Tag: Nidhan

  • ಸ್ಯಾಂಡಲ್ ವುಡ್ ಯುವ ನಟ ಧನುಷ್ ನಿಧನ

    ಸ್ಯಾಂಡಲ್ ವುಡ್ ಯುವ ನಟ ಧನುಷ್ ನಿಧನ

    ಸಂಪಿಗೆ ಹಳ್ಳಿ, ಕೊಟ್ಲಲ್ಲಪ್ಪೋ ಕೈ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಧನುಷ್ (Dhanush) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಚಿತ್ರೀಕರಣಕ್ಕಾಗಿ ಲಡಾಖ್ ಗೆ ತೆರಳಿದ್ದ ಅವರು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಆಗದೇ, ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರನ್ನು ಬೆಂಗಳೂರಿಗೆ ಕರೆತಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೇ ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.

    ಬಾಗಲಕೋಟೆ (Bagalkote) ಜಿಲ್ಲೆಯ ಕೋಡಿಹಾಳ ಗ್ರಾಮದವರಾಗಿದ್ದ ಶ್ರೀಮುತ್ತುರಾಜ್ (Muthuraj), ಸಿನಿಮಾಗಾಗಿ ತಮ್ಮ ಹೆಸರನ್ನು ಧನುಷ್ ಎಂದು ಬದಲಾಯಿಸಿಕೊಂಡಿದ್ದರು. ಪ್ಯಾರ್ ಕಾ ಗೋಲ್ಗುಂಬಜ, ಸ್ನೇಹಿತ, ಶಿವರಾಜ್ ಕುಮಾರ್ ನಟನೆಯ ಲೀಡರ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅವರು ನಟಿಸಿದ್ದರು. ಪ್ರಮುಖ ಪಾತ್ರಗಳಲ್ಲಷ್ಟೇ ಅಲ್ಲ, ಇತರ ಸ್ಟಾರ್ ನಟರ ಚಿತ್ರಗಳಲ್ಲೂ ಅವರು ನಟಿಸಿದ್ದಾರೆ. ಇದನ್ನೂ ಓದಿ: ವಿಜಯ್ ಕಿರಗಂದೂರು ಸೇರಿದಂತೆ ಮೂವರಿಗೆ ವಿಶೇಷ ಪ್ರಶಸ್ತಿ

    ಅಗಲಿದ ಧನುಷ್ ಅವರ ಮೃತದೇಹವನ್ನು ಅವರ ಊರಿಗೆ ಕೊಂಡೊಯ್ಯಲಾಗಿದ್ದು, ಇಂದು ಹುಟ್ಟೂರಿನಲ್ಲೇ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅಗಲಿದ ನಟನಿಗೆ ಸಿನಿಮಾ ತಂಡಗಳು ಹಾಗೂ ಅವರ ಸ್ನೇಹಿತರು ಸಂತಾಪ ವ್ಯಕ್ತ ಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಕೆಜಿಎಫ್’ ತಾತಾ ಖ್ಯಾತಿಯ ಕೃಷ್ಣ ಜಿ ರಾವ್ ನಿಧನ

    ‘ಕೆಜಿಎಫ್’ ತಾತಾ ಖ್ಯಾತಿಯ ಕೃಷ್ಣ ಜಿ ರಾವ್ ನಿಧನ

    ಶ್ ನಟನೆಯ ಕೆಜಿಎಫ್ ಸಿನಿಮಾದಲ್ಲಿ ಪುಟ್ಟ ಪಾತ್ರವಾದರೂ, ಜನರು ಗುರುತಿಸುವಂತಹ ನಟನೆ ಮಾಡಿದ್ದ ಕೃಷ್ಣ ಜಿ ರಾವ್ ನಿಧನರಾಗಿದ್ದಾರೆ. ಉಸಿರಾಟದ ತೊಂದರೆ ಕಾರಣದಿಂದಾಗಿ ಮೊನ್ನೆಯಷ್ಟೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

    ತೀವ್ರ ಉಸಿರಾಟದ ತೊಂದರೆಯಿಂದಾಗಿ ಐದು ದಿನಗಳ ಹಿಂದೆಯಷ್ಟೇ ಅವರನ್ನು ಬೆಂಗಳೂರಿನ ಸೀತಾ ಸರ್ಕಲ್ ಬಳಿ ಇರುವ ವಿನಾಯಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐದು ದಿನಗಳಿಂದ ವೈದ್ಯರು ಕೂಡ ಸತತ ಪ್ರಯತ್ನದಲ್ಲಿದ್ದರು. ಇಂದು (ಡಿ.7) ಚಿಕಿತ್ಸೆ ಫಲಿಸದೇ ಕೃಷ್ಣ ಅವರು ಬಾರದ ಲೋಕಕ್ಕೆ ಹೋಗಿದ್ದಾರೆ. ಇದನ್ನೂ ಓದಿ: ನಟಿ ಅಶು ರೆಡ್ಡಿ ಕಾಲು ಹಿಡಿದ ರಾಮ್ ಗೋಪಾಲ್ ವರ್ಮಾ: ನೆಟ್ಟಿಗರು ಶಾಕ್

    ಕೃಷ್ಣ ಜಿ ರಾವ್ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರೂ, ಕೆಜಿಎಫ್ ತಾತಾ ಎಂದೇ ಫೇಮಸ್ ಆಗಿದ್ದರು. ಶಂಕರ್ ನಾಗ್ ಕಾಲದಿಂದಲೂ ಇವರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವಾರು ಚಿತ್ರಗಳಲ್ಲಿ ಇವರು ನಟಿಸಿದ್ದರೂ, ಜನರು ಗುರುತಿಸುವಂತೆ ಮಾಡಿದ್ದು ಕೆಜಿಎಫ್ ಎನ್ನುವುದು ವಿಶೇಷ. ಈ ಸಿನಿಮಾದ ನಂತರ ಅವರು ಅನೇಕ ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಇವರ ಮುಖ್ಯ ಭೂಮಿಕೆಯ ಸಿನಿಮಾವೊಂದು ಬಿಡುಗಡೆಗೂ ಸಿದ್ಧವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಒಂದೂವರೆ ತಿಂಗಳ ಅಂತರದಲ್ಲಿ ತಂದೆ-ತಾಯಿ ಕಳೆದುಕೊಂಡ ಸೂಪರ್ ಸ್ಟಾರ್

    ಒಂದೂವರೆ ತಿಂಗಳ ಅಂತರದಲ್ಲಿ ತಂದೆ-ತಾಯಿ ಕಳೆದುಕೊಂಡ ಸೂಪರ್ ಸ್ಟಾರ್

    ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಕೇವಲ ಒಂದೂವರೆ ತಿಂಗಳ ಅಂತರದಲ್ಲಿ ತಂದೆ ಮತ್ತು ತಾಯಿಯನ್ನು ಕಳೆದುಕೊಂಡಿದ್ದಾರೆ. ಒಂದೂವರೆ ತಿಂಗಳ ಹಿಂದೆಯಷ್ಟೇ ತಾಯಿ ಇಂದಿರಾ ದೇವಿಯನ್ನು ಮಹೇಶ್ ಬಾಬು ಕಳೆದುಕೊಂಡಿದ್ದರು. ಆ ದುಃಖದಲ್ಲೇ ಇನ್ನೂ ಇರುವಾಗ ಇದೀಗ ತಂದೆ ಕೃಷ್ಣ ಅವರನ್ನೂ ಕಳೆದುಕೊಂಡಿದ್ದಾರೆ. ನಿಜಕ್ಕೂ ಇದು ಆ ಕುಟುಂಬಕ್ಕೆ ಅರಗಿಸಿಕೊಳ್ಳಲಾಗದ ಸಂಗತಿ.

    ಕೃಷ್ಣ ಅವರಿಗೆ ಇಂದಿರಾ ದೇವಿ ಎರಡನೇ ಹೆಂಡತಿ. ಈ ದಂಪತಿಯ ಪುತ್ರ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು. ತಂದೆಯ ನೆರಳಿನಲ್ಲೇ ಬೆಳೆದು ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ ಮಹೇಶ್ ಬಾಬು. ತಂದೆ ತಾಯಿಯ ನೆಚ್ಚಿನ ಮಗನಾಗಿದ್ದ ಮಹೇಶ್ ಬಾಬು, ಅಪ್ಪನನ್ನು ನೆನಪಿಸುವಂತಹ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಪ್ಪ ಅಮ್ಮನನ್ನು ಉಳಿಸಿಕೊಳ್ಳಲು ಸಾಕಷ್ಟು ಕಷ್ಟ ಪಟ್ಟರು ಆದರೆ, ವಿಧಿಯಾಟ ಬೇರೆಯೇ ಆಗಿತ್ತು. ಹಾಗಾಗಿ ಇಬ್ಬರನ್ನೂ ಒಂದೂವರೆ ತಿಂಗಳ ಅಂತರದಲ್ಲಿ ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಮಗನ ಮುದ್ದಾದ ಫೋಟೋ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ

    ಮಹೇಶ್ ಬಾಬು ಕುಟುಂಬದಲ್ಲಿ ಈ ವರ್ಷ ಸೂತಕದ ವರ್ಷವೆಂದೇ ಹೇಳಬಹುದು. ಜನವರಿಯಲ್ಲಿ ಕೃಷ್ಣ ಅವರ ಹಿರಿಯ ಮಗ ರಮೇಶ್ ಬಾಬು ನಿಧನಹೊಂದಿದ್ದರೆ, ಎರಡು ತಿಂಗಳ ಹಿಂದೆಯಷ್ಟೇ ಕೃಷ್ಣ ಅವರ ಎರಡನೇ ಪತ್ನಿ ಇಂದಿರಾ ದೇವಿ ಇಹಲೋಕ ತ್ಯಜಿಸಿದ್ದಾರೆ. ಮೊದಲನೇ ಹೆಂಡತಿ  ವಿಜಯ ನಿರ್ಮಲಾ ನಾಲ್ಕು ವರ್ಷಗಳ ಹಿಂದೆ ಬಾರದ ಲೋಕಕ್ಕೆ ಹೋಗಿದ್ದಾರೆ. ಇದೀಗ ಕೃಷ್ಣ ಕೂಡ ಕಣ್ಮರೆಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾಂಡ್ ಆಫ್ ತೆಲುಗು ಸಿನಿಮಾ ಸೂಪರ್ ಸ್ಟಾರ್ ಕೃಷ್ಣ ಜೀವನ ಚರಿತ್ರೆ

    ಬಾಂಡ್ ಆಫ್ ತೆಲುಗು ಸಿನಿಮಾ ಸೂಪರ್ ಸ್ಟಾರ್ ಕೃಷ್ಣ ಜೀವನ ಚರಿತ್ರೆ

    ತೆಲುಗು ಸಿನಿಮಾ ರಂಗದ ‘ಬಾಂಡ್ ಆಫ್ ತೆಲುಗು ಸಿನಿಮಾ’ ಎಂದೇ ಖ್ಯಾತರಾಗಿದ್ದ ಸೂಪರ್ ಸ್ಟಾರ್ ಕೃಷ್ಣ ನಿಧನರಾಗಿದ್ದಾರೆ. ತೆಲುಗಿನ ಪ್ರಿನ್ಸಿ ಮಹೇಶ್ ಬಾಬು ಅವರು ತಂದೆಯೂ ಆಗಿರುವ ಇವರು, ತೆಲುಗಿನಲ್ಲಿ ಸಾಕಷ್ಟು ಬಾಂಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 70, 80ರ ದಶಕದಲ್ಲಿ ಸ್ಟಾರ್ ನಟರಾಗಿ ಮಿಂಚಿದ್ದ ಕೃಷ್ಣ ಅವರ ಪೂರ್ಣ ಹೆಸರು ಘಟ್ಟಮನೇನಿ ಶಿವರಾಮಕೃಷ್ಣಮೂರ್ತಿ. ಹುಟ್ಟಿದ್ದ 1942 ಮೇ 31 ರಂದು. ತೆನಾಲಿ ಬುರ್ರಿಪಾಳ್ಯದಲ್ಲಿ ಇವರು ಹುಟ್ಟಿದ್ದು.

    LIVE Krishna Dies, Telugu Superstar Mahesh Babu Father Passes Away at 79

    1964ರಲ್ಲಿ ತೆರೆಕಂಡ ತೇನ ಮನಸಲು ಸಿನಿಮಾ ಮೂಲಕ ಸಾಕಷ್ಟು ಹೆಸರು ಮಾಡಿದ್ದ ಇವರು ಬಿಎಸ್ಸಿ ಪದವಿಧರರಾಗಿದ್ದರೂ, ಬಣ್ಣದ ಮೇಲಿನ ಪ್ರೀತಿಯಿಂದಾಗಿ ನಾಟಕ ಪ್ರಪಂಚಕ್ಕೆ ಕಾಲಿಟ್ಟರು. ಕೇವಲ ಸಿನಿಮಾಗಳಲ್ಲಿ ನಟಿಸುವುದು ಮಾತ್ರವಲ್ಲ 16 ಚಿತ್ರಗಳನ್ನು ನಿರ್ದೇಶನ ಕೂಡ ಮಾಡಿದ್ದಾರೆ. 350ಕ್ಕೂ ಅಧಿಕ ಸಿನಿಮಾಗಳಲ್ಲಿ ನಟರಾಗಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಗೂಡಚಾರಿ 116, ಮೋಸಗಾಡು, ಪಂದಂಡಿ ಕಾಪುರಂ, ಮಂಚಿ ಕುಟುಂಬಂ ಸೇರಿದಂತೆ ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ಮಗನ ಮುದ್ದಾದ ಫೋಟೋ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ

    ಸಿನಿಮಾ, ನಾಟಕಗಳಲ್ಲಿ ಮಾತ್ರವಲ್ಲ, ರಾಜಕಾರಣದಲ್ಲೂ ತಮ್ಮದೇ ಆದ ಛಾಪು ಮೂಡಿಸಿದವರು ಕೃಷ್ಣ. ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡು ಲೋಕಸಭಾ ಸದಸ್ಯರಾಗಿಯೂ ಜನಪರ ಕೆಲಸಗಳನ್ನೂ ಮಾಡಿದ್ದಾರೆ. ಇವರ ಸೇವೆಗೆ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ. ಇತ್ತೀಚಿನ ದಿನಗಳಲ್ಲಿ ಸಿನಿಮಾ ರಂಗದಿಂದ ದೂರವಿದ್ದರೂ, ಇವರ ಪುತ್ರ ಮಹೇಶ್ ಬಾಬು ತೆಲುಗು ಸಿನಿಮಾ ರಂಗದ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.

    साउथ स्टार महेश बाबू के पिता को आया हार्ट अटैक, 2 महीने पहले हुआ था मां का निधन - telugu superstar Mahesh babu father krishna suffers cardiac arrest puts on ventilator indira

    ಮಹೇಶ್ ಬಾಬು ಕುಟುಂಬದಲ್ಲಿ ಈ ವರ್ಷ ಸೂತಕದ ವರ್ಷವೆಂದೇ ಹೇಳಬಹುದು. ಜನವರಿಯಲ್ಲಿ ಕೃಷ್ಣ ಅವರ ಹಿರಿಯ ಮಗ ರಮೇಶ್ ಬಾಬು ನಿಧನಹೊಂದಿದ್ದರೆ, ಎರಡು ತಿಂಗಳ ಹಿಂದೆಯಷ್ಟೇ ಕೃಷ್ಣ ಅವರ ಎರಡನೇ ಪತ್ನಿ ಇಂದಿರಾ ದೇವಿ ಇಹಲೋಕ ತ್ಯಜಿಸಿದ್ದಾರೆ. ಮೊದಲನೇ ಹೆಂಡತಿ  ವಿಜಯ ನಿರ್ಮಲಾ ನಾಲ್ಕು ವರ್ಷಗಳ ಹಿಂದೆ ಬಾರದ ಲೋಕಕ್ಕೆ ಹೋಗಿದ್ದಾರೆ. ಇದೀಗ ಕೃಷ್ಣ ಕೂಡ ಕಣ್ಮರೆಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸ್ಟಾರ್ ನಟ ಮಹೇಶ್ ಬಾಬು ತಾಯಿ ಇಂದಿರಾ ದೇವಿ ನಿಧನ

    ಸ್ಟಾರ್ ನಟ ಮಹೇಶ್ ಬಾಬು ತಾಯಿ ಇಂದಿರಾ ದೇವಿ ನಿಧನ

    ಟಾಲಿವುಡ್ (Tollywood) ನ ಖ್ಯಾತ ಸ್ಟಾರ್ ನಟ ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ (Indira Devi) ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಬೆಳಗ್ಗೆ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಇಂದಿರಾ ಅವರನ್ನು ಹೈದರಾಬಾದ್ ನ ಎಐಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಅನಾರೋಗ್ಯದ ಕಾರಣಕ್ಕಾಗಿ ವೆಂಟಿಲೇಟರ್ ನಲ್ಲಿ ಇರಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಬೆಳಗ್ಗೆ ನಾಲ್ಕು ಗಂಟೆ ಹೊತ್ತಿಗೆ ಚಿಕಿತ್ಸೆ ಫಲಕಾರಿ ಆಗದೇ ಇಹಲೋಕ (Passed Away) ತ್ಯಜಿಸಿದ್ದಾರೆ.

    ಇಂದಿರಾ ಅವರ ಅಂತಿಮ ದರ್ಶನಕ್ಕಾಗಿ ಪದ್ಮಾಲಯ ಸ್ಟುಡಿಯೋಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಂಜೆವರೆಗೂ ಅಭಿಮಾನಿಗಳು ಅಂತಿಮ ದರ್ಶನ ಮಾಡಬಹುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಸೂಪರ್ ಸ್ಟಾರ್ ಕೃಷ್ಣ (Krishna) ಅವರ ಪತ್ನಿ ಆಗಿರುವ ಇಂದಿರಾ, ಪತಿ ಮತ್ತು ಮಕ್ಕಳು ಸಿನಿಮಾ ರಂಗದಲ್ಲಿ ಬೆಳೆಯಲು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಅವರಿಗೆ ಬೆನ್ನೆಲುಬಾಗಿ ನಿಂತು, ಪ್ರೋತ್ಸಾಹಿಸಿದ್ದಾರೆ. ಹಾಗಾಗಿ ಪತಿ ಮತ್ತು ಮಕ್ಕಳ ಅಭಿಮಾನಿಗಳು ಕೂಡ ಇಂದಿರಾ ಅವರನ್ನು ಅಷ್ಟೇ ಗೌರವದಿಂದ ಕಾಣುತ್ತಿದ್ದರು. ಇದನ್ನೂ ಓದಿ:ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಸಿನಿಮಾದ ಟೈಟಲ್ ಲಾಂಚ್ ಗೆ ಮುಹೂರ್ತ ಫಿಕ್ಸ್

    ಇಂದಿರಾ ದೇವಿ ಅವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ. ಈಗಾಗಲೇ ಮಹೇಶ್ ಬಾಬು (Mahesh Babu) ಅವರ ನಿವಾಸದತ್ತ ಸಿನಿಮಾ ರಂಗದ ಸಾಕಷ್ಟು ಗಣ್ಯರು ಆಗಮಿಸಿದ್ದು, ಸಂತಾಪ ಸೂಚಿಸುತ್ತಿದ್ದಾರೆ. ಇಂದಿರಾ ಅವರ ಅಂತಿಮ ಸಂಸ್ಕಾರ ಇಂದು ಸಂಜೆ ನೆರವೇರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಖ್ಯಾತ ಹಾಸ್ಯ ನಟ ರಾಜು ಶ್ರೀವಾಸ್ತವ ನಿಧನ: ಅಭಿಮಾನಿಗಳ ಕಂಬನಿ

    ಖ್ಯಾತ ಹಾಸ್ಯ ನಟ ರಾಜು ಶ್ರೀವಾಸ್ತವ ನಿಧನ: ಅಭಿಮಾನಿಗಳ ಕಂಬನಿ

    ಬಾಲಿವುಡ್ ಖ್ಯಾತ ಹಾಸ್ಯ ನಟ ರಾಜು ಶ್ರೀವಾಸ್ತವ (Raju Srivastav) ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣದಿಂದಾಗಿ ದೆಹಲಿಯ (Delhi) ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಕಳೆದ ಒಂದು ತಿಂಗಳಿಂದಲೂ ಅವರು ಕೋಮಾದಲ್ಲಿ ಇದ್ದರು. ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ (death) ತ್ಯಜಿಸಿದ್ದಾರೆ. ಆಗಸ್ಟ್ 10ರಂದು ಅವರನ್ನು ದೆಹಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಜಿಮ್ ನಲ್ಲಿ (Gym) ವ್ಯಾಯಾಮ ಮಾಡುತ್ತಿರುವಾಗ ರಾಜು ಕೆಳಗೆ ಬಿದ್ದು ಪ್ರಜ್ಞೆ ತಪ್ಪಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಈವರೆಗೂ ಅವರಿಗೆ ಪ್ರಜ್ಞೆ ಮರಳಿ ಬರಲೇ ಇಲ್ಲ. ವೈದ್ಯರು ತಮ್ಮೆಲ್ಲ ಪ್ರಯತ್ನಗಳನ್ನು ಮಾಡಿದರೂ, ರಾಜು ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ:ಯೂಟ್ಯೂಬ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಉಪ್ಪಿ- ಕಿಚ್ಚ ನಟನೆಯ ‘ಕಬ್ಜ’ ಟೀಸರ್

    ರಾಜು ಹಲವಾರು ವರ್ಷಗಳಿಂದ ಬಾಲಿವುಡ್ ನಲ್ಲಿ ನಟರಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ, ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೇಂಜ್’ ಹಾಸ್ಯ ಕಾರ್ಯಕ್ರಮದ ಮೂಲಕ ಅಪಾರ ಅಭಿಮಾನಿಗಳನ್ನು ಇವರು ಹೊಂದಿದ್ದರು. ಅಲ್ಲದೇ, ಬಾಜಿಗರ್, ಬಾಂಬೆ ಟು ಗೋವಾ, ಮೈನೆ ಪ್ಯಾರ್ ಕಿಯಾ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯ ನಟರಾಗಿಯೂ ಕಾಣಿಸಿಕೊಂಡಿದ್ದಾರೆ. ರಾಜು ನಿಧನಕ್ಕೆ ಬಾಲಿವುಡ್ (Bollywood) ಕಂಬನಿ ಮಿಡಿದಿದೆ.

    Live Tv
    [brid partner=56869869 player=32851 video=960834 autoplay=true]