗುತ್ತಿದ್ದಂತೆ, ನಿಧಿ ಸುಬ್ಬಯ್ಯ ಮಂಜ ಯೂ ಮೈ ಟೂ ಕ್ಯಾಪ್ಟನ್ ಎಂದು ಹೇಳಿದರು ಇದನ್ನು ನೋಡಿದರೆ ನಿಧಿಗೆ ನೀವು ಕ್ಯಾಪ್ಟನ್ ಆಗಿರುವುದು ಇಷ್ಟ ಆಗಿಲ್ಲ ಅನಿಸುತ್ತೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅರವಿಂದ್ ನಿಧಿ ನನಗೆ ಸ್ಲೆಡ್ಜಿಂಗ್ ಮಾಡಲು ಯತ್ನಿಸುತ್ತಿದ್ದಾಳೆ. ಅವಳಿಗೆ ಗೊತ್ತಿಲ್ಲ ನಾನು ಯಾರು ಅಂತ, ಅವಳು ಆ ರೀತಿ ಇರುವುದಕ್ಕೆ ಬಿಗ್ ಬಾಸ್ ಮನೆಯಲ್ಲಿ ಇರುವುದೆಂದು ಅಭಿಪ್ರಾಯ ಹಂಚಿಕೊಂಡರು.

    ಪ್ರತಿ ದಿನ ನಡೆಯುವ ಟಾಸ್ಕ್ ಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಒಬ್ಬರಲ್ಲ ಒಬ್ಬರ ಅಸಲಿ ಮುಖ ಕಾಣಿಸುತ್ತಿದೆ. ಬಿಗ್ ಮನೆಯಲ್ಲಿರುವ ಕೆಲವರಿಗೆ ಕೆಲವರನ್ನು ಕಂಡರೆ ಇಷ್ಟವಾದರೆ ಕೆಲವರಿಗೆ ಹೊಟ್ಟೆಯುರಿ ಇದ್ದಂತಿದೆ. ಇದು ಮುಂದಿನ ದಿನಗಳಲ್ಲಿ ಹೇಗೆ ಮುಂದುವರಿಯುತ್ತದೆ ಎಂಬುದನ್ನು ಕಾದು ನೋಡ ಬೇಕಾಗಿದೆ.