ಜ್ಯೂನಿಯರ್ ಬಾಲಯ್ಯ ಎಂದೇ ಖ್ಯಾತರಾಗಿದ್ದ ತಮಿಳಿನ (Tamil) ಹೆಸರಾಂತ ನಟ ರಘು ಬಾಲಯ್ಯ (Raghu Balaiah) ಇಂದು ನಿಧನರಾಗಿದ್ದಾರೆ (Passed away). ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ತಮ್ಮ ಚೆನ್ನೈನ (Chennai) ವಲಸರವಕ್ಕಂನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಹೆಸರಾಂತ ಹಿರಿಯ ನಟ ಟಿ.ಎಸ್.ಬಾಲಯ್ಯ ಅವರ ಪುತ್ರರಾಗಿದ್ದ ರಘು ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೇಲ್ನಾಟ್ಟು ಮರುಮಗಳು ಸಿನಿಮಾ ಮೂಲಕ ಚಿತ್ರೋದ್ಯಮಕ್ಕೆ ಕಾಲಿಟ್ಟಿದ್ದ ರಘು, ಆನಂತರ ಸುಂದರ ಕಾಂಡಂ, ಸಾತ್ತೈ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಸಿನಿಮಾಗಳಲ್ಲಿ ಮಾತ್ರವಲ್ಲ, ಸೀರಿಯಲ್ ಗಳಲ್ಲೂ ಅವರೂ ಕಾಣಿಸಿಕೊಂಡಿದ್ದರು.
ಮೃತರ ಅಂತ್ಯಕ್ರಿಯೆ ಸಂಜೆ ನಡೆಯಲಿದ್ದು, ಅವರ ಅಂತಿಮ ದರ್ಶನಕ್ಕೆ ಈಗಾಗಲೇ ವ್ಯವಸ್ಥೆ ಮಾಡಲಾಗಿದೆ. ತಮಿಳು ಚಿತ್ರೋದ್ಯಮದ ಅನೇಕರು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ನಟ ಅಜಿತ್ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.
ಕನ್ನಡದ ಪ್ರತಿಭಾವಂತ ನಿರ್ದೇಶಕ ಅಭಯ್ ಸಿಂಹ ನಿರ್ದೇಶಿಸಿದ್ದ ಶಿಕಾರಿ (Shikari) ಸಿನಿಮಾದಲ್ಲಿ ಬಹುಮುಖ್ಯ ಪಾತ್ರ ಮಾಡಿದ್ದ, ಮಲಯಾಳಂ (Malayalam) ಖ್ಯಾತ ನಟ ಹಾಗೂ ಮಾಜಿ ಸಂಸದ ಇನ್ನೋಸೆಂಟ್ (Innocent) ನಿನ್ನೆ ಸಂಜೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ಮಲಯಾಳಂ ಸಿನಿಮಾ ರಂಗದಲ್ಲಿ ಕಾಮಿಟಿ ನಟರಾಗಿ ಗುರುತಿಸಿಕೊಂಡಿದ್ದ ಇನ್ನೋಸೆಂಟ್ ಕೇವಲ ಮಲಯಾಳಂ ಸಿನಿಮಾ ರಂಗದಲ್ಲಿ ಮಾತ್ರವಲ್ಲ ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಅವರು ನಟಿಸಿದ್ದರು. ಮಲಯಾಳಂನ ಬಹುತೇಕ ಸೂಪರ್ ಸ್ಟಾರ್ ಸಿನಿಮಾಗಳಲ್ಲಿ ನಟಿಸಿದ್ದ ಹೆಗ್ಗಳಿಕೆ ಅವರದ್ದು. ಅಲ್ಲದೇ, ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷರಾಗಿಯೂ ಅವರು ಕೆಲಸ ಮಾಡಿದ್ದಾರೆ. ಇದನ್ನೂ ಓದಿ: ಪಿಂಕ್ ಕಲರ್ ಡ್ರೆಸ್‌ನಲ್ಲಿ ದೀಪಿಕಾ ದಾಸ್ ಮಿಂಚಿಂಗ್
ಇನ್ನೋಸೆಂಟ್ ಈ ಹಿಂದೆ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು. ಕ್ಯಾನ್ಸರ್ ಗೆದ್ದು ಬಂದು ಆ ಅನುಭವವನ್ನು ಪುಸ್ತಕದಲ್ಲಿ ಹಿಡಿದಿಟ್ಟಿದ್ದರು. ದಾಖಲೆಯ ರೀತಿಯಲ್ಲಿ ಪುಸ್ತಕ ಮಾರಾಟವಾಗಿತ್ತು. ಅಲ್ಲದೇ, ಕ್ಯಾನ್ಸರ್ ಪೀಡಿತರಿಗೆ ಅದು ಸಾಕಷ್ಟು ಧೈರ್ಯವನ್ನು ತುಂಬಿತ್ತು. ನಾನಾ ಭಾಷೆಗಳಲ್ಲೂ ಈ ಪುಸ್ತಕ ತರ್ಜುಮೆಯಾಗಿದೆ.
ಸಿನಿಮಾ ರಂಗದಲ್ಲಿ ಮಾತ್ರವಲ್ಲ, ರಾಜಕಾರಣದಲ್ಲೂ ಅವರು ಸಕ್ರೀಯರಾಗಿದ್ದರು. 2014-19ನೇ ಲೋಕಸಭಾ ಅವಧಿಯಲ್ಲಿ ಅವರು ಸಂಸದರಾಗಿ ಆಯ್ಕೆಯಾಗಿದ್ದರು. ರಾಜಕಾರಣ ಮತ್ತು ಸಿನಿಮಾ ರಂಗ ಎರಡರಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಎರಡೂ ಕ್ಷೇತ್ರಗಳಲ್ಲೂ ಅಪಾರ ಸಾಧನೆ ಮಾಡಿದ್ದಾರೆ. ಇನ್ನೋಸೆಂಟ್ ನಿಧನಕ್ಕೆ ಸಿನಿಮಾ ರಂಗದ ಗಣ್ಯರು ಮತ್ತು ರಾಜಕಾರಣಗಳು ಸಂತಾಪ ವ್ಯಕ್ತ ಪಡಿಸಿದ್ದಾರೆ.
ಭಾರತೀಯ ಸಿನಿಮಾ ರಂಗದ ಹಿರಿಯ ನಟಿ ಜಮುನಾ (Jamuna) ನಿಧನದ ಹಿನ್ನೆಲೆಯಲ್ಲಿ ಅವರ ಜೊತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ ನಟಿ ಸುಮಲತಾ ಅಂಬರೀಶ್ (Sumalatha Ambarish). 43 ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿಕೊಂಡಿರುವ ಅವರು ತಮ್ಮ 15ನೇ ವಯಸ್ಸಿನಲ್ಲಿ ‘ಬ್ಯೂಟಿ ಕ್ವೀನ್’ ಕಿರೀಟ ಧರಿಸಿದಾಗ, ಅದನ್ನು ಜಮುನಾ ಅವರೇ ಹಾಕಿದ್ದರು ಮತ್ತು ತಮಗೆ ಉತ್ತಮ ಭವಿಷ್ಯವಿದೆ ಎಂದು ನುಡಿದಿದ್ದರು ಎನ್ನುವುದನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಫೇಸ್ ಬುಕ್ ನಲ್ಲಿ ಸಂತಾಪಗಳನ್ನು ಹಂಚಿಕೊಂಡಿರುವ ಸುಮಲತಾ ಅಂಬರೀಶ್, ‘ಬಹುಭಾಷಾ ನಟಿ ಜಮುನಾ ಅವರು ಅಗಲಿದ ಸುದ್ದಿ ಅತೀವ ದುಃಖವನ್ನು ತಂದಿದೆ. ಕನ್ನಡವೂ ಸೇರಿದಂತೆ ಅವರು ಹಲವು ಭಾಷೆಗಳಲ್ಲಿ ನಟಿಸಿದ ಮೇರುತಾರೆ. ನಟಿಯಾಗಿ, ರಾಜಕಾರಣಿಯಾಗಿ ಅವರು ಈ ನೆಲಕ್ಕೆ ಕೊಟ್ಟಿರುವ ಕೊಡುವೆ ಅಪಾರ. ತಾಯಿಗುಣದ ಜಮುನಾ ಅವರ ನಿಧನಕ್ಕೆ ನನ್ನ ಸಂತಾಪಗಳು. ಅವರ ಸಿನಿಮಾ ಮತ್ತು ಸಮಾಜಮುಖಿ ಕೆಲಸಗಳು ಯಾವತ್ತಿಗೂ ಜೀವಂತ. ಜಮುನಾ ಅವರ ಜೊತೆ ನನಗೆ ತೀರಾ ಆತ್ಮೀಯ ಬಾಂಧವ್ಯವಿತ್ತು. 43 ವರ್ಷಗಳ ಹಿಂದೆ ಆಗ ನನಗೆ 15 ವರ್ಷ. ಅವರು ನನಗೆ ಬ್ಯೂಟಿ ಕ್ವೀನ್ ಕಿರೀಟ ತೊಡಿಸಿ ಹಾರೈಸಿದ್ದರು. ನಿನಗೆ ಒಳ್ಳೆಯ ಭವಿಷ್ಯವಿದೆ ಎಂದು ನನ್ನ ಜೀವನದ ಬಗ್ಗೆ ಭವಿಷ್ಯ ನುಡಿದ ಮೊದಲ ನಟಿ ಅವರಾಗಿದ್ದರು’ ಎಂದು ಬರೆದುಕೊಂಡಿದ್ದಾರೆ.
ಕನ್ನಡದಲ್ಲಿ ಭೂಕೈಲಾಸ, ಸಾಕ್ಷಾತ್ಕಾರ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಜಮುನಾ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. 86ರ ವಯಸ್ಸಿನ ಹಿರಿಯ ನಟಿ ಹೈದರಾಬಾದ್ ನಲ್ಲಿ ನೆಲೆಸಿದ್ದರು. ವಯೋಸಹಜ ಕಾಯಿಲೆಗಳು ಅವರನ್ನು ಹೈರಾಣು ಮಾಡಿದ್ದವು. ಚಿಕಿತ್ಸೆ ಫಲಕಾರಿಯಾಗದೇ ಹೈದರಾಬಾದ್ ನಿವಾಸದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ನಟ ಭಯಂಕರ: ಮೊದಲು ಟ್ರೈಲರ್ ನೋಡಿ, ಆನಂತರ ಸಿನಿಮಾ ನೋಡ್ಬೇಕೋ ಬೇಡ್ವೊ ಡಿಸೈಡ್ ಮಾಡಿ
1953ರಲ್ಲಿ ತೆರೆಕಂಡ ಪುಟ್ಟಿಲ್ಲು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದವರು ಜಮುನಾ. ಆನಂತರ ತೆಲುಗು, ತಮಿಳು, ಹಿಂದಿ, ಕನ್ನಡ ಹೀಗೆ ನಾನಾ ಭಾಷೆಯ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ದಕ್ಷಿಣದ ಅಷ್ಟೂ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರದ್ದು. ಕನ್ನಡದಲ್ಲಿ ಡಾ.ರಾಜ್ ಕುಮಾರ್ ಜೊತೆ ಭೂ ಕೈಲಾಸ ಮತ್ತು ಸಾಕ್ಷಾತ್ಕಾರ ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ.
ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ಜಮುನಾ, ಎನ್.ಟಿ.ಆರ್. ಜಗ್ಗಯ್ಯ ಸೇರಿದಂತೆ ಆ ಕಾಲದ ಸೂಪರ್ ಸ್ಟಾರ್ ಗಳ ಜೊತೆ ನಟಿಸಿದ್ದಾರೆ. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಹೆಗ್ಗಳಿಕೆ ಇವರದ್ದು. ದೊಂಗ ರಾಮುಟು, ಗುಂಡಮ್ಮ ಕಥ, ತೆನಾಲಿ ರಾಮಕೃಷ್ಣ ಹೀಗೆ ಇವರ ನಟನೆಯ ಸೂಪರ್ ಹಿಟ್ ಚಿತ್ರಗಳು. ಪುಟ್ಟಣ್ಣ ಕಣಗಾಲ್ ನಿರ್ದೇಶನ ಚಿತ್ರಗಳಲ್ಲೂ ಇವರು ನಟಿಸಿದ್ದಾರೆ.
ಸಿನಿಮಾಗಳಲ್ಲಿ ಮಾತ್ರವಲ್ಲ ರಾಜಕಾರಣದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಜಮುನಾ, 1980ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ಅವರು 1989ರಲ್ಲಿ ರಾಜಮಂಡ್ರಿಗೆ ಎಂಪಿ ಆಗಿ ಆಯ್ಕೆಯಾದರು. 1990ರಲ್ಲಿ ಜನತಾ ಪಕ್ಷದ ಪರವಾಗಿಯೂ ಅವರು ಕೆಲಸ ಮಾಡಿದರು. ಸಿನಿಮಾ ಮತ್ತು ರಾಜಕಾರಣ ಎರಡರಲ್ಲೂ ಯಶಸ್ಸಿ ಕಂಡ ಹಿರಿಯ ಜೀವವಿದು. ನಟಿಯ ಅಗಲಿಕೆಗೆ ಚಿತ್ರೋದ್ಯಮ ಕಂಬಿನಿ ಮಿಡಿದಿದೆ.
Live Tv
[brid partner=56869869 player=32851 video=960834 autoplay=true]
ಸ್ಯಾಂಡಲ್ ವುಡ್ ಹೆಸರಾಂತ ನಟ ಲಕ್ಷ್ಮಣ (Lakshmana) ಹೃದಯಾಘಾತದಿಂದಾಗಿ ನಿಧನರಾಗಿದ್ದಾರೆ. ಕೆಲ ವರ್ಷಗಳಿಂದ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಇಂದು ಬೆಳಗ್ಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ರಸ್ತೆ ಮಧ್ಯೆದಲ್ಲೇ ಲಕ್ಷ್ಮಣ ಕೊನೆಯುಸಿರು ಎಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಬೆಂಗಳೂರಿನ ಮೂಡಲಪಾಳ್ಯದ ನಿವಾಸದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮುನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಖಳನಟರಾಗಿ ನಟಿಸಿರುವ ಇವರು ಮಲ್ಲ, ಯಜಮಾನ, ಸೂರ್ಯವಂಶ, ಅಂತ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದರು. ರೆಬಲ್ ಸ್ಟಾರ್ ಅಂಬರೀಶ್ ಅವರ ನೆಚ್ಚಿನ ನಟ ಎನ್ನುವ ಖ್ಯಾತಿಗೂ ಪಾತ್ರರಾಗಿದ್ದರು. ಡಾ.ರಾಜ್ ಕುಮಾರ್, ಡಾ.ಅಂಬರೀಶ್, ಡಾ.ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್ ಕುಮಾರ್ ಹೀಗೆ ಸಾಕಷ್ಟು ದಿಗ್ಗಜ ನಟರೊಂದಿಗೆ ಕೆಲಸ ಮಾಡಿದ ಹೆಗ್ಗಳಿಕೆ ಇವರದ್ದು. ಇದನ್ನೂ ಓದಿ: ಮದುವೆ ಬಳಿಕ ಮಕ್ಕಳನ್ನು ಕರೆದುಕೊಂಡು ಬರುತ್ತೇನೆ, ಪಾಪಾರಾಜಿಗಳಿಗೆ ಸುನೀಲ್ ಶೆಟ್ಟಿ ಅಭಯ
ತಂದೆ ಸೈನಿಕರಾಗಿದ್ದರು. ಸಹೋದರ ಕೂಡ ಪೊಲೀಸ್ ಇಲಾಖೆಯಲ್ಲಿದ್ದರು. ಹಾಗಾಗಿ ಸಹಜವಾಗಿಯೇ ಲಕ್ಷ್ಮಣ ಅವರ ಸೆಳೆತ ಖಾಕಿ ಮೇಲೆಯೇ ಇತ್ತು. ಆದರೆ, ತಾಯಿ ಒಪ್ಪದ ಕಾರಣದಿಂದಾಗಿ ಬಣ್ಣದ ಪ್ರಪಂಚಕ್ಕೆ ಬಂದರು. ಕೆಲವು ಕಾಲ ಫ್ಯಾಕ್ಟರಿಯಲ್ಲೂ ಕೆಲಸ ಮಾಡುತ್ತಿದ್ದರು. ರಂಗಭೂಮಿಯಲ್ಲಿ ಹಲವು ವರ್ಷಗಳ ಕಾಲ ನಟನರಾಗಿ ಸೇವೆ ಸಲ್ಲಿಸಿ, ಆನಂತರ ಸಿನಿಮಾ ರಂಗಕ್ಕೆ ಬಂದರು. ಸಿನಿಮಾದಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆದರು.
Live Tv
[brid partner=56869869 player=32851 video=960834 autoplay=true]
ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ, ವಿಜಯಪುರದ ಜ್ಞಾನಯೋಗಾಶ್ರಮದ ಗುರುಗಳಾದ ಸಿದ್ದೇಶ್ವರ ಸ್ವಾಮಿಗಳ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನ ಸಾಕಷ್ಟು ಕಲಾವಿದರು, ನಿರ್ದೇಶಕರು ಮತ್ತು ತಂತ್ರಜ್ಞರು ಕಂಬನಿ ಮಿಡಿದಿದ್ದಾರೆ. ಅಗಲಿದ ಚೇತನನ ಗುಣಗಾನ ಮಾಡಿದ್ದಾರೆ. ನಾಡಿನ ಏಳಿಗೆಗಾಗಿ ಮಹಾತ್ಮ ಮತ್ತೆ ಹುಟ್ಟಿ ಬರಲಿ ಎಂದು ಪ್ರಾರ್ಥಿಸಿದ್ದಾರೆ.
ಸಿದ್ದೇಶ್ವರ ಸ್ವಾಮಿ ಅಗಲಿಕೆಯ ಕುರಿತು ಟ್ವಿಟ್ ಮಾಡಿರುವ ನಟ ಧನಂಜಯ್, ‘ಶತಮಾನದ ಸಂತ, ನಾಡು ಕಂಡ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾಗಿರುವುದು ತುಂಬಾ ನೋವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಜ್ಞಾನದ ಬೆಳಕು ನಮ್ಮನ್ನು ಸದಾ ಕಾಯುತ್ತಿರಲಿ’ ಎಂದು ಬರೆದಿದ್ದಾರೆ.
ಹಿರಿಯ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಕೂಡ ಕಂಬನಿ ಮಿಡಿದಿದ್ದು, ‘ನಡೆದಾಡುವ ದೇವರು ಎಂದೇ ಭಕ್ತರ ಹೃದಯದಲ್ಲಿ ಉಳಿದಿರುವ, ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ ಅಪಾರ ನೋವು ತಂದಿದೆ. ನಿಮ್ಮ ಸಾಮಾಜಿಕ ಸೇವೆ ಯಾವಾಗಲೂ ಹೃದಯದಲ್ಲಿ ಇರತ್ತೆ. ನಿಮಗೆ ಅನಂತ ನೋವಿನ ಅಶ್ರುತರ್ಪಣೆ’ ಎಂದು ಟ್ವಿಟ್ ಮಾಡಿದ್ದಾರೆ.
ನಿರ್ದೇಶಕ, ನಟ ರಿಷಬ್ ಶೆಟ್ಟಿ ಕೂಡ ಅಗಲಿದ ಸ್ವಾಮೀಜಿಗಳನ್ನು ನೆನಪಿಸಿಕೊಂಡಿದ್ದು, ‘ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ನಿಮ್ಮ ಅಗಲಿಕೆ ಸಹಿಸಲಸಾಧ್ಯ. ನಮಗಾಗಿ ಇನ್ನಷ್ಟು ವರ್ಷ ಬದುಕಬೇಕಿತ್ತು ನೀವು. ನಿಮ್ಮ ಬದುಕೇ ನಮಗೊಂದು ಆದರ್ಶ. ಹೋಗ್ಬನ್ನಿ ಗುರುವರ್ಯರೆ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ
ನಿರ್ದೇಶಕ ಗುರು ದೇಶಪಾಂಡೆ ಗುರುಗಳ ಲಿಂಗೈಕ್ಯಕ್ಕೆ ಅಂತಿಮ ನಮಗಳನ್ನು ಸಲ್ಲಿಸಿದ್ದು, ‘ವಿಜಯಪುರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ, ಕಾಯಕಯೋಗಿ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ’ ಎಂದು ಬರೆದುಕೊಂಡಿದ್ದಾರೆ. ಇವರುಗಳ ಜೊತೆಗೆ ಇನ್ನೂ ಅನೇಕ ಕಲಾವಿದರು, ತಂತ್ರಜ್ಞರು, ನಿರ್ದೇಶಕರು ಸೇರಿದಂತೆ ಅನೇಕರು ಕಂಬಿನಿ ಮಿಡಿದು, ಅಗಲಿದ ದೇವರಿಗೆ ನಮನ ಸಲ್ಲಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ತೆಲುಗು ಸಿನಿಮಾ ರಂಗದ ದಂತಕಥೆ, ಸಾವಿರಾರು ಚಿತ್ರಗಳಲ್ಲಿ ನಟಿಸಿರುವ ಕೈಕಾಲ ಸತ್ಯನಾರಾಯಣ (Satyanarayana) ಅವರ ನಿಧನಕ್ಕೆ ಸಂಸದೆ, ನಟಿ ಸುಮಲತಾ (Sumalatha Ambarish) ಕಂಬನಿ ಮೀಡಿದಿದ್ದಾರೆ. ತಮ್ಮ ಚೊಚ್ಚಲ ಸಿನಿಮಾದಲ್ಲಿ ಅವರು ತಂದೆಯ ಪಾತ್ರ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೇ, ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರೊಂದಿಗೆ ನಟಿಸಿದ್ದನ್ನು ಸ್ಮರಿಸಿದ್ದಾರೆ. ಹಿರಿಯ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿ, ಮೃತರ ಕುಟುಂಬಕ್ಕೆ ನೋವು ಭರಿಸುವಂತಹ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿದ್ದಾರೆ.
ಕೈಕಾಲ ಸತ್ಯನಾರಾಯಣ ಅವರು ನಿನ್ನೆ ಬೆಳಗ್ಗೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ಮುಂಜಾನೆ ಹೈದರಾಬಾದ್ ನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಐದು ದಶಕಗಳ ಕಾಲ ಸಿನಿಮಾ ರಂಗದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿರುವ ಇವರು, 1962ರಲ್ಲಿ ತೆರೆಗೆ ಬಂದ ರಾಜಕುಮಾರ್ ನಟನೆಯ ಸ್ವರ್ಣಗೌರಿ ಸಿನಿಮಾದಲ್ಲಿ ಇವರು ಶಿವನ ಪಾತ್ರಧಾರಿಯಾಗಿ ನಟಿಸಿದ್ದಾರೆ.
ಸಿಪಾಯಿ ಕೂತುರು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸತ್ಯನಾರಾಯಣ ಈವರೆಗೂ ಏಳು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಎನ್.ಟಿ.ಆರ್ ಸೇರಿದಂತೆ ಅನೇಕ ಹೆಸರಾಂತ ನಟರ ಜೊತೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರದ್ದು. ನಾಲ್ಕು ವರ್ಷಗಳ ಹಿಂದೆ ತೆರೆಕಂಡ ಮಹೇಶ್ ಬಾಬು ನಟನೆಯ ಮಹರ್ಷಿ ಇವರ ನಟನೆಯ ಕೊನೆಯ ಸಿನಿಮಾವಾಗಿದೆ. ಇದನ್ನೂ ಓದಿ: ಮಂಜು ಪಾವಗಡ ಮೇಲೆ ಅಮೂಲ್ಯ ಲವ್: ರಾಕೇಶ್ ಅಡಿಗ ಕಕ್ಕಾಬಿಕ್ಕಿ
1935ರ ಜುಲೈ 25 ರಂದು ಆಂಧ್ರಪ್ರದೇಶದಲ್ಲಿ ಜನಿಸಿರುವ ಸತ್ಯನಾರಾಯಣ, ಸಿನಿಮಾ ರಂಗದ ಮೇಲೆ ಸೆಳೆತ ಹಾಗೂ ರಂಗಭೂಮಿ ಮೇಲಿನ ಒಲವಿನಿಂದಾಗಿ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟವರು. ವಿವಿಧ ಪಾತ್ರಗಳೇ ಅವರನ್ನು ಮತ್ತಷ್ಟು ಅವಕಾಶ ಸಿಗುವಂತೆ ಮಾಡಿದವು. ನಾಗೇಶ್ವರಮ್ಮ ಅವರನ್ನು ಮದುವೆಯಾಗಿರುವ ಈ ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಸತ್ಯನಾರಾಯಣ ಅವರ ನಿಧನಕ್ಕೆ ತೆಲುಗು ಚಿತ್ರೋದ್ಯಮ ಕಂಬನಿ ಮಿಡಿದಿದೆ.
Live Tv
[brid partner=56869869 player=32851 video=960834 autoplay=true]
ತೆಲುಗು ಸಿನಿಮಾ ರಂಗದ ಹಿರಿಯ ನಟ ಹಾಗೂ ಕನ್ನಡದ ಡಾ.ರಾಜಕುಮಾರ್ (Rajkumar) ಜೊತೆ ನಟಿಸಿದ್ದ ಕೈಕಾಲ ಸತ್ಯನಾರಾಯಣ (Satyanarayana) ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ ಹೈದರಾಬಾದ್ ನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಐದು ದಶಕಗಳ ಕಾಲ ಸಿನಿಮಾ ರಂಗದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿರುವ ಇವರು, 1962ರಲ್ಲಿ ತೆರೆಗೆ ಬಂದ ರಾಜಕುಮಾರ್ ನಟನೆಯ ಸ್ವರ್ಣಗೌರಿ ಸಿನಿಮಾದಲ್ಲಿ ಇವರು ಶಿವನ ಪಾತ್ರಧಾರಿಯಾಗಿ ನಟಿಸಿದ್ದಾರೆ.
ಸಿಪಾಯಿ ಕೂತುರು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸತ್ಯನಾರಾಯಣ ಈವರೆಗೂ ಏಳು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಎನ್.ಟಿ.ಆರ್ ಸೇರಿದಂತೆ ಅನೇಕ ಹೆಸರಾಂತ ನಟರ ಜೊತೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರದ್ದು. ನಾಲ್ಕು ವರ್ಷಗಳ ಹಿಂದೆ ತೆರೆಕಂಡ ಮಹೇಶ್ ಬಾಬು ನಟನೆಯ ಮಹರ್ಷಿ ಇವರ ನಟನೆಯ ಕೊನೆಯ ಸಿನಿಮಾವಾಗಿದೆ. ಇದನ್ನೂ ಓದಿ: ‘ಪುಷ್ಪಾ 2’ ಟೀಮ್ ಸೇರಿಕೊಂಡ ನಟಿ ಸಾಯಿ ಪಲ್ಲವಿ: ರಶ್ಮಿಕಾ ಮಂದಣ್ಣ ಪಾತ್ರವೇನು?
1935ರ ಜುಲೈ 25 ರಂದು ಆಂಧ್ರಪ್ರದೇಶದಲ್ಲಿ ಜನಿಸಿರುವ ಸತ್ಯನಾರಾಯಣ, ಸಿನಿಮಾ ರಂಗದ ಮೇಲೆ ಸೆಳೆತ ಹಾಗೂ ರಂಗಭೂಮಿ ಮೇಲಿನ ಒಲವಿನಿಂದಾಗಿ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟವರು. ವಿವಿಧ ಪಾತ್ರಗಳೇ ಅವರನ್ನು ಮತ್ತಷ್ಟು ಅವಕಾಶ ಸಿಗುವಂತೆ ಮಾಡಿದವು. ನಾಗೇಶ್ವರಮ್ಮ ಅವರನ್ನು ಮದುವೆಯಾಗಿರುವ ಈ ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಸತ್ಯನಾರಾಯಣ ಅವರ ನಿಧನಕ್ಕೆ ತೆಲುಗು ಚಿತ್ರೋದ್ಯಮ ಕಂಬನಿ ಮಿಡಿದಿದೆ.
Live Tv
[brid partner=56869869 player=32851 video=960834 autoplay=true]
ಹಿಂದಿ ಕಿರುತೆರೆಯ ನಟ ಸಿದ್ಧಾಂತ್ ವೀರ ಸೂರ್ಯವಂಶಿ ಜಿಮ್ ಮಾಡುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಏಕಾಏಕಿ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ. ಆಸ್ಪತ್ರೆಗೆ ಬರುವ ದಾರಿಯಲ್ಲೇ ಸಿದ್ಧಾಂತ್ ಪ್ರಾಣ ಹೋಗಿದೆ ಎಂದು ಹೇಳಲಾಗುತ್ತಿದೆ. ಕೇವಲ 46 ವರ್ಷದ ಮಗನನ್ನು ಕಳೆದುಕೊಂಡ ಕುಟುಂಬ ಕಣ್ಣೀರಿಡುತ್ತಿದೆ.
ಹಿಂದಿ ಕಿರುತೆರೆ ಲೋಕದಲ್ಲಿ ಸಿದ್ಧಾಂತ್ ಸಾಕಷ್ಟು ಹೆಸರು ಮಾಡಿದ್ದಾರೆ. ಹಿಟ್ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇವ ಪತ್ನಿ ಅಲೇಸಿಯಾ ಕೂಡ ಮಾಡೆಲಿಂಗ್ ಕ್ಷೇತ್ರದಲ್ಲಿ ದೊಡ್ಡ ಹೆಸರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 2017ರಲ್ಲಿ ಅಲೇಸಿಯಾ ಮತ್ತು ಸಿದ್ದಾಂತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕಸೌಟಿ ಜಿಂದಗಿ ಕೇ, ಮಮತಾ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಸಿದ್ಧಾಂತ್ ನಟಿಸಿದ್ದಾರೆ. ಇದನ್ನೂ ಓದಿ:ಭಾರತಕ್ಕೆ ಬೈ ಹೇಳಿದ ಬೆನ್ನಲ್ಲೇ ಕ್ರಿಸ್‌ಮಸ್‌ಗೆ ಪ್ರಿಯಾಂಕಾ ಚೋಪ್ರಾ ತಯಾರಿ
ಸಿದ್ಧಾಂತ್ ಸಾವಿನ ವಿಷಯವನ್ನು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಹಂಚಿಕೊಂಡಿದ್ದು, ಮೃತರಿಗೆ ಶಾಂತಿ ಕೋರಿದ್ದಾರೆ. ಸಿದ್ಧಾಂತನನ್ನು ಕಳೆದುಕೊಂಡ ಕಲಾ ಪ್ರಪಂಚ ಬಡವಾಗಿದೆ ಎಂದು ಬರೆದುಕೊಂಡಿದ್ದಾರೆ. ಜೀಮ್ ನಲ್ಲಿ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿರುವುದು ಜಿಮ್ ಪ್ರಿಯರಿಗೆ ಕಳವಳವನ್ನುಂಟು ಮಾಡಿದೆ.
Live Tv
[brid partner=56869869 player=32851 video=960834 autoplay=true]
ರಂಗಭೂಮಿ ಕಲಾವಿದ ದಿವಂಗತ ಗುಬ್ಬಿವೀರಣ್ಣ ಪುತ್ರಿ ಹೇಮಲತಾ(೭೦) ವರ್ಷ ನಿಧನರಾಗಿದ್ದಾರೆ. ಲಘು ಹೃದಯಾಘಾತಕ್ಕೆ ಒಳಗಾಗಿದ್ದ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯಜಿಸಿದ್ದಾರೆ. ಇನ್ನೂ ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ದೇಹದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮರೆದಿದ್ದಾರೆ.
ಹೇಮಲತಾ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆಯಲ್ಲಿ, ಗುಬ್ಬೀ ವೀರಣ್ಣನವರ ಪುತ್ರ ಗುರುಸ್ವಾಮಿ ಅವರ ಪುತ್ರಿ ಜಯಭಾರತಿ ಅವರ ಮನೆಯಲ್ಲಿ ವಾಸವಾಗಿದ್ದರು. ಹೇಮಲತಾ ಅವರು ಹೆಸರಾಂತ ನೃತ್ಯಗಾರ್ತಿ ಕೂಡ ಆಗಿದ್ದರು. ನಾಲ್ಕು ದಿನಗಳ ಹಿಂದೆಯಷ್ಟೇ ಲಘು ಹೃದಯಾಘಾತಕ್ಕೆ ಒಳಗಾಗಿ ಬಾಶೆಟ್ಟಿಹಳ್ಳಿ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಹೇಮಲತಾ ಅವರು ರಾಜ್ ಕುಮಾರ್ ಜೊತೆ ಎಮ್ಮೆ ತಮ್ಮಣ್ಣ, ಕಲ್ಯಾಣ್ ಕುಮಾರ್ ಅವರೊಂದಿಗೆ ಕಲಾವತಿ ಸಿನಿಮಾ ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದು ಹಲವು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರಿಗೆ ಮೂವರು ಮಕ್ಕಳಿದ್ದು ಅಮೆರಿಕಾದಲ್ಲಿ ನೆಲಸಿದ್ದಾರೆ. ಸದ್ಯ ಮೃತದೇಹವನ್ನ ಬೆಂಗಳೂರಿನ ಹೆಸರಘಟ್ಟದ ರಸ್ತೆಯಲ್ಲಿರುವ ಖಾಸಗಿ ಮೆಡಿಕಲ್ ಕಾಲೇಜಿಗೆ ಮೃತದೇಹ ಹಸ್ತಾಂತರ ಮಾಡಲು ತೀರ್ಮಾನಿಸಿದ್ದು, ಸಿನಿರಂಗದ ಹಲವರು ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದಾರೆ.