Tag: Nidas T20 Series

  • ಸೋಲುವ ಭೀತಿಯಲ್ಲಿ ಹೈಡ್ರಾಮಾ ಸೃಷ್ಟಿಸಿದ ಬಾಂಗ್ಲಾ ಆಟಗಾರರು! ವಿಡಿಯೋ

    ಸೋಲುವ ಭೀತಿಯಲ್ಲಿ ಹೈಡ್ರಾಮಾ ಸೃಷ್ಟಿಸಿದ ಬಾಂಗ್ಲಾ ಆಟಗಾರರು! ವಿಡಿಯೋ

    ಕೊಲಂಬೊ: ನಿದಾಸ್ ತ್ರಿಕೋನ ಟಿ20 ಸರಣಿಯ ಸೆಮಿಫೈನಲ್ ಎಂದೇ ಪರಿಗಣಿಸಲಾಗಿದ್ದ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ ಎರಡು ವಿಕೆಟ್ ಜಯ ಪಡೆದು ಬಾಂಗ್ಲಾದೇಶ ಫೈನಲ್ ಪ್ರವೇಶಿಸಿದೆ. ಆದರೆ ಈ ಪಂದ್ಯದಲ್ಲಿ ಅಂಪೈರ್ ಹಾಗೂ ಆಟಗಾರ ನಡುವೆ ಭಾರೀ ವಾಗ್ವಾದ ನಡೆದಿದೆ.

    ಪಂದ್ಯದ ಅಂತಿಮ ಓವರ್ ವೇಳೆ ಬಾಂಗ್ಲಾದ ಮಹಮದುಲ್ಲ ಮತ್ತು ಮುಸ್ತಫಿಜೂರ್ ರೆಹ್ಮಾನ್ ಜೋಡಿ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ಲಂಕಾ ವೇಗಿ ಉದಾನ ಸತತ 2 ಬೌನ್ಸರ್ ಹಾಕಿದರು. 2ನೇ ಎಸೆತದಲ್ಲಿ ಮುಸ್ತಫಿಜೂರ್ ರನೌಟಾದರು. ಒಂದು ಓವರ್ ನಲ್ಲಿ ಒಂದು ಬೌನ್ಸರ್ ಗೆ ಮಾತ್ರ ಅಕಾಶವಿದ್ದರೂ 2ನೇ ಬೌನ್ಸರನ್ನು ಅಂಪೈರ್ ನೋಬಾಲ್ ಎಂದು ಪರಿಗಣಿಸಲಿಲ್ಲ. ಇದರಿಂದ ಸಿಟ್ಟಾದ ಬಾಂಗ್ಲಾ ಆಟಗಾರು ಆನ್ ಫೀಲ್ಡ್ ಅಂಪೈರ್ ಗಳ ವಿರುದ್ಧ ಅಸಮಾಧಾನ ವ್ಯಕಪಡಿಸಿ ವಾಗ್ವಾದ ನಡೆಸಿದ್ದರು. ಅಲ್ಲದೇ ಬಾಂಗ್ಲಾ ತಂಡದ ನಾಯಕ ಶಕೀಬ್ ಬ್ಯಾಟ್ಸ್ ಮನ್ ಗಳನ್ನು ಮೈದಾನದಿಂದ ಹೊರಕ್ಕೆ ಬರಲು ಸೂಚಿಸಿದ್ದರು. ಅಂಪೈರ್ ಗಳ ಮಧ್ಯಪ್ರವೇಶದ ಬಳಿಕ ಕೊನೆಯ ಓವರ್ ನ ನಾಲ್ಕು ಎಸೆತ ಉಳಿದಿತ್ತು. ಈ ವೇಳೆ ಕ್ರಮವಾಗಿ 4, 2, 6 ರನ್ ಸಿಡಿಸುವ ಮೂಲಕ ಮಹಮದುಲ್ಲ ಬಾಂಗ್ಲಾ ತಂಡದ ಗೆಲುವಿಗೆ ಕಾರಣರಾದರು.

    https://twitter.com/Nishant96336349/status/974698788966211584

    ತನಿಖೆ: ಶ್ರೀಲಂಕಾ 70 ವರ್ಷಗಳ ಸ್ವಾತಂತ್ರ್ಯ ದಿನಾಚರಣೆಯ ನೆನಪಿನ ಹಿನ್ನೆಲೆ ತ್ರಿಕೋನ ಟಿ20 ಸರಣಿ ಆಯೋಜಿಸಿದೆ. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದ ನಂತರ ವಿಸಿಟರ್ಸ್ ಡ್ರೆಸ್ಸಿಂಗ್ ರೂಮ್ ಕಿಟಕಿ ಗಾಜು ಒಡೆದ ಘಟನೆಯೂ ನಡೆದಿದೆ. ಘಟನೆ ಕುರಿತು ಕ್ರೀಡಾಂಗಣ ಸಿಬ್ಬಂದಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಬಳಿಕ ಘಟನೆ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    https://twitter.com/beingnik07/status/974698903143555072

    ಘಟನೆಗೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ಪಂದ್ಯದ ರೆಫರಿ ಕ್ರಿಸ್ ಬ್ರಾಡ್ ಹ್ಯಾಸ್ ಅಧಿಕಾರಿಗಳಿಗೆ ಕೊಠಡಿಯ ಸಿಸಿಟಿವಿ ದೃಶ್ಯಗಳನ್ನು ನೀಡಲು ಹೇಳಿದ್ದಾರೆ. ಐಸಿಸಿ ಮ್ಯಾಚ್ ರೆಫರಿ ಘಟನೆ ಕುರಿತು ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

    ಪಂದ್ಯದ ಕೊನೆಯ ಓವರ್ ನಲ್ಲಿ ನಡೆದ ಆಟಗಾರರ ಹಾಗೂ ಅಂಪೈರ್ ಗಳ ನಡುವಿನ ವಾಗ್ವಾದ ಕುರಿತು ಕೂಡ ಅಂಪೈರ್ ಗಳು ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ಆಟಗಾರರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಭಾನುವಾರ ಭಾರತ ಮತ್ತು ಬಾಂಗ್ಲಾ ನಡುವೆ ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ.