Tag: Nidhi

  • ದೊಡ್ಮನೆ ಯುವರಾಜನಿಗೆ ನಾಯಕಿ ಯಾರು? ಕೊನೆಗೂ ಸಿಕ್ತು ಅಪ್‌ಡೇಟ್

    ದೊಡ್ಮನೆ ಯುವರಾಜನಿಗೆ ನಾಯಕಿ ಯಾರು? ಕೊನೆಗೂ ಸಿಕ್ತು ಅಪ್‌ಡೇಟ್

    ದೊಡ್ಮನೆಯ ಕುಡಿ ಯುವರಾಜ್‌ಕುಮಾರ್(Yuvarajkumar) ಎಂಟ್ರಿಗೆ ಕೌಂಟ್‌ಡೌನ್ ಶುರುವಾಗಿದೆ. ಯುವನ ಪಟ್ಟಾಭಿಷೇಕಕ್ಕೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿರುವ ಬೆನ್ನಲ್ಲೇ ಯುವನ ನಾಯಕಿ ಯಾರು ಎಂಬುದರರ ಬಗ್ಗೆ ಭಾರಿ ಚರ್ಚೆ ಕೂಡ ನಡೆಯುತ್ತಿದೆ. ಅದಕ್ಕೆಲ್ಲ ಉತ್ತರ ಕೂಡ ಇದೀಗ ಸಿಕ್ಕಿದೆ.

    ಸಂತೋಷ್ ಆನಂದ್‌ರಾಮ್ (Santhosh Anandram) ಮತ್ತು ಯುವ ಕಾಮಬಿನೇಷನ್ ಚಿತ್ರ ಅನೌನ್ಸ್ ಆದ ದಿನದಿಂದ ಒಂದಲ್ಲಾ ಒಂದು ವಿವಾರವಾಗಿ ಸುದ್ದಿಯಾಗುತ್ತಲೇ ಇದೆ. ಮುಂದಿನ ಜನವರಿಯಿಂದ ಯುವನ ಡೆಬ್ಯೂ ಸಿನಿಮಾ ಶೂಟಿಂಗ್‌ಗೆ ತಯಾರಿ ನಡೆಯುತ್ತಿದ್ದು, ಯುವನಿಗೆ ಉಪೇಂದ್ರ (Upendra) ಅವರ ಮಗಳು ಐಶ್ವರ್ಯ, ಸುಧಾರಾಣಿ (Sudharani) ಮಗಳು ನಿಧಿ ಎಂದು ಸುದ್ದಿಯಾಗಿತ್ತು. ಇದೀಗ ಈ ಇಬ್ಬರು ಸ್ಟಾರ್ ಕಿಡ್ಸ್ ಯುವನಿಗೆ ನಾಯಕಿನಾ ಎಂಬ ಪ್ರಶ್ನೆ ಉತ್ತರ ಸಿಕ್ಕಿದೆ.

    ಉಪೇಂದ್ರ ಅವರ ಮಗಳು ಐಶ್ವರ್ಯ ಈಗಾಗಲೇ ದೇವಕಿ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸುಧಾರಾಣಿ ಮಗಳು ನಿಧಿಗೆ ನಟನೆಯ ಬಗ್ಗೆ ಆಸಕ್ತಿ ಇದ್ಯಾ ಎಂಬುದು ತಿಳಿದು ಬಂದಿಲ್ಲ. ಇದೀಗ ಚಿತ್ರತಂಡದಿಂದ ಹೊಸ ಅಪ್‌ಡೇಟ್‌ವೊಂದು ಸಿಕ್ಕಿದೆ. ಐಶ್ವರ್ಯಾ ಮತ್ತು ನಿಧಿ ಇಬ್ಬರು ಯುವನಿಗೆ ನಾಯಕಿಯರಾಗಿ ನಟಿಸುತ್ತಿಲ್ಲ ಎಂಬ ಸ್ಪಷ್ಟನೆ ಸಿಕ್ಕಿದೆ. ಇದು ಸುಳ್ಳು ಸುದ್ದಿ ಎಂದು ಖಾತ್ರಿಯಾಗಿದೆ. ಇದನ್ನೂ ಓದಿ: ರೂಪೇಶ್ ಶೆಟ್ಟಿ ವಿಚಾರವಾಗಿ, ಬಿಗ್ ಬಾಸ್ ವಿರುದ್ಧ ಸಾನ್ಯ ಅಯ್ಯರ್ ಗರಂ

     

    View this post on Instagram

     

    A post shared by Dr.Sudharani (@sudharanigovardhan)

    ಸದ್ಯದಲ್ಲಿ ಹೊಂಬಾಳೆ ಬ್ಯಾನರ್, ಯುವ ಚಿತ್ರದ ಕುರಿತಾದ ವಿಚಾರವನ್ನ ಅಧಿಕೃತವಾಗಿ ತಿಳಿಸುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಸದ್ಯದಲ್ಲೇ ಹೊಸ ಅಪ್‌ಡೇಟ್‌ಯೊಂದನ್ನ ಚಿತ್ರತಂಡ ರಿವೀಲ್ ಮಾಡಲಿದೆ.

    Live Tv
    [brid partner=56869869 player=32851 video=960834 autoplay=true]

  • ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಸಹೋದರಿ ನಿಧನ

    ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಸಹೋದರಿ ನಿಧನ

    ನ್ನಡದ ಖ್ಯಾತ ನಿರ್ಮಾಪಕಿ, ಡಾ.ರಾಜ್ ಕುಮಾರ್ ಪತ್ನಿ ಪಾರ್ವತಮ್ಮನವರ ಸಹೋದರಿ ಎಸ್.ವಿ. ನಾಗಮ್ಮನವರು ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. 81ರ ವಯಸ್ಸಿನ ನಾಗಮ್ಮನವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಬೆಂಗಳೂರಿನ ಮನೆಯಲ್ಲೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

    ಪಾರ್ವತಮ್ಮನವರಿಗೆ ಬೆನ್ನೆಲುಬಾಗಿಯೂ ನಿಂತಿದ್ದ ನಾಗಮ್ಮನವರು ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ತಮ್ಮ ಮಗನ ಮನೆಯಲ್ಲಿದ್ದರು. ಸಹೋದರಿಯನ್ನು ಕಳೆದುಕೊಂಡ ನಂತರ ಕೊಂಚ ಅವರು ಬಳಲಿದ್ದರು. ಸಹೋದರ ಎಸ್.ಎ. ಚಿನ್ನೇಗೌಡ, ಎಸ್.ಎ. ಗೋವಿಂದರಾಜು, ಎಸ್.ಎ. ಶ್ರೀನಿವಾಸ್ ಹಾಗೂ ತಂಗಿ ಜಯಮ್ಮ ಮತ್ತು ಮಗ ಮಹೇಶ್ ಮೊಮ್ಮಕ್ಕಳನ್ನು ಅವರು ಅಗಲಿದ್ದು, ಸಂಜೆ ಇಳಂದೂರಿನ ಕೆಸ್ತೂರಿನಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಯಿತು.

  • ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ನಿದ್ರೆ – ಉಳಿದವರು ಮೊಬೈಲ್‍ನಲ್ಲಿ ಮಗ್ನ

    ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ನಿದ್ರೆ – ಉಳಿದವರು ಮೊಬೈಲ್‍ನಲ್ಲಿ ಮಗ್ನ

    ರಾಯಚೂರು: ನೂತನ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿದ್ದು, ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಆದರೆ ನೂತನ ಉಸ್ತುವಾರಿ ಸಚಿವರ ಸಭೆಯಲ್ಲಿ ಒಂದಷ್ಟು ಅಧಿಕಾರಿಗಳು ತಮಗೇನು ಸಂಬಂಧವಿಲ್ಲವೆಂಬಂತೆ ನಿದ್ರೆಗೆ ಜಾರಿದ್ದು ಅಧಿಕಾರಿಗಳ ಬೇಜವಾಬ್ದಾರಿತನ ತೋರಿಸಿತು. ಇನ್ನೂ ಕೆಲವರಂತೂ ಸಭೆ ಮುಗಿಯುವವರೆಗೂ ಮೊಬೈಲ್‍ನಲ್ಲೇ ಮುಳುಗಿದ್ದ ವಿಚಾರ ಚರ್ಚೆಗೆ ಕಾರಣವಾಗುತ್ತಿದೆ.

     KDP meeting

    ಕೋವಿಡ್, ಡೆಂಗ್ಯೂ, ವೈರಲ್ ಫೀವರ್ ಸೇರಿದಂತೆ ಜಿಲ್ಲೆಯಲ್ಲಿ ಮಕ್ಕಳನ್ನು ಕಾಡುತ್ತಿರುವ ಕಾಯಿಲೆಗಳ ಬಗ್ಗೆ ಸಚಿವರು ಚರ್ಚೆ ಮಾಡುತ್ತಿದ್ದರೆ, ಅಧಿಕಾರಿಗಳು ಮಾತ್ರ ಮೊಬೈಲ್‍ನಲ್ಲಿ ಮಗ್ನರಾಗಿದ್ದರು. ಎಲ್ಲಾ ಮರೆತು ಸಭೆಯಲ್ಲಿ ನಿದ್ರೆಗೆ ಜಾರಿದ್ದರು. ಕೊನೆಯ ಕುರ್ಚಿಗಳಲ್ಲಿ ಕುಳಿತ ಅಧಿಕಾರಿಗಳು ತಮಗೂ ಸಭೆಗೂ ಸಂಬಂಧವೇ ಇಲ್ಲದಂತೆ ತಮ್ಮದೇ ಲೋಕದಲ್ಲಿ ಮುಳುಗಿದ್ದರು. ಇದನ್ನೂ ಓದಿ: ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಎದುರಲ್ಲೇ ಶಾಸಕಿ ರೂಪಾಲಿ ನಾಯ್ಕ್ ಗರಂ

     KDP meeting

    ಕೋವಿಡ್ ವ್ಯಾಕ್ಸಿನೇಷನ್‍ನಲ್ಲಿ ರಾಯಚೂರು ಜಿಲ್ಲೆ ಶೇ. 60ರಷ್ಟು ಮಾತ್ರ ಪ್ರಗತಿ ಸಾಧಿಸಿರುವುದಕ್ಕೆ ಸಚಿವರು ಅಸಮಧಾನ ವ್ಯಕ್ತಪಡಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮಗಳನ್ನು ತೆಗೆದುಕೊಂಡು ಲಸಿಕೆ ಪ್ರಮಾಣ ಹೆಚ್ಚಿಸುವಂತೆ ತರಾಟೆಗೆ ತೆಗೆದುಕೊಂಡರು. ಜಿಲ್ಲೆಯಲ್ಲಿ ಸದ್ಯ ಐದು ಜನ ಕೋವಿಡ್ ಬಾಧಿತರಿದ್ದು, ಅವರನ್ನು ಹೋಂ ಕ್ವಾರಂಟೈನ್ ಮಾಡದೇ ರಿಮ್ಸ್‍ನಲ್ಲಿಯೇ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದನ್ನೂ ಓದಿ: ಸಿಎಂ ಆಗೋ ಹುಮ್ಮಸ್ಸಲ್ಲಿ ಸಿದ್ದರಾಮಯ್ಯ ಮನಸ್ಸಿಗೆ ಬಂದಂತೆ ಮಾತಾಡ್ತಿದ್ದಾರೆ: ಶಿವರಾಮ್ ಹೆಬ್ಬಾರ್

  • ಶುಭಾಗೆ ಸೋಮಾರಿ ಸುಬ್ಬಿ ಅಂದ ದೊಡ್ಮನೆ ಸ್ಪರ್ಧಿಗಳು

    ಶುಭಾಗೆ ಸೋಮಾರಿ ಸುಬ್ಬಿ ಅಂದ ದೊಡ್ಮನೆ ಸ್ಪರ್ಧಿಗಳು

    ವಾರ ದೊಡ್ಮನೆ ಮಂದಿಗೆ ಕಣ್ಮಣಿ ಅವಾರ್ಡ್ ನೀಡುವ ಕಾರ್ಯಕ್ರಮವನ್ನು ಆಯೋಜಿಸಿದ್ದು, ಮನೆಯ ಎಲ್ಲಾ ಸ್ಪರ್ಧಿಗಳಿಗೂ ಕಾಮಿಡಿ ಪ್ರಶ್ನೆಗಳನ್ನು ಕೇಳುವ ಮೂಲಕ ಎಲ್ಲರಿಗೂ ಅವಾರ್ಡ್ ನೀಡುತ್ತಾ ಬಂದಿದೆ.

    ಸದ್ಯ ಕಣ್ಮಣಿ ಈ ಮನೆಯಲ್ಲಿ ಸೋಮಾರಿ ಸುಬ್ಬಿ ಯಾರು ಎಂಬ ಪ್ರಶ್ನೆ ಕೇಳಿದೆ. ಈ ವೇಳೆ ಶುಭಾ ಪೂಂಜಾ ಸ್ವತಃ ತಾವೇ ಎಂದು ಹೇಳುತ್ತಾ ಎರಡು ಕೈಗಳನ್ನು ಮೇಲಕ್ಕೆ ಎತ್ತುತ್ತಾರೆ. ಆಗ ಮನೆಯ ಸ್ಪರ್ಧಿಗಳು ಕೂಡ ಶುಭಾ ಕಡೆ ಬೆರಳು ಮಾಡಿದ್ದಾರೆ. ಇದರಲ್ಲಿ ಶುಭಾಗೆ ಕಾಂಪಿಟೇಷನ್ ನೀಡಲು ಯಾರಿಂದಲೂ ಸಾಧ್ಯವಿಲ್ಲ. ಸೋಮಾರಿ ಸುಬ್ಬಿ ಶುಭಾ. ಇದಕ್ಕೆ ವೋಟು ಇಲ್ಲ. ಅಭಿಪ್ರಾಯವಿಲ್ಲ, ಏನು ಇಲ್ಲ. ಒಂದೇ ಬಾರಿಗೆ ಸುಗ್ರಿವಾಜ್ಞೆ, ಶುಭಾಗೆ ಪ್ರತಿ ಸ್ಪರ್ಧಿಯೇ ಇಲ್ಲ ಎನ್ನುತ್ತಾರೆ.

    ನಂತರ ರಘು ಕೂಡ, ಇವರೆಷ್ಟು ಸೋಮಾರಿ ಎಂದರೆ ಟ್ರೋಫಿನೂ ಯಾರಾದರೂ ಎತ್ತಿಕೊಂಡು ಬಂದು ಕೊಡಿ ಅಂದಾಗ ಯಾವುದೇ ಟಾಸ್ಕ್ ಕೊಟ್ಟರೂ ಇದು ಯಾಕೆ ಕೊಡಬೇಕಾಗಿತ್ತು. ಮೈಕ್ ಸರಿ ಮಾಡಿಕೊಳ್ಳಿ ಎಂದರೆ ಯಾಕೆ ಹಾಗೆ ಕೂಗಾಡುತ್ತೀರಾ ಬಿಗ್‍ಬಾಸ್, ಏನು ಗಂಟು ಹೋಗುತ್ತಾ ಎಂದು ಕೇಳುತ್ತಾರೆ. ಕೆಲಸದ ತಂಟೆಗೆ ಬರುವುದಿಲ್ಲ. ಅಡುಗೆ ಹೀಗೆ ಎಲ್ಲದರನ್ನು ನೆಗೆಲೆಟ್ ತೋರಿಸುತ್ತಾರೆ ಎಂದು ಮಂಜು ಹೇಳುತ್ತಾರೆ.

    ಪ್ರಶಾಂತ್ ಕೂಡ ಬೆಳಗ್ಗೆ ಎದ್ದು ಕುಳಿತುಕೊಂಡ ನಂತರ ಟೀ ಮಾಡಿಕೊಳ್ಳುವುದರಿಂದ ಹಿಡಿದು, ಟೀ ಕಪ್ ಕೊಡುವವರೆಗೂ ಹುಡುಕಿಕೊಂಡು ಹೋಗಿ ಕೊಡಬೇಕು. ಒಳ್ಳೆ ರಾಣಿ ತರಹ ಇರುತ್ತಾರೆ, ಅವರದು ಹೊರಗಡೆಯೂ ರಾಣಿ ಜೀವನ, ಬಿಗ್‍ಬಾಸ್ ಮನೆಯಲ್ಲಿಯೂ ರಾಣಿ ಜೀವನ ಎಂದು ಹಾಸ್ಯ ಮಾಡುತ್ತಾರೆ.

    ಈ ವೇಳೆ ನಿಧಿ ಸುಬ್ಬಯ್ಯ ಕೂಡ ಶುಭಾ ಹಾಗೂ ನಾನು ಇಬ್ಬರು ಒಂದು ವೇಳೆ ಬಾತ್ ರೂಮ್ ಡಿಪಾರ್ಟ್‍ಮೆಂಟ್‍ನಲ್ಲಿ ಒಟ್ಟಿಗೆ ಇದ್ದರೆ, ನಾನು ಇವತ್ತು ಬಾತ್ ರೂಮ್ ಕ್ಲೀನ್ ಮಾಡುತ್ತೇನೆ ಎಂದು ನಾಲ್ಕು ಜನರನ್ನು ಕರೆದುಕೊಂಡು ಬಂದು ತೋರಿಸುತ್ತಾರೆ. ಕ್ಲೀನ್ ಮಾಡಿದ ನಂತರ ಹೇಗಿದೆ ಕ್ಲೀನಿಂಗ್ ಎಂದು ಕೇಳಿ ಹೋದ ಬಳಿಕ, ನಾನು ಮತ್ತೊಮ್ಮೆ ಬಾತ್ ರೂಮ್ ಕ್ಲೀನ್ ಮಾಡುತ್ತೇನೆ. ಅಡುಗೆ ಮನೆಯಲ್ಲಿಯೂ ಹಾಗೆ ಗಲೀಜು ಮಾಡುತ್ತಾಳೆ. ಅವಳ ಬೆಡ್ ಹಾಗೂ ಬಟ್ಟೆ ಕ್ಲೀನ್ ಮಾಡಿಕೊಳ್ಳಲು ಹೇಳಿದರೂ ನಿನಗೇನು ಪ್ರಾಬ್ಲಂ ನಿನ್ನ ಬೆಡ್ ಸೈಡ್ ಕ್ಲೀನ್ ಇದ್ಯಾಲ್ಲಾ ಹೋಗಿ ಮಲಗಿಕೋ ಅಂತಾಳೆ ಎಂದು ರೇಗಿಸುತ್ತಾರೆ.

    ಇಂದು ಬೆಳಗ್ಗೆ ಎದ್ದು ಬ್ರಶ್ ಮಾಡುವಾಗ ಕೂಡ ಶುಭಾ ಸೋಫಾ ಮೇಲೆ ಕುಳಿತುಕೊಂಡು ಮಾಡುತ್ತಿದ್ದರು ಎಂದು ಅರವಿಂದ್ ಹೇಳುತ್ತಾ, ಮಿಮಕ್ರಿ ಮಾಡುತ್ತಾ ತೋರಿಸುತ್ತಾರೆ. ಅದನ್ನು ನೋಡಿ ಮನೆ ಮಂದಿಯೆಲ್ಲಾ ಜೋರಾಗಿ ನಗುತ್ತಾರೆ.

  • ವೈಷ್ಣವಿಗೆ ಚಿನ್ನ ಎಂದ ಶಮಂತ್ !

    ವೈಷ್ಣವಿಗೆ ಚಿನ್ನ ಎಂದ ಶಮಂತ್ !

    ಬಿಗ್‍ಬಾಸ್ ಮನೆಯಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಶಮಂತ್ ಇದೀಗ ವೈಷ್ಣವಿಗೆ ಚಿನ್ನ ಎಂದು ಕರೆಯುವ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ.

    ನಿಧಿ ಹಾಗೂ ವೈಷ್ಣವಿ ಬಾತ್ ರೂಮ್ ಏರಿಯಾದಲ್ಲಿ ನಿಂತು ಮುಖಕ್ಕೆ ಫೇಸ್ ಪ್ಯಾಕ್ ಹಾಗೂ ಕ್ರೀಮ್ ಹಚ್ಚಿಕೊಳ್ಳುತ್ತಿದ್ದ ವೇಳೆ ಶಮಂತ್ ಇಬ್ಬರ ಮಧ್ಯೆ ನಿಂತು ಕುಡಿದವರಂತೆ ನಟಿಸಿದ್ದಾರೆ. ಅಲ್ಲದೇ ನಿಧಿ ಸುಬ್ಬಯ್ಯಗೆ ಫೇಸ್ ಪ್ಯಾಕ್ ಹಾಕಿಕೊಳ್ಳಬೇಕಾದರೆ ಚಿನ್ನ ಹುಷಾರು ಕಣ್ಣಿಗೆ ಹೋಗಿ ಬಿಟ್ಟತ್ತು ಎನ್ನುತ್ತಾರೆ. ಆಗ ವೈಷ್ಣವಿ ಎಷ್ಟು ಕಾಳಜಿ ಎಂದು ಹೇಳಿದಾಗ ಶಮಂತ್ ಚಿನ್ನ ನೀನು ಹಾಗೇ ಮಾತನಾಡಬೇಡ ಎಂದು ಹೇಳುತ್ತಾರೆ.

    ಆಗ ನಿಧಿ ಎಷ್ಟು ಚಿನ್ನ ನಿನಗೆ ಎಂದು ಶಮಂತ್ ಕೇಳುತ್ತಾರೆ. ಆಗ ಶಮಂತ್ ನಿಧಿಗೆ ನೀನು ನನ್ನ ಚಿನ್ನ, ವೈಷ್ಣವಿ ನನ್ನ ರನ್ನ ಎಂದು ಹೇಳುತ್ತಾರೆ. ಈ ವೇಳೆ ವೈಷ್ಣವಿ ನೀನು ಯಾರು ಹಾಗಾದ್ರೆ ಅಂದಾಗ, ನಾನು ಮುನ್ನ. ನೀನು ಹೀಗೆ ಹೆಚ್ಚಿಗೆ ಮಾತನಾಡುತ್ತಿದ್ದರೆ ನಿನಗೆ ಗುನ್ನ ಇಟ್ಟು ಬಿಡುತ್ತೇನೆ ಎಂದು ವೈಷ್ಣವಿಗೆ ಹೇಳುತ್ತಾರೆ.

    ನೀನು 6 ವರ್ಷ ವಿಲನ್‍ನನ್ನು ಮನೆಯಲ್ಲಿಯೇ ಇಟ್ಟುಕೊಂಡು ಕಣ್ಣಾ ಮುಚ್ಚಾಲೆ ಆಟ ಆಡಿದ್ಯಾ? ತಾಕತ್ತು ಇರಬೇಕು ಯಾವಾಗಲೂ, ಒಂದೇ ಒಂದು ಸುಳಿವು ನೀನು ಸಿದ್ದಾರ್ಥ್‍ಗೆ ಕೊಟ್ಟಿದ್ದರೆ ನೀನು ಎಲ್ಲೋ ಹೋಗಿ ಬಿಡುತ್ತಿದ್ದೆ ಎಂದು ವಾಲಾಡುತ್ತಾ ಶಮಂತ್ ವೈಷ್ಣವಿಗೆ ಅಗ್ನಿ ಸಾಕ್ಷಿ ಸಿರಿಯಲ್ ಬಗ್ಗೆ ಮಾತನಾಡುತ್ತಾರೆ.

    ಚಿನ್ನ ಆರುವರೆ ವರ್ಷ ನನ್ನ ಲೈಫ್‍ನಲ್ಲಿ ಅರ್ಧಗಂಟೆ 8 ರಿಂದ 8.30ವರೆಗೂ ನಿನಗೋಸ್ಕರ ಎತ್ತಿಟ್ಟು ಬಿಟ್ಟಿದ್ದೆ. ನಂತರ ಬಾರ್ ಕಡೆಗೆ ಹೋಗುತ್ತಿದ್ದೆ ಎಂದು ಹಾಸ್ಯ ಮಾಡಿದ್ದಾರೆ.

  • ಗೇಮ್ ಲೆಕ್ಕಾಚಾರ ಅರ್ಥಮಾಡಿಕೊಳ್ಳೋದ್ರಲ್ಲಿ ಶುಭಾ ಪೂಂಜಾ ಪಂಟ್ರಾ?

    ಗೇಮ್ ಲೆಕ್ಕಾಚಾರ ಅರ್ಥಮಾಡಿಕೊಳ್ಳೋದ್ರಲ್ಲಿ ಶುಭಾ ಪೂಂಜಾ ಪಂಟ್ರಾ?

    ಬಿಗ್‍ಬಾಸ್ ರಿಯಾಲಿಟಿ ಶೋನಲ್ಲಿ ಸದಾ ಲವಲವಿಕೆಯಿಂದ ಮನೆಯಲ್ಲಿ ಇರುವ ಸ್ಪರ್ಧಿ ಎಂದರೆ ಶುಭಾ ಪೂಂಜಾ. ಟಾಸ್ಕ್‌ನಲ್ಲಿ  ಕೆಲವು ಬಾರಿ ಹಿನ್ನಡೆ ಸಾಧಿಸಿದರು. ಮನೆಯ ಎಲ್ಲಾ ಸದಸ್ಯರಿಗೂ ಹಾಗೂ ವೀಕ್ಷಕರಿಗೂ ಮನರಂಜನೆ ನೀಡುವುದರಲ್ಲಿ ಒಂದು ಹೆಜ್ಜೆ ಮುಂದೆಯೇ ಇದ್ದಾರೆ.

    ನಿನ್ನೆ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಕಿಚ್ಚ ಸುದೀಪ್, ಗೇಮ್‍ನ ಲೆಕ್ಕಾಚಾರ ಅರ್ಥಮಾಡಿಕೊಳ್ಳುವುದರಲ್ಲಿ ಶುಭಾ ಪೂಂಜಾ ಎತ್ತಿದ ಕೈ, ಹೀಗಂತಾ ನಿಧಿ ಹಾಗೂ ದಿವ್ಯಾ ಸುರೇಶ್ ಅಂದುಕೊಂಡಿದ್ದಾರೆ. ಅಂದರೆ ಲೆಕ್ಕಾಚಾರ ಹೇಳಬೇಕಾದ್ರೂ ನಿಮ್ಮ ಎಕ್ಸ್‍ಪ್ರೆಷನ್ ಒನ್ ಮಿಲಿಯನ್ ಡಾಲರ್ ವರ್ಥ್. ನನಗೆ ಗೊತ್ತಿತ್ತು, ನಾನು ಹೇಳಿದ್ದೆ ಎನ್ನುತ್ತೀರಾ. ಆಗ ಇನ್ನೊಬ್ಬರು ಇದು ನಿಮಗೆ ಗೊತ್ತಿತ್ತಾ? ಇದೆಲ್ಲಾ ನಡೆತಿದ್ಯಾ ಎಂದಾಗ, ಹೌದು ಎಂದು ತಲೆ ಅಲ್ಲಡಿಸುತ್ತೀರಾ. ಇದಾದ ಬಳಿಕ ನಾವೆಲ್ಲರೂ ಬಿಗ್‍ಬಾಸ್ ಜೊತೆ ಕುಳಿತುಕೊಂಡು ನಾವು ಕರೆಕ್ಟ್ ಹಾ ಅಥವಾ ಅವರಾ ಅಂತಾ ಚರ್ಚೆ ಮಾಡಿದ್ದೇವೆ ಎಂದು ಹಾಸ್ಯ ಮಾಡುತ್ತಾ ಕಿಚ್ಚ ಶುಭ ಕಾಲೆಳೆಯುತ್ತಾರೆ.

    ಪ್ರತಿ ಸೀಸನ್‍ನಲ್ಲಿ ಈ ರೀತಿ ಯಾರಾದರೂ ಒಬ್ಬರು ಸಿಗುತ್ತಾರೆ ಅವರನ್ನು ನಾವು ಅನಾಲಿಸಿಸ್ಟ್ ಎಂದು ಕರೆಯುತ್ತೇವೆ. ನೀವು ದಿವ್ಯಾ ಸುರೇಶ್, ನಿಧಿ ಕುಳಿತುಕೊಂಡು ಮಾತನಾಡುತ್ತಿರುತ್ತೀರಾ. ಇಬ್ಬರು ಮಹಿಳಾ ಕಂಟೆಸ್ಟೆಂಟ್ ಬಂದಿದ್ದಾರೆ ಎಂದರೆ ಈ ವಾರ ಮನೆಯಿಂದ ಹುಡುಗಿಯೇ ಹೊರಹೋಗುವುದು ಎಂದು ಹೇಳುತ್ತೀರಾ, ಈ ವೇಳೆ ಇದು ನಿಮಗೆ ಗೊತ್ತಾ? ಅಂದಾಗ, ಹೌದು ಎಂದು ತಲೆ ಅಲ್ಲಡಿಸುತ್ತೀರಾ.

    ಸೋ ಈ ವಾರ ಯಾರು ಹೋಗುತ್ತಾರೆ ಎಂದು ಕಿಚ್ಚ ಶುಭಾರನ್ನು ಕೇಳುತ್ತಾರೆ. ಆಗ ಅದು ಹಾಗಲ್ಲ ಸರ್ ಎಂದು ಮುಖ ಮಚ್ಚಿಕೊಂಡು ನಗುತ್ತಾ ಶುಭ ಹೇಳುತ್ತಾರೆ. ಇಲ್ಲ ಇಲ್ಲ ಇಬ್ಬರು ಭಕ್ತಾದಿಗಳು ನಿಮ್ಮ ಮಾತನ್ನು ಕೇಳಿ ಆಶ್ರಮ ಕಟ್ಟಿಕೊಂಡಿದ್ದಾರೆ. ಈಗ ಆ ಫೌಂಡೆಷನ್‍ನನ್ನು ಅಲ್ಲಾಡಿಸಬೇಡಿ ಎಂದು ಕಿಚ್ಚ ವ್ಯಂಗ್ಯ ಮಾಡುತ್ತಾರೆ.

    ಆಗ ಶುಭ ಯಾರು ಹೋಗುತ್ತಾರೆ ಎಂದು ನನಗೆ ಗೊತ್ತಿಲ್ಲ. ಹಾಗೇ ಅನಿಸಿತು, ನಮಗೆಲ್ಲಾ ಅಳು ಬಂತು ಎಂದು ಹೇಳುತ್ತಾರೆ. ನಂತರ ಕಿಚ್ಚ ಶಂಕರ್‍ರವರು ಹೋಗಿದ್ದಕ್ಕೆ ಮತ್ತೋರ್ವ ಗಂಡಸರು ಬಂದರು. ಇದೀಗ ಇಬ್ಬರು ಹುಡುಗಿಯರು ಬಂದಿದ್ದಾರೆ. ಹಾಗಾಗಿ ಒಬ್ಬ ಹುಡುಗಿ ಹೋಗುತ್ತಾರೆ ಎಂಬ ಶುಭಾ ಲೆಕ್ಕಾಚಾರವನ್ನು ನೀವು ಸಿರಿಯಸ್ ಆಗಿ ತೆಗೆದುಕೊಂಡ್ರಾ ಎಂದು ನಿಧಿಗೆ ಕಿಚ್ಚ ಕೇಳುತ್ತಾರೆ.

    ಆಗ ನಿಧಿ ನಾನು ಆ ವೇಳೆ ಅತ್ತುಬಿಟ್ಟೆ ಯಾಕೆಂದರೆ ಒಂದು ವೇಳೆ ನಾನು ಎಲಿಮಿನೇಟ್ ಆದರೆ ಎಲ್ಲರನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದರು.

  • ಮನೆಯ ಎಲ್ಲಾ ಸ್ಪರ್ಧಿಗಳಿಗಿಂತಲೂ ನಿಧಿಗೆ ಸಿಕ್ತು ಹೆಚ್ಚು ಅಂಕ

    ಮನೆಯ ಎಲ್ಲಾ ಸ್ಪರ್ಧಿಗಳಿಗಿಂತಲೂ ನಿಧಿಗೆ ಸಿಕ್ತು ಹೆಚ್ಚು ಅಂಕ

    ಷ್ಟು ದಿನ ಕೇವಲ 17 ಮಂದಿ ಸ್ಪರ್ಧಿಗಳು ಎಂದು ಭಾವಿಸಿದ್ದ ದೊಡ್ಮನೆ ಸದಸ್ಯರಿಗೆ, ಇದೀಗ ಬಿಗ್‍ಬಾಸ್ ವೈಲ್ಡ್‍ಕಾರ್ಡ್ ಸ್ಪರ್ಧಿಯನ್ನು ಕಳುಹಿಸುವ ಮೂಲಕ ಮತ್ತೊಂದು ಬಿಗ್ ಶಾಕ್ ನೀಡಿದ್ದಾರೆ.

    ಪತ್ರಕರ್ತ, ಸಿನಿಮಾ ನಿರ್ದೇಶಕ ಚಂದ್ರಚೂಡ ಚಕ್ರವರ್ತಿ ನಿನ್ನೆ ಬಿಗ್‍ಬಾಸ್ ಮನೆಗೆ ವೈಲ್ಡ್‍ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದು, ಮೊದಲ ದಿನವೇ ಮನೆ ಸದಸ್ಯರ ಹಾವ-ಭಾವ, ಅಭ್ಯಾಸ, ವರ್ತನೆ ಬಗ್ಗೆ ಅಳೆದು ಸುರಿದು ಅಂಕಗಳನ್ನು ನೀಡಿದ್ದಾರೆ.

    ಮೊದಲಿಗೆ ಮನೆಯವರೊಂದಿಗೆ ತಮ್ಮ ಪರಿಚಯ ಮಾಡಿಕೊಂಡ ಚಂದ್ರಚೂಡರವರು, ಬಳಿಕ ಮನೆಯ ಸದಸ್ಯರ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿ ಅಂಕಗಳನ್ನು ನೀಡಿದರು. ಈ ವೇಳೆ ಮನೆಯ ಎಲ್ಲ ಸದಸ್ಯರಿಗಿಂತಲೂ ನಿಧಿ ಸುಬ್ಬಯ್ಯರಿಗೆ 10ಕ್ಕೆ 6 ಅಂಕಗಳನ್ನು ನೀಡಿದರು.

    ಮನುಷ್ಯ ಸಂದರ್ಭ ಬಂದಾಗ ತನ್ನ ನೋವನ್ನು ಹೇಳಿಕೊಂಡು ಬಿಡುತ್ತಾನೆ. ಇದು ಕನಿಷ್ಟ ಮನುಷ್ಯನ ಗುಣ. ಮನುಷ್ಯನ ಮೂಲ ಗುಣ ನಮ್ಮೊಳಗಿರುವ ನೋವು ಹಾಗೂ ಪ್ರೀತಿಯನ್ನು ಯಾರೊಂದಿಗದರೂ ಹಂಚಿಕೊಳ್ಳಬೇಕು. ಇಲ್ಲಿಯವರೆಗೂ ನಿಧಿ ಒಂದೇ ಒಂದು ಕ್ಷಣ ನೋವಿನ ಮುಖವನ್ನು ನಮ್ಮೊಂದಿಗೆ ತೋರಿಸಿಕೊಂಡಿಲ್ಲ. ಆದರೆ ಅವರ ನೋವು ಏನೆಂಬುವುದು ನನಗೆ ಗೊತ್ತು. ಯಾರನ್ನು ತೋಳಿಗೆ ಸೇರಿಸದೇ.. ಯಾವುದೇ ತೋಳದಲ್ಲಿ, ತೋಳದ ಗುಂಪಿನ ಹಿಂಡಿನಲ್ಲಿ ಒಂದಾಗದೇ.. ಯಾರನ್ನು ಭಾವಬಂಧನಕ್ಕೆ ಒಂದಾಗದೇ.. ಯಾರಿಗೂ ಬಾಹುವನ್ನು ಕೊಡದೇ ತನ್ನಷ್ಟಕ್ಕೆ ತಾನು ತಬ್ಬಿಕೊಂಡಿರುವುದಕ್ಕೆ ಮರಕ್ಕೆ ಮಾತ್ರ ಸಾಧ್ಯ. ಅದೊಂದು ಗುಣಕ್ಕೆ ನಾನು ನಿಧಿ ಸುಬ್ಬಯ್ಯರವರಿಗೆ ಅತೀ ಹೆಚ್ಚು ಅಂಕ ನೀಡುತ್ತೇನೆ ಎಂದು ಹೇಳುತ್ತಾರೆ.

    ಮನೆಯ ಮತ್ತಿತ್ತರ ಸದಸ್ಯರಾದ ರಾಜೀವ್ 1, ಶಂಕರ್ 0, ಮಂಜು 2, ವಿಶ್ವನಾಥ್ ಅರ್ಧ, ಶುಭ ಪೂಂಜಾ 2, ಅರವಿಂದ್ 3, ಶಮಂತ್ ಅರ್ಧ, ದಿವ್ಯಾ ಉರುಡುಗ 2, ವೈಷ್ಣವಿ 3 ಹೀಗೆ ಎಲ್ಲರಿಗೂ ಅಂಕಗಳನ್ನು ನೀಡಿದರು.

    ಒಟ್ಟಾರೆ ಮೊದಲ ದಿನವೇ ತಮ್ಮ ನೇರ ನುಡಿ ಹಾಗೂ ಅಭಿಪ್ರಾಯದ ಮೂಲಕ ಮನೆಯ ಸದಸ್ಯರ ಎದುರು ಹಾಕಿಕೊಳ್ಳುತ್ತಿರುವ ಚಂದ್ರಚೂಡ್ ಚಕ್ರವರ್ತಿ ಬಿಗ್‍ಬಾಸ್ ಮನೆಯಲ್ಲಿ ಇನ್ಮುಂದೆ ಕಿಚ್ಚೆಬ್ಬಿಸುವುದು ನಿಶ್ಚಿತ.

  • ನಿಧಿ ಸುಬ್ಬಯ್ಯ ಒಂದು ರೀತಿ ಕ್ಯೂಟ್ ದಡ್ಡಿ ಅಂದಿದ್ಯಾಕೆ ರಘು!

    ನಿಧಿ ಸುಬ್ಬಯ್ಯ ಒಂದು ರೀತಿ ಕ್ಯೂಟ್ ದಡ್ಡಿ ಅಂದಿದ್ಯಾಕೆ ರಘು!

    ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಪ್ರತಿವಾರ ನಡೆಯುವಂತೆ ನಿನ್ನೆ ಕೂಡ ‘ಯೆಸ್’ ಆರ್ ‘ನೋ’ ರೌಂಡ್ಸ್ ನಡೆಯಿತು. ಈ ವೇಳೆ ಮನೆಯ ಸದಸ್ಯರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ ಕಿಚ್ಚ ಕೊನೆಯದಾಗಿ ನಿಧಿ ಸುಬ್ಬಯ್ಯ ಕೆಲವು ಸಲ ದಡ್ಡಿ ಎಂಬ ಪ್ರಶ್ನೆ ಕೇಳುತ್ತಾರೆ.

    ಬಳಿಕ ನೋ ಯಾಕೆ ರಾಜೀವ್‍ರವರೇ ಎಂದು ಕೇಳಿದಾಗ, ನಿಧಿ ಯಾವಾಗಲೂ ನನ್ನ ಭಾವನೆಗಳನ್ನು ಹೇಗೆ ಎಕ್ಸ್‍ಪ್ರೆಸ್ ಮಾಡಬೇಕೆಂದು ಗೊತ್ತಾಗುತ್ತಿಲ್ಲ ಎಂದು ಹೇಳುತ್ತಿರುತ್ತಾರೆ. ಅವರು ಹೇಳಬೇಕೆಂದು ಕೊಂಡ ವಿಚಾರವನ್ನು ಕನ್ನಡದಲ್ಲಿ ಹೇಗೆ ಹೇಳಬೇಕೆಂದು ಗೊತ್ತಾಗದೇ ಯೋಚನೆ ಮಾಡುತ್ತಿರುತ್ತಾರೆ. ಈ ಗ್ಯಾಪ್‍ನಲ್ಲಿ ಕೆಲವೊಂದನ್ನು ಹೇಗೆ ಹೇಳಬೇಕೆಂದು ಗೊತ್ತಾಗದೇ ಹೇಳಿ ಬಿಡುತ್ತಾರೆ. ಆಗ ನಾವು ನಿಧಿ ಕನ್ಫೂಷನ್‍ನಲ್ಲಿ ಹೇಳುತ್ತಿದ್ದಾರೆ ಎಂದು ಕೊಳ್ಳುತ್ತೇವೆ. ಆದರೆ ಅವರಿಗೆ ಏನು ಹೇಳುತ್ತಿದ್ದೇನೆ ಎಂಬ ವಿಚಾರದ ಬಗ್ಗೆ ಅವರಿಗೆ ಬಹಳ ಅರಿವಿರುತ್ತದೆ ಎನ್ನುತ್ತಾರೆ.

    ನಂತರ ಯೆಸ್ ಬೋರ್ಡ್ ತೋರಿಸಿದ್ದ ರಘು, ನಿಧಿ ಕೆಲವು ಸಲ ನನ್ನ ರೀತಿಯೇ ಸ್ಲೋ ಮೋಷನ್. ಏನಾದರೂ ಹೇಳಲು ಸಮಯ ತೆಗೆದುಕೊಳ್ಳುತ್ತಾರೆ. ಯೋಚನೆ ಮಾಡುವ ಸಮಯದ ಮಧ್ಯೆ ಏನಾದರೂ ಹೇಳಿ ಬಿಡುತ್ತಾರೆ. ಅದಕ್ಕೆ ಅವರು ಒಂದು ರೀತಿ ಕ್ಯೂಟ್ ರೀತಿಯ ದಡ್ಡಿ ಎಂದು ಅವರತ್ತಾ ನೋಡುತ್ತಾರೆ. ಈ ವೇಳೆ ಕಿಚ್ಚ ಆಯಿತು ಆದರೆ ನೀವು ಯಾಕೆ ಅವರನ್ನು ಹಾಗೇ ನೋಡುತ್ತಿದ್ದೀರಾ? ನಿಧಿ ನಿಮಗೆ ಗೊತ್ತಾಗ್ತಿದ್ಯಾ ಅವರು ಯಾವ ರೀತಿ ನೋಡುತ್ತಿದ್ದಾರೆ ಎಂದು ಹಾಸ್ಯ ಮಾಡುತ್ತಾರೆ. ಈ ವೇಳೆ ನಿಧಿ ಮುಖ ಮುಚ್ಚಿಕೊಂಡು ನಗುತ್ತಾ ಗೊತ್ತಿಲ್ಲ ಸರ್ ಅವರು ಹೇಗೆ ನೋಡಿದ್ರು ಎನ್ನುತ್ತಾರೆ.

    ನಂತರ ಮಾತನಾಡಿದ ಮಂಜು, ಒಂದೊಂದು ಬಾರಿ ನಿಧಿ ಏನು ಮಾತನಾಡುತ್ತಾರೆ ಎಂಬುವುದು ಅವರಿಗೆ ಗೊತ್ತಾಗುವುದಿಲ್ಲ. ಅಂದರೆ ಅವರಿಗೆ ಎಲ್ಲ ಗೊತ್ತಿದೆ. ಆದರೆ ಆ ಮಾತುಗಳನ್ನು ಹೇಗೆ ಆಡಬೇಕೆಂದು ತಿಳಿದಿರುವುದಿಲ್ಲ. ಥಟ್ ಅಂತ ಮಾತಾನಾಡಿಬಿಡುತ್ತಾರೆ. ಆಗ ಬೇರೆಯವರಿಗೆ ಬೇಸರವಾಗುತ್ತದೆ. 5 ನಿಮಿಷದ ನಂತರ ಹೌದು ನನಗೆ ಗೊತ್ತಾಗಲಿಲ್ಲ ಎಂದು ಅರ್ಥಮಾಡಿಕೊಂಡು ಹೇಳುತ್ತಾರೆ.

    ಇದಕ್ಕೆ ಪ್ರತಿಯುತ್ತರ ನೀಡಿದ ನಿಧಿ, ಹೌದು, ನಾನು ಸಡನ್ ರಿಯಾಕ್ಟ್ ಮಾಡುವುದು, ಓವರ್ ಥಿಂಕ್ ಮಾಡುವುದು ನಿಜ. ನನ್ನ ಪ್ರಕಾರ ಇವರೆಲ್ಲರೂ ನನ್ನ ದಡ್ಡಿ ಅಂದುಕೊಂಡರೆ ಅದು ನನ್ನ ಸ್ಟ್ರೆಂಥ್. ಯಾಕಂದ್ರೆ ನನ್ನ ಆಯ್ಕೆ ಇವರ್ಯಾರಿಗೂ ಇನ್ನೂ ಗೊತ್ತಿಲ್ಲ ಎಂದು ಹೇಳುತ್ತಾರೆ.

  • ನಿಧಿಯಾಸೆಗೆ ಲಿಂಗವನ್ನೇ ಕೆಡವಿದ ದುಷ್ಕರ್ಮಿಗಳು

    ನಿಧಿಯಾಸೆಗೆ ಲಿಂಗವನ್ನೇ ಕೆಡವಿದ ದುಷ್ಕರ್ಮಿಗಳು

    ಕೋಲಾರ: ನಿಧಿಯಾಸೆಗೆ ದುಷ್ಕರ್ಮಿಗಳು ಪುರಾತನ ಕಾಲದ ಲಿಂಗವನ್ನು ಧ್ವಂಸ ಮಾಡಿರುವ ಘಟನೆ ಕೋಲಾರದ ಶ್ರೀನಿವಾಸಪುರ ತಾಲೂಕಿನ ನಂಬಿಹಳ್ಳಿಯಲ್ಲಿ ನಡೆದಿದೆ.

    ಪಂಚಲಿಂಗ ಕ್ಷೇತ್ರ ಎಂದೇ ಪ್ರಖ್ಯಾತಿ ಪಡೆದಿರುವ ನಂಬಿಹಳ್ಳಿಯ ಚೌಡಪ್ಪ ಎಂಬವರ ಜಮೀನನಲ್ಲಿರುವ ಪಂಚಲಿಂಗಗಳನ್ನು ಧ್ವಂಸ ಮಾಡಿದ್ದು, ನಿಧಿ ಆಸೆಗಾಗಿ ಶಿವಲಿಂಗದ ಬಳಿ ದುಷ್ಕರ್ಮಿಗಳು ವಾಮಾಚಾರ ಮಾಡಿಸಿದ್ದಾರೆ.

    ಲಿಂಗವನ್ನು ಹಾರೆಯಿಂದ ಕಿತ್ತು ಹಾಕಿ ಮಾಟ ಮಂತ್ರಕ್ಕೆ ತಂದಿದ್ದ ವಸ್ತುಗಳು ಹಾಗೂ ಅಗೆಯಲು ತಂದಿದ್ದ ಕಬ್ಬಿಣದ ಸಲಕರಣೆಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಈ ಹಿಂದೆಯೂ ನಿಧಿಯಾಸೆಗೆ ಲಿಂಗವನ್ನು ಕೆಡವಿದ್ದ ದುಷ್ಕರ್ಮಿಗಳು ದೇವಾಲಯವನ್ನು ವಿರೂಪಗೊಳಿಸಿದ್ದರು. ಪುರಾತನ ದೇವಾಲಯ ಇದಾಗಿದ್ದು, ಶಿವಲಿಂಗಕ್ಕೆ ಸುಮಾರು ವರ್ಷಗಳಿಂದ ಸರ್ಪ ಕಾವಲಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಆದರೆ ಸ್ಥಳದಲ್ಲಿ ಅರಿಶಿಣ, ಕುಂಕುಮ, ತೆಂಗಿನ ಕಾಯಿ, ನಿಂಬೆಹಣ್ಣು ಪತ್ತೆಯಾಗಿದ್ದು, ವಾಮಾಚಾರದ ಮೂಲಕ ಹಾವಿಗೆ ತೊಂದರೆ ನೀಡಿ ದೇವಾಲಯವನ್ನು ಧ್ವಂಸ ಮಾಡಿದ್ದಾರೆ. ಅಲ್ಲದೆ ದೇವರ ಕೃಪೆಯೋ ಅಥವಾ ಧೈವ ಶಕ್ತಿಯ ಪ್ರಭಾವವೋ ನಿಧಿ ಸಿಗದೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

  • ನಿಧಿಗಾಗಿ ಇತಿಹಾಸದ ಪ್ರಸಿದ್ಧ ನವಬೃಂದಾವನ ಧ್ವಂಸ – ಸಿಡಿದೆದ್ದ ನಟ ಜಗ್ಗೇಶ್

    ನಿಧಿಗಾಗಿ ಇತಿಹಾಸದ ಪ್ರಸಿದ್ಧ ನವಬೃಂದಾವನ ಧ್ವಂಸ – ಸಿಡಿದೆದ್ದ ನಟ ಜಗ್ಗೇಶ್

    ಬೆಂಗಳೂರು: ನಿಧಿಗಾಗಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಬಳಿ ಇರುವ ನವವೃಂದಾವನನ್ನು ದುಷ್ಕರ್ಮಿಗಳು ಅಗೆದು ಧ್ವಂಸ ಮಾಡಿದ್ದಾರೆ. ಇದಕ್ಕೆ ನಟ ಜಗ್ಗೇಶ್ ಪ್ರತಿಕ್ರಿಯಿಸಿ, ಈ ಕೃತ್ಯ ಮಾಡಿದವರ ವಂಶ ಸರ್ವನಾಶವಾಗುತ್ತದೆ ಎಂದು ಶಾಪ ಹಾಕಿದ್ದಾರೆ.

    ನಟ ಜಗ್ಗೇಶ್ ಟ್ವೀಟ್ ಮಾಡುವ ಮೂಲಕ ನವವೃಂದಾವನನ್ನು ಧ್ವಂಸ ಮಾಡಿದವರ ವಿರುದ್ಧ ಸಿಡಿದೆದ್ದಿದ್ದಾರೆ. “ಅಯ್ಯೋ ದೇವರೇ ಎಂಥ ಹೀನ ಕೃತ್ಯ ಮಾಡಿದ್ದಾರೆ. ಈ ಕೃತ್ಯ ಮಾಡಿದವರ ವಂಶ ಸರ್ವನಾಶವಾಗುತ್ತದೆ. ಸನಾತನ ನಮ್ಮ ಶ್ರೇಷ್ಟತೆಯ ಗುರುಪರಂಪರೆಗೆ ಕೈ ಹಾಕಿದ್ದಾರೆ. ಹೀಗಾಗಿ ಪಾಪಿಗಳಿಗೆ ಕ್ಷಮೆಯಿರದಿರಲಿ. ಸಂಬಂಧಪಟ್ಟ ಅಧಿಕಾರಿವರ್ಗ ಸೂಕ್ತಕ್ರಮ ತೆಗೆದುಕೊಳ್ಳಬೇಕು. ಗುರುಭಕ್ತರೇ ಪುನರ್ ನಿರ್ಮಾಣಕ್ಕೆ ಹಾಗೂ ಕಾನೂನು ಕ್ರಮಕ್ಕೆ ಹ್ಯಾಶ್‍ಟ್ಯಾಗ್ ಮಾಡಿ ಒತ್ತಾಯಿಸಿ” ಎಂದು ಆಕ್ರೋಶಗೊಂಡು ಹೇಳಿದ್ದಾರೆ.

    ಗಂಗಾವತಿ ತಾಲೂಕಿನ ಆನೆಗುಂದಿ ಬಳಿ ಇರುವ ನವವೃಂದಾವನ ಗಡ್ಡೆ ತುಂಗಭದ್ರಾ ನದಿಯ ಮಧ್ಯದಲ್ಲಿದೆ. ಇಲ್ಲಿ ವ್ಯಾಸರಾಜರು ಸೇರಿದಂತೆ ಒಟ್ಟು ಒಂಬತ್ತು ಯತಿಗಳ ಸಮಾಧಿಗಳು ಇವೆ. ಇಲ್ಲಿ ಪ್ರತಿವರ್ಷ ರಾಘವೇಂದ್ರ ಮಠದವರಿಂದ ಮತ್ತು ಉತ್ತಾರಾಧಿ ಮಠದಿಂದ ಅದ್ಧೂರಿಯಾಗಿ ಆರಾಧನೆ ಕಾರ್ಯಕ್ರಮ ಜರಗುತ್ತದೆ.

    ನವ ವೃಂದಾವನ ಮಾಲಿಕತ್ವಕ್ಕಾಗಿ ಈ ಎರಡು ಮಠದವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಯಾರ ಪರವೂ ತೀರ್ಪು ಬಂದಿಲ್ಲ. ಸಾಕಷ್ಟು ವಿವಾದಿತ ಪ್ರದೇಶ ಇದಾಗಿದ್ದು, ಬುಧವಾರ ರಾತ್ರಿ ದುಷ್ಕರ್ಮಿಗಳು ನಿಧಿಯ ಆಸೆಗಾಗಿ ನವ ವೃಂದಾವನವನ್ನು ಅಗೆದು ಹಾಕಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

    ಸಮಾಧಿಯ ಕೆಳಭಾಗವನ್ನು ಸಹ ಸಂಪೂರ್ಣ ಅಗೆದಿದ್ದು, ಇದು ಪಕ್ಕಾ ನಿಧಿಗಾಗಿ ಅಗೆದಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಗಂಗಾವತಿ ತಹಶಿಲ್ದಾರ ವೀರೇಶ್ ಮತ್ತು ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.