Tag: Nicholas Pooran

  • 29ನೇ ವಯಸ್ಸಿಗೆ ವಿಂಡೀಸ್‌ನ ದೈತ್ಯ ಬ್ಯಾಟರ್‌ ನಿಕೋಲಸ್‌ ಪೂರನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ

    29ನೇ ವಯಸ್ಸಿಗೆ ವಿಂಡೀಸ್‌ನ ದೈತ್ಯ ಬ್ಯಾಟರ್‌ ನಿಕೋಲಸ್‌ ಪೂರನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ

    ಕಿಂಗ್‌ಸ್ಟನ್‌: ವೆಸ್ಟ್‌ ಇಂಡೀಸ್‌ ತಂಡದ ದೈತ್ಯ ಬ್ಯಾಟರ್‌ ಎಂದೇ ಗುರುತಿಸಿಕೊಂಡಿದ್ದ ನಿಕೋಲಸ್‌ ಪೂರನ್‌ (Nicholas Pooran) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ (International Cricket) ದಿಢೀರ್‌ ನಿವೃತ್ತಿ ಘೋಷಿಸಿದ್ದಾರೆ. 29ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿರುವುದು ಅಚ್ಚರಿ ತರಿಸಿದೆ.

     

    View this post on Instagram

     

    A post shared by Nicholas Pooran (@nicholaspooran)

    ಇತ್ತೀಚೆಗಷ್ಟೇ ವಿಂಡೀಸ್‌ನ (West Indies) ಕ್ರಿಕೆಟ್ ರಾಜಕೀಯದ ಬಗ್ಗೆ ಕೋಲ್ಕತಾ ನೈಟ್ ರೈಡರ್ಸ್ ಆಟಗಾರ ಆಂಡ್ರೆ ರಸ್ಸೆಲ್‌ ಪರೋಕ್ಷವಾಗಿ ಬೇಸರ ಹೊರಹಾಕಿದ್ದರು. ಈ ಬೆನ್ನಲ್ಲೇ ನಿಕೋಲಸ್‌ ಪೂರನ್‌ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ‘ಎಣ್ಣೆ’ ಪ್ರಚಾರಕ್ಕಾಗಿ ಆರ್‌ಸಿಬಿ ಖರೀದಿಸಿದೆ: RCB ಬಗ್ಗೆ ವಿಜಯ್‌ ಮಲ್ಯ ಹೇಳಿದ್ದೇನು?

    ಐಪಿಎಲ್‌ನಲ್ಲಿ ಈ ಹಿಂದೆ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ (Mumbai Indians) ತಂಡವನ್ನು ಪ್ರತಿನಿಧಿಸಿದ್ದ ಪೂರನ್‌ ಪ್ರಸ್ತುತ ಲಕ್ನೋ ಸೂಪರ್‌ ಜೈಂಟ್ಸ್‌ನಲ್ಲಿ ದುಬಾರಿ ಬೆಲೆಯ ಆಟಗಾರನಾಗಿದ್ದಾರೆ. ದುಬೈ ಕ್ರಿಕೆಟ್ ಲೀಗ್‌ನಲ್ಲೂ ಸಕ್ರಿಯವಾಗಿರುವ ಪೂರನ್‌ ಎಂಐ ಎಮಿರೇಟ್ಸ್ ಆಟಗಾರರಾಗಿದ್ದಾರೆ. ಮಾತ್ರವಲ್ಲದೇ ನಾರ್ಥನ್ ಸೂಪರ್ ಚಾರ್ಜರ್ಸ್, ಟ್ರಿಂಬಾಗೋ ನೈಟ್ ರೈಡರ್ಸ್, ಟ್ರನಿಡಾಡ್ ಆ್ಯಂಡ್ ಟೊಬಾಗೊ ಸೇರಿದಂತೆ ಹತ್ತಾರು ತಂಡಗಳನ್ನ ಪ್ರತಿನಿಧಿಸಿದ್ದಾರೆ. ಸದ್ಯ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗಷ್ಟೇ ನಿವೃತ್ತಿ ನೀಡಿದ್ದು, ಐಪಿಎಲ್‌ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದನ್ನೂ ಓದಿ: ಅದ್ಧೂರಿ ನಿಶ್ಚಿತಾರ್ಥ – ರಿಂಕುಗೆ ರಿಂಗು ಹಾಕಿದ ಸಂಸದೆ ಪ್ರಿಯಾ ಸರೋಜ್

    29 ವರ್ಷದ ನಿಕೋಲಸ್‌ ಪೂರನ್‌ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಪರವಾಗಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ಆಗಿ ಅವರು 106 ಪಂದ್ಯಗಳನ್ನ ವಿಂಡೀಸ್‌ ಪರ ಆಡಿದ್ದಾರೆ. 2,275 ರನ್‌ಗಳೊಂದಿಗೆ ತಂಡಕ್ಕೆ ಅತಿ ಹೆಚ್ಚು ಟಿ20 ರನ್ ಗಳಿಸಿದ ಆಟಗಾರ ಎಂಬ ದಾಖಲೆ ಸಹ ಬರೆದಿದ್ದಾರೆ. ಅವರು 61 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಿಂದ 39.66 ಸರಾಸರಿಯಲ್ಲಿ 1,983 ರನ್ ಸಹ ಗಳಿಸಿದ್ದಾರೆ. ಇದನ್ನೂ ಓದಿ: ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ ಆರ್‌ಸಿಬಿ ಆಟಗಾರರನ್ನು ಸನ್ಮಾನಿಸಿದ ಸಿಎಂ, ಡಿಸಿಎಂ

    ಕೊನೆಯದ್ದಾಗಿ ನಿಕೋಲಸ್‌ ಪೂರನ್‌ 2024ರ ಟಿ20 ವಿಶ್ವಕಪ್‌ ವೇಳೆ ವಿಂಡೀಸ್‌ ತಂಡವನ್ನು ಪ್ರತಿನಿಧಿಸಿದ್ದರು. ಅದಕ್ಕೂ ಮುನ್ನ ಟೀಂ ಇಂಡಿಯಾ ವಿರುದ್ಧವೇ ನಡೆದಿದ್ದ ಐದು ಪಂದ್ಯಗಳ ಟಿ20 ಸರಣಿಯನ್ನ 3-2 ಅಂತರದಲ್ಲಿ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. 2025ರ ಐಪಿಎಲ್‌ನಲ್ಲೂ ನಿಕೋಲಸ್‌ ಪೂರನ್‌ ಭರ್ಜರಿ ಬ್ಯಾಟಿಂಗ್‌ ನಡೆಸಿ ಪ್ರೇಕ್ಷಕರಿಗೆ ರಸದೌತಣ ನೀಡಿದ್ದರು.

    ನಿವೃತ್ತಿ ಘೋಷಣೆ ಬಳಿಕ ಪೂರನ್‌ ಹೇಳಿದ್ದೇನು?
    ಇನ್ನೂ ತಮ್ಮ ನಿರ್ಧಾರದ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಪೂರನ್, ಇದು ಬಹಳ ಕಷ್ಟದ ನಿರ್ಧಾರ. ಆದರೆ ತುಂಬಾ ಆಲೋಚನೆ ಮತ್ತು ಚಿಂತನೆಯ ನಂತರ, ನಾನು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. ನಾವು ಬಹಳ ಪ್ರೀತಿಸುವ ಈ ಆಟವು ನನಗೆ ತುಂಬಾ ಸಂತೋಷ, ಮರೆಯಲಾಗದ ನೆನಪುಗಳನ್ನು ನೀಡಿದೆ. ಆ ಮೆರೂನ್ ಜೆರ್ಸಿಯನ್ನು ಧರಿಸಿ, ರಾಷ್ಟ್ರಗೀತೆಗೆ ನಿಂತು, ನಾನು ಮೈದಾನಕ್ಕೆ ಕಾಲಿಟ್ಟ ಪ್ರತಿ ಬಾರಿಯೂ ನನ್ನೆಲ್ಲವನ್ನೂ ನೀಡಿದ್ದೇನೆ. ನನ್ನ ಪಾಲಿಗೆ ಈ ಕ್ಷಣಗಳೇನು ಎದು ಪದಗಳಲ್ಲಿ ವಿವರಿಸುವುದು ಕಷ್ಟ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

  • IPL 2025 | ಪಂದ್ಯ ಸೋತು ಹೃದಯ ಗೆದ್ದ ಪಂತ್‌

    IPL 2025 | ಪಂದ್ಯ ಸೋತು ಹೃದಯ ಗೆದ್ದ ಪಂತ್‌

    ಲಕ್ನೋ: ಕೊನೆಯವರೆಗೂ ಜಿದ್ದಾಜಿದ್ದಿಯಿಂದ ಕೂಡಿದ್ದ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಲಕ್ನೋ ತಂಡ ಸೋತರೂ ನಾಯಕ ಬಾರಿಸಿದ ರಿಷಭ್‌ ಪಂತ್‌ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

    17ನೇ ಓವರ್‌ನಲ್ಲಿ ಬೌಲಿಂಗ್‌ಗೆ ಬಂದ ದಿಗ್ವೇಶ್‌ ರಾಠಿ ಮೊದಲ ಎಸೆತದಲ್ಲೇ ಜಿತೇಶ್‌ ಶರ್ಮಾರನ್ನ ಔಟ್‌ ಮಾಡಿದ್ದರು. ಆದ್ರೆ ಅದು ನೋಬಾಲ್‌ ಆಗಿತ್ತು. ಈ ಬಗ್ಗೆ ರಿಷಭ್‌ ಪಂತ್‌ ಟಿವಿ ಅಂಪೈರ್‌ಗೂ ಮೊದಲೇ ಸಿಗ್ನಲ್‌ ಸೂಚಿಸುತ್ತಿದ್ದರು. ಆ ಎಸೆತದಲ್ಲಿ ಟಿವಿ ಅಂಪೈರ್‌ ತೀರ್ಪು ಪರಿಶೀಲಿಸುವುದಕ್ಕೂ ಮುನ್ನ‌ ನೋಬಾಲ್‌ ಸಿಗ್ನಲ್‌ ಕೊಡಲಾಯಿತು. ಇನ್ನೂ ಅದೇ ಓವರ್‌ನ ಕೊನೇ ಎಸೆತದಲ್ಲಿ ದಿಗ್ವೇಶ್‌ ರಾಠಿ ಸ್ಫೋಟಕವಾಗಿ ಆಡುತ್ತಿದ್ದ ಜಿತೇಶ್‌ ಶರ್ಮಾರನ್ನ ಮಂಕಡ್‌ ರನೌಟ್‌ ಮಾಡಲು ಯತ್ನಿಸಿದರು. ಈ ಬಗ್ಗೆ ಮೂರನೇ ಅಂಪೈರ್‌ಗೂ ಅಪೀಲ್‌ ಮಾಡಿದ್ದರು. ಇದು ಆರ್‌ಸಿಬಿ ಫಲಿತಾಂಶದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿತ್ತು. ಆದ್ರೆ ತೀರ್ಪು ಹೊರ ಬರುವಷ್ಟರಲ್ಲಿ ಪಂತ್‌ ರಿವೀವ್ಯೂ ಹಿಂಪಡೆದರು. ಇದರಿಂದ ಭಾವುಕರಾದ ಜಿತೇಶ್‌ ಶರ್ಮಾ ಮೈದಾನದಲ್ಲೇ ಒಂದು ಕ್ಷಣ ಪಂತ್‌ರನ್ನ ಅಪ್ಪಿಕೊಂಡರು.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಲಕ್ನೋ ತಂಡ ಪಂತ್‌ ಅಮೋಘ ಶತಕದ ನೆರವಿನಿಂದ 3 ವಿಕೆಟ್‌ ನಷ್ಟಕ್ಕೆ 227 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಆರ್‌ಸಿಬಿ 18.4 ಓವರ್‌ಗಳಲ್ಲಿ ಕೇವಲ 4 ವಿಕೆಟ್‌ ನಷ್ಟಕ್ಕೆ 230 ರನ್‌ ಗಳಿಸಿ ಗೆದ್ದು ಬೀಗಿದೆ. ಈ ಮೂಲಕ ಏಕನಾ ಕ್ರೀಡಾಂಗಣದಲ್ಲಿ ಅತಿದೊಡ್ಡ ಮೊತ್ತ ಚೇಸಿಂಗ್‌ ಮಾಡಿದ ದಾಖಲೆಯನ್ನೂ ಬರೆದಿದೆ.

    ಮಯಾಂಕ್‌ ಜಿತೇಶ್‌ ಶತಕದ ಜೊತೆಯಾಟ:
    ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಆರ್‌ಸಿಬಿಗೆ ಜಿತೇಶ್‌ ಶರ್ಮಾ – ಮಯಾಂಕ್‌ ಅಗರ್ವಾಲ್‌ ಬ್ಯಾಟಿಂಗ್‌ನಲ್ಲಿ ಬಲ ತುಂಬಿದರು. ಮುರಿಯದ 5ನೇ ವಿಕೆಟಿಗೆ ಈ ಜೋಡಿ 45 ಎಸೆತಗಳಲ್ಲಿ ಸ್ಫೋಟಕ 107 ರನ್‌ ಬಾರಿಸಿತು. ಇದು ತಂಡದ ಗೆಲುವನ್ನು ಸುಲಭವಾಗಿಸಿತು. 257.57 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಜಿತೇಶ್‌ ಶರ್ಮಾ 33 ಎಸೆತಗಳಲ್ಲಿ 85 ರನ್‌ (6 ಸಿಕ್ಸರ್‌, 8 ಬೌಂಡರಿ) ಚಚ್ಚಿದ್ರೆ, ವಿರಾಟ್‌ ಕೊಹ್ಲಿ 54 ರನ್‌ (30 ಎಸೆತ, 10 ಬೌಂಡರಿ), ಮಯಾಂಕ್‌ ಅಗರ್ವಾಲ್‌ 41 ರನ್‌ (23 ಎಸೆತ, 5 ಬೌಂಡರಿ) ಫಿಲ್‌ ಸಾಲ್ಟ್‌ 30 ರನ್‌ (19 ಎಸೆತ, 6 ಬೌಂಡರಿ), ರಜತ್‌ ಪಾಟೀದಾರ್‌ 14 ರನ್‌ ಗಳಿಸಿದ್ರು.

    ಲಕ್ನೋ ಪರ ರೂರ್ಕಿ 2 ವಿಕೆಟ್‌ ಕಿತ್ತರೆ, ಅಕಾಶ್‌ ಸಿಂಗ್‌, ಅವೇಶ್‌ ಖಾನ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 227 ರನ್‌ ಗಳಿಸಿತ್ತು. ಈಗಾಗಲೇ ಪ್ಲೇ ಆಫ್‌ನಿಂದ ಹೊರಬಿದ್ದಿರುವ ಲಕ್ನೋ ಕೊನೆಯ ಪಂದ್ಯದಲ್ಲಿ ಆರಂಭದಿಂದಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾಯಿತು. 2.4 ಓವರ್‌ಗಳಲ್ಲಿ 25 ರನ್‌ಗಳಿದ್ದಾಗಲೇ ಮೊದಲ ವಿಕೆಟ್ ಕಳೆದುಕೊಂಡು ನಿರಾಸೆ ಅನುಭವಿಸಿತು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪಂತ್ ಮತ್ತೊಬ್ಬ ಆರಂಭಿಕ ಮಿಚೆಲ್ ಮಾರ್ಷ್ ಜೊತೆಗೂಡಿ ಅಬ್ಬರಿಸಲು ಪ್ರಾರಂಭಿಸಿದರು. 2ನೇ ವಿಕೆಟಿಗೆ ಈ ಜೋಡಿ 78 ಎಸೆತಗಳಲ್ಲಿ ಬರೋಬ್ಬರಿ 152 ರನ್ ಜೊತೆಯಾಟ ನೀಡಿತ್ತು. ಇದರಿಂದ ಲಕ್ನೋ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

    ಲಕ್ನೋ ಪರ 193.44 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಪಂತ್ ಅಜೇಯ 118 ರನ್ (61 ಎಸೆತ, 8 ಸಿಕ್ಸರ್, 11 ಬೌಂಡರಿ), ಮಿಚೆಲ್ ಮಾರ್ಷ್ 67 ರನ್ ?(37 ಎಸೆತ, 5 ಸಿಕ್ಸರ್, 4 ಬೌಂಡರಿ), ಮ್ಯಾಥ್ಯೂ ಬ್ರೀಟ್ಜ್ಕೆ 14 ರನ್, ನಿಕೋಲಸ್ ಪೂರನ್ 13 ರನ್, ಅಬ್ದುಲ್ ಸಮದ್ 1 ರನ್ ಗಳಿಸಿದ್ರೆ, ಲೆಗ್‌ಬೈಸ್, ನೋಬಾಲ್, ವೈಡ್‌ನಿಂದ 14 ಹೆಚ್ಚುವರಿ ರನ್ ತಂಡಕ್ಕೆ ಸೇರ್ಪಡೆಯಾಯಿತು.

    ಆರ್‌ಸಿಬಿ ಪರ ನುವಾನ್ ತುಷಾರ, ಭುವನೇಶ್ಚರ್ ಕುಮಾರ್, ರೊಮಾರಿಯೊ ಶೆಫರ್ಡ್ ತಲಾ ಒಂದೊಂದು ವಿಕೆಟ್ ಪಡೆದರು.

  • IPL 2025 | ಜಿತೇಶ್‌ ನಾಯಕನ ಆಟಕ್ಕೆ ಲಕ್ನೋ ಧೂಳೀಪಟ – ಕ್ವಾಲಿಫೈಯರ್-1ಗೆ ಲಗ್ಗೆಯಿಟ್ಟ ಆರ್‌ಸಿಬಿ

    IPL 2025 | ಜಿತೇಶ್‌ ನಾಯಕನ ಆಟಕ್ಕೆ ಲಕ್ನೋ ಧೂಳೀಪಟ – ಕ್ವಾಲಿಫೈಯರ್-1ಗೆ ಲಗ್ಗೆಯಿಟ್ಟ ಆರ್‌ಸಿಬಿ

    – ದಾಖಲೆಯ ರನ್‌ ಚೇಸ್‌ನೊಂದಿಗೆ 6 ವಿಕೆಟ್‌ಗಳ ಅಮೋಘ ಜಯ

    ಲಕ್ನೋ: ಜಿತೇಶ್‌ ಶರ್ಮಾ (Jitesh sharma) ನಾಯಕನ ಆಟಕ್ಕೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಲಕ್ನೋ ಸೂಪರ್‌ ಜೈಂಟ್ಸ್‌ (LSG) ವಿರುದ್ಧ 6 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ಈ ಮೂಲಕ 18ನೇ ಆವೃತ್ತಿಯ ಲೀಗ್‌ ಪಂದ್ಯಗಳನ್ನು ಮುಗಿಸಿದ್ದು, ಕ್ವಾಲಿಫೈಯರ್‌-1ಗೆ ಲಗ್ಗೆಯಿಟ್ಟಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಲಕ್ನೋ ತಂಡ ಪಂತ್‌ ಅಮೋಘ ಶತಕದ ನೆರವಿನಿಂದ 3 ವಿಕೆಟ್‌ ನಷ್ಟಕ್ಕೆ 227 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಆರ್‌ಸಿಬಿ (RCB) 18.4 ಓವರ್‌ಗಳಲ್ಲಿ ಕೇವಲ 4 ವಿಕೆಟ್‌ ನಷ್ಟಕ್ಕೆ 230 ರನ್‌ ಗಳಿಸಿ ಗೆದ್ದು ಬೀಗಿದೆ. ಈ ಮೂಲಕ ಏಕನಾ ಕ್ರೀಡಾಂಗಣದಲ್ಲಿ ಅತಿದೊಡ್ಡ ಮೊತ್ತ ಚೇಸಿಂಗ್‌ ಮಾಡಿದ ದಾಖಲೆಯನ್ನೂ ಬರೆದಿದೆ.

    ಚೇಸಿಂಗ್‌ ಆರಂಭಿಸಿದ ಆರ್‌ಸಿಬಿ ಬಿರುಸಿನ ಆಟಕ್ಕೆ ಮುಂದಾಯಿತು. ಮೊದಲ ವಿಕೆಟಿಗೆ ವಿರಾಟ್‌ ಕೊಹ್ಲಿ (Virat Kohli), ಸಾಲ್ಟ್‌ ಜೋಡಿ 34 ಎಸೆತಗಳಲ್ಲಿ 61 ರನ್‌ಗಳ ಜೊತೆಯಾಟ ನೀಡಿತ್ತು. ಫಿಲ್‌ ಸಾಲ್ಟ್‌ 19 ಎಸೆತಗಳಲ್ಲಿ 30 ರನ್‌ಗಳಿಸಿ ಔಟಾಗುತ್ತಿದ್ದಂತೆ ರನ್‌ ವೇಗವೂ ಕಡಿತಗೊಂಡಿತ್ತು. ಅಲ್ಲದೇ ರಜ್‌ ಪಾಟೀದಾರ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌ ಬ್ಯಾಟಕ್‌ ಟು ಬ್ಯಾಕ್‌ ವಿಕೆಟ್‌ ಒಪ್ಪಿಸಿದರು. ಇದರಿಂದ ಆರ್‌ಸಿಬಿಗೆ ಗೆಲುವು ಕಠಿಣವಾಗಿತ್ತು.

    ಮಯಾಂಕ್‌ ಜಿತೇಶ್‌ ಶತಕದ ಜೊತೆಯಾಟ:
    ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಆರ್‌ಸಿಬಿಗೆ ಜಿತೇಶ್‌ ಶರ್ಮಾ – ಮಯಾಂಕ್‌ ಅಗರ್ವಾಲ್‌ ಬ್ಯಾಟಿಂಗ್‌ನಲ್ಲಿ ಬಲ ತುಂಬಿದರು. ಮುರಿಯದ 5ನೇ ವಿಕೆಟಿಗೆ ಈ ಜೋಡಿ 45 ಎಸೆತಗಳಲ್ಲಿ ಸ್ಫೋಟಕ 107 ರನ್‌ ಬಾರಿಸಿತು. ಇದು ತಂಡದ ಗೆಲುವನ್ನು ಸುಲಭವಾಗಿಸಿತು. 257.57 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಜಿತೇಶ್‌ ಶರ್ಮಾ 33 ಎಸೆತಗಳಲ್ಲಿ 85 ರನ್‌ (6 ಸಿಕ್ಸರ್‌, 8 ಬೌಂಡರಿ) ಚಚ್ಚಿದ್ರೆ, ವಿರಾಟ್‌ ಕೊಹ್ಲಿ 54 ರನ್‌ (30 ಎಸೆತ, 10 ಬೌಂಡರಿ), ಮಯಾಂಕ್‌ ಅಗರ್ವಾಲ್‌ 41 ರನ್‌ (23 ಎಸೆತ, 5 ಬೌಂಡರಿ) ಫಿಲ್‌ ಸಾಲ್ಟ್‌ 30 ರನ್‌ (19 ಎಸೆತ, 6 ಬೌಂಡರಿ), ರಜತ್‌ ಪಾಟೀದಾರ್‌ 14 ರನ್‌ ಗಳಿಸಿದ್ರು.

    ಲಕ್ನೋ ಪರ ರೂರ್ಕಿ 2 ವಿಕೆಟ್‌ ಕಿತ್ತರೆ, ಅಕಾಶ್‌ ಸಿಂಗ್‌, ಅವೇಶ್‌ ಖಾನ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 227 ರನ್‌ ಗಳಿಸಿತ್ತು. ಈಗಾಗಲೇ ಪ್ಲೇ ಆಫ್‌ನಿಂದ ಹೊರಬಿದ್ದಿರುವ ಲಕ್ನೋ ಕೊನೆಯ ಪಂದ್ಯದಲ್ಲಿ ಆರಂಭದಿಂದಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾಯಿತು. 2.4 ಓವರ್‌ಗಳಲ್ಲಿ 25 ರನ್‌ಗಳಿದ್ದಾಗಲೇ ಮೊದಲ ವಿಕೆಟ್ ಕಳೆದುಕೊಂಡು ನಿರಾಸೆ ಅನುಭವಿಸಿತು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪಂತ್ ಮತ್ತೊಬ್ಬ ಆರಂಭಿಕ ಮಿಚೆಲ್ ಮಾರ್ಷ್ ಜೊತೆಗೂಡಿ ಅಬ್ಬರಿಸಲು ಪ್ರಾರಂಭಿಸಿದರು. 2ನೇ ವಿಕೆಟಿಗೆ ಈ ಜೋಡಿ 78 ಎಸೆತಗಳಲ್ಲಿ ಬರೋಬ್ಬರಿ 152 ರನ್ ಜೊತೆಯಾಟ ನೀಡಿತ್ತು. ಇದರಿಂದ ಲಕ್ನೋ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

    ಲಕ್ನೋ ಪರ 193.44 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಪಂತ್ ಅಜೇಯ 118 ರನ್ (61 ಎಸೆತ, 8 ಸಿಕ್ಸರ್, 11 ಬೌಂಡರಿ), ಮಿಚೆಲ್ ಮಾರ್ಷ್ 67 ರನ್ ?(37 ಎಸೆತ, 5 ಸಿಕ್ಸರ್, 4 ಬೌಂಡರಿ), ಮ್ಯಾಥ್ಯೂ ಬ್ರೀಟ್ಜ್ಕೆ 14 ರನ್, ನಿಕೋಲಸ್ ಪೂರನ್ 13 ರನ್, ಅಬ್ದುಲ್ ಸಮದ್ 1 ರನ್ ಗಳಿಸಿದ್ರೆ, ಲೆಗ್‌ಬೈಸ್, ನೋಬಾಲ್, ವೈಡ್‌ನಿಂದ 14 ಹೆಚ್ಚುವರಿ ರನ್ ತಂಡಕ್ಕೆ ಸೇರ್ಪಡೆಯಾಯಿತು.

    ಆರ್‌ಸಿಬಿ ಪರ ನುವಾನ್ ತುಷಾರ, ಭುವನೇಶ್ಚರ್ ಕುಮಾರ್, ರೊಮಾರಿಯೊ ಶೆಫರ್ಡ್ ತಲಾ ಒಂದೊಂದು ವಿಕೆಟ್ ಪಡೆದರು.

  • 7 ವರ್ಷಗಳ ಬಳಿಕ ಶತಕ ಸಿಡಿಸಿ ಪಲ್ಟಿ ಹೊಡೆದ ಪಂತ್‌

    7 ವರ್ಷಗಳ ಬಳಿಕ ಶತಕ ಸಿಡಿಸಿ ಪಲ್ಟಿ ಹೊಡೆದ ಪಂತ್‌

    ಲಕ್ನೋ: 18ನೇ ಆವೃತ್ತಿಯ ಐಪಿಎಲ್‌ಗೆ 27 ಕೋಟಿ ರೂ.ಗಳಿಗೆ ಬಿಕರಿಯಾಗಿದ್ದ ರಿಷಭ್‌ ಪಂತ್‌ (Rishabh Pant) ಭಾರೀ ನಿರೀಕ್ಷೆಯೊಂದಿಗೆ ಅಖಾಡಕ್ಕಿಳಿದಿದ್ದರು. ಆದ್ರೆ ಆರಂಭಿಕ ಪಂದ್ಯದಿಂದಲೂ ಕಳಪೆ ಬ್ಯಾಟಿಂಗ್‌ ಪ್ರದರ್ಶನದಿಂದ ಟ್ರೋಲ್‌ಗೆ ಒಳಗಾಗಿದ್ದ ಪಂತ್‌ ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ.

    7 ವರ್ಷಗಳ ಬಳಿಕ ಶತಕ ಸಿಡಿಸಿದ ಪಂತ್‌ ಮೈದಾನದಲ್ಲಿಯೇ ಪಲ್ಟಿ ಹೊಡೆದು ಸಂಭ್ರಮಿಸಿದರು. ಇದು 7 ವರ್ಷಗಳ ಬಳಿಕ ಪಂತ್‌ ಸಿಡಿಸಿದ ಶತಕವಾಗಿದೆ. 2018ರಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್‌ (ಇಂಡಿನ ಡೆಲ್ಲಿ ಕ್ಯಾಪಿಟಲ್ಸ್) ತಂಡದಲ್ಲಿದ್ದ ಪಂತ್‌‌ ಅಜೇಯ 128 ರನ್‌ (63 ಎಸೆತ, 7 ಸಿಕ್ಸರ್‌, 15 ಬೌಂಡರಿ) ಬಾರಿಸಿದ್ದರು. ಆದ್ರೆ ಆ ಪಂದ್ಯದಲ್ಲೂ ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ ಡೇರ್‌ಡೆವಿಲ್ಸ್‌ ಸೋತಿತ್ತು.

    ಈ ಆವೃತ್ತಿಯ ಆರಂಭದಿಂದಲೂ ಲಕ್ನೋ ತಂಡ ಉತ್ತಮ ಪ್ರದರ್ಶನ ನೀಡುತ್ತಾ ಬಂದಿತು. ಮೊದಲ ಪಂದ್ಯದಲ್ಲೇ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 209 ರನ್‌ಗಳಿಸಿತ್ತು. ಆದ್ರೆ ಆ ಪಂದ್ಯದಲ್ಲೂ ರಿಷಭ್‌ ಪಂತ್‌ ಶೂನ್ಯ ಸುತ್ತಿದರು. ಬಳಿಕ‌ ನಡೆದ ಪಂದ್ಯಗಳಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದರು. ಸಿಎಸ್‌ಕೆ ವಿರುದ್ಧ ನಡೆದ ಪಂದ್ಯದಲ್ಲಿ 63 ರನ್‌ ಗಳಿಸಿತ್ತಾದರೂ 49 ಎಸೆತಗಳನ್ನು ತೆಗೆದುಕೊಂಡಿದ್ದರು. ಇದೂ ಸಹ ಪಂತ್‌ ವಿರುದ್ಧ ಅಭಿಮಾನಿಗಳು ಬೇಸರಗೊಳ್ಳುವಂತೆ ಮಾಡಿತ್ತು. ಆದ್ರೆ ಲೀಗ್‌ ಪಂದ್ಯದಲ್ಲಿ ಪಂತ್‌ ಅಬ್ಬರಿಸಿದ ರೀತಿ ಕಂಡು ಫ್ಯಾನ್ಸ್‌ ದಂಗಾಗಿದ್ದಾರೆ.

    ಆರಂಭದಿಂದಲೇ ಸ್ಫೋಟಕ ಪ್ರದರ್ಶನಕ್ಕಿಳಿದ ಪಂತ್‌ 54 ಎಸೆತಗಳಲ್ಲಿ 10 ಬೌಂಡರಿ, 6 ಸಿಕ್ಸರ್‌ ಸಹಿತ ಶತಕ ಪೂರೈಸಿದರು. ಒಟ್ಟು ತಾವು ಎದುರಿಸಿದ 61 ಎಸೆತಗಳಲ್ಲಿ 11 ಬೌಂಡರಿ, 8 ಸಿಕ್ಸರ್‌ ಸಹಿತ 118 ರನ್‌ ಗಳಿಸಿ ಅಜೇಯರಾಗುಳಿದರು.

  • ಆರ್‌ಸಿಬಿಗೆ ರಿಷಭ್‌ ʻಪಂಚ್‌ʼ – ಗೆಲುವಿಗೆ 228 ರನ್‌ಗಳ ಕಠಿಣ ಗುರಿ ನೀಡಿದ ಲಕ್ನೋ

    ಆರ್‌ಸಿಬಿಗೆ ರಿಷಭ್‌ ʻಪಂಚ್‌ʼ – ಗೆಲುವಿಗೆ 228 ರನ್‌ಗಳ ಕಠಿಣ ಗುರಿ ನೀಡಿದ ಲಕ್ನೋ

    ಲಕ್ನೋ: 18ನೇ ಆವೃತ್ತಿಯ ಐಪಿಎಲ್‌ನ ಆರಂಭದಿಂದಲೂ ಕಳಪೆ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದ್ದ ರಿಷಭ್ ‌ಪಂತ್‌ (Rishabh Pant) ಆಟಕ್ಕುಂಟು ಲೆಕ್ಕಕ್ಕಿಲ್ಲದ ಕೊನೆಯ ರೋಷಾವೇಶದ ಬ್ಯಾಟಿಂಗ್‌ ಮಾಡಿದರು. ಕ್ರೀಸ್‌ಗಿಳಿಯುತ್ತಿದ್ದಂತೆ ಸ್ಫೋಟಕ ಪ್ರದರ್ಶನಕ್ಕೆ ಮುಂದಾದ ಪಂತ್‌ ಆರ್‌ಸಿಬಿ (RCB) ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದರು.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ನಿಗದಿತ ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 227 ರನ್‌ ಗಳಿಸಿದೆ. ಈ ಮೂಲಕ ಆರ್‌ಸಿಬಿ ಗೆಲುವಿಗೆ 228 ರನ್‌ಗಳ ಕಠಿಣ ಗುರಿ ನೀಡಿದೆ.

    ಈಗಾಗಲೇ ಪ್ಲೇ ಆಫ್‌ನಿಂದ ಹೊರಬಿದ್ದಿರುವ ಲಕ್ನೋ ಕೊನೆಯ ಪಂದ್ಯದಲ್ಲಿ ಆರಂಭದಿಂದಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾಯಿತು. 2.4 ಓವರ್‌ಗಳಲ್ಲಿ 25 ರನ್‌ಗಳಿದ್ದಾಗಲೇ ಮೊದಲ ವಿಕೆಟ್‌ ಕಳೆದುಕೊಂಡು ನಿರಾಸೆ ಅನುಭವಿಸಿತು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪಂತ್‌ ಮತ್ತೊಬ್ಬ ಆರಂಭಿಕ ಮಿಚೆಲ್‌ ಮಾರ್ಷ್‌ ಜೊತೆಗೂಡಿ ಅಬ್ಬರಿಸಲು ಪ್ರಾರಂಭಿಸಿದರು. 2ನೇ ವಿಕೆಟಿಗೆ ಈ ಜೋಡಿ 78 ಎಸೆತಗಳಲ್ಲಿ ಬರೋಬ್ಬರಿ 152 ರನ್‌ ಜೊತೆಯಾಟ ನೀಡಿತ್ತು. ಇದರಿಂದ ಲಕ್ನೋ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

    ಲಕ್ನೋ ಪರ 193.44 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಪಂತ್ ಅಜೇಯ 118 ರನ್‌ (61 ಎಸೆತ,‌ 8 ಸಿಕ್ಸರ್‌, 11 ಬೌಂಡರಿ), ಮಿಚೆಲ್‌ ಮಾರ್ಷ್‌ 67 ರನ್‌ ?(37 ಎಸೆತ, 5 ಸಿಕ್ಸರ್‌, 4 ಬೌಂಡರಿ), ಮ್ಯಾಥ್ಯೂ ಬ್ರೀಟ್ಜ್ಕೆ 14 ರನ್‌, ನಿಕೋಲಸ್‌ ಪೂರನ್‌ 13 ರನ್‌, ಅಬ್ದುಲ್‌ ಸಮದ್‌ 1 ರನ್‌ ಗಳಿಸಿದ್ರೆ, ಲೆಗ್‌ಬೈಸ್‌, ನೋಬಾಲ್‌, ವೈಡ್‌ನಿಂದ 14 ಹೆಚ್ಚುವರಿ ರನ್‌ ತಂಡಕ್ಕೆ ಸೇರ್ಪಡೆಯಾಯಿತು.

    ಆರ್‌ಸಿಬಿ ಪರ ನುವಾನ್‌ ತುಷಾರ, ಭುವನೇಶ್ಚರ್‌ ಕುಮಾರ್‌, ರೊಮಾರಿಯೊ ಶೆಫರ್ಡ್‌ ತಲಾ ಒಂದೊಂದು ವಿಕೆಟ್‌ ಪಡೆದರು.

  • IPL 2025 | ಗುಜರಾತ್‌ಗೆ ಮಾರ್ಕ್ರಮ್‌, ಪೂರನ್‌ ಪಂಚ್‌ – ಲಕ್ನೋಗೆ 6 ವಿಕೆಟ್‌ಗಳ ಸೂಪರ್‌ ಜಯ

    IPL 2025 | ಗುಜರಾತ್‌ಗೆ ಮಾರ್ಕ್ರಮ್‌, ಪೂರನ್‌ ಪಂಚ್‌ – ಲಕ್ನೋಗೆ 6 ವಿಕೆಟ್‌ಗಳ ಸೂಪರ್‌ ಜಯ

    – ಮತ್ತೆ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ 27 ಕೋಟಿ ಒಡೆಯ

    ಲಕ್ನೋ: ಏಡನ್‌ ಮಾಕ್ರಮ್‌ ಹಾಗೂ ನಿಕೋಲಸ್‌ ಪೂರನ್‌ (Nicholas Pooran) ಸ್ಫೋಟಕ ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ಗುಜರಾತ್‌ ಟೈಟಾನ್ಸ್‌ (Gujarat Titans) ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ 6 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಧಿಸಿದ್ದು, 0+.162 ನೆಟ್‌ ರನ್‌ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ. ಇನ್ನೂ 5 ಪಂದ್ಯಗಳಲ್ಲಿ 2 ಪಂದ್ಯ ಸೋತಿರುವ ಆರ್‌ಸಿಬಿ 5ನೇ ಸ್ಥಾನಕ್ಕೆ ಕುಸಿದರೆ, ಡೆಲ್ಲಿ ಕ್ಯಾಪಿಟಲ್ಸ್‌ ಎಲ್ಲರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.

    ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಗುಜರಾತ್‌ ಟೈಟಾನ್ಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 180 ರನ್‌ ಗಳಿಸಿತ್ತು. 181 ರನ್‌ ಗುರಿ ಬೆನ್ನಟ್ಟಿದ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) 19.3 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 186 ರನ್‌ ಗಳಿಸಿ ಗೆಲುವು ಸಾಧಿಸಿತು.

    181 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಲಕ್ನೋ ಸೂಪರ್‌ ಜೈಂಟ್ಸ್‌ ಸಹ ಆರಂಭದಲ್ಲ ಸ್ಫೋಟಕ ಇನ್ನಿಂಗ್ಸ್‌ ಕಟ್ಟಲು ಶುರು ಮಾಡಿತು. ಮೊದಲ ವಿಕೆಟ್‌ಗೆ ರಿಷಭ್‌ ಪಂತ್‌, ಏಡನ್‌ ಮಾರ್ಕ್ರಮ್‌ ಜೋಡಿ 38 ಎಸೆತಗಳಲ್ಲಿ 65 ರನ್‌, 2ನೇ ವಿಕೆಟ್‌ಗೆ ಮಾರ್ಕ್ರಮ್‌ ಮತ್ತು ನಿಕೋಲಸ್‌ ಪೂರನ್‌ ಜೋಡಿ 29 ಎಸೆತಗಳಲ್ಲಿ ಸ್ಫೋಟಕ 58 ರನ್‌ ಹಾಗೂ 3ನೇ ವಿಕೆಟಿಗೆ ಆಯುಷ್‌ ಬದೋನಿ, ಪೂರನ್‌ ಜೋಡಿ 25 ಎಸೆತಗಳಲ್ಲಿ 32 ರನ್‌ ಸಣ್ಣ ಜೊತೆಯಾಟ ನೀಡಿದ ಪರಿಣಾಮ ಗೆಲುವು ಲಕ್ನೋ ತಂಡದತ್ತ ವಾಲಿತು.

    ಲಕ್ನೋ ಪರ ನಿಕೋಲಸ್‌ ಪೂರನ್‌ 61 ರನ್‌ (34 ಎಸೆತ, 7 ಸಿಕ್ಸರ್‌, 1 ಬೌಂಡರಿ), ಏಡನ್‌ ಮಾರ್ಕ್ರಮ್‌ 58 ರನ್‌ (31 ಎಸೆತ, 1 ಸಿಕ್ಸರ್‌, 9 ಬೌಂಡರಿ), ರಿಷಬ್‌ ಪಂತ್‌ 21 ರನ್‌, ಡೇವಿಡ್‌ ಮಿಲ್ಲರ್‌ 7 ರನ್‌, ಆಯುಷ್‌ ಬದೋನಿ ಅಜೇಯ 28 ರನ್‌, ಅಬ್ದುಲ್‌ ಸಮದ್‌ ಅಜೇಯ 2 ರನ್‌ ಗಳಿಸಿದರು. ಗುಜರಾತ್‌ ಪರ ಪ್ರಸಿದ್ಧ್‌ ಕೃಷ್ಣ 2 ವಿಕೆಟ್‌, ರಶೀದ್‌ ಖಾನ್‌, ವಾಷಿಂಗ್ಟನ್‌ ಸುಂದರ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌, ನಾಯಕ ಶುಭಮನ್‌ ಗಿಲ್‌ – ಸಾಯಿ ಸುದರ್ಶನ್‌ ಅವರ ಶತಕದ ಜೊತೆಯಾಟ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ ಬರೋಬ್ಬರಿ 180 ರನ್‌ ಕಲೆಹಾಕಿತ್ತು.

    ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದ ಈ ಜೋಡಿ ಮೊದಲ ವಿಕೆಟ್‌ಗೆ 73 ಎಸೆತಗಳಲ್ಲಿ ಬರೋಬ್ಬರಿ 120 ರನ್‌ ಕಲೆಹಾಕಿತ್ತು. ಈ ವಿಕೆಟ್‌ ಬೀಳುತ್ತಿದ್ದಂತೆ ಉಳಿದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಪೆವಿಲಿಯನ್‌ ಪರೇಡ್‌ ನಡೆಸಿದರು, ಮಧ್ಯಮ ಕ್ರಮಾಂಕದಲ್ಲಿ ಶಾರೂಖ್‌ ಖಾನ್‌ – ರುದರ್ಫೋರ್ಡ್ ಅವರಿಂದ 31 ರನ್‌ಗಳ ಸಣ್ಣ ಜೊತೆಯಾಟ ಕಂಡುಬಂದಿತು.

    ಗುಜರಾತ್‌ ಟೈಟಾನ್ಸ್‌ ಪರ ನಾಯಕ ಶುಭಮನ್‌ ಗಿಲ್‌ 60 ರನ್‌ (38 ಎಸೆತ, 1 ಸಿಕ್ಸರ್‌, 6 ಬೌಂಡರಿ), ಸಾಯಿ ಸುದರ್ಶನ್‌ 56 ರನ್‌ (37 ಎಸೆತ, 7 ಬೌಂಡರಿ, 1 ಸಿಕ್ಸರ್‌), ಶಾರೂಖ್‌ ಖಾನ್‌ 11 ರನ್‌, ಜೋಸ್‌ ಬಟ್ಲರ್‌ 16 ರನ್‌, ರುದರ್ಫೋರ್ಡ್ 22 ರನ್‌, ರಶೀದ್‌ ಖಾನ್‌ ಅಜೇಯ 4 ರನ್‌ ಕೊಡುಗೆ ನೀಡಿದರು.

    ಲಕ್ನೋ ಸೂಪರ್‌ ಜೈಂಟ್ಸ್‌ ಪರ ಶಾರ್ದೂಲ್‌ ಠಾಕೂರ್‌, ರವಿ ಬಿಷ್ಣೋಯಿ ತಲಾ 2 ವಿಕೆಟ್‌ ಕಿತ್ತರೆ, ದಿಗ್ವೇಶ್‌ ರಾಥಿ, ಅವೇಶ್‌ ಖಾನ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

  • ರನ್‌ ಹೊಳೆ ಹರಿಸಿ ಈಡನ್‌ ಗಾರ್ಡನ್‌ನಲ್ಲಿ ದಾಖಲೆ ಬರೆದ ಲಕ್ನೋ

    ರನ್‌ ಹೊಳೆ ಹರಿಸಿ ಈಡನ್‌ ಗಾರ್ಡನ್‌ನಲ್ಲಿ ದಾಖಲೆ ಬರೆದ ಲಕ್ನೋ

    ಕೋಲ್ಕತ್ತಾ: ಈಡನ್‌ ಗಾರ್ಡನ್‌ ಮೈದಾನದಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್‌ (KKR) ವಿರುದ್ಧ 4 ರನ್‌ಗಳ ಗೆಲುವು ಸಾಧಿಸಿದ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ತಂಡ ಹೊಸ ದಾಖಲೆಯೊಂದನ್ನು ಸೃಷ್ಟಿಸಿದೆ.

    ಐಪಿಎಲ್‌ (IPL 2025) ಇತಿಹಾಸದಲ್ಲಿ ಈಡನ್‌ ಗಾರ್ಡನ್‌ ಮೈದಾನದಲ್ಲಿ ಅತಿಹೆಚ್ಚು ರನ್‌ ಗಳಿಸಿದ 3ನೇ ತಂಡ ಎಂಬ ವಿಶೇಷ ಸಾಧನೆಗೆ ಪಾತ್ರವಾಗಿದೆ. 2024ರ ಆವೃತ್ತಿಯಲ್ಲಿ‌ ಒಂದೇ ಇನ್ನಿಂಗ್ಸ್‌ನಲ್ಲಿ 262 ರನ್‌ ಗಳಿಸಿದ ಪಂಬಾಜ್‌ ಕಿಂಗ್ಸ್‌ (PBKS) ತಂಡ ಮೊದಲ ಅಗ್ರ ಸ್ಥಾನದಲ್ಲಿದೆ.

    ಈಡನ್‌ ಗಾರ್ಡನ್‌ನಲ್ಲಿ ಅತಿಹೆಚ್ಚು ರನ್‌ ಸಿಸಿಡಿದ ಟಾಪ್‌-5 ತಂಡಗಳು
    ಪಂಜಾಬ್‌ ಕಿಂಗ್ಸ್‌ 262ಕ್ಕೆ 2 – ಕೆಕೆಆರ್‌ ವಿರುದ್ಧ – 2024
    ಕೆಕೆಆರ್‌ – 261ಕ್ಕೆ 6 – ಪಂಬಾಬ್‌ ವಿರುದ್ಧ – 2024
    ಎಲ್‌ಎಸ್‌ಜಿ – 238ಕ್ಕೆ 3 – ಕೆಕೆಆರ್‌ ವಿರುದ್ಧ – 2025
    ಸಿಎಸ್‌ಕೆ – 235ಕ್ಕೆ 4 – ಕೆಕೆಆರ್‌ ವಿರುದ್ಧ – 2023
    ಕೆಕೆಆರ್‌ – 234ಕ್ಕೆ 7 – ಲಕ್ನೂ ವಿರುದ್ಧ – 2025

    ಸಿಕ್ಸರ್‌-ಬೌಂಡರಿ ಸುರಿಮಳೆ
    ಸಿಕ್ಸರ್‌ ಬೌಂಡರಿಗಳ ಈ ಭರ್ಜರಿ ಆಟದಲ್ಲಿ ಉಭಯ ತಂಡಗಳಿಂದ ಒಟ್ಟು 25 ಸಿಕ್ಸರ್‌, 45 ಬೌಂಡರಿಗಳು ಸಿಡಿದವು. ಲಕ್ನೋ ಪರ 15 ಸಿಕ್ಸರ್‌, 18 ಬೌಂಡರಿ, ಕೆಕೆಆರ್‌ ಪರ 10 ಸಿಕ್ಸರ್‌, 27 ಬೌಂಡರಿ ದಾಖಲಾಯಿತು.

    ಕೊನೇ ಓವರ್‌ನಲ್ಲಿ ಸೋತ ಕೆಕೆಆರ್‌
    ಕೊನೆಯ ಓವರ್‌ನಲ್ಲಿ ಕೆಕೆಆರ್‌ ಗೆಲುವಿಗೆ 24 ರನ್‌ಗಳ ಅಗತ್ಯವಿತ್ತು. ರವಿ ಬಿಷ್ಣೋಯ್‌ ಬೌಲಿಂಗ್‌ನಲ್ಲಿದ್ದರೆ, ಹರ್ಷಿತ್‌ ರಾಣಾ ಸ್ಟ್ರೈಕ್‌ನಲ್ಲಿದ್ದರು. ಮೊದಲ ಎಸೆತವನ್ನೇ ರಾಣ ಬೌಂಡರಿ ಚಚ್ಚಿದರು, ಆದ್ರೆ 2ನೇ ಎಸೆತದಲ್ಲಿ ರನ್‌ ಕದಿಯುಲ್ಲಿ ವಿಫಲರಾದ ರಾಣಾ 3ನೇ ಎಸೆತದಲ್ಲಿ 1ರನ್‌ ಕದ್ದರು. ಮುಂದಿನ ಮೂರು ಎಸೆತಗಳಲ್ಲಿ ರಿಂಕು ಸಿಂಗ್‌ ಕ್ರಮವಾಗಿ 4, 4, 6 ಬಾರಿಸಿದರು. ಆದಾಗ್ಯೂ ಕೆಕೆಆರ್‌ 4 ರನ್‌ಗಳ ವಿರೋಚಿತ ಸೋಲಿಗೆ ತುತ್ತಾಯಿತು.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 238 ರನ್‌ ಪೇರಿಸಿತು. 239 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್‌ ರೈಡರ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 234 ರನ್‌ ಗಳಿಸಿ 4 ರನ್‌ಗಳಿಂದ ವಿರೋಚಿತ ಸೋಲು ಕಂಡಿತು.

  • ಕೊನೆಯಲ್ಲಿ ರಿಂಕು, ರಾಣಾ ಹೋರಾಟ ವ್ಯರ್ಥ – ಲಕ್ನೋಗೆ 4 ರನ್‌ ರೋಚಕ ಜಯ, ಕೆಕೆಆರ್‌ಗೆ ವಿರೋಚಿತ ಸೋಲು

    ಕೊನೆಯಲ್ಲಿ ರಿಂಕು, ರಾಣಾ ಹೋರಾಟ ವ್ಯರ್ಥ – ಲಕ್ನೋಗೆ 4 ರನ್‌ ರೋಚಕ ಜಯ, ಕೆಕೆಆರ್‌ಗೆ ವಿರೋಚಿತ ಸೋಲು

    ಕೋಲ್ಕತ್ತಾ: ಕೊನೆಯ ಓವರ್‌ನಲ್ಲಿ ರಿಂಕು ಸಿಂಗ್‌ (Rinku Singh), ಹರ್ಷಿತ್‌ ರಾಣಾ ಸಿಕ್ಸರ್‌ ಬೌಂಡರಿಗಳ ಹೊಡಿ ಬಡಿ ಆಟದ ಹೊರತಾಗಿಯೂ‌ ಕೋಲ್ಕತ್ತಾ ನೈಟ್‌ರೈಡರ್ಸ್‌ (KKR) ತಂಡವು ಲಕ್ನೋ ಸೂಪರ್‌ ಜೈಂಟ್ಸ್‌ (LSG) ತಂಡದ ವಿರುದ್ಧ 4 ರನ್‌ಗಳಿಂದ ವಿರೋಚಿತ ಸೋಲು ಕಂಡಿದೆ.

    ಕೊನೇ ಓವರ್‌ ಥ್ರಿಲ್ಲರ್‌
    ಕೊನೆಯ ಓವರ್‌ನಲ್ಲಿ ಕೆಕೆಆರ್‌ ಗೆಲುವಿಗೆ 24 ರನ್‌ಗಳ ಅಗತ್ಯವಿತ್ತು. ರವಿ ಬಿಷ್ಣೋಯಿ (Ravi Bishnoi) ಬೌಲಿಂಗ್‌ನಲ್ಲಿದ್ದರೆ, ಹರ್ಷಿತ್‌ ರಾಣಾ ಸ್ಟ್ರೈಕ್‌ನಲ್ಲಿದ್ದರು. ಮೊದಲ ಎಸೆತವನ್ನೇ ರಾಣ ಬೌಂಡರಿ ಚಚ್ಚಿದರು, ಆದ್ರೆ 2ನೇ ಎಸೆತದಲ್ಲಿ ರನ್‌ ಕದಿಯುವಲ್ಲಿ ವಿಫಲರಾದ ರಾಣಾ 3ನೇ ಎಸೆತದಲ್ಲಿ 1 ರನ್‌ ಕದ್ದರು. ಮುಂದಿನ ಮೂರು ಎಸೆತಗಳಲ್ಲಿ ರಿಂಕು ಸಿಂಗ್‌ ಕ್ರಮವಾಗಿ 4, 4, 6 ಬಾರಿಸಿದರು. ಆದಾಗ್ಯೂ ಕೆಕೆಆರ್‌ 4 ರನ್‌ಗಳ ವಿರೋಚಿತ ಸೋಲಿಗೆ ತುತ್ತಾಯಿತು.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 238 ರನ್‌ ಪೇರಿಸಿತು. 239 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್‌ ರೈಡರ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 234 ರನ್‌ ಗಳಿಸಿ 4 ರನ್‌ಗಳಿಂದ ವಿರೋಚಿತ ಸೋಲು ಕಂಡಿತು.

    ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಕೆಕೆಆರ್‌ ಭರ್ಜರಿ ಇನ್ನಿಂಗ್ಸ್‌ ಕಟ್ಟಿತ್ತು. ಪವರ್‌ ಪ್ಲೇನಲ್ಲಿ ಒಂದು ವಿಕೆಟ್‌ ಕಳೆದುಕೊಂಡರೂ ಸ್ಫೋಟಕ 90 ರನ್‌ ಕಲೆಹಾಕಿತ್ತು. ಅಜಿಂಕ್ಯಾ ರಹಾನೆ (Ajinkya Rahane), ಸುನೀಲ್‌ ನರೇನ್‌, ವೆಂಕಟೇಶ್‌ ಅಯ್ಯರ್‌ ಅವರ ಸ್ಫೋಟಕ ಬ್ಯಾಟಿಂಗ್‌ ತಂಡದ ಮೊತ್ತ ಹೆಚ್ಚಿಸುತ್ತಲೇ ಸಾಗಿತು. ಇದರಿಂದ ಕೆಕೆಆರ್‌ ಸುಲಭ ಜಯ ಸಾಧಿಸುತ್ತದೆ ಎಂದೇ ಭಾವಿಸಲಾಗಿತ್ತು. ಆದ್ರೆ 15, 16, 17ನೇ ಓವರ್‌ನಲ್ಲಿ ಒಂದೊಂದು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡ ಕೆಕೆಆರ್‌ ಸಂಕಷ್ಟಕ್ಕೀಡಾಯಿತು.

    ಕೆಕೆಆರ್‌ ಪರ ಅಜಿಂಕ್ಯಾ ರಹಾನೆ 35 ಎಸೆತಗಳಲ್ಲಿ 61 ರನ್‌ (2 ಸಿಕ್ಸರ್‌, 8 ಬೌಂಡರಿ) ಚಚ್ಚಿದ್ರೆ, ಸುನೀಲ್‌ ನರೇನ್‌ 13 ಎಸೆತಗಳಲ್ಲಿ 30 ರನ್‌ (2 ಸಿಕ್ಸರ್‌, 4 ಬೌಂಡರಿ), ವೆಂಕಟೇಶ್‌ ಅಯ್ಯರ್‌ 45 ರನ್‌ (29 ಎಸೆತ, 6 ಬೌಂಡರಿ 1 ಸಿಕ್ಸರ್‌) ಬಾರಿಸಿದ್ರು. ಕೊನೆಯಲ್ಲಿ ರಿಂಕು ಸಿಂಗ್‌ 15 ಎಸೆತಗಳಲ್ಲಿ 38 ರನ್‌ ಬಾರಿಸಿದ್ರೆ, ಹರ್ಷಿತ್‌ ರಾಣಾ 9 ಎಸೆತಗಳಲ್ಲಿ 10 ರನ್‌ ಕೊಡುಗೆ ನೀಡಿದರು.

    ಲಕ್ನೋ ಪರ ಆಕಾಶ್‌ ದೀಪ್‌, ಶಾರ್ದೂಲ್‌ ಠಾಕೂರ್‌ ತಲಾ 2 ವಿಕೆಟ್‌ ಕಿತ್ತರೆ, ಅವೇಶ್‌ ಖಾನ್‌, ದಿಗ್ವೇಷ್‌ ರಾಥಿ, ರವಿ ಬಿಷ್ಣೋಯಿ, ತಲಾ ಒಂದೊಂದು ವಿಕೆಟ್‌ ಪಡೆದರು.

    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ನಿಕೋಲಸ್‌ ಪೂರನ್‌ (Nicholas Pooran) ಸಿಡಿಲಬ್ಬರದ ಬ್ಯಾಟಿಂಗ್‌ ನೆರವಿನಿಂದ 20 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ನಷ್ಟಕ್ಕೆ 238 ರನ್‌ ಕಲೆಹಾಕಿತು. ಬ್ಯಾಟಿಂಗ್‌ ಸ್ನೇಹಿ ಪಿಚ್‌ ಲಾಭ ಪಡೆದ ಲಕ್ನೋ ತಂಡ ಆರಂಭದಿಂದಲೇ ಅಬ್ಬರಿಸಲು ಶುರು ಮಾಡಿತು.

    ಆರಂಭಿಕರಾದ ಏಡನ್‌ ಮಾರ್ಕ್ರಮ್‌, ಮಿಚೆಲ್‌ ಮಾರ್ಷ್‌ (Mitchell Mar) ಜೋಡಿ ಮೊದಲ ವಿಕೆಟ್‌ಗೆ 62 ಎಸೆತಗಳಲ್ಲಿ 99 ರನ್‌ಗಳ ಭರ್ಜರಿ ಜೊತೆಯಾಟ ನೀಡಿತು. ಏಡನ್‌ ಮಾರ್ಕ್ರಮ್‌ ಪೆವಿಲಿಯನ್‌ಗೆ ಮರಳುತ್ತಿದ್ದಂತೆ ಮಾರ್ಷ್‌ ಜೊತೆಗೂಡಿ ಪೂರನ್‌ ಸಹ ಅಬ್ಬರಿಸಲು ಶುರು ಮಾಡಿದರು. 2ನೇ ವಿಕೆಟಿಗೆ ಈ ಜೋಡಿ 30 ಎಸೆತಗಳಲ್ಲಿ 71 ರನ್‌ ಜೊತೆಯಾಟ ನೀಡಿದ್ರೆ 3ನೇ ವಿಕೆಟ್‌ಗೆ ಅಬ್ದುಲ್‌ ಸಮದ್‌ ಹಾಗೂ ಪೂರನ್‌ ಜೋಡಿ ಕೇವಲ 18 ಎಸೆತಗಳಲ್ಲಿ ಸ್ಫೋಟಕ 51 ರನ್‌ ಗಳ ಜೊತೆಯಾಟ ಪೇರಿಸಿತು. ಇದು ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಬೃಹತ್‌ ಮೊತ್ತಕ್ಕೆ ಕಾರಣವಾಯಿತು.

    ನಿಕೋಲಸ್‌ ಸಿಡಿಲಬ್ಬರದ ಬ್ಯಾಟಿಂಗ್‌:
    ಪ್ರಸಕ್ತ ಆವೃತ್ತಿಯಲ್ಲಿ ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿರುವ ನಿಕೋಲಸ್‌ ಪೂರನ್‌ ಪ್ರಸಕ್ತ ಆವೃತ್ತಿಯಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ಪರ 3ನೇ ಅರ್ಧಶತಕ ಸಿಡಿಸಿ ಮಿಂಚಿದರು. 10 ಓವರ್‌ಗಳ ಬಳಿಕ ಕಣಕ್ಕಿಳಿದ ಪೂರನ್‌ ‌8 ಭರ್ಜರಿ ಸಿಕ್ಸರ್‌, 7 ಬೌಂಡರಿಗಳೊಂದಿಗೆ 36 ಎಸೆತಗಳಲ್ಲಿ 87 ರನ್‌ (241.66 ಸ್ಟ್ರೈಕ್‌ರೇಟ್‌) ಸಿಡಿಸಿ ಅಜೇಯರಾಗುಳಿದರು. ಇದರೊಂದಿಗೆ ಮಿಚೆಲ್‌ ಮಾರ್ಷ್‌ ಸಹ 48 ಎಸೆತಗಳಲ್ಲಿ 81 ರನ್‌ (5 ಸಿಕ್ಸರ್‌, 6 ಬೌಂಡರಿ), ಏಡನ್‌ ಮಾರ್ಕ್ರಮ್‌ 47 ರನ್‌ (28 ಎಸೆತ, 2 ಸಿಕ್ಸರ್‌, 4 ಬೌಂಡರಿ), ಅಬ್ದುಲ್‌ ಸಮದ್‌ 6 ರನ್‌, ಡೇವಿಡ್‌ ಮಿಲ್ಲರ್‌ ಅಜೇಯ 4 ರನ್‌ ಕೊಡುಗೆ ನೀಡಿದರು.

    ಕೆಕೆಆರ್ ಪರ ಹರ್ಷಿತ್ ರಾಣಾ 4 ಓವರ್‌ಗಳಲ್ಲಿ 51 ರನ್‌ ಬಿಟ್ಟುಕೊಟ್ಟು 2 ವಿಕೆಟ್ ಕಿತ್ತರೆ, ಆ್ಯಂಡ್ರೆ ರಸೆಲ್ 2 ಓವರ್‌ಗಳಲ್ಲಿ 32 ರನ್‌ ಬಿಟ್ಟುಕೊಟ್ಟು 1 ವಿಕೆಟ್‌ ಪಡೆದರು.

  • ಪೂರನ್‌ ಬೆಂಕಿ ಆಟಕ್ಕೆ ಸನ್‌ರೈಸರ್ಸ್‌ ಬರ್ನ್‌ – ಲಕ್ನೋಗೆ 5 ವಿಕೆಟ್‌ಗಳ ಜಯ

    ಪೂರನ್‌ ಬೆಂಕಿ ಆಟಕ್ಕೆ ಸನ್‌ರೈಸರ್ಸ್‌ ಬರ್ನ್‌ – ಲಕ್ನೋಗೆ 5 ವಿಕೆಟ್‌ಗಳ ಜಯ

    ಹೈದರಾಬಾದ್: ನಿಕೋಲಸ್ ಪೂರನ್ ಬೆಂಕಿ ಬ್ಯಾಟಿಂಗ್‌ಗೆ ಸನ್‌ರೈಸರ್ಸ್‌ ಬರ್ನ್‌ ಆಗಿದೆ. ಹೈದರಾಬಾದ್‌ ವಿರುದ್ಧ ಲಕ್ನೋ 5 ವಿಕೆಟ್‌ಗಳ (SRH vs LSG) ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್‌ ಹೈದರಾಬಾದ್‌ 20 ಓವರ್‌ಗೆ 9 ವಿಕೆಟ್‌ ನಷ್ಟಕ್ಕೆ 190 ರನ್‌ ಗಳಿಸಿತು. ಲಕ್ನೋ ಸೂಪರ್‌ ಜೈಂಟ್ಸ್‌ 16.1 ಓವರ್‌ಗೆ 5 ವಿಕೆಟ್‌ ನಷ್ಟಕ್ಕೆ ಗುರಿ ತಲುಪಿ ಗೆದ್ದು ಬೀಗಿತು. ಇದನ್ನೂ ಓದಿ: ಸಿಕ್ಸರ್‌, ಬೌಂಡರಿಗಳ ಸುರಿಮಳೆ – ಈ ಐಪಿಎಲ್‌ನಲ್ಲಿ ಪೂರನ್‌ ದಾಖಲೆ

    ಪ್ಯಾಟ್‌ ಕಮ್ಮಿನ್ಸ್‌ ಪಡೆ ಬ್ಯಾಟಿಂಗ್‌ನಲ್ಲಿ ಅಷ್ಟಾಗಿ ಅಬ್ಬರಿಸಿದಂತೆ ಕಾಣಲಿಲ್ಲ. ಉತ್ತಮ ಫಾರ್ಮ್‌ನಲ್ಲಿರುವ ಟ್ರಾವಿಸ್‌ ಹೆಡ್‌ ಆರಂಭಿಕ ಆಟ ಭರವಸೆ ಮೂಡಿಸಿತ್ತು. ಆದರೆ, ಅವರಿಗೆ ಸಾಥ್‌ ನೀಡುವಲ್ಲಿ ಇತರೆ ಬ್ಯಾಟರ್‌ಗಳು ವಿಫಲರಾದರು. ಹೆಡ್‌ 28 ಬಾಲ್‌ಗೆ 5 ಫೋರ್‌, 3 ಸಿಕ್ಸರ್‌ಗಳೊಂದಿಗೆ 47 ರನ್‌ ಗಳಿಸಿ ಔಟಾದರು. ಇದಕ್ಕೂ ಮುನ್ನ ಅಭಿಷೇಕ್‌ ಶರ್ಮಾ (6), ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಇಶಾನ್‌ ಕಿಶನ್‌ ಸೊನ್ನೆ ಸುತ್ತಿ ನಿರ್ಗಮಿಸಿದ್ದು, ನಿರಾಸೆ ಮೂಡಿಸಿತು.

    ನಿತೀಶ್ ಕುಮಾರ್ ರೆಡ್ಡಿ 32, ಹೆನ್ರಿಕ್ ಕ್ಲಾಸೆನ್ 26, ಅನಿಕೇತ್ ವರ್ಮಾ 36, ಪ್ಯಾಟ್ ಕಮ್ಮಿನ್ಸ್ 18, ಹರ್ಷಲ್ ಪಟೇಲ್ 12 ರನ್‌ ಗಳಿಸಿದರು. ಲಕ್ನೋ ಪರ ಶಾರ್ದೂಲ್ ಠಾಕೂರ್ 4 ವಿಕೆಟ್‌ ಕಿತ್ತು ಗಮನ ಸೆಳೆದರು. ಆವೇಶ್ ಖಾನ್, ದಿಗ್ವೇಶ್ ರಥಿ, ರವಿ ಬಿಷ್ಣೋಯ್‌, ಪ್ರಿನ್ಸ್ ಯಾದವ್ ತಲಾ 1 ವಿಕೆಟ್‌ ಕಿತ್ತರು.

    ಹೈದರಾಬಾದ್‌ ನೀಡಿದ 191 ರನ್‌ ಗುರಿ ಬೆನ್ನತ್ತಿದ ಲಕ್ನೋಗೆ 4 ರನ್‌ ಇರುವಾಗಲೇ ಐಡೆನ್ ಮಾರ್ಕ್ರಾಮ್ ಕ್ಯಾಚ್‌ ನೀಡಿ ಪೆವಿಲಿಯನ್‌ ಸೇರಿದ್ದು, ಆರಂಭಿಕ ಆಘಾತ ನೀಡಿತು. ಮಿಚೆಲ್ ಮಾರ್ಷ್ ಮತ್ತು ನಿಕೋಲಸ್ ಪೂರನ್ ಸ್ಫೋಟಕ ಬ್ಯಾಟಿಂಗ್‌ ತಂಡದ ಗೆಲುವನ್ನು ಖಚಿತಪಡಿಸಿತು. ಮಾರ್ಷ್‌ 31 ಬಾಲ್‌ಗೆ 52 ರನ್‌ (7 ಫೋರ್‌, 2 ಸಿಕ್ಸರ್)‌ ಸಿಡಿಸಿ ತಂಡಕ್ಕೆ ನೆರವಾದರು. ಪೂರನ್‌ ಹೊಡಿಬಡಿ ಆಟದಿಂದ ಗಮನ ಸೆಳೆದರು. ಕೇವಲ 26 ಬಾಲ್‌ಗೆ 6 ಫೋರ್‌ ಮತ್ತು 6 ಸಿಕ್ಸರ್‌ನೊಂದಿಗೆ 70 ರನ್‌ ಕಲೆಹಾಕಿ ಅಬ್ಬರಿಸಿದರು.

    ಕಳೆದ ಪಂದ್ಯದಲ್ಲಿ ಸೊನ್ನೆ ಸುತ್ತಿ ನಿರಾಸೆ ಮೂಡಿಸಿದ್ದ ಕ್ಯಾಪ್ಟನ್‌ ರಿಷಬ್‌ ಪಂತ್‌ (15) ಇಂದು ಸಾಮಾಧಾನಕರ ಆಟ ಆಡದರು. ಡೇವಿಡ್ ಮಿಲ್ಲರ್ 13, ಅಬ್ದುಲ್ ಸಮದ್ 22 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

  • ಸಿಕ್ಸರ್‌, ಬೌಂಡರಿಗಳ ಸುರಿಮಳೆ – ಈ ಐಪಿಎಲ್‌ನಲ್ಲಿ ಪೂರನ್‌ ದಾಖಲೆ

    ಸಿಕ್ಸರ್‌, ಬೌಂಡರಿಗಳ ಸುರಿಮಳೆ – ಈ ಐಪಿಎಲ್‌ನಲ್ಲಿ ಪೂರನ್‌ ದಾಖಲೆ

    ಹೈದರಾಬಾದ್‌: ಲಕ್ನೋ ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌ ನಿಕೋಲಸ್ ಪೂರನ್ (Nicholas Pooran) ಅವರು ಐಪಿಎಲ್‌ನಲ್ಲಿ (IPL) ವೇಗದ ಅರ್ಧಶತಕ ಸಿಡಿಸಿ ಈ ಐಪಿಎಲ್‌ನಲ್ಲಿ ದಾಖಲೆ ಬರೆದಿದ್ದಾರೆ.

    ಸನ್‌ರೈಸರ್ಸ್‌ ವಿರುದ್ಧ ಕೇವಲ 18 ಎಸೆತಗಳಲ್ಲಿ 50 ರನ್‌ ಸಿಡಿಸಿ ಪೂರನ್‌ ಸಾಧನೆ ಮಾಡಿದ್ದಾರೆ. 4 ರನ್‌ಗೆ 1 ವಿಕೆಟ್‌ ಕಳೆದುಕೊಂಡಿದ್ದಾಗ ಕ್ರೀಸ್‌ಗೆ ಆಗಮಿಸಿದ ಪೂರನ್‌ ಬೌಂಡರಿ, ಸಿಕ್ಸ್‌ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

    ಪೂರನ್‌ ಔಟಾದಾಗ ತಂಡದ ಮೊತ್ತ 120 ಆಗಿತ್ತು. ಈ ಪೈಕಿ ಪೂರನ್‌ ಒಬ್ಬರೇ 70 ರನ್‌ (26 ಎಸೆತ, 6 ಬೌಂಡರಿ, 6 ಸಿಕ್ಸ್‌) ಚಚ್ಚಿದ್ದರು. ಇದನ್ನೂ ಓದಿ: ಕಿಂಗ್ಸ್ ಗೆಲುವಿಗೆ ಕನ್ನಡಿಗನ ಕಾಣಿಕೆ – ವೈಶಾಖ್ ವಿಜಯ್ ಯಾರು?

    2025ರ ಐಪಿಎಲ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿದ ಆಟಗಾರರು
    ಪೂರನ್‌ (ಎಲ್‌ಎಸ್‌ಜಿ) – 50 ರನ್‌, 18 ಎಸೆತ
    ಮಾರ್ಷ್‌ (ಎಲ್‌ಎಸ್‌ಜಿ) – 50 ರನ್‌, 21 ಎಸೆತ
    ಹೆಡ್‌(ಎಸ್‌ಆರ್‌ಹೆಚ್‌) – 50 ರನ್‌, 21 ಎಸೆತ

    ಐಪಿಎಲ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಯಶಸ್ವಿ ಜೈಸ್ವಾಲ್‌ ಹೆಸರಿನಲ್ಲಿದೆ. ಜೈಸಸ್ವಾಲ್‌ 13 ಎಸೆತದಲ್ಲಿ ಅರ್ಧಶತಕ ಸಿಡಿಸಿದರೆ ಕೆಎಲ್‌ ರಾಹುಲ್‌ 14 ಎಸೆತದಲ್ಲಿ 50 ಹೊಡೆದಿದ್ದಾರೆ.